From Wikipedia, the free encyclopedia
ಹೆಬ್ಬಲಸು ಇದು ದೊಡ್ಡ ಪ್ರಮಾಣದ ಎತ್ತರವಾದ,ನೇರ ಕಾಂಡದ ಮರ.ಕರ್ನಾಟಕದ ನಿತ್ಯಹರಿದ್ವರ್ಣದ ಕಾಡುಗಳಲ್ಲಿ ವಿಶೇಷವಾಗಿ ಕಂಡು ಬರುವುದು.ಇದು ಹಲಸಿನ ಒಳಜಾತಿಗಳಲ್ಲಿ ಒಂದು.
ಹೆಬ್ಬಲಸು | |
---|---|
The bark of A.hirsutus | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Rosales |
ಕುಟುಂಬ: | Moraceae |
ಪಂಗಡ: | Artocarpeae |
ಕುಲ: | Artocarpus |
ಪ್ರಜಾತಿ: | A. hirsutus |
Binomial name | |
Artocarpus hirsutus Lam.[೧] | |
ಅರ್ಟೋಕಾರ್ಪಸ್ ಹಿರ್ಸೂಟ(Artocarpus hirsuta)ಎಂಬ ಸಸ್ಯಶಾಸ್ತ್ರೀಯ ಹೆಸರುಳ್ಳ ಇದು ಮೊರಾಸಿ (Moraceae)ಕುಟುಂಬಕ್ಕೆ ಸೇರಿದೆ.ಇದಕ್ಕೆ 'ಕಾಡುಹಲಸು','ಕಬ್ಬಲಸು'ಎಂದೂ ಕರೆಯುತ್ತಾರೆ.ತುಳುಬಾಷೆಯಲ್ಲಿ 'ಪಿಜಕಾಯಿ, ಪೆಜಕಾಯಿ'ಎಂದು ಹೆಸರು.
ಇದರೆ ಎಳೆ ಸಸಿಗಳ ಎಲೆಗಳು ಸೀಳಾಗಿರುತ್ತವೆ.ಬೆಳೆದಂತೆ ಸಮ ಅಂಚಿನ ಅಂಡಾಕಾರದ ಎಲೆಗಳನ್ನು ಕಾಣಬಹುದು.ಉತ್ತಮ ಚೌಬೀನೆ ಜಾತಿಯ ಮರ.ಇದರ ದಾರುವು ಹಳದಿ ಕಂದು ಛಾಯೆ ಹೊಂದಿ ಸಾಧಾರಣ ಗಡಸುತನವನ್ನು ಹೊಂದಿದೆ.ಸಾಧಾರಣ ಹೊಳಪು ಬರುತ್ತದೆ.ತೇವಾಂಶ ಕಡಿಮೆಯಾದಂತೆ ಕಡುಕಂದು ಬಣ್ಣಕ್ಕೆ ತಿರುಗುತ್ತದೆ.
ಇದು ಒಂದು ಉತ್ತಮ ಜಾತಿಯ ಚೌಬೀನೆ ಮರ.ದೋಣಿಗಳ ನಿರ್ಮಾಣ,ಪಿಠೋಪಕರಣಗಳ ತಯಾರಿಯಲ್ಲಿ,ಗೃಹನಿರ್ಮಾಣದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಉತ್ತಮ ದರ್ಜೆಯ ಪದರಹಲಗೆಗಳ ತಯಾರಿಯಲ್ಲಿ ಬಳಕೆಯಲ್ಲಿದೆ.
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ ೨.ಹಸಿರು ಹೊನ್ನು.ಬಿ.ಜಿ.ಎಲ್.ಸ್ವಾಮಿ
Seamless Wikipedia browsing. On steroids.