From Wikipedia, the free encyclopedia
ಸಸ್ಯಕ್ಷೀರ (ಹಾಲ್ನೊರೆ) ಎಂದರೆ ಜಲೀಯ ಮಾಧ್ಯಮದಲ್ಲಿರುವ ಪಾಲಿಮರ್ ಸೂಕ್ಷ್ಮಕಣಗಳ ಸ್ಥಿರ ಚದರಿಕೆ (ಎಮಲ್ಷನ್). ಇದು ಪ್ರಕೃತಿಯಲ್ಲಿ ಕಂಡುಬರುತ್ತದೆ, ಆದರೆ ಪಾಲಿಮರೀಕರಣದಿಂದ ಕೃತಕ ಹಾಲ್ನೊರೆಗಳನ್ನು ತಯಾರಿಸಬಹುದು.
ಪ್ರಕೃತಿಯಲ್ಲಿ ದೊರಕುವ ಸಸ್ಯಕ್ಷೀರವು ಹಾಲಿನಂಥ ದ್ರವವಾಗಿದ್ದು, ಶೇಕಡ ೧೦ ರಷ್ಟು ಹೂಬಿಡುವ ಸಸ್ಯಗಳಲ್ಲಿ ಕಂಡುಬರುತ್ತದೆ.[1] ಇದು ಸಂಕೀರ್ಣವಾದ ಇಮಲ್ಷನ್ ಆಗಿದ್ದು ಪ್ರೋಟೀನ್ಗಳು, ಆಲ್ಕಲಾಯ್ಡ್ಗಳು, ಪಿಷ್ಟಗಳು, ಸಕ್ಕರೆಗಳು, ತೈಲಗಳು, ಟ್ಯಾನಿನ್ಗಳು, ರಾಳಗಳು ಮತ್ತು ಅಂಟುಗಳನ್ನು ಹೊಂದಿರುತ್ತದೆ. ಗಾಳಿಗೆ ಒಡ್ಡಿದಾಗ ಘನೀಕರಿಸುತ್ತದೆ. ಸಾಮಾನ್ಯವಾಗಿ ಅಂಗಾಂಶ ಗಾಯವಾದಾಗ ಇದು ಸ್ರವಿಸುತ್ತದೆ. ಬಹುತೇಕ ಸಸ್ಯಗಳಲ್ಲಿ ಹಾಲ್ನೊರೆಯು ಬೆಳ್ಳಗಿರುತ್ತದೆ, ಆದರೆ ಕೆಲವು ಸಸ್ಯಗಳು ಹಳದಿ, ಕಿತ್ತಳೆ ಅಥವಾ ಕಡುಗೆಂಪು ಬಣ್ಣದ ಹಾಲ್ನೊರೆಯನ್ನು ಹೊಂದಿರುತ್ತವೆ. ಇದು ಮುಖ್ಯವಾಗಿ ಸಸ್ಯಾಹಾರಿ ಕೀಟಗಳ ವಿರುದ್ಧ ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.