ಲಂಡನ್ ಸೇತುವೆ
From Wikipedia, the free encyclopedia
From Wikipedia, the free encyclopedia
ಲಂಡನ್ ಸೇತುವೆ | |
---|---|
ಸಾಗಾಣೆ | 5 lanes of A3 |
ದಾಟು | River Thames |
ಪ್ರಾದೇಶಿಕ | Inner London |
ಉಸ್ತುವಾರಿ | Bridge House Estates, City of London Corporation |
ವಿನ್ಯಾಸ | prestressed concrete box girder bridge |
ಒಟ್ಟು ಉದ್ದ | 262 m (860 ft) |
ಅಗಲ | 32 m (107 ft) |
Longest span | 104 m (340 ft) |
ಕೆಳಗಿನ ತೆರವು | 8.9 m (29 ft) |
ತೆರವು | 17 March 1973 |
ನಿರ್ದೇಶಾಂಕಗಳು | 51°30′29″N 0°05′16″W |
ಲಂಡನ್ ಸೇತುವೆ ಯು , ಥೇಮ್ಸ್ ನದಿಯ ಮೇಲಿದೆ. ಇದೊಂದು ಪ್ರಮುಖ ಸೇತುವೆಯಾಗಿದ್ದು, ಮಧ್ಯ ಲಂಡನ್ ನಲ್ಲಿನ ಲಂಡನ್ ನಗರ ಮತ್ತು ಸೌತ್ ವಾರ್ಕ್ ಅನ್ನು ಸಂಪರ್ಕಿಸುತ್ತದೆ. ಇದು ಕ್ಯಾನನ್ ಸ್ಟ್ರೀಟ್ ರೈಲ್ವೇ ಸೇತುವೆ ಮತ್ತು ಟವರ್ ಸೇತುವೆಯ ನಡುವೆ ಪ್ರತಿಷ್ಟಾಪಿಸಲ್ಪಟ್ಟಿದ್ದು, ಪೂಲ್ ಆಫ್ ಲಂಡನ್ ನ ಪಶ್ಚಿಮ ತುದಿಯಭಾಗವನ್ನು ಸೃಷ್ಟಿಸಿದೆ. ಸೇತುವೆಯ ದಕ್ಷಿಣ ಭಾಗದಲ್ಲಿ ಸೌತ್ ವಾರ್ಕ್ ಕೆಥಡ್ರಲ್ ಮತ್ತು ಲಂಡನ್ ಸೇತುವೆ ನಿಲ್ದಾಣಗಳಿದ್ದರೆ; ಉತ್ತರದಲ್ಲಿ ಲಂಡನ್ ನ ಗ್ರೇಟ್ ಫೈರ್ ನ ಸ್ಮಾರಕ ಮತ್ತು ಮಾನ್ಯೂಮೆಂಟ್ ಟ್ಯೂಬ್ ಸ್ಟೇಷನ್ ಗಳಿವೆ.
ಇದು ೧೭೨೯ ರಲ್ಲಿ ಪುಟ್ನೆ ಸೇತುವೆಯನ್ನು ನಿರ್ಮಿಸುವವರೆಗೂ ಕಿಂಗ್ ಸ್ಟನ್ ನಿಂದ ಥೇಮ್ಸ್ ನ ಹರಿವಿನ ದಿಕ್ಕಿನೆಡೆಗೆ ಇದ್ದ ಏಕ ಮಾತ್ರ ಸೇತುವೆಯಾಗಿದೆ. ಪ್ರಸ್ತುತ ಸೇತುವೆಯನ್ನು ೧೯೭೩ ರ ಮಾರ್ಚ್ ೧೭ ರಂದು ಮುಕ್ತಗೊಳಿಸಲಾಯಿತು. ಅಲ್ಲದೇ ಈ ಸ್ಥಳವನ್ನು ಆಕ್ರಮಿಸಿಕೊಂಡಿರುವ ಮತ್ತು ಖ್ಯಾತಿ ಪಡೆದಿರುವ ಸೇತುವೆಗಳ ಸಾಲಿನಲ್ಲಿ ಇದು ಅತ್ಯಂತ ಇತ್ತೀಚಿನದಾಗಿದೆ.[1]
ಈ ಸೇತುವೆಯು ಗ್ರೇಟರ್ ಲಂಡನ್ ಅಥಾರಿಟಿ ನಿರ್ವಹಿಸುವಂತಹ A೩ ರಸ್ತೆಯ ಭಾಗವನ್ನು ಹಾದುಹೋಗುತ್ತದೆ;[2] ಬ್ರಿಜ್ ಹೌಸ್ ಎಸ್ಟೇಟ್ಸ್,ಈ ಸೇತುವೆಯನ್ನು ನಿರ್ವಹಿಸುತ್ತದೆ. (ಸಿಟಿ ಬ್ರಿಜ್ ಟ್ರಸ್ಟ್ ಅನ್ನು ನೋಡಿ), ಇದು ಸ್ವಾವಲಂಬಿ ದತ್ತಿಸಂಸ್ಥೆಯಾಗಿದ್ದು,ಲಂಡನ್ ನಗರದ ನಗರಪಾಲಿಕೆ ಇದರ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತದೆ. ಥೇಮ್ಸ್ ನದಿಯ ದಕ್ಷಿಣ ಭಾಗದಲ್ಲಿನ ಲಂಡನ್ ಸೇತುವೆ ಮತ್ತು ಟವರ್ ಸೇತುವೆಯ ನಡುವೆ ಇರುವ ಪ್ರದೇಶ ಬಿಸಿನೆಸ್ ಇಂಪ್ರೂಮೆಂಟ್ ಡಿಸ್ಟ್ರಿಕ್ಟ್ (BID) ಆಗಿದೆ. ಅಲ್ಲದೇ ಇದನ್ನು ಟೀಮ್ ಲಂಡನ್ ಬ್ರಿಜ್ ನೋಡಿಕೊಳ್ಳುತ್ತದೆ.[3]
ಈ ಪ್ರದೇಶವನ್ನು ರೋಮನ್ನರು ವಶಪಡಿಸಿಕೊಂಡಾಗಿನಿಂದ ಸುಮಾರು ೨,೦೦೦ ವರ್ಷಗಳ ಹಿಂದಿನಿಂದಲೂ ಇಲ್ಲಿ ಅಥವಾ ಪ್ರಸ್ತುತದ ಸ್ಥಳದ ಸಮೀಪದಲ್ಲಿ ಈ ಸೇತುವೆಯು ಅಸ್ತಿತ್ವದಲ್ಲಿತ್ತು. ಲಂಡನ್ ಪ್ರದೇಶದಲ್ಲಿ ಥೇಮ್ಸ್ ನದಿಯುದ್ದಕ್ಕೂ ನಿರ್ಮಿಸಲಾದ ಮೊದಲ ಸೇತುವೆ ಬಹುಶಃ ದೋಣಿ ಮೂಲಕ ಸಾಗುವ ಮಿಲಿಟರಿ ದಾಟು ಸೇತುವೆಯಾಗಿರಬಹುದು. ಇದನ್ನು ಪ್ರಸ್ತುತದ ಸ್ಥಳದಲ್ಲಿ ಸುಮಾರು ಕ್ರಿಸ್ತಶಕ ೫೦ AD ನಲ್ಲಿ ರೋಮನ್ನರು ಮರದಿಂದ ಕಟ್ಟಿದ್ದರು.https://simple.wikipedia.org/wiki/London_Bridgeಲೊಲ್
ಕ್ರಿ.ಶ. ಸುಮಾರು ೫೫AD ಹೊತ್ತಿಗೆ, ಭವ್ಯಗಗನ ಚುಂಬಿ ಸೇತುವೆಯನ್ನು ನಿರ್ಮಿಸಲಾಯಿತು. ಅಲ್ಲದೇ ಸ್ಥಳೀಯ ರೋಮನ್ನರು ಇದರ ಆಚೆಗೆ ಸಣ್ಣ ವ್ಯಾಪಾರೀ ವಸಾಹತುವನ್ನು ಕಟ್ಟಿಕೊಂಡರು, ಇದು ರೋಮನ್ ರ ಲಂಡನ್—ಲಂಡಿನಿಯಮ್ ಪಟ್ಟಣವಾಗಿತ್ತು. ಕ್ರಿ.ಶ. ೬೦ ADನಲ್ಲಿ ರಾಣಿ ಬೌಡಿಕಾ ನಡೆಸಿದ ದಂಗೆಯಲ್ಲಿ ವಸಾಹತು ಮತ್ತು ಸೇತುವೆ ನಾಶವಾದವು. ಈ ಗೆಲುವು ಸ್ವಲ್ಪ ಕಾಲದವರೆಗೆ ಮಾತ್ರ ಇತ್ತಲ್ಲದೇ, ಅನಂತರ ತಕ್ಷಣವೇ ರೋಮನ್ನರು ದಂಗೆಕೋರರನ್ನು ಸೋಲಿಸಿದರು. ಅಲ್ಲದೇ ಗೋಡೆಗಳಿಂದ ಪಟ್ಟಣ ನಿರ್ಮಿಸಲು ಯೋಜಿಸಿದರು. ಆಗ ೨ ನೇ ಶತಮಾನಕ್ಕೆ ಸೇರಿದ ಕೆಲವು ರೋಮನ್ ಗೋಡೆಗಳು ಇಂದಿಗೂ ಅವಶೇಷಗಳಾಗಿ ಉಳಿದಿವೆ. ಸ್ಟೇನ್ ಸ್ಟ್ರೀಟ್ ( A೩ ಮಾರ್ಗದಲ್ಲಿ) ಮತ್ತು ವ್ಯಾಟ್ಲಿಂಗ್ ಸ್ಟ್ರೀಟ್ ( A೨) ಮಾರ್ಗಗಳ ಮೂಲಕ ದಕ್ಷಿಣ ತೀರದ ಬಂದರುಗಳಿಗೆ ಪ್ರವೇಶ ಒದಗಿಸುವ ಮೂಲಕ ಪ್ರಸ್ತುತ ಸೇತುವೆಯ ಸ್ಥಳದ ಸಮೀಪದಲ್ಲಿ ಹೊಸ ಪಟ್ಟಣ ಮತ್ತು ಸೇತುವೆಯನ್ನು ನಿರ್ಮಿಸಲಾಯಿತು.
ರೋಮನ್ನರು ನಿರ್ಗಮಿಸಿದ ಮೇಲೆ ಸೇತುವೆ ಕಣ್ಮರೆಯಾಯಿತು. ಅಲ್ಲದೇ ಲಂಡಿನಿಯಮ್ ಅನ್ನು ಕೂಡ ತೊರೆಯಲಾಯಿತು, ಹಾಗು ಈ ಘಟ್ಟದಲ್ಲಿ ಸೇತುವೆಯ ಅಗತ್ಯ ಸ್ವಲ್ಪ ಮಟ್ಟಿಗಿತ್ತು. ಅಲ್ಲದೇ ಸ್ಯಾಕ್ಸನ್ ಕಾಲಾವಧಿಯಲ್ಲಿ ನದಿಯು ಮೆರ್ಸಿಯ ಮತ್ತು ವೆಸೆಕ್ಸ್ ನ ಶತ್ರುವಿನ ರಾಜ್ಯಗಳ ರಾಜಕೀಯ ಗಡಿಯಾಯಿತು. ವೈಕಿಂಗ್ (ಕಡಲುಗಳ್ಳರು)ಆಕ್ರಮಣಗಳ ಪರಿಣಾಮಗಳೊಂದಿಗೆ, ವೆಸೆಕ್ಸ್ ನ ರಾಜರಿಂದ, ಅನಂತರ ಆಲ್ಫರ್ಡ್ ದಿ ಗ್ರೇಟ್ ನಿಂದ ಲಂಡನ್ ನಗರವನ್ನು ಪುನಃ ವಶಪಡಿಸಿಕೊಳ್ಳುವುದರೊಂದಿಗೆ ಸ್ಯಾಕ್ಸನ್ ಸೇತುವೆಯ ನಿರ್ಮಾಣದ ಅಗತ್ಯ ಉಂಟಾಯಿತು. ಅದೇನೇ ಆದರೂ ಅಥೆಲ್ರೆಡ್ ರ ಆಳ್ವಿಕೆಯ ಮೊದಲು ಸೇತುವೆ ಇತ್ತೆಂಬುದಕ್ಕೆ ಹಾಗು ಸ್ವೆನಿಯನ್ ರ ಆಕ್ರಮಣಗಳನ್ನು ತಡೆದರು ಎಂಬುದಕ್ಕೆ ಪುರಾತತ್ತ್ವ ಮಾಹಿತಿಯ ಯಾವುದೇ ದಾಖಲೆಗಳಿಲ್ಲ. ಅನಂತರ ಬಂದ ಸ್ಕಾಲ್ಡಿಕ್ ಸಂಪ್ರದಾಯದ ಪ್ರಕಾರ ನಾರ್ವೆ ದೇಶದ ರಾಜಕುಮಾರ ಒಲ್ಫ್ ಅಥೆಲ್ರೆಡ್ ಗೆ ನೆರವಾಗುವುದಕ್ಕಾಗಿ ೧೦೧೪ ರಲ್ಲಿ ಸೇತುವೆಯನ್ನು ನೆಲಸಮ ಮಾಡಿದನೆಂದು ಹೇಳಲಾಗಿದೆ. ಇದು ಡೇನ್ ನ ರಕ್ಷಣಾತ್ಮಕ ಪಡೆಗಳನ್ನು ವಿಭಜಿಸಲು ಮಾಡಲಾದ ಯಶಸ್ವಿ ಪ್ರಯತ್ನವಾಗಿದ್ದು, ಈತ ಗೋಡೆಗಳಿಂದ ಆವೃತವಾಗಿದ್ದ ಲಂಡನ್ ನಗರವನ್ನು ಜೊತೆಯಲ್ಲಿ ಸೌತ್ ವಾರ್ಕ್ ನ್ನು ಹೊಂದಿದ್ದನು. ಈ ಮೂಲಕ ಆಂಗ್ಲೋ-ಸ್ಯಾಕ್ಸನ್ ರಾಜನಿಗಾಗಿ ಲಂಡನ್ ಅನ್ನು ಪುನರ್ವಶಪಡಿಸಿಕೊಟ್ಟನು. ಈ ಪ್ರಸಂಗವು "ಲಂಡನ್ ಬ್ರಿಜ್ ಈಸ್ ಫಾಲಿಂಗ್ ಡೌನ್" ಎಂಬ ಜನಪ್ರಿಯ ಮಕ್ಕಳ ಕವಿತೆ, ಶಿಶುಪ್ರಾಸಕ್ಕೆ ಸ್ಫೂರ್ತಿಯಾಯಿತು, ಎಂದು ತಿಳಿಯಲಾಗಿದೆ.[4]
ಸ್ಯಾಕ್ಸನ್ ಸೇತುವೆಗೆ ಇರುವಂತಹ ಅತ್ಯಂತ ಇತ್ತೀಚಿನ ಸಮಕಾಲೀನ ಬರಹದ ಉಲ್ಲೇಖವು ೧೦೧೬ ರಲ್ಲಿದೆ. ಕ್ನಟ್ ರಾಜ ಎಡ್ಮಂಡ್II "ಐರಾನ್ ಸೈಡ್" ನಿಂದ ಸಿಂಹಾಸನವನ್ನು ಪುನಃ ವಶಪಡಿಸಿಕೊಳ್ಳಲು ಮಾಡಿದ ಯುದ್ಧದಲ್ಲಿ ಈತನ ಹಡಗುಗಳು ಈ ಸೇತುವೆಯನ್ನು ದಾಟಿದ್ದವು. ಪುನಃ ನಿರ್ಮಿಸಲಾದ ನಾರ್ಮನ್ ಲಂಡನ್ ಸೇತುವೆ ೧೦೯೧ ರಲ್ಲಿ ಎದ್ದ ಚಂಡಮಾರುತದಿಂದಾಗಿ ನೆಲಸಮವಾಯಿತು.ಈ ಚಂಡಮಾರುತ T೮/F೪ ವೇಗದಲ್ಲಿ ಬಿರುಗಾಳಿಯನ್ನು ಹುಟ್ಟುಹಾಕಿತ್ತು. ಇದು ಸೆಂಟ್ ಮೇರಿ-ಲೆ-ಬೌವ್ ಚರ್ಚ್ ಅನ್ನು ಕೂಡ ಅಪ್ಪಳಿಸಿತ್ತು. ಅಲ್ಲದೇ ಇದನ್ನು ೧೦೯೧ ರ ಲಂಡನ್ ಬಿರುಗಾಳಿ ಎಂದೇ ಕರೆಯಲಾಗುತ್ತದೆ.[5] ಇದರ ದುರಸ್ತಿ ಅಥವಾ ಪುನರ್ಸ್ಥಾಪನೆಯನ್ನು ವಿಲಿಯಂ II "ರುಫುಸ್" ಮಾಡಿದರು. ಇದನ್ನು ಹೊಸ ಸೆಂಟ್ ಪೌಲ್ಸ್ ರ ಕೆಥೆಡ್ರಲ್ ನಲ್ಲಿ ನಡೆಯುತ್ತಿದ್ದ ಮತ್ತು ಲಂಡನ್ ಗೋಪುರ ದ ಅಭಿವೃದ್ಧಿ ಕಾರ್ಯಗಳೊಂದಿಗೆ ಬಲಾತ್ಕಾರವಾಗಿ ನಿರ್ಬಂಧಿಸಲಾದ ಕಾರ್ಮಿಕರ ಮೂಲಕ ನೆರವೇರಿಸಲಾಯಿತು. ಇದು ಮತ್ತೊಮ್ಮೆ , ಈ ಬಾರಿ ೧೧೩೬ ರಲ್ಲಿ ನಡೆದ ಬೆಂಕಿ ಅನಾಹುತದಿಂದಾಗಿ ನಾಶವಾಯಿತು.
ಆಗ ೧೧೩೬ ರ ವಿಧ್ವಂಸದ ನಂತರ ಸ್ಟೆಫೆನ್ ರ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಮರು ನಿರ್ಮಾಣಗಳನ್ನು ಮಾಡಲಾಯಿತು. ಸಂಭಾವ್ಯವಾಗಿ ವಿಲಿಯಂ ರುಫುಸ್ ಸ್ಥಾಪಿಸಿದ ಶೈಲಿಯ ಮಾದರಿ ವಿಧಾನಗಳೊಂದಿಗೆ ಮರು ನಿರ್ಮಿಸಲಾಯಿತು. ಹೆನ್ರಿ II ಯವರ ಪ್ರವೇಶದ ಮೇಲೆ ಈ ಕಾರ್ಯವನ್ನು ಪ್ರೋತ್ಸಾಹಿಸಲೆಂದು, ರಾಷ್ಟ್ರೀಯ ಕ್ರೈಸ್ತ ಪಾದ್ರಿಗಳ ಒಕ್ಕೂಟ ಸಂಘದ ಸಂಸ್ಥೆಯು ಅದರ ನಿರ್ವಹಣೆಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿತು. ಲಂಡನ್ ನಲ್ಲಿ ಇದೇ ಉದ್ದೇಶ ಹೊಂದಿದ್ದ ಪರವಾನಗಿಯಿಲ್ಲದ ಅನೇಕ ಸ್ಥಳೀಯ ಒಕ್ಕೂಟ ಸಂಘಗಳಿದ್ದವು ಎಂಬುದಕ್ಕೆ ಸಾಕ್ಷ್ಯಗಳಿವೆ. ನಂತರ ೧೧೬೩ ರಲ್ಲಿ ಪೀಟರ್ ಡೆ ಕೊಲೆ ಚರ್ಚ್ ರನ್ನು, "ವಾರ್ಡನ್ ಆಫ್ ದಿ ಬ್ರೆದ್ರನ್ ಆಫ್ ದಿ ಬ್ರಿಜ್" ಆಗಿ ನೇಮಿಸಲಾಯಿತು. ಇದು ಎಲ್ಲಾ ಪೂರ್ವಭಾವಿ ಆಡ್ ಹಾಕ್ (ತಾತ್ಕಾಲಿಕ)ವ್ಯವಸ್ಥೆಗಳನ್ನು ಜೋಡಿಸುವ ಕ್ರಮದಂತೆ ಕಂಡುಬಂದಿತು. ಹೀಗೆ ೧೧೭೩ ರಲ್ಲಿ ಕೂಡಲೇ ಪೀಟರ್,ಮರದ ಈ ಸೇತುವೆಯನ್ನು ಕಲ್ಲಿನಲ್ಲಿ ಮರು ನಿರ್ಮಿಸುವುದರ ಬಗ್ಗೆ ಪ್ರಸ್ತಾಪಿಸಿದರು. ಥಾಮಸ್ ಬೆಕೆಟ್ ಕಲ್ಟ್ ಸಂಪ್ರದಾಯದವರ ಜನಪ್ರಿಯತೆ ಮತ್ತು ಸೇತುವೆಯಿಂದ ಕ್ಯಾಂಟರ್ ಬರಿಗೆ ಹೋಗುವ ಯಾತ್ರಾರ್ಥಿಗಳಿಂದಾಗಿ ಇದನ್ನು ಪುನಃ ನಿರ್ಮಿಸಬೇಕಾಯಿತು. ನಿರ್ಮಾಣವನ್ನು ೧೧೭೬ ರಲ್ಲಿ ಡೆ ಕೊಲೆಚರ್ಚ್ ರವರ ನಿರ್ದೇಶನದಲ್ಲಿ ಪ್ರಾರಂಭಿಸಲಾಯಿತು. ಸೇತುವೆಯ ಮಧ್ಯಭಾಗದ ಹತ್ತಿರದಲ್ಲಿ ಪ್ರಾರ್ಥನಾಲಯವೊಂದನ್ನು ನಿರ್ಮಿಸಲಾಯಿತು.(ಇದು ಇತ್ತೀಚೆಗಷ್ಟೇ ಹುತಾತ್ಮರಾದವರಿಗಾಗಿ ಮತ್ತು ಸೆಂಟ್ ಮೇರಿ ಕೊಲೆಚರ್ಚ್ ರವರಿಗೆ ಸೇರಿದ ಪ್ರಾಂತದಲ್ಲಿ ಹುಟ್ಟಿ ಸಂತರಾದವರಿಗಾಗಿ ಮೀಸಲಾಗಿದೆ). ಸೆಂಟ್ ಥಾಮಸ್ ಪ್ರಾರ್ಥನಾ ಮಂದಿರ, ಹೈ ಟೌನ್ ಪ್ಯಾರಿಷ್ ಚರ್ಚ್ ಗಳಿಗಿಂತ ಅತ್ಯಂತ ಭವ್ಯವಾಗಿದೆ; ಇದು ಮೀನುಗಾರರಿಗಾಗಿ ಮತ್ತು ನದಿಯುದ್ದಕ್ಕೂ ಬಾಡಿಗೆ ವಾಹನಗಳಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ನದಿ ಮಟ್ಟದ ಪ್ರವೇಶಾವಕಾಶವನ್ನು ಹೊಂದಿದ್ದರೂ ಕೂಡ ಇದು ಅತ್ಯಂತ ಮಹೋನ್ನತವಾಗಿದೆ. ಹೊಸ ಸೇತುವೆ ಸಂಪೂರ್ಣಗೊಳ್ಳಲು ೩೩ ವರ್ಷಗಳೇ ಹಿಡಿಯಿತಲ್ಲದೇ, ಇದರ ನಿರ್ಮಾಣವನ್ನು ರಾಜ ಜಾನ್ ರ ಆಳ್ವಿಕೆಯ ಸಂದರ್ಭದಲ್ಲಿ ೧೨೦೯ ರಲ್ಲಿ ಮುಕ್ತಾಯಗೊಳಿಸಲಾಯಿತು. ಜಾನ್ ಇದರ ನಿರ್ವಹಣೆಗಾಗಿ ಕಂದಾಯ ಪಡೆಯಲು ಸೇತುವೆಯ ಮೇಲೆ ಮನೆಗಳನ್ನು ಕಟ್ಟಲು ಅನುಮತಿ ನೀಡಿದರಲ್ಲದೇ, ಶೀಘ್ರದಲ್ಲೆ ಇದರ ಮೇಲೆ ಅನೇಕ ಅಂಗಡಿ- ಮಳಿಗೆಗಳು ತಲೆ ಎತ್ತಿದವು.
ಈ ಮಧ್ಯಕಾಲೀನ ಸೇತುವೆಯು, ೧೯ ಸಣ್ಣ ಕಮಾನುಗಳನ್ನು ಮತ್ತು ದಕ್ಷಿಣ ತುದಿಯಲ್ಲಿ ರಕ್ಷಣಾ ಮಹಾದ್ವಾರಗೃಹದೊಂದಿಗೆ ಸಂಚಾರಕ್ಕೆ ಕಾಲಕಾಲಕ್ಕೆ ತಡೆಯೊಡ್ಡುವ ಕೀಲು ಸೇತುವೆಯನ್ನೂ ಹೊಂದಿತ್ತು. ಸಮಕಾಲೀನ ಚಿತ್ರಗಳು, ಸೇತುವೆಯು ಎತ್ತರದಲ್ಲಿ ಏಳು ಮಹಡಿಗಳವರೆಗೂ ಇರುವ ಕಟ್ಟಡಗಳಲ್ಲಿ ದಟ್ಟೈಸಿರುವುದನ್ನು ತೋರಿಸುತ್ತವೆ. ಕಮಾನುಗಳ ಸಂಕುಚಿತತೆ, ನೀರಿನ ಹರಿವನ್ನು ತಡೆಗಟ್ಟುವ ಮೂಲಕ ಚಳಿಗಾಲದಲ್ಲಿ ಸ್ಥಿರೀಕರಿಸಲು, ನೀರನ್ನು ಎಡೆಗೊಡುವಂತೆ ಮಾಡುವ ಮೂಲಕ ಥೇಮ್ಸ್ ನದಿಯ ಮೇಲೆ ಇದು ಭಾಗಶಃ ಅಣೆಕಟ್ಟೆಯಂತೆ ಕಾರ್ಯನಿರ್ವಹಿಸುವುದನ್ನು ಸೂಚಿಸುತ್ತದೆ. ಮಂದಗತಿಯ ಹರಿವಿನಿಂದಾಗಿ ಚಳಿಗಾಲದಲ್ಲಿ ನೀರನ್ನು ತಡೆಹಿಡಿಯಲಾಗುವುದು. ಅನಂತರ ಜಲ ಪಂಪ್ ಗಳನ್ನು ನಡೆಸಲು ಎರಡು ಉತ್ತರ ಕಮಾನುಗಳಡಿಯಲ್ಲಿ, ಹಾಗು ಹರಿವ ಪ್ರವಾಹದ ವಿದ್ಯುತ್ ನ ಮೂಲಕ ಕಾರ್ಯನಿರ್ವಹಿಸುವ ಧಾನ್ಯಗಳ ಹಿಟ್ಟಿನಗಿರಣಿಗಳನ್ನು ನಡೆಸಲು ಎರಡು ದಕ್ಷಿಣದ ಕಮಾನುಗಳಡಿಯಲ್ಲಿ, ಜಲಚಕ್ರ ಗಳನ್ನು (ಇದನ್ನು ಪೀಟರ್ ಮೋರಿಸ್ ರವರು ವಿನ್ಯಾಸಗೊಳಿಸಿದ್ದಾರೆ) ಸೇರಿಸುವ ಮೂಲಕ ಪ್ರವಾಹದ ಹರಿವನ್ನು ತಡೆಹಿಡಿಯಬಹುದಾಗಿದೆ. ಇದು ಅಲೆತಡೆಗಳು ಅಥವಾ "ದಸಿಕಾಪು" ಗಳ ನಡುವೆ ಭಯಂಕರವಾದ ಅಲೆಗಳ ಹೊಡೆತವನ್ನು ಉಂಟುಮಾಡಿತು. ನದಿಯ ಪ್ರತಿ ಬದಿಯ ಮೇಲೂ ನೀರಿನ ಮಟ್ಟದ ನಡುವೆ ಆರು ಅಡಿ(ಎರಡು ಮೀಟರ್ ಗಳು)ಯಷ್ಟು ವ್ಯತ್ಯಾಸವಿರುವಂತೆ ಅತಿಭಯಂಕರವಾದ ಅಲೆಗಳ ಹೊಡೆತಗಳನ್ನು ಉಂಟುಮಾಡಿತು.[6] ಕೇವಲ ಧೈರ್ಯವಂತರು ಅಥವಾ ಹುಚ್ಚು ಸಾಹಸದ ಮನೋಭಾವವುಳ್ಳವರು ಮಾತ್ರ "ಸೇತುವೆ ದಾಟಲು" ಪ್ರಯತ್ನಿಸಿದರು—ನದಿ ಮೇಲ್ಪಾತಳಿಯ ಕಸಕಡ್ಡಿಗಳ ಗುಡ್ಡೆಗಳ ನಡುವೆ ಬೋಟ್ ಅನ್ನು ನಡೆಸುವುದು— ಅಲ್ಲದೇ ಇದನ್ನು ಮಾಡಲು ಹೋಗಿ ಅನೇಕರು ಮುಳುಗಿದ್ದಾರೆ. ಸೇತುವೆಯು "ಜಾಣರಿಗೆ ಅದರ ಮೇಲಿಂದ ದಾಟಲು, ಮತ್ತು ಮೂರ್ಖರಿಗೆ ಅದರ ಕೆಳಗಿಂದ ದಾಟಲು" ಎಂಬ ಮಾತು ಚಾಲ್ತಿಯಲ್ಲಿದೆ.[7]
ಲಂಡನ್ ಸೇತುವೆಯ ಮೇಲೆ ಮಳಿಗೆಗಳನ್ನು ನಿರ್ಮಿಸಲು ಅವಕಾಶ ನೀಡುವ ರಾಜ ಜಾನ್ ರ ನಿರ್ಧಾರ, ನದಿಯನ್ನು ದಾಟುವ ಜನ ಸಂಚಾರದ ದಟ್ಟಣೆಯನ್ನು ಕಡಿಮೆಮಾಡಿತು. ಮನೆಗಳು ಮತ್ತು ಮಳಿಗೆಗಳು ಅಲ್ಲಿಯ ಸ್ಥಳವನ್ನು ಆವರಿಸಿದವು, ಹಾಗು ಜನಜಂಗುಳಿಯನ್ನು ಆಕರ್ಷಿಸಿದವು. ಆದರೆ ಸವಾರಿ ಗಾಡಿಗಳು ಕೆಟ್ಟು ನಿಂತಾಗ ಅಥವಾ ಪ್ರಾಣಿಗಳು ಅನುಚಿತವಾಗಿ ವರ್ತಿಸಿದಾಗ ಸೇತುವೆಯನ್ನು ದಾಟಲು ಒಂದು ಗಂಟೆಯಷ್ಟು ಸಮಯ ಹಿಡಿಯುತ್ತಿತ್ತು. ಈ ಕಾರಣದಿಂದಾಗಿ ಜನರು ನಡೆದು ಹೋಗುವುದಕ್ಕಿಂತ ಬಾಡಿಗೆ ಬೋಟ್ ಗಳ ಮೂಲಕ ಸೇತುವೆ ದಾಟುವ ಅವಕಾಶವನ್ನು ಆಯ್ಕೆ ಮಾಡಿಕೊಂಡರು. ಇದು ಲಂಡನ್ನರನ್ನು ತೀರದಿಂದ ತೀರಕ್ಕೆ ವೇಗವಾಗಿ ಕೊಂಡೊಯ್ಯುತ್ತಿತ್ತು. ಸೇತುವೆಯು ಅಗಲದಲ್ಲಿ ಸುಮಾರು 26 feet (8 m) ನಷ್ಟಿದ್ದರೂ, ಸೇತುವೆಯ ಮೇಲಿರುವ ಕಟ್ಟಡಗಳು ಬೀದಿಯ ಪ್ರತಿ ಬದಿಯಲ್ಲೂ ಸುಮಾರು 7 feet (2 m) ನಷ್ಟು ಸ್ಥಳವನ್ನು ಆವರಿಸಿದ್ದವು. ಈ ಕೆಲವು ಕಟ್ಟಡಗಳನ್ನು ನದಿಯ ಪಾತಳಿಯ ಆಚೆಗೆ ಇನ್ನೂ ಏಳು ಅಡಿ ಹೊರಗೆ ನಿರ್ಮಿಸಲಾಗಿದೆ. ಈ ಕಾರಣದಿಂದ ಸಂಚಾರಕ್ಕಾಗಿ ರಸ್ತೆಯ ವಿಸ್ತಾರವನ್ನು ಕಡಿಮೆ ಮಾಡಿ 12 feet (4 m) ನಷ್ಟು ಅಗಲಕ್ಕೆ ಇಳಿಸಲಾಯಿತು. ಕುದುರೆಗಳು, ಬಂಡಿಗಳು, ಸರಕು-ಸಾಮಾನು ಸಾಗಣೆ ಬಂಡಿಗಳು ಮತ್ತು ಪಾದಚಾರಿಗಳು, ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ಹೋಗುವ ಒಂದು ಕಿರುದಾರಿಯೊಂದಿಗೆ, ಕೇವಲ ಆರು ಅಡಿ ಅಗಲದ ದಾರಿಯನ್ನು ಹಂಚಿಕೊಂಡವೆಂಬುದು ಇದರ ಅರ್ಥವಾಗಿದೆ. ಇಲ್ಲಿ ಮನೆಗಳನ್ನು ಮತ್ತು ಮಳಿಗೆಗಳನ್ನು ನಿರ್ಮಿಸದೇ ಉಳಿದ ಕೆಲವೇ ಕೆಲವು ಸ್ಥಳಗಳಿವೆ. ಇವು ಜನರಿಗೆ ದಟ್ಟಣೆಯಿಂದ ಹೊರಬಂದು ನದಿಯ ಸುಂದರ ನೋಟವನ್ನು ಮತ್ತು ಲಂಡನ್ ನ ತೀರದ ದಂಡೆಗುಂಟ ಇರುವ ರೇಖೆಯನ್ನು ಆನಂದಿಸುವಂತೆ ಮಾಡುತ್ತವೆ.
ನಿಕಟವಾಗಿರುವ ವ್ಯಾಪಾರದ ೨೦೦ ಸ್ಥಳಗಳು ಪುಟ್ಟ ಬೀದಿಯ ಎರಡೂ ಕಡೆಗಳಲ್ಲಿ ಸಾಲು ಪಂಕ್ತಿಯಲ್ಲಿದ್ದವು. ಲಂಡನ್ ಸೇತುವೆಯ ಮೇಲೆ ಏಲ್ ಮದ್ಯ ಮತ್ತು ಬಿಯರ್ ಅನ್ನು ಮಾರುತ್ತಿರಲಿಲ್ಲ. ಏಕೆಂದರೆ ಈ ಮದ್ಯಗಳಿಗೆ ಸಾರಾಯಿ ಉಗ್ರಾಣದ ಅಗತ್ಯವಿರುತ್ತವೆ, ಅದು ಇಲ್ಲಿರುವುದಿಲ್ಲ. ವ್ಯಾಪಾರಿಗಳು ಅವರ ಮಳಿಗೆಗಳ ಮೇಲೆ ವಾಸಿಸುತ್ತಿದ್ದರು. ಅಲ್ಲದೇ ರಸ್ತೆ ಮಟ್ಟದ ಅಟ್ಟಗಳಿಂದ ಸರಕುಗಳನ್ನು ಮಾರುತ್ತಿದ್ದರು. ಅವರ ಸರಕುಗಳನ್ನು ಪ್ರದರ್ಶಿಸಲು ಮತ್ತು ವ್ಯಾಪಾರ ಮಾಡಲು ಕಿಟಕಿಗಳನ್ನು ಬಳಸುತ್ತಿದ್ದರು; ಪ್ರತಿ ಮಳಿಗೆಗಳ ಮೇಲೆ ಮಾರಾಟಮಾಡುವ ಸರಕಿನ ಆಕಾರದಲ್ಲಿರುವ ಗುರುತನ್ನು ನೇತುಹಾಕಲಾಗಿರುತ್ತಿತ್ತು. ಇಲ್ಲಿ ಯಾವ ಸರಕು ದೊರೆಯುತ್ತದೆ, ಎಂಬುದನ್ನು ಅನಕ್ಷರಸ್ಥರೂ ಅರ್ಥಮಾಡಿಕೊಳ್ಳಲೆಂದು ಹೀಗೆ ಹಾಕಿರುತ್ತಿದ್ದರು. ಕುದುರೆ ಸವಾರರು ಸಲೀಸಾಗಿ ಇವುಗಳ ಕೆಳಗೆ ಸಾಗಲೆಂದು ಈ ಗುರುತುಗಳನ್ನು ಎತ್ತರದಲ್ಲಿ ನೇತುಹಾಕಲಾಗುತ್ತಿತ್ತು— ಸಣ್ಣ ಬೀದಿಯ ಪ್ರತಿ ಇಂಚು ಕೂಡ ವಾಹನಗಳ ಸಂಚಾರಕ್ಕೆ ಲಭ್ಯವಿರುತ್ತಿತ್ತು. ಮನೆಗಳು ಮತ್ತು ಮಳಿಗೆಗಳ ಮೇಲಿನ ಅನೇಕ ಮಹಡಿಗಳನ್ನು ಬೀದಿಯುದ್ದಕ್ಕೂ ಕಟ್ಟಲಾಗುತ್ತಿದ್ದು, ಇದು ಮನೆ ಅಥವಾ ಮಳಿಗೆಯುದ್ದಕ್ಕೂ ಸೇರಿಕೊಂಡಿರುತ್ತಿತ್ತು. ಇದರಿಂದಾಗಿ ಬೀದಿಯು ಸುರಂಗದಂತೆ ತೋರುತ್ತಿತ್ತು. ಲಂಡನ್ ಸೇತುವೆಗೆ ಇರುವ ಮಹಾದ್ವಾರವನ್ನು ಕರ್ಫ್ಯೂ ಸಮಯದಲ್ಲಿ ಮುಚ್ಚಲಾಗಿರುತ್ತಿತ್ತು. ಅಲ್ಲದೇ ಸೇತುವೆಯ ಸ್ಥಳವು ವಾಸಿಸಲು ಅಥವಾ ಕೊಂಡುಕೊಳ್ಳಲು ಸುರಕ್ಷಿತ ಸ್ಥಳ ಎಂದು ಪರಿಗಣಿಸಲಾಗುತ್ತಿತ್ತು.[ಸೂಕ್ತ ಉಲ್ಲೇಖನ ಬೇಕು] ಲಂಡನ್ ನಗರದ ಸೆಂಟ್ ಮ್ಯಾಗ್ನಸ್ ನ ಪ್ಯಾರಿಷ್ ಮತ್ತು ಸೆಂಟ್ ಓಲ್ವೆಯ ಸೌತ್ ವಾರ್ಕ್ ಪ್ಯಾರಿಷ್ ವ್ಯಾಪ್ತಿಗೆ ಒಳಪಡುವ ಕ್ಷೇತ್ರದಲ್ಲಿರುವ ಸೇತುವೆಯ ಸಮುದಾಯವು ಬಹುಮಟ್ಟಿಗೆ ಪಟ್ಟಣವಾಗಿದೆ.
ಆಗ ೧೨೮೪ ರಲ್ಲಿ ಅನೇಕ ವರ್ಷಗಳ ಕಾನೂನು ವಿವಾದದ ನಂತರ ಲಂಡನ್ ನಗರವು ಪರಿಣಾಮಕಾರಿಯಾದ ನಿಯಂತ್ರಣವನ್ನು ಗಳಿಸಿತು. ಅಲ್ಲದೇ ಹಳೆಯ ಕಂದಾಯ ಮತ್ತು ಹೊಸ ಉಂಬಳಿಗಳ ಮೂಲಕ ಸೇತುವೆಯನ್ನು ನಿರ್ವಹಿಸಲೆಂದು ಬ್ರಿಜ್ ಹೌಸ್ ಎಸ್ಟೇಟ್ಸ್ ಟ್ರಸ್ಟ್ ಆಗಿರುವ ಸಿಟಿ ಬ್ರಿಜ್ ಟ್ರಸ್ಟ್ ಅನ್ನು ಸ್ಥಾಪಿಸಿತು. ಬ್ರಿಜ್ ಹೌಸ್, ಪೀಟರ್ ಡೆ ಕೊಲೆ ಚರ್ಚ್ ರ ಮೂಲ "ಮನೆ"ಯಿಂದ ಉದಯಿಸಿತು. ಉದಾಹರಣೆಗೆ, ಅವರ ಕ್ರೈಸ್ತ ಸನ್ಯಾಸಿಗಳ "ಬ್ರೆದ್ರನ್ ಆಫ್ ದಿ ಬ್ರಿಜ್" ಗಾಗಿ ನಿರ್ವಹಣೆಯ ಡಿಪೋ ಮತ್ತು ವಸತಿನಿಲಯ, ಇದು ಸೌತ್ ವಾರ್ಕ್ ನಲ್ಲಿರುವ ಸೆಂಟ್ ಒಲ್ವೇ ಚರ್ಚ್ ನ ನಂತರವಿದೆ. ಈ ಸ್ಥಳವನ್ನು "ಬ್ರಿಜ್ ಯಾರ್ಡ್" ಎಂಬ(ಬೀದಿ)ಸ್ಟ್ರೀಟ್ ನ ಹೆಸರಿನಿಂದ ಇಂದೂ ಕೂಡ ಗುರುತಿಸಲಾಗುತ್ತದೆ.
ಸೇತುವೆಯ ಅನೇಕ ಕಮಾನುಗಳು ಕಾಲ ಸರಿದಂತೆ ನಾಶವಾದವು. ಅಲ್ಲದೇ ಸೇತುವೆಯ ಮೇಲಿದ್ದ ಮನೆಗಳು ೧೩೮೧ ರಲ್ಲಿ ವ್ಯಾಟ್ ಟೈಲರ್ ರ ಕೃಷಿಕರ ಕ್ರಾಂತಿಯ ಸಂದರ್ಭದಲ್ಲಿ ಮತ್ತು ೧೪೫೦ ರ ಜ್ಯಾಕ್ ಕೇಡ್ ರ ಬಂಡಾಯದ ಸಂದರ್ಭದಲ್ಲಿ ಸುಟ್ಟುಹೋದವು. ಇದು ಸೇತುವೆಯ ಮೇಲೆ ನಡೆದ ಯೋಜಿತ ಕದನವಾಗಿದೆ.
ಉತ್ತರದ ಮಹಾದ್ವಾರವಾದ ನ್ಯೂ ಸ್ಟೋನ್ ಗೇಟ್ ಗೆ ಪರ್ಯಾಯವಾಗಿ ೧೫೭೭ ರಲ್ಲಿ ನಾನ್ಸಚ್ ಹೌಸ್ ಅನ್ನು ನಿರ್ಮಿಸಲಾಯಿತು. ದಕ್ಷಿಣದ ಮಹಾದ್ವಾರಗೃಹವಾದ, ಸ್ಟೋನ್ ಗೇಟ್ ವೇ ಲಂಡನ್ ನ್ನಿನ ಅತ್ಯಂತ ಕುಖ್ಯಾತ ಸ್ಥಳಗಳಲ್ಲಿ ಒಂದಾಗಿದೆ: ಇಲ್ಲಿ ಈಟಿಯಿಂದ ಶೂಲಕ್ಕೇರಿಸಲಾದ ದೇಶದ್ರೋಹಿಗಳ ವಿಚ್ಛೇದಿಸಿದ ತಲೆಗಳನ್ನು ಪ್ರದರ್ಶಿ[1]ಸಲಾಗುತ್ತದೆ. ಅಲ್ಲದೇ ಪ್ರಾಕೃತಿಕ ಶಕ್ತಿಗಳ ವಿರುದ್ಧ ಅವುಗಳನ್ನು ಸಂರಕ್ಷಿಡಲೆಂದು ಕೀಲೆಣ್ಣೆಯಲ್ಲಿ ಅವುಗಳನ್ನು ಮುಳುಗಿಸಿಡಲಾಗುತ್ತದೆ. ವಿಲಿಯಂ ವ್ಯಾಲ್ಯಾಕ್ ನ ತಲೆ, ಗೇಟ್ ನ ಮೇಲೆ ಮೊದಲು ಕಂಡುಬರುತ್ತದೆ. ಈ ಸಂಪ್ರದಾಯವನ್ನು ೧೩೦೫ ರಲ್ಲಿ ಆರಂಭಿಸಲಾಯಿತು; ಹಾಗು ಇದು ಮುಂದಿನ ೩೫೫ ವರ್ಷಗಳ ವರೆಗೆ ಮುಂದುವರೆಯಿತು. ಈಟಿಯ ಮೇಲಿರುವಂತಹ ಇತರ ಪ್ರಸಿದ್ಧ ತಲೆಬುರುಡೆಗಳೆಂದರೆ: ೧೪೫೦ ರಲ್ಲಿ ಜ್ಯಾಕ್ ಕೇಡ್, ೧೫೩೫ ರಲ್ಲಿ ಥಾಮಸ್ ಮೋರ್,ಇದೇ ವರ್ಷದಲ್ಲಿ ಬಿಷಪ್ ಜಾನ್ ಫಿಷರ್ ಹಾಗು ೧೫೪೦ ರಲ್ಲಿ ಥಾಮಸ್ ಕ್ರೋಮ್ ವೆಲ್. ಆಗ ೧೫೯೮ರಲ್ಲಿ ಲಂಡನ್ ಪೌಲ್ ಹೆಂಟ್ಜರ್ ಗೆ ಭೇಟಿ ನೀಡಿದ ಜರ್ಮನ್ ಸಂದರ್ಶಕ ಸೇತುವೆಯ ಮೇಲೆ ಸುಮಾರು ೩೦ ತಲೆಗಳ ಎಣಿಕೆ ಮಾಡಿದ್ದಾರೆ[8]:
ರಾಜ ಚಾರ್ಲ್ಸ್II, ಇದನ್ನು ಪುನಃ ವಶಪಡಿಸಿಕೊಂಡು ಅಸ್ತಿತ್ವಕ್ಕೆ ಬಂದ ನಂತರ
“ | On the south is a bridge of stone eight hundred feet in length, of wonderful work; it is supported upon twenty piers of square stone, sixty feet high and thirty broad, joined by arches of about twenty feet diameter. The whole is covered on each side with houses so disposed as to have the appearance of a continued street, not at all of a bridge.
Upon this is built a tower, on whose top the heads of such as have been executed for high treason are placed on iron spikes: we counted above thirty.. |
” |
ಈ ಸಂಪ್ರದಾಯವು ಅಂತಿಮವಾಗಿ೧೬೬೦ ರಲ್ಲಿ ಕೊನೆಗೊಂಡಿತು.[ಸೂಕ್ತ ಉಲ್ಲೇಖನ ಬೇಕು]
ಲಂಡನ್ ಸೇತುವೆಯ ಮೇಲಿದ್ದ ಕಟ್ಟಡಗಳು, ಪ್ರಮುಖ ಬೆಂಕಿಯ ಅನಾಹುತವನ್ನು ಉಂಟುಮಾಡಿದವಲ್ಲದೇ, ಅದರ ಕಮಾನುಗಳ ಮೇಲೆ ಭಾರ ಹೆಚ್ಚಾಗಲು ಕಾರಣವಾದವು. ಈ ಎರಡು ಕಾರಣಗಳು ಸೇತುವೆಯ ಮೇಲಿನ ಹಲವು ವಿನಾಶಗಳಿಗೆ ಕಾರಣವಾದವು. ನಂತರ ೧೨೧೨ ರಲ್ಲಿ ಬಹುಶಃ ಲಂಡನ್ ನ ಹಿಂದಿನ ಬೆಂಕಿ ಅವಘಡಗಳಲ್ಲೇ ಅತ್ಯಂತ ದೊಡ್ಡದೆನ್ನಲಾದ ಅನಾಹುತವು ಸೇತುವೆಯ ಎರಡು ತುದಿಗಳಲ್ಲಿ ಸಂಭವಿಸಿತು, ಅದಲ್ಲದೇ ಅನೇಕರನ್ನು ಬಲಿತೆಗೆದುಕೊಂಡಿತು; ಹಾಗು ಈ ಸಂದರ್ಭದಲ್ಲಿ ೩ ಸಾವಿರದಷ್ಟು ಜನರು ಮೃತಪಟ್ಟರೆಂದು ಹೇಳಲಾಗಿದೆ. ಹೀಗೆ ೧೬೩೩ ರಲ್ಲಿ ಮತ್ತೊಂದು ದೊಡ್ಡ ಬೆಂಕಿ ಅನಾಹುತ ಸಂಭವಿಸಿ, ಇದು ಉತ್ತರದಿಕ್ಕಿನ ಮೂರನೇ ಒಂದು ಭಾಗದಷ್ಟು ಸೇತುವೆಯನ್ನು ನಾಶಮಾಡಿತು. ಆದರೆ, ೧೬೬೬ ರಲ್ಲಿ ಸೇತುವೆ ಗೇಟ್ ಫೈರ್ ಆಫ್ ಲಂಡನ್ ನಿಂದ ಹಾನಿಗೊಳಗಾಗುವುದನ್ನು ತಡೆಯಿತು. ಆಗ ೧೭೨೨ ರ ಹೊತ್ತಿಗೆ ಆದ ದಟ್ಟಣೆಯು ಎಷ್ಟು ದೊಡ್ಡ ತೊಂದರೆಯಾಯಿತೆಂದರೆ, ಲಾರ್ಡ್ ಮೇಯರ್ " ಸೌತ್ ವಾರ್ಕ್ ನಿಂದ ನಗರಕ್ಕೆ ಪ್ರವೇಶಿಸುವಂತಹ ಎಲ್ಲಾ ಬಂಡಿಗಳು, ಅಧಿಕೃತ ವಾಹನಗಳು ಮತ್ತು ಇತರ ಚಕ್ಕಡಿಗಳು ಸೇತುವೆಯ ಪಶ್ಚಿಮದ ಕಡೆ ಸಂಚರಿಸಬೇಕು: ಹಾಗು ನಗರದಿಂದ ಹೊರಗೆ ಹೋಗುವಂತಹ ಬಂಡಿಗಳು ಮತ್ತು ಅಧಿಕೃತ ವಾಹನಗಳು ಸೇತುವೆಯ ಪೂರ್ವ ಬದಿಯಲ್ಲಿ ಸಾಗಬೇಕೆಂದು" ತೀರ್ಪು ನೀಡಿದರು. ಬ್ರಿಟನ್ ನಲ್ಲಿ ಎಡ ಬದಿಗೆ ವಾಹನ ಓಡಿಸುವ ಸಾರಿಗೆ ಸಂಚಾರದ ಪದ್ಧತಿಗೆ, ಇದು ಕೂಡ ಮೂಲವಿರಬಹುದೆಂದು ಇದನ್ನು ಸಲಹೆ ಮಾಡಲಾಗುತ್ತದೆ.[9]
ಅಂತಿಮವಾಗಿ ೧೭೫೬ ರ ಜೂನ್ ನಲ್ಲಿ ಹೊರಡಿಸಲಾದ ಪಾರ್ಲಿಮೆಂಟ್ ನ ಕಾಯಿದೆಯಡಿ, ಲಂಡನ್ ಸೇತುವೆಯ ಮೇಲಿದ್ದ ಎಲ್ಲಾ ಮನೆ ಮತ್ತು ಮಳಿಗೆಗಳನ್ನು ಉರುಳಿಸಲು ಅನುಮತಿ ಪಡೆಯಲಾಯಿತು. ಈ ನಡುವೆ ೧೭೫೮–೬೨ ರಲ್ಲಿ ಎರಡು ಮಧ್ಯ ಕಮಾನುಗಳ ಆಚೀಚೆ ಬದಿಯ ಸಾಲು ಮನೆಗಳನ್ನು ತೆಗೆದು ಹಾಕಲಾಯಿತು. ಅಲ್ಲದೇ ನದಿಯ ಮೇಲೆ ನೌಕಾಯಾನವನ್ನು ಅಭಿವೃದ್ಧಿಪಡಿಸಲು ಅ ಸ್ಥಳದಲ್ಲಿ ವಿಸ್ತಾರ ವ್ಯಾಪ್ತಿಯ ಅಗಲವಾದ ಏಕ ಕಮಾನನ್ನು ನಿರ್ಮಿಸಲಾಯಿತು.
ಆಗ ೧೮ನೇ ಶತಮಾನದ ಅಂತ್ಯದಲ್ಲಿ ಹಳೆಯ ಲಂಡನ್ ಸೇತುವೆ— ಅಲ್ಲಿಗೆ ೬೦೦ ವರ್ಷಗಳಾಗಿದ್ದ ಈ ಹಳೆಯ— ಸೇತುವೆಯನ್ನು ಮರುನಿರ್ಮಿಸಬೇಕೆಂಬುದರ ಅಗತ್ಯ ಕಾಣಿಸಿತು. ಇದು ಅತ್ಯಂತ ಸಂಕುಚಿತವಾಗಿತ್ತು; ಮತ್ತು ಶಿಥಿಲಗೊಂಡಿತ್ತು. ಅಲ್ಲದೇ ನದಿಯಲ್ಲಿನ ಜಲ ಸಂಚಾರ-ಸಾರಿಗೆಗೆ ಅಡ್ಡಿಪಡಿಸಿತ್ತು. ಹಳೆಯ ಸೇತುವೆಯ ಬದಲಿಗೆ ಹೊಸ ಸೇತುವೆಯನ್ನು ನಿರ್ಮಿಸಲು ವಿನ್ಯಾಸಕ್ಕಾಗಿ ೧೭೯೯ ರಲ್ಲಿ ಸ್ಪರ್ಧೆಯೊಂದನ್ನು ಏರ್ಪಡಿಸಲಾಯಿತು. ಇದು ಥಾಮಸ್ ಟೆಲ್ ಫೋರ್ಡ್ ಎಂಬ ಇಂಜಿನಿಯರೊಬ್ಬರನ್ನು ಕಬ್ಬಿಣದ ಒಂದು ಕಮಾನಿನೊಂದಿಗೆ ೬೦೦ ಅಡಿ (೧೮೦ ಮೀಟರ್) ಗಳಷ್ಟು ವ್ಯಾಪ್ತಿಯ, ಸೇತುವೆಯ ವಿನ್ಯಾಸವನ್ನು ಪ್ರಸ್ತಾಪಿಸಲು ಪ್ರೋತ್ಸಾಹಿಸಿತು. ಅದೇನೇ ಆದರೂ ಈ ವಿನ್ಯಾಸವನ್ನು ಎಂದಿಗೂ ಬಳಸಲಿಲ್ಲ, ಏಕೆಂದರೆ ಅದರ ಕಾರ್ಯಸಾಧ್ಯತೆ ಬಗೆಗಿನ ಅನಿಶ್ಚಿತತೆ ಹಾಗು ಅದರ ನಿರ್ಮಾಣಕ್ಕೆ ಅಗತ್ಯವಿದ್ದ ಭೂಮಿಯ ಪ್ರಮಾಣದಿಂದಾಗಿ ಈ ವಿನ್ಯಾಸವನ್ನು ಕೈಬಿಡಲಾಗಿತ್ತು. ಅಂತಿಮವಾಗಿ ಸೇತುವೆಯನ್ನು ಐದು ಕಲ್ಲಿನ ಕಮಾನುಗಳ ವಿನ್ಯಾಸದೊಂದಿಗೆ ಬದಲಿಸಲಾಯಿತು. ಜಾನ್ ರೆನ್ನಿ ಎಂಬ ಇಂಜಿನಿಯರ್ ಇದನ್ನು ವಿನ್ಯಾಸಗೊಳಿಸಿದ್ದರು. ಹೊಸ ಸೇತುವೆಯನ್ನು ಮೂಲ ಸ್ಥಳದ 100 feet (30 m) ಪಶ್ಚಿಮಕ್ಕೆ(ನದಿಯ ಹರಿವಿಗೆ ಎದುರಾಗಿ) ನಿರ್ಮಿಸಲಾಯಿತು. ಇದನ್ನು ರೆನ್ನಿಯವರ ಪುತ್ರ (ಇದೇ ಹೆಸರಿನವರು ಜೂ.) ನಿರ್ಮಿಸಿದರು. ಸೇತುವೆಯ ನಿರ್ಮಾಣದ ಕೆಲಸವು ೧೮೨೪ ರಲ್ಲಿ ಪ್ರಾರಂಭವಾಯಿತು, ಹಾಗು ಅಸ್ತಿಭಾರಶಿಲೆಯನ್ನು ೧೮೨೫ ರ ಜೂನ್ ೧೫ ರಂದು ದಕ್ಷಿಣದ ಕಾಫರ್ ಕಟ್ಟೆಯಲ್ಲಿ ಇಡಲಾಯಿತು. ಹೊಸ ಸೇತುವೆಯನ್ನು ನಿರ್ಮಿಸುವ ವರೆಗೂ ಹಳೆಯ ಸೇತುವೆಯನ್ನು ಬಳಸಲಾಗುತ್ತಿತ್ತು. ಅಲ್ಲದೇ ೧೮೩೧ ರಲ್ಲಿ ಹೊಸ ಸೇತುವೆಯನ್ನು ತೆರೆದ ನಂತರ ಇದನ್ನು ತೆಗೆದು ಹಾಕಲಾಯಿತು. ಈ ಯೋಜನೆಯು ಹೊಸ ರೀತಿಯ ರಸ್ತೆಗಳ ನಿರ್ಮಾಣವನ್ನು ಅನಿವಾರ್ಯವಾಗಿಸಿತು. ಇಂತಹ ರಸ್ತೆಗಳನ್ನು ನಿರ್ಮಿಸಲು ಸೇತುವೆಯ ನಿರ್ಮಾಣಕ್ಕೆ ತಗುಲಿದ ವೆಚ್ಚಕ್ಕಿಂತ ಮೂರು ಪಟ್ಟು ಹೆಚ್ಚು ವೆಚ್ಚ ತಗುಲಿತು. ಈ ಹೊಸ ಸೇತುವೆಯನ್ನು ನಿರ್ಮಿಸಲು ಒಟ್ಟು £೨.೫ ಮಿಲಿಯನ್ ನಷ್ಟು ವೆಚ್ಚವಾಗಿದ್ದು (೨೦೨೪ ರ ಹೊತ್ತಿಗೆ £NaN ಮಿಲಿಯನ್ ಆಯಿತು),}} ಮಿಲಿಯನ್ ಆಯಿತು), ಮಿಲಿಯನ್ ಆಯಿತು),[10] ಈ ವೆಚ್ಚವನ್ನು ಲಂಡನ್ ನಗರಪಾಲಿಕೆ ಮತ್ತು ಸರ್ಕಾರ ಭರಿಸಿದವು. ಸುರ್ರೆಯ ಮೆರಸ್ಟಮ್ ನ ತೀರದವರು ಮತ್ತು ಜೊಲಿಫ್ಫೆ ಇದರ ಗುತ್ತಿಗೆದಾರರಾಗಿದ್ದರು. ಹಳೆಯ ಸೇತುವೆಯ ಅವಶೇಷವನ್ನು ಮೆರಸ್ಟಮ್ ನ ಸೆಂಟ್ ಕ್ಯಾಥರಿನ್ ಚರ್ಚ್ ನ ಒಳಗಿರುವ ಗೋಪುರ ಕಮಾನಿಗೆ ಜೋಡಿಸಲಾಗಿದೆ.
ರೆನ್ನಿಯ ಸೇತುವೆಯು 928 feet (283 m) ನಷ್ಟು ಉದ್ದ ಮತ್ತು 49 feet (15 m) ರಷ್ಟು ಅಗಲವನ್ನು ಹೊಂದಿದೆ. ಇದರ ನಿರ್ಮಾಣದಲ್ಲಿ ಹೇಟರ್ ಗ್ರಾನೈಟ್ ಅನ್ನು ಬಳಸಲಾಗಿದ್ದು, ಇದನ್ನು ವಿಶೇಷವಾದ ಹೇಟರ್ ಪ್ರದೇಶದಲ್ಲಿರುವ ಹೇಟರ್ ಗ್ರಾನೈಟ್ ಟ್ರ್ಯಾಮ್ ವೇ ಮೂಲಕ ಸಾಗಿಸಲಾಗಿತ್ತು. ಅಧಿಕೃತವಾಗಿ ಈ ಸೇತುವೆಯನ್ನು ೧೮೩೧ ರ ಅಗಸ್ಟ್ ೧ ರಂದು ಉದ್ಘಾಟಿಸಲಾಯಿತು; ರಾಜ ವಿಲಿಯಂIV ಮತ್ತು ರಾಣಿ ಅಡೆಲೈಡ್ ಸೇತುವೆಯ ಮೇಲೆ ನಿರ್ಮಿಸಲಾದ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಔತಣ ಕೂಟದಲ್ಲಿ ಉಪಸ್ಥಿತರಿದ್ದರು. ಇತ್ತೀಚೆಗಷ್ಟೇ ನಿರ್ಮಿಸಲಾದ HMS ಬೀಗಲ್ , ಇದರ ಕೆಳಗೆ ಸಂಚರಿಸಿದ ಮೊದಲ ಹಡಗಾಗಿದೆ.
ಆಗ ೧೮೯೬ ರಲ್ಲಿ ಸೇತುವೆಯನ್ನು ಲಂಡನ್ ನಲ್ಲೇ ಅತ್ಯಂತ ಹೆಚ್ಚು ಜನನಿಬಿಡ ಸ್ಥಳವೆಂದು ಅಂದಾಜು ಮಾಡಲಾಗಿದೆ. ಈ ಸೇತುವೆಯನ್ನು ಸುಮಾರು ೮,೦೦೦ ಜನರು ನಡೆದುಕೊಂಡು ದಾಟುತ್ತಾರೆ. ಅಲ್ಲದೇ ಪ್ರತಿ ಗಂಟೆಗೆ ಸುಮಾರು ೯೦೦ ಜನರು ಇದನ್ನು ವಾಹನಗಳ ಮುಖಾಂತರ ದಾಟುತ್ತಾರೆ.[1] ಲಂಡನ್ ಸೇತುವೆಯನ್ನು ೧೯೦೨–೦೪ ರಲ್ಲಿ ೫೨ ರಿಂದ ೬೫ ಅಡಿ(೧೬ರಿಂದ ೨೦ ಮೀಟರ್) ಗಳಷ್ಟು ಅಗಲ ಹೆಚ್ಚಿಸಲಾಯಿತು. ಲಂಡನ್ ನ ದೀರ್ಘಕಾಲದ ನಿರಂತರ ಸಾರಿಗೆ ದಟ್ಟಣೆಯನ್ನು ಹೋಗಲಾಡಿಸುವ ಪ್ರಯತ್ನದಲ್ಲಿ ಇದರ ಅಗಲವನ್ನು ಹೀಗೆ ಹೆಚ್ಚಿಸಲಾಯಿತು. ಡಜನ್ ಗಳಷ್ಟು ಗ್ರಾನೈಟ್ "ಕಂಬಗಳನ್ನು" ಹೊರತೆಗೆಯಲಾಯಿತು. ಅಲ್ಲದೇ ಸೇತುವೆಯನ್ನು ಅಗಲ ಮಾಡಲು ಅವುಗಳನ್ನು ಸಾಲಾಗಿ ನಿಲ್ಲಿಸಲಾಯಿತು. ಆದರೆ ಇವು ಡಾರ್ಟ್ ಮೊರ್ ಕೌಂಟಿಯ ಪ್ರಿನ್ಸ್ ಟೌನ್ ನ ದಕ್ಷಿಣದಲ್ಲಿ ಕೆಲವು ಮೈಲಿ ದೂರದಲ್ಲಿರುವ, ಸ್ವೆಲ್ಟರ್ ಕ್ವಾರಿಯ ಬಳಿಯಿರುವ ಬಳಸಲಾಗದ ರೈಲ್ವೆ ಹಳಿಯ ಮೇಲೆ ಇನ್ನೂ ಬಿದ್ದಿವೆ. ಕೊನೆಯಲ್ಲಿ ಅಗಲಗೊಳಿಸುವ ಕೆಲಸವು, ಸೇತುವೆಯ ಆಧಾರಗಳಿಗೆ ಅಧಿಕವಾದಂತೆ ಕಂಡು ಬಂದಿತು; ಪ್ರತಿ ಎಂಟು ವರ್ಷಗಳಿಗೊಮ್ಮೆ ಸೇತುವೆಯು ಒಂದು ಇಂಚಿನಷ್ಟು (೨.೫೪ ಸೆಂಟಿ ಮೀಟರ್) ಭಾಗವು ಮುಳುಗುತ್ತದೆ ಎಂಬುದನ್ನು ಅನಂತರ ಕಂಡುಹಿಡಿಯಲಾಯಿತು. ಇದರಿಂದಾಗಿ ೧೯೨೪ರ ಹೊತ್ತಿಗೆ ಸೇತುವೆಯ ಪೂರ್ವ ಭಾಗವು ಪಶ್ಚಿಮ ಭಾಗಕ್ಕಿಂತ ಮೂರು ನಾಲ್ಕು ಇಂಚುಗಳಷ್ಟು (೧೦.೧೬ ಸೆಂಟಿಮೀಟರ್) ಕಡಿಮೆಯಾಗಿತ್ತು; ಈ ಸೇತುವೆಯನ್ನು ಶೀಘ್ರದಲ್ಲೇ ತೆಗೆದು ಹಾಕಿ ಬದಲಿಗೆ ಅತ್ಯಾಧುನಿಕ ಹೊಸ ಸೇತುವೆಯನ್ನು ನಿರ್ಮಿಸಬೇಕೆಂಬುದನ್ನು ಮನಗಾಣಲಾಯಿತು.
ಅನಂತರ ೧೯೬೭ ರಲ್ಲಿ ಲಂಡನ್ ನಗರದ ಕಾಮನ್ ಕೌನ್ಸಿಲ್, ಸೇತುವೆಯನ್ನು ಮಾರಾಟಕ್ಕಿಟ್ಟಿತು; ಹಾಗು ಸಂಭಾವ್ಯ ಗಿರಾಕಿಗಳಿಗಾಗಿ ಎದುರುನೋಡಲು ಪ್ರಾರಂಭಿಸಿತು. ಸಮಿತಿಯ ಸದಸ್ಯ ಐವಾನ್ ಲುಕಿನ್ ಸೇತುವೆಯನ್ನು ಮಾರುವ ಆಲೋಚನೆಯನ್ನು ಮುಂದಿಟ್ಟಿದರು. ಅಲ್ಲದೇ ಹೀಗೆಂದು ನೆನಪಿಸಿಕೊಂಡಿದ್ದಾರೆ: "ಲಂಡನ್ ಸೇತುವೆಯನ್ನು ಬದಲಿಸಬೇಕಾಗಿ ಬಂದಾಗ ನಾನು ಮಾರಿ ಬಿಡಲು ಸೂಚಿಸಿದೆ. ಆಗ ಅವರೆಲ್ಲರೂ ನನಗೆ ಪೂರ್ತಿಯಾಗಿ ಬುದ್ಧಿಕೆಟ್ಟು ಹೋಗಿದೆ ಎಂದು ಭಾವಿಸಿದ್ದರು." ಹೀಗೆ ೧೯೬೮ ರ ಏಪ್ರಿಲ್ ೧೮ ರಂದು ರೆನ್ನಿಯ ಸೇತುವೆಯನ್ನು ಮಿಸ್ ಸೋರಿಯನ್ ನ ವಾಣಿಜ್ಯೋದ್ಯಮಿ ಮ್ಯಾಕ್ ಕುಲೊಕ್ ಆಯಿಲ್ ನ ರಾಬರ್ಟ್ ಪಿ. ಮ್ಯಾಕ್ ಕುಲೊಕ್ ರವರಿಗೆ US$೨,೪೬೦,೦೦೦ ಗಳಿಗೆ ಮಾರಲಾಯಿತು. ಮ್ಯಾಕ್ ಕೊಲಕ್ ರವರು ಅತ್ಯದ್ಭುತವಾದ ಈ ಗೋಪುರ ಸೇತುವೆಯನ್ನು ತಾವು ಕೊಂಡುಕೊಳ್ಳುತ್ತಿದ್ದಾರೆಂದು ತಪ್ಪಾಗಿ ನಂಬಿಕೊಂಡಿದ್ದಾರೆ ಎಂಬ ಹೇಳಿಕೆಯನ್ನು ಲಕಿನ್ ಸುದ್ದಿ ಪತ್ರಿಕೆಯ ಸಂದರ್ಶನದಲ್ಲಿ ತಳ್ಳಿಹಾಕಿದ್ದಾರೆ.[11] ಸೇತುವೆಯನ್ನು ಪ್ರತ್ಯೇಕಗೊಳಿಸಿದ ನಂತರ ಪ್ರತಿ ತುಂಡನ್ನು ಪುನರ್ಜೋಡಣೆಯಲ್ಲಿ ಬಳಸಲಾಯಿತು. ಸೇತುವೆಯನ್ನು ಆರಿಜೋನದ ಲೇಕ್ ಹ್ಯಾವಸು ನಗರದಲ್ಲಿ ಪುನಃ ನಿರ್ಮಿಸಲಾಯಿತು, ಹಾಗು ೧೯೭೧ ರ ಅಕ್ಟೋಬರ್ ೧೦ ರಂದು ಪುನಃ ಸಮರ್ಪಿಸಲಾಯಿತು. ರೆನ್ನಿಯ ಲಂಡನ್ ಸೇತುವೆಯ ಪುನರ್ನಿರ್ಮಾಣ, ಲೇಕ್ ಹ್ಯಾವಸುಯಿಂದ ಥಾಮ್ಸನ್ ಬೇ ಯವರೆಗೆ ಸಾಗುವ ಬ್ರಿಡ್ಜ್ ವಾಟರ್ ಚಾನಲ್ ಕಾಲುವೆಯನ್ನು ವ್ಯಾಪಿಸಿತು. ಅಲ್ಲದೇ ಟುಡರ್ ಕಾಲದ ಅಂಗಡಿ ಮಳಿಗೆಯೊಂದಿಗೆ ಇಂಗ್ಲೀಷ್ ಶೈಲಿಯಲ್ಲಿ ತೀಮ್ ಉದ್ಯಾನದ ಪ್ರಧಾನ ರೂಪವನ್ನು ಪಡೆಯಿತು. ರೆನ್ನಿಯ ಲಂಡನ್ ಸೇತುವೆಯು ಗ್ರಾಂಡ್ ಕಾನ್ಯನ್ ನ ನಂತರ ಅರಿಜೋನದಲ್ಲಿರುವ ಪ್ರವಾಸಿಗರ ಎರಡನೆಯ ಅತ್ಯಂತ ಆಕರ್ಷಣೀಯ ಸ್ಥಳವಾಯಿತು.[12]
ಲೇಕ್ ಹ್ಯಾವಸ್ ನಲ್ಲಿ ಪುನಃ ನಿರ್ಮಿಸಲಾದ ಲಂಡನ್ ಸೇತುವೆಯ ಆವೃತ್ತಿ, ಹೊದಿಕೆಯ ರೂಪದಲ್ಲಿ ಬಳಸಲಾದ ರೆನ್ನಿಯ ಲಂಡನ್ ಸೇತುವೆಯಿಂದ ತೆಗೆದುಕೊಳ್ಳಲಾದ ಕಲ್ಲುಗಳೊಂದಿಗಿನ ಕಾಂಕ್ರೀಟ್ ಆಧಾರ ರಚನೆಯನ್ನು ಒಳಗೊಂಡಿದೆ. ಇದಕ್ಕೆ ಸುಮಾರು ೧೫೦ ರಿಂದ ೨೦೦ ಮಿಲಿಮೀಟರ್(೬ ರಿಂದ ೮ ಇಂಚು)ಗಳಷ್ಟು ದಪ್ಪವಿರುವ ಹೊದಿಕೆಯ ಕಲ್ಲುಗಳನ್ನು ಬಳಸಲಾಯಿತು. ಉಳಿದ ಕಲ್ಲುಗಳನ್ನು ಡೆವೊನ್ ಕೌಂಟಿಯಾ ಪ್ರಿನ್ಸ್ ಟೌನ್ ನಲ್ಲಿರುವ ಮೆರಿವ್ಯಾಲೆ ಕ್ವಾರಿಯಲ್ಲೇ ಬಿಡಲಾಯಿತು.[13] ಮೆರಿವ್ಯಾಲೆ ಕ್ವಾರಿಯನ್ನು ತೊರೆಯಲಾಯಿತು, ಮತ್ತು ೨೦೦೩ ರಲ್ಲಿ ಪ್ರವಾಹದಿಂದ ಕೊಚ್ಚಿ ಹೋದಾಗ ಉಳಿದ ಕೆಲವು ಕಲ್ಲುಗಳನ್ನು ಆನ್ ಲೈನ್ ಹರಾಜಿನಲ್ಲಿ ಮಾರಾಟ ಮಾಡಲಾಯಿತು.[14]
ಪ್ರಸ್ತುತದಲ್ಲಿರುವ ಲಂಡನ್ ಸೇತುವೆಯನ್ನು ಮೊಟ್, ಹೇ ಮತ್ತು ಆಂಡ್ರಸನ್ ರವರು ವಿನ್ಯಾಸಗೊಳಿಸಿದ್ದಾರೆ. ಅಲೆನ್ ಸಿಂಪ್ಸನ್ ಹಿರಿಯ ಇಂಜಿನಿಯರ್ [ಸೂಕ್ತ ಉಲ್ಲೇಖನ ಬೇಕು] ಆಗಿದ್ದು, ಮಿಕೆಲ್ ಲೀಮಿಂಗ್ ರವರ ನೇತೃತ್ವದ ತಂಡ ಮೇಲ್ಭಾಗದ ವಿನ್ಯಾಸ ಹಾಗು ಕೇತ್ ಪಾಂಟಿನ್ ರ ನೇತೃತ್ವದ ತಂಡ ಮೂಲ ಆಧಾರವನ್ನು ವಿನ್ಯಾಸಗೊಳಿಸಿವೆ.[ಸೂಕ್ತ ಉಲ್ಲೇಖನ ಬೇಕು] ಈ ಸೇತುವೆಯನ್ನು೧೯೬೭ ರಿಂದ ೧೯೭೨ ರ ವರೆಗೆ ಗುತ್ತಿಗೆದಾರರಾದ ಜಾನ್ ಮೌಲೆಮ್ ಅಂಡ್ ಕೋ[15] ನಿರ್ಮಿಸಿದ್ದು, ಇದನ್ನು ೧೯೭೩ ರ ಮಾರ್ಚ್ ೧೭ ರಂದು ರಾಣಿ ಎಲಿಜಬೆತ್II ಉದ್ಘಾಟಿಸಿದರು.[16] ಇದು ಗೇಣಿನ ಮುನ್ನೋತಡದಿಂದ ಬಲಪಡಿಸಲಾದ-ಕಾಂಕ್ರೀಟ್ ಅನ್ನು ಬಾಕ್ಸ್ ನ ಆಕಾರದಲ್ಲಿರುವ ಸರಕಟ್ಟುಗಳನ್ನು, ಒಟ್ಟು 928 feet (283 m) ನಷ್ಟು ಉದ್ದಳತೆ ಒಳಗೊಂಡಿದೆ. ಸೇತುವೆಯ ದೀಪಗಳನ್ನು ನೆಪೋಲಿಯನ್ ನ ಬಂಡಿ ತೋಪುಗಳಿಂದ ಮಾಡಲಾಗಿದೆ[ಸೂಕ್ತ ಉಲ್ಲೇಖನ ಬೇಕು]. ಸೇತುವೆಯನ್ನು ರಾಚನಿಕ ವಿನ್ಯಾಸ ನಿಯಮಗಳ ಮೇಲೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುವಂತೆ ಕಟ್ಟಲಾಗಿದೆ. ಅಲ್ಲದೇ ಇದನ್ನು ಥೇಮ್ಸ್ ನ ಇತರ ಸೇತುವೆಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಸಿಂಗರಿಸಲಾಗಿದೆ. ಸುಮಾರು £೪ ಮಿಲಿಯನ್ (೨೦೨೪ ನ ಹೊತ್ತಿಗೆ £NaN),}}),),[10] ನಷ್ಟು ವೆಚ್ಚವನ್ನು ಸಂಪೂರ್ಣವಾಗಿ ಸಿಟಿ ಬ್ರಿಜ್ ಟ್ರಸ್ಟ್ ಭರಿಸಿತು. ಪ್ರಸ್ತುತದ ಸೇತುವೆಯನ್ನು ಬಳಕೆಯಲ್ಲಿ ಉಳಿದ ಹಿಂದಿನ ಸೇತುವೆಗಳೊಂದಿಗೆ ರೆನ್ನಿಯ ಸೇತುವೆ ಇದ್ದಂತಹ ಸ್ಥಳದಲ್ಲಿಯೇ ಕಟ್ಟಲಾಗಿದೆ. ಅಲ್ಲದೇ ಮೊದಲ ಎರಡು ಸರಕಟ್ಟುಗಳನ್ನು ಪ್ರವಾಹಕ್ಕೆ ಎದುರಾಗಿ ಮತ್ತು ನದಿಯ ಹರಿವಿನ ದಿಕ್ಕಿಗೆ ಕಟ್ಟಲಾಗಿದೆ. ಈ ಕಾರಣದಿಂದಾಗಿ ಸಂಚಾರವನ್ನು ಈ ಎರಡು ಹೊಸ ಸರಕಟ್ಟುಗಳ ಮೇಲೆ ಮಾಡಬಹುದಾಗಿದ್ದು, ಮಧ್ಯಭಾಗದ ಅಂತಿಮ ಎರಡು ಸರಕಟ್ಟುಗಳನ್ನು ಸೇರಿಸಲು ಹಿಂದಿನ ಸೇತುವೆಯನ್ನು ಹೊಡೆದು ಹಾಕಲಾಗಿದೆ.[17]
ಇತ್ತೀಚಿಗೆ ೧೯೮೪ ರಲ್ಲಿ ಬ್ರಿಟಿಷ್ ಯುದ್ಧ ಹಡಗಾದ HMS ಜುಪಿಟರ್ ಲಂಡನ್ ಸೇತುವೆಗೆ ಡಿಕ್ಕಿಹೊಡೆಯಿತು.https://www.iwm.org.uk/visits/hms-belfast ಇದರಿಂದಾಗಿ ಹಡಗು ಮತ್ತು ಸೇತುವೆ ಎರಡಕ್ಕೂ ಗಮನಾರ್ಹ ಹಾನಿಯುಂಟಾಯಿತು. ಆನಂತರ ೨೦೦೪ ರ ಸ್ಮರಣಾ ದಿನದಂದು ಅನೇಕ ಲಂಡನ್ ಸೇತುವೆಗಳನ್ನು, ಯುದ್ಧಕಾಲದ ವಿಮಾನಗಳು ರಾತ್ರಿಯ ಹೊತ್ತು ನದಿಯಾದ್ಯಂತ ಹಾರಾಟಮಾಡುವುದರ ಭಾಗವೆಂಬಂತೆ ಕೆಂಪು ದೀಪಗಳಿಂದ ಅಲಂಕರಿಸಲಾಗಿತ್ತು. ಅನಂತರ ದೀಪಾಲಂಕಾರವನ್ನು ತೆಗೆದುಹಾಕಿದ್ದಂತೆ ಸೇತುವೆಗಳಲ್ಲಿ ಲಂಡನ್ ಸೇತುವೆ ಕೂಡ ಒಂದಾಗಿತ್ತು. ಈ ದೀಪಗಳನ್ನು ರಾತ್ರಿಯ ಹೊತ್ತಿನಲ್ಲಿ ಬೆಳಗಿಸಲಾಯಿತು. ಪ್ರಸ್ತುತದ ಲಂಡನ್ ಸೇತುವೆಯನ್ನು ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ತೋರಿಸಲಾಗುತ್ತದೆ. ಸಮಾಚಾರಗಳು ಮತ್ತು ಸಾಕ್ಷ್ಯಚಿತ್ರಗಳು ಲಂಡನ್ ಸೇತುವೆಯ ನಿಲ್ದಾಣದಿಂದ(ದಕ್ಷಿಣದಿಂದ ಉತ್ತರಕ್ಕೆ) ಲಂಡನ್ ನಗರಕ್ಕೆ ಕೆಲಸಕ್ಕಾಗಿ ಪ್ರಯಾಣ ಮಾಡುವ ಜನಸಂದಣಿಯನ್ನು ತೋರಿಸುತ್ತವೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ: ೨೦೦೨ ರ ಅಬೌಟ್ ಎ ಬಾಯ್ ಎಂಬ ಚಲನಚಿತ್ರದಲ್ಲಿ ನಟ ಹಗ್ ಗ್ರಾಂಟ್ ಮುಂಜಾವಿನ ಜನದಟ್ಟಣೆಯ ಸಮಯದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಸೇತುವೆಯನ್ನು ದಾಟುತ್ತಿರುವ ದೃಶ್ಯ. ಆಗ ೨೦೦೯ ರ ಜುಲೈ ೧೧ ರ ಶನಿವಾರದಂದು ನಡೆದ 'ವಾರ್ಷಿಕೋತ್ಸವ'ದ ಚಟುವಟಿಕೆಗಳು ಲೈವರಿ ಕಂಪನಿಗಳನ್ನು ಮತ್ತು ಗಿಲ್ಡೇಬಲ್ ಮ್ಯಾನರ್ ಅನ್ನು ಒಳಗೊಂಡಿತ್ತು. ಅಲ್ಲದೇ ಸೇತುವೆಯ ಮೇಲೆ 'ಕುರಿಗಳನ್ನು ಓಡಿಸಿಕೊಂಡು ಹೋದರು',ಈ ಸನ್ನಿವೇಶ ಕೊಲೆಚರ್ಚ್ ಸೇತುವೆಯ ೮೦೦ನೇ ವಾರ್ಷಿಕೋತ್ಸವವನ್ನು ನೆನಪಿಗೆ ತರಲು ಈ ಆಚರಣೆ ಮಾಡಲಾಯಿತು.[18] ಸೇತುವೆಯ ದಕ್ಷಿಣ ಕಮಾನಿನ ಆನಿಕೆಯ ಪಾಳಿಯ ಕೆಳಗಿರುವ ಕಮಾನು ಚಾವಣಿಯಲ್ಲಿ 'ದಿ ಲಂಡನ್ ಬ್ರಿಜ್ ಎಕ್ಸ್ ಪಿರಿಯನ್ಸ್' ಇದೆ.
ಅತ್ಯಂತ ಹತ್ತಿರವಿರುವ ಲಂಡನ್ ನ ನೆಲದಡಿಯ ನಿಲ್ದಾಣಗಳು ಹೀಗಿವೆ: ಮಾನ್ಯುಮೆಂಟ್ ಮತ್ತುಲಂಡನ್ ಬ್ರಿಜ್. ಇವುಗಳು ಅನುಕ್ರಮವಾಗಿ ಸೇತುವೆಯ ಉತ್ತರ ಮತ್ತು ದಕ್ಷಿಣದ ತುದಿಗಳಲ್ಲಿವೆ. ಲಂಡನ್ ಬ್ರಿಜ್, ರಾಷ್ಟ್ರೀಯ ರೈಲು ನಿಲ್ದಾಣವೂ ಸಮೀಪದಲ್ಲಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.