From Wikipedia, the free encyclopedia
ಒಂದು ಮೈಕ್ರೋಪ್ರೊಸೆಸರ್ , ಕಂಪ್ಯೂಟರ್ ಒಂದರ ಸೆಂಟ್ರಲ್ ಪ್ರೊಸೆಸ್ಸಿಂಗ್ ಯೂನಿಟ್ನ ಬಹುತೇಕ ಅಥವಾ ಎಲ್ಲಾ ಕಾರ್ಯಗಳನ್ನು ನಿರ್ವಹಿಸುವಂತೆ ಸಂಯೋಜಿಸಲಾಗಿರುವ ಒಂದು ಇಂಟಿಗ್ರೇಟೆಡ್ ಸರ್ಕ್ಯೂಟ್ (IC, ಅಥವಾ ಮೈಕ್ರೋ ಚಿಪ್) .[೧] ಮೊದಲ ಮೈಕ್ರೋಪ್ರೊಸೆಸರ್ಗಳು ೧೯೭೦ರ ಮೊದಲ ಅವಧಿಯಲ್ಲಿ ಉಪಯೋಗಕ್ಕೆ ಬಂದವು ಮತ್ತು ಅವುಗಳನ್ನು ಬೈನರಿ ಕೋಡೆಡ್ ಡೆಸಿಮಲ್ (BCD) ಲೆಕ್ಕಾಚಾರವನ್ನು ೪-ಬಿಟ್ ಪದಗಳ ಅಧಾರದ ಮೇಲೆ ಬಳಸಿ ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರ್ ಗಳಿಗಾಗಿ ಉಪಯೋಗಿಸುತ್ತಿದ್ದರು. ಟರ್ಮಿನಲ್ಗಳು, ಪ್ರಿಂಟರ್ಗಳು, ಹಲವು ಬಗೆಯ ಆಟೋಮೇಷನ್ಗಳಂತಹ ೪- ಮತ್ತು ೮-ಬಿಟ್ ಮೈಕ್ರೋಪ್ರೊಸೆಸರ್ಗಳ ಇತರ ಖಚಿತ ಉಪಯೋಗಗಳು ನಂತರದಲ್ಲಿ ಬಹಳ ಬೇಗನೆ ಬಂದವು. ಸುಲಭವಾಗಿ ಸಿಗಬಹುದಾದ ೧೬-ಬಿಟ್ ಅಡ್ರೆಸ್ಸಿಂಗ್ನ ೮-ಬಿಟ್ ಮೈಕ್ರೋಪ್ರೊಸೆಸರ್ಗಳು ೧೯೭೦ರ ಮಧ್ಯಭಾಗದಲ್ಲ್ಲಿಮೊದಲ ಸಾಮಾನ್ಯ ಉಪಯೋಗದ ಮೈಕ್ರೊ ಕಂಪ್ಯೂಟರ್ಗಳ ಉಗಮಕ್ಕೆ ಕಾರಣವಾದವು. ಕೆಲವೇ ಸಮಾನ ಟ್ರಾನ್ಸಿಸ್ಟರ್ಗಳಿಂದ ಹಿಡಿದು ನೂರಾರು ಟ್ರಾನ್ಸಿಸ್ಟರ್ಗಳನ್ನು ಒಳಗೊಂಡಿದ್ದ ಚಿಕ್ಕ ಮತ್ತು ಮಧ್ಯಮ ಗಾತ್ರದ IC ಗಳಿಂದ ಬಹಳ ಕಾಲದವರೆಗೆ ಕಂಪ್ಯೂಟರ್ ಪ್ರೊಸೆಸರ್ಗಳನ್ನು ನಿರ್ಮಿಸಲಾಗುತ್ತಿತ್ತು. ಸಂಪೂರ್ಣ CPU ಯನ್ನು ಕೇವಲ ಒಂದು ಚಿಪ್ನೊಳಗೆ ಒಟ್ಟುಗೂಡಿಸಿದ್ದರಿಂದಾಗಿ ಪ್ರೊಸೆಸ್ಸಿಂಗ್ನ ಸಾಮರ್ಥ್ಯದ ಖರ್ಚನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಅವುಗಳ ವಿನೀತವಾದ ಆರಂಭದಿಂದಲೂ, ಮೈಕ್ರೊಪ್ರೊಸೆಸರ್ನ ಸಾಮರ್ಥ್ಯದ ವೃದ್ಧಿಯಿಂದಾಗಿ ಒಂದು ಅಥವಾ ಹೆಚ್ಚು ಮೈಕ್ರೊಪ್ರೊಸೆಸರ್ಗಳು ಅತೀ ಚಿಕ್ಕ ಎಂಬೆಡೆಡ್ ಸಿಸ್ಟಂಗಳ ಮತ್ತು ಹ್ಯಾಂಡ್ಹೆಲ್ಡ್ ಡಿವೈಸ್ಗಳಿಂದ ಹಿಡಿದು ಬಹುದೊಡ್ಡ ಮೆಯಿನ್ ಫ್ರೇಮ್ಗಳ ಮತ್ತು ಸೂಪರ್ ಕಂಪ್ಯೂಟರ್ಗಳಲ್ಲೂ ಕೂಡ ಪ್ರೊಸೆಸಿಂಗ್ ಅಂಶದ ಭಾಗವಾಗಿದ್ದರಿಂದ ಇತರ ಮಾದರಿಯ ಕಂಪ್ಯೂಟರ್ಗಳನ್ನು ಸಂಪೂರ್ಣವಾಗಿ ತ್ಯಜಿಸುವಂತಾಯಿತು (ಕಂಪ್ಯೂಟಿಂಗ್ ಹಾರ್ಡ್ವೇರ್ ಇತಿಹಾಸ ನೋಡಿ).
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (December 2009) |
೧೯೭೦ರ ಮೊದಲಿಗೆ ಮೈಕ್ರೋಪ್ರೊಸೆಸರ್ನ ಸಾಮರ್ಥ್ಯ ವೃದ್ಧಿಯು ಸಾಮಾನ್ಯವಾಗಿ ಮೂರ್ನ ಕಾನೂನು ಅನುಸರಿಸುತ್ತಿತ್ತು, ಮತ್ತು ಅದು ಒಂದು ಇಂಟಿಗ್ರೇಟೆಡ್ ಸರ್ಕ್ಯೂಟ್ನ ಸಂಕೀರ್ಣತೆ, ಅದರ ಮಸ್ತುಗಳ ಕನಿಷ್ಟ ವೆಚ್ಚಕ್ಕೆ ಸಂಬಂಧಿಸಿದಂತೆ, ಪ್ರತಿ ಎರಡು ವರ್ಷಗಳಿಗೊಮ್ಮೆ ದುಪ್ಪಟ್ಟಾಗುತ್ತದೆ ಎಂದು ಸೂಚಿಸಿತ್ತು.[೪]
೧೯೯೦ರ ಅಂತ್ಯದಲ್ಲಿ ಮತ್ತು ಅಧಿಕ ಕಾರ್ಯನಿರ್ವಹಿಸುವ ಮೈಕ್ರೊಪ್ರೊಸೆಸರ್ ವಿಭಾಗದಲ್ಲಿನ ಸ್ವಿಚಿಂಗ್ ನಷ್ಟಗಳು, ನಿಯಮಿತ ವಿದ್ಯುತ್ ಸೋರಿಕೆ ಮತ್ತು ಇತರ ಅಂಶಗಳಿಂದಾಗಿ ಉತ್ಪಾದನೆಯಾಗುವ ಉಷ್ಣ (TDP) ಒಂದು ಬಹುದೊಡ್ಡ ಅಭಿವೃದ್ಧಿಯ ತೊಡಕಾಗಿ ಉದ್ಭವಿಸಿತು.[೫]
ಮೂರು ಯೋಜನೆಗಳು ಒಂದೇ ಸಮಯಕ್ಕೆ ಮೈಕ್ರೋಪ್ರೊಸೆಸರ್ಗಳನ್ನು ಬಿಡುಗಡೆ ಮಾಡಿದವು, ಅವೆಂದರೆ Intel's 4004, the Texas Instruments (TI) TMS ೧೦೦೦, ಮತ್ತು Garrett AiResearch's Central Air Data Computer (CADC).
ಇಂಟೆಲ್ ೪೦೦೪ ನ್ನು ಸಾಮಾನ್ಯವಾಗಿ ಮೊದಲ ಮೈಕ್ರೊಪ್ರೊಸೆಸರ್ ಎಂದು ಗುರುತಿಸಲಾಗಿದ್ದು [೬][೭], ಅದರ ಬೆಲೆ ಸಾವಿರಾರು ಡಾಲರ್ಗಳಲ್ಲಿದೆ.[೮] ೪೦೦೪ ಗೆ ಸಂಬಂಧಪಟ್ಟ ಜಾಹಿರಾತು ನವೆಂಬರ್ ೧೯೭೧ರಲ್ಲಿ ಪ್ರಥಮ ಬಾರಿಗೆ ಎಲೆಕ್ಟ್ರಾನಿಕ್ ನ್ಯೂಸ್ನಲ್ಲಿ ಪ್ರಕಟವಾಯಿತು.[೯] ಜಪಾನಿನ ಕ್ಯಾಲ್ಕುಲೇಟರ್ ತಯಾರಕ ಬ್ಯುಸಿಕಾಂ ಕಂಪನಿ ಅಧಿಕ ಕಾರ್ಯಕ್ಷಮತೆಯ ಡೆಸ್ಕ್ಟಾಪ್ ಕ್ಯಾಲ್ಕುಲೇಟರ್ಗಾಗಿ ಒಂದು ಚಿಪ್ ಸೆಟ್ಟನ್ನು ತಯಾರಿಸುವಂತೆ ಇಂಟೆಲ್ಅನ್ನು ಕೇಳಿಕೊಂಡಾಗ ಈ ೪೦೦೪ ನ್ನು ತಯಾರಿಸಿದ ಕಾರ್ಯಯೋಜನೆ ೧೯೬೯ರಲ್ಲಿ ಉದಯಿಸಿತು. ಬ್ಯುಸಿಕಾಂ ಮೂಲ ವಿನ್ಯಾಸವು ಏಳು ವಿವಿಧ ಚಿಪ್ ಸೆಟ್ಗಳನ್ನು ಹೊಂದಿರುವ ಒಂದು ಕಾರ್ಯನಿರ್ವಾಹಕ ಚಿಪ್ ಸೆಟ್ ಆಗಿದ್ದು, ಅವುಗಳಲ್ಲಿ ಮೂರನ್ನು ವಿಶೇಷ ಉದ್ಧೇಶದ ಅದರ ಪ್ರೋಗ್ರಾಮ್ಗಳನ್ನು ROM ನಲ್ಲಿ ಶೇಖರಿಸಿಡಬಹುದಾದ CPU ಯನ್ನು ತಯಾರಿಸಲು ಬಳಸಿಕೊಳ್ಳಲಾಯಿತು ಮತ್ತು ಅದರ ಡಾಟಾವನ್ನು ಶಿಫ್ಟ್ ರಿಜಿಸ್ಟರ್ ರೀಡ್-ರೈಟ್ ಮೆಮೊರಿಯಲ್ಲಿ ದಾಖಲಿಸಿಡಲಾಯಿತು. ಈ ಯೋಜನೆಯನ್ನು ಮೌಲ್ಯಮಾಪನ ಮಾಡಲು ನಿಯುಕ್ತನಾಗಿದ್ದ ಇಂಟೆಲ್ ಇಂಜಿನಿಯರ್ ಟೆಡ್ ಹಾಫ್ ಶಿಫ್ಟ್ ರೆಜಿಸ್ಟರ್ ಮೆಮೊರಿಗೆ ಬದಲಾಗಿ ಡಾಟಾಗಳಿಗೆ ಚಲನಾತ್ಮಕ RAM ಶೇಖರಣಾ ವಿಧಾನ ಮತ್ತು ಸಾಂಪ್ರದಾಯಿಕವಾದ ಸಾಮಾನ್ಯ ಉದ್ಧೇಶದ CPU ವಿನ್ಯಾಸವನ್ನು ಬಳಸುವ ಮೂಲಕ ಬ್ಯುಸಿಕಾಂ ವಿನ್ಯಾಸವನ್ನು ಸರಳೀಕರಿಸಬಹುದೆಂದು ನಂಬಿದ್ದ. ಹಾಫ್ ನಾಲ್ಕು-ಚಿಪ್ ವಿನ್ಯಾಸದ ಪ್ರಸ್ತಾವಗಳನ್ನು ಮಂಡಿಸಿದ: ಒಂದು ಕಾರ್ಯಕ್ರಮಗಳನ್ನು ಶೇಖರಿಸುವ ROM ಚಿಪ್, ಮತ್ತೊಂದು ಡಾಟಾ ಶೇಖರಿಸಲು ಚಲನಾತ್ಮಕ RAM ಚಿಪ್, ಇನ್ನೊಂದು ಸರಳವಾದ I/O ತಂತ್ರಾಂಶ ಮತ್ತು ಆತ ಚಿಪ್ ವಿನ್ಯಾಸಗಾರನಲ್ಲದಿದ್ದರೂ, ಅವುಗಳನ್ನು ಕೇವಲ ಒಂದೇ ಚಿಪ್ನಲ್ಲಿ ಒಂದುಗೂಡಿಸಬಹುದೆಂದು ಅರ್ಥಮಾಡಿಕೊಂಡಿದ್ದ. ಇದೇ ಚಿಪ್ ನಂತರದ ದಿನಗಳಲ್ಲಿ ೪೦೦೪ ಮೈಕ್ರೊಪ್ರೊಸೆಸರ್ ಎಂದು ಕರೆಯಲ್ಪಟ್ಟಿತು. ೪೦೦೪ ರ ವಿನ್ಯಾಸ ಮತ್ತು ವಿಶೇಷತೆಗಳು ಇಂಟೆಲ್ನ ಹಾಫ್ ಮತ್ತು ಆತನ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಸಾಫ್ಟ್ವೇರ್ ಇಂಜಿನಿಯರ್ ಸ್ಟಾನ್ಲಿ ಮಜೋರ್ ಮತ್ತು ಬ್ಯುಸಿಕಾಂ ಇಂಜಿನಿಯರ್ ಮಸಟೊಶಿ ಶಿಮಾ ಅವರೊಂದಿಗೆ ನಡೆದ ಮಾತುಕತೆಯ ಫಲ. ೧೯೭೦ ರಲ್ಲಿ ಇಂಟೆಲ್ ನಾಲ್ಕು ಚಿಪ್ ಸೆಟ್ನ ವಿನ್ಯಾಸದ ಮುಂದಾಳತ್ವ ವಹಿಸಲು ಫೆಡರಿಕ್ ಫಾಗಿನ್ ಎಂಬುವನನ್ನು ನೇಮಕ ಮಾಡಿಕೊಳ್ಳಲಾಯಿತು. ೧೯೬೮ರಲ್ಲಿ ಫೇರ್ಚೈಲ್ಡ್ ಸೆಮಿಕಂಡಕ್ಟರ್ನಲ್ಲಿ ಮೊಟ್ಟಮೊದಲು ಸಿಲಿಕಾನ್ ಗೇಟ್ ಟೆಕ್ನಾಲಜಿ (SGT) ಯನ್ನು ಅಭಿವೃದ್ಧಿಪಡಿಸಿದ (SGTಯನ್ನು ಉಪಯೋಗಿಸಿಕೊಂಡು ಪ್ರಪಂಚದ ಮೊದಲ ವಾಣಿಜ್ಯೀಕೃತ ಇಂಟಿಗ್ರೇಟೆಡ್ ಸರ್ಕ್ಯೂಟ್- ಫೇರ್ಚೈಲ್ಡ್ ೩೭೦೮ ಕೂಡ ವಿನ್ಯಾಸಗೊಳಿಸಿದ), ಫಾಗಿನ್ ಈ ಯೋಜನೆಯ ಮುಂದಾಳತ್ವ ವಹಿಸಲು ಉತ್ತಮ ಹಿನ್ನೆಲೆಯನ್ನು ಹೊಂದಿದ್ದ, ಏಕೆಂದರೆ ಇದು ಒಂದೇ ಚಿಪ್ನಲ್ಲಿ ಒಂದು CPU ಯನ್ನು, ಸರಿಯಾದ ವೇಗ, ಶಕ್ತಿಯ ಚದುರಿಸುವಿಕೆ ಮತ್ತು ವೆಚ್ಚವನ್ನು ಗಮನದಲ್ಲಿಟ್ಟುಕೊಂಡು, ವಿನ್ಯಾಸಗೊಳಿಸಲು ಸಾಧ್ಯವಾಯಿತು. ಫಾಗಿನ್ ಸಿಲಿಕಾನ್ ಗೇಟ್ ಆಧಾರದ ಮೇಲೆ ರಾಂಡಮ್ ಲಾಜಿಕ್ ಡ್ಗಿಸೈನ್ಗಾಗಿ ಒಂದು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದು, ಅದು ೪೦೦೪ ನ್ನು ಸಾಕಾರಗೊಳಿಸಲು ಕಾರಣವಾಯ್ತು. ೪೦೦೪ ರ ಉತ್ಪಾದನಾ ಘಟಕಗಳನ್ನು ಮೊದಲು ೧೯೭೧ರಲ್ಲಿ ಬ್ಯುಸಿಕಾಂಗೆ ಒದಗಿಸಲಾಯಿತು ಮತ್ತು ನಂತರ ೧೯೭೧ರ ಕೊನೆಯ ಭಾಗದಲ್ಲಿ ಇತರ ಗ್ರಾಹಕರಿಗೆ ಕಳುಹಿಸಲಾಯಿತು.
TI ಇಂಜಿನಿಯರ್ಗಳಾದ ಗ್ಯಾರಿ ಬೂನ್ ಮತ್ತು ಮಿಚಿಲ್ ಕೊಚ್ರಾನ್ ಅವರು ೧೯೭೧ರಲ್ಲಿ ಮೊದಲ ಮೈಕ್ರೊ ಕಂಟ್ರೋಲರ್ (ಮೈಕ್ರೊ ಕಂಪ್ಯೂಟರ್ ಎಂದೂ ಕರಯಲಾಗುತ್ತದೆ) ಸೃಷ್ಟಿಸುವಲ್ಲಿ ಸಫಲರಾದರು ಎಂದು ಸ್ಮಿತ್ಸಾನಿಯನ್ ಸಂಸ್ಥೆ ಹೇಳುತ್ತದೆ. ಅವರ ಕೆಲಸದ ಫಲವೆಂದರೆ TMS ೧೦೦೦ ಆಗಿದ್ದು, ಅದು ೧೯೭೪ರಲ್ಲಿ ವಾಣಿಜ್ಯ ಉಪಯೋಗಕ್ಕೆ ಬಳಕೆಯಾಯ್ತು. TI ೪-ಬಿಟ್ TMS ೧೦೦೦ನ್ನು ಅಭಿವೃದ್ಧಿಪಡಿಸಿತು, ಮತ್ತು ಸೆಪ್ಟಂಬರ್ ೧೭, ೧೯೭೧ರಲ್ಲಿ TMS೧೮೦೨NC ಎನ್ನುವ ಮಾದರಿಯನ್ನು ಪರಿಚಯಿಸುವ ಮೂಲಕ, ಅಂದರೆ ಒಂದು ಚಿಪ್ನ ಮೇಲೆ ಕ್ಯಾಲ್ಕುಲೇಟರನ್ನು ಕಾರ್ಯಗತಗೊಳಿಸುವುದರೊಂದಿಗೆ, ಪ್ರಿ-ಪ್ರೋಗ್ರಾಮ್ಡ್ ಎಂಬೆಡೆಡ್ ಅಪ್ಲಿಕೇಷನ್ಗಳಿಗೆ ಒತ್ತು ನೀಡಲಾಯಿತು. ೧೯೭೦-೭೧ ರಲ್ಲಿ ೪೦೦೪ ನ್ನು ವಿನ್ಯಾಸಗೊಳಿಸಿದ್ದ ಫೆಡರಿಕೊ ಫಾಗಿನ್ ಮತ್ತು ೧೯೭೯ ರಲ್ಲಿ ಅದರ ವೈಜ್ಞಾನಿಕ ವಿನ್ಯಾಸವನ್ನು ಮಾಡಿದ ಟೆಡ್ ಹಾಫ್ ಅಭಿವೃದ್ಧಿಪಡಿಸಿದ ಇಂಟೆಲ್ ಚಿಪ್ ೪-ಬಿಟ್ 4004 ನ್ನು ನವೆಂಬರ್ ೧೫, ೧೯೭೧ ರಲ್ಲಿ ಬಿಡುಗಡೆ ಮಾಡಲಾಯಿತು. MOS ವಿಭಾಗದ ಮುಖ್ಯಸ್ಥರಾಗಿದ್ದವರು ಲೆಸ್ಲಿ ಎಲ್. ವಾದಜ್.TI ಮೈಕ್ರೊಪ್ರೊಸೆಸರ್ನ ಹಕ್ಕು ಸ್ವಾಮ್ಯಕ್ಕೆ ಅರ್ಜಿ ಸಲ್ಲಿಸಿತು. ಒಂದೇ ಚಿಪ್ನ ಮೈಕ್ರೊಪ್ರೊಸೆಸರ್ ವಿನ್ಯಾಸಕ್ಕಾಗಿ ಯು.ಎಸ್ ಪೇಟೆಂಟ್ ೩೭,೫೭,೩೦೬ಸೆಪ್ಟಂಬರ್ ೪, ೧೯೭೩ ರಲ್ಲಿ ಗ್ಯಾರಿ ಬೂನ್ ಅವರಿಗೆ ಪ್ರಶಸ್ತಿ ನೀಡಲಾಯಿತು. ಆದರೆ ಯಾವ ಕಂಪನಿ ತನ್ನ ಲ್ಯಾಬೊರೇಟರಿಯಲ್ಲಿ ಮೊದಲ ಕಾರ್ಯನಿರತ ಮೈಕ್ರೊಪ್ರೊಸೆಸರನ್ನು ಮೊದಲು ಬಳಸಿತು ಎಂಬುದು ತಿಳಿದುಬಂದಿಲ್ಲ. ಇಂಟೆಲ್ TI ಮೈಕ್ರೊಪ್ರೊಸೆಸರನ ಹಕ್ಕುಸ್ವಾಮ್ಯಕ್ಕಾಗಿ ಗೌರವ ಧನ ನೀಡುವುದರೊಂದಿಗೆ, ೧೯೭೧ ಮತ್ತು ೧೯೭೬ ರಲ್ಲಿ ಇಂಟೆಲ್ ಮತ್ತು TI ಎರಡೂ ವಿಸ್ತಾರವಾದ ಹಕ್ಕುಸ್ವಾಮ್ಯದ ಪರಸ್ಪರ ಪರವಾನಗಿಯ ಒಪ್ಪಂದವನ್ನು ಮಾಡಿಕೊಂಡವು. ಇದಕ್ಕೆ ಸಂಬಂಧಪಟ್ಟಂತೆ, TI ಯನ್ನು ಮದ್ಯವರ್ತಿ ಮತ್ತು ಮೈಕ್ರೊಪ್ರೊಸೆಸರ್ನ ಹಕ್ಕುಸ್ವಾಮ್ಯದ ಮಾಲಿಕನಾಗಿ ಪರಿಗಣಿಸಿದ್ದ Cyrix ಮತ್ತು Intel ನಡುವಿನ ಕಾನುನು ವಿವಾದ ನ್ಯಾಯಾಲಯದ ಕಡತಗಳಲ್ಲಿ ಒಂದು ಸುಂದರ ಇತಿಹಾಸವನ್ನು ಹೇಳುತ್ತದೆ. ಒಂದು ಚಿಪ್ನಲ್ಲಿನ ಕಂಪ್ಯೂಟರ್ ಎಂದರೆ ಮೈಕ್ರೊಪ್ರೊಸೆಸರ್ ಕೋರ್ (CPU), ಸ್ವಲ್ಪ ಮೆಮೊರಿ ಮತ್ತು I/O (input/output) ಮಾರ್ಗಗಳೆಲ್ಲವನ್ನು ಕೇವಲ ಒಂದೇ ಚಿಪ್ ಒಳಗೊಂಡಿರುವ ಕಲವು ಮಾರ್ಪಾಡು ಹೊಂದಿದ ಮೈಕ್ರೊಪ್ರೊಸೆಸರ್.ಇದನ್ನು ಮೈಕ್ರೊ ಕಂಟ್ರೋಲರ್ ಎಂದು ಕೂಡ ಕರೆಯುತ್ತಾರೆ. "ಮೈಕ್ರೊಕಂಪ್ಯೂಟರ್ ಪೇಟೆಂಟ್", ಯು.ಎಸ್ ಪೇಟೆಂಟ್ ೪೦,೭೪,೩೫೧, ಎಂದು ಕರೆಯಲಾಗುವ ಚಿಪ್ ಮೇಲಿನ ಕಂಪ್ಯೂಟರ್ ಹಕ್ಕುಸ್ವಾಮ್ಯವನ್ನು TIನ ಗ್ಯಾರಿ ಬೂನ್ ಮತ್ತು ಮಿಚಿಲ್ ಜೆ. ಕೊಚ್ರಾನ್ ಕೊಡಲಾಯಿತು. ಈ ಹಕ್ಕು ಸ್ವಾಮ್ಯದ ಆಚೆಗೆ, ಮೈಕ್ರೊಕಂಪ್ಯೂಟರ್ನ ಸರಿಯಾದ ಅರ್ಥವೆಂದರೆ, ಒಂದು ಅಥವಾ ಹೆಚ್ಚು ಮೈಕ್ರೊಪ್ರೊಸೆಸರ್ಗಳನ್ನು ಅದರ CPU(s), ಆಗಿ ಉಪಯೋಗಿಸುವ ಒಂದು ಕಂಪ್ಯೂಟರ್. ಜೊತೆಗೆ ಹಕ್ಕುಸ್ವಾಮ್ಯದಲ್ಲಿ ವಿವರಿಸಿರುವ ಪರಿಕಲ್ಪನೆ ಕೂಡ ಮೈಕ್ರೊಕಂಟ್ರೋಲರ್ಗೆ ಅತಿ ಹತ್ತಿರದಲ್ಲಿದೆ.
೧೯೭೧ರ ಮೊದಲ ಭಾಗದಲ್ಲಿ, Pico ಎಲೆಕ್ಟ್ರಾನಿಕ್ಸ್[೧೦] ಮತ್ತು General Instrument ಗಳು ಮನ್ರೋ ರಾಯಲ್ ಡಿಜಿಟಲ್ ೧೧೧ ಕ್ಯಾಲ್ಕುಲೇಟರ್ಗಾಗಿ ಸಂಪೂರ್ಣ ಒಂದೇ ಚಿಪ್ನ ಕ್ಯಾಲ್ಕುಲೇಟರ್ ICನ್ನು ತಮ್ಮ ಮೊದಲ IC ಸಹಭಾಗಿತ್ವದೊಂದಿಗೆ ಪರಿಚಯಿಸಿದ್ದರು. ಈ IC ಕೂಡ ತಾರ್ಕಿಕವಾಗಿ ROM, RAM ಮತ್ತು ಒಂದು RISC ಚಿಪ್ನಲ್ಲಿನ ಸೂಚನಾ ವ್ಯವಸ್ಥೆಯನ್ನು ಹೊಂದಿದ್ದ ಮೊದಲ ಮೈಕ್ರೊಪ್ರೊಸೆಸರ್ ಅಥವಾ ಮೈಕ್ರೊಕಂಟ್ರೋಲರ್ ಎಂದು ಹಕ್ಕು ಸಾಧಿಸಿತು. ಒಂದೇ ಚಿಪ್ನ ಕ್ಯಾಲ್ಕುಲೇಟರ್ನ IC ಗಳನ್ನು ರೂಪಿಸಬೇಕೆಂಬ ದೂರದೃಷ್ಟಿ ಹೊಂದಿದ್ದ GI ನ ಐದು ವಿನ್ಯಾಸಗಾರ ಎಂಜಿನಿಯರ್ಗಳ ಶ್ರಮದಿಂದ ಉದಯಿಸಿದ್ದು Pico. ಅವರು ಹಿಂದಿನ ಬಹುಪಯೋಗಿ ಕ್ಯಾಲ್ಕುಲೇಟರ್ ಚಿಪ್ ಸೆಟ್ಗಳನ್ನು- GI ಮತ್ತು ಮಾರ್ಕೊನಿ-ಎಲಿಯಟ್- ಸೇರಿದಂತೆ ಉತ್ತಮವಾದ ಹಿಂದಿನ ವಿನ್ಯಾಸದ ಅನುಭವವನ್ನು ಹೊಂದಿದ್ದರು.[೧೧] Pico ಮತ್ತು GI ಗಳು ಆಗ ತಾನೆ ಬೆಳೆಯುತ್ತಿದ್ದ ಕ್ಯಾಲ್ಕುಲೇಟರ್ ಮಾರುಕಟ್ಟೆಯಲ್ಲಿ ಉತ್ತಮವಾದ ಯಶಸ್ಸನ್ನು ಕಂಡವು.
ಕ್ಯಾಲಿಪೋರ್ನಿಯಾ ಪಾಲಿಟೆಕ್ನಿಕಲ್ ವಿಶ್ವವಿದ್ಯಾಲಯದ ಪದವೀಧರನಾದ ಡಿಸೈನ್ ಎಂಜಿನಿಯರ್ [೧೨] ರೇ ಹಾಲ್ಟ್, F೧೪ CADC ಮೂಲಕ ತನ್ನ ಕಂಪ್ಯೂಟರ್ ವಿನ್ಯಾಸದ ಜೀವನವನ್ನು ಆರಂಭಿಸಿದ. ಸೆಂಟ್ರಲ್ ಏರ್ ಡಾಟಾ ಕಂಪ್ಯೂಟರನ್ನು ಅದರ ಸೃಷ್ಟಿ ಮಾಡಿದ ದಿನದಿಂದ (೧೯೬೮) ಸುಮಾರು ೩೦ ವರ್ಷಗಳ ಕಾಲ ಗೌಪ್ಯವಾಗಿ ಮುಚ್ಚಿಡಲಾಗಿತ್ತು. ೧೯೯೮ ರ ವರೆಗೆ ಅದನ್ನು ಸಾರ್ವಜನಿಕವಾಗಿ ಪ್ರಚುರಪಡಿಸಿರಲಿಲ್ಲ. ಆದರೆ ಅದೇ ಸಮಯದಲ್ಲಿ, ರೇ ಹಾಲ್ಟ್ ಕೋರಿಕೆ ಮೇರೆಗೆ ಅಮೇರಿಕಾದ ನೌಕಾಪಡೆ ಸಾರ್ವಜನಿಕ ಕ್ಷೇತ್ರಕ್ಕೆ ಅದರ ದಾಖಲೆಗಳನ್ನು ಒದಗಿಸಿತು. ಅಂದಿನಿಂದ ಹಲವು ಚರ್ಚೆಗಳು, ಅದನ್ನೇ ಮೊದಲ ಮೈಕ್ರೊಪ್ರೊಸೆಸರ್ ಎಂದು ವಾದಿಸಿದವು.[೧೩] ೧೯೭೧ರ ಹೊತ್ತಿನಲ್ಲಿ ಪ್ರಕಟಗೊಂಡ ವೈಜ್ಞಾನಿಕ ಪತ್ರಿಕೆಗಳು ಮತ್ತು ಸಾಹಿತ್ಯ ಅಮೇರಿಕಾದ ನೌಕಾಪಡೆಯ F-14 Tomcat ಯುದ್ದ ವಿಮಾನದಲ್ಲಿ ಬಳಸಿದ MP944 ಡಿಜಿಟಲ್ ಪ್ರೊಸೆಸರ್ಅನ್ನು ಮೊದಲ ಮೈಕ್ರೊಪ್ರೊಸೆಸರ್ ಎಂಬ ಅರ್ಹತೆಯನ್ನು ನೀಡಿತು. ಎಷ್ಟೇ ಕುತೂಹಲಕರವಾಗಿದ್ದರೂ, ಇದು ಒಂದೇ ಚಿಪ್ನ ಪ್ರೊಸೆಸರ್ ಆಗಿರಲಿಲ್ಲ ಮತ್ತು ಅದು ಸಾಮಾನ್ಯ ಉದ್ಧೇಶಕ್ಕೆ ಆಗಿರಲಿಲ್ಲ, ಇದೊಂದು ಹೆಚ್ಚು ಕಡಿಮೆ ನೀವು ವಿಶೇಷ ಉದ್ಧೇಶದ DSP ಸ್ವರೂಪವನ್ನು ತಯಾರಿಸಲು ಬಳಸಬಹುದಾದ ಸಮನಾಂತರ ಕಟ್ಟಡದ ಗುಂಪಿನಂತಿರುವ ಒಂದು ಜೋಡಿಯಾಗಿತ್ತು. ಇದು ಇಂದಿನ ಔದ್ಯೋಗಿಕ ವಸ್ತುವಾದ DSP-ಮೈಕ್ರೊಕಂಟ್ರೋಲರ್ ವಿನ್ಯಾಸಗಳನ್ನು ಒಂದುಗೂಡಿಸುವ ಪ್ರಕ್ರಿಯೆ ೧೯೭೧ ರಲ್ಲಿ ಆರಂಭವಾಗಿದ್ದನ್ನು ಸೂಚಿಸುತ್ತದೆ.[೧೪] ಇದು ಇಂದಿನ ಔದ್ಯೋಗಿಕ ವಸ್ತುವಾದ DSP-ಮೈಕ್ರೊಕಂಟ್ರೋಲರ್ ವಿನ್ಯಾಸಗಳನ್ನು ಒಂದುಗೂಡಿಸುವ ಪ್ರಕ್ರಿಯ ೧೯೭೧ ರಲ್ಲಿ ಆರಂಭವಾಗಿದ್ದನ್ನು ಸೂಚಿಸುತ್ತದೆ.೧೯೬೮ರಲ್ಲಿ, ಆಗ ಯು ಎಸ್ ನೌಕಾಪಡೆಯ ಹೊಸದಾದ F-14 Tomcat ಎಂಬ ಯುದ್ಧ ವಿಮಾನದಲ್ಲಿ ಅಭಿವೃದ್ಧಿಯ ಹಂತದಲ್ಲಿದ್ದ ಎಲೆಕ್ಟ್ರೋಮೆಕಾನಿಕಲ್ ವ್ಯವಸ್ಥೆಯೊಂದಿಗೆ ಸ್ಪರ್ಧಿಸಲು ಒಂದು ಡಿಜಿಟಲ್ ಕಂಪ್ಯೂಟರನ್ನು ತಯಾರಿಸಲು ಗ್ಯಾರೆಟ್ ಐರೀಸರ್ಚ್ ಜೊತೆಗೆ ವಿನ್ಯಾಸಗಾರ ರೇ ಹಾಲ್ಟ್ ಮತ್ತು ಸ್ಟೀವ್ ಗೆಲ್ಲರ್ಗೆ ಆಹ್ವಾನಿಸಲಾಯಿತು. ೧೯೭೦ರ ಹೊತ್ತಿಗೆ ಅದರ ವಿನ್ಯಾಸ ಪೂರ್ತಿಯಾಯಿತು ಮತ್ತು ಒಂದು MOS ಆಧಾರಿತ ಚಿಪ್ ಜೋಡಿಯನ್ನು ಕೋರ್ CPU ನಂತೆ ಬಳಸಲಾಯಿತು. ಈ ವಿನ್ಯಾಸ ಪ್ರಮುಖವಾಗಿ (ಬಹುಶಃ ೨೦ ಪಟ್ಟು) ತುಂಬಾ ಚಿಕ್ಕದ್ದು ಮತ್ತು ಇದು ಸ್ಪರ್ಧೆಯೊಡ್ಡಿದ್ದ ತಾಂತ್ರಿಕ ವ್ಯವಸ್ಥೆಗಿಂತ ಹೆಚ್ಚು ಪಟ್ಟು ನಂಬಿಕಾರ್ಹವಾಗಿತ್ತು, ಮತ್ತು ಹಿಂದಿನ ಎಲ್ಲಾ Tomcat ಮಾದರಿಗಳಲ್ಲಿಯೂ ಬಳಸಲಾಗಿತ್ತು. ಈ ವ್ಯವಸ್ಥೆ "೨೦-ಬಿಟ್, ವಾಹಕ, ಸಮನಾಂತರ ಮಲ್ಟಿ-ಮೈಕ್ರೊಪ್ರೊಸೆಸರ್"ಅನ್ನು ಹೊಂದಿತ್ತು. ಆದರೂ, ನೌಕಾಪಡೆ ೧೯೯೭ರ ವರೆಗೆ ಇದರ ವಿನ್ಯಾಸವನ್ನು ಪ್ರಕಟಿಸಲು ತಿರಸ್ಕರಿಸುವಷ್ಟು ಈ ವ್ಯವಸ್ಥೆಯು ಆಧುನಿಕವಾಗಿತ್ತೆಂದು ನಂಬಲಾಗಿದೆ. ಇದೇ ಕಾರಣಕ್ಕೆ, CADC, ಮತ್ತು MP೯೪೪ ಚಿಪ್ ಜೋಡಿಗಳು ಈಗಲೂ ಅಪರಿಚಿತವಾಗಿಯೇ ಇವೆ.[೧೫]
"ಮೈಕ್ರೋಕಂಟ್ರೋಲರ್" ವರ್ಣಿಸುವ, TI ಮತ್ತು Intel ಗಳನ್ನು ಸೃಷ್ಟಿಸಿದ [೧೬], Gilbert Hyatt ಅವರಿಗೆ ಹಕ್ಕು ಸ್ವಾಮ್ಯವನ್ನು ನೀಡಲಾಯಿತು ನಂತರದಲ್ಲಿ ಹಕ್ಕುಸ್ವಾಮ್ಯವನ್ನು ಅನೂರ್ಜಿತಗೊಳಿಸಲಾಯಿತು.[೧೭][೧೮]
Intel ೪೦೦೪ ನಂತರ ೧೯೭೨ ರಲ್ಲಿ ಪ್ರಪಂಚದ ಮೊದಲ 8-ಬಿಟ್ ಮೈಕ್ರೊಪ್ರೊಸೆಸರ್ Intel 8008 ಬಿಡುಗಡೆಯಾಯಿತು. A History of Modern Computing , (MIT Press), pp. ೨೨೦–೨೧, ರ ಪ್ರಕಾರ, Datapoint ಎಂದು ಕರೆಯಲ್ಪಟ್ಟ ಸ್ಯಾನ್ ಆಂಟೋನಿಯೊ TX ದ ಕಂಪ್ಯೂಟರ್ ಟರ್ಮಿನಲ್ಸ್ ಕಾರ್ಪೋರೇಷನ್ ಜೊತೆಗೆ ತಾನು ವಿನ್ಯಾಸ ಮಾಡುತಿದ್ದ ಟರ್ಮಿನಲ್ ಒಂದರ ಚಿಪ್ಗಾಗಿ Intel ಕಂಪನಿ ಒಪ್ಪಂದ ಮಾಡಿಕೊಂಡಿತು. Datapoint ನಂತರ ಆ ಚಿಪ್ಪನ್ನು ಬಳಸಬಾರದೆಂದು ನಿರ್ಧರಿಸಿತು, ಮತ್ತು Intel ಅದನ್ನು ೧೯೭೨ರಲ್ಲಿ ೮೦೦೮ ಎಂದು ಮಾರಾಟ ಮಾಡಿತು. ಇದೇ ಪ್ರಪಂಚದ ಮೊದಲ ೮-ಬಿಟ್ ಮೈಕ್ರೊಪ್ರೊಸೆಸರ್. ೧೯೭೪ರಲ್ಲಿ Radio-Electronics ನಿಯತಕಾಲಿಕದಲ್ಲಿ ಜಾಹೀರಾತು ನೀಡಿದ ಹೆಸರುವಾಸಿಯಾದ "Mark-8" ಕಂಪ್ಯೂಟರ್ ಕಿಟ್ಗೆ ಇದು ಮಾದರಿಯಾಯಿತು.೮೦೦೮ ಮೈಕ್ರೊಪ್ರೊಸೆಸರ್ ಹೆಚ್ಚು ಯಶಸ್ಸು ಕಂಡ Intel 8080 (೧೯೭೪), Zilog Z80 (೧೯೭೬), ಮತ್ತು ಮೂಲ Intel ೮-ಬಿಟ್ ಪ್ರೊಸೆಸರ್ಗೆ ಮುನ್ಸೂಚಕವಾಯಿತು. ಸ್ಪರ್ಧಾತ್ಮಕವಾದ Motorola 6800ನ್ನು ಆಗಷ್ಟ್ ೧೯೭೪ರಲ್ಲಿ ಮತ್ತು ಅದೇ ಮಾದರಿಯ MOS Technology 6502 (ಅದೇ ಜನರು ವಿನ್ಯಾಸಗೊಳಿಸಿದ) ನ್ನು ೧೯೭೫ರಲ್ಲಿ ಬಿಡುಗಡೆಗೊಳಿಸಲಾಯಿತು. ೧೯೮೦ರಲ್ಲಿ ೬೫೦೨ ಜನಪ್ರಿಯತೆಯಲ್ಲಿ Z೮೦ ಜೊತೆಗೆ ಪ್ರತಿಸ್ಪರ್ಧಿಸಿತು. ಕಡಿಮೆ ಬೆಲೆ, ಚಿಕ್ಕದಾದ ಪ್ಯಾಕೇಜಿಂಗ್, ಸರಳವಾದ computer bus ಅವಶ್ಯಕತೆಗಳು, ಮತ್ತು ಕೆಲವು ಸಮಯ ಬಾಹ್ಯ ಯಂತ್ರಾಂಶಗಳಿಂದ ನೀಡಲ್ಪಟ್ಟ ಸರ್ಕ್ಯೂಟ್ರಿಯು (ಮೆಮೊರಿ ರಿಫ್ರೆಶ್ಯು Z೮೦ ಭಾಗವಾಗಿತ್ತು) ೧೯೮೦ ರ ದಶಕದಲ್ಲಿ "ಕ್ರಾಂತಿ"ಯನ್ನುಂಟುಮಾಡಿದ ಮನೆಯ ಕಂಪ್ಯೂಟರ್ಗೆ ದಾರಿಮಾಡಿಕೊಟ್ಟಿತು ಮತ್ತು ಕೊನೆಗೆ ಹೆಚ್ಚು ದುಬಾರಿಯಾದ ಯಂತ್ರವನ್ನು Sinclair ZX-81 ಎಂಬ ಹೆಸರಿನೊಂದಿಗೆ US$೯೯ ಕ್ಕೆ ಮಾರಾಟ ಮಾಡಾಲಾಯಿತು. ವೆಸ್ಟರ್ನ್ ಡಿಸೈನ್ ಸೆಂಟರ್, ಇಂಕ್. (WDC) ೧೯೮೨ರಲ್ಲಿ CMOS 65C02ನ್ನು ಪರಿಚಯಿಸಿತು ಮತ್ತು ಹಲವು ಕಂಪನಿಗಳಿಗೆ ವಿನ್ಯಾಸದ ಪರವಾನಗಿಯನ್ನು ನೀಡಿತು. ಇದನ್ನು Apple IIc ನಲ್ಲಿ ಮತ್ತು IIe ವೈಯಕ್ತಿಕ ಕಂಪ್ಯೂಟರ್ಗಳಲ್ಲಿ ಹಾಗು ವೈದ್ಯಕೀಯವಾಗಿ ಒಳಗೆ ಸೇರಿಸುವಂತಹ ದರ್ಜೆಯ ಪೇಸ್ ಮೇಕರ್ ಮತ್ತು ಡಿಫೈಬ್ರಿಲೇಟರ್ಗಳಲ್ಲಿ, ಸ್ವಯಂಚಾಲಿತ, ಔದ್ಯೋಗಿಕ ಮತ್ತು ಗ್ರಾಹಕರ ಉಪಕರಣಗಳಲ್ಲಿ CPU ಆಗಿ ಬಳಸಲಾಯಿತು. WDC ಯು ಮೈಕ್ರೊಪ್ರೊಸೆಸರ್ನ ವಿನ್ಯಾಸದ ಪರವಾನಗಿಯ ಪ್ರವರ್ತಕನಾಗಿದ್ದು, ನಂತರ ARM ಮತ್ತು ಇತರ ಮೈಕ್ರೊಪ್ರೊಸೆಸರ್ನ ಬೌದ್ಧಿಕ ಆಸ್ತಿ (IP) ಯನ್ನು ಒದಗಿಸುವವರು ೧೯೯೦ರ ಹೊತ್ತಿಗೆ ಅದನ್ನು ಅನುಸರಿಸಿದವು. Motorola ೧೯೭೮ರಲ್ಲಿ ತುಂಬಾ ಮಹತ್ವಾಕಾಂಕ್ಷೆಯುಳ್ಳ ಮತ್ತು ಯೋಚನೆಯ source compatible ಮತ್ತು 6800 ಜತೆಗೆ MC6809 ಪರಿಚಯಿಸಿತು ಮತ್ತು hard-wired ವಾದವನ್ನು ಉಪಯೋಗಿಸಿ ಕಾರ್ಯರೂಪಕ್ಕೆ ತಂದಿತು. (ನಂತರದ ೧೬-ಬಿಟ್ ಮೈಕ್ರೊಪ್ರೊಸೆಸರ್ಗಳು hard-wired ವಾದಗಳಿಗೆ ವಿನ್ಯಾಸದ ಅವಶ್ಯಕತೆಗಳು ತುಂಬಾ ಸಂಕೀರ್ಣವಾಗುತ್ತಾ ಹೋದಂತೆ ಮೈಕ್ರೊಕೋಡ್ ಸ್ವಲ್ಪ ಸಮಯದವರೆಗೆ ಬಳಸಿದವು)ಮತ್ತೊಂದು ಮೊದಲ ೮-ಬಿಟ್ ಮೈಕ್ರೊಪ್ರೊಸೆಸರ್ Signetics 2650 ಆಗಿದ್ದು, ಅದು ಅದರ ನವೀನ ಮತ್ತು ಸಮರ್ಥ ಸೂಚನಾ ಗುಂಪಿನ ವಿನ್ಯಾಸದಿಂದಾಗಿ ಬೇಡಿಕೆಯಲ್ಲಿ ಸ್ವಲ್ಪ ಏರಿಕೆಯನ್ನು ಕಂಡಿತು. ಅಂತರಿಕ್ಷ ವಿಮಾನ ಕ್ಷೇತ್ರದಲ್ಲಿನ ಅತ್ಯಂತ ಮೂಲದ ಮೈಕ್ರೊಪ್ರೊಸೆಸರ್ ಎಂದರೆ ೧೯೭೦ರಲ್ಲಿ NASAದ Voyager ಮತ್ತು Viking ಎಂಬ ಅಂತರಿಕ್ಷಾ ತನಿಖಾ ವಾಹನಗಳಲ್ಲಿ ಮತ್ತು ಗುರು ಗ್ರಹಕ್ಕೆ ಕಳುಹಿಸಿದ್ದ ವಾಹನ Galileo (೧೯೮೯ ರಲ್ಲಿ ಹಾರಿಸಿದ್ದು, ೧೯೯೫ರಲ್ಲಿ ವಾಪಾಸಾಗಿದ್ದು) ದಲ್ಲಿ ಉಪಯೋಗಿಸಿದ್ದ RCAನ RCA 1802 (aka CDP೧೮೦೨, RCA COSMAC) (೧೯೭೬ರಲ್ಲಿ ಪರಿಚಯಿಸಿದ್ದು). RCA COSMACಯೆ C-MOS ತಾಂತ್ರಿಕತೆಯನ್ನು ಮೊದಲು ಕಾರ್ಯರೂಪಕ್ಕೆ ತಂದಿದ್ದು. CDP೧೮೦೨ಯನ್ನು ತುಂಬಾ ಕಡಿಮೆ ಶಕ್ತಿಯಲ್ಲಿ ಓಡಿಸಬಹುದು, ಮತ್ತು ಇದರ ಉತ್ಪಾದನಾ ಪ್ರಕ್ರಿಯೆ (Silicon on Sapphire) ಯು ಬಾಹ್ಯಾಕಾಶದ ವಿಕಿರಣ ಮತ್ತು ಎಲೆಕ್ಟ್ರೋಸ್ಟಾಟಿಕ್ ಹೊರಸೂಸುವಿಕೆ ಆ ಯುಗದಲ್ಲಿನ ಬೇರೆಲ್ಲಾ ಪ್ರೊಸೆಸರ್ಗಳಿಗಿಂತ ಹೆಚ್ಚು ಉತ್ತಮ ರಕ್ಷಣೆಯ ಭರವಸೆಯನ್ನು ನೀಡುತ್ತದೆಂಬ ಕಾರಣಕ್ಕೆ ಬಳಸಲಾಗಿತ್ತು. ಈ ರೀತಿಯಾಗಿ, ೧೮೦೨ ಮೊದಲ ವಿಕಿರಣ-ತಡೆಯುವ ಮೈಕ್ರೊಪ್ರೊಸೆಸರ್ ಎಂದು ಹೇಳಲಾಗಿದೆ. RCA 1802 ಯು ಬದಲಾವಣೆಯಾಗದ ವಿನ್ಯಾಸ ಎಂದು ಕರೆಯಲ್ಪಟ್ಟ, ಗಡಿಯಾರದ ಆವರ್ತವನ್ನು ತುಂಬಾ ಕಡಿಮೆ, ಅಥವಾ ೦ Hz, ಅಂದರೆ ಸಂಪೂರ್ಣ ನಿಲುಗಡೆಯ ಸ್ಥಿತಿಗೆ ತರಬಹುದಾದ ತಂತ್ರಾಂಶವನ್ನು ಹೊಂದಿತ್ತು. ಇದು Voyager/Viking/Galileo spacecraft ಗಳು ತುಂಬಾ ಕಡಿಮೆ ವಿದ್ಯುಶ್ಚಕ್ತಿಯನ್ನು ಬಹಳ ದೂರದ ತೊಂದರೆರಹಿತ ಪ್ರಯಾಣಕ್ಕೆ ಬಳಸಲು ಸಹಕಾರಿಯಾಯಿತು. ಟೈಮರ್ಗಳು ಮತ್ತು/ಅಥವಾ ಸಂವೇದನಾ ಉಪಕರಣಗಳು ನೌಕಾಯಾನದ ಇತ್ತೀಚಿನ ಮಾಹಿತಿಗಳು, ನಡವಳಿಕೆಯ ಹಿಡಿತ, ದತ್ತಾಂಶ ಶೇಖರಣೆ ಮತ್ತು ರೇಡಿಯೊ ಸಂವಹನ ಮುಂತಾದ ಬಹುಮುಖ್ಯ ಕೆಲಸಗಳನ್ನು ಮಾಡಲು ಮೈಕ್ರೊಪ್ರೊಸೆಸರ್ನ ಕಾರ್ಯವೈಖರಿಯನ್ನು ಉತ್ತಮಗೊಳಿಸುವುದು ಅಥವಾ ಉತ್ತೇಜಿಸುವುದನ್ನು ಮಾಡುತ್ತಿದ್ದವು.
೧೯೭೩ರಲ್ಲಿ ಪರಿಚಯಿಸಿದ National Semiconductor IMP-16 ಮೊದಲ ಬಹುಪಯೋಗಿ 16-ಬಿಟ್ ಮೈಕ್ರೊಪ್ರೊಸೆಸರ್ ಚಿಪ್. ೮-ಬಿಟ್ ಅವತರಣಿಕೆಯ ಚಿಪ್ ಸೆಟ್ಟನ್ನು IMP-೮ ಆಗಿ ೧೯೭೪ರಲ್ಲಿ ಬಿಡುಗಡೆ ಮಾಡಲಾಯಿತು. ಅದೇ ವರ್ಷದಲ್ಲಿ, ನ್ಯಾಷನಲ್ National Semiconductor PACE, ಎನ್ನುವ ಮೊದಲ ೧೬-ಬಿಟ್ ಸಿಂಗಲ್-ಚಿಪ್ ಮೈಕ್ರೊಪ್ರೊಸೆಸರನ್ನು ಬಿಡುಗಡೆಮಾಡಲಾಯಿತು ಮತ್ತು ಅದರ ನಂತರ NMOSನ ಅವರಣಿಕೆ INS8900ನ್ನು ಹೊರತರಲಾಯಿತು. ಇತರ ಮೊದಲ ಬಹುಪಯೋಗಿ ೧೬-ಬಿಟ್ ಮೈಕ್ರೊಪ್ರೊಸೆಸರ್ ಚಿಪ್ಗಳೆಂದರೆ ಡಿಜಿಟಲ್ ಎಕ್ಯುಪ್ಮೆಂಟ್ ಕಾರ್ಪೋರೇಷನ್ (DEC) LSI-11 OEM ಬೋರ್ಡ್ ಸೆಟ್ನಲ್ಲಿ, ಮತ್ತು ೧೯೭೫ ರಿಂದ ೧೯೭೬ರ ಅವಧಿಯಲ್ಲಿ ಬಿಡುಗಡೆಮಾಡಲಾಗಿದ್ದ ಪ್ಯಾಕೇಜ್ ಆದ ಈ ಎರಡೂ PDP 11/03 minicomputer, ಮತ್ತು ಫೇರ್ಚೈಲ್ಡ್ ಸೆಮಿಕಂಡಕ್ಟರ್ ಮೈಕ್ರೊಫ್ಲೇಮ್ ೯೪೪೦, ಗಳಲ್ಲಿ ಬಳಕೆ ಮಾಡಲಾಗಿದ್ದವುಗಳು. ಮೊದಲ ಸಿಂಗಲ್-ಚಿಪ್ ೧೬-ಬಿಟ್ ಮೈಕ್ರೊಪ್ರೊಸೆಸರ್ ಎಂದರೆ TI's ನ TMS 9900 ಆಗಿದ್ದು, ಅದು ಅವರ TI-990 ಸಾಲಿನ ಚಿಕ್ಕ ಕಂಪ್ಯೂಟರ್ಗಳಂತೆಯೇ ಅನುರೂಪವಾಗಿತ್ತು. ೯೯೦೦ ನ್ನು TI ೯೯೦/೪ ಮಿನಿ ಕಂಪ್ಯೂಟರ್, TI-99/4A ಹೋಮ್ ಕಂಪ್ಯೂಟರ್, ಮತ್ತು TM೯೯೦ ಸಾಲಿನ OEM ಮೈಕ್ರೊಕಂಪ್ಯೂಟರ್ ಬೋರ್ಡ್ಗಳಲ್ಲಿ ಬಳಸಲಾಗಿತ್ತು. ಆ ಚಿಪ್ಪನ್ನು ತುಂಬಾ ದೊಡ್ಡ ೬೪-ಪಿನ್ ಸೆರಾಮಿಕ್ DIP package ನಲ್ಲಿ ಪ್ಯಾಕ್ ಮಾಡಲಾಗಿತ್ತು, ಮತ್ತು Intel ೮೦೮೦ ರೀತಿಯ ೮-ಬಿಟ್ ಮೈಕ್ರೊಪ್ರೊಸೆಸರ್ಗಳನ್ನು ತುಂಬಾ ಸಾಮಾನ್ಯ, ಚಿಕ್ಕದಾದ ಮತ್ತು ಕಡಿಮೆ ಬೆಲೆಯ ಪ್ಲಾಸ್ಟಿಕ್ ೪೦-ಪಿನ್ DIP ನಲ್ಲಿ ಸುತ್ತಲಾಗಿತ್ತು. Intel ೮೦೮೦ರ ಜೊತೆಗೆ ಸ್ಪರ್ಧಿಸಲು ವಿನ್ಯಾಸಗೊಳಿಸಿದ TMS ೯೯೮೦ ಎಂಬ ಫಾಲೋ-ಆನ್ ಚಿಪ್ ಸಂಪೂರ್ಣ TI೯೯೦ ೧೬-ಬಿಟ್ ಸೂಚನಾ ಸೆಟ್, ೪೦-ಪಿನ್ ಪ್ಯಾಕೇಜ್ ಪ್ಲಾಸ್ಟಿಕ್, ಒಮ್ಮೆಗೆ ೮-ಬಿಟ್ ದತ್ತಾಂಶವನ್ನು ಹೊಂದಿತ್ತು, ಆದರೆ ಅದು ಕೇವಲ ೧೬ KBಯನ್ನು ಮಾತ್ರ ಪತ್ತೆ ಮಾಡುತಿತ್ತು. ಮೂರನೆಯ ಚಿಪ್-TMS ೯೯೯೫- ಹೊಸ ವಿನ್ಯಾಸವಾಗಿತ್ತು. ಈ ಕುಟುಂಬ ನಂತರದ ದಿನಗಳಲ್ಲಿ ೯೯೧೦೫ ಮತ್ತು ೯೯೧೧೦ ಒಳಗೊಳ್ಳಲು ವಿಸ್ತಾರವಾಯಿತು. The Western Design Center, Inc. (WDC) ೧೯೮೪ರಲ್ಲಿ WDC CMOS 65C02 ಯ ಮೇಲ್ದರ್ಜೆಯಾದ CMOS 65816 ೧೬-ಬಿಟ್ ಪರಿಚಯಿಸಲಾಯಿತು. ೬೫೮೧೬ ೧೬-ಬಿಟ್ ಮೈಕ್ರೊಪ್ರೊಸೆಸರ್ Apple IIgsನ ಹೃದಯಭಾಗವಾಯಿತು ಮತ್ತು ನಂತರ Super Nintendo Entertainment System, ಇದನ್ನು ಎಲ್ಲಾ ಕಾಲಕ್ಕೂ ಸರಿಹೊಂದುವಂತಹ ಬಹಳ ಜನಪ್ರಿಯ ೧೬-ಬಿಟ್ ವಿನ್ಯಾಸವನ್ನಾಗಿ ಮಾರ್ಪಡಿಸಿತು. Intel ತಾನು ಅನುಕರಿಸಲು ಯಾವುದೆ ಮಿನಿ ಕಂಪ್ಯೂಟರ್ಗಳಿಲ್ಲದ ವಿಭಿನ್ನ ದಾರಿಯನ್ನು ಅನುಸರಿಸಿತು ಮತ್ತು ಬದಲಾಗಿ ೮೦೮೦ ವಿನ್ಯಾಸವನ್ನು ೧೬-ಬಿಟ್ Intel 8086 ಆಗಿ ರೋಪಿಸಲಾಗಿದ್ದು, ಅದು ಬಹುತೇಕ ಆಧುನಿಕ PC ಮಾದರಿಯ ಕಂಪ್ಯೂಟರ್ಗಳಿಗೆ ದಾರಿಮಾಡಿಕೊಟ್ಟ x86 ಕುಟುಂಬದ ಮೊದಲ ಸದಸ್ಯ. Intel ೮೦೮೦ ಮಾದರಿಯಲ್ಲಿಯೇ ತುಂಬಾ ಸುಲಭ ದರದಲ್ಲಿ ತಂತ್ರಾಂಶವನ್ನು ಸಾಗಿಸುವ ಸಲುವಾಗಿ ೮೦೮೬ ನ್ನು ಪರಿಚಯಿಸಿತು, ಮತ್ತು ಅದೇ ಪೀಠಿಕೆಯಾಗಿ ಬಹಳಷ್ಟು ವ್ಯವಹಾರವನ್ನು ಗಳಿಸುವುದರಲ್ಲಿ ಯಶಸ್ಸು ಗಳಿಸಿತು. ೮-ಬಿಟ್ ದತ್ತಾಂಶವನ್ನು ಬಾಹ್ಯವಾಗಿ ಉಪಯೋಗಿಸಿದ ೮೦೮೬ರ ಮಾದರಿಯಾದ ೮೦೮೮ ಮೈಕ್ರೊಪ್ರೊಸೆಸರ್ ಮೊದಲ IBM PC, ಮಾಡೆಲ್ ೫೧೫೦. ೮೦೮೬ ಮತ್ತು ೮೦೮೮ನ್ನು ಅನುಸರಿಸಿ, Intel 80186, 80286 ಮತ್ತು, ೧೯೮೫ರಲ್ಲಿ, ೩೨-ಬಿಟ್ 80386 ಬಿಡುಗಡೆಗೊಳಿಸಿ, ಅವರ PC ಮಾರುಕಟ್ಟೆಯ ಪ್ರಭುತ್ವವನ್ನು ಪ್ರೊಸೆಸರ್ ಕುಟುಂಬದ ಸಾಮರ್ಥ್ಯಕ್ಕೆ ಅನುರೂಪವಾಗಿ ಭದ್ರಪಡಿಸಿಕೊಂಡಿತು.ಇಂಟಿಗ್ರೇಟೆಡ್ ಮೈಕ್ರೊಪ್ರೊಸೆಸರ್ ಮೆಮೊರಿ ಮ್ಯಾನೇಜ್ಮೆಂಟ್ ಯೂನಿಟ್ (MMU)ನ್ನು Intelನ ಚೈಲ್ಡ್ಸ್ ಎಟ್ ಆಲ್ ಅಭಿವೃದ್ಧಿಪಡಿಸಿತು ಮತ್ತು ಯುಎಸ್ ಪೇಟೆಂಟ್ ಸಂಖ್ಯೆ ೪,೪೪೨,೪೮೪ಯನ್ನು ನೀಡಿತು.
೧೬-ಬಿಟ್ ವಿನ್ಯಾಸ ೩೨-ಬಿಟ್ ಕಾರ್ಯರೂಪಕ್ಕೆ ಬರುವ ವೇಳೆಯಲ್ಲಿ ಸ್ವಲ್ಪ ಸಮಯ ಮಾತ್ರ ಮಾರುಕಟ್ಟೆಯಲ್ಲಿ ಇತ್ತು. ೩೨-ಬಿಟ್ ವಿನ್ಯಾಸದ ಬಹು ಮುಖ್ಯ ವಸ್ತುವೆಂದರೆ ೧೯೭೯ರಲ್ಲಿ ಬಿಡುಗಡೆಯಾದ MC68000. ಸಾಮಾನ್ಯವಾಗಿ ೬೮K ಎಂದು ಸಾಮಾನ್ಯವಾಗಿ ಚಾಲ್ತಿಯಲ್ಲಿದ್ದ ಇದರಲ್ಲಿ ೩೨-ಬಿಟ್ ದಾಖಲಾಗಿದ್ದರೂ, ೧೬-ಬಿಟ್ ಆಂತರಿಕ ದತ್ತಾಂಶ ಮಾರ್ಗ ಮತ್ತು ಒಂದು ೧೬-ಬಿಟ್ ಬಾಹ್ಯ ದತ್ತಾಂಶದ ಬಸ್ಸನ್ನು ಪಿನ್ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಬಳಸಲಾಗಿತ್ತು ಮತ್ತು ಅದು ಕೇವಲ ೨೪-ಬಿಟ್ ವಿಳಾಸವನ್ನು ಬೆಂಬಲಿಸುತ್ತಿತ್ತು. ಇದು ಸ್ಪಷ್ಟವಾಗಿ ೩೨-ಬಿಟ್ ವಿನ್ಯಾಸವನ್ನು ಹೊಂದಿದ್ದರೂ, Motorola ಸಾಮಾನ್ಯವಾಗಿ ಇದನ್ನು ೧೬-ಬಿಟ್ ಪ್ರೊಸೆಸರ್ ಎಂದು ವಿವರಿಸಿತ್ತು. ಅಧಿಕ ಕಾರ್ಯಕ್ಷಮತೆ, ದೊಡ್ಡದಾದ (೧೬ ಮೆಗಾಬೈಟ್ಗಳು ಅಥವಾ ೨ ೨೨೪ಬೈಟ್ಸ್) ನ ನೆನಪಿನ ಸಾಮರ್ಥ್ಯ ಮತ್ತು ಕಡಿಮೆ ಬೆಲೆಯ ಸಂಯೋಜನೆ ಇದರ ವರ್ಗದಲ್ಲಿ ಇದನ್ನು ತುಂಬಾ ಜನಪ್ರಿಯ CPU ವಿನ್ಯಾಸವಾಗಿ ಮಾರ್ಪಡಿಸಿತು. ೧೯೮೦ರ ಮಧ್ಯ ಭಾಗದಲ್ಲಿ Atari ST ಮತ್ತು Commodore Amiga ಸೇರಿದಂತೆ ಕೆಲವು ಇತರ ವಿನ್ಯಾಸಗಳು ಬಳಸಿದಂತೆ, Apple Lisa ಮತ್ತು Macintoshವಿನ್ಯಾಸಗಳು ೬೮೦೦೦ನ್ನು ಉಪಯೋಗಿಸಿದವು. ೩೨-ಬಿಟ್ ದತ್ತಾಂಶ ಮಾರ್ಗ, ೩೨-ಬಿಟ್ ಬಸ್ಗಳು ಮತ್ತು ೩೨-ಬಿಟ್ ವಿಳಾಸಗಳನ್ನು ಹೊಂದಿದ್ದ ವಿಶ್ವದ ಮೊದಲ ಸಿಂಗಲ್ ಚಿಪ್ ಸಂಪೂರ್ಣ ೩೨-ಬಿಟ್ ಮೈಕ್ರೊಪ್ರೊಸೆಸರ್ ಎಂದರೆ AT&T Bell Labs BELLMAC-೩೨A ಆಗಿದ್ದು, ಅದರ ಮೊದಲ ಮಾದರಿಗಳು ೧೯೮೦ರಲ್ಲಿ ಬಿಡುಗಡೆಯಾದವು ಮತ್ತು ಸಾಮಾನ್ಯ ಉತ್ಪದನೆ ೧೯೮೨ ರಲ್ಲಿ ಆರಂಭವಾಯಿತು.[೧೯][೨೦] AT&T ಯನ್ನು ೧೯೮೪ರಲ್ಲಿ ಹಿಂಪಡೆದ ಮೇಲೆ ಇದನ್ನು WE ೩೨೦೦೦ (WE for Western Electric), ಎಂದು ಮರುನಾಮಕರಣ ಮಾಡಲಾಯಿತು ಮತ್ತು ಅದರ ನಂತರ ಎರಡು WE ೩೨೧೦೦ ಮತ್ತು WE ೩೨೨೦೦ ಮಾದರಿಗಳು ಹೊರಬಂದವು. ಈ ಮೈಕ್ರೊಪ್ರೊಸೆಸರ್ಗಳನ್ನು ವಿಶ್ವದ ಮೊದಲ ಡೆಸ್ಕ್ಟಾಪ್ ಸೂಪರ್ಮೈಕ್ರೊಕಂಪ್ಯೂಟರ್ AT&T ೩B೫ ಮತ್ತು ೩B೧೫ ಮಿನಿ ಕಂಪ್ಯೂಟರ್, ೩B೨ ನಲ್ಲಿ, ವಿಶ್ವದ ಮೊದಲ ೩೨-ಬಿಟ್ ಲ್ಯಾಪ್ಟಾಪ್ ಕಂಪ್ಯೂಟರ್ "Companion" ನಲ್ಲಿ ಮತ್ತು ಇಂದಿನ ಆಟದ ಮಾದರಿಗಳಂತಿರುವ ROM-pack memory cartridgeಗಳ ಲಕ್ಷಣಗಳನ್ನು ಹೊಂದಿರುವ ವಿಶ್ವದ ಮೊದಲ ಪುಸ್ತಕದಳತೆಯ ಸೂಪರ್ಮೈಕ್ರೊಕಂಪ್ಯೂಟರ್ "Alexander" ನಲ್ಲಿ ಉಪಯೋಗಿಸಲಾಗಿತ್ತು. ಈ ಎಲ್ಲಾ ಸಿಸ್ಟಂಗಳು UNIX System V ಎಂಬ ಕಾರ್ಯನಿರ್ವಹಿಸುವ ವ್ಯವಸ್ಥೆಯೊಂದಿಗೆ ಬಳಸಲ್ಪಟ್ಟಿದ್ದವು. Intel ನ ಮೊದಲ ೩೨-ಬಿಟ್ ಮೈಕ್ರೊಪ್ರೊಸೆಸರ್ ೧೯೮೧ರಲ್ಲಿ ಬಿಡುಗಡೆಗೊಂಡ iAPX 432 ಆಗಿದ್ದರೂ ವಾಣಿಜ್ಯಾತ್ಮಕವಾಗಿ ಅಷ್ಟೊಂದು ಯಶಸ್ಸು ಸಾಧಿಸಲಾಗಲಿಲ್ಲ. ಇದು ಆಧುನಿಕವಾದ ಸಾಮರ್ಥ್ಯ-ಆದಾರಿತ ವಸ್ತುನಿಷ್ಟವಾದ ವಿನ್ಯಾಸವನ್ನು ಹೊಂದಿತ್ತು. ಆದರೂ ಸಾಮಾನ್ಯ ಅಳತೆಗೋಲಾದ ಪರೀಕ್ಷೆಗಳಲ್ಲಿ ಸುಮಾರು ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಕೆಲಸ ಮಾಡುತ್ತಿದ್ದ Intel ನ ೮೦೨೮೬ (೧೯೮೨ರಲ್ಲಿ ಬಿಡುಗಡೆಯಾದದ್ದು) ನಂತಹ ಸಮಕಾಲೀನ ವಿನ್ಯಾಸಗಳಿಗೆ ಹೋಲಿಸಿದರೆ, ಅದರ ಕಾರ್ಯಕ್ಷಮತೆ ತುಂಬಾ ಕಡಿಮೆಯಿತ್ತು. ಆದರೂ, ಅದು ಹೆಚ್ಚಿನ ಉಪಯೋಗಕ್ಕೆ ಬಾರದಿರುವ ಕಾರಣದಿಂದಾಗಿ iAPX೪೩೨ ನ ಫಲಿತಾಂಶ ಸ್ವಲ್ಪಮಟ್ಟಿಗಿತ್ತು ಮತ್ತು ಅದರ Ada ಸಂಗ್ರಾಹಕ ಶಕ್ತಿ ಅತ್ತ್ಯುತ್ತಮವಾಗಿರಲಿಲ್ಲ. ARM ಮೊದಲ ಬಾರಿಗೆ ೧೯೮೫ರಲ್ಲಿ ಕಾಣಿಸಿಕೊಂಡಿತು. ಇದು ಒಂದು RISC ಪ್ರೊಸೆಸರ್ ವಿನ್ಯಾಸವಾಗಿದ್ದು, ಇದರ ಶಕ್ತಿಯ ಸಾಮರ್ಥ್ಯ, ಪರವಾನಗಿಯ ಮಾದರಿ ಮತ್ತು ಇದರ ಕಂಪ್ಯೂಟರ್ ಅಭಿವೃದ್ಧಿಯ ಉಪಕರಣಗಳ ವಿಸ್ತ್ರುತವಾದ ಆಯ್ಕೆ ಕಾರಣಗಳಿಂದಾಗಿ ೩೨-ಬಿಟ್ ಎಂಬೆಡೆಡ್ ಸಿಸ್ಟಂ ಪ್ರೊಸೆಸರ್ಗಳ ಜಾಗದ ಮೇಲೆ ಪ್ರಭಾವ ಬೀರಲು ಆರಂಭಿಸಿತು. ಸೆಮಿಕಂಡಕ್ಟರ್ ಉತ್ಪಾದಕರು ಸಾಮಾನ್ಯವಾಗಿ ARM11 ತರಹದ ಕೋರ್ನ ಪರವಾನಗಿ ತೆಗೆದುಕೊಂಡು ಅದನ್ನು ತಮ್ಮದೇ ಆದಂತಹ ಸಿಸ್ಟಮ್ ಆನ್ ಎ ಚಿಪ್ ವಸ್ತುಗಳೊಂದಿಗೆ ಸಮೀಕರಿಸುತ್ತಿದ್ದರು, ಅವರಲ್ಲಿ ಕೆಲವೇ ಆ ರೀತಿಯ ಮಾರಾಟಗಾರರು ARM cores ಬದಲಾವಣೆ ಮಾಡಲು ಪರವಾನಗಿ ಹೊಂದಿರುತ್ತಿದ್ದರು. ಬಹಳಷ್ಟು ಸೆಲ್ ಫೋನ್ಗಳು ಇತರ ವೈವಿದ್ಯಮಯ ಉತ್ಪಾದನೆಗಳಂತೆ ARM ಪ್ರೊಸೆಸರನ್ನು ಹೊಂದಿದ್ದವು. ವಾಸ್ತವಿಕ ಮೆಮೊರಿಯ ಬೆಂಬಲವಿಲ್ಲದ ಮೈಕ್ರೊಕಂಟ್ರೋಲರ್ಗಳು ಸಂಬಂಧಿತ ARM ಗುಂಪನ್ನು ಮತ್ತು ವಾಸ್ತವಿಕ ಮೆಮೊರಿಯನ್ನು ಹೊಂದಿದ SMP ಅಪ್ಲಿಕೇಷನ್ಸ್ ಪ್ರೊಸೆಸರ್ಗಳನ್ನು ಹೊಂದಿದ್ದವು. ೬೮೦೦೦ನೊಂದಿಗಿನ Motorola ದ ಸಾಧನೆಯು MC68010 ರ ಬೆಳವಣಿಗೆಗೆ ಸಹಕಾರಿಯಾಯಿತು ಮತ್ತು ಅದು ವಾಸ್ತವಿಕ ಮೆಮೊರಿ ಬೆಂಬಲವನ್ನು ಹೆಚ್ಚಿಸಿತು ೧೯೮೫ರಲ್ಲಿ ಪರಿಚಯಿಸಿದ MC68020 ಸಂಪೂರ್ಣ ೩೨-ಬಿಟ್ ದತ್ತಾಂಶ ಮತ್ತು ಅಡ್ರೆಸ್ ಬಸ್ಗಳನ್ನು ಹೆಚ್ಚಿಸಿತು. Unix ನ ಸೂಪರ್ ಮೈಕ್ರೊಕಂಪ್ಯೂಟರ್ ಮಾರುಕಟ್ಟೆಯಲ್ಲಿ ೬೮೦೨೮ ತುಂಬಾ ಜನಪ್ರಿಯವಾಯಿತು, ಮತ್ತು ಹಲವು ಸಣ್ಣ ಕಂಪನಿಗಳು (ಉದಾ: Altos, Charles River Data Systems) ಡೆಸ್ಕ್ಟಾಪ್ ಮಾದರಿಯ ಕಂಪ್ಯೂಟರ್ಗಳನ್ನು ತಯಾರುಮಾಡಿದವು. ಮೊದಲಿನ ವಿನ್ಯಾಸವನ್ನು ಚಿಪ್ನೊಳಗೆ MMUವನ್ನು ಕ್ರೂಢಿಕರಿಸಿ ಸುಧಾರಣೆ ಮಾಡುವ ಮೂಲಕ MC68030 ನಂತರ ಬಿಡುಗಡೆಗೊಳಿಸಲಾಯಿತು. ಅದರ ನಿರಂತರ ಸಾಧನೆಯು MC68040 ಗೆ ಮಾದರಿಯಾಗಿದ್ದು, ಉತ್ತಮವಾದ ಗಣಿತದ ಕಾರ್ಯವೈಖರಿಗೆ FPUವನ್ನು ಸೇರಿಸಲಾಯಿತು. ೬೮೦೫೦ ಯು ತನ್ನ ಕಾರ್ಯವೈಖರಿಯ ಗುರಿಗಳನ್ನು ಸಾಧಿಸಲು ವಿಫಲವಾಯಿತು ಮತ್ತು ಅದನ್ನು ಬಿಡುಗಡೆಗೊಳಿಸಲಿಲ್ಲ, ಮತ್ತು ಅದರ ನಂತರದ MC68060ನ್ನು ತುಂಬಾ ವೇಗವಾದ RISC ವಿನ್ಯಾಸಗಳಿಂದ ತುಂಬಿಹೋಗಿದ್ದಂತಹ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. ೧೯೯೦ರ ಆರಂಭದಲ್ಲಿ ೬೮K ಕುಟುಂಬವು ಡೆಸ್ಲ್ಟಾಪ್ನಿಂದಾಗಿ ಸೊರಗಿಹೋಗಿತ್ತು. ಇತರ ಬಹು ದೊಡ್ಡ ಕಂಪನಿಗಳು ೬೮೦೨೦ನ್ನು ವಿನ್ಯಾಸಗೊಳಿಸಿದವು ಮತ್ತು ಅದನ್ನು ಎಂಬೆಡೆಡ್ ಉಪಕರಣಗಳಿಗೆ ವರ್ಗಾಯಿಸಿದವು. ಒಂದು ಹಂತದಲ್ಲಿ, PCಗಳಲ್ಲಿನ Intel Pentiums ಗಳಿಗಿಂತ ಹೆಚ್ಚಾಗಿ ೬೮೦೨೦ಗಳು ಎಂಬೆಡೆಡ್ ಉಪಕರಣಗಳಲ್ಲಿ ಇದ್ದವು[೨೧]. ColdFire ಪ್ರೊಸೆಸರ್ ಗುಂಪುಗಳು ಹೆಚ್ಚು ಮೌಲ್ಯಯುತವಾಗಿದ್ದ ೬೮೦೨೦ ನಿಂದ ಹುಟ್ಟಿದಂತವುಗಳು.ಈ ವೇಳೆಗಾಗಲೆ (೧೯೮೦ ರ ಮಧ್ಯಭಾಗದಲ್ಲಿ), National Semiconductor ಕಂಪನಿಯು ಸಾಮ್ಯವಿರುವ ೧೬-ಬಿಟ್ ಪಿನ್ಔಟ್, NS ೧೬೦೩೨ ಎಂದು ಕರಯಲ್ಪಡುವ (ನಂತರ ೩೨೦೧೬ ಎಂದು ಮರುನಾಮಕರಣವಾಯಿತು) ೩೨-ಬಿಟ್ ಆಂತರಿಕ ಮೈಕ್ರೊಪ್ರೊಸೆಸರ್, NS 32032 ಎಂದು ಹೆಸರಿಸಲ್ಪಟ್ಟ ಸಂಪೂರ್ಣ ೩೨-ಬಿಟ್ ಮಾದರಿಯನ್ನು, ಮತ್ತು ಒಂದೇ ರೀತಿಯ ೩೨-ಬಿಟ್ ಕೈಗಾರಿಕಾ OEM ಮೈಕ್ರೊಕಂಪ್ಯೂಟರ್ಗಳನ್ನು ಬಿಡುಗಡೆ ಮಾಡಲಾಯಿತು. ೧೯೮೦ರ ಮಧ್ಯಭಾಗದಲ್ಲಿ, Sequent ಕಂಪನಿಯು ಮೊದಲ ಅನುರೂಪದ ಮಲ್ಟಿಪ್ರೊಸೆಸರ್ (SMP) ಮಧ್ಯವರ್ತಿ ಮಾದರಿಯ ಕಂಪ್ಯೂಟರ್ಗಳನ್ನು NS೩೨೦೩೨ ಉಪಯೋಗಿಸಿ ಬಿಡುಗಡೆ ಮಾಡಲಾಯಿತು. ಇದು ಈ ವಿನ್ಯಾಸಗಳಲ್ಲಿನ ಗೆಲುವಿನಲ್ಲಿ ಒಂದು, ಮತ್ತು ೧೯೮೦ ರ ಕೊನೆಯ ಭಾಗದಲ್ಲಿ ಅದು ಕಾಣೆಯಾಯಿತು.MIPS R2000 (೧೯೮೪) ಮತ್ತು R3000 (೧೯೮೯) ಗಳು ಅತಿ ಹೆಚ್ಚು ಯಶಸ್ವಿಯಾದ ೩೨-ಬಿಟ್ RISC ಮೈಕ್ರೊಪ್ರೊಸೆಸರ್ಗಳು. ಅವುಗಳನ್ನು SGI ಅತ್ಯಂತ ಹೆಚ್ಚು ಕಾರ್ಯಕ್ಷಮತೆಯ ವರ್ಕ್ಸ್ಟೇಶನ್ಗಳಲ್ಲಿ ಮತ್ತು ಕಂಪ್ಯೂಟರ್ ಮಧ್ಯವರ್ತಿಗಳಲ್ಲಿ ಮತ್ತು ಇತರೆಡೆಗಳಲ್ಲಿ ಉಪಯೋಗಿಸಲಾಗಿತ್ತು. ಇತರ ವಿನ್ಯಾಸಗಳು ಮಾರುಕಟ್ಟೆಗೆ ತುಂಬಾ ತಡವಾಗಿ ಬಂದು ಅಷ್ಟೇ ಬೇಗ ಮಾಯವಾದ ಕುತೂಹಲಕಾರಿಯಾದ Zilog Z8000ಗಳನ್ನು ಒಳಗೊಂಡಿದ್ದವು.೧೯೮೦ರ ಕೊನೆಯ ಭಾಗದಲ್ಲಿ "ಮೈಕ್ರೊಪ್ರೊಸೆಸರ್ ಯುದ್ಧ" ಕೆಲವು ಮೈಕ್ರೊಪ್ರೊಸೆಸರ್ಗಳನ್ನು ಕೊಲ್ಲುವುದಕ್ಕೆ ಆರಂಭಿಸಿದವು. ಸಹಜವಾಗಿ ಕೇವಲ ಒಂದೇ ಮುಖ್ಯ ವಿನ್ಯಾಸದ ಯಶಸ್ಸಿನಿಂದಾಗಿ, NS ೩೨೦೩೨ Sequent ತನ್ನ ಅಸ್ತಿತ್ವದಿಂದ ಮರೆಯಾಯಿತು, ಮತ್ತು Sequent Intel ಮೈಕ್ರೊಪ್ರೊಸೆಸರ್ಗಳಾಗಿ ಬದಲಾವಣೆಯಾಯಿತು. ೧೯೮೫ ರಿಂದ ೨೦೦೩ರ ವರೆಗೆ ೩೨-ಬಿಟ್ x86 ವಿನ್ಯಾಸಗಳು ಡೆಸ್ಕ್ಟಾಪ್, ಲ್ಯಾಪ್ಟಾಪ್ ಮತ್ತು ಸರ್ವರ್ ಮಾರುಕಟ್ಟೆಯಲ್ಲಿ ಪ್ರಭುತ್ವವನ್ನು ಸಾಧಿಸಿದ್ದವು, ಮತ್ತು ಈ ಮೈಕ್ರೊಪ್ರೊಸೆಸರ್ಗಳು ಹೆಚ್ಚು ವೇಗವಾಗಿ ಮತ್ತು ಸಮರ್ಥವಾಗಿದ್ದವು. ಬಹಳ ಹಿಂದಿನ ವಿನ್ಯಾಸದ ಮಾದರಿಗಳನ್ನು Intel ಇತರ ಕಂಪನಿಗಳಿಗೆ ಪರವಾನಗಿ ನೀಡಿತು, ಆದರೆ Pentium ಗೆ ಪರವಾನಗಿ ನೀಡಲು ನಿರಾಕರಿಸಿತು, ಆದ್ದರಿಂದ AMD and Cyrix ಗಳು ತಮ್ಮದೇ ವಿನ್ಯಾಸಗಳ ಆದಾರದ ಮೇಲೆ ನಂತರದ ವಿನ್ಯಾಸಗಳ ಮಾದರಿಗಳನ್ನು ಅಭಿವೃದ್ಧಿಪಡಿಸಿದವು. ಈ ಅವಧಿಯಲ್ಲಿ, ಈ ಮೈಕ್ರೊಪ್ರೊಸೆಸರ್ಗಳಲ್ಲಿನ ಸಂಕೀರ್ಣತೆ (transistor count) ಮತ್ತು ಸಾಮರ್ಥ್ಯ (instructions/second)ಯ ಗಾತ್ರದಲ್ಲಿ ಹೆಚ್ಚು ಕಡಿಮೆ ಮೂರುಪಟ್ಟು ಹೆಚ್ಚಾಯಿತು. Intel ನ Pentium ಮಾದರಿಯು, ಹೆಚ್ಚುಕಡಿಮೆ ಜನಸಾಮನ್ಯರ ದೃಷ್ಟಿಯಲ್ಲಿ, ತುಂಬಾ ಜನಪ್ರಿಯವಾಗಿದ್ದು ಮತ್ತು ಗುರುತಿಸಲ್ಪಟ್ಟ ೩೨-ಬಿಟ್ ಪ್ರೊಸೆಸರ್ ಮಾದರಿಯಾಗಿತ್ತು.
೧೯೯೦ರ ಮೊದಲ ಭಾಗದಿಂದಲೂ ೬೪-ಬಿಟ್ ಮೈಕ್ರೊಪ್ರೊಸೆಸರ್ಗಳ ವಿನ್ಯಾಸಗಳು ಹಲವು ಮಾರುಕಟ್ಟೆಗಳಲ್ಲಿ ಬಳಕೆಯಲ್ಲಿದ್ದರೂ, ೨೦೦೦ ರ ಮೊದಲ ಭಾಗದಲ್ಲಿ PC ಮಾರುಕಟ್ಟೆಯನ್ನೇ ಗುರಿಯಾಗಿಟ್ಟುಕೊಂಡ ೬೪-ಬಿಟ್ ಮೈಕ್ರೊಪ್ರೊಸೆಸರ್ಗಳು ಬಿಡುಗಡೆಯಾಗಿದ್ದನ್ನು ಕಾಣಬಹುದು. AMDಯು ೨೦೦೩ರಲ್ಲಿ ಬಿಡುಗಡೆಗೊಳಿಸಿದ ೬೪-ಬಿಟ್ ವಿನ್ಯಾಸಗಳು x೮೬, x86-64 (ಈಗAMD೬೪ ಎಂದು ಕರೆಯಲಾಗುತ್ತದೆ) ಎನ್ನುವ ಯೋಗ್ಯವಾಗಿಲ್ಲದ ಮಾದರಿಗಳೊಂದಿಗೆ, ನಂತರದಲ್ಲಿ Intelನ ಸಂಪೂರ್ಣವಾಗಿ ಯೋಗ್ಯವಾದ ೬೪-ಬಿಟ್ ವಿಸ್ತಾರಗಳ (ಮೊದಲು IA-೩೨e or EM೬೪T ಎಂದು ಕರೆಯಲಾಗಿದ್ದರೂ, ನಂತರ Intel ೬೪ ) ಎಂದು ಮರುನಾಮಕರಣ ಮಾಡಲಾಯಿತು), ೬೪-ಬಿಟ್ ಡೆಸ್ಕ್ಟಾಪ್ ಯುಗ ಆರಂಭವಾಯಿತು. ಯಾವುದೇ ಕೆಲಸದ ಮೇಲೆ ದಂಡವಿಲ್ಲದೆ ಮತ್ತು ಹೊಸದಾದ ೬೪-ಬಿಟ್ ತಂತ್ರಾಂಶವಿಲ್ಲದೆ ಈ ಎರಡೂ ಮಾದರಿಗಳು ೩೨-ಬಿಟ್ನ ಹಿಂದಿನ ಅಪ್ಲಿಕೇಷನ್ಗಳನ್ನು ನಡೆಸಬಲ್ಲವಾಗಿದ್ದವು. Windows XP x64, Windows Vista x೬೪, Linux, BSD ಮತ್ತು ಮೂಲ ೬೪-ಬಿಟ್ ಉಪಯೋಗಿಸಬಹುದಾದ Mac OS X ರೀತಿಯ ಕಾರ್ಯನಿರ್ವಹಿಸುವ ವಿಧಾನಗಳೊಂದಿಗೆ, ತಂತ್ರಾಂಶವೂ ಈ ರೀತಿಯ ಪ್ರೊಸೆಸರ್ಗಳ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಜ್ಜಾಯಿತು. ೬೪-ಬಿಟ್ ಸಾಮನ್ಯ ಉಪಯೋಗದ ರೆಜಿಸ್ಟರ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿದ್ದರಿಂದ ಇದರ ರೆಜಿಸ್ಟರ್ ಗಾತ್ರವನ್ನು IA-೩೨ನಿಂದ ಹೆಚ್ಚಿಸಲಾಯಿತು. ೯೦ರ ಮೊದಲಿನಿಂದಲೂ, ಅಂದರೆ ಪ್ರೊಸೆಸರ್ಗಳ ವಿನ್ಯಾಸದ ಕಾಲದಿಂದಲೂ, PowerPC ಪ್ರೊಸೆಸರ್ಗಳ ೬೪-ಬಿಟ್ಗಳ ಚಲನೆಯ ವಿನ್ಯಾಸವನ್ನು ಮಾಡಲಾಗಿತ್ತು ಮತ್ತು ಇದು ಅಸಂಬದ್ಧತೆಗೆ ಬಹಳ ದೊಡ್ಡ ಕಾರಣವೇನೂ ಆಗಿರಲಿಲ್ಲ. ಎಲ್ಲ ಸಂಬಂಧಿತ ದತ್ತಾಂಶ ಮಾರ್ಗಗಳು, IA-೩೨ ವಿಷಯದಲ್ಲಿದ್ದಂತೆ, ಅಸ್ತಿತ್ವದಲ್ಲಿದ್ದ integer registerಗಳನ್ನು ವಿಸ್ತರಿಸಲಾಯಿತು ಮತ್ತು, ಎರಡೂ ತೇಲುವ ಬಿಂದು ಮತ್ತು ವೆಕ್ಟರ್ ಯೂನಿಟ್ಗಳು ಸಮನಾಂತರವಾಗಿ ಅಥವಾ ೬೪-ಬಿಟ್ಗಳ ನಂತರವೂ ಬಹಳಷ್ಟು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದವು. IA-೩೨ ನ್ನು x೮೬-೬೪ ಆಗಿ ವಿಸ್ತರಣೆ ಮಾಡಿದಾಗ ಏನು ನಡೆಯಿತೋ ಅದಕ್ಕಿಂತ ಭಿನ್ನವಾಗಿ, ಯಾವುದೇ ಹೊಸದಾದ ಸಾಮಾನ್ಯ ಉದ್ಧೇಶದ ರೆಜಿಸ್ಟರ್ಗಳನ್ನು ೬೪-ಬಿಟ್ PowerPC ಯಲ್ಲಿ ಸೇರಿಸಲಾಗಲಿಲ್ಲ. ಆದ್ದರಿಂದ ೬೪-ಬಿಟ್ ಮಾದರಿಯನ್ನು ಅಪ್ಲಿಕೇಷನ್ಗಳಲ್ಲಿ ಉಪಯೋಗಿಸಿದಾಗ ಗಳಿಸಿದ ಕಾರ್ಯಕ್ಷಮತೆಯ ಬಳಕೆಯಲ್ಲಿ ತೆಗೆದುಕೊಳ್ಳುವ ವಿಸ್ತಾರವಾದ ಜಾಗದ ಪ್ರಮಾಣ ಕಡಿಮೆಯಾಗಿತ್ತು.
೧೯೯೦ರ ಮೊದಲ ಭಾಗದಲ್ಲಿ servers ಮತ್ತು workstation ಗಳಲ್ಲಿ ಹೆಚ್ಚು ಜನಪ್ರಿಯವಾದಂತಹ symmetric multiprocessing ವಿನ್ಯಾಸದಲ್ಲಿದ್ದಂತೆ ಕಂಪ್ಯೂಟರ್ಗಳ ಕಾರ್ಯಕ್ಷಮತೆಯನ್ನು ಹೆಚ್ಚು ಪ್ರೊಸೆಸರ್ಗಳನ್ನು ಸೇರಿಸುವ ಮೂಲಕ ಸುಧಾರಿಸುವುದಕ್ಕೆ ಒಂದು ಭಿನ್ನವಾದ ಮಾರ್ಗವನ್ನೇ ಆಯ್ಕೆ ಮಾಡಿಕೊಳ್ಳಲಾಯಿತು. ಚಿಪ್ ತಯಾರಿಕೆಯ ತಾಂತ್ರಿಕತೆಗಳು ತಾಂತ್ರಿಕತೆಯ ಭೌತಿಕ ಇತಿಮಿತಿಗಳನ್ನು ಅನುಸಂಧಾನ ಮಾಡಿದ್ದರಿಂದಾಗಿ Moore's Law ವನ್ನು ರಕ್ಷಣೆ ಮಾಡುವುದು ಹೆಚ್ಚು ಚಾಲೆಂಜಿಂಗ್ ಆಗುತ್ತಾ ಬಂತು. ಇದಕ್ಕೆ ಪ್ರತಿಕ್ರಿಯೆಯಾಗಿ, ಮಾರುಕಟ್ಟೆಯಲ್ಲಿ ನಿರಂತರ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಳ್ಳಲು ಮೈಕ್ರೊಪ್ರೊಸೆಸರ್ ತಯಾರಕರು ಕಾರ್ಯಕ್ಷಮತೆಯನ್ನು ಸುಧಾರಿಸಲು ಇತರ ಮಾರ್ಗಗಳನ್ನು ಅವಲಂಭಿಸಬೇಕಾಯಿತು. ಒಂದು ಬಹು-ಗುಂಪಿನ ಪ್ರೊಸೆಸರ್ ಎಂದರೆ ಸಮರ್ಥವಾಗಿ ಸಂಭವನೀಯ ಕಾರ್ಯಕ್ಷಮತೆಯನ್ನು ಹಲವು ಗುಂಪುಗಳೊಂದಿಗೆ (ಎಲ್ಲಿಯವರೆಗೆ ಕಾರ್ಯನಿರ್ವಹಣಾ ವ್ಯವಸ್ಥೆ ಮತ್ತು ತಂತ್ರಾಂಶವನ್ನು ಒಂದಕ್ಕಿಂತ ಹೆಚ್ಚು ಪ್ರೊಸೆಸರ್ಗಳ ಪ್ರಯೋಜನವನ್ನು ತೆಗೆದುಕೊಳ್ಳಲು ವಿನ್ಯಾಸಗೊಳಿಸಿತ್ತೋ ಅಲ್ಲಿಯವರೆಗೆ) ದ್ವಿಗುಣಗೊಳಿಸಬಹುದಾದ ಒಂದೇ ಚಿಪ್ನಲ್ಲಿ ಒಳಗೊಂಡಿರುವ ಒಂದಕ್ಕಿಂತ ಹೆಚ್ಚು ಮೈಕ್ರೊಪ್ರೊಸೆಸರ್ ಗುಂಪು ಆಗಿತ್ತು. ಬಸ್ ಇಂಟರ್ಫೇಸ್ ಮತ್ತು ದ್ವಿತೀಯ ದರ್ಜೆ cache ಮೊದಲಾದ ಕೆಲವು ಬಿಡಿ ಭಾಗಗಳನ್ನು ಗುಂಪುಗಳ ನಡುವೆ ಹಂಚಿಕೊಳ್ಳಬಹುದಾಗಿತ್ತು. ಏಕೆಂದರೆ, ಈ ಗುಂಪುಗಳು ಭೌತಿಕವಾಗಿ ತೀರಾ ಹತ್ತಿರವಾಗಿದ್ದು, ಪ್ರತ್ಯೇಕವಾದ ಮಲ್ಟಿಪ್ರೊಸೆಸರ್ ಸಿಸ್ಟಂಗಳಿಗೆ ಹೋಲಿಸಿದರೆ, ಅವುಗಳು ಗಡಿಯಾರದ ದರಕ್ಕಿಂತಲೂ ಹೆಚ್ಚು ವೇಗವಾಗಿ ಇಂಟರ್ಫೇಸ್ ಆಗಿ ಕಂಪ್ಯೂಟರ್ನ ಸಂಪೂರ್ಣ ಕಾರ್ಯವೈಖರಿಯನ್ನು ಸುಧಾರಿಸಿತು.ಮೊದಲ ಪರ್ಸನಲ್ ಕಂಪ್ಯೂಟರ್ ಡ್ಯುಯಲ್-ಕೋರ್ ಪ್ರೊಸೆಸರ್ಗಳನ್ನು ೨೦೦೫ರಲ್ಲಿ ಬಿಡುಗಡೆಗೊಳಿಸಲಾಯಿತು ಮತ್ತು ೨೦೦೯ ಡ್ಯುಯಲ್-ಕೋರ್ ಮತ್ತು ಕ್ವಾಡ್-ಕೋರ್ ಪ್ರೊಸೆಸರ್ಗಳನ್ನು servers, workstations and PCಗಳಲ್ಲಿ ಉಪಯೋಗಿಸಲಾಗುತ್ತಿತ್ತು. ಜತೆಗೆ ಆರು ಮತ್ತು ಎಂಟು-ಗುಂಪಿನ ಪ್ರೊಸೆಸರ್ಗಳು ಮನೆಯಲ್ಲಿ ಮತ್ತು ವೃತ್ತಿಪರ ಪರಿಸರದಲ್ಲಿನ ಉನ್ನತ ಅಪ್ಲಿಕೇಷನ್ಗಳಿಗೆ ದೊರೆಯುತ್ತಿದ್ದವು. Sun Microsystems Niagara ಮತ್ತು Niagara ೨ ಎನ್ನುವ ಎರಡು ಚಿಪ್ಗಳನ್ನು ಬಿಡುಗಡೆ ಮಾಡಿದ್ದು, ಎಂಟು-ಕೋರ್ ವಿನ್ಯಾಸದ ಲಕ್ಷಣಗಳನ್ನು ಹೊಂದಿದ್ದವು. Niagara ೨ ಚಿಪ್ ಬಹಳ ವಿಷಯಗಳನ್ನು ಬೆಂಬಲಿಸುತ್ತಿತ್ತು ಮತ್ತು ೧.೬ GHz ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿತ್ತು. LGA೭೭೧ ಅಧಾರದ ಮೇಲಿದ್ದ ಉತ್ತಮ Intel Xeon ಪ್ರೊಸೆಸರ್ಗಳು DP (ಡ್ಯುಯಲ್ ಪ್ರೊಸೆಸರ್) ಸಾಮರ್ಥ್ಯದವಾಗಿದ್ದವು ಮತ್ತು Intel Core ೨ Extreme QX೯೭೭೫ ನ್ನು Apple ಮತ್ತು Intel Skulltrail ಮದರ್ ಬೋರ್ಡ್ನ Mac Pro ದಲ್ಲಿ ಬಳಸಲಾಗಿತ್ತು. LGA೧೩೬೬ ಸಾಕೆಟ್ ಮತ್ತು Intel i೭ ಚಿಪ್ನ ಬದಲಾವಣೆಯೊಂದಿಗೆ ಕ್ವಾಡ್ ಕೋರನ್ನು ಮುಖ್ಯವಾಹಿನಿ ಎಂದು ಪರಿಗಣಿಸಲಾಗುತ್ತಿತ್ತು ಮತ್ತು ಮುಂಬರುವ i೯ ಚಿಪ್ಗಳು ಆರು ಮತ್ತು ಸಾಮಾನ್ಯವಾಗಿ ಡ್ಯುಯಲ್-ಡೈ ಹೆಕ್ಸ್-ಕೋರ್ (೧೨-ಕೋರ್) ಪ್ರೊಸೆಸರ್ಗಳಲ್ಲಿ ಪರಿಚಯಿಸಲಾಗುತ್ತದೆ.
೧೯೮೦ರ ಮಧ್ಯ ಭಾಗದಿಂದ ೧೯೯೦ರ ಮೊದಲ ಭಾಗದವರೆಗೆ ಒಂದು ರೀತಿಯ ಹೊಸದಾದ ಉನ್ನತ ಕಾರ್ಯವೈಖರಿಯ ರೆಡ್ಯೂಸ್ಡ್ ಇನ್ಸ್ಟ್ರಕ್ಷನ್ ಸೆಟ್ ಕಂಪ್ಯೂಟರ್ (RISC) ಮೈಕ್ರೊಪ್ರೊಸೆಸರ್ಗಳು ಹೊರಬಂದವು ಮತ್ತು ಅವು IBM 801 ಮತ್ತು ಇತರ ಪ್ರತ್ಯೇಕವಾದ RISC ಮಾದರಿಯ CPU ವಿನ್ಯಾಸಗಳಿಂದ ಪ್ರಭಾವಿತಗೊಂಡಿದ್ದವು. ಮೊದಮೊದಲು RISC ಮೈಕ್ರೊಪ್ರೊಸೆಸರ್ಗಳನ್ನು ವಿಶೇಷ-ಉದ್ಧೇಶಿತ ಯಂತ್ರಗಳಲ್ಲಿ ಮತ್ತು Unix workstation ಗಳಲ್ಲಿ ಬಳಸಲಾಗಿತ್ತು, ಆದರೆ ಇತರ ಪಾತ್ರಗಳಲ್ಲಿಯೂ ತನ್ನ ವಿಸ್ತಾರವಾದ ಒಪ್ಪಿಗೆಯನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ೧೯೮೬ರಲ್ಲಿ HP ಯು PA-RISC CPU ಒಳಗೊಂಡ ತನ್ನ ಮೊದಲ ಕಂಪ್ಯೂಟರನ್ನು ಬಿಡುಗಡೆ ಮಾಡಿತು. ಮೊದಲ ವಾಣೀಜ್ಯೀಕೃತ ಮೈಕ್ರೊಪ್ರೊಸೆಸರ್ ವಿನ್ಯಾಸವನ್ನು MIPS Computer Systems ನ ೩೨-ಬಿಟ್ R2000 (R೧೦೦೦ ಬಿಡುಗಡೆಯಾಗಲಿಲ್ಲ), ಅಥವಾ Acorn computers ನ ೩೨-ಬಿಟ್ ARM2 ೧೯೮೭ರಲ್ಲಿ ಬಿಡುಗಡೆಗೊಳಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] R೩೦೦೦ ವಿನ್ಯಾಸವನ್ನು ಸಂಪೂರ್ಣವಾಗಿ ಪ್ರಾಯೋಗಿಕವನ್ನಾಗಿಸಿತು ಮತ್ತು R4000 ವಿಶ್ವದ ಮೊದಲ ವಾಣೀಜ್ಯಾತ್ಮಕವಾಗಿ ದೊರೆಯಬಹುದಾದ ೬೪-ಬಿಟ್ RISC ಮೈಕ್ರೊಪ್ರೊಸೆಸರ್ಗಳನ್ನು ಪರಿಚಯಿಸಿತು. ಕಂಪ್ಯೂಟಿಂಗ್ ಪ್ರಾಜೆಕ್ಟ್ಗಳು IBM POWER ಮತ್ತು Sun SPARC ವಿನ್ಯಾಸಗಳಲ್ಲಿ ಫಲಿತಾಂಶ ದೊರಕಿಸಿಕೊಟ್ಟವು. ತಕ್ಷಣವೇ ಪ್ರತಿಯೊಬ್ಬ ಪ್ರಮುಖ ವ್ಯಾಪಾರಿಯೂ AT&T CRISP, AMD 29000, Intel i860 ಮತ್ತು Intel i960, Motorola 88000, DECನ Alpha ಎನ್ನುವ RISC ವಿನ್ಯಾಸವನ್ನು ಬಿಡುಗಡೆಗೊಳಿಸಲು ಆರಂಭಿಸಿದರು. ೨೦೦೭ರಲ್ಲಿ ಎರಡು ೬೪-ಬಿಟ್ RISC ವಿನ್ಯಾಸಗಳನ್ನು SPARC and Power ISA ಎಂಬ ನಾನ್-ಎಂಬೆಡೆಡ್ ಅಪ್ಲಿಕೇಷನ್ಗಳಿಗಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿತ್ತು.
ಮೈಕ್ರೋಪ್ರೊಸೆಸರ್ ಪದವು ಸಾಂಪ್ರದಾಯಿಕವಾಗಿ ಸಿಂಗಲ್ - ಅಥವಾ ಬಹು- ಚಿಪ್ನ CPU ಅಥವಾ ೦}ಸಿಸ್ಟಂ-ಆನ್-ಎ-ಚಿಪ್ (SoC)ಗಳನ್ನು ಆಧಾರಿಸಿದೆ , ಈ ತಂತ್ರಜ್ಞಾನವು ಹಲವಾರು ವಿಧದ ವೈಶಿಷ್ಟ್ಯಪೂರ್ಣ ಪ್ರೊಸೆಸಿಂಗ್ ಡಿವೈಸ್ಗಳಿಗೆ ಕಾರಣವಾಗಿದೆ. ಇದಕ್ಕೆ ಅತಿ ಸಾಮಾನ್ಯವಾದ ಉದಾಹರಣೆಗಳೆಂದರೆ ಮೈಕ್ರೋಕಂಟ್ರೋಲರ್ಗಳು, ಡಿಜಿಟಲ್ ಸಿಗ್ನಲ್ ಪ್ರೊಸೆಸರ್ಗಳು (DSP) ಮತ್ತು ಗ್ರಾಫಿಲ್ ಪ್ರೊಸೆಸಿಂಗ್ ಯುನಿಟ್ಗಳು (GPU). ಇದರ ಬಹಳಷ್ಟು ಉದಾಹರಣೆಗಳು ಪ್ರೋಗ್ರಾಮಬಲ್ ಆಗಿರುವುದಿಲ್ಲ ಅಥವಾ ಸೀಮಿತ ಪ್ರೋಗ್ರಾಮಿಂಗ್ ಸೌಲಭ್ಯಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ೧೯೯೦ರಿಂದಲೂ ಸಾಮಾನ್ಯವಾಗಿ GPUಗಳು ಹೆಚ್ಚಾಗಿ ಪ್ರೋಗ್ರಾಮಬಲ್ ಆಗಿರುವುದಿಲ್ಲ ಮತ್ತು ಇತ್ತೀಚೆಗಷ್ಟೆ ಪ್ರೋಗ್ರಾಮಬಲ್ ವರ್ಟೆಕ್ಸ್ ಶೇಡರ್ನಂತಹ ಸೀಮಿತ ಸೌಲಭ್ಯಗಳನ್ನು ಪಡೆದುಕೊಂಡಿರುತ್ತವೆ ಮೈಕ್ರೋಪ್ರೊಸೆಸರ್ ಮಿತಿ ನಿರ್ಧಾರಕ್ಕೆ ಸಾರ್ವತ್ರಿಕ ಸಮ್ಮತಿ ಇಲ್ಲ, ಆದರೆ ಇದು ವಾಡಿಕೆಯಂತೆ ಅದನ್ನು ಒಪ್ಪಿಕೊಳ್ಳುವುದು ಸುರಕ್ಷಿತ, ಆ ಪದವು ಒಂದು ವಿಧದ ಸಾಮಾನ್ಯ-ಉದ್ದೇಶದ CPU ಮತ್ತು ವಿಶೇಷ-ಉದ್ದೇಶದ ಪ್ರೊಸೆಸರ್ಅನ್ನು ಸೂಚಿಸುತ್ತದೆ
This article uses citations that link to broken or outdated sources. (September 2009) |
೨೦೦೩ರಲ್ಲಿ, ಸುಮಾರು $೪೪ ಬಿಲಿಯನ್ (USD) ಮೊತ್ತದ ಮೈಕ್ರೊಪ್ರೊಸೆಸರ್ಗಳು ತಯಾರಿಸಲ್ಪಟ್ಟವು ಹಾಗೂ ಮಾರಾಟವಾದವು.[೨೨] ಅದರ ಅರ್ಧದಷ್ಟು ಹಣವನ್ನು ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ಪರ್ಸನಲ್ ಕಂಪ್ಯೂಟರ್ಗಳಲ್ಲಿ ಬಳಸುವ CPUಗಳಿಗೆ ವ್ಯಯಿಸಲಾಯಿತು, ಅದು ಒಟ್ಟು ಮಾರಾಟವಾದ CPUಗಳಲ್ಲಿ ೦.೨% ರಷ್ಟಕ್ಕೆ ಮಾತ್ರ ಬಳಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ವಿಶ್ವದಾದ್ಯಂತ ಮಾರಾಟವಾಗುವ ೫೫% CPUಗಳು 8-ಬಿಟ್ ಮೈಕ್ರೋ ಕಂಟ್ರೋಲರ್ಗಳು , ೧೯೯೭ರಲ್ಲಿ ಸುಮಾರು ಎರಡು ಬಿಲಿಯನ್ ಮಾರಾಟವಾದವು.[೨೩] As of ೨೦೦೨, less than ೧೦% of all the CPUs sold in the world are 32-bit or more. ೨೦೦೨ರ ಸಮಯದಲ್ಲಿ ಮಾರಾಟವಾದ ೧೦% ಗಿಂತಲೂ ಮಾರಾಟವಾದ ಎಲ್ಲ ೩೨-ಬಿಟ್ CPUಗಳಲ್ಲಿ ಸುಮಾರು ೨%ರಷ್ಟು ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ಪರ್ಸನಲ್ ಕಂಪ್ಯೂಟರ್ಗಳಲ್ಲಿ ಬಳಸಲಾಗಿತ್ತು. ಬಹಳಷ್ಟು ಮೈಕ್ರೋಪ್ರೊಸೆಸರ್ಗಳನ್ನು, ಮನೆಬಳಕೆಯ ಅಪ್ಲೈಯನ್ಸಸ್, ಆಟೋಮೊಬೈಲ್ಗಳು ಮತ್ತು ಕಂಪ್ಯೂಟರ್ ಪೆರಿಫೆರಲ್ ಗಳಂತಹ ಎಂಬೆಡೆಡ್ ಕಂಟ್ರೋಲ್ ಅಪ್ಲಿಕೇಷನ್ಗಳಲ್ಲಿ ಬಳಸಲಾಗುತ್ತದೆ. Taken as a whole, the average price for a microprocessor, microcontroller, or DSP is just over $೬.[೨೪] ಒಟ್ಟಾರೆಯಾಗಿ ಮೈಕ್ರೋಪ್ರೊಸೆಸರ್, ಮೈಕ್ರೊ ಕಂಟ್ರೋಲರ್, ಅಥವಾ ೨೦೦೮ರಲ್ಲಿ ಸುಮಾರು ೧೦ ಬಿಲಿಯನ್ಗಳಷ್ಟು CPUಗಳು ಉತ್ಪಾದಿಸಲ್ಪಟ್ಟವು ಸುಮಾರು ೯೮%ರಷ್ಟು ಹೊಸ CPUಗಳು ಪ್ರತಿವರ್ಷ ಉತ್ಪಾದಿಸಲ್ಪಡುತ್ತವೆ. [೨೫]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.