From Wikipedia, the free encyclopedia
ಭಾರತೀಯ ರೂಪಾಯಿ ಚಿಹ್ನೆ (₹) ಭಾರತದ ಅಧಿಕೃತ ಕರೆನ್ಸಿಯಾದ ಭಾರತೀಯ ರೂಪಾಯಿಗೆ ಕರೆನ್ಸಿ ಸಂಕೇತವಾಗಿದೆ.
₹ | |
---|---|
ಭಾರತೀಯ ರೂಪಾಯಿ ಚಿಹ್ನೆ | |
ಯೂನಿಕೋಡ್ನಲ್ಲಿ | U+20B9 ₹ <RESERVED-20B9> |
Currency | |
ಚಲಾವಣೆಯ ನಾಣ್ಯ | ಭಾರತದ ರೂಪಾಯಿ |
ಸಂಬಂಧಿತ | |
ಸಹ ನೋಡಿ | generic U+20A8 ₨ <RESERVED-20A8> (ಶ್ರೀಲಂಕಾ, ಪಾಕಿಸ್ತಾನ ಮತ್ತು ನೇಪಾಳ) |
ವರ್ಗ |
ರೂಪಾಯಿ (ಚಿಹ್ನೆ: ₹) ಭಾರತ, ಶ್ರೀಲಂಕಾ, ನೇಪಾಳ, ಪಾಕಿಸ್ತಾನ, ಮಾರಿಷಸ್, ಸೆಷೆಲ್ಸ್ ಮತ್ತು ಇಂಡೊನೇಷಿಯ ದೇಶಗಳಲ್ಲಿ ಬಳಸಲಾಗುವ ನಗದು ವ್ಯವಸ್ಥೆಗಳ ಹೆಸರು. ಇದು ಸಂಸ್ಕೃತ ಮೂಲದ ರೂಪ್ಯಕಮ್ ಪದದಿಂದ ಬಂದಿದೆ.
ಹೊಸ ಚಿಹ್ನೆಯು ದೇವನಾಗರಿ ಅಕ್ಷರ "र" ("ರಾ") ಮತ್ತು ಲ್ಯಾಟಿನ್ ದೊಡ್ಡಕ್ಷರ "R" ಅನ್ನು ಅದರ ಲಂಬ ಪಟ್ಟಿಯಿಲ್ಲದೆ (ಆರ್ ರೊಟುಂಡಾ "Ꝛ" ಗೆ ಹೋಲುತ್ತದೆ) ಸಂಯೋಜನೆಯಾಗಿದೆ. ಮೇಲ್ಭಾಗದಲ್ಲಿರುವ ಸಮಾನಾಂತರ ರೇಖೆಗಳು (ಅವುಗಳ ನಡುವೆ ಬಿಳಿ ಜಾಗವನ್ನು ಹೊಂದಿರುವ) ತ್ರಿವರ್ಣ ಭಾರತೀಯ ಧ್ವಜವನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡುವ ರಾಷ್ಟ್ರದ ಬಯಕೆಯನ್ನು ಸಂಕೇತಿಸುವ ಸಮಾನತೆಯ ಚಿಹ್ನೆಯನ್ನು ಸಹ ಚಿತ್ರಿಸುತ್ತದೆ.
ಮುಂಬಯಿ ಐಐಟಿಯ ಸ್ನಾತಕೋತ್ತರ ವಿದ್ಯಾರ್ಥಿ ಡಿ.ಉದಯಕುಮಾರ್, ರಚಿಸಿದ ಹೊಸ ಸಂಕೇತ ಚಿಹ್ನೆ ಯನ್ನು ಕೆಂದ್ರ ಸಂಪುಟ ಗುರುವಾರ ಅಂಗೀಕರಿಸುವ ಮೂಲಕ ಭಾರತೀಯ ರೂಪಾಯಿಗೆ ಕೊನೆಗೂ 'ಚಿಹ್ನೆಧಾರಣೆ'ಯಾಗಿದೆ. ಭಾರತೀಯ ರೂಪಾಯಿಗೆ ಚಿಹ್ನೆ ಹೊಂದಿಸುವ ಪ್ರಕ್ರಿಯೆ ವರ್ಷದ ಹಿಂದೆಯೇ ಪ್ರಾರಂಭವಾಗಿತ್ತು.
ಭಾರತ ಸರ್ಕಾರದ ಹಣಕಾಸು ಸಚಿವಾಲಯ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ ಅಂತಿಮವಾಗಿ ₹ ಚಿಹ್ನೆಯನ್ನು ಭಾರತ ಸರ್ಕಾರದ ಅಂಡರ್ ಸೆಕ್ರೆಟರಿ ಸುಶೀಲ್ ಕುಮಾರ್ ಅನುಮೋದನೆ ನೀಡಿದರು.[1]
೧೦ ಆಗಸ್ಟ್ ೨೦೧೦ ರಂದು, ಯುನಿಕೋಡ್ ತಾಂತ್ರಿಕ ಸಮಿತಿಯು ಪ್ರಸ್ತಾವಿತ ಕೋಡ್ ಸ್ಥಾನವನ್ನು U+20B9 ₹ <RESERVED-20B9> (ಚಿತ್ರ: ) ಭಾರತೀಯ ರೂಪಾಯಿ ಚಿಹ್ನೆಯನ್ನು ಸ್ವೀಕರಿಸಿತು.[2]
ಪೂರ್ವನಿಯೋಜಿತವಾಗಿ ಭಾರತೀಯ ರೂಪಾಯಿ ಚಿಹ್ನೆಯನ್ನು ಬೆಂಬಲಿಸಿದ ಮೊದಲ ಕಾರ್ಯಾಚರಣಾ ವ್ಯವಸ್ಥೆ ಉಬುಂಟು. ಅದರ ೧೦.೧೦ ಆವೃತ್ತಿಯಿಂದ ಇದು ಉಬುಂಟು ಫಾಂಟ್ ಕುಟುಂಬಕ್ಕೆ ಕೊಡುಗೆದಾರರಿಂದ ಸೇರಿಸಲ್ಪಟ್ಟಂತೆ, ಚಿಹ್ನೆಯನ್ನು ಬೆಂಬಲಿಸಿದೆ.[3] ಅಂದಿನಿಂದ, ಇದನ್ನು ವಿವಿಧ ಜಿಯನ್ಯು / ಲಿನಕ್ಸ್ ವಿತರಣೆಗಳಲ್ಲಿ ಸೇರಿಸಲಾಗಿದೆ.
೧೮ ಮೇ ೨೦೧೧ ರಂದು, ಮೈಕ್ರೋಸಾಫ್ಟ್ ಈ ಹೊಸ ಭಾರತೀಯ ರೂಪಾಯಿ ಚಿಹ್ನೆಗೆ ಬೆಂಬಲವನ್ನು ಸೇರಿಸಲು ವಿಂಡೋಸ್ ವಿಸ್ಟಾ, ವಿಂಡೋಸ್ ಸರ್ವರ್ ೨೦೦೮, ವಿಂಡೋಸ್ ೭ ಮತ್ತು ವಿಂಡೋಸ್ ಸರ್ವರ್ ೨೦೦೮ ಆರ್ ೨ ಆಪರೇಟಿಂಗ್ ಸಿಸ್ಟಂಗಳಿಗೆ ಕೆಬಿ ೨೪೯೬೮೯೮ ನವೀಕರಣವನ್ನು ಬಿಡುಗಡೆ ಮಾಡಿತು. ವಿಂಡೋಸ್ ಅಪ್ಡೇಟ್ನೊಂದಿಗೆ, ಭಾರತೀಯ ರೂಪಾಯಿ ಚಿಹ್ನೆ(₹) - Alt+8377 ಪಡೆಯಲು ಆಲ್ಟ್ ಕೋಡ್ ಟೆಕ್ಸ್ಟ್ ಎಂಟ್ರಿ ಬಳಸಲು ಈಗ ಸಾಧ್ಯವಿದೆ. ವಿಂಡೋಸ್ ೮ ಚಾಲನೆಯಲ್ಲಿರುವ ಸಿಸ್ಟಮ್ಗಳಲ್ಲಿ, Alt Gr+4 ಕೀ ಸಂಯೋಜನೆಯೊಂದಿಗೆ ಇಂಗ್ಲಿಷ್ (ಇಂಡಿಯಾ) ಕೀಬೋರ್ಡ್ ವಿನ್ಯಾಸವನ್ನು ಬಳಸಿಕೊಂಡು ಚಿಹ್ನೆಯನ್ನು ಟೈಪ್ ಮಾಡಬಹುದು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.