ಬೀಟೆ
From Wikipedia, the free encyclopedia
From Wikipedia, the free encyclopedia
ಬೀಟೆ (Rose wood)ಅತ್ಯುತ್ತಮ ಜಾತಿಯ ಮರಗಳಲ್ಲಿ ಒಂದು.ಶ್ರೀಗಂಧವನ್ನು ಬಿಟ್ಟರೆ ಅತ್ಯಂತ ಬೆಲೆಬಾಳುವ ಮರವಾಗಿದೆ.
ಇದು ಫೆಬೇಸಿಯೆ(Fabaceae)ಕುಟುಂಬದಲ್ಲಿದೆ.ಡಾಲ್ಬರ್ಜಿಯ(Dalbergia)ವರ್ಗದಲ್ಲಿ ಹಲವಾರು ಪ್ರಭೇದಗಳಿದ್ದು, ಡಾಲ್ಬರ್ಜಿಯ ಸಿಸ್ಸೂ ಮತ್ತು ಡಾಲ್ಬರ್ಜಿಯ ಲ್ಯಾಟಿಫೊಲಿಯ (Dalbergia sissoo And Dalbergia latifolia) ಎಂಬ ಎರಡು ಪ್ರಭೇದಗಳನ್ನಷ್ಟೇ ಬೀಟೆ ಎನ್ನಬಹುದು.
ಬೀಟೆ ಒಂದು ಪರ್ಣಪಾತಿ ಮರ.ಕರ್ನಾಟಕದಲ್ಲಿ ಸುಮಾರು ೧೦೦ ರಿಂದ ೨೦೦ ಸೆ.ಮೀ.ಮಳೆಯಾಗುವ ಪ್ರದೇಶದಲ್ಲಿ ಕಂಡು ಬರುತ್ತದೆ.ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣ ವೃಕ್ಷವಾಗಿರುತ್ತದೆ.ಹಳದಿ ಮಿಶ್ರಿತ ಬಿಳಿಯ ಬಣ್ಣದ ಹೂ ಬಿಡುವುದು.ಇದರ ದಾರುವು ಗಡಸಾಗಿದ್ದು,ಬಲಯತವಾಗಿದೆ.ತಿರುಳು ಕರಿನೇರಳೆ ಬಣ್ಣದ್ದಾಗಿ ಕರಿಗೆರೆಗಳೊಂದಿಗೆ ಅತ್ಯಂತ ಅಂದವಾಗಿರುತ್ತದೆ. ಉತ್ತಮವಾಗಿ ಹೊಳಪಿಗೆ ಬರುತ್ತದೆ.
ಔಷಧೀಯ ಉಪಯೋಗಗಳು ಜ್ವರ - ಒಂದು ಚಮಚ ತೊಗಟೆಯ ಚೂರ್ಣವನ್ನು ಒಂದು ಲೋಟ ನೀರಿಗೆ ಮಿಶ್ರ ಮಾಡಿ ೫ ನಿಮಿಷ ಕುದಿಸಿ ಟೀ ತಯಾರಿಸಿ, ಸ್ವಲ್ಪ ಜೇನುತುಪ್ಪ ಸೇರಿಸಿ ಸೇವಿಸಬೇಕು.(ದಿನಕ್ಕೆ ೩ ಬಾರಿ) ಚರ್ಮರೋಗದಲ್ಲಿ ಇದರ ಸಾರಭಾಗವನ್ನು(Heartwood)ನೀರಿನಲ್ಲಿ ಅರೆದು ಲೇಪವನ್ನುಮಾಡುತ್ತಾರೆ.
ಬೀಟೆ ಬಹುಕಾಲ ಬಾಳಿಕೆ ಬರುವ ಮರ.ಇದು ಕೆತ್ತನೆ ಕೆಲಸಗಳಿಗೆ, ಫಲಕಗಳ ತಯಾರಿಕೆಗೆ,ಬಿತ್ತಿಫಲಕಗಳು ಇತ್ಯಾದಿಗಳಲ್ಲಿ ಉಪಯೋಗಿಸಲ್ಪಡುತ್ತದೆ.ಇದರ ತೆಳು ಹಾಳೆಗಳು (Veeners)ಅತ್ಯಂತ ಬೇಡಿಕೆಯ ವಸ್ತುವಾಗಿದೆ.ಇತ್ತೀಚೆಗೆ ಒಳಾಂಗಣ ಅಲಂಕಾರದಲ್ಲಿ ಹೆಚ್ಚಾಗಿ ಉಪಯೋಗದಲ್ಲಿದೆ.
೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.