From Wikipedia, the free encyclopedia
ಬಾದಾಮಿಯು (ಸಕ್ಕರೆಬಾದಾಮಿ) ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಏಷಿಯಾ ಪ್ರದೇಶದ ಒಂದು ಜಾತಿಯ ಮರ. ಇದು ಸುಮಾರು ೩೦ ಅಡಿ ಎತ್ತರಕ್ಕೆ ಸಮನಾಗಿ ಹರಡಿಕೊಂಡು ಬೆಳೆಯುವ ಮರ. ಅಲಂಕಾರಿಕ ಮತ್ತು ನೆರಳಿನ ಗಿಡವಾಗಿಯೂ ಬೆಳೆಯಲ್ಪಡುತ್ತದೆ. ಬಾದಾಮಿಯು ಖಾದ್ಯ ಮತ್ತು ವ್ಯಾಪಕವಾಗಿ ಬೆಳೆಯುವ ಈ ಮರದ ಬೀಜದ ಹೆಸರು ಕೂಡ ಆಗಿದೆ.
ರೋಸೇಸಿಯೆ ಕುಟುಂಬಕ್ಕೆ ಸೇರಿದ ಮರ. ಪ್ರುನಸ್ ಅಮಿಗ್ಡಾಲಸ್ ವೈಜ್ಞಾನಿಕ ಹೆಸರು.
ಪಶ್ಚಿಮ ಏಷ್ಯದಲ್ಲಿ-ಹೆಚ್ಚಾಗಿ ಕಾಶ್ಮೀರ, ಪಂಜಾಬ್, ಆಫ್ಘಾನಿಸ್ತಾನ ಮುಂತಾದ ತಂಪು ಪ್ರದೇಶಗಳಲ್ಲಿ-ಸಮೃದ್ಧವಾಗಿ ಬೆಳೆಯುತ್ತದೆ.
ಸಿಹಿಬಾದಾಮಿಯಲ್ಲಿ ಶೇ. 56 ಭಾಗ ಎಣ್ಣೆ ದೊರೆಯುತ್ತದೆ-ಮುಖ್ಯವಾಗಿ ಆಲ್ಬ್ಯುಮಿನ್ ದ್ರವ್ಯ. ಇದು ನೀರಿನಲ್ಲಿ ಲೀನಿಸುತ್ತದೆ. ಹುದುಗುಹಾಕಿದ ಎಮಲ್ಷನ್ನಿನಲ್ಲಿ ಸೇಕಡಾ 3 ಲೋಳೆಸರ, ಶೇಕಡಾ 6 ಸಕ್ಕರೆ, ಸೇಕಡಾ 18.58 ಸಾರಜನಕ ದ್ರವ್ಯಗಳು ಮತ್ತು ಶೇಕಡಾ 3-5 ಬೂದಿ ಇವೆ. ಉಳಿದದ್ದು ನಿರುಪಯುಕ್ತ ಚರಟ.
ಸಿಹಿಬಾದಾಮಿ ಮರದ ತೊಗಟೆ ಮತ್ತು ಪಕ್ವವಾದ ಬೀಜಗಳು ಬಲು ಉಪಯುಕ್ತ ಪದಾರ್ಥಗಳು. ಇದರ ಕಾಯಿ ತಿನ್ನಲು ಉಪಯೋಗಿಸುವ, ಅಡಿಗೆಗೆ ಉಪಯೋಗಿಸುವ ಒಂದು ಬೀಜ. ಸಕ್ಕರೆಬಾದಾಮಿ ಬೀಜವನ್ನು ಹಸಿಯಾಗಿ ತಿನ್ನಬಹುದು. ಔಷಧ ಪದಾರ್ಥವಾಗಿಯೂ ಸೇವಿಸಬಹುದು. ಬಾದಾಮಿ ಮರಗಳು ಎರಡು ರೀತಿಯ ಕಾಯಿಯನ್ನು ಕೊಡುತ್ತವೆ. ಒಂದು ಸಿಹಿಯಾಗಿದ್ದರೆ ಇನ್ನೊಂದು ಕಹಿ ಕಾಯಿಯನ್ನು ಕೊಡುತ್ತವೆ.[1][2] ಸಿಹಿ ಕಾಯಿಗಳನ್ನು ವಿಶೇಷವಾಗಿ ಸಿಹಿತಿನಿಸುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಕಹಿಬಾದಾಮಿಯೂ ಉಂಟು. ಇದರ ತೈಲಕ್ಕೆ ಔಷಧೀಯ ಗುಣವಿದೆ. ಬಾದಾಮಿ ಕಾಯಿಗಳನ್ನು ಎಣ್ಣೆ ತೆಗೆಯಲೂ ಉಪಯೋಗಿಸುತ್ತಾರೆ.
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz) | |
---|---|
ಆಹಾರ ಚೈತನ್ಯ | 2,408 kJ (576 kcal) |
ಶರ್ಕರ ಪಿಷ್ಟ | 21.69 g |
- ಪಿಷ್ಟ | 0.74 g |
- ಸಕ್ಕರೆ | 3.89 g |
- ಲಾಕ್ಟೋಸ್ | 0.00 g |
- ಆಹಾರ ನಾರು | 12.2 g |
ಕೊಬ್ಬು | 49.42 g |
ಪರಿಷ್ಕರಿಸಿದ ಕೊಬ್ಬು | 3.731 g |
ಏಕಪರ್ಯಾಪ್ತ ಕೊಬ್ಬು | 30.889 g |
ಬಹುಪರ್ಯಾಪ್ತ ಕೊಬ್ಬು | 12.070 g |
ಪ್ರೋಟೀನ್(ಪೋಷಕಾಂಶ) | 21.22 g |
- Tryptophan | 0.214 g |
- Threonine | 0.598 g |
- Isoleucine | 0.702 g |
- Leucine | 1.488 g |
- Lysine | 0.580 g |
- Methionine | 0.151 g |
- Cystine | 0.189 g |
- Phenylalanine | 1.120 g |
- Tyrosine | 0.452 g |
- Valine | 0.817 g |
- Arginine | 2.446 g |
- Histidine | 0.557 g |
- Alanine | 1.027 g |
- Aspartic acid | 2.911 g |
- Glutamic acid | 6.810 g |
- Glycine | 1.469 g |
- Proline | 1.032 g |
- Serine | 0.948 g |
ನೀರು | 4.70 g |
ವಿಟಮಿನ್ ಎ | 1 IU |
- beta-carotene | 1 μg (0%) |
- lutein and zeaxanthin | 1 μg |
Thiamine (vit. B1) | 0.211 mg (18%) |
Riboflavin (vit. B2) | 1.014 mg (85%) |
Niacin (vit. B3) | 3.385 mg (23%) |
Pantothenic acid (B5) | 0.469 mg (9%) |
Vitamin B6 | 0.143 mg (11%) |
Folate (vit. B9) | 50 μg (13%) |
Choline | 52.1 mg (11%) |
ವಿಟಮಿನ್ ಇ | 26.2 mg (175%) |
ವಿಟಮಿನ್ ಕೆ | 0.0 μg (0%) |
ಕ್ಯಾಲ್ಸಿಯಂ | 264 mg (26%) |
ಕಬ್ಬಿಣ ಸತ್ವ | 3.72 mg (29%) |
ಮೆಗ್ನೇಸಿಯಂ | 268 mg (75%) |
ಮ್ಯಾಂಗನೀಸ್ | 2.285 mg (109%) |
ರಂಜಕ | 484 mg (69%) |
ಪೊಟಾಸಿಯಂ | 705 mg (15%) |
ಸೋಡಿಯಂ | 1 mg (0%) |
ಸತು | 3.08 mg (32%) |
Link to USDA Database entry Percentages are roughly approximated using US recommendations for adults. Source: USDA Nutrient Database |
ಕ್ಯಾಲಿಫೋರ್ನಿಯಾ, ಸ್ಯಾನ್ಫ್ರಾನ್ಸಿಸ್ಕೊ, ಮಧ್ಯ ಕಣಿವೆ, ದಕ್ಷಿಣ ಕಣಿವೆ ಪ್ರಾಂತ್ಯಗಳ ಬಾದಾಮಿ ಬೆಳೆಗಾರರು ಎಂದಿಗೂ ಬರಕ್ಕೆ ಜಗ್ಗಿಲ್ಲ. ಕ್ಯಾಲಿಫೋರ್ನಿಯಾದ ವಾರ್ಷಿಕ ಸರಾಸರಿ ಮಳೆ ಪ್ರಮಾಣ 250 ರಿಂದ 400 ಮಿ.ಮೀ. ಅದು ಕೂಡ ಅನಿಶ್ಚಿತ. ಹಾಗಾಗಿ, ಬಾದಾಮಿ ಬೆಳೆಗಾರರು ಮಳೆಯ ನೀರಿನ ಜೊತೆಗೆ ದೂರದಲ್ಲಿರುವ ಸೆರೆನಾ ನೆವಡಾ ಎಂಬ ಹಿಮಬೆಟ್ಟದಲ್ಲಿ ಕರಗುವ ಮಂಜುಗಡ್ಡೆಗಳ ನೀರನ್ನೇ ಅವಲಂಬಿಸಿದ್ದಾರೆ. ಮಂಜಿನ ನೀರನ್ನು ಕಿರು ಜಲಾಶಯಗಳಿಗೆ ತುಂಬಿಸಿ, ಕಾಲುವೆಗಳ ಮೂಲಕ ತೋಟಕ್ಕೆ ಹರಿಸಿ, ತುಂತುರು, ಹನಿ ನೀರಾವರಿ ಮೂಲಕ ಬಾದಾಮಿ ಗಿಡಗಳಿಗೆ ಪೂರೈಸುತ್ತಾರೆ. ಲಭ್ಯ ನೀರನ್ನೇ ಮಿತವಾಗಿ ಬಳಸುತ್ತ ಭರಪೂರ ಬಾದಾಮಿ ಬೆಳೆಯುತ್ತಿದ್ದಾರೆ. ನೀರಿನ ಕೊರತೆ ನಡುವೆಯೂ ಪ್ರತಿ ವರ್ಷ ಬಾದಾಮಿ ಬೆಳೆ ಕ್ಷೇತ್ರವನ್ನು ವಿಸ್ತರಿಸುತ್ತಿದ್ದಾರೆ. ಉತ್ಪಾದನೆಯನ್ನು ಕೂಡ ಹೆಚ್ಚಿಸುತ್ತಿದ್ದಾರೆ. ಜಗತ್ತಿನಲ್ಲಿ ಬಾದಾಮಿ ಉತ್ಪಾದನೆಯಲ್ಲಿ ಅಮೇರಿಕ ಮೊದಲ ಸ್ಥಾನದಲ್ಲಿದೆ. ಸುಮಾರು ೪.೫ ಲಕ್ಷ ಹೆಕ್ಟೇರಿನಲ್ಲಿ ೧.೪೧ ಮಿಲಿಯನ್ ಟನ್ ಬಾದಾಮಿ ಬೆಳೆ ತೆಗೆದು ಹಣದ ಹೊಳೆ ಹರಿಸಿದ್ದಾರೆ.
ರಾಜ್ಯದ 800 ಕಿ.ಮೀ ಉದ್ದದ 8.5 ಲಕ್ಷ ಎಕರೆ ಬಾದಾಮಿ ತೋಪಿನಲ್ಲಿ ಈ ವಿಧಾನ. ಹನಿ ನೀರಾವರಿಗೆ ಅಲ್ಲಿ ಸರ್ಕಾರ ಸಹಾಯಧನ ನೀಡುವುದಿಲ್ಲ. ಒಂದು ಬಾದಾಮಿ ಮರಕ್ಕೆ ವರ್ಷದಲ್ಲಿ 48 ಇಂಚು ಮಳೆ ನೀರಿನ ಅಗತ್ಯವಿದೆ. ಆದರೆ ಎಂದೆಂದೂ ಅಷ್ಟು ಮಳೆ ಬರುವುದಿಲ್ಲ. ಹೀಗಾಗಿ ಹಿಮಬೆಟ್ಟಗಳಿಂದ ಬರುವ ನೀರನ್ನೇ ಅವಲಂಬಿಸಿದ್ದಾರೆ. ಎಷ್ಟು ನೀರು ಲಭ್ಯವೋ ಅಷ್ಟನ್ನೇ ಮಿತ ಬಳಕೆಮಾಡಿ ಬಾದಾಮಿ ಬೆಳೆಯುತ್ತಿದ್ದಾರೆ.
ಪ್ರತಿ ಬಾದಾಮಿ ಮರಗಳ ನಡುವೆ ಹನಿ ನೀರಾವರಿ ಪೈಪ್ಗಳನ್ನು ಜೋಡಿಸುತ್ತಾರೆ. ಮರಗಳ ಬುಡದಲ್ಲೇ ಹನಿ ನೀರಾವರಿ ಪೈಪುಗಳು ಅಂತರ್ಗತವಾಗಿ (ಇನ್ ಲೈನ್) ಇರುತ್ತವೆ. ಮರಗಳ ಸಾಲಿನಲ್ಲಿ ಮುಚ್ಚಿಗೆ ಬೆಳೆ ಬೆಳೆಸಿದ್ದಾರೆ. ಈ ವಿಧಾನದಿಂದ ಗಿಡಗಳ ಬೇರಿಗೆ ನೇರವಾಗಿ ನೀರು ತಲುಪುತ್ತದೆ. ಮುಚ್ಚಿಗೆ ಬೆಳೆಗಳು ತೇವಾಂಶ ರಕ್ಷಿಸುವ ಜೊತೆಗೆ, ಮಣ್ಣಿಗೆ ಸಾರಜನಕ ಸ್ಥಿರೀಕರಿಸಿ, ಬೇರು ಗಟ್ಟಿಗೊಳಿಸುತ್ತವೆ’ ಎನ್ನುವುದು ಮಣ್ಣು ತಜ್ಞರ ಅಭಿಪ್ರಾಯ. ಈಗ(2014) ಅಮೆರಿಕದ ಕ್ಯಾಲಿಫೋರ್ನಿಯಾ ಬಾದಾಮಿ ಬೆಳೆಯ ವಾರ್ಷಿಕ ವಹಿವಾಟಿನಲ್ಲಿ ಶತಕೋಟಿ ಡಾಲರ್ಗಳ ಗಡಿ ದಾಟಿದೆ.
ಸುಮಾರು ೬೦,೦೦೦ ಟನ್ ಬಾದಾಮಿಯ ಶೇಕಡಾವಾರು.
ದೇಶದಿಂದ? | ಕವಚಸಹಿತ-ಪ್ರಮಾಣ(ಶೇಕಡಾ) | ಶಿ | ದೇಶದಿಂದ | ಕವಚ ರಹಿತ ಪ್ರಮಾಣ(ಶೇಕಡಾ) | |
---|---|---|---|---|---|
ಅಮೇರಿಕ | 81.3 | ಅಮೇರಿಕ | 33.7 | ||
ಆಸ್ಟ್ರೇಲಿಯ | 18.1 | ಇರಾನ್ | 33.9 | ||
ಆಫ್ಘಾನಿಸ್ತಾನ | 0.5 | ಆಫ್ಘಾನಿಸ್ತಾನ | 17.8 | ||
ಇತರೆ | 0.1 | ಸಿರಿಯಾ | 10.7 | ||
ಆಸ್ಟ್ರೇಲಿಯ | 3.2 | ||||
ಅಮೇರಿಕ | 84.1 | ಆಸ್ಟ್ರೇಲಿಯ | 4.9 | ||
ಯೂರೋಪ್ | 8.2 | ಚಿಲಿ | 0.9 | ||
ಟರ್ಕಿ | 1.5 | ಇತರೆ | 3.2 | ||
[3] || || || ಇತರೆ||0.7
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.