From Wikipedia, the free encyclopedia
ಪಾರ್ಸಿ ಅಥವಾ ಪಾರಸೀಯ ಅಥವಾ ಪಾರಸಿಕ ಭಾಷೆಯು- ಪ್ರಾಚೀನ ಪರ್ಷಿಯೆಯ ಈಗಿನ ಇರಾನಿನ ಒಂದು ಮುಖ್ಯ ಭಾಷೆ. ಇಂಡೋ-ಯೂರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಇಂಡೋ-ಇರಾನಿಯನ್ ಶಾಖೆಗೆ ಇದು ಸೇರುತ್ತದೆ.
Persian فارسی | ||
---|---|---|
ಉಚ್ಛಾರಣೆ: | IPA: ಟೆಂಪ್ಲೇಟು:IPA-fa | |
ಬಳಕೆಯಲ್ಲಿರುವ ಪ್ರದೇಶಗಳು: |
||
ಒಟ್ಟು ಮಾತನಾಡುವವರು: |
45 million (2007)[೬] – 60 million | |
ಭಾಷಾ ಕುಟುಂಬ: | Indo-European Indo-Iranian Iranian Western Iranian Southwestern Iranian Persian | |
ಬರವಣಿಗೆ: |
| |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: |
| |
ನಿಯಂತ್ರಿಸುವ ಪ್ರಾಧಿಕಾರ: |
| |
ಭಾಷೆಯ ಸಂಕೇತಗಳು | ||
ISO 639-1: | fa | |
ISO 639-2: | per (B) ಟೆಂಪ್ಲೇಟು:Infobox ಭಾಷೆ/terminological | |
ISO/FDIS 639-3: | variously: pes – Western Persian prs – Dari language (Afghan Persian) tgk – Tajiki aiq – Aimaq dialect bhh – Bukhori dialect haz – Hazaragi dialect jpr – Judeo-Persian phv – Pahlavani deh – Dehwari jdt – Judeo-Tat ttt – Caucasian Tat | |
Persian Language Location Map1.png|border | ||
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಪ್ರಾಚೀನ ಪರ್ಷಿಯದಲ್ಲಿದ್ದು ಆ ಕಾಲದ ಅಧಿಕೃತ ಭಾಷೆಗಳಲ್ಲೊಂದಾಗಿತ್ತು. ಅಂದಿನ ದೊರೆಗಳು ತಮ್ಮ ಶಾಸನಗಳಲ್ಲಿದ್ದನ್ನು ಉಪಯೋಗಿಸಿದ್ದಾರೆ. ಅಕಮೆನಿಡೇ ವಂಶದ ಶಾಸನಗಳಿಂದಲೇ ಇದರ ಸ್ವರೂಪ ನಮಗೆ ತಿಳಿದುಬರುತ್ತದೆ. ಹಾಗೆ ನೋಡಿದರೆ ಪಹ್ಲವಿ ಇದರ ಒಂದು ಮಾರ್ಪಟ್ಟ ರೂಪ. ಅಲೆಕ್ಸಾಂಡರ್ ಮಹಾಶಯನ ಆಡಳಿತದಲ್ಲಿ ಸ್ಥಗಿತಗೊಂಡ ಈ ಭಾಷೆ ಮಧ್ಯಕಾಲೀನ ಸಸೇನಿಯನ್ ದೊರೆಗಳ ಕಾಲದಲ್ಲಿ ಪುನಃ ಅಧಿಕೃತ ಭಾಷೆಯಾಗಿ ಮುಂದುವರೆಯಿತು. ಆಧುನಿಕ ಪಾರಸಿ ಈಗಿನ ಇರಾನಿ ಭಾಷೆಗಳಲ್ಲೆಲ್ಲ ಅತ್ಯಂತ ಪ್ರಮುಖವಾದ್ದು. ಈಗ ಇದು ತನ್ನ ಹಳೆಯ ಕುರುಹುಗಳನ್ನು ಸಂಪೂರ್ಣವಾಗಿ ತ್ಯಜಿಸಿ ಬೇರಾವು ಇಂಡೋ-ಯೂರೋಪಿಯನ್ ಭಾಷೆ ಮುಟ್ಟದಿರುವಂಥ ಪರಿಷ್ಕøತಾವಸ್ಥೆಯನ್ನು ಮುಟ್ಟಿ ಅತ್ಯಂತ ಸಮೃದ್ಧವಾಗಿ ಬೆಳೆದಿದೆ. ಇದರಲ್ಲಿ ಅರಬ್ಬಿ ಪದಗಳು ಈಗ ಹೇರಳವಾಗಿವೆ. ಲಿಪಿ ಅರಬ್ಬಿಯದಾಗಿದ್ದು ಕೊಂಚ ಮಟ್ಟಿಗೆ ಉರ್ದುವನ್ನು ಹೋಲುತ್ತದೆ.
ಅರಬ್ಬಿ, ತುರ್ಕಿ ಹಾಗೂ ಉರ್ದು ಭಾಷೆಗಳ ಮೇಲೆ ಪಾರಸಿ ಹೆಚ್ಚಿನ ಪ್ರಭಾವ ಬೀರಿದೆ. ಆಫ್ಘಾನಿಸ್ತಾನದಲ್ಲಿದು ರಾಷ್ಟ್ರೀಯ ಸಾಹಿತ್ಯಕ ಭಾಷೆ.
ರೂದಖೀ ಮತ್ತು ದಖೀಖಿ (ಕ್ರಿ. ಶ. ಹತ್ತನೆಯ ಶತಮಾನ)-ಇವರು ಪುರಾತನ ಪ್ರೌಢ ಪಾರಸಿ ಸಾಹಿತ್ಯದ ಪ್ರಸಿದ್ಧ ಕವಿಗಳು. ಘಜ್ನಿ ಮಹಮೂದನ ಆಸ್ಥಾನದಲ್ಲಿದ್ದ ಪಿರ್ದೂಸಿ ಕವಿಯ ಷಹಾನಾಮ ಈ ಭಾಷೆಯಲ್ಲಿಯ ಮಹಾಕಾವ್ಯ. ಇರಾನಿನಲ್ಲೇ ಅಲ್ಲದೆ ಇತರ ದೇಶಗಳಲ್ಲೂ ಪಾರಸಿ ಸಾಹಿತ್ಯ ಬೆಳೆದುಬಂತು. ಭಾರತ ಪಾರಸಿ ಸಾಹಿತ್ಯಕ್ಕೆ ಎರಡನೆಯ ತವರು.
Seamless Wikipedia browsing. On steroids.