ಭಾರತದ ನಾಗರಿಕ ಪ್ರಶಸ್ತಿ From Wikipedia, the free encyclopedia
ಪದ್ಮಶ್ರೀ ಕಲೆ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ.
ಪದ್ಮ ಶ್ರೀ (ಹಾಗೂ ಪದ್ಮಶ್ರೀ) | ||
![]() | ||
ಪ್ರಶಸ್ತಿಯ ವಿವರ | ||
---|---|---|
ಮಾದರಿ | ನಾಗರೀಕ | |
ವರ್ಗ | ರಾಷ್ಟ್ರೀಯ | |
ಪ್ರಾರಂಭವಾದದ್ದು | ೧೯೫೪ | |
ಮೊದಲ ಪ್ರಶಸ್ತಿ | ೧೯೫೪ | |
ಕಡೆಯ ಪ್ರಶಸ್ತಿ | ೨೦೧೩ | |
ಒಟ್ಟು ಪ್ರಶಸ್ತಿಗಳು | ೨೫೭೭ | |
ಪ್ರಶಸ್ತಿ ನೀಡುವವರು | ಭಾರತ ಸರ್ಕಾರ | |
ಪ್ರಶಸ್ತಿಯ ಶ್ರೇಣಿ | ||
ಪದ್ಮಭೂಷಣ ← ಪದ್ಮ ಶ್ರೀ (ಹಾಗೂ ಪದ್ಮಶ್ರೀ) → none |
ಪದ್ಮಶ್ರೀ ಕಲೆ, ಚಲನಚಿತ್ರ, ಶಿಕ್ಷಣ, ಕೈಗಾರಿಕೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ,ಕ್ರೀಡೆ, ವೈಧ್ಯಕೀಯ ಮತ್ತು ಸಾರ್ವಜನಿಕ ಜೀವನವನ್ನು ಒಳಗೊಂಡಂತೆ ವಿವಿಧ ಕಾರ್ಯಕ್ಷೇತ್ರಗಳಲ್ಲಿ ವಿಶೇಷ ಕೊಡುಗೆಯನ್ನು ಗೌರವಿಸಲು ಸಾಮಾನ್ಯವಾಗಿ ಭಾರತೀಯ ನಾಗರಿಕರಿಗೆ ಭಾರತ ಸರ್ಕಾರ ನೀಡುವ ನಾಲ್ಕನೇ ಅತಿದೊಡ್ಡ ನಾಗರೀಕ ಪ್ರಶಸ್ತಿ. ಆದಾಗ್ಯೂ ಈ ಪ್ರಶಸ್ತಿಯನ್ನು ಭಾರತೀಯರಲ್ಲದ ಆದರೂ ಭಾರತಕ್ಕೆ ಅನೇಕ ವಿಧವಾಗಿ ಸೇವೆಸಲ್ಲಿಸಿದ ಆಯ್ದ ಕೆಲವರಿಗೆ ಕೂಡ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಅಲ್ಲಲ್ಲಿ ಕೆಲವು ಅಸಮಾಧಾನಗಳು ಕೇಳಿಬಂದಿದ್ದು, ಅರ್ಹ ಕಲಾವಿದರು ಸಾಕಷ್ಟು ಬಾರಿ ಇದರಿಂದ ವಂಚಿತರಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. [ಸೂಕ್ತ ಉಲ್ಲೇಖನ ಬೇಕು] ಪ್ರಶಸ್ತಿಯನ್ನು ಗಮನಿಸಿದಾಗ, ಪದ್ಮ ಎಂಬ ಪದವು ಸಂಸ್ಕೃತದ ಕಮಲ ಎಂದೂ, ಶ್ರೀ ಪದವು ದೇವನಾಗರಿ ಇಂದ ತೆಗೆದುಕೊಳ್ಳಲ್ಪಟ್ಟಿದ್ದು, ಕಮಲ ಹೂವಿನ ಮೇಲೆ ಮತ್ತು ಕೆಳಗೆ ಕಾಣಿಸುತ್ತವೆ. ಇದರ ರೇಖಾ ವಿನ್ಯಾಸವು ಎರಡೂ ಬದಿಯಿಂದ ಕಂಚಿನ ಬಣ್ಣದ್ದಾಗಿದ್ದು, ಎಲ್ಲ ಉಬ್ಬು ರೇಖೆಗಳು ಬಿಳಿಯ ಚಿನ್ನದ ಬಣ್ಣದ್ದಾಗಿರುತ್ತವೆ. As of 2013[update][[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]], ೨೫೭೭ ಜನ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.[೨][೩][೪][೫]
Seamless Wikipedia browsing. On steroids.