ನಾಗಬೆತ್ತ
ಸಸ್ಯ From Wikipedia, the free encyclopedia
ಸಸ್ಯ From Wikipedia, the free encyclopedia
ನಾಗಬೆತ್ತ (ಕ್ಯಾಲಮಸ್ ರೋಟಾಂಗ್) ಭಾರತ, ಶ್ರೀಲಂಕಾ ಮತ್ತು ಮ್ಯಾನ್ಮಾರ್ (ಬರ್ಮಾ) ಮೂಲದ ಸಸ್ಯ ಪ್ರಭೇದವಾಗಿದೆ. ಇದು ಮಲಕ್ಕಾ ಬೆತ್ತದ ಪೀಠೋಪಕರಣಗಳು, ಬುಟ್ಟಿಗಳು, ಊರುಗೋಲುಗಳು,ಛತ್ರಿಗಳು, ಟೇಬಲ್ಗಳು ಮತ್ತು ಸಾಮಾನ್ಯ ಬೆತ್ತದ ಪಿಠೋಪಕರಣ ತಯಾರಿಸಲು ಬಳಸುವ ಹಬ್ಬುವ ಬಳ್ಳಿ ಜಾತಿಯ ಬೆತ್ತಗಳಲ್ಲಿ ಒಂದಾಗಿದೆ ಮತ್ತು ಇದು ನೈಋತ್ಯ ಏಷ್ಯಾದಲ್ಲಿ ಕಂಡುಬರುತ್ತದೆ.
Calamus (palm) rotang | |
---|---|
Scientific classification | |
Unrecognized taxon (fix): | Calamus (palm) |
ಪ್ರಜಾತಿ: | C. rotang |
Binomial name | |
Calamus rotang L. | |
Synonyms[1] | |
|
ಸಸ್ಯದ ತಳದ ವಿಭಾಗವು 10 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಲಂಬವಾಗಿ ಬೆಳೆಯುತ್ತದೆ, ಅದರ ನಂತರ ಕೆಲವು ಸೆಂಟಿಮೀಟರ್ ವ್ಯಾಸದ ತೆಳ್ಳಗಿನ, ಕಠಿಣವಾದ ಕಾಂಡವು 200 ಮೀಟರ್ ಅಥವಾ ಅದಕ್ಕಿಂತ ಹೆಚ್ಚು ಕಾಲ ಅಡ್ಡಲಾಗಿ ಬೆಳೆಯುತ್ತದೆ. ಇದು ಅತ್ಯಂತ ಮೃದುವಾಗಿರುತ್ತದೆ ಮತ್ತು ದಪ್ಪದಲ್ಲಿ ಏಕರೂಪವಾಗಿರುತ್ತದೆ. ಪೊರೆಗಳು ಮತ್ತು ತೊಟ್ಟುಗಳು ಬೆನ್ನ ಭಾಗದಲ್ಲಿದ್ದು ಇದು ಇತರ ಸಸ್ಯಗಳ ಮೇಲೆ ಹಬ್ಬಲು ಅನುವು ಮಾಡಿಕೊಡುತ್ತದೆ. ಇದು 60-80 ಸೆಂ.ಮೀ ಉದ್ದದ ಗರಿ ತರಹದ, ಪರ್ಯಾಯ ಎಲೆಗಳನ್ನು ಹೊಂದಿದೆ.[2] ಸಸ್ಯಗಳು ಭಿನ್ನಲಿಂಗಿಯಾಗಿರುತ್ತವೆ, ಮತ್ತು ಹೂವುಗಳನ್ನು ಆಕರ್ಷಕ ಹೂಗೊಂಚಲುಗಳಲ್ಲಿ ಜೋಡಣೆಗೊಂಡಿರುತ್ತವೆ. ತಿನ್ನಬಹುದಾದ ಹಣ್ಣುಗಳು ಹೊಳೆಯುವ, ಕೆಂಪು-ಕಂದು ಬಣ್ಣದ ಹೊದಿಕೆಯಲ್ಲಿ ಮುಚ್ಚಿರುತ್ತವೆ.
ಇದು ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ಇಳಿಜಾರು ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.
ಇದರ ಹಣ್ಣಿಗಳು ಮೇಲ್ಮೈಯಲ್ಲಿ ಸಂಗ್ರಹವಾಗುವ "ಡ್ರ್ಯಾಗನ್ ರಕ್ತ" ಎಂದು ಔಷಧೀಯವಾಗಿ ಮತ್ತು ವಾಣಿಜ್ಯಿಕವಾಗಿ ತಿಳಿದಿರುವ ಚೊಗರು ಕೆಂಪು ರಾಳವನ್ನು ಹೊರಹಾಕುತ್ತವೆ.[3] ಬೆತ್ತವು ಬೇಡಿಕೆಯಿರುವ ಮತ್ತು ದುಬಾರಿಯಾಗಿದೆ,ಆದುದರಿಂದ ಬಿದಿರು,ಮತ್ತು ಇತರ ಸಸ್ಯಗಳಿಂದ ತಯಾರಿಸಿದ ಕೋಲುಗಳಿಂದ ಪ್ರತಿಸ್ಪರ್ಧೆಯನ್ನು ಎದುರಿಸುತ್ತಿದೆ.[4]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.