From Wikipedia, the free encyclopedia
ಜಪಾನಿನ ಭಾಷೆ (日本語 / にほんご - ನಿಹೊಂಗೊ (ಸಹಾಯ·ಮಾಹಿತಿ)) ಪ್ರಮುಖವಾಗಿ ಜಪಾನ್ ದೇಶದಲ್ಲಿ ಮಾತನಾಡಲ್ಪಡುವ ಒಂದು ಪ್ರತ್ಯೇಕಗೊಂಡ ಭಾಷೆ. ಪ್ರಪಂಚದ ಪ್ರಮುಖ ಭಾಷೆಗಳಲ್ಲಿ ಒಂದಾದ ಇದನ್ನು ಸುಮಾರು ೧೩೦ ಮಿಲಿಯನ್ ಜನ ಉಪಯೋಗಿಸುತ್ತಾರೆ. ಇದು ಪ್ರಪಂಚದ ೯ನೇ ಅತಿ ಹೆಚ್ಚು ಪ್ರಚಲಿತವಾಗಿರುವ ಭಾಷೆ. ಇದು ಜಪಾನ್ ದೇಶದ ಅಧಿಕೃತ ಭಾಷೆಯಾಗಿದೆ.
ಜಪಾನಿನ ಭಾಷೆ 日本語 (ನಿಹೊಂಗೊ) [[File:|200px]] | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಪ್ರಮುಖವಾಗಿ: ಜಪಾನ್ ಚಿಕ್ಕ ಗುಂಪುಗಳು: ಬ್ರೆಜಿಲ್ (~1.5 ಮಿಲಿಯನ್), ಅಮೇರಿಕ ದೇಶ (~1.2 ಮಿಲಿಯನ್), ಇತ್ಯಾದಿ[1] | |
ಒಟ್ಟು ಮಾತನಾಡುವವರು: |
೧೩೦ ಮಿಲಿಯನ್[2] | |
ಶ್ರೇಯಾಂಕ: | ೯ | |
ಭಾಷಾ ಕುಟುಂಬ: | ಜಪೋನಿಕ್ ಜಪಾನಿನ ಭಾಷೆ | |
ಬರವಣಿಗೆ: | ಜಪಾನಿನ ಅಕ್ಷರಮಾಲೆ | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಜಪಾನ್ | |
ನಿಯಂತ್ರಿಸುವ ಪ್ರಾಧಿಕಾರ: |
ಯಾವುದೂ ಇಲ್ಲ ಜಪಾನಿನ ಸರ್ಕಾರದ್ದು ಪ್ರಮುಖ ಪಾತ್ರ | |
ಭಾಷೆಯ ಸಂಕೇತಗಳು | ||
ISO 639-1: | ja | |
ISO 639-2: | jpn | |
ISO/FDIS 639-3: | jpn | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಜಪಾನ್ ದೇಶದಲ್ಲಿ ಬಹುತೇಕವಾಗಿ ಜಪಾನ್ ಭಾಷೆಯಲ್ಲಿ ಮಾತನಾಡುತ್ತಾರೆ. ಅಲ್ಲದೇ ಇದನ್ನು ಜಪಾನ್ ದೇಶದ ಹೊರಗೂ ಸಹ ಮಾತನಾಡುತ್ತಾರೆ. ಎರಡನೇ ಪ್ರಪಂಚ ಮಹಾಯುದ್ಧದ ಸಮಯದಲ್ಲಿ ಜಪಾನ್ ವಶಪಡಿಸಿಕೊಂಡ ತೈವಾನ್ ಮತ್ತು [[ಕೊರಿಯಾ]] ದೇಶದ ಭಾಗಗಳಲ್ಲಿ, ಚೀನಾ, ಫಿಲಿಪ್ಪೀನ್ಸ್ ಮತ್ತು ವಿವಿಧ ಪೆಸಿಫಿಕ್ ದ್ವೀಪಗಳಲ್ಲಿ [3] ಜಪಾನ್ ಭಾಷೆಯನ್ನು ರಾಜ್ಯಭಾಷೆಯಾಗಿ ಕಲಿಯಲಾಗುತ್ತಿತ್ತು. ಪರಿಣಾಮವಾಗಿ, ಈ ದೇಶಗಳಲ್ಲಿನ ಹಲವು ಹಿರಿಯ ಜನರು ಈಗಲೂ ಜಪಾನಿ ಭಾಷೆಯನ್ನು ಮಾತನಾಡುತ್ತಾರೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.