From Wikipedia, the free encyclopedia
ಚಾಕಲಿಟ್ ಉಷ್ಣವಲಯದ ಥಿಯೋಬ್ರೋಮಾ ಕಕೇಯೋ ಮರದ ಬೀಜದಿಂದ ಉತ್ಪಾದಿಸಲಾದ ಹಲವಾರು ಸಂಸ್ಕರಿಸದ ಮತ್ತು ಸಂಸ್ಕರಿಸಿದ ಆಹಾರಗಳನ್ನು ಒಳಗೊಳ್ಳುತ್ತದೆ. ಕನಿಷ್ಠಪಕ್ಷ ಮೂರು ಸಾವಿರ ವರ್ಷಗಳಿಂದ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕಾದಲ್ಲಿ ಕಕಾವೋವನ್ನು ಬೇಸಾಯಮಾಡಲಾಗಿದೆ, ಮತ್ತು ಅದರ ಅತ್ಯಂತ ಮುಂಚಿನ ಬಳಕೆ ಸರಿಸುಮಾರು ಕ್ರಿ.ಪೂ. ೧೧೦೦ ಎಂದು ದಾಖಲಿಸಲಾಗಿದೆ. ಅದರಿಂದ, "ಕಹಿ ನೀರು" ಎಂಬ ಅರ್ಥನೀಡುವ ಒಂದು ನಾವಾಟಲ್ ಪದವಾದ, ಶೋಕೋಲಾಟಲ್ ಎಂಬ ಹೆಸರಿನಿಂದ ಪರಿಚಿತವಾದ ಪಾನೀಯವನ್ನು ತಯಾರಿಸುತ್ತಿದ್ದ ಆಜ್ಟೆಕ್ ಜನರನ್ನು ಒಳಗೊಂಡಂತೆ, ಮೆಸೋಅಮೇರಿಕಾದ ಬಹುಸಂಖ್ಯೆಯ ಜನರು ಚಾಕಲಿಟ್ ಪೇಯಗಳನ್ನು ತಯಾರಿಸುತ್ತಿದ್ದರು.
ಕೋಕೋದಿಂದ ತಯಾರಾಗುವ ಚಾಕಲೇಟು ಎಲ್ಲಾ ವಯೋಮಾನದರಿಗೂ ಇಷ್ಟವಾಗುತ್ತದೆ. ಇದು ತನ್ನದೇ ಆದ ಜನಪ್ರಿಯತೆಯನ್ನು ಹೊಂದಿದೆ. ನೋಡಲು ಆಕರ್ಷಕವಾಗಿ ಇರುವುದಲ್ಲದೇ, ಒಮ್ಮೆ ತಿಂದವರು ಮತ್ತೊಮ್ಮೆ ತಿನ್ನಬೇಕು ಎಂದು ಆಸೆಪಡುತ್ತಾರೆ. ಥಿಯೋಬ್ರೋಮಾ ಕಾಕೌ ಎಂಬ ವೈಜ್ಞಾನಿಕ ಹೆಸರಿರುವ ಚಾಕಲೇಟುಗಳು ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತವೆ. ವಿವಿಧ ಗಾತ್ರ, ಆಕಾರ, ರುಚಿ ಹಾಗೂ ಬಣ್ಣಗಳಲ್ಲಿ ಲಭ್ಯವಿರುವ ಚಾಕಲೇಟಿನ ಈ ಗುಣಗಳೇ ಜನ ಇದನ್ನು ಕೊಂಡೊಕೊಳ್ಳಲು ಪ್ರೇರಣೆ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಚಾಕಲೇಟು ಸಿಹಿತಿಂಡಿಗಳ ಸ್ಥಾನವನ್ನು ಪಡೆಯುತ್ತಿದೆ. ಸಭೆ ಸಮಾರಂಭಗಳಲ್ಲಿ, ವಿಶೇಷ ಸಂದರ್ಭಗಳಲ್ಲಿ, ಸಂತಸ ಹೋಚಿಕೊಳ್ಳುವ ಸಮಯದಲ್ಲಿ ಸಿಹಿತಿಂಡಿಯ ಬದಲು ಚಾಕಲೇಟುಗಳನ್ನೇ ನೀಡಲಾಗುತ್ತಿದೆ. ಇದನ್ನು ಕೊಳ್ಳಲು ಬಡವ ಶ್ರೀಮಂತನೆಂಬ ಭೇದವಿಲ್ಲ. ಸಣ್ಣ ಬೆಲೆಯಿಂದ ಹಿಡಿದು ದೊಡ್ಡ ಬೆಲೆಯವರೆಗೂ ಲಭ್ಯವಿರುವ ಚಾಕಲೇಟಿಗೆ ಜನಮಾನಸದಲ್ಲಿ ವಿಶಿಷ್ಟ ಸ್ಥಾನವೂ ಇದೆ. ಸಾಮಾನ್ಯವಾಗಿ ಚಾಕಲೇಟಿನಲ್ಲಿ ಮೂರು ವಿಧಗಳಿವೆ. ಮಿಲ್ಕ್ ಚಾಕಲೇಟು, ವೈಟ್ ಚಾಕಲೇಟು ಹಾಗೂ ಡಾರ್ಕ್ ಚಾಕಲೇಟು. ಇದೀಗ ಈ ಪಟ್ಟಿಗೆ ರೂಬೀ ಚಾಕಲೇಟು ಕೂಡಾ ಸೇರಿದೆ. ಇದನ್ನು ರೂಬೀ ಕೋಕೋ ಬೀಜ ಉಪಯೋಗಿಸಿ ತಯಾರಿಸುತ್ತಾರೆ.
ಕೋಕೋದಿಂದ ಆಹಾರ ಪದಾರ್ಥವನ್ನು ತಯಾರಿಸಿದ ಕೀರ್ತಿ ಅಮೇರಿಕಾದ ಮಾಯನ್ಗಳಿಗೆ ಸಲ್ಲುತ್ತದೆ. ಅವರು ಕೋಕೋ ಬೀಜಗಳಿಂದ ಪಾನೀಯ ತಯಾರಿಸುತ್ತಿದ್ದರು. ಈ ಬಿಸಿ ಪಾನೀಯವನ್ನು ಚೋಕೋಲೇಟ್ಲ್ ಎಂದು ಕರೆಯುತ್ತಿದ್ದರು. ಇದನ್ನು ಒಂದು ಲೋಟದಷ್ಟು ಸೇವನೆ ಮಾಡಿದರೆ ಆ ಇಡೀ ದಿನ ಉಲ್ಲಾಸದಾಯಕವಾಗಿ ಇರಬಹುದಾಗಿತ್ತು. ಅಷ್ಟೊಂದು ಪೋಷಕಾಂಶವನ್ನು ಈ ಚೋಕೋಲೇಟ್ಲ್ ಹೊಂದಿತ್ತು. ಅಮೇರಿಕಾಗೆ ಭೇಟಿ ನೀಡಿದ ಸ್ಪ್ಯಾನಿಶ್ ಚಕ್ರವರ್ತಿಯೊಬ್ಬ ಚೋಕೋಲೇಟ್ಲ್ನ್ನು ಸ್ಪೈನ್ಗೆ ಪರಿಚಯಿಸಿದ. ಅಲ್ಲಿ ಈ ಪಾನೀಯವನ್ನು ಇನ್ನಷ್ಟು ರುಚಿಕರವಾಗಿಸಲು ಸಕ್ಕರೆ ಬೆರೆಸಲಾಯಿತು. ಕೋಕೋ ಬೀಜಗಳಿಗೆ ಬೇಡಿಕೆ ಅಧಿಕವಾದಂತೆ ಸ್ಪೈನ್ನಲ್ಲಿ ಕೋಕೋ ಮರಗಳನ್ನು ಹೆಚ್ಚೆಚ್ಚು ಬೆಳೆಸಲಾಯಿತು. ದೇಶ ವಿದೇಶಗಳಿಗೆ ಕೋಕೋ ಬೀಜಗಳನ್ನು ರಫ್ತು ಮಾಡಲಾಯಿತು. ಸ್ಪ್ಯಾನಿಶ್ ದೊರೆಯನ್ನು ಮದುವೆಯಾದ ಫ್ರೆಂಚ್ ರಾಜಕುಮಾರಿ ಚಾಕಲೇಟು ತಯಾರಿಸುವ ವಿಧಾನವನ್ನು ಕಂಡುಹಿಡಿದಳು. ಇದರಿಂದ ಚಾಕಲೇಟು ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಾ ಬಂತು. ಅಮೇರಿಕಾ, ಸ್ಪೈನ್, ಫ್ರಾನ್ಸ್ ಸೇರಿದಂತೆ ವಿಶ್ವದೆಲ್ಲೆಡೆ ಚಾಕಲೇಟು ಕಾರ್ಖಾನೆಗಳು ತೆರೆದುಕೊಂಡವು. ಇದು ಹೊಸ ಅನ್ವೇಷಣೆಗೆ ದಾರಿ ಮಾಡಿಕೊಟ್ಟಿತು. ಹಾಗಾಗಿ ಚಾಕಲೇಟು ಕೈಗೆಟಕುವ ದರದಲ್ಲಿ ಎಲ್ಲರಿಗೂ ತಲುಪವಂತಾಯಿತು.
ಎಲ್ಲರಿಗೂ ಇಷ್ಟವಾಗುವ ಚಾಕಲೇಟು ತಯಾರಾಗಲು ವಿವಿಧ ಹಂತಗಳಿವೆ. ಇದಕ್ಕೆ ಬೇಕಾಗುವ ಮುಖ್ಯ ಪದಾರ್ಥವೆಂದರೆ ಕೋಕೋ ಹಣ್ಣಿನ ಬೀಜ. ಜೊತೆಗೇ ಹಾಲು ಹಾಗೂ ಸಕ್ಕರೆಯನ್ನು ಬ¼ಸುತ್ತಾರೆ. ಕೋಕೋ ಮರದಲ್ಲಾಗುವ ಹಣ್ಣನ್ನು ಒಡೆದು, ಅದರ ಬೀಜವನ್ನು ಒಣಗಿಸುತ್ತಾರೆ. ಒಣಗಿದ ಕೋಕೋ ಬೀಜಗಳನ್ನು ಚಾಕಲೇಟು ತಯಾರಿಸುವ ಕಾರ್ಖಾನೆಗೆ ಕಳುಹಿಸುತ್ತಾರೆ. ಕಾರ್ಖಾನೆಯಲ್ಲಿ ಕೋಕೋ ಬೀಜಗಳನ್ನು ಸಿಲಿಂಡರ್ ಆಕಾರದ ದೊಡ್ಡ ಪಾತ್ರೆಗೆ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಚಾಕಲೇಟು ತನ್ನ ಸುವಾಸನೆಯನ್ನು ಪಡೆದುಕೊಳ್ಳುತ್ತದೆ. ಬಳಿಕ ಇದನ್ನು ಯಂತ್ರದಲ್ಲಿ ಪುಡಿ ಮಾಡಿ ಕೋಕೋ ಬಟರ್ ಹಾಗೂ ಕೋಕೋ ಪೌಡರ್ನ್ನು ಪ್ರತ್ಯೇಕಗೊಳಿಸಲಾಗುತ್ತದೆ. ಕೊನೆಯ ಹಂತದಲ್ಲಿ ಕೋಕೋ ಬಟರ್, ಕೋಕೋ ಪೌಡರ್, ಹಾಲು ಹಾಗೂ ಸಕ್ಕರೆಯನ್ನು ಸೇರಿಸಿ ಮೃದುಗೊಳಿಸಲಾಗುತ್ತದೆ. ಬಳಿಕ ಈ ಮಿಶ್ರಣವನ್ನು ಅಚ್ಚಿಗೆ ಹಾಕಿ ಬೇಕಾದ ಆಕೃತಿಯಲ್ಲಿ ಚಾಕಲೇಟು ತಯಾರಾಗುತ್ತದೆ.
ಚಾಕಲೇಟು ದೇಹಕ್ಕೆ ಶಕ್ತಿಯ ಮೂಲ. ವಿಶೇಷವಾಗಿ ಡಾರ್ಕ್ ಚಾಕಲೇಟಿನಲ್ಲಿ ಆ್ಯಂಟಿ ಓಕ್ಸಿಡೆಂಟ್ಸ್ ಹೇರಳವಾಗಿದ್ದು, ಇದರಿಂದ ಆರೋಗ್ಯಯುತ ಚುರುಕಿನ ಜೀವನವನ್ನು ಪಡೆಯಬಹುದು. ಮಾನಸಿಕ ಒತ್ತಡ ನಿವಾರಿಸಿ ದಿನಪೂರ್ತಿ ಲವಲವಿಕೆಯಿಂದ ಇರುವಲ್ಲಿ ಚಾಕಲೇಟು ಮುಖ್ಯ ಪಾತ್ರವಹಿಸುತ್ತದೆ. ಕಾಂತಿಯುತ ತ್ವಚೆ ಹೊಂದಲು ಹಾಗೂ ತೂಕ ಕಳೆದುಕೊಳ್ಳಲು ಚಾಕಲೇಟು ಸಹಾಯಕ. ಅಧ್ಯಯನಗಳ ಪ್ರಕಾರ ಚಾಕ್ಲೇಟ್ ದೇಹದ ರಕ್ತದೊತ್ತಡ ಹಾಗೂ ಸಕ್ಕರೆ ಅಂಶವನ್ನು ಸಮತೋಲನದಲ್ಲಿ ಇರಿಸುತ್ತದೆ. ಕೊಲೆಸ್ಟ್ರಾಲ್ ಕಮ್ಮಿಗೊಳಿಸಿ ಹೃದಯಾಘಾತದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಡಾರ್ಕ್ ಚಾಕಲೇಟಿನಿಂದ ಮೈಗ್ರೇನ್, ಶೀತ ಹಾಗೂ ಕೆಮ್ಮಿನ ಸಮಸ್ಯೆಗಳು ತಗ್ಗುತ್ತವೆ.
ಅತಿಯಾದ ಚಾಕಲೇಟು ಸೇವನೆಯಿಂದ ಅಡ್ಡ ಪರಿಣಾಮವೂ ಇದೆ. ಚಾಕ್ಲೇಟ್ ಸೇವನೆಯೇ ಒಂದು ಚಟವಾಗಿ ಬದಲಾಬಹುದು. ಹಲ್ಲಿನ ಸಮಸ್ಯೆಯೂ ಎದುರಾಗಬಹುದು. ಕೆಲವೊಂದು ಚಾಕಲೇಟು ಕಾಫಿನ್ ಅಂಶವನ್ನು ಕೂಡಾ ಹೊಂದಿದ್ದು, ಇದರಿಂದ ಜಡತ್ವ, ನಿರ್ಜಲೀಕರಣ ಹಾಗೂ ಮೂಳೆಗಳ ಸಮಸ್ಯೆಯೂ ಕಾಡಬಹುದು. ಹಾಗಾಗಿ ಹಿತಮಿತವಾಗಿ ಚಾಕ್ಲೇಟ್ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.
ಕ್ಯಾಂಡಿ ಮತ್ತು ಚಾಕೊಲೇಟ್ ನ ಅತಿಯಾದ ಸೇವನೆಯು ನಿಮ್ಮ ಮಕ್ಕಳಲ್ಲಿ ಹರೆಯದ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಇದು ಇತರ ಹಲವು ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಿಮ್ಮ ಮಕ್ಕಳನ್ನು ಜುವೆನೈಲ್ ಮಧುಮೇಹದಂತಹ ರೋಗಗಳಿಂದ ರಕ್ಷಿಸಲು, ಅವರ ಚಾಕೊಲೇಟ್ ಸೇವನೆಯನ್ನು ನಿಯಂತ್ರಿಸಿ. ಚಾಕೊಲೇಟ್ ಅನ್ನು ಅತಿಯಾಗಿ ಸೇವಿಸುವುದರಿಂದ ಮಕ್ಕಳಿಗೆ ಹಲವಾರು ಆರೋಗ್ಯ ಅಪಾಯಗಳು ಉಂಟಾಗಬಹುದು. ಇದು ಟೈಪ್ 2 ಮಧುಮೇಹದ ಅಪಾಯವನ್ನೂ ಒಳಗೊಂಡಿದೆ. ಇದಲ್ಲದೇ, ಬೊಜ್ಜು, ಹಲ್ಲಿನ ನಷ್ಟ, ದುರ್ಬಲ ಜೀರ್ಣಾಂಗ ವ್ಯವಸ್ಥೆ ಕೂಡ ಹೆಚ್ಚು ಚಾಕಲೇಟ್ ತಿನ್ನುವ ಮೂಲಕ ಪರಿಣಾಮ ಬಿರುತ್ತದೆ. [1]
{{cite encyclopedia}}
: Cite has empty unknown parameters: |separator=
and |HIDE_PARAMETER=
(help)Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.