From Wikipedia, the free encyclopedia
ದೊಮ್ಮರಾಜು ಗುಕೇಶ್ ಒಬ್ಬ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್. ಗುಕೇಶ್ ಅವರು ೨೯ ಮೇ ೨೦೦೬ ರಂದು ಜನಿಸಿದರು. ಇವರನ್ನು ಗುಕೇಶ್ ಡಿ ಎಂದು ಸಹ ಕರೆಯಲಾಗುತ್ತದೆ. ಚೆಸ್ ಪ್ರಾಡಿಜಿಯಲ್ಲಿ, ಇವರು ಗ್ರ್ಯಾಂಡ್ಮಾಸ್ಟರ್ ಪ್ರಶಸ್ತಿಗೆ ಅರ್ಹತೆ ಪಡೆದ ಇತಿಹಾಸದಲ್ಲಿ ಮೂರನೇ-ಕಿರಿಯ ವ್ಯಕ್ತಿಯಾಗಿದ್ದಾರೆ.[1] ೨೭೦೦ ರ ಚೆಸ್ ರೇಟಿಂಗ್ ಅನ್ನು ತಲುಪಿದ ಮೂರನೇ-ಕಿರಿಯ ವ್ಯಕ್ತಿ, ೨೭೫೦ ರ ರೇಟಿಂಗ್ ತಲುಪಿದ ಕಿರಿಯ ವ್ಯಕ್ತಿ ಮತ್ತು ಎಫ್ಐಡಿಇ(FIDE) ಕ್ಯಾಂಡಿಡೇಟ್ಸ್ ಪಂದ್ಯಾವಳಿಯ ಕಿರಿಯ ವಿಜೇತ.[2] ಗುಕೇಶ್ ಅವರು ೨೦೨೪ ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಅನ್ನು ಗೆದ್ದರು.[3]
೧೬ ಅಕ್ಟೋಬರ್ ೨೦೨೨ ರಂದು, ೧೬ ನೇ ವಯಸ್ಸಿನಲ್ಲಿ, ಇವರು ಪ್ರಸ್ತುತ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸೆನ್ ಅವರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಇವರು ಏಮ್ಚೆಸ್ ರಾಪಿಡ್ ಟೂರ್ನಮೆಂಟ್ನಲ್ಲಿ ಕಾರ್ಲ್ಸೆನ್ ಅನ್ನು ಸೋಲಿಸಿದರು. [4]
ಗುಕೇಶ್ ಅವರು ೨೯ ಮೇ ೨೦೦೬ ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು.[5] ಅವರ ತಂದೆಯ ಹೆಸರು ರಜನಿಕಾಂತ್. ಅವರು ಕಿವಿ, ಮೂಗು ಮತ್ತು ಗಂಟಲು ಶಸ್ತ್ರಚಿಕಿತ್ಸಕರು. ಅವರ ತಾಯಿ ಡಾ ಪದ್ಮಕುಮಾರಿ. ಅವರು ಸೂಕ್ಷ್ಮ ಜೀವವಿಜ್ಞಾನದ ಸಹಾಯಕ ಪ್ರಾಧ್ಯಾಪಕರು.[6][7]ಗುಕೇಶ್ ಅವರು ಚೆನ್ನೈನ ಮೆಲ್ ಅಯನಂಬಾಕ್ಕಂನ ವೆಲಮ್ಮಾಳ್ ವಿದ್ಯಾಲಯ ಶಾಲೆಯಲ್ಲಿ ಓದಿದರು.[8]ಇವರು ತಮ್ಮ ಏಳನೇ ವಯಸ್ಸಿನಲ್ಲಿ ಅವರು ಚದುರಂಗವನ್ನು ಆಡಲು ಕಲಿತರು. [9]
ಗುಕೇಶ್ ಅವರು ೨೦೧೫ ರಲ್ಲಿ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್ಶಿಪ್ನ ೯ ವರ್ಷದೊಳಗಿನವರ ವಿಭಾಗವನ್ನು ಗೆದ್ದರು.[10] ೨೦೧೮ ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ಗಳನ್ನು ೧೨ ವರ್ಷದೊಳಗಿನವರ ವಿಭಾಗದಲ್ಲಿ ಗೆದ್ದರು. ಅವರು ೨೦೧೮ ರ ಏಷ್ಯನ್ ಯೂತ್ ಚೆಸ್ ಚಾಂಪಿಯನ್ಶಿಪ್ಗಳಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದರು.[11]
೧೫ ಜನವರಿ ೨೦೧೯ ರಂದು, ೧೨ ನೇ ವಯಸ್ಸಿನಲ್ಲಿ, ಗುಕೇಶ್ ಅವರು ಇತಿಹಾಸದಲ್ಲಿ ಎರಡನೇ-ಕಿರಿಯ ಗ್ರ್ಯಾಂಡ್ಮಾಸ್ಟರ್ ಆದರು.[12] ಗುಕೇಶ್ ಅವರು ಸೆರ್ಗೆಯ್ ಕರ್ಜಾಕಿನ್ ಅವರನ್ನು ಮೀರಿಸಿದರು.[13]
ಜೂನ್ ೨೦೨೧ ರಲ್ಲಿ, ಗುಕೇಶ್ ಅವರು ಜೂಲಿಯಸ್ ಬೇರ್ ಚಾಲೆಂಜರ್ಸ್ ಚೆಸ್ ಟೂರ್, ಗೆಲ್ಫಾಂಡ್ ಚಾಲೆಂಜ್ ಅನ್ನು ಗೆದ್ದರು. ೧೯ ರಲ್ಲಿ ೧೪ ಅಂಕಗಳನ್ನು ಗಳಿಸಿದರು.[14]
ಆಗಸ್ಟ್ ೨೦೨೨ ರಲ್ಲಿ, ಗುಕೇಶ್ ಅವರು ೪೪ ನೇ ಚೆಸ್ ಒಲಿಂಪಿಯಾಡ್ ಅನ್ನು ೮/೮ ಪರಿಪೂರ್ಣ ಸ್ಕೋರ್ನೊಂದಿಗೆ ಪ್ರಾರಂಭಿಸಿದರು. ಅವರು ೮ ನೇ ಪಂದ್ಯದಲ್ಲಿ ಯುಎಸ್ ನಂಬರ್ ಒನ್ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದರು.
ಸೆಪ್ಟೆಂಬರ್ ೨೦೨೨ ರಲ್ಲಿ, ಗುಕೇಶ್ ಅವರು ೨೭೨೬ ರ ರೇಟಿಂಗ್ನೊಂದಿಗೆ ಮೊದಲ ಬಾರಿಗೆ ೨೭೦೦ ಕ್ಕಿಂತ ಹೆಚ್ಚು ರೇಟಿಂಗ್ ಅನ್ನು ತಲುಪಿದರು.[15] ಇದು ವೀ ಯಿ ಮತ್ತು ಅಲಿರೆಜಾ ಫಿರೌಜ್ಜಾ ನಂತರ ೨೭೦೦ ದಾಟಿದ ಮೂರನೇ ಅತಿ ಕಿರಿಯ ಆಟಗಾರರಾದರು.[16]
ಅಕ್ಟೋಬರ್ ೨೦೨೨ ರಲ್ಲಿ, ಗುಕೇಶ್ ಅವರು ಏಮ್ಚೆಸ್ ರಾಪಿಡ್ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್ ಆದರು.[17]
ಫೆಬ್ರವರಿ ೨೦೨೩ ರಲ್ಲಿ, ಡುಸೆಲ್ಡಾರ್ಫ್ನಲ್ಲಿ ನಡೆದ ಡಬ್ಯ್ಲೂಆರ್(WR) ಮಾಸ್ಟರ್ಸ್ ಪಂದ್ಯಾವಳಿಯ ಮೊದಲ ಆವೃತ್ತಿಯಲ್ಲಿ ಗುಕೇಶ್ ಅವರು ಭಾಗವಹಿಸಿದರು.
ಆಗಸ್ಟ್ ೨೦೨೩ ರ ರೇಟಿಂಗ್ ಪಟ್ಟಿಯಲ್ಲಿ, ಗುಕೇಶ್ ೨೭೫೦ ರ ರೇಟಿಂಗ್ ತಲುಪಿದ ಅತ್ಯಂತ ಕಿರಿಯ ಆಟಗಾರರಾದರು.[18] ಗುಕೇಶ್ ೨೦೨೩ ರ ಚೆಸ್ ವಿಶ್ವಕಪ್ನಲ್ಲಿ ಭಾಗವಹಿಸಿದರು.
ಜನವರಿ ೨೦೨೪ ರಲ್ಲಿ, ಗುಕೇಶ್ ಅವರು ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ ೨೦೨೪ ರಲ್ಲಿ ಭಾಗವಹಿಸಿದರು. ಅವರು ೧೪ ಪಂದ್ಯಗಳಿಂದ ೯ ಅಂಕಗಳನ್ನು ಗಳಿಸಿದರು (೫ ಗೆಲುವುಗಳು, ೮ ಡ್ರಾಗಳು ಮತ್ತು ೧ ಸೋಲುಗಳು) ೧ ನೇ ಸ್ಥಾನಕ್ಕಾಗಿ ೪-ವೇ ಟೈನಲ್ಲಿ ಮುಗಿಸಿದರು. ೧೨ ನೇ ಸುತ್ತಿನಲ್ಲಿ, ಗುಕೇಶ್ ಅವರು ರಮೇಶ್ಬಾಬು ಪ್ರಗ್ನಾನಂದ ವಿರುದ್ಧ ಪಂದ್ಯಗಳನ್ನು ಗೆದ್ದರು. ಟೈಬ್ರೇಕ್ನಲ್ಲಿ ಅವರು ಸೆಮಿಫೈನಲ್ನಲ್ಲಿ ಅನೀಶ್ ಗಿರಿಯನ್ನು ಸೋಲಿಸಿದರು. ಆದರೆ ಫೈನಲ್ನಲ್ಲಿ ವೈ ಯಿ ವಿರುದ್ಧ ಸೋತರು.[19]
ಏಪ್ರಿಲ್ನಲ್ಲಿ, ಗುಕೇಶ್ ೨೦೨೪ ಅಭ್ಯರ್ಥಿಗಳ ಪಂದ್ಯಾವಳಿಯಲ್ಲಿ ಭಾಗವಹಿಸಿದರು.[20]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.