ಕಲ್ಲಂಗಡಿ ಗಿಡ ಕುಕುರ್ಬಿಟೆಸಿ ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಈ ಗಿಡದ ಸಸ್ಯ ಶಾಸ್ತ್ರ ಹೆಸರುಸಿಟ್ರುಲಸ್ ವಲ್ಗಾರಿಸ್(citrullus valgaris). ಇದು ನೇರವಾಗಿ ಬೆಳೆಯುವ ಗಿಡ ಅಲ್ಲ. ಇದು ವ್ಯಾಪಕವಾಗಿ ಬೆಳೆಯಲ್ಪಡುವ ಸಸ್ಯವಾಗಿದೆ. ಬಳ್ಳಿಯಂಥ (ತೆವಳುವ ಹಾಗು ಜೋಲು ಬೀಳುವ) ಹೂ ಬಿಡುವ ಸಸ್ಯ. ಸೌತೇಕಾಯಿ ಸಸ್ಯ, ಮತ್ತು ಕುಂಬಳದ ಗಿಡಗಳು ಇದೇ ಸಸ್ಯ ಕುಟುಂಬಕ್ಕೆ ಸೇರಿವೆ. [೧] ಈ ಗಿಡದ ಮೂಲ ಜನ್ಮಸ್ಥಾನ ಆಫ್ರಿಕ ಎಂದು ಭಾವಿಸಲಾಗಿದೆ. ಈಜಿಪ್ಟ್ಮತ್ತು ಭಾರತ ದೇಶಗಳಲ್ಲಿ ಕ್ರಿ.ಪೂ.(B.C)2500 ಸಂವತ್ಸರಗಳಿಗಿಂತ ಮುಂಚೆ ಬೆಳೆಸಲಾಗಿದೆ ಎಂದು ತಿಳಿದು ಬಂದಿದೆ.[೨]
ಕಲ್ಲಂಗಡಿ ಸಾಗುವಳಿ ಮಾಡುವುದಕ್ಕೆ ಸಾರವಂತವಾದ ಪುಡಿ ನೆಲಗಳು ಒಳ್ಳೆಯವು. ನೀರು ಹೆಚ್ಚು ಇರಬಾರದು, ಆಗಂತ ಕಡಿಮೆಯೂ ಆಗಬಾರದು. ಉಷ್ಣೋಗ್ರತ ೨೪-೨೫ ೦C ಇರಬೇಕು. ನೆಲ ಆಮ್ಲಶತ(PH)6-6.5 ಇರಬೇಕು. ಶೀತ ಕಾಲ ಮುಗಿದು ಬಿಸಿಲು ಕಾಲ ಆರಂಭವಾಗುವ ಸಮಯದಲ್ಲಿ ಬಿತ್ತಬೇಕು. ಫಸಲು ಕಾಲ ೭೦-೮೦ ದಿನಗಳು. ಹೂವು ಬಿಟ್ಟಾದ ಮೇಲೆ ಎರಡು ವಾರಕ್ಕೆ ಹಣ್ಣು ಇಳುವರಿಗೆ ಬರುತ್ತದೆ. ಹೆಣ್ಹೂವು, ಗಂಡು ಹೂವು ಬೇರೆ ಬೇರೆಯಾಗಿ ಬೆಳೆಯುತ್ತವೆ.[೪]. ಇವು ವ್ಯಾಪಕವಾಗಿ ೫-೬ ಅಡಿಗಳು ಅಡ್ಡಳತೆಯಾಗಿ ಬೆಳೆಯುತ್ತದೆ. ಅದರಿಂದ ಗಿಡಗಳ ಮಧ್ಯದ ದೂರ ೮ ಅಡಿಗಳಿಗಿಂತ ಹೆಚ್ಚು ಇರಬೇಕು.
ಹಣ್ಣು (ಪೀಪೊ) ದಪ್ಪನೆಯ ತೊಗಟೆ (ಬೀಜಕೋಶ) ಮತ್ತು ತಿರುಳಿರುವ ಕೇಂದ್ರವನ್ನು (ಮಧ್ಯ ಕವಚ ಹಾಗು ಅಂತಃಫಲ ಕವಚ) ಹೊಂದಿರುವ ಬೆರಿ. ಪೀಪೊಗಳು ಕೆಳಭಾಗದಲ್ಲಿರುವ ಅಂಡಾಶಯದಿಂದ ಜನ್ಯವಾಗಿವೆ, ಮತ್ತು ಕುಕರ್ಬಿಟೇಸಿಯಿಯ ಲಕ್ಷಣವಾಗಿವೆ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಪ್ರತಿಶತ ೯೦% ತನಕ ಇರುತ್ತದೆ. ಹಣ್ಣು ಅಂಡಾಕಾರ(oval)ಇಲ್ಲವೆ ಗೋಳಾಕಾರವಾಗಿರುತ್ತದೆ. ಹಣ್ಣಿನ ತೊಗಲು ಹಸಿರು ಬಣ್ಣದಲ್ಲಿದ್ದು ಸಾಲುಗಳಿರುತ್ತವೆ. ಹಣ್ಣು ದೊಡ್ದ ಪ್ರಮಾಣವಾಗಿರುತ್ತದೆ. ಹಣ್ಣಿನ ತೂಕ ೧-೫ ಕಿಲೋಗಳಿರುತ್ತದೆ. ಹಣ್ಣಿನ ಕುಸುರು ಕೆಂಪಾಗಿ/ನಸುಗೆಂಪು , ಬಿತ್ತನೆ ಕಪ್ಪಾಗಿರುತ್ತವೆ. ಹಣ್ಣಿನ ಒಳಗೆ ಬಹುಸಂಖ್ಯೆಯಲ್ಲಿ ಕಪ್ಪುವರ್ಣದ ಬೀಜಗಳಿರುತ್ತವೆ. ಬೀಜಗಳು ಚಪ್ಪಟೆಯಾಗಿ ತತ್ತಿ ಪಾಂಗಿನ ರೂಪದಲ್ಲಿರುತ್ತವೆ. [೫]. ಬೀಜ/ವಿತ್ತನದಲ್ಲಿ ಎಣ್ಣೆ ಶೇಕಡ ೨೭% ಇರುತ್ತದೆ. ಬೀಜದಲ್ಲಿ ೨೦.೦% ತನಕ ಪ್ರೋಟಿನ್ ಇದೆ. ಕಲ್ಲಂಗಡಿ ಬೀಜದಲ್ಲಿ ಲೈಸಿನ್ (lysine), ಮೆಥಿಯೋನೈನ್(methionine), ಸಿಸ್ತೈನ್(cystine), ಥ್ರೆಯೋನೈನ್ (threonine) ಮತ್ತು ಟ್ರೀಟೊಫನ್(tryptopan) ಎನ್ನುವ ಅವಶ್ಯಕ ಅಮಿನೋ ಆಮ್ಲಗಳಿವೆ. ಬೀಜದಲ್ಲಿ ನಾರು ಪದಾರ್ಥ ೩೨-೩೫% ಸಿಗುತ್ತದೆ.
ಬೀಜದಲ್ಲಿ ೨೫-೨೮% ಎಣ್ಣೆಯಿದೆ. ಅದರಿಂದ ಎಕ್ಸುಪೆಲ್ಲರು ಎಣ್ಣೆ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. ಆದರೆ ಹಿಂಡಿಯಲ್ಲಿ ಇನ್ನೂ ೧೦-೧೨% ಎಣ್ಣೆ ಉಳಿದಿರುತ್ತದೆ. ಹಿಂಡಿಯಲ್ಲಿದ್ದ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ತೆಗೆಯಬೇಕಾಗುತ್ತದೆ. ಇಲ್ಲದಿದ್ದರೆ ನೇರವಾಗಿ ಸಾಲ್ವೆಂಟ್ ಪ್ಲಾಂಟ್ನಲ್ಲಿ ಬೀಜವನ್ನು ಕ್ರಾಸಿಂಗು ಮಾಡಿ ಎಣ್ಣೆಯನ್ನು ತೆಗೆಯಬಹುದು.
ಎಣ್ಣೆ ತಿಳಿ ಬಣ್ಣದಲ್ಲಿರುತ್ತದೆ. ಎಣ್ಣೆಯಲ್ಲಿ ಎರಡು ದ್ವಿ ಬಂಧಗಳಿದ್ದ ಲಿನೊಲಿಕ್ ಕೊಬ್ಬಿನ ಆಮ್ಲ ಹೆಚ್ಚಿನ ಅಂಶದಲ್ಲಿರುತ್ತದೆ. ಶುದ್ಧಿ ಮಾಡಿದ{Refined)ಮೇಲೆ ಅಡಿಗೆ ಎಣ್ಣೆಯಾಗಿ ಮತ್ತು ವನಸ್ಪತಿ/ಡಾಲ್ಡವಾಗಿ (hydrogenated edible fat)ಉಪಯೋಗಿಸುವಂತಹುದು. ಈ ಎಣ್ಣೆಯಲ್ಲಿ ೨೦-೨೬% ಸಂತೃಪ್ತ ಕೊಬ್ಬಿನ ಆಮ್ಲಗಳು ೮೦-೭೫% ಅಸಂತೃಪ್ತ ಕೊಬ್ಬಿನ ಆಮ್ಲಗಳಿರುತ್ತವೆ. ಅಸಂತ್ರುಪ್ತ ಕೊಬ್ಬಿನ ಆಮ್ಲಗಳು(ಒಲಿಕ್ ಆಮ್ಲ ೧೫-೧೮%,ಲಿನೊಲಿಕ್ ಆಮ್ಲ೬೦-೬೫%)ಇರುತ್ತವೆ. ಇದರಲ್ಲಿ ಲಿನೊಲಿಕ್ ಕೊಬ್ಬಿನ ಆಮ್ಲವನ್ನು ಒಮೇಗಾ೬-ಕೊಬ್ಬಿನ ಆಮ್ಲವೆಂದು ಕರೆಯುತ್ತಾರೆ. ಎಣ್ಣೆಯ ಭೌತಿಕ ಲಕ್ಷಣಗಳ ಮತ್ತು ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಗಳನ್ನು ಕೆಳಗಿನ ಪಟ್ಟಿಯಲ್ಲಿ ಕೊಡಲಾಗಿದೆ.[೬]
ಎಣ್ಣೆ ಭೌತಿಕ ಗುಣಗಳ/ಲಕ್ಷಣಗಳ ಪಟ್ಟಿ[೭]
ಭೌತಿಕ ಲಕ್ಷಣ/ಗುಣ ಗಣಗಳು | ಪರಿವಿಡಿ |
ವಕ್ರೀಭವನ ಸೂಚಕೆ 400Cవద్ద | 1.4630-1.4670 |
ಅಯೋಡಿನ್ ಮೌಲ್ಯ | 115-125 |
ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ | 190-198 |
ಅನ್ ಸಪೋನಿಫಿಯಬುಲ್ ಪದಾರ್ಥ | 1.5% ಗರಿಶ್ಟ |
ತೇವ | 0.5% గరిష్టం |
ವರ್ಣ 1/2"ಸೆಲ್(ಅರೆ),(y+5R) | 20ಯೊನಿಟ್ |
ಎಣ್ಣೆಯಲ್ಲಿದ್ದ ಕೊಬ್ಬಿನ ಆಮ್ಲಗಳ ಪಟ್ಟಿ
ಕೊಬ್ಬಿನ ಆಮ್ಲದ ಹೆಸರು | ಶೇಕಡ |
ಪಾಮಿಟಿಕ್ ಆಮ್ಲ(C16:0) | 11 |
ಸ್ಟಿಯರಿಕ್ ಆಮ್ಲ(C18:0) | 10 |
ಒಲಿಕ್ ಆಮ್ಲ(C18:1) | 15 |
ಲಿನೊಲಿಕ್ ಆಮ್ಲ(C18:2) | 63.0 |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.