ಕಲ್ಯಾಣಿ
From Wikipedia, the free encyclopedia
From Wikipedia, the free encyclopedia
ಭಾರತೀಯ ದೇವಾಲಯಗಳ ಮುಂಭಾಗದಲ್ಲಿ ಅಥವಾ ದೇವಾಲಯ ಸಂಕೀರ್ಣದ ಭಾಗವಾಗಿ ನೀರನ್ನು ಸಂಗ್ರಹಿಸುವ ಒಂದು ವ್ಯವಸ್ಥೆ. ಭಾರತದ ವಿವಿಧ ಭಾಷೆಗಳಲ್ಲಿ ಕಲ್ಯಾಣಿಗಳನ್ನು ಪುಷ್ಕರಿಣಿ, ತೀರ್ಥ, ಕುಂಡ, ಸರೋವರ ಎಂಬ ವಿವಿಧ ಹೆಸರುಗಳಿಂದ ಕೂಡ ಕರೆಯಲಾಗುತ್ತದೆ. ಹಿಂದೂ ದೇವಾಲಯಗಳಿಗೂ ಕಲ್ಯಾಣಿಗಳಿಗೂ ಒಂದು ವಿಶೇಷ ನಂಟು ಇದೆ ಎನ್ನಬಹುದು. ಕೆಲವು ಬದಿಗಳಲ್ಲಿ ಹಲವು ಮೆಟ್ಟಿಲುಗಳನ್ನು ಹೊಂದಿರುವ ಜಲಾಶಯಗಳು ಇವಾಗಿವೆ. ದೇವಾಲಯಗಳಲ್ಲಿ ಪ್ರಾರ್ಥನೆಗೆ ಮೊದಲು ಸ್ನಾನ ಮಾಡಲು ಇವುಗಳ ಬಳಕೆ ಮಾಡಲಾಗುತ್ತದೆ.
ಪ್ರಾಚೀನ ಕಾಲದಿಂದಲೂ ಭಾರತದ ದೇವಾಲಯಗಳ ವಾಸ್ತುಶಿಲ್ಪದಲ್ಲಿ ನೀರಿನ ಸಂಗ್ರಹದ ವಿನ್ಯಾಸವು ಮಹತ್ವದ್ದಾಗಿದೆ. ವಿಶೇಷವಾಗಿ ಪಶ್ಚಿಮ ಭಾರತದಲ್ಲಿ ಬೇಸಿಗೆ ಮತ್ತು ಮಳೆಗಾಲಗಳು ಪರ್ಯಾಯವಾಗಿರುವದರಿಂದ ಕಲ್ಯಾಣಿಗಳ ಬಳಕೆ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಲ್ಯಾಣಿಗಳ ವಿನ್ಯಾಸವು ಸ್ವತಃ ಒಂದು ಕಲಾ ಪ್ರಕಾರ [1]. ಆಧುನಿಕ ನಗರವಾದ ಹಂಪಿಯನ್ನು ಸುತ್ತುವರೆದಿರುವ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ, ವಿಜಯನಗರದ ಅವಶೇಷಗಳಲ್ಲಿರುವ ಜ್ಯಾಮಿತೀಯವಾಗಿ ಅದ್ಭುತವಾದ ಕೃಷ್ಣ ಕಲ್ಯಾಣಿಯು ಕಲ್ಯಾಣಿಗಳ ವಿನ್ಯಾಸದ ಕಲೆಗೆ ಒಂದು ಉದಾಹರಣೆಯಾಗಿದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.