From Wikipedia, the free encyclopedia
ಒಡೆಸ್ಸ ಉಕ್ರೇನಿಯನ್ ಗಣರಾಜ್ಯದ ಬಂದರು. ಕಪ್ಪು ಸಮುದ್ರದ ಮೇಲಿದೆ. ಪ್ರಾದೇಶಿಕ ಆಡಳಿತ ಕೇಂದ್ರ.
ಒಡೆಸ್ಸ
Одеса ಒಡೆಸ್ಸ | |
---|---|
City | |
Coordinates: 46°29′8.6″N 30°44′36.4″E | |
Country | ಉಕ್ರೇನ್ |
Oblast | Odesa Oblast |
Raion | Odesa Raion |
Hromada | Odesa urban hromada |
First mentioned | 19 May 1415 |
Government | |
• ಮೇಯರ್ | Gennadiy Trukhanov[೧] (Truth and Deeds[೨]) |
Area | |
• City | ೧೬೨.೪೨ km೨ (೬೨.೭೧ sq mi) |
• Metro | ೩,೬೫೬ km೨ (೧,೪೧೨ sq mi) |
Elevation | ೪೦ m (೧೩೦ ft) |
Highest elevation | ೬೫ m (೨೧೩ ft) |
Lowest elevation | −೪.೨ m (−೧೩.೮ ft) |
Population (2022) | |
• City | ೧೦,೧೦,೫೩೭ |
• Rank | 3rd in Ukraine |
• Density | ೬,೨೦೦/km೨ (೧೬,೦೦೦/sq mi) |
• Metro | ೧೩,೭೮,೪೯೦[೩] |
Demonym(s) | ಆಂಗ್ಲ:Odesan, Odesite, Odessan, Odessite Ukrainian: одесит, одеситка Russian: одессит, одесситка |
Time zone | UTC+2 (EET) |
• Summer (DST) | UTC+3 (EEST) |
Postal codes | 65000–65480 |
Area code | +380 48 |
Website | www.omr.gov.ua/en/ |
UNESCO World Heritage Site | |
Official name: The Historic Centre of Odesa | |
Type | Cultural |
Criteria | ii, iv |
Designated | 2023 (18th extraordinary World Heritage Committee session) |
Reference no. | 1703 |
UNESCO region | Europe |
Endangered | 2023– |
ಈ ನಗರದ ಅಕ್ಷಾಂಶ,ರೇಖಾಂಶ 46°29′8.6″N 30°44′36.4″E. ಜನಸಂಖ್ಯೆ ೧೦,೧೦,೫೩೭ (೨೦೨೧). ಇಲ್ಲಿರುವ ಹಡಗುನಿಲ್ದಾಣಗಳು ಒಟ್ಟು ಐದು. ಜನವರಿ ೨೫,೨೦೨೩ ರಂದು ಈ ನಗರವನ್ನು ವಿಶ್ವ ಪಾರಂಪರಿಕ ತಾಣವಾಗಿ ಘೋಷಿಸಲಾಗಿದೆ.[೪][೫]
ಇಲ್ಲಿಯದು ಖಂಡಾಂತರ ಮಾದರಿಯ ವಾಯುಗುಣ. ಜನವರಿ ತಿಂಗಳ ಸರಾಸರಿ ಉಷ್ಣತೆ 23.20 ಫ್ಯಾ. ಜುಲೈ ತಿಂಗಳ ಸರಾಸರಿ ಉಷ್ಣತೆ 72.80 ಫ್ಯಾ. ವಾರ್ಷಿಕ ಸರಾಸರಿ ಮಳೆ 14". ವರ್ಷದ ಕೆಲವು ದಿನಗಳಲ್ಲಿ ಹಿಮದಿಂದ ಹೆಪ್ಪುಗಟ್ಟುವುದರಿಂದ ಆ ಕಾಲದಲ್ಲಿ ಸಮುದ್ರಯಾನಕ್ಕೆ ಅಡಚಣೆಯಾಗುತ್ತದೆ.
1803ರಲ್ಲಿ ಈ ಪಟ್ಟಣವನ್ನು ಮುಖ್ಯ ಬಂದರನ್ನಾಗಿ ಅಭಿವೃದ್ಧಿಗೊಳಿಸಲಾಯಿತು. 1926ರ ಹೊತ್ತಿಗೆ ಇದು ಕಪ್ಪು ಸಮುದ್ರದ ಮುಖ್ಯ ವಾಣಿಜ್ಯ ರೇವುಪಟ್ಟಣವಾಯಿತು.
ಈಚೆಗೆ ಸಾಪೇಕ್ಷವಾಗಿ ಒಡೆಸ್ಸದ ಪ್ರಾಮುಖ್ಯ ಕಡಿಮೆಯಾಗಿರುವುದಾದರೂ ಇದು ಮುಖ್ಯ ಕೈಗಾರಿಕಾ ಮತ್ತು ವಾಣಿಜ್ಯ ಕೇಂದ್ರ. ಉಪ್ಪು, ಗಾಜು, ಹೆಂಚು, ವ್ಯವಸಾಯದ ಉಪಕರಣಗಳು, ತವರ, ಬಿರಡೆ ಇವು ಮುಖ್ಯ ತಯಾರಿಕೆಗಳು. ಇತ್ತೀಚೆಗೆ ಚಲನಚಿತ್ರ ಯಂತ್ರ, ವಿಮಾನ, ಹಡಗು, ಎಣ್ಣೆಶುದ್ದೀಕರಣ ಮುಂತಾದ ಕೈಗಾರಿಕೆಗಳು ಸ್ಥಾಪಿತವಾಗಿವೆ.ಒಡೆಸ್ಸ ಬಂದರಿನ ಮುಖಾಂತರ ರಫ್ತಾಗುವ ಪದಾರ್ಥಗಳಲ್ಲಿ ಎಣ್ಣೆಕಾಳು, ಉಣ್ಣೆ, ದನಕರು, ಸಕ್ಕರೆ, ಮರದ ದಿಮ್ಮಿ ಮುಖ್ಯ. ಕಲ್ಲಿದ್ದಲು, ಕಬ್ಬಿಣ, ಯಂತ್ರೋಪಕರಣ, ವ್ಯವಸಾಯದ ಉಪಕರಣಗಳು, ಕಚ್ಚಾಹತ್ತಿ, ಹೊಗೆಸೊಪ್ಪು, ಚಹಾ, ಕಾಫಿ ಮುಖ್ಯ ಆಮದುಗಳು.
ಒಡೆಸ್ಸ ನಗರಕ್ಕೂ ರಷ್ಯದ ಮುಖ್ಯ ಪಟ್ಟಣಗಳಿಗೂ ನಡುವೆ ವಿಮಾನ ಮತ್ತು ರೈಲ್ವೆ ಸಂಪರ್ಕವಿದೆ. ಈ ಪಟ್ಟಣಕ್ಕೆ ನೀರು ಸರಬರಾಯಿಯಾಗುವುದು ನೀಪರ್ ನದಿಯಿಂದ.
ರಷ್ಯನ್, ಉಕ್ರೇನಿಯನ್, ಯಹೂದಿ, ಪೋಲ್, ಜರ್ಮನ್, ಗ್ರೀಕ್, ಅಮೆರಿಕನ್, ಟಾರ್ಟರ್ ಮತ್ತು ತುರ್ಕೀಜನ ಇಲ್ಲಿದ್ದಾರೆ. ಹಿಂದಿನ ದಕ್ಷಿಣ ರಷ್ಯದ ವಿಶ್ವವಿದ್ಯಾನಿಲಯವನ್ನು ಈಗ ತಾಂತ್ರಿಕ ಶಿಕ್ಷಣ ಕೇಂದ್ರವನ್ನಾಗಿ ಪರಿವರ್ತಿಸಲಾಗಿದೆ. ಆರೋಗ್ಯಧಾಮಗಳು, ಆಹಾರ ಸಂಶೋಧನಾಲಯ ಕೇಂದ್ರಗಳು, ವ್ಯವಸಾಯ ಕಾಲೇಜುಗಳು, ಸಾರ್ವಜನಿಕ ಪುಸ್ತಕ ಭಂಡಾರಗಳು ಇಲ್ಲಿವೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.