ಎಲಚಿ
From Wikipedia, the free encyclopedia
From Wikipedia, the free encyclopedia
ಎಲಚಿ(ಬೋರೆ ಹಣ್ಣು): ರ್ಯಾಮ್ನೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವೃಕ್ಷ ಜಾತಿಯ ಸಸ್ಯ (ಝಿಝಿಫಸ್ ಜುಜೂಬ), ಇಂಗ್ಲೀಷ್ ಭಾಷೆಯಲ್ಲಿ ಇದಕ್ಕೆ ಬ್ಹೇರ್ ಫ್ರೂಟ್ ಟ್ರೀ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಬೋರೆ ಎಂಬ ಹೆಸರೂ ಉಂಟು. ಇದು ಭಾರತ, ಪಾಕಿಸ್ತಾನ, ಮಯನ್ಮಾರ್, ಶ್ರೀಲಂಕ, ಚೀನ, ಆಫ್ಘಾನಿಸ್ತಾನ, ಆಸ್ಟ್ರೇಲಿಯ, ಆಫ್ರಿಕ ಗಳಲ್ಲಿ ಹರಡಿದೆ. ಹುಲ್ಲುಗಾವಲು, ಒಣಬಂಜರು ನೆಲಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಅಲಂಕಾರಕ್ಕಾಗೂ ಹಣ್ಣುಗಳಿಗಾಗೂ ಬೆಳೆಸುತ್ತಾರೆ.
ಝಿಝಿಫಸ್ (ಬೋರೆ ಹಣ್ಣು) ಎಲಚೆಹಣ್ಣು | |
---|---|
Ziziphus jujuba | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Rosales |
ಕುಟುಂಬ: | Rhamnaceae |
ಕುಲ: | Ziziphus |
ಪ್ರಜಾತಿ: | Z. jujuba |
Binomial name | |
Ziziphus jujuba Mill. | |
Synonyms[1] | |
|
Azufaifas fcm.jpg | |
Fresh jujube fruit | |
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz) | |
---|---|
ಆಹಾರ ಚೈತನ್ಯ | 331 kJ (79 kcal) |
ಶರ್ಕರ ಪಿಷ್ಟ | 20.23 g |
ಕೊಬ್ಬು | 0.2 g |
ಪ್ರೋಟೀನ್(ಪೋಷಕಾಂಶ) | 1.2 g |
ನೀರು | 77.86 g |
Vitamin A equiv. | 40 μg (5%) |
Thiamine (vit. B1) | 0.02 mg (2%) |
Riboflavin (vit. B2) | 0.04 mg (3%) |
Niacin (vit. B3) | 0.9 mg (6%) |
Vitamin B6 | 0.081 mg (6%) |
Vitamin C | 69 mg (83%) |
ಕ್ಯಾಲ್ಸಿಯಂ | 21 mg (2%) |
ಕಬ್ಬಿಣ ಸತ್ವ | 0.48 mg (4%) |
ಮೆಗ್ನೇಸಿಯಂ | 10 mg (3%) |
ಮ್ಯಾಂಗನೀಸ್ | 0.084 mg (4%) |
ರಂಜಕ | 23 mg (3%) |
ಪೊಟಾಸಿಯಂ | 250 mg (5%) |
ಸೋಡಿಯಂ | 3 mg (0%) |
ಸತು | 0.05 mg (1%) |
Link to USDA Database entry Percentages are roughly approximated using US recommendations for adults. Source: USDA Nutrient Database |
Ziziphus jujuba MS 2461.JPG | |
Jujube fruit naturally turns red upon drying. | |
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz) | |
---|---|
ಆಹಾರ ಚೈತನ್ಯ | 1,201 kJ (287 kcal) |
ಶರ್ಕರ ಪಿಷ್ಟ | 73.6 g |
ಕೊಬ್ಬು | 1.1 g |
ಪ್ರೋಟೀನ್(ಪೋಷಕಾಂಶ) | 3.7 g |
ನೀರು | 19.7 g |
Vitamin A equiv. | 0 μg (0%) |
Thiamine (vit. B1) | 0.21 mg (18%) |
Riboflavin (vit. B2) | 0.36 mg (30%) |
Niacin (vit. B3) | 0.5 mg (3%) |
Vitamin B6 | 0 mg (0%) |
Vitamin C | 13 mg (16%) |
ಕ್ಯಾಲ್ಸಿಯಂ | 79 mg (8%) |
ಕಬ್ಬಿಣ ಸತ್ವ | 1.8 mg (14%) |
ಮೆಗ್ನೇಸಿಯಂ | 37 mg (10%) |
ಮ್ಯಾಂಗನೀಸ್ | 0.305 mg (15%) |
ರಂಜಕ | 100 mg (14%) |
ಪೊಟಾಸಿಯಂ | 531 mg (11%) |
ಸೋಡಿಯಂ | 9 mg (1%) |
ಸತು | 0.19 mg (2%) |
Link to USDA Database entry Percentages are roughly approximated using US recommendations for adults. Source: USDA Nutrient Database |
ಎಲಚಿ ಮರ 10-15ಮೀ. ಎತ್ತರಕ್ಕೆ ಬೆಳೆಯುವ ಕುಳ್ಳು ಕಾಂಡದ ಮಧ್ಯಮ ಪ್ರಮಾಣದ ವೃಕ್ಷ. ಕಾಂಡ ಕಪ್ಪುಬಣ್ಣದ ತೊಗಟೆಯಿಂದ ಆವೃತ ವಾಗಿದೆ. ತೊಗಟೆಯ ಮೇಲ್ಗಡೆ ಸೀಳಿಕೆ ಗಳಿದ್ದು ಒಳಭಾಗ ಕೆಂಪಾಗಿರುತ್ತದೆ. ರೆಂಬೆಗಳು ತೂಗು ಬಿದ್ದಿರುತ್ತವೆ. ಪುಷ್ಯ ಪತ್ರಗಳು (ಸ್ಟಿಪ್ಯುಲ್ಸ್) ಮುಳ್ಳುಗಳಾಗಿ ಮಾರ್ಪಟ್ಟು ಒಂದು ನೆಟ್ಟಗೂ ಇನ್ನೊಂದು ಇಳಿಮುಖವಾಗಿಯೂ ಇವೆ. ಸುಮಾರು ಚಕ್ರಾಕಾರವಾಗಿ ಮೂರು ನರಗಳುಳ್ಳ ಎಲೆಗಳ ಕೆಳಭಾಗದಲ್ಲಿ ಬಿಳಿಗೂದಲುಗಳಿವೆ. ಹೂಗಳು ಸಣ್ಣವಾಗಿ ಹಸಿರು. ಹಳದಿ ಬಣ್ಣದಿಂದ ಕೂಡಿದ್ದು ಎಲೆ ಕಂಕುಳ ನಡುವೆ ಮಧ್ಯಾರಂಭಿ ಗೊಂಚಲುಗಳಲ್ಲಿ (ಸೈಮ್ಸ್) ಕಾಣಬರುತ್ತವೆ. ಹಣ್ಣಗಳು ದುಂಡಾಗಿ ಕಿತ್ತಳೆ ಅಥವಾ ಕೆಂಪು ಬಣ್ಣದಿಂದ ಕೂಡಿದ ಅಷ್ಟಿಫಲಗಳು, ಒಳ ಓಟೆ ಬಹುಗಟ್ಟಿ. ರಾಯ ಬೋರೆ ಎಂಬ ಒಂದು ಜಾತಿ ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಕೊಡುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.