Remove ads
From Wikipedia, the free encyclopedia
ಅಶ್ರಗ ಒಂದು ಜ್ಯಾಮಿತೀಯ ಆಕೃತಿ (ಪ್ರಿಸ್ಮ್). ಎರಡು ಸರ್ವಾಂತರ ಸರ್ವಸಮ ಬಹುಭುಜಗಳು ಇದರ ಆಧಾರ ತಲಗಳು (ಬೇಸಸ್). ಇವುಗಳನ್ನು ಸಮರೂಪವಾಗಿಯೂ (ಸಿಮಿಲರ್ಲಿ) ಪರಸ್ಪರ ಸಮಾನಾಂತರವಾಗಿಯೂ ಭಿನ್ನ ಸಮತಲಗಳಲ್ಲಿ ಇಡಲಾಗಿದೆ. ತಲಗಳ ಅನುರೂಪ ಶೃಂಗಗಳನ್ನು ಸರಳರೇಖೆಗಳಿಂದ ಜೋಡಿಸಿದರೆ ಅಶ್ರಕದ ಫಲಕಗಳೇ. ಆದ್ದರಿಂದ ತಲಗಳನ್ನುಳಿದ ಈ ಫಲಕಗಳನ್ನು ಪಾಶ್ರ್ವಫಲಕಗಳೆಂದು ಕರೆಯುವುದುಂಟು. ಪಾಶ್ರ್ವಪಲಕಗಳು ಸಮಾಂತರ ಚತುರ್ಭುಜಗಳು. ಇಂಥ ಎರಡು ಫಲಕಗಳು ಸಂಧಿಸುವ ರೇಖೆ ಅಥವಾ ತಲಗಳ ಅನುರೂಪ ಶೃಂಗಗಳನ್ನು ಜೋಡಿಸುವ ರೇಖೆಯ ಹೆಸರು ಪಾಶ್ರ್ವ ಅಂಚು (ಲ್ಯಾಟರಲ್ ಎಡ್ಜ್).
ಅಶ್ರಗದ ಎರಡು ರೂಪಗಳು ಪಾಶ್ರ್ವ ಅಂಚುಗಳು ಪರಸ್ಪರ ಸಮಾನ ಮತ್ತು ಸಮಾಂತರವಾಗಿದೆ. ತಲಗಳು ತ್ರಿಕೋನಗಳಾದಾಗ ತ್ರಿಕೋಣೀಯ ಅಶ್ರಕವೂ ಚತುಷ್ಕೋನಗಳಾದಾಗ ಚತುಷ್ಕೋನಾಶ್ರಕವೂ ಇತ್ಯಾದಿ ದೊರೆಯುತ್ತವೆ. ಸಮಾಂತರ ಷಟ್ಫಲಕ (ಪ್ಯಾರಲ್ಲಲೇ ಪೈಪಡ್) ಒಂದು ಅಶ್ರಕ. ಇಲ್ಲಿ ಯಾವುದೇ ಒಂದು ಜೊತೆ ಎದುರು ಫಲಕಗಳು ತಲಗಳಾಗುತ್ತವೆ. ಒಂದು ಅಶ್ರಕದ ತಲಗಳು ಕ್ರಮಬಹುಭುಜಗಳಾದರೆ (ರೆಗ್ಯುಲರ್ ಪಾಲಿಗನ್ಸ್-ಎಲ್ಲ ಭುಜಗಳೂ ಸಮಾನ ಎಲ್ಲ ಕೋನಗಳೂ ಸಮಾನ) ಆ ಅಶ್ರಕ ಕ್ರಮಾಶ್ರಗವಾಗುವುದು (ರೆಗ್ಯುಲರ್ ಪ್ರಿಸ್ಮ್). ಇದನ್ನು ಪಟ್ಟಕವೆಂದು ಕರೆಯುವುದು ರೂಢಿಯಲ್ಲಿದೆ. ವಿಶೇಷವಾಗಿ ದ್ಯುತಿ ವಿಜ್ಞಾನದಲ್ಲಿ ಕಿರಣ ಪಥವನ್ನು ವಿಚಲಿಸಲು, ಬಿಳಿ ಬೆಳಕನ್ನು ಗೋಚರ ರೋಹಿತವಾಗಿ ಪ್ರಸರಿಸಲು ಅಥವಾ ತಲೆಕೆಳಗಾದ ಪ್ರತಿಬಿಂಬ ಸ್ಥಾಪಿಸಲು ವಿವಿಧ ರೀತಿಯಲ್ಲಿ ತಯಾರಿಸಿದ ಅಶ್ರಕದ ಬಳಕೆ ಇದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.