ಒಂದು ಬಗೆಯ ಮಾನಸಿಕ ರೋಗ From Wikipedia, the free encyclopedia
ಇಚ್ಛಿತ್ತ ವಿಕಲತೆ ಅಥವಾ ಸ್ಕಿಜೋಫ್ರೇನಿಯ(ಆಂಗ್ಲ ಭಾಷೆಯಲ್ಲಿ) ಒಂದು ರೀತಿಯ ಮಾನಸಿಕ ಕಾಯಿಲೆ. ಮನುಷ್ಯನ ಮಿದುಳಿನಲ್ಲಿನ ನರದೌರ್ಬಲ್ಯದಿಂದಾಗಿ ರೋಗಿಯು ಇಂಥದೊಂದು ರೋಗಕ್ಕೆ ತುತ್ತಾಗುತ್ತಾನೆಂದು ಮನಶ್ಶಾಸ್ತ್ರಜ್ಞರು ವಿಶ್ಲೇಷಿಸುತ್ತಾರೆ. ಅಜ್ಞಾತ ಸ್ಥಳದಿಂದ ಶಬ್ಧ ಕೇಳಿಸುವಿಕೆ, ಅನಪೇಕ್ಷಿತ ನಗು ಅಥವಾ ಅಳುವಿಕೆ, ಮೃತ ಸಂಬಂಧಿಗಳು ತನ್ನೊಂದಿಗೆ ಮಾತನಾಡುತ್ತಿದ್ದಾರೆಂದು ವಾದಿಸುವಿಕೆ-ಇವೇ ಮುಂತಾದ ಲಕ್ಷಣಗಳನ್ನು ರೋಗಿಯಲ್ಲಿ ಕಾಣಬಹುದಾಗಿದೆ. ಬಾಲ್ಯದಲ್ಲಿನ ಬಡತನ, ದಾಯಾದಿಗಳಲ್ಲಿನ ಅನಿರೀಕ್ಷಿತ ಸಾವು ಅಥವಾ ಇನ್ನ್ಯಾವುದೋ ಆಕಸ್ಮಿಕ ಘಟನೆ ಕೂಡ ಸ್ಕಿಝೋಫ್ರೇನಿಯ ಕಾಯಿಲೆಗೆ ಕಾರಣವಾಗಬಲ್ಲದೆಂದು ವೈದ್ಯ ಜಗತ್ತು ಅಭಿಪ್ರಾಯಪಟ್ಟಿದೆ.
ಇಚ್ಛಿತ ವಿಕಲತೆ | |
---|---|
ಉಚ್ಚಾರ |
|
ವೈದ್ಯಕೀಯ ವಿಭಾಗಗಳು | ಮನೋವೈದ್ಯಶಾಸ್ತ್ರ |
ಲಕ್ಷಣಗಳು | ಯಾರೋ ಮಾತಾಡಿದಂತೆ ಅನಿಸುವುದು, ಅಸ್ತವ್ಯಸ್ತ ಆಲೋಚನಾ ಸರಣಿ, ಗೊಂದಲ |
ಕಾಯಿಲೆಯ ಗೋಚರ/ಪ್ರಾರಂಭ | ೧೬ ರಿಂದ ೩೦ನೇ ವಯಸಿನಲ್ಲಿ ಕಾಣಿಸಿಕೊಳ್ಳಬಹುದು |
ಕಾಲಾವಧಿ | ದೀರ್ಘಾವಧಿ |
ಕಾರಣಗಳು | ಒತ್ತಡ, ಮಾನಸಿಕ ಆಘಾತ |
ಅಪಾಯಕಾರಿ ಅಂಶಗಳು | ಕುಟುಂಬ ಸಂಬಂಧದಲ್ಲಿ ಒಡಕು, ಆತ್ಮಹತ್ಯೆಗೆ ಪ್ರಯತ್ನ |
ರೋಗನಿರ್ಣಯ | ನಡವಳಿಕೆಯನ್ನು ಗಮನಿಸುವುದು, ಆಹಾರ ವಿಹಾರದಲ್ಲಿನ ವಿಪರೀತ ವ್ಯತ್ಯಾಸಗಳು |
ಔಷಧಿ | ಆಪ್ತ ಸಲಹೆ, ಅಗತ್ಯಬಿದ್ದಾಗ ಸೂಕ್ತ ಔಷಧಿಗಳು |
ಸ್ಕಿಜೋಫ್ರೇನಿಯಾ (pronounced /ˌskɪtsɵˈfrɛniə/ ಅಥವಾ /ˌskɪtsɵˈfriːniə/) ಎಂಬುದು, ಗ್ರೀಕ್ ಮೂಲಗಳಾದ ಸ್ಕಿಜೇನ್ (σχίζειν , "ಸೀಳುವುದು") ಮತ್ತು ಫ್ರೇನ್, ಫ್ರೇನ್- (φρήν, φρεν- ; "ಮನಸ್ಸು") ಎಂಬುದರಿಂದ ರೂಪುಗೊಂಡಿದ್ದು, ಇದೊಂದು ಮನೋವೈದ್ಯಕೀಯ ರೋಗನಿರ್ಣಯವಾಗಿದೆ. ವಾಸ್ತವತೆಯನ್ನು ಗ್ರಹಿಸುವ ಇಲ್ಲವೇ ಅಭಿವ್ಯಕ್ತಿಸುವಲ್ಲಿನ ವೈಪರೀತ್ಯಗಳಿಂದ ನಿರೂಪಿಸಲ್ಪಟ್ಟಿರುವ ಒಂದು ಮಾನಸಿಕ ಅಸ್ವಸ್ಥತೆಯನ್ನು ಈ ಮನೋವೈದ್ಯಕೀಯ ರೋಗನಿರ್ಣಯವು ವಿವರಿಸುತ್ತದೆ. ಗ್ರಹಿಕೆಯಲ್ಲಿನ ಅಸ್ಪಷ್ಟತೆಗಳು ದೃಶ್ಯ, ಶ್ರವಣ, ರುಚಿ, ವಾಸನೆ ಮತ್ತು ಸ್ಪರ್ಶವನ್ನು ಒಳಗೊಂಡಿರುವ[ಸೂಕ್ತ ಉಲ್ಲೇಖನ ಬೇಕು] ಎಲ್ಲಾ ಐದೂ ಇಂದ್ರಿಯಗಳ ಮೇಲೆ ಪ್ರಭಾವವನ್ನುಂಟುಮಾಡಬಹುದು. ಆದರೂ ಬಹು ಸಾಮಾನ್ಯವಾಗಿ ಶ್ರವಣೀಯ ಭ್ರಾಂತಿಗಳು, ಸಂಶಯಗ್ರಸ್ತ ಅಥವಾ ವಿಲಕ್ಷಣ ಭ್ರಮೆಗಳು, ಅಥವಾ ಅಸ್ತವ್ಯಸ್ತವಾದ ಮಾತು ಹಾಗೂ ಆಲೋಚನೆಯ ಜೊತೆಗೆ, ಗಮನಾರ್ಹವಾದ ಸಾಮಾಜಿಕ ಅಥವಾ ಔದ್ಯೋಗಿಕ ಅಪಸಾಮಾನ್ಯ ಕ್ರಿಯೆಯಾಗಿ ಈ ಅಸ್ಪಷ್ಟತೆಗಳು ಕಾಣಿಸಿಕೊಳ್ಳಬಹುದು.
ರೋಗಲಕ್ಷಣಗಳ ಬಿರುಸಾದ ಆರಂಭವಾಗುವಿಕೆಯು ವಿಶಿಷ್ಟವೆಂಬಂತೆ ಕಿರಿಯ ಪ್ರೌಢಾವಸ್ಥೆಯಲ್ಲಿ ಕಂಡುಬರುತ್ತದೆ,[1] ಒಟ್ಟಾರೆ ಜನಸಂಖ್ಯೆಯ ಸರಿಸುಮಾರು 0.4–0.6%ನಷ್ಟು[2][3] ಭಾಗ ಈಗಾಗಲೇ ಇದಕ್ಕೆ ಈಡಾಗಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ರೋಗಿಯ ಸ್ವಯಂ-ದಾಖಲಿತ ಅನುಭವಗಳು ಮತ್ತು ವೀಕ್ಷಿತ ನಡವಳಿಕೆಯನ್ನು ರೋಗನಿರ್ಣಯವು ಆಧರಿಸಿರುತ್ತದೆ. ಸ್ಕಿಜೋಫ್ರೇನಿಯಾಗೆ ಸಂಬಂಧಿಸಿದಂತೆ ಪ್ರಯೋಗಾಲಯದ ಯಾವುದೇ ಪರೀಕ್ಷೆಯೂ ಪ್ರಸ್ತುತ ಲಭ್ಯವಿಲ್ಲ.
ತಳಿಶಾಸ್ತ್ರ, ಆರಂಭಿಕ ಪರಿಸರ, ನರಜೀವಶಾಸ್ತ್ರ, ಮಾನಸಿಕ ಮತ್ತು ಸಾಮಾಜಿಕ ಪ್ರಕ್ರಿಯೆಗಳು ಇದರ ಪ್ರಮುಖ ಸಹಾಯಕ ಅಂಶಗಳಾಗಿವೆ; ಕೆಲವೊಂದು ವಿಹಾರದ ಮತ್ತು ಶಿಫಾರಿತ ಔಷಧಿಗಳು ಇದನ್ನು ಉಂಟುಮಾಡಬಹುದು ಅಥವಾ ರೋಗಲಕ್ಷಣಗಳನ್ನು ಹದಗೆಡಿಸಬಹುದು ಎಂಬಂತೆ ತೋರುತ್ತವೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಪ್ರಸಕ್ತ ಮನೋವೈದ್ಯಕೀಯ ಸಂಶೋಧನೆಯು ನರಜೀವಶಾಸ್ತ್ರದ ಪಾತ್ರದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆಯಾದರೂ, ಒಂದೇ ಒಂದು ಸುಸಂಘಟಿತ ಕಾರಣವು ಇದುವರೆಗೂ ಪತ್ತೆಯಾಗಿಲ್ಲ. ರೋಗಲಕ್ಷಣಗಳ ಅನೇಕ ಸಂಭವನೀಯ ಸಂಯೋಜನೆಗಳ ಪರಿಣಾಮವಾಗಿ, ರೋಗನಿರ್ಣಯವು ಒಂದು ಏಕ ಅಸ್ವಸ್ಥತೆಯನ್ನು ಪ್ರತಿನಿಧಿಸುತ್ತದೋ ಅಥವಾ ಅಸಂಖ್ಯಾತ ವಿಭಿನ್ನ ರೋಗದ ಸಹಲಕ್ಷಣಗಳನ್ನು ಪ್ರತಿನಿಧಿಸುತ್ತದೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಕಾರಣಕ್ಕಾಗಿಯೇ ಯೂಜೆನ್ ಬ್ಲ್ಯೂಗರ್ ಎಂಬಾತ ಹೆಸರನ್ನು ಹುಟ್ಟುಹಾಕುವಾಗ ಸದರಿ ಕಾಯಿಲೆಗೆ ದಿ ಸ್ಕಿಜೋಫ್ರೇನಿಯಾಸ್ (ಬಹುವಚನ) ಎಂದೇ ಹೆಸರಿಟ್ಟ. ಅದರ ವ್ಯುತ್ಪತ್ತಿಯು ಹೀಗಿದ್ದರೂ, ಸ್ಕಿಜೋಫ್ರೇನಿಯಾವು ಅನೇಕಾತ್ಮಕ ವ್ಯಕ್ತಿತ್ವದ ಅಸ್ತವ್ಯಸ್ತತೆ ಅಥವಾ ಒಡಕು ವ್ಯಕ್ತಿತ್ವವೆಂದು ಈ ಹಿಂದೆ ಹೇಳಲಾಗುತ್ತಿದ್ದ ವಿಘಟನೆಯ ಚಹರೆಯ ಅಸ್ವಸ್ಥತೆಯ ಲಕ್ಷಣಗಳನ್ನು ಹೊಂದಿಲ್ಲ. ಇದರೊಂದಿಗೆ ಸ್ಕಿಜೋಫ್ರೇನಿಯಾವನ್ನು ತಪ್ಪಾಗಿ ಗುರುತಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.[4]
ಮೆದುಳಿನ ಮೀಸೋಲಿಂಬಿಕ್ ಪ್ರತಿಕ್ರಿಯಾ ಸರಣಿಯಲ್ಲಿನ ಡೋಪಮೈನ್ ಕಾರ್ಯಚಟುವಟಿಕೆಯಲ್ಲಿನ ಹೆಚ್ಚಳವು ಛಿದ್ರಮನಸ್ಕ (ಸ್ಕಿಝೋಫ್ರೇನಿಕ್) ವ್ಯಕ್ತಿಗಳಲ್ಲಿ ಏಕಪ್ರಕಾರವಾಗಿ ಕಂಡುಬರುತ್ತದೆ. ಮನೋವಿಕೃತಿ-ನಿರೋಧಕ (ಆಂಟಿಸೈಕೋಟಿಕ್) ಔಷಧೀಕರಣವು ಚಿಕಿತ್ಸೆಯ ಮೂಲಾಧಾರವಾಗಿದೆ; ಈ ಬಗೆಯ ಔಷಧವು ಮೂಲತಃ ಡೋಪಮೈನ್ ಕಾರ್ಯಚಟುವಟಿಕೆಯನ್ನು ತಗ್ಗಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ. ಮನೋವಿಕೃತಿ-ನಿರೋಧಕ ಔಷಧಿಯ ಪ್ರಮಾಣಗಳು (ಡೋಸೇಜ್) ಸಾಮಾನ್ಯವಾಗಿ ಅವುಗಳ ಬಳಕೆಯ ಆರಂಭಿಕ ದಶಕಗಳಲ್ಲಿದ್ದ ಪ್ರಮಾಣಕ್ಕಿಂತ ಕಡಿಮೆಯಿದೆ. ಮಾನಸಿಕ ಚಿಕಿತ್ಸೆ, ಮತ್ತು ಉದ್ಯೋಗಕ್ಕೆ ಸಂಬಂಧಿಸಿ ಮತ್ತು ಸಾಮಾಜಿಕವಾಗಿ ಪುನಃಸ್ಥಾಪನೆ ಮಾಡುವುದು ಸಹ ತುಂಬಾ ಮುಖ್ಯವಾಗಿರುತ್ತದೆ. ಸ್ವತಃ ತನಗೆ ಹಾಗೂ ಇತರರಿಗೆ ಅಪಾಯವಿರುವಂಥ ಹೆಚ್ಚು ಗಂಭೀರವಾಗಿರುವ ಪ್ರಕರಣಗಳಲ್ಲಿ, ಸ್ವಯಂಪ್ರೇರಿತರಾಗಿ ಆಸ್ಪತ್ರೆಗೆ ಸೇರಿಸುವುದು ಅತ್ಯಗತ್ಯವಾಗಿ ಕಂಡುಬರಬಹುದು. ಆಸ್ಪತ್ರೆಯಲ್ಲಿ ಇರಬೇಕಾಗಿ ಬರುವ ಅವಧಿಗಳೂ ಅಷ್ಟೇ, ಈ ಹಿಂದಿನ ಅವಧಿಗಳಲ್ಲಿದ್ದ ಅವಧಿಗಿಂತ ಕಡಿಮೆ ಪುನರಾವರ್ತನೆಯದ್ದಾಗಿದ್ದು ಕಡಿಮೆ ಅವಧಿಗಳಿಂದ ಕೂಡಿರುತ್ತದೆ.[5]
ಅಸ್ವಸ್ಥತೆಯು ಗ್ರಹಣಶಕ್ತಿಯ ಮೇಲೆ ಪ್ರಭಾವ ಬೀರಬಹುದು ಎಂದು ಭಾವಿಸಲಾಗಿದ್ದರೂ, ಇದು ನಡವಳಿಕೆ ಮತ್ತು ಮನಸ್ಸಿನ ದುಗುಡದೊಂದಿಗಿನ ದೀರ್ಘಕಾಲದ ಸಮಸ್ಯೆಗಳಿಗೆ ವಾಡಿಕೆಯಂತೆ ತನ್ನದೇ ಆದ ಕಾಣಿಕೆಯನ್ನೂ ನೀಡುತ್ತದೆ. ಸ್ಕಿಜೋಫ್ರೇನಿಯಾ ಸಮಸ್ಯೆಯಿರುವ ಜನರು ತೀವ್ರಸ್ವರೂಪದ ಖಿನ್ನತೆ ಮತ್ತು ಕಳವಳದ ಅಸ್ವಸ್ಥತೆಗಳನ್ನೊಳಗೊಂಡಂತೆ;ಹೆಚ್ಚುವರಿ (ಕೊಮೊರ್ಬಿಡ್) ಅಪಸಾಮಾನ್ಯ ಸ್ಥಿತಿಗಳನ್ನು ಹೊಂದುವ ಸಾಧ್ಯತೆಗಳಿದ್ದು, ಅಜೀವವಾಗಿ ಘನತೆಯ ದುರುಪಯೋಗವು ಸಂಭವಿಸುವ ಸಾಧ್ಯತೆಯು ಸುಮಾರು 40%ನಷ್ಟಿದೆ.[6]
ಸುದೀರ್ಘ-ಕಾಲದ ನಿರುದ್ಯೋಗ, ಬಡತನ ಮತ್ತು ದಿಕ್ಕಿಲ್ಲದಿರುವಿಕೆಯಂಥ ಸಾಮಾಜಿಕ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ. ಅಸ್ವಸ್ಥತೆಯನ್ನು ಹೊಂದಿರುವ ಜನರ ಜೀವನ ನಿರೀಕ್ಷೆಯು ಅದನ್ನು ಹೊಂದಿಲ್ಲದ ಜನರಿಗಿಂತ 10ರಿಂದ 12ವರ್ಷಗಳಷ್ಟು ಕಡಿಮೆಯಿರುತ್ತದೆ. ದೈಹಿಕ ಆರೋಗ್ಯ ಸಮಸ್ಯೆಗಳಲ್ಲಿನ ಹೆಚ್ಚಳ ಮತ್ತು ಹೆಚ್ಚಿನ ಪ್ರಮಾಣದ ಆತ್ಮಹತ್ಯೆಯ ಪ್ರಕರಣಗಳು ಇದಕ್ಕೆ ಕಾರಣ.[7]
ಸ್ಕಿಜೋಫ್ರೇನಿಯಾ ಸಮಸ್ಯೆಯಿದೆ ಎಂದು ಹೇಳಲಾದ ವ್ಯಕ್ತಿಯೋರ್ವ ಶ್ರವಣೀಯ ಭ್ರಾಂತಿಗಳು, ಭ್ರಮೆಗಳು, ಮತ್ತು ಅಸ್ತವ್ಯಸ್ತವಾದ ಹಾಗೂ ಅಸಹಜವಾದ ಯೋಚನಾಲಹರಿ ಮತ್ತು ಮಾತನ್ನು ಪ್ರದರ್ಶಿಸಬಹುದು; ಆಲೋಚನೆ ಮತ್ತು ವಿಷಯದ ಲಹರಿಯ ಸರಪಳಿಯು ನಷ್ಟವಾಗುವುದು, ಬಿಡಿಬಿಡಿಯಾದ ಅರ್ಥದಿಂದ ಜೋಡಿಸಲ್ಪಟ್ಟ ವಾಕ್ಯಗಳಿಂದ ಮೊದಲ್ಗೊಂಡು ಅಸಂಬದ್ಧತೆಯವರೆಗೆ ಈ ವರ್ತನೆ ಕಂಡುಬರಬಹುದು. ಗಂಭೀರವೆನಿಸಬಹುದಾದ ಪ್ರಕರಣಗಳಲ್ಲಿ ಈ ವರ್ತನೆಯನ್ನು ಪದದ ಪಚ್ಚಡಿ ಎಂದು ಕರೆಯುತ್ತಾರೆ. ವೈವಿಧ್ಯಮಯ ಕಾರಣಗಳಿಂದಾಗಿ ಸಾಮಾಜಿಕ ಪ್ರತ್ಯೇಕತೆ ಅಥವಾ ಏಕಾಂಗಿತನವು ಸಾಮಾನ್ಯವಾಗಿ ಕಂಡುಬರುತ್ತದೆ. ಸಾಮಾಜಿಕ ಗ್ರಹಣಶಕ್ತಿಯಲ್ಲಿನ ದುರ್ಬಲಗೊಳಿಸುವಿಕೆಯು ಸ್ಕಿಜೋಫ್ರೇನಿಯಾದೊಂದಿಗೆ ಸಂಬಂಧವನ್ನು ಹೊಂದಿರುವಂತೆಯೇ, ಭ್ರಮೆಗಳು ಮತ್ತು ಭ್ರಾಂತಿಗಳಿಂದ ಬಂದ ಬುದ್ಧಿಭ್ರಮಣೆಯ ರೋಗಲಕ್ಷಣಗಳು ಮತ್ತು ಅವೊಲಿಷನ್ನ (ಜಡತೆ ಅಥವಾ ಪ್ರೇರಣಾಶಕ್ತಿ ಇಲ್ಲದಿರುವಿಕೆ) ಋಣಾತ್ಮಕ ರೋಗಲಕ್ಷಣಗಳು ಇರುತ್ತವೆ. ಅಸಾಮಾನ್ಯವಾದ ಒಂದು ಉಪ-ಬಗೆಯಲ್ಲಿ ವ್ಯಕ್ತಿಯು ಬಹುಮಟ್ಟಿಗೆ ಮೌನದಿಂದಿರಬಹುದು, ವಿಲಕ್ಷಣವಾದ ಭಂಗಿಗಳಲ್ಲಿ ಚಲನರಹಿತ ಸ್ಥಿತಿಯಲ್ಲಿರಬಹುದು, ಅಥವಾ ಉದ್ದೇಶರಹಿತವಾದ ಚಿತ್ತಕ್ಷೋಭೆಯನ್ನು ಪ್ರದರ್ಶಿಸಬಹುದು; ಇವೆಲ್ಲವೂ ಮನೋವಿದಳನ ಅಥವಾ ಮೂರ್ಛೆರೋಗದ ಲಕ್ಷಣಗಳಾಗಿವೆ. ಯಾವುದೇ ಒಂದು ರೋಗಲಕ್ಷಣವು ಸ್ಕಿಜೋಫ್ರೇನಿಯಾದ ರೋಗದ ಚಿಹ್ನೆಯಲ್ಲ, ಮತ್ತು ಎಲ್ಲಾ ಲಕ್ಷಣಗಳು ಇತರ ವೈದ್ಯಕೀಯ ಮತ್ತು ಮನೋವೈದ್ಯಕೀಯ ರೋಗಸ್ಥಿತಿಯಲ್ಲಿ ಕಂಡುಬರಬಹುದು.[8]
ಸ್ಥಿಮಿತವಲ್ಲದ ಕಾರ್ಯವೈಖರಿಯು ಅಥವಾ ವರ್ತನೆಯು ಕಂಡು ಬಂದ ಕಡೇಪಕ್ಷ ಆರು ತಿಂಗಳ ಒಂದು ಅವಧಿಯಲ್ಲಿ ಕಡೇ ಪಕ್ಷ ಒಂದು ತಿಂಗಳ ಅವಧಿಗೆ ರೋಗಲಕ್ಷಣಗಳು ಇರುವುದು ಅಗತ್ಯವಾಗಿರುತ್ತದೆ ಎಂದು ಬುದ್ಧಿವಿಕಲ್ಪಗಳ ಪ್ರಸಕ್ತ ವರ್ಗೀಕರಣವು ಅಭಿಪ್ರಾಯಪಡುತ್ತದೆ. ಸ್ಕಿಜೋಫ್ರೇನಿಯಾ-ರೀತಿಯ ಕಡಿಮೆ ಅವಧಿಯ ಒಂದು ಬುದ್ಧಿವಿಕಲ್ಪವನ್ನು ಒಂದು ಛಿದ್ರಮನಸ್ಕಸ್ವರೂಪದ ಅಸ್ವಸ್ಥತೆ ಎಂದು ಕರೆಯಲಾಗುತ್ತದೆ.[8]
ಹರೆಯದ ಅಂತ್ಯಭಾಗ ಮತ್ತು ಪ್ರೌಢವಯಸ್ಸಿನ ಆರಂಭಿಕ ಹಂತಗಳು ಸ್ಕಿಜೋಫ್ರೇನಿಯಾದ ದೃಢವಾದ ಆರಂಭಕ್ಕೆ ಅತ್ಯುಚ್ಛ್ರಾಯದ ವರ್ಷಗಳಾಗಿವೆ. ಸ್ಕಿಜೋಫ್ರೇನಿಯಾ ರೋಗ ನಿರ್ಣಯಿಸಲ್ಪಟ್ಟಿರುವ ಪುರುಷರ ಪೈಕಿ 40%ನಷ್ಟು ಮತ್ತು ಸ್ತ್ರೀಯರ ಪೈಕಿ 23%ನಷ್ಟು ಪ್ರಕರಣಗಳಲ್ಲಿ, ರೋಗಸ್ಥಿತಿಯು 19 ವರ್ಷ ವಯೋಮಾನಕ್ಕಿಂತ ಮುಂಚಿತವಾಗಿಯೇ ಕಂಡುಬರುತ್ತದೆ.[9] ಓರ್ವ ಯುವ ಪ್ರೌಢವಯಸ್ಕನ ಸಾಮಾಜಿಕ ಮತ್ತು ಔದ್ಯೋಗಿಕ ಅಭಿವೃದ್ಧಿಯಲ್ಲಿ ಇವು ಅತ್ಯಂತ ನಿರ್ಣಾಯಕ ಅವಧಿಗಳಾಗಿರುವುದರಿಂದ, ಅವರು ತೀವ್ರವಾಗಿ ಛಿದ್ರಗೊಳ್ಳುವ ಸಾಧ್ಯತೆಗಳಿರುತ್ತವೆ. ಸ್ಕಿಜೋಫ್ರೇನಿಯಾದ ಪ್ರಭಾವವನ್ನು ತಗ್ಗಿಸಲು, ಅಸ್ವಸ್ಥತೆಯ ಪೂರ್ವಲಕ್ಷಣದ (ದೃಢವಾದ ಆರಂಭಕ್ಕೆ-ಮುಂಚಿನ) ಹಂತವನ್ನು ಗುರುತಿಸಲು ಹಾಗೂ ಚಿಕಿತ್ಸೆ ನೀಡಲು ಹೆಚ್ಚಿನ ರೀತಿಯ ಕೆಲಸಗಳನ್ನು ಇತ್ತೀಚೆಗಷ್ಟೇ ಕೈಗೊಳ್ಳಲಾಗಿದೆ. ರೋಗಲಕ್ಷಣಗಳ ದೃಢವಾದ ಆರಂಭಕ್ಕೆ ಮುಂಚಿನ 30 ತಿಂಗಳವರೆಗೆ ಈ ಹಂತವು ಪತ್ತೆಹಚ್ಚಲ್ಪಟ್ಟಿದೆಯಾದರೂ, ಬಹಳ ಕಾಲದಿಂದ ಅದರ ಅಸ್ತಿತ್ವವಿರಲು ಸಾಧ್ಯವಿದೆ.[10]
ಸ್ಕಿಜೋಫ್ರೇನಿಯಾಕ್ಕೆ ಒಳಗಾಗಬಹುದೆಂದು ತೋರುವ ವ್ಯಕ್ತಿಗಳಿಗೆ ಪೂರ್ವಲಕ್ಷಣದ ಅವಧಿಯಲ್ಲಿ[11] ಕೆಲವೊಂದು ಅನಿರ್ದಿಷ್ಟ ರೋಗಲಕ್ಷಣಗಳು ಅನುಭವಕ್ಕೆ ಬರಬಹುದು. ಅವುಗಳೆಂದರೆ: ಸಾಮಾಜಿಕ ನಿರ್ಗಮನ, ಸಿಟ್ಟಿಗೇಳುವಿಕೆ ಮತ್ತು ಇರುಸುಮುರುಸು, ಮತ್ತು ಬುದ್ಧಿವಿಕಲ್ಪವು ಸ್ಪಷ್ಟವಾಗಿ ಗೋಚರಿಸುವುದಕ್ಕೆ ಮುಂಚಿನ ಪೂರ್ವಲಕ್ಷಣದ ಅವಧಿಯಲ್ಲಿನ ಕ್ಷಣಮಾತ್ರದ ಅಥವಾ ಸ್ವಯಂ-ಸೀಮಿತಗೊಳಿಸುವಿಕೆಯ ಮನೋವಿಕೃತ ರೋಗಲಕ್ಷಣಗಳು.[12]
ಕರ್ತ್ ಸ್ಕ್ನೀಡರ್ (1887–1967) ಎಂಬ ಒಬ್ಬ ಮನೋವೈದ್ಯ, ಒಂದಷ್ಟು ಮನೋವಿಕೃತ ರೋಗಲಕ್ಷಣಗಳ ಸ್ವರೂಪಗಳನ್ನು ಪಟ್ಟಿಮಾಡಿದ್ದು, ಇತರ ಮನೋವಿಕೃತ ಅಸ್ವಸ್ಥತೆಗಳಿಂದ ಸ್ಕಿಜೋಫ್ರೇನಿಯಾವನ್ನು ಇವು ಬೇರ್ಪಡಿಸಿವೆ ಎಂಬುದು ಆತನ ಅಭಿಪ್ರಾಯವಾಗಿತ್ತು. ಇವುಗಳನ್ನು ಮೊದಲ-ಶ್ರೇಣಿಯ ರೋಗಲಕ್ಷಣಗಳು ಅಥವಾ ಸ್ಕ್ನೀಡರ್ನ ಮೊದಲ-ಶ್ರೇಣಿಯ ರೋಗಲಕ್ಷಣಗಳು ಎಂದು ಕರೆಯುತ್ತಾರೆ. ಒಂದು ಬಾಹ್ಯ ಶಕ್ತಿ ಅಥವಾ ಬಲದಿಂದ ನಿಯಂತ್ರಿಸಲ್ಪಡುತ್ತಿರುವುದರ ಕುರಿತಾದ ಭ್ರಮೆಗಳನ್ನು ಈ ಲಕ್ಷಣಗಳು ಒಳಗೊಂಡಿರುತ್ತವೆ; ಓರ್ವರ ಜಾಗೃತ ಮನಸ್ಸಿನೊಳಗೆ ಆಲೋಚನೆಗಳನ್ನು ಒಳಸೇರಿಸಲಾಗುತ್ತಿದೆ ಅಥವಾ ಅಲ್ಲಿಂದ ಹಿಂದೆಗೆದುಕೊಳ್ಳಲಾಗುತ್ತಿದೆ ಎಂಬ ನಂಬಿಕೆ; ಓರ್ವರ ಆಲೋಚನೆಗಳನ್ನು ಇತರ ಜನರಿಗೆ ಪ್ರಸಾರ ಮಾಡಲಾಗುತ್ತಿದೆ ಎಂಬ ನಂಬಿಕೆ; ಮತ್ತು ಓರ್ವರ ಆಲೋಚನೆಗಳು ಅಥವಾ ನಡೆಗಳ ಕುರಿತು ವ್ಯಾಖ್ಯಾನ ಮಾಡುತ್ತಿರುವ ಭ್ರಾಂತಿಸ್ವರೂಪದ ಧ್ವನಿಗಳನ್ನು ಕೇಳುತ್ತಿರುವುದು ಅಥವಾ ಮಿಥ್ಯಾಕಲ್ಪನೆಯಿಂದ ಕೂಡಿದ ಇತರ ಧ್ವನಿಗಳೊಂದಿಗೆ ಭ್ರಾಂತಿಸ್ವರೂಪದ ಧ್ವನಿಗಳು ಸಂಭಾಷಿಸುತ್ತಿರುವುದು- ಇಂಥ ಭ್ರಮೆಗಳು ಇದರಲ್ಲಿ ಸೇರಿರುತ್ತವೆ. ಪ್ರಸಕ್ತ ರೋಗನಿರ್ಣಯದ ಮಾನದಂಡಗಳಿಗೆ ಅವು ಗಣನೀಯ ಪ್ರಮಾಣದ ಕಾಣಿಕೆಯನ್ನು ನೀಡಿವೆಯಾದರೂ, ಮೊದಲ-ಶ್ರೇಣಿಯ ರೋಗಲಕ್ಷಣಗಳ ನಿಷ್ಕೃಷ್ಟತೆಯು ಪ್ರಶ್ನೆಗೆ ಗುರಿಯಾಗಿದೆ, ಸ್ಕ್ನೀಡರ್ನ ಸಮರ್ಥನೆಗಳ ಒಂದು ಮರುದೃಢೀಕರಣವನ್ನಾಗಲೀ ಅಥವಾ ಒಂದು ನಿರಾಕರಣವನ್ನಾಗಲೀ ಮಾಡಲು ಈ ಅಧ್ಯಯನಗಳು ಅವಕಾಶಮಾಡಿಕೊಡುವುದಿಲ್ಲ ಎಂಬುದನ್ನು 1970 ಮತ್ತು 2005ರ ನಡುವೆ ಕೈಗೊಳ್ಳಲಾದ ರೋಗನಿರ್ಣಯದ ಅಧ್ಯಯನಗಳ ಒಂದು ಪುನರವಲೋಕನವು ಕಂಡುಕೊಂಡಿತು. ಅಷ್ಟೇ ಅಲ್ಲ, ರೋಗನಿರ್ಣಯದ ವ್ಯವಸ್ಥೆಗಳ ಭವಿಷ್ಯದ ಪರಿಷ್ಕರಣಗಳಲ್ಲಿ ಮೊದಲ-ಶ್ರೇಣಿಯ ರೋಗಲಕ್ಷಣಗಳಿಗೆ ಒತ್ತು ನೀಡುವುದನ್ನು ಕಡಿಮೆಮಾಡಬೇಕು ಎಂದೂ ಅದು ಸೂಚಿಸಿತು.[13]
ಸ್ಕಿಜೋಫ್ರೇನಿಯಾವನ್ನು ಕೆಲವೊಮ್ಮೆ ಧನಾತ್ಮಕ ಮತ್ತು ಋಣಾತ್ಮಕ (ಅಥವಾ ಕೊರತೆಯ) ರೋಗಲಕ್ಷಣಗಳ ಪರಿಭಾಷೆಯಲ್ಲಿ ವಿವರಿಸಲಾಗುತ್ತದೆ.[14]
ಸಾಮಾನ್ಯವಾಗಿ ಬಹುತೇಕ ವ್ಯಕ್ತಿಗಳ ಅನುಭವಕ್ಕೆ ಬಾರದ ರೋಗಲಕ್ಷಣಗಳಿಗೆ ಧನಾತ್ಮಕ ರೋಗಲಕ್ಷಣಗಳು ಎಂಬ ಪದವು ಅನ್ವಯವಾಗುತ್ತದೆ. ಅವುಗಳಲ್ಲಿ, ಭ್ರಮೆಗಳು, ಶ್ರವಣೀಯ ಭ್ರಾಂತಿಗಳು, ಮತ್ತು ಆಲೋಚನೆಯ ಅಸ್ವಸ್ಥತೆಗಳು ಸೇರಿವೆ, ಮತ್ತು ಅವುಗಳನ್ನು ಬುದ್ಧಿವಿಕಲ್ಪದ ವ್ಯಕ್ತಪಡಿಸುವಿಕೆಗಳು ಎಂದು ವಿಶಿಷ್ಟವಾಗಿ ಪರಿಗಣಿಸಲಾಗುತ್ತದೆ. ಋಣಾತ್ಮಕ ರೋಗಲಕ್ಷಣಗಳಿಗೆ ಆ ಹೆಸರು ಬರಲು ಕಾರಣವೇನೆಂದರೆ, ಎಂದಿನ ವಿಶಿಷ್ಟ ಲಕ್ಷಣಗಳು ಅಥವಾ ಸಾಮರ್ಥ್ಯಗಳ ನಷ್ಟ ಅಥವಾ ಗೈರುಹಾಜರಿಯನ್ನು ಅವು ವ್ಯಕ್ತಪಡಿಸುತ್ತವೆ ಎಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ, ಕೆಲವೊಂದು ಗುಣಲಕ್ಷಣಗಳನ್ನು ಅವು ಒಳಗೊಂಡಿರುತ್ತವೆ. ಅವೆಂದರೆ: ನಿರ್ದಾಕ್ಷಿಣ್ಯವಾದ ಅಥವಾ ಮೊಂಡಾಗಿರುವ ಪ್ರವೃತ್ತಿ ಮತ್ತು ದುಗುಡ, ಮಾತಿನ ಕೊರತೆ (ಅತಾರ್ಕಿಕತೆ), ಮನಸ್ಸಂತೋಷವನ್ನು ಅನುಭವಿಸಲು ಇರುವ ಅಸಾಮರ್ಥ್ಯ (ಭೋಗರಾಹಿತ್ಯ), ಸಂಬಂಧಗಳನ್ನು ರೂಪಿಸಿಕೊಳ್ಳುವಲ್ಲಿನ ಬಯಕೆಯ ಕೊರತೆ (ಏಕಾಂತಪ್ರಿಯತೆ), ಮತ್ತು ಪ್ರೇರಕಶಕ್ತಿಯ ಕೊರತೆ (ಇಚ್ಛಾಶಕ್ತಿಯಿಲ್ಲದಿರುವಿಕೆ). ಕಳಪೆ ಗುಣಮಟ್ಟದ ಜೀವನಕ್ಕೆ, ಕಾರ್ಯಾನುರೂಪದ ಅಸಾಮರ್ಥ್ಯಕ್ಕೆ, ಮತ್ತು ಇತರರ ಮೇಲೆ ಹೊರೆಯಾಗಿರುವುದಕ್ಕೆ ಧನಾತ್ಮಕ ರೋಗಲಕ್ಷಣಗಳಿಗಿಂತ ಋಣಾತ್ಮಕ ರೋಗಲಕ್ಷಣಗಳು ಹೆಚ್ಚಿನ ಕಾಣಿಕೆ ನೀಡುತ್ತವೆ ಎಂದು ಸಂಶೋಧನೆಯು ಸೂಚಿಸುತ್ತದೆ.[15]
ಮೊಂಡಾಗಿರುವ ಪ್ರವೃತ್ತಿಯ ಕಾಣಿಸುವಿಕೆಯು ಇದ್ದಾಗ್ಯೂ, ಸ್ಕಿಜೋಫ್ರೇನಿಯಾದಲ್ಲಿ ಹಲವು ಬಾರಿ ಒಂದು ಸಾಮಾನ್ಯವಾದ ಅಥವಾ ಒಮ್ಮೊಮ್ಮೆಯಂತೂ ಎತ್ತರಿಸಲಾದ ಮಟ್ಟದ ಭಾವಾತಿರೇಕವು ಕಂಡುಬರುತ್ತದೆ. ಒತ್ತಡದಿಂದ ತುಂಬಿದ ಅಥವಾ ಋಣಾತ್ಮಕ ಘಟನೆಗಳ ಸಂದರ್ಭಗಳಿಗೆ ಪ್ರತಿಸ್ಪಂದನೆ ನೀಡುವ ಸಂದರ್ಭದಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಸೂಚಿಸುತ್ತವೆ.[16]
ರೋಗಲಕ್ಷಣದ ಮೂರನೆಯ ವರ್ಗೀಕರಣವಾದ ಅಸ್ತವ್ಯಸ್ತತೆಯ ರೋಗದ ಸಹಲಕ್ಷಣ ವು ಸಾಮಾನ್ಯವಾಗಿ ವಿವರಿಸಲ್ಪಡುತ್ತದೆ ಮತ್ತು ಇದು ಅವ್ಯವಸ್ಥ ಮಾತು, ಆಲೋಚನೆ, ಮತ್ತು ನಡವಳಿಕೆಯನ್ನು ಒಳಗೊಳ್ಳುತ್ತದೆ. ಇತರ ರೋಗಲಕ್ಷಣದ ಅಸಂಖ್ಯಾತ ವರ್ಗೀಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯವು ಲಭ್ಯವಿದೆ.[17]
ರೋಗಲಕ್ಷಣದ ವೈಲಕ್ಷಣ್ಯಗಳ ಆಧಾರದ ಮೇಲೆ ಸ್ಕಿಜೋಫ್ರೇನಿಯಾದ ರೋಗನಿರ್ಣಯವನ್ನು ಮಾಡಲಾಗುತ್ತದೆ. ನರವ್ಯೂಹದ ಅನ್ಯೋನ್ಯಾಂಗಗಳು ಸಾಕಷ್ಟು ಉಪಯುಕ್ತವಾದ ಮಾನದಂಡಗಳನ್ನು ಒದಗಿಸುವುದಿಲ್ಲ. ವ್ಯಕ್ತಿಯ ಸ್ವಯಂ-ವೇದ್ಯ ಅನುಭವಗಳು, ಮತ್ತು ಕುಟುಂಬದ ಸದಸ್ಯರು, ಸ್ನೇಹಿತರು ಅಥವಾ ಸಹ-ಕೆಲಸಗಾರರಿಂದ ತಿಳಿಸಲ್ಪಟ್ಟ ನಡವಳಿಕೆಯಲ್ಲಿನ ವೈಪರೀತ್ಯಗಳು, ಇದನ್ನನುಸರಿಸಿ ಬರುವ ಓರ್ವ ಮನೋವೈದ್ಯ, ಸಾಮಾಜಿಕ ಕಾರ್ಯಕರ್ತ, ವೈದ್ಯಕೀಯ ಮನಶ್ಯಾಸ್ತ್ರಜ್ಞ ಅಥವಾ ಇತರ ಮಾನಸಿಕ ಆರೋಗ್ಯ ವೃತ್ತಿಪ್ರವೀಣರಿಂದ ಮಾಡಲ್ಪಟ್ಟ ಒಂದು ವೈದ್ಯಕೀಯ ನಿರ್ಧಾರಣೆಯ ಮೇಲೆ ರೋಗನಿರ್ಣಯವು ಆಧರಿತವಾಗಿರುತ್ತದೆ. ಮನೋವೈದ್ಯಕೀಯ ನಿರ್ಧಾರಣೆಯು ಒಂದು ಮನೋವೈದ್ಯಕೀಯ ಚರಿತ್ರೆ ಮತ್ತು ಕೆಲ ಸ್ವರೂಪದ ಮಾನಸಿಕ ಸ್ಥಿತಿಗತಿಯ ತಪಾಸಣೆಯನ್ನು ಒಳಗೊಂಡಿರುತ್ತದೆ.
ಸ್ಕಿಜೋಫ್ರೇನಿಯಾದ ರೋಗನಿರ್ಣಯವನ್ನು ಮಾಡುವುದಕ್ಕಾಗಿರುವ, ಬಹುವ್ಯಾಪಕವಾಗಿ ಬಳಕೆಯಲ್ಲಿರುವ ಪ್ರಮಾಣಾನುಸಾರಿಯಾಗಿಸಿದ ಮಾನದಂಡಗಳು ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ನ ಡಯಾಗ್ನಸ್ಟಿಕ್ ಅಂಡ್ ಸ್ಟಾಟಿಸ್ಟಿಕಲ್ ಮ್ಯಾನ್ಯಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್ , ಆವೃತ್ತಿ DSM-IV-TR, ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಇಂಟರ್ನ್ಯಾಷನಲ್ ಸ್ಟಾಟಿಸ್ಟಿಕಲ್ ಕ್ಲಾಸಿಫಿಕೇಷನ್ ಆಫ್ ಡಿಸೀಸಸ್ ಅಂಡ್ ರಿಲೇಟೆಡ್ ಹೆಲ್ತ್ ಪ್ರಾಬ್ಲಮ್ಸ್, ICD-10ನಿಂದ ಬರುತ್ತವೆ. ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳನ್ನು ಐರೋಪ್ಯ ದೇಶಗಳಲ್ಲಿ ವಿಶಿಷ್ಟವಾಗಿ ಬಳಸಲಾಗುತ್ತಿದೆ. DSM ಮಾನದಂಡಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ವಿಶ್ವದ ಉಳಿದ ಭಾಗಗಳಲ್ಲಷ್ಟೇ ಅಲ್ಲದೇ, ಸಂಶೋಧನಾ ಅಧ್ಯಯನಗಳಲ್ಲಿ ಚಾಲ್ತಿಯಲ್ಲಿರುವಂತೆ ಬಳಸಲಾಗುತ್ತಿದೆ. ಆಚರಣೆಯಲ್ಲಿ ಎರಡು ಪದ್ಧತಿಗಳ ನಡುವಿನ ಒಪ್ಪಂದವು ಉನ್ನತವಾಗಿದೆಯಾದರೂ, ICD-10 ಮಾನದಂಡಗಳು ಸ್ಕ್ನೀಡರಿಯನ್ನ ಮೊದಲ-ಶ್ರೇಣಿಯ ರೋಗಲಕ್ಷಣಗಳ ಮೇಲೆ ಹೆಚ್ಚು ಒತ್ತು ನೀಡುತ್ತವೆ.[18]
ಡಯಾಗ್ನಸ್ಟಿಕ್ ಅಂಡ್ ಸ್ಟಾಟಿಸ್ಟಿಕಲ್ ಮ್ಯಾನ್ಯುಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್ನ ಪರಿಷ್ಕೃತ ನಾಲ್ಕನೇ ಆವೃತ್ತಿಯ ಪ್ರಕಾರ (DSM-IV-TR), ಸ್ಕಿಜೋಫ್ರೇನಿಯಾದ ರೋಗನಿರ್ಣಯವನ್ನು ಮಾಡಲು ಮೂರು ರೋಗನಿರ್ಣಯದ ಮಾನದಂಡಗಳನ್ನು ಪೂರೈಸುವುದು ಅತ್ಯಗತ್ಯ:[8]
ಚಿತ್ತಸ್ಥಿತಿಯ ಅಸ್ವಸ್ಥತೆ ಅಥವಾ ವ್ಯಾಪಕವಾಗಿದ್ದು ಬೆಳವಣಿಗೆಗೆ ಸಹಜವಾದ ಅಸ್ತವ್ಯಸ್ತತೆಗಳ ರೋಗಲಕ್ಷಣಗಳು ಹಾಜರಿದ್ದಲ್ಲಿ ಸ್ಕಿಜೋಫ್ರೇನಿಯಾದ ರೋಗನಿರ್ಣಯವನ್ನು ಮಾಡಲಾಗುವುದಿಲ್ಲ. ಒಂದು ಮಾದಕವಸ್ತು ಅಥವಾ ಔಷಧಿಯ ದುರುಪಯೋಗದಂಥ ಒಂದು ಸಾರ್ವತ್ರಿಕ ವೈದ್ಯಕೀಯ ರೋಗಸ್ಥಿತಿ ಅಥವಾ ಒಂದು ವಸ್ತುವಿನ ಕಾರಣದಿಂದಾಗಿ ನೇರ ಪರಿಣಾಮವಾಗಿ ರೋಗಲಕ್ಷಣಗಳು ಕಂಡುಬಂದಿದ್ದರೆ ಆಗಲೂ ಸ್ಕಿಜೋಫ್ರೇನಿಯಾದ ರೋಗನಿರ್ಣಯವನ್ನು ಮಾಡಲಾಗುವುದಿಲ್ಲ.
ಇತರ ಹಲವಾರು ಮನೋವೈದ್ಯಕೀಯ ಕಾಯಿಲೆಗಳೊಂದಿಗೆ ಮನೋವಿಕೃತ ರೋಗಲಕ್ಷಣಗಳು ಹಾಜರಿರಲು ಸಾಧ್ಯವಿದೆ. ಅವುಗಳೆಂದರೆ: ಎರಡು ಧ್ರುವೀಯ ಅಸ್ವಸ್ಥತೆ,[19] ಹುಚ್ಚಿನ ಅಂಚಿನಲ್ಲಿರುವ ವ್ಯಕ್ತಿತ್ವದ ಅಸ್ವಸ್ಥತೆ, ಬಿರುಕುಭಾವಸಂಬಂಧಿ ಅಸ್ತವ್ಯಸ್ತತೆ, ಮಾದಕವಸ್ತುವಿನ ಮಾದಕತೆ, ಅಮಲೇರಿದ ಇಲ್ಲವೇ ಸಂಯಮದಿಂದ ಕೂಡಿದ ಮಾದಕವಸ್ತು-ಪ್ರಚೋದಿತ ಬುದ್ಧಿವಿಕಲ್ಪ, ಮತ್ತು ಛಿದ್ರಮನಸ್ಕಸ್ವರೂಪದ ಅಸ್ವಸ್ಥತೆ. ಗೀಳಿನಂಥ-ಪ್ರಚೋದಿಸುವ ಅಸ್ವಸ್ಥತೆಯೊಂದಿಗೆ (ಅಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್-OCD) ಸ್ಕಿಜೋಫ್ರೇನಿಯಾವು ಅಪ್ಪಟ ಸಾಧ್ಯತೆಯಿಂದ ವಿವರಿಸಬಹುದಾದುದಕ್ಕಿಂತ ಗಮನಾರ್ಹವಾಗಿ ಹೆಚ್ಚು ಸಂದರ್ಭಗಳಲ್ಲಿ ಜಟಿಲವಾಗಿರುತ್ತದೆ. ಆದರೂ, ಸ್ಕಿಜೋಫ್ರೇನಿಯಾದ ಸ್ವಭಾವಸೂಚಕ ಭ್ರಮೆಗಳಿಂದ OCDಯನ್ನು ಸೂಚಿಸುವ ಅಥವಾ ಪ್ರತಿನಿಧಿಸುವ ಪ್ರಚೋದನೆಗಳನ್ನು ಪ್ರತ್ಯೇಕಿಸುವುದು ಕಷ್ಟಕರವಾಗಬಲ್ಲದು.[20]
ಚಯಾಪಚಯ ವ್ಯಾಕುಲತೆ, ಇಡೀ ದೇಹದ ಸೋಂಕು, ಮೇಹರೋಗ, (HIV) ಸೋಂಕು, ಅಪಸ್ಮಾರ, ಮತ್ತು ಮಿದುಳಿನ ಅಂಗಹಾನಿಗಳಂಥ ಮನೋವಿಕೃತ ಸ್ಕಿಜೋಫ್ರೇನಿಯಾ-ರೀತಿಯ ರೋಗಲಕ್ಷಣಗಳನ್ನು[8] ಅಪರೂಪಕ್ಕೊಮ್ಮೆ ಹುಟ್ಟುಹಾಕಬಹುದಾದ ವೈದ್ಯಕೀಯ ಕಾಯಿಲೆಗಳನ್ನು ತಳ್ಳಿಹಾಕಲು ಒಂದು ಹೆಚ್ಚು ಸಾರ್ವತ್ರಿಕವಾದ ವೈದ್ಯಕೀಯ ಹಾಗೂ ನರವೈಜ್ಞಾನಿಕ ತಪಾಸಣೆಯು ಅಗತ್ಯವಾಗಬಹುದು. ಜಾಗೃತಾವಸ್ಥೆಯ ಮಟ್ಟದ ಉಲ್ಬಣಗೊಂಡ ಆರಂಭ ಮತ್ತು ಹೊಯ್ದಾಟ, ದೃಷ್ಟಿಗೋಚರ ಭ್ರಾಂತಿಗಳಿಂದ ಪ್ರತ್ಯೇಕಿಸಬಹುದಾದ, ಹಾಗೂ ಆಧಾರವಾಗಿರುವ ಒಂದು ವೈದ್ಯಕೀಯ ಕಾಯಿಲೆಯನ್ನು ಸೂಚಿಸುವ ಒಂದು ಸನ್ನಿಯನ್ನು ತಳ್ಳಿಹಾಕುವುದು ಅವಶ್ಯವಾಗಿ ಕಂಡುಬರಬಹುದು. ಮನೋವಿಕೃತಿ-ನಿರೋಧಕ ಔಷಧೀಯ ಚಿಕಿತ್ಸೆ ಯಿಂದುಂಟಾದ ಒಂದು ನಿರ್ದಿಷ್ಟವಾದ ವೈದ್ಯಕೀಯ ಸೂಚನೆ ಅಥವಾ ಸಂಭವನೀಯ ವ್ಯತಿರಿಕ್ತ ಪರಿಣಾಮಗಳು ಕಂಡುಬರದ ಹೊರತು ಮರುಕಳಿಸುವಿಕೆಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ಸಾಮಾನ್ಯವಾಗಿ ಪುನರಾವರ್ತಿಸಲಾಗುವುದಿಲ್ಲ. ಸ್ಕಿಜೋಫ್ರೇನಿಯಾ ಎಂಬ ಪದದ ನಿಷ್ಪತ್ತಿಯು (ಗ್ರೀಕ್ σχίζω = "ನಾನು ಒಡೆಯುವೆ") ಏನೇ ಇದ್ದರೂ, "ಸ್ಕಿಜೋಫ್ರೇನಿಯಾ" ಎಂದರೆ ದ್ವಂದ್ವ ವ್ಯಕ್ತಿತ್ವವೆಂದು ಅರ್ಥ ಅಲ್ಲ .
DSM-IV-TRದಲ್ಲಿ ಸ್ಕಿಜೋಫ್ರೇನಿಯಾದ ಐದು ಉಪ-ವರ್ಗೀಕರಣಗಳು ಸೇರಿಕೊಂಡಿವೆ.
ಎರಡು ಹೆಚ್ಚುವರಿ ಉಪ-ಬಗೆಗಳನ್ನು ICD-10 ವ್ಯಾಖ್ಯಾನಿಸುತ್ತದೆ.
ಒಂದು ದೊಡ್ಡ ಪ್ರಮಾಣದ ಜೈವಿಕ ಮನೋರೋಗಚಿಕಿತ್ಸೆಯ ಕುರಿತಾದ ವಿವಾದ, ರೋಗನಿರ್ಣಯದ ಒಂದು ಅಸ್ತಿತ್ವ ಅಥವಾ ಮೂಲಸ್ವಭಾವವಾಗಿ ಸ್ಕಿಜೋಫ್ರೇನಿಯಾದ ತರ್ಕಸಮ್ಮತತೆಯ ಭಾಗವು ಅಸಂಖ್ಯಾತ ಮನಶ್ಯಾಸ್ತ್ರಜ್ಞರಿಂದ ಟೀಕೆಗೊಳಗಾಗಿದೆ. ಇದರಲ್ಲಿ ವೈಜ್ಞಾನಿಕ ತರ್ಕಸಮ್ಮತತೆ ಮತ್ತು ರೋಗನಿರ್ಣಯದ ವಿಶ್ವಾಸಾರ್ಹತೆ ಇಲ್ಲವೆಂಬುದೇ ಅವರ ಟೀಕೆಗೆ ಕಾರಣ.[21][22]
2006ರಲ್ಲಿ, UKಗೆ ಸೇರಿದ ರೋಗಿಗಳು ಮತ್ತು ಮಾನಸಿಕ ಆರೋಗ್ಯದ ವೃತ್ತಿಪ್ರವೀಣರ ಒಂದು ಗುಂಪು ಸ್ಕಿಜೋಫ್ರೇನಿಯಾ ಹಣೆಪಟ್ಟಿಯ ರದ್ದತಿಗಾಗಿರುವ ಆಂದೋಲನದ ಘೋಷಣಾ ಶೀರ್ಷಿಕೆಯಡಿಯಲ್ಲಿ ಸೇರಿ, ಸ್ಕಿಜೋಫ್ರೇನಿಯಾದ ಮಿಶ್ರರೂಪತೆ ಮತ್ತು ಅದರ ಸಹವರ್ತಿಯಾಗಿರುವ ರೋಗಚಿಹ್ನೆಯ ಆಧಾರದ ಮೇಲೆ ಸ್ಕಿಜೋಫ್ರೇನಿಯಾದ ರೋಗನಿರ್ಣಯ ಮಾಡುವುದನ್ನು ತಿರಸ್ಕರಿಸಬೇಕು ಎಂದು ವಾದವನ್ನು ಮಂಡಿಸಿ, ಜೈವಿಕ-ಮನಸ್ಸಾಮಾಜಿಕ ಮಾದರಿಯೊಂದರ ಅಳವಡಿಕೆಗಾಗಿ ಕರೆನೀಡಿದರು.
UKಯ ಇತರ ಮನೋವೈದ್ಯರು ಈ ನಡೆಯನ್ನು ವಿರೋಧಿಸಿದ್ದೇ ಅಲ್ಲದೇ, ತಾತ್ಕಾಲಿಕ ಪರಿಕಲ್ಪನೆಯಾಗಿದ್ದರೂ ಸಹ ಸ್ಕಿಜೋಫ್ರೇನಿಯಾ ಎಂಬ ಪದ ಒಂದು ಉಪಯುಕ್ತ ಪರಿಕಲ್ಪನೆ ಎಂದು ವಾದಿಸಿದರು.[23][24]
DSMನಲ್ಲಿ ಬಳಸಲಾಗಿರುವ ಸ್ಕಿಜೋಫ್ರೇನಿಯಾದ ವಿಭಿನ್ನ ವರ್ಗವೂ ಸಹ ಟೀಕೆಗೊಳಗಾಯಿತು.[25] ಇತರ ಮನೋವೈದ್ಯಕೀಯ ಅಸ್ವಸ್ಥತೆಗಳಲ್ಲಿರುವಂತೆ, ಪ್ರತಿಯೊಂದೂ ಬದಲಾಗುವುದರ ಜೊತೆಯಲ್ಲೇ ಸಾಗುವ ಪ್ರತ್ಯೇಕ ಲಕ್ಷಣಗಳ ಆಯಾಮಗಳಂತೆ ರೋಗನಿರ್ಣಯವನ್ನು ಉತ್ತಮವಾಗಿ ತಲುಪಬಹುದು ಎಂದು ಕೆಲವೊಂದು ಮನೋವೈದ್ಯರು ಸಲಹೆ ನೀಡಿದ್ದಾರೆ. ಸಾಮಾನ್ಯ ಸ್ಥಿತಿ ಮತ್ತು ರೋಗಸ್ಥಿತಿಯ ನಡುವಿನ ಒಂದು ಕವಲುಹಾದಿಗಿಂತ ಮಿಗಿಲಾಗಿ ಒಂದು ಇಡೀ ಸಮುದಾಯ ಅಥವಾ ಅಖಂಡಧಾರೆಯು ಅಲ್ಲಿರುತ್ತದೆ ಎಂಬುದು ಇದರ ಹಿಂದಿರುವ ಅಭಿಪ್ರಾಯ.
ಛಿದ್ರಮನಸ್ಕಮಾದರಿಯ ಕುರಿತಾದ ಸಂಶೋಧನೆಯೊಂದಿಗೆ, ಮತ್ತು ಸಾರ್ವಜನಿಕರ ನಡುವೆ ಬಹುತೇಕವಾಗಿ ಉಪದ್ರವಕರವಲ್ಲದ ಭ್ರಮೆಯ ನಂಬಿಕೆಗಳನ್ನೊಳಗೊಂಡ ಮನೋವಿಕೃತ ಅನುಭವಗಳ ಒಂದು ಸಾಕಷ್ಟು ಪ್ರಮಾಣದಲ್ಲಿನ ಉನ್ನತ ಹರಡಿಕೆಯೊಂದಿಗೆ ಈ ವಿಧಾನವು ಸ್ಥಿರವಾಗಿರುವಂತೆ ತೋರುತ್ತದೆ.[26][27][28]
ಈ ವೀಕ್ಷಣೆಯೊಂದಿಗಿನ ಸಾಮರಸ್ಯದಲ್ಲಿ ಮನಶ್ಯಾಸ್ತ್ರಜ್ಞ ಎಡ್ಗರ್ ಜೋನ್ಸ್, ಮತ್ತು ಮನೋವೈದ್ಯರಾದ ಟೋನಿ ಡೇವಿಡ್ ಮತ್ತು ನಾಸಿರ್ ಘೇಮಿ ಮೊದಲಾದವರು ಭ್ರಮೆಗಳ ಕುರಿತಾಗಿ ಅಸ್ತಿತ್ವದಲ್ಲಿರುವ ಸಾಹಿತ್ಯದ ಸಮೀಕ್ಷೆಯನ್ನು ನಡೆಸುತ್ತಾ, ಒಂದಷ್ಟು ಅಭಿಪ್ರಾಯವನ್ನು ಮಂಡಿಸಿದರು. ಇದರ ಅನುಸಾರ, ಭ್ರಮೆಯ ವ್ಯಾಖ್ಯಾನದ ಸ್ಥಿರತೆ ಮತ್ತು ಸಂಪೂರ್ಣತೆಯಲ್ಲಿ ಸಾಕಷ್ಟು ಕೊರತೆಯಿದೆ ಎಂದು ಕಂಡುಬಂದಿದೆ; ಭ್ರಮೆಗಳು ನಿಶ್ಚಿತವಾಗಿರಬೇಕಾದ ಅಗತ್ಯವಿಲ್ಲ ಅಥವಾ ಅದು ತಪ್ಪಾಗಿರಬೇಕೆಂದಿಲ್ಲ, ಅಥವಾ ನಿರ್ವಿವಾದವಾದ ಸಾಕ್ಷ್ಯದ ಅಸ್ತಿತ್ವವನ್ನು ಒಳಗೊಂಡಿರಬೇಕೆಂದಿಲ್ಲ.[29][30][31]
ಸ್ಕಿಜೋಫ್ರೇನಿಯಾ ಸಂಶೋಧನೆಯಲ್ಲಿ ಒಂದು ಅಗ್ರಗಣ್ಯ ಹೆಸರಾಗಿರುವ ನ್ಯಾನ್ಸಿ ಆಂಡ್ರಿಯಾಸೆನ್ ಎಂಬಾಕೆ, ರೋಗನಿರ್ಣಯದ ವಿಶ್ವಾಸಾರ್ಹತೆಯ ಸುಧಾರಣೆಯ ಸಲುವಾಗಿ ತರ್ಕಸಮ್ಮತತೆಯನ್ನು ಕೈಬಿಟ್ಟಿರುವುದಕ್ಕಾಗಿ ಪ್ರಸ್ತುತ ಚಾಲ್ತಿಯಲ್ಲಿರುವ DSM-IV ಮತ್ತು ICD-10 ಮಾನದಂಡಗಳನ್ನು ಟೀಕಿಸಿದ್ದಾರೆ. ರೋಗನಿರ್ಣಯದ ವಿಶ್ವಾಸಾರ್ಹತೆಯನ್ನು ಸುಧಾರಿಸುವ ಭರದಲ್ಲಿ ರೋಗನಿರ್ಣಯದ ಮಾನದಂಡಗಳಲ್ಲಿನ ಬುದ್ಧಿವಿಕಲ್ಪಗಳ ಮೇಲೆ ಅತಿಯಾಗಿ ಒತ್ತುನೀಡುವುದರಿಂದ ಹೆಚ್ಚು ಮೂಲಭೂತವಾದ ಅರಿವಿನ ದುರ್ಬಲಗೊಳಿಸುವಿಕೆಗಳನ್ನು ಕಡೆಗಣಿಸಿದಂತಾಗುತ್ತದೆ. ಸಾದರಪಡಿಸುವಲ್ಲಿನ ಹೆಚ್ಚಿನ ಪ್ರಮಾಣದ ವೈವಿಧ್ಯತೆಗಳಿಂದಾಗಿ ಈ ಮೂಲಭೂತ ಅರಿವಿನ ದುರ್ಬಲಗೊಳಿಸುವಿಕೆಗಳನ್ನು ನಿರ್ಣಯಿಸುವುದು ಕಷ್ಟವಾಗಿ ಪರಿಣಮಿಸುತ್ತದೆ ಎಂಬುದು ಆಕೆಯ ವಾದ.[32][33]
ಈ ದೃಷ್ಟಿಕೋನವನ್ನು ಇತರ ಮನೋವೈದ್ಯರು ಬೆಂಬಲಿಸಿದ್ದಾರೆ.[34] ಇದೇ ಬಗೆಯ ಧಾಟಿಯಲ್ಲಿ ಮಿಂಗ್ ಟ್ಸುವಾಂಗ್ ಮತ್ತು ಸಹೋದ್ಯೋಗಿಗಳು ತಮ್ಮ ವಾದವನ್ನು ಮಂಡಿಸುತ್ತಾರೆ. ಸ್ಕಿಜೋಫ್ರೇನಿಯಾ ಸೇರಿದಂತೆ ವೈವಿಧ್ಯಮಯ ಅಸ್ವಸ್ಥತೆಗಳಲ್ಲಿ ಮನೋವಿಕೃತ ರೋಗಲಕ್ಷಣಗಳು ಸ್ಕಿಜೋಫ್ರೇನಿಯಾದ ನಿರ್ದಿಷ್ಟ ರೋಗನಿರ್ಣಯ ವಿಜ್ಞಾನದ ಒಂದು ಪ್ರತಿಬಿಂಬಕ್ಕೆ ಬದಲಾಗಿ ಒಂದು ಸಾಮಾನ್ಯ ಅಂತಿಮ-ಸ್ಥಿತಿಯಾಗಿರಬಹುದು ಎಂದು ಅವರು ಹೇಳುವುದರ ಜೊತೆಗೆ, ಸ್ಕಿಜೋಫ್ರೇನಿಯಾದ "ನಿಜವಾದ" ಸಂರಚನೆಯಂತೆ DSMನ ಕಾರ್ಯಾಚರಣಾ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಯಾವುದೇ ಆಧಾರವಿಲ್ಲ ಎಂದು ಎಚ್ಚರಿಸುತ್ತಾರೆ.[25]
ಮೈಕೇಲ್ ಫಾಸ್ಟರ್ ಗ್ರೀನ್ ಎಂಬ ನರವಿಜ್ಞಾನದ ಮನಶ್ಯಾಸ್ತ್ರಜ್ಞ ಮತ್ತಷ್ಟು ಮುಂದುವರಿದು ಈ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ನಿರ್ದಿಷ್ಟ ನರದ ಅರಿವಿನ ಕೊರತೆಗಳ ಅಸ್ತಿತ್ವವನ್ನು ಪ್ರಕಟ ಲಕ್ಷಣಗಳ ಸಂರಚನೆಯನ್ನು ಮಾಡಲು ಬಳಸಬಹುದು ಎಂದು ಆತ ಸಲಹೆ ನೀಡಿದ್ದು, ಅಪ್ಪಟ ರೋಗಲಕ್ಷಣವನ್ನಾಧರಿಸಿದವುಗಳಿಗೆ ಈ ಲಕ್ಷಣಗಳು ಪರ್ಯಾಯವಾಗಿವೆ ಎಂದು ಸೂಚಿಸಿದ್ದಾನೆ. ಈ ಕೊರತೆಗಳು ಸ್ಮೃತಿ, ಗಮನ, ಕಾರ್ಯನಿರ್ವಾಹಕ ಕೆಲಸ ಮತ್ತು ಸಮಸ್ಯೆ ಪರಿಹರಿಸುವಿಕೆಯಂಥ ಮೂಲಭೂತ ಮಾನಸಿಕ ಕಾರ್ಯಚಟುವಟಿಕೆಗಳಲ್ಲಿ ಒಂದು ಕಡಿತಗೊಳಿಸುವಿಕೆ ಅಥವಾ ದುರ್ಬಲಗೊಳಿಸುವಿಕೆಯ ಸ್ವರೂಪವನ್ನು ಪಡೆಯುತ್ತವೆ.[35][36]
ಸ್ಕಿಜೋಫ್ರೇನಿಯಾಕ್ಕಾಗಿರುವ ಮಾನದಂಡಗಳಿಂದ ಭಾವಸಂಬಂಧಿ ಭಾಗಗಳನ್ನು, ವೈದ್ಯಕೀಯ ವ್ಯವಸ್ಥೆಗಳಲ್ಲಿನ ಅವುಗಳ ಸರ್ವತ್ರ ಅಸ್ತಿತ್ವದ ಹೊರತಾಗಿಯೂ, ಹೊರಗಿಡುವುದೂ ಸಹ ಚರ್ಚೆಯನ್ನು ಹುಟ್ಟುಹಾಕಿದೆ. DSMನಲ್ಲಿನ ಈ ಹೊರಗಿಡುವಿಕೆಯಿಂದಾಗಿ ಬಿರುಕುಭಾವಸಂಬಂಧಿ ಅಸ್ತವ್ಯಸ್ತತೆ ಎಂಬ ಒಂದು "ಕೊಂಚಮಟ್ಟಿಗೆ ಜಟಿಲವಾದ" ಪ್ರತ್ಯೇಕ ಅಸ್ವಸ್ಥತೆಯು ಹೊರಹೊಮ್ಮುವಲ್ಲಿ ಕಾರಣವಾಗಿದೆ.[34] ದುರ್ಬಲವಾದ ಅಂತರನಿರ್ಣಾಯಕ ವಿಶ್ವಾಸಾರ್ಹತೆಯನ್ನು ಉದಾಹರಿಸುತ್ತಾ, ಕೆಲವೊಂದು ಮನೋವೈದ್ಯರು ಬಿರುಕುಭಾವಸಂಬಂಧಿ ಅಸ್ವಸ್ಥತೆಯನ್ನು ಒಂದು ಪ್ರತ್ಯೇಕ ಇರುವಿಕೆಯಂತೆ ಭಾವಿಸುವ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವಿರೋಧಿಸಿದ್ದಾರೆ.[37][38] ಕ್ರೇಪೇಲಿನ್ನ ದ್ವಿವಿಭಜನೆ ಎಂದು ಹೆಸರಾದ ಚಿತ್ತಸ್ಥಿತಿಯ ಅಸ್ವಸ್ಥತೆಗಳು ಮತ್ತು ಸ್ಕಿಜೋಫ್ರೇನಿಯಾ ನಡುವಿನ ನೇರವಾದ ಭಿನ್ನತೆಯು, ತಳಿವಿಜ್ಞಾನದ ಸೋಂಕುಶಾಸ್ತ್ರದಿಂದ ಪಡೆದ ದತ್ತಾಂಶದಿಂದಲೂ ಸವಾಲಿಗೀಡಾಗಿದೆ.[39]
ರೋಗನಿರ್ಣಯದ ವಿಶ್ವಾಸಾರ್ಹತೆಯು ಜೀನ್ಗಳು ಹಾಗೂ ಪರಿಸರದ ಸಂಬಂಧಿತ ಪ್ರಭಾವವನ್ನು ಅಳೆಯುವಲ್ಲಿನ ತೊಡಕುಗಳನ್ನು ಪರಿಚಯಿಸುತ್ತದಾದ್ದರಿಂದ (ಉದಾಹರಣೆಗೆ, ರೋಗಲಕ್ಷಣಗಳು ಒಂದುಹಂತಕ್ಕೆ ತೀವ್ರಸ್ವರೂಪದ ಎರಡು ಧ್ರುವೀಯ ಅಸ್ವಸ್ಥತೆ ಅಥವಾ ತೀವ್ರಸ್ವರೂಪದ ಖಿನ್ನತೆಯೊಂದಿಗೆ ಅತಿಕ್ರಮಿಸುತ್ತದೆ), ಸ್ಕಿಜೋಫ್ರೇನಿಯಾವು ಹೊರಹೊಮ್ಮುವಲ್ಲಿ ತಳೀಯವಾದ ಮತ್ತು ಪರಿಸರೀಯವಾದ ಅಂಶಗಳು ಸಂಯೋಜನೆಗೊಂಡು ಪ್ರಭಾವ ಬೀರಬಲ್ಲವು ಎಂದು ಸಾಕ್ಷ್ಯವು ಸೂಚಿಸುತ್ತದೆ.[41] ಸ್ಕಿಜೋಫ್ರೇನಿಯಾದ ರೋಗನಿರ್ಣಯವು ಒಂದು ಗಮನಾರ್ಹವಾದ ಆನುವಂಶಿಕ ಘಟಕವನ್ನು ಹೊಂದಿದೆಯಾದರೂ, ಆ ಬಿರುಸಾದ ಆರಂಭದ ಮೇಲೆ ಪರಿಸರೀಯ ಅಂಶಗಳು ಅಥವಾ ಒತ್ತಡಕಾರಕಗಳ ಗಮನಾರ್ಹ ಪ್ರಭಾವವಿದೆ ಎಂದು ಸಾಕ್ಷ್ಯವು ಸೂಚಿಸುತ್ತದೆ.[42] ಜೈವಿಕ, ಮಾನಸಿಕ ಅಥವಾ ಪರಿಸರೀಯ ಒತ್ತಡಕಾರಕಗಳಿಂದ ನಿಜಸ್ವರೂಪವು ಪ್ರಕಟಿಸಲ್ಪಡುವ ಒಂದು ಅಂತರ್ಗತ ಈಡಾಗುವಿಕೆಯ (ಅಥವಾ ದೇಹಪ್ರವೃತ್ತಿ ಯ) ಪರಿಕಲ್ಪನೆಯು ಒತ್ತಡದ-ದೇಹಪ್ರವೃತ್ತಿಯ ಮಾದರಿ ಎಂದು ಹೆಸರಾಗಿದೆ.[43] ಜೈವಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳೆಲ್ಲವೂ ಮುಖ್ಯವಾಗಿವೆ ಎಂಬ ಪರಿಕಲ್ಪನೆಯು "ಜೀವಮನಸ್ಸಾಮಾಜಿಕ" ಮಾದರಿ ಹೆಸರಾಗಿದೆ.
ಅವಳಿ ಅಧ್ಯಯನಗಳು ಮತ್ತು ದತ್ತುಸ್ವೀಕಾರದ ಅಧ್ಯಯನಗಳು ಒಂದು ಉನ್ನತಮಟ್ಟದ ಆನುವಂಶಿಕತೆಯನ್ನು ಸೂಚಿಸಿವೆಯಾದರೂ, ತಳಿವಿಜ್ಞಾನ ಮತ್ತು ಪರಿಸರದ ಪ್ರಭಾವಗಳನ್ನು ಪ್ರತ್ಯೇಕಿಸುವಲ್ಲಿನ ತೊಡಕಿನ ಕಾರಣದಿಂದಾಗಿ ಸ್ಕಿಜೋಫ್ರೇನಿಯಾದ ಆನುವಂಶಿಕತೆಯ ಅಂದಾಜುಗಳು ವ್ಯತ್ಯಯವಾಗುವೆಡೆ ಒಲವು ಹೊಂದಿವೆ.[44] ಅನೇಕ ದೊಡ್ಡ ಅಥವಾ ಕಿರು ಜೀನ್ಗಳು ಅಪಾಯವನ್ನು ಹೆಚ್ಚಿಸುವುದರಿಂದ ಸ್ಕಿಜೋಫ್ರೇನಿಯಾವು ಸಂಕೀರ್ಣ ಆನುವಂಶಿಕ ಲಕ್ಷಣದ ಒಂದು ರೋಗಸ್ಥಿತಿಯಾಗಿದೆ ಎಂದು ಈ ಮೂಲಕ ಸೂಚಿಸಲಾಗಿದೆ. ಹಲವಾರು ತಳೀಯ ಮತ್ತು ಇತರ ಅಪಾಯಕರ ಅಂಶಗಳಿಗೆ ಸಂಬಂಧಿಸಿದ ಅಪಾಯದ ಅಂಶಗಳು ಓರ್ವ ವ್ಯಕ್ತಿಯು ಸಮಸ್ಯೆಗೆ ಈಡಾಗುವುದಕ್ಕೆ ಮುಂಚಿತವಾಗಿಯೇ ಅಸ್ತಿತ್ವದಲ್ಲಿರುವುದು ಅಗತ್ಯವೆಂದು ಕೆಲವೊಬ್ಬರು ಸೂಚಿಸಿದ್ದಾರಾದರೂ, ಇದು ಇನ್ನೂ ಅನಿಶ್ಚಿತವಾಗಿದೆ.[45] ಇತ್ತೀಚಿನ ಜೀನೋಮ್ ವ್ಯಾಪಿ ಸಹಯೋಗದ ಅಧ್ಯಯನಗಳಲ್ಲಿ ಕಂಡುಬಂದಂತೆ, ಸ್ಕಿಜೋಫ್ರೇನಿಯಾ ಮತ್ತು ಎರಡು ಧ್ರುವೀಯ ಅಸ್ವಸ್ಥತೆಗಳಿಗಾಗಿರುವ ಜೀನ್ಗಳು ಹೆಚ್ಚಿನಂಶ ಪ್ರತ್ಯೇಕವಾಗುತ್ತವೆಯಾದರೂ, ಕೆಲವೊಂದು ಜೀನ್ಗಳು ಎರಡು ಅಸ್ವಸ್ಥತೆಗಳ ನಡುವೆ ಅತಿಕ್ರಮಿಸುತ್ತವೆ[46]. ಆನುವಂಶಿಕ ಸಂಯೋಜನೆಯ ಪರ್ಯಾಯ ವಿಶ್ಲೇಷಣೆಯ ಅಧ್ಯಯನಗಳು, ಭಾವವಶ್ಯತೆಯನ್ನು ಹೆಚ್ಚಿಸುತ್ತಿರುವ[47] ವರ್ಣತಂತುವಿನ ಭಾಗಗಳ ಸಮಂಜಸವಾದ ಸಾಕ್ಷ್ಯವನ್ನು ನೀಡಿವೆ. ಇವು ಸ್ಕಿಜೋಫ್ರೇನಿಯಾ 1 (DISC1) ಜೀನ್ ಪ್ರೊಟೀನ್ನಲ್ಲಿನ[48] ಒಡೆತಕ್ಕೊಳಗಾದವುಗಳೊಂದಿಗೆ ನೇರವಾಗಿ ಪರಸ್ಪರ ವರ್ತಿಸುತ್ತವೆ. ತೀರಾ ಇತ್ತೀಚೆಗೆ 804A ಸತು ಬೆರಳ ಪ್ರೊಟೀನು ಸೂಚಿಸಲ್ಪಟ್ಟಿದೆ[49] ಮತ್ತು ವರ್ಣತಂತು 6 HLA ಭಾಗದ[50] ಸ್ಕಿಜೋಫ್ರೇನಿಯಾವು ಪುಟ್ಟ DNA ಸರಣಿಗಳ (ಇವಕ್ಕೆ ನಕಲು ಸಂಖ್ಯೆಯ ರೂಪಾಂತರಗಳು ಎಂದು ಹೆಸರು) ಅಪರೂಪದ ತೆಗೆದುಹಾಕುವಿಕೆಗಳು ಅಥವಾ ಇಮ್ಮಡಿಗೊಳ್ಳುವಿಕೆಗಳೊಂದಿಗೆ ಸಂಬಂಧಹೊಂದಿವೆ. ನರಕೋಶದ ಸಂಕೇತಿಸುವಿಕೆ ಮತ್ತು ಮಿದುಳಿನ ಬೆಳವಣಿಗೆಯಲ್ಲಿ ಒಳಗೊಂಡಿರುವ ಜೀನ್ಗಳೊಳಗೆ ಇವು ಅಳತೆಗೆಟ್ಟು ಅಥವಾ ಹೊಂದಿಕೆಯಿಲ್ಲದೆ ಸಂಭವಿಸುತ್ತವೆ.[51][52]
ಸ್ಕಿಜೋಫ್ರೇನಿಯಾದಲ್ಲಿನ ಒಂದು ಸಂತಾನಶಕ್ತಿಯ ಕೊರತೆಯ ಅಸ್ತಿತ್ವದ ಕುರಿತಾಗಿ ಕೊಂಚವೇ ಸಂದೇಹವಿದೆ. ಒಟ್ಟಾರೆಯಾಗಿ ಹೇಳುವುದಾರೆ, ಹೋಲಿಕೆ ಮಾಡಿದಾಗ ಸಮಸ್ಯೆಗೊಳಗಾದ ವ್ಯಕ್ತಿಗಳು ಇತರ ಜನರಿಗಿಂತ ಕೆಲವೇ ಮಕ್ಕಳನ್ನು ಹೊಂದಿರುತ್ತಾರೆ. ಈ ಕುಸಿತದ ಪ್ರಮಾಣವು ಪುರುಷರಲ್ಲಿ 70%ನಷ್ಟಿದ್ದರೆ, ಮಹಿಳೆಯರಲ್ಲಿ 30%ನಷ್ಟಿದೆ. ಒಂದು ವೇಳೆ ಕಾಯಿಲೆಯು ಒಂದು ಜೈವಿಕ ಅನನುಕೂಲತೆಯೊಂದಿಗೆ ಸಂಬಂಧ ಹೊಂದಿದ್ದೇ ಆದಲ್ಲಿ, ಈ ಭಿನ್ನತೆಯು ಏಕೆ ಆಯ್ಕೆಗೊಳಪಡಲಿಲ್ಲ? ಎಂಬುದು ಸ್ಕಿಜೋಫ್ರೇನಿಯಾದ ಪ್ರಮುಖ ಆನುವಂಶಿಕ ವಿರೋಧಾಭಾಸವಾಗಿದೆ. ಇಂಥ ಒಂದು ಗಮನಾರ್ಹ ಅನನುಕೂಲತೆಯನ್ನು ಸರಿದೂಗಿಸಲು, ಒಂದು ಗಣನೀಯವಾದ ಮತ್ತು ಸಾರ್ವತ್ರಿಕವಾದ ಪ್ರಯೋಜನ ಅನುಕೂಲವು ಅಸ್ತಿತ್ವದಲ್ಲಿರಬೇಕು. ಇದುವರೆಗೂ, ಒಂದು ಭಾವಿಸಲ್ಪಟ್ಟ ಪ್ರಯೋಜನದ ಎಲ್ಲಾ ಸಿದ್ಧಾಂತಗಳು ಅಲ್ಲಗಳೆಯಲ್ಪಟ್ಟಿವೆ ಇಲ್ಲವೇ ರುಜುವಾತು ಮಾಡಲಾಗದ ಸಿದ್ಧಾಂತಗಳಾಗಿಯೇ ಉಳಿದಿವೆ.[53][54]
ನಂತರ ಕಂಡುಬರುವ ಸ್ಕಿಜೋಫ್ರೇನಿಯಾದ ಅಪಾಯವನ್ನು ಹೆಚ್ಚಿಸಲು ನರವ್ಯೂಹದ ಬೆಳವಣಿಗೆಗೆ ಮುಂಚೆಯೇ ಕಾರಣಾತ್ಮಕ ಅಂಶಗಳು ಆರಂಭದಲ್ಲಿ ಒಟ್ಟಾಗಿ ಬರುತ್ತವೆ ಎಂದು ತಿಳಿಯಲಾಗಿತ್ತು. ಸ್ಕಿಜೋಫ್ರೇನಿಯಾದ ಇರುವಿಕೆಯು ಪತ್ತೆಯಾದ ಜನರು ಚಳಿಗಾಲ ಅಥವಾ ವಸಂತಕಾಲದಲ್ಲಿ (ಕಡೇ ಪಕ್ಷ ಉತ್ತರಾರ್ಧ ಗೋಳದಲ್ಲಿ) ಹುಟ್ಟಿರುವ ಸಂಭವವೇ ಹೆಚ್ಚಾಗಿರುವುದು ತಿಳಿದುಬಂದಿರುವ ಒಂದು ಕುತೂಹಲಕರ ಅಂಶ.[55] ಹುಟ್ಟಿಗೆ ಮುಂಚಿತವಾಗಿ ಸೋಂಕುಗಳಿಗೆ ಒಡ್ಡಿಕೊಳ್ಳುವುದರಿಂದಾಗಿ ಜೀವನದ ನಂತರದ ಭಾಗದಲ್ಲಿ ಸ್ಕಿಜೋಫ್ರೇನಿಯಾವು ಕಂಡುಬರುವ ಅಪಾಯಗಳು ಹೆಚ್ಚಾಗುತ್ತವೆ ಎಂಬುದಕ್ಕೆ ಈಗ ಸಾಕ್ಷ್ಯಗಳು ಲಭ್ಯವಿವೆ. ಜನನಕ್ಕೆ ಮುಂಚಿನ ಬೆಳವಣಿಗೆಯ ರೋಗಲಕ್ಷಣ ಹಾಗೂ ರೋಗಸ್ಥಿತಿಯನ್ನು ಬೆಳೆಸಿಕೊಳ್ಳುವ ಅಪಾಯದ ನಡುವಿನ ಒಂದು ಕೊಂಡಿಗೆ ಇವು ಹೆಚ್ಚುವರಿ ಸಾಕ್ಷ್ಯವನ್ನು ಒದಗಿಸುತ್ತವೆ.[56]
ನಗರ ಪ್ರದೇಶದ ವಾತಾವರಣವೊಂದರಲ್ಲಿ ವಾಸಿಸುವುದು ಸ್ಕಿಜೋಫ್ರೇನಿಯಾಕ್ಕೆ ಒಂದು ಅಪಾಯಕರ ಅಂಶವಾಗಿ ಸಮಂಜಸವಾಗಿ ಕಂಡುಬಂದಿದೆ.[57][58] ಸಾಮಾಜಿಕ ಅನನುಕೂಲತೆಯೂ ಸಹ ಒಂದು ಅಪಾಯಕಾರಿ ಅಂಶವಾಗಿ ಕಂಡುಬಂದಿದೆ. ಸಾಮಾಜಿಕ ದುಸ್ಥಿತಿ, ಜಾತಿಯ ಭೇದಭಾವ, ಕೌಟುಂಬಿಕ ಅಪಸಾಮಾನ್ಯ ಕ್ರಿಯೆ, ನಿರುದ್ಯೋಗ ಅಥವಾ ಮನೆಯಲ್ಲಿನ ಕಳಪೆ ಮಟ್ಟದ ಸ್ಥಿತಿಗತಿಗಳಿಗೆ ಸಂಬಂಧಿಸಿದ ಬಡತನ[59] ಮತ್ತು ವಲಸೆ ಇವೆಲ್ಲವೂ ಸಾಮಾಜಿಕ ಅನನುಕೂಲತೆಯಲ್ಲಿ ಸೇರಿವೆ.[60]
ನಿಂದನೆ ಅಥವಾ ಮಾನಸಿಕ ಆಘಾತಗಳಂಥ ಬಾಲ್ಯದ ಅನುಭವಗಳು ಜೀವನದ ನಂತರದ ಹಂತದಲ್ಲಿ ಕಂಡುಬರುವ ಸ್ಕಿಜೋಫ್ರೇನಿಯಾದ ರೋಗನಿರ್ಣಯಕ್ಕೆ ಸಂಬಂಧಿಸಿದಂತೆ ಅಪಾಯಕಾರಿ ಅಂಶಗಳಾಗಿ ಸೂಚಿಸಲ್ಪಟ್ಟಿವೆ.[61][62] ತಂದೆತಾಯಿಯರು ತೋರಿಸುವ ನಿಗಾವಣೆ ಅಥವಾ ಕೆಲಸಕಾರ್ಯಗಳು ಸ್ಕಿಜೋಫ್ರೇನಿಯಾಕ್ಕೆ ಕಾರಣವಾಗುವುದಿಲ್ಲವಾದರೂ, ಆಧಾರಕವಾಗಿರದ ಅಪಸಾಮಾನ್ಯ ಕಾರ್ಯದ ಸಂಬಂಧಗಳು ಹೆಚ್ಚಿನ ಪ್ರಮಾಣದ ಅಪಾಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬಹುದು.[63][64]
ಸ್ಕಿಜೋಫ್ರೇನಿಯಾ ಸಮಸ್ಯೆಗೆ ಈಡಾಗಿರುವ ಎಲ್ಲ ರೋಗಿಗಳ ಪೈಕಿ ಸುಮಾರು ಅರ್ಧದಷ್ಟು ಜನ ಮಾದಕವಸ್ತುಗಳು ಅಥವಾ ಮದ್ಯಸಾರವನ್ನು ದುರುಪಯೋಗಪಡಿಸಿಕೊಳ್ಳುತ್ತಾರಾದರೂ, ಮಾದಕ ವಸ್ತುವಿನ ಬಳಕೆ ಹಾಗೂ ಸ್ಕಿಜೋಫ್ರೇನಿಯಾದ ನಡುವಿನ ಒಂದು ಸ್ಪಷ್ಟವಾದ ಕಾರಣಾತ್ಮಕ ಸಂಬಂಧವನ್ನು ಸಾಧಿಸುವುದು ಕಷ್ಟಕರವಾಗಿ ಪರಿಣಮಿಸಿದೆ. ಇದಕ್ಕೆ ಸಂಬಂಧಿಸಿ ಹೆಚ್ಚು ಸಾಮಾನ್ಯವಾಗಿ ಎರಡು ವಿವರಣೆಗಳನ್ನು ಬಳಸಲಾಗಿದೆ. ಅವೆಂದರೆ, "ಮಾದಕ ದ್ರವ್ಯದ ಬಳಕೆಯು ಸ್ಕಿಜೋಫ್ರೇನಿಯಾವನ್ನು ಉಂಟುಮಾಡುತ್ತದೆ" ಮತ್ತು "ಸ್ಕಿಜೋಫ್ರೇನಿಯಾದ ಕಾರಣವಾಗಿಯೇ ಮಾದಕ ದ್ರವ್ಯದ ಬಳಕೆಯು ಕಂಡುಬರುತ್ತದೆ". ಈ ಎರಡೂ ವಿವರಣೆಗಳು ಸರಿಯಿರಬಹುದು.[65] 2007ರಲ್ಲಿ ಹೊರಬಿದ್ದ ಒಂದು ಪರ್ಯಾಯ-ವಿಶ್ಲೇಷಣೆಯು ಅಂದಾಜಿಸಿರುವ ಪ್ರಕಾರ, ಸ್ಕಿಜೋಫ್ರೇನಿಯಾ ಸೇರಿದಂತೆ ಮನೋವಿಕೃತ ಅಸ್ವಸ್ಥತೆಗಳ ಬೆಳವಣಿಗೆಯ ಅಪಾಯದಲ್ಲಿನ ಒಂದು ಪ್ರಮಾಣ-ಅವಲಂಬಿತ ಹೆಚ್ಚಳದೊಂದಿಗೆ ಗಾಂಜಾದ ಬಳಕೆಯು ಸಂಖ್ಯಾಶಾಸ್ತ್ರರೀತ್ಯಾ ಜತೆಗೂಡಿದೆ.[66] ಮದ್ಯಸಾರವೂ ಸೇರಿದಂತೆ ಇತರ ಮಾದಕ ದ್ರವ್ಯಗಳು ಸ್ಕಿಜೋಫ್ರೇನಿಯಾವನ್ನು ಉಂಟುಮಾಡುತ್ತವೆ, ಅಥವಾ ಮನೋವಿಕೃತ ವ್ಯಕ್ತಿಗಳು ಸ್ವಯಂ-ಔಷಧೀಕರಿಸಿಕೊಳ್ಳಲು ನಿರ್ದಿಷ್ಟವಾದ ಮಾದಕವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಸೂಚಿಸಲು ಒಂದಷ್ಟು ಸಾಕ್ಷ್ಯ ಲಭ್ಯವಿದೆ; ಖಿನ್ನತೆ, ಕಳವಳ, ಬೇಸರ ಮತ್ತು ಏಕಾಂಗಿತನದಂಥ ಆಹ್ಲಾದಕರವಲ್ಲದ ಸ್ಥಿತಿಗತಿಗಳನ್ನು ನಿಭಾಯಿಸಿಕೊಂಡುಹೋಗಲು ಅವರು ಮಾದಕದ್ರವ್ಯಗಳನ್ನು ಬಳಸುತ್ತಾರೆ ಎಂಬ ನಿರಾಧಾರ ಕಲ್ಪನೆಗೆ ಇಲ್ಲಿ ಒಂದಷ್ಟು ಬೆಂಬಲವಿದೆ.[67] ಆದಾಗ್ಯೂ, ಸ್ವತಃ ಬುದ್ಧಿವಿಕಲ್ಪಕ್ಕೆ ಸಂಬಂಧಿಸಿದಂತೆ, ಮೆಥಾಂಫಿಟಮೀನ್ ಮತ್ತು ಕೊಕೇನ್ನ ಬಳಕೆಯು ಮೆಥಾಂಫಿಟಮೀನ್- ಅಥವಾ ಕೊಕೇನ್- ಚೋದಿತ ಬುದ್ಧಿವಿಕಲ್ಪಗಳನ್ನು ಹೊರಹೊಮ್ಮಿಸಬಹುದು ಎಂಬುದನ್ನು ಚೆನ್ನಾಗಿ ಗ್ರಹಿಸಲಾಗಿದೆ. ಈ ಬುದ್ಧಿವಿಕಲ್ಪಗಳು ಅತಿ ಸಾಮ್ಯತೆಯ ರೋಗಲಕ್ಷಣಶಾಸ್ತ್ರವನ್ನು ಸಾದರಪಡಿಸುತ್ತವೆ ಮತ್ತು ಮಾದಕದ್ರವ್ಯದ ಬಳಕೆದಾರರು ಸಂಯಮದಿಂದ ಕೂಡಿದ ಸ್ಥಿತಿಯಲ್ಲಿ ಉಳಿದಿದ್ದಾಗಲೂ ಸಹ ಅವು ಮುಂದುವರೆಯಬಹುದು.[68]
1960ರ ದಶಕದಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದ, ವ್ಯಾಪಕಾರ್ಥದಲ್ಲಿ ಮನೋರೋಗಚಿಕಿತ್ಸಾ-ವಿರೋಧಿ ಆಂದೋಲನ ಎಂದು ಹೆಸರಾಗಿದ್ದ ಒಂದು ಮಾರ್ಗವು, ಸ್ಕಿಜೋಫ್ರೇನಿಯಾವನ್ನು ಒಂದು ಕಾಯಿಲೆಯೆಂಬಂತೆ ನೋಡುವ ಶಾಸ್ತ್ರೀಯ ವೈದ್ಯಕೀಯ ದೃಷ್ಟಿಕೋನವನ್ನು ವಿರೋಧಿಸುತ್ತದೆ.[69][page needed]
ಥಾಮಸ್ ಝಾಝ್ ಎಂಬ ಮನೋವೈದ್ಯ ತನ್ನ ವಾದವನ್ನು ಮಂಡಿಸುತ್ತಾ, ಮನೋವೈದ್ಯಕೀಯ ರೋಗಿಗಳು ಅಸಾಂಪ್ರದಾಯಿಕ ಆಲೋಚನೆಗಳು ಹಾಗೂ ನಡವಳಿಕೆಯೊಂದಿಗಿನ ವ್ಯಕ್ತಿಗಳೇ ಹೊರತು ರೋಗಗ್ರಸ್ತರಲ್ಲ; ಈ ಲಕ್ಷಣಗಳು ಸಮಾಜಕ್ಕೆ ಇರಿಸುಮುರಿಸನ್ನು ಉಂಟುಮಾಡುತ್ತವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ.[70] ಅವರ ನಡವಳಿಕೆಯನ್ನು ಕಾಯಿಲೆ ಎಂದು ವರ್ಗೀಕರಿಸುವ ಮೂಲಕ ಹಾಗೂ ಸಾಮಾಜಿಕ ನಿಯಂತ್ರಣದ ಒಂದು ವಿಧಾನವಾಗಿ ಅವರನ್ನು ಒತ್ತಾಯಪೂರ್ವಕವಾಗಿ ನಡೆಸಿಕೊಳ್ಳುವ ಮೂಲಕ ಸಮಾಜವು ಅವರನ್ನು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಿಯಂತ್ರಿಸಲು ಬಯಸುತ್ತದೆ ಎಂದು ಆತ ವಾದಿಸುತ್ತಾನೆ. ಈ ದೃಷ್ಟಿಕೋನದ ಪ್ರಕಾರ, "ಸ್ಕಿಜೋಫ್ರೇನಿಯಾ" ಎಂಬುದು ವಾಸ್ತವವಾಗಿ ಅಸ್ತಿತ್ವದಲ್ಲಿಲ್ಲವಾದರೂ ಕೇವಲ ಒಂದು ಸಾಮಾಜಿಕ ಅರ್ಥೈಸುವಿಕೆಯಾಗಿದ್ದು, ಇದು ಸಾಮಾನ್ಯ ಪರಿಸ್ಥಿತಿ ಹಾಗೂ ವೈಪರೀತ್ಯವನ್ನು ರೂಪಿಸುವ ಸಮಾಜದ ಪರಿಕಲ್ಪನೆಯಿಂದ ಸೃಷ್ಟಿಯಾಗಿದೆ.
ಮನೋವೈದ್ಯಕೀಯ ಚಿಕಿತ್ಸಾ ಪದ್ಧತಿಗೆ ವಿರುದ್ಧವಾಗಿ ನಿಂತಿರುವ ಅರ್ಥದಲ್ಲಿ ತನ್ನನ್ನು ಓರ್ವ "ಮನೋರೋಗಚಿಕಿತ್ಸಾ-ವಿರೋಧಿ" ಎಂದು ಝಾಝ್ ಎಂದೂ ಪರಿಗಣಿಸಲಿಲ್ಲ. ಆದರೆ, ಒಬ್ಬಾತನ ಅಥವಾ ಒಬ್ಬಾಕೆಯ ಇಚ್ಛೆಗೆ ವಿರುದ್ಧವಾಗಿ ಯಾರೊಬ್ಬರ ಮೇಲೆ ಚಿಕಿತ್ಸಾವಿಧಾನವನ್ನು ಹೇರುವುದಕ್ಕೆ ಬದಲಾಗಿ, ವಯಸ್ಕರ ನಡುವೆ ಒಪ್ಪಿಗೆಯನ್ನು ಪಡೆಯುವ ಮೂಲಕ ನಡೆಸಬೇಕು ಎಂಬುದು ಆತನ ನಂಬಿಕೆ.
ಮನೋವೈದ್ಯರಾದ ಆರ್. ಡಿ. ಲೈಂಗ್, ಸಿಲ್ವಾನೊ ಅರೈಟಿ, ಥಿಯೋಡೋರ್ ಲಿಡ್ಜ್ ಮತ್ತು ಇತರರು ತಮ್ಮ ವಾದವನ್ನು ಮಂಡಿಸುತ್ತಾ, ಮಾನಸಿಕ ಕಾಯಿಲೆಯೆಂದು ಕರೆಯಲ್ಪಡುತ್ತಿರುವುದರ ರೋಗಲಕ್ಷಣಗಳು ಕಾರ್ಯಸಾಧ್ಯವಲ್ಲದ ಬೇಡಿಕೆಗಳಿಗೆ ನೀಡಲಾಗುವ ಗ್ರಹಿಸಬಹುದಾದ ಪ್ರತಿಕ್ರಿಯೆಗಳಾಗಿವೆ; ಈ ಬೇಡಿಕೆಗಳು ಸಮಾಜ ಮತ್ತು ನಿರ್ದಿಷ್ಟವಾಗಿ ಕೌಟುಂಬಿಕ ಜೀವನದಿಂದ ಕೆಲವೊಂದು ಸೂಕ್ಷ್ಮಮನಸ್ಸಿನ ವ್ಯಕ್ತಿಗಳ ಮೇಲೆ ಹೇರಲ್ಪಡುತ್ತವೆ ಎಂದು ತಿಳಿಸಿದ್ದಾರೆ.
ಲೈಂಗ್, ಅರೈಟಿ ಮತ್ತು ಲಿಡ್ಜ್ರವರು ಮನೋವಿಕೃತ ಅನುಭವದ ಹುರುಳನ್ನು ಮಾನ್ಯಮಾಡುವಲ್ಲಿ ಗಮನಾರ್ಹವಾಗಿದ್ದರು. ಅಂದರೆ, ಇದನ್ನು ಕೇವಲ ಆಧಾರವಾಗಿರುವ ಮಾನಸಿಕ ಅಥವಾ ನರವೈಜ್ಞಾನಿಕ ತೀವ್ರವೇದನೆಯ ಒಂದು ದ್ವಿತೀಯಕ ಹಾಗೂ ಅತ್ಯವಶ್ಯಕ ಅರ್ಥರಹಿತ ಸೂಚಕವಾಗಿ ಪರಿಗಣಿಸುವ ಬದಲು, ಅರ್ಥವಿವರಣೆಯ ಯೋಗ್ಯವಾದ ವಿಷಯವಾಗಿ ಮಾನ್ಯಮಾಡುವಲ್ಲಿ ಅವರು ಪ್ರಸಿದ್ಧರಾಗಿದ್ದರು.
ಸ್ಕಿಜೋಫ್ರೇನಿಯಾ ಸಮಸ್ಯೆಯೊಂದಿಗೆ ಬಳಲುತ್ತಿದ್ದಾರೆ ಎಂದು ನಿರ್ಣಯಿಸಲ್ಪಟ್ಟಿರುವ ಹನ್ನೊಂದು ಮಂದಿಯ ಪ್ರಕರಣ-ಅಧ್ಯಯನಗಳನ್ನು ವಿವರಿಸಿದ ಲೈಂಗ್, ಸದರಿ ವ್ಯಕ್ತಿಗಳ ಕುಟುಂಬ ಹಾಗೂ ಜೀವನದ ಪರಿಸ್ಥಿತಿಗಳ ಸಂದರ್ಭದಲ್ಲಿ ಅವರ ನಡೆಗಳು ಹಾಗೂ ಹೇಳಿಕೆಗಳ ಹುರುಳು ಅಥವಾ ವಿಷಯವು ಅರ್ಥಪೂರ್ಣವಾಗಿತ್ತು ಮತ್ತು ತರ್ಕಬದ್ಧವಾಗಿತ್ತು ಎಂದು ವಾದಿಸಿದ.[71] 1956ರಲ್ಲಿ, ಪಾಲೋ ಆಲ್ಟೊ, ಗ್ರೆಗರಿ ಬೇಟ್ಸನ್ ಮತ್ತು ಆತನ ಸಹೋದ್ಯೋಗಿಗಳಾದ ಪಾಲ್ ವಾಟ್ಜ್ಲಾವಿಕ್, ಡೊನಾಲ್ಡ್ ಜಾಕ್ಸನ್, ಮತ್ತು ಜೇ ಹ್ಯಾಲೆ[72] ಮೊದಲಾದವರು ಲೈಂಗ್ನ ಕೆಲಸಕ್ಕೆ ಸಂಬಂಧಿಸಿದಂತೆ ಸ್ಕಿಜೋಫ್ರೇನಿಯಾದ ಒಂದು ಸಿದ್ಧಾಂತವನ್ನು ಯೋಜಿಸಿದರು. ಇದು ಉಭಯ ಸಂಕಟದ ಸನ್ನಿವೇಶಗಳಿಂದ ಉದ್ಭವಗೊಂಡಂತಿದ್ದು, ಇದರಲ್ಲಿ ಓರ್ವ ವ್ಯಕ್ತಿಯು ವೈವಿಧ್ಯಮಯ ಅಥವಾ ವಿರೋಧಾತ್ಮಕ ಸಂದೇಶಗಳನ್ನು ಸ್ವೀಕರಿಸುತ್ತಾನೆ.
ಆದ್ದರಿಂದ ಹುಚ್ಚುತನ ಎಂಬುದು ಈ ತೀವ್ರವೇದನೆಯ ಒಂದು ಅಭಿವ್ಯಕ್ತಿಯಾಗಿದ್ದು, ಇದನ್ನು ಒಂದು ರೇಚಕ ಮತ್ತು ಪರಿವರ್ತಕ ಶಕ್ತಿಯುಳ್ಳ ಅನುಭವವಾಗಿ ಮಾನ್ಯಮಾಡಬೇಕು. ಸ್ಕಿಜೋಫ್ರೇನಿಯಾ ಅಂಡ್ ದಿ ಫ್ಯಾಮಿಲಿ ಮತ್ತು ದಿ ಆರಿಜನ್ ಅಂಡ್ ಟ್ರೀಟ್ಮೆಂಟ್ ಆಫ್ ಸ್ಕಿಜೋಫ್ರೇನಿಕ್ ಡಿಸಾರ್ಡರ್ಸ್ ಎಂಬ ಪುಸ್ತಕಗಳಲ್ಲಿ, ಲಿಡ್ಜ್ ಮತ್ತು ಆತನ ಸಹೋದ್ಯೋಗಿಗಳು, ತಾಯ್ತಂದೆಯರ ನಡವಳಿಕೆಯು ಮಕ್ಕಳಲ್ಲಿನ ಮಾನಸಿಕ ಕಾಯಿಲೆಗೆ ಕಾರಣವಾಗಬಲ್ಲದು ಎಂಬ ತಮ್ಮ ನಂಬಿಕೆಯನ್ನು ತಿಳಿಸುತ್ತಾರೆ. ಅರೈಟಿಯ ಇಂಟರ್ಪ್ರಿಟೇಷನ್ ಆಫ್ ಸ್ಕಿಜೋಫ್ರೇನಿಯಾ ಎಂಬ ಪುಸ್ತಕವು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ 1975ರ ವೈಜ್ಞಾನಿಕ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ನಾಗರಿಕತೆಯ ಫಲವಾಗಿ ಹೊರಹೊಮ್ಮಿರುವ ಸ್ಕಿಜೋಫ್ರೇನಿಯಾದ ಪರಿಕಲ್ಪನೆಯು 1976ರಲ್ಲಿ ಜೂಲಿಯನ್ ಜೇಯ್ನ್ಸ್ ಎಂಬ ಮನಶ್ಯಾಸ್ತ್ರಜ್ಞನಿಂದ ಬರೆಯಲ್ಪಟ್ಟ ದಿ ಆರಿಜನ್ ಆಫ್ ಕಾನ್ಷಸ್ನೆಸ್ ಇನ್ ದಿ ಬ್ರೇಕ್ಡೌನ್ ಆಫ್ ದಿ ಬೈಕ್ಯಾಮೆರಲ್ ಮೈಂಡ್ ಎಂಬ ಪುಸ್ತಕದಲ್ಲಿ ಮತ್ತಷ್ಟು ಅಭಿವೃದ್ಧಿಪಡಿಸಲ್ಪಟ್ಟಿದೆ; ಐತಿಹಾಸಿಕ ಕಾಲಗಳ ಆರಂಭವಾಗುವವರೆಗೆ, ಸ್ಕಿಜೋಫ್ರೇನಿಯಾ ಅಥವಾ ಅದೇ ಥರದ ಒಂದು ರೋಗಸ್ಥಿತಿಯು ಮಾನವನ ಜಾಗ್ರತಾವಸ್ಥೆಯ ಸಾಮಾನ್ಯ ಸ್ಥಿತಿಯಾಗಿತ್ತು ಎಂದು ಆತ ಪ್ರಸ್ತಾವಿಸಿದ.[73]
"ಉಭಯ ಸದನಿಕ ಮನಸ್ಸು" ಎಂದು ಹೇಳಲಾಗುವ ಒಂದು ಸ್ವರೂಪವನ್ನು ಇದು ತಾಳುತ್ತದೆ. ದೈನಂದಿನ ಚಟುವಟಿಕೆಗಳಿಗೆ ಸೂಕ್ತವಾದ ಕಡಿಮೆ ಮಟ್ಟದ ಪ್ರೇರಕಭಾವದ ಒಂದು ಸಾಮಾನ್ಯ ಸ್ಥಿತಿಯು, ಬಿಕ್ಕಟ್ಟಿನ ಕ್ಷಣಗಳಲ್ಲಿ "ರಹಸ್ಯಮಯ ಧ್ವನಿಗಳಿಂದ" ಅಡ್ಡಿಪಡಿಸಲ್ಪಡುತ್ತದೆ. ದೇವರಿಂದ ಬರುವ ಹಸ್ತಕ್ಷೇಪಗಳು ಎಂದು ಹಿಂದಿನ ಜನಾಂಗದಿಂದ ಹಣೆಪಟ್ಟಿಯನ್ನು ಕಟ್ಟಲ್ಪಡುತ್ತಿದ್ದ ಸೂಚನೆಗಳನ್ನು ಈ ಧ್ವನಿಗಳು ನೀಡುತ್ತವೆ.
ಅಭಿಚಾರ ಪದ್ಧತಿಯ ಕುರಿತು ಅಧ್ಯಯನ ಕೈಗೊಂಡಿರುವ ಸಂಶೋಧಕರು ಉಹಾತ್ಮಕ ಅಭಿಪ್ರಾಯಗಳನ್ನು ಮಂಡಿಸುತ್ತಾ, ಕೆಲವೊಂದು ಸಂಸ್ಕೃತಿಗಳಲ್ಲಿನ ಸ್ಕಿಜೋಫ್ರೇನಿಯಾ ಅಥವಾ ಸಂಬಂಧಿತ ರೋಗಸ್ಥಿತಿಗಳು ಓರ್ವ ವ್ಯಕ್ತಿಯು ಒಬ್ಬ ಅಭಿಚಾರಿ ಅಥವಾ ಮಾಂತ್ರಿಕನಾಗಿ ಪರಿವರ್ತನೆಗೊಳ್ಳುವಂತೆ ಮಾಡಬಹುದು ಎಂದು ತಿಳಿಸಿದ್ದಾರೆ;[74] ಬಹುರೂಪದ ಯಥಾರ್ಥತೆಗಳಿಗೆ ಪ್ರವೇಶಾವಕಾಶವನ್ನು ಹೊಂದುವ ಅನುಭವವು ಸ್ಕಿಜೋಫ್ರೇನಿಯಾದಲ್ಲಿ ಅಪರೂಪವಾದುದೇನಲ್ಲ, ಮತ್ತು ಅನೇಕ ಅಭಿಚಾರಿಕ ಸಂಪ್ರದಾಯಗಳಲ್ಲಿ ಇದೊಂದು ಪ್ರಮುಖ ಅನುಭವವಾಗಿದೆ. ಇದಕ್ಕೆ ಸರಿಸಮನಾಗಿ, ಮನೋವೈದ್ಯರು ಕಾಯಿಲೆ ಎಂದು ಹಣೆಪಟ್ಟಿ ಕಟ್ಟುವ ಕೆಲವೊಂದು ಜಾಗೃತಾವಸ್ಥೆಯ ಮಾರ್ಪಾಟಾದ ಸ್ಥಿತಿಗಳನ್ನು ಉಂಟುಮಾಡುವ ಮತ್ತು ನಿರ್ದೇಶಿಸುವ ನೈಪುಣ್ಯವನ್ನು ಅಭಿಚಾರಿ ಅಥವಾ ಮಾಂತ್ರಿಕನು ಹೊಂದಿರಬಹುದು. ಮತ್ತೊಂದೆಡೆ, ಮನೋ-ಇತಿಹಾಸಕಾರರು ಮನೋವೈದ್ಯಕೀಯ ರೋಗನಿರ್ಣಯಗಳನ್ನು ಪುರಸ್ಕರಿಸುತ್ತಾರೆ. ಆದಾಗ್ಯೂ, ಪ್ರಸಕ್ತ ಮಾನಸಿಕ ಅಸ್ವಸ್ಥತೆಗಳ ವೈದ್ಯಕೀಯ ಮಾದರಿಗಿಂತ ಭಿನ್ನವಾಗಿ, ಬುಡಕಟ್ಟು ಸಮಾಜಗಳಲ್ಲಿನ ತಾಯ್ತಂದೆಯರ ಕಳಪೆ ನಿಗಾವಣೆಗಳು ಮಾಂತ್ರಿಕನ ಛಿದ್ರಮನಸ್ಕತೆಯ ವ್ಯಕ್ತಿತ್ವಗಳನ್ನು ಉಂಟುಮಾಡುತ್ತದೆ ಎಂಬುದನ್ನು ಅವರು ವಾದಿಸಬಹುದು.[75] ಉದಾತ್ತತೆಯ ಬುದ್ಧಿವಿಕಲ್ಪ, ಕೇಳಿಸಿದ ಧ್ವನಿಗಳು ಹಾಗೂ ಪ್ರದರ್ಶಿಸಲ್ಪಟ್ಟ ಭ್ರಮೆಗಳು ಪ್ರಮುಖ ಪ್ರಸಿದ್ಧ ಧಾರ್ಮಿಕ ವ್ಯಕ್ತಿಗಳಿಗೆ ಅನುಭವಕ್ಕೆ ಬಂದಿತು ಎಂಬ ಪರಿಕಲ್ಪನೆಗೆ ಪಾಲ್ ಕರ್ಟ್ಜ್ನಂತಹ ವ್ಯಾಖ್ಯಾನಕಾರರು ಮತ್ತು ಇತರರು ಅಂಗೀಕಾರದ ಮುದ್ರೆಯನ್ನೊತ್ತಿದ್ದಾರೆ.[76]
ಸ್ಕಿಜೋಫ್ರೇನಿಯಾ ಎಂಬುದು ಭಾಷೆಗಾಗಿರುವ ಎಡ ಮೆದುಳಿನ ಅರ್ಧಗೋಳದ ಒಂದು ವಿಶಿಷ್ಟತೆಗಾಗಿ ನಾವು ತೆರಬೇಕಾದ ವಿಕಾಸಾತ್ಮಕ ಬೆಲೆಯಾಗಿರಬಹುದು ಎಂದು ಟಿಮ್ ಕ್ರೋ ಎಂಬ ಮನೋವೈದ್ಯ ವಾದಿಸಿದ್ದಾನೆ.[77] ಬಲ ಮಿದುಳಿನ ಅರ್ಧಗೋಳದ ತೀವ್ರಗೊಳಿಸುವಿಕೆಯ ಮತ್ತು ಎಡಮೆದುಳಿನ ಅರ್ಧಗೋಳದ ಎಂದಿನ ಪ್ರಾಬಲ್ಯದ ಹೆಚ್ಚಿನ ಮಟ್ಟಗಳೊಂದಿಗೆ ಬುದ್ಧಿವಿಕಲ್ಪವು ಸಂಬಂಧಹೊಂದಿದೆಯಾದ್ದರಿಂದ, ಈ ವ್ಯವಸ್ಥೆಯು ಕುಸಿದುಬಿದ್ದಾಗ ಸ್ಕಿಜೋಫ್ರೇನಿಯಾದ ಹಾನಿಯನ್ನುಂಟುಮಾಡಿ ನಮ್ಮ ಭಾಷಾಸಾಮರ್ಥ್ಯಗಳು ವಿಕಸನಗೊಂಡಿರಬಹುದು. ಇತರ ಪ್ರಸ್ತಾಪಗಳು ಸ್ಕಿಜೋಫ್ರೇನಿಯಾವನ್ನು ಮಾನಸಿಕ ವಿಘಟನೆ[78] ಅಥವಾ ದೃಶ್ಯತ್ವ ಸಿದ್ಧಾಂತದ ಮತ್ತು ಇತರ ಗ್ರಹಿಕೆಗಳಿಂದ ಅರ್ಥೈಸಿಕೊಂಡ ಅರಿವಿನ ಸ್ಥಿತಿ ಮತ್ತು ಗುರುತಿಸುವಿಕೆಗೆ ಸಂಬಂಧಕಲ್ಪಿಸಿವೆ.[79][80]
ಮಿದುಳಿನಲ್ಲಿ ಉತ್ಪತ್ತಿಯಾದ ನರ-ಪೌಷ್ಠಿಕ ಅಂಶದೊಂದಿಗೆ (ಬ್ರೇನ್ ಡಿರೈವ್ಡ್ ನ್ಯೂರೋಟ್ರೋಫಿಕ್ ಫ್ಯಾಕ್ಟರ್-BDNF) ಕಾಯಿಲೆಯ ಒಂದು ಸಂಬಂಧವಿದೆ.[81][82].
ಸ್ಕಿಜೋಫ್ರೇನಿಯಾದ ಬೆಳವಣಿಗೆ ಹಾಗೂ ನಿರ್ವಹಣೆಯಲ್ಲಿ ಕಾರಣಾತ್ಮಕವಲ್ಲದ ಅಸಂಖ್ಯಾತ ಮಾನಸಿಕ ಕಾರ್ಯವಿಧಾನಗಳು ಸೂಚಿಸಲ್ಪಟ್ಟಿವೆ. ಸ್ಕಿಜೋಫ್ರೇನಿಯಾವು ಖಾತ್ರಿಯಾಗಿರುವವರ ಅಥವಾ ಅದರ ಅಪಾಯದಲ್ಲಿರುವವರಲ್ಲಿ, ಅದರಲ್ಲೂ ವಿಶೇಷವಾಗಿ ಒತ್ತಡದ ಅಡಿಯಲ್ಲಿರುವವರು ಅಥವಾ ಗೊಂದಲಮಯ ಸನ್ನಿವೇಶಗಳಲ್ಲಿರುವವರಲ್ಲಿ ಗುರುತಿಸಲ್ಪಟ್ಟ ಅರಿವಿನ ಪಕ್ಷಪಾತಗಳು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತವೆ: ಸಂಭವನೀಯ ಬೆದರಿಕೆಗಳಿಗೆ ಹೆಚ್ಚಿನ ಗಮನವನ್ನು ನೀಡುವುದು, ದಿಢೀರ್ ನಿರ್ಧಾರಗಳನ್ನು ತಳೆಯುವುದು, ಬಾಹ್ಯ ಆರೋಪಣೆಗಳನ್ನು ಮಾಡುವುದು, ಸಾಮಾಜಿಕ ಸನ್ನಿವೇಶಗಳು ಹಾಗೂ ಮಾನಸಿಕ ಸ್ಥಿತಿಗಳ ಕುರಿತಾದ ದುರ್ಬಲಗೊಂಡ ತಾರ್ಕಿಕ ವಿಧಾನ, ಬಾಹ್ಯ ಮೂಲವೊಂದರಿಂದ ಬರುವ ಮಾತಿನಿಂದ ಆಂತರಿಕ ಮಾತನ್ನು ಪ್ರತ್ಯೇಕಿಸುವಲ್ಲಿನ ತೊಡಕು, ಮತ್ತು ಮುಂಚಿತವಾಗಿ ದೃಷ್ಟಿಗೋಚರ ಸಂಸ್ಕರಣೆ ಮಾಡುವುದು ಮತ್ತು ಏಕಾಗ್ರತೆಯನ್ನು ಕಾಯ್ದುಕೊಂಡು ಹೋಗುವಲ್ಲಿನ ಕಷ್ಟಗಳು.[83][84][85][86] ಕೆಲವೊಂದು ಅರಿವಿನ ಲಕ್ಷಣಗಳು ಸ್ಮೃತಿ, ಗಮನ, ಸಮಸ್ಯೆ-ಪರಿಹರಿಸುವಿಕೆ, ಕಾರ್ಯಕಾರಿ ಚಟುವಟಿಕೆ ಅಥವಾ ಸಾಮಾಜಿಕ ಗ್ರಹಣಶಕ್ತಿಗಳಲ್ಲಿನ ಸಮಗ್ರವಾದ ನರದ ಅರಿವಿನ ಕೊರತೆಗಳನ್ನು ಪ್ರತಿಬಿಂಬಿಸಬಹುದು. ಇತರ ಲಕ್ಷಣಗಳು ನಿರ್ದಿಷ್ಟ ಫಲಿತಾಂಶಗಳು ಮತ್ತು ಅನುಭವಗಳಿಗೆ ಸಂಬಂಧಿಸಿರಬಹುದು.[63][87] "ಮೊಂಡಾಗಿರುವ ಪ್ರವೃತ್ತಿ"ಯ ಒಂದು ಸಾಮಾನ್ಯ ಹೊರರೂಪವಿದ್ದಾಗ್ಯೂ, ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಲ್ಪಟ್ಟ ಅನೇಕ ವ್ಯಕ್ತಿಗಳು, ನಿರ್ದಿಷ್ಟವಾಗಿ ಒತ್ತಡದಿಂದ ತುಂಬಿದ ಅಥವಾ ಋಣಾತ್ಮಕ ಪ್ರಚೋದನೆಗಳಿಗೆ ಅತಿಹೆಚ್ಚಿನ ಪ್ರಮಾಣದಲ್ಲಿ ಭಾವಪರವಶರಾಗಿ ಪ್ರತಿಸ್ಪಂದಿಸುತ್ತಾರೆ, ಮತ್ತು ಇಂಥ ಸಂವೇದನಾಶೀಲತೆಯು ರೋಗಲಕ್ಷಣಗಳಿಗೆ ಅಥವಾ ಅಸ್ವಸ್ಥತೆಗೆ ಈಡಾಗುವಿಕೆಯ ಪರಿಸ್ಥಿತಿಯನ್ನು ಉಂಟುಮಾಡಬಹುದು ಎಂದು ಇತ್ತೀಚಿನ ಕೆಲವೊಂದು ಸಂಶೋಧನೆಗಳು ಸೂಚಿಸುತ್ತವೆ.[16][88][89] ಭ್ರಮೆಯ ನಂಬಿಕೆಗಳು ಮತ್ತು ಮನೋವಿಕೃತ ಅನುಭವಗಳ ವಾಸ್ತವಾಂಶವು ಅಸ್ವಸ್ಥತೆಯ ಭಾವನಾತ್ಮಕ ಕಾರಣಗಳನ್ನು ಪ್ರತಿಬಿಂಬಿಸಬಲ್ಲದು, ಮತ್ತು ರೋಗಲಕ್ಷಣಶಾಸ್ತ್ರದ ಮೇಲೆ ಇಂಥ ಅನುಭವಗಳು ಬೀರುವ ಪ್ರಭಾವವನ್ನು ಓರ್ವ ವ್ಯಕ್ತಿಯು ಹೇಗೆ ಗ್ರಹಿಸುತ್ತಾನೆ ಎಂಬುದನ್ನು ಕೆಲವೊಂದು ಸಾಕ್ಷ್ಯವು ಸೂಚಿಸುತ್ತದೆ.[90][91][92][93] ಕಲ್ಪಿತ ಬೆದರಿಕೆಗಳನ್ನು ತಪ್ಪಿಸಲು "ರಕ್ಷಣಾತ್ಮಕ ನಡವಳಿಕೆಗಳನ್ನು" ಬಳಸುವುದರಿಂದಾಗಿ ಭ್ರಮೆಗಳ ಬೇರೂರುವಿಕೆ ಅಥವಾ ನಿರಂತರತೆಯು ಕಂಡುಬರಬಹುದು.[94] ಮಾನಸಿಕ ಕಾರ್ಯವಿಧಾನಗಳ ಪಾತ್ರಕ್ಕೆ ಸಂಬಂಧಿಸಿದ ಸಾಕ್ಷ್ಯವು, ಸ್ಕಿಜೋಫ್ರೇನಿಯಾದ ರೋಗಲಕ್ಷಣ ಮೇಲಿನ ಚಿಕಿತ್ಸಾವಿಧಾನಗಳ ಪ್ರಭಾವದಿಂದ ಬರುತ್ತದೆ.[95]
ಮಿದುಳಿನ ಕಾರ್ಯಚಟುವಟಿಕೆಯಲ್ಲಿನ ಕ್ರಿಯಾತ್ಮಕ ವ್ಯತ್ಯಾಸಗಳನ್ನು ಪರೀಕ್ಷಿಸಲು ಮಾಡಲಾಗುವ fMRI ಮತ್ತು PET ರೀತಿಯ ನರ ಮಾನಸಿಕ ಪರೀಕ್ಷೆಗಳು ಹಾಗೂ ಮಿದುಳಿನ ಚಿತ್ರಣದ ತಂತ್ರಜ್ಞಾನಗಳನ್ನು ಬಳಸಿಕೊಂಡು ಅಧ್ಯಯನಗಳನ್ನು ಮಾಡಲಾಗಿದ್ದು, ಮುಂಭಾಗದ ಹಾಲೆಗಳು, ಹಿಪೋಕ್ಯಾಂಪಸ್ ದಿಂಡು ಮತ್ತು ಗಂಡಸ್ಥಳದ ಹಾಲೆಗಳಲ್ಲಿ ವ್ಯತ್ಯಾಸಗಳು ಅತಿ ಸಾಮಾನ್ಯವಾಗಿ ಸಂಭವಿಸುವಂತೆ ತೋರುತ್ತವೆ ಎಂದು ಈ ಅಧ್ಯಯನಗಳು ತೋರಿಸಿಕೊಟ್ಟಿವೆ.[96] ಸ್ಕಿಜೋಫ್ರೇನಿಯಾದೊಂದಿಗೆ ಆಗಾಗ ಸಂಬಂಧವನ್ನು ಹೊಂದಿರುವ ನರದ ಅರಿವಿನ ಕೊರತೆಗಳಿಗೆ ಈ ವ್ಯತ್ಯಾಸಗಳು ಸಂಪರ್ಕಹೊಂದಿವೆ.[97]
ಮಿದುಳಿನ ಮೀಸೋಲಿಂಬಿಕ್ ಪ್ರತಿಕ್ರಿಯಾ ಸರಣಿಯಲ್ಲಿನ ಡೋಪಮೈನ್ನ ಕ್ರಿಯೆಯ ಮೇಲೆ ನಿರ್ದಿಷ್ಟವಾದ ಗಮನವನ್ನು ಕೇಂದ್ರೀಕರಿಸಲಾಗಿದೆ. ಡೋಪಮೈನ್ ಕ್ರಿಯೆಗೆ ತಡೆಯೊಡ್ಡುವ, ಫೀನಾಥಿಯಾಜೈನ್ಸ್ ಎಂದು ಹೇಳಲಾಗುವ ಒಂದು ಔಷಧದ ಗುಂಪು ಮನೋವಿಕೃತ ರೋಗಲಕ್ಷಣಗಳನ್ನು ಕಡಿಮೆಮಾಡಬಲ್ಲದು ಎಂದು ಆಕಸ್ಮಿಕವಾಗಿ ಕಂಡುಬಂದ ಫಲಿತಾಂಶದಿಂದ ಈ ಗಮನವು ಹೆಚ್ಚಿನ ರೀತಿಯಲ್ಲಿ ಕಂಡುಬಂದಿದೆ. ಡೋಪಮೈನ್ನ ಬಿಡುಗಡೆಯನ್ನು ಪ್ರಚೋದಿಸುವ ಆಂಫೆಟಮೈನ್ಗಳು ಸ್ಕಿಜೋಫ್ರೇನಿಯಾದಲ್ಲಿನ ಮನೋವಿಕೃತ ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಹುದು ಎಂಬ ಅಂಶವೂ ಇದಕ್ಕೆ ಪೂರಕವಾಗಿ ನಿಂತಿದೆ.[98] ಸ್ಕಿಜೋಫ್ರೇನಿಯಾದ ಡೋಪಮೈನ್ ಕಲ್ಪಿತ ಸಿದ್ಧಾಂತ ಎಂದು ಹೇಳಲಾಗುವ ಒಂದು ಪ್ರಭಾವಶಾಲಿ ಸಿದ್ಧಾಂತವು ತನ್ನ ವಾದವನ್ನು ಮಂಡಿಸುತ್ತಾ, D2 ಗ್ರಾಹಿಗಳ ಹೆಚ್ಚುವರಿ ಪಟುಗೊಳಿಸುವಿಕೆಯು ಸ್ಕಿಜೋಫ್ರೇನಿಯಾದ (ಧನಾತ್ಮಕ ರೋಗಲಕ್ಷಣಗಳ) ಸಮಸ್ಯೆಗೆ ಕಾರಣವಾಗಿತ್ತು ಎಂದು ತಿಳಿಸಿದೆ. ಎಲ್ಲಾ ಮನೋವಿಕೃತಿ-ನಿರೋಧಕಗಳಿಗೆ ಸಾಮಾನ್ಯವಾಗಿರುವ D2 ದಿಗ್ಬಂಧನದ ಪ್ರಭಾವದ ಮೇಲೆ ಅವಲಂಬಿಸಿ ಸುಮಾರು 20 ವರ್ಷಗಳವರೆಗೆ ಸಹಜವೆಂದು ಭಾವಿಸಲಾಗಿತ್ತಾದರೂ, PET ಮತ್ತು SPET ಚಿತ್ರಣದ ಅಧ್ಯಯನಗಳು 1990ರ ದಶಕದ ಮಧ್ಯಭಾಗದವರೆಗೂ ಪೂರಕವಾದ ಸಾಕ್ಷ್ಯವನ್ನು ಒದಗಿಸಿರಲಿಲ್ಲ. ಈ ವಿವರಣೆಯು ವಿಪರೀತವಾಗಿ ಸರಳವಾಗಿ ಕಾಣಿಸುತ್ತದೆ ಎಂದು ಈಗ ಅನಿಸುತ್ತದೆ. ಇದಕ್ಕೆ ಆಂಶಿಕವಾದ ಕಾರಣವೇನೆಂದರೆ, ಹೊಸತಾದ ಮನೋವಿಕೃತಿ-ನಿರೋಧಕ ಔಷಧೀಯ ಚಿಕಿತ್ಸೆಯು (ಇದಕ್ಕೆ ಮಾದರಿಯಲ್ಲದ ಮನೋವಿಕೃತಿ-ನಿರೋಧಕ ಔಷಧೀಯ ಚಿಕಿತ್ಸೆ ಎಂದು ಹೆಸರು) ಹಳೆಯ ಔಷಧೀಯ ಚಿಕಿತ್ಸೆಯಷ್ಟೇ (ಇದಕ್ಕೆ ಮಾದರಿಯ ಮನೋವಿಕೃತಿ-ನಿರೋಧಕ ಔಷಧೀಯ ಚಿಕಿತ್ಸೆ ಎಂದು ಹೆಸರು) ಸಮಾನವಾಗಿ ಪರಿಣಮಕಾರಿಯಾಗಬಲ್ಲದು, ಆದರೆ ಸೆರೊಟೋನಿನ್ ಕ್ರಿಯೆಯ ಮೇಲೆ ಪ್ರಭಾವ ಬೀರಬಲ್ಲದು ಮತ್ತು ಸ್ವಲ್ಪವೇ ಕಡಿಮೆಯಾಗಿರುವ ಡೋಪಮೈನ್ ತಡೆಯ ಪ್ರಭಾವವನ್ನು ಹೊಂದಬಲ್ಲದು.[99]
ಸ್ಕಿಜೋಫ್ರೇನಿಯಾದಲ್ಲಿನ ಗ್ಲುಟಮೇಟ್ ಎಂಬ ನರಸಂವಾಹಕ ಮತ್ತು NMDA ಗ್ಲುಟಮೇಟ್ ಗ್ರಾಹಕದ ಅಪಕರ್ಷಿತ ಕಾರ್ಯದ ಮೇಲೂ ಗಮನವು ಕೇಂದ್ರೀಕರಿಸಲ್ಪಟ್ಟಿದೆ. ಸ್ಕಿಜೋಫ್ರೇನಿಯಾ[100] ಸಮಸ್ಯೆಯಿರುವುದೆಂದು ಹಿಂದೆಯೇ ನಿರ್ಣಯಿಸಲ್ಪಟ್ಟ ಜನರ ಮರಣೋತ್ತರದ ಮಿದುಳಿನಲ್ಲಿ ಕಂಡುಬಂದ, ಗ್ಲುಟಮೇಟ್ ಗ್ರಾಹಕಗಳ ಅಪಸಾಮಾನ್ಯವಾಗಿ ಕಡಿಮೆಯಾದ ಮಟ್ಟಗಳಿಂದ ಈ ಪ್ರಕ್ರಿಯೆಯು ಹೆಚ್ಚಿನ ರೀತಿಯಲ್ಲಿ ಸೂಚಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಫೀನ್ಸೈಕ್ಲಿಡೈನ್ ಮತ್ತು ಕೀಟಮೈನ್ನಂಥ ಗ್ಲುಟಮೇಟ್ನ್ನು ತಡೆಯುವ ಔಷಧವಸ್ತುಗಳು ಸದರಿ ರೋಗಸ್ಥಿತಿಯೊಂದಿಗೆ ಗುರುತಿಸಿಕೊಂಡಿರುವ ರೋಗಲಕ್ಷಣಗಳು ಹಾಗೂ ಅರಿವಿನ ಸಮಸ್ಯೆಗಳನ್ನು ಅನುಕರಿಸಬಲ್ಲವು ಎಂದು ತಿಳಿದುಬಂದಿದೆ.[101]
ಮುಂಭಾಗದ ಹಾಲೆ ಮತ್ತು ಹಿಪೋಕ್ಯಾಂಪಸ್ ದಿಂಡಿನ ಕ್ರಿಯೆಯ ಅವಶ್ಯಕತೆಯಿರುವ ಪರೀಕ್ಷೆಗಳ ಮೇಲಿನ ಕಳಪೆ ಕಾರ್ಯಕ್ಷಮತೆಯೊಂದಿಗೆ ಅಪಕರ್ಷಿತ ಗ್ಲುಟಮೇಟ್ ಕ್ರಿಯೆಯು ಸಂಬಂಧಹೊಂದಿದೆ ಮತ್ತು ಡೋಪಮೈನ್ನ ಕ್ರಿಯೆಯ ಮೇಲೆ ಗ್ಲುಟಮೇಟ್ ಪ್ರಭಾವ ಬೀರಬಲ್ಲದು ಎಂಬ ಸ್ಕಿಜೋಫ್ರೇನಿಯಾದಲ್ಲಿ ಸೂಚಿಸಲ್ಪಟ್ಟಿರುವ ಎಲ್ಲ ಅಂಶಗಳು ಸ್ಕಿಜೋಫ್ರೇನಿಯಾದಲ್ಲಿನ ಗ್ಲುಟಮೇಟ್ ಪ್ರತಿಕ್ರಿಯಾ ಸರಣಿಗಳ ಒಂದು ಪ್ರಮುಖವಾದ ಮಧ್ಯಸ್ಥಿಕೆಯ (ಮತ್ತು ಸಂಭವನೀಯವಾಗಿ ಕಾರಣಾತ್ಮಕವಾದ) ಪಾತ್ರವನ್ನು ಸೂಚಿಸಿವೆ.[102]
ಆದರೂ, ಗ್ಲುಟಮೇಟ್ಯುಕ್ತ ಔಷಧೀಯ ಚಿಕಿತ್ಸೆಗೆ ಪ್ರತಿಕ್ರಿಯಿಸುವಲ್ಲಿ ಧನಾತ್ಮಕ ರೋಗಲಕ್ಷಣಗಳು ವಿಫಲವಾಗುತ್ತವೆ.[103]
ಸ್ಕಿಜೋಫ್ರೇನಿಯಾದಲ್ಲಿ ಮಿದುಳಿನ ನಿರ್ದಿಷ್ಟ ಭಾಗಗಳ ಗಾತ್ರ ಹಾಗೂ ಸಂರಚನೆಯಲ್ಲಿ ವ್ಯತ್ಯಾಸಗಳಿರುವುದರ ಕುರಿತು ತಿಳಿದುಬಂದಿದೆ. 2006ರಲ್ಲಿ ನಡೆಸಲಾದ MRI ಅಧ್ಯಯನಗಳ ಒಂದು ಪರ್ಯಾಯ-ವಿಶ್ಲೇಷಣೆಯು ಕಂಡುಕೊಂಡಂತೆ, ಇಡೀ ಮಿದುಳು ಹಾಗೂ ಹಿಪೋಕ್ಯಾಂಪಲ್ ಭಾಗಗಳು ಅಪಕರ್ಷಿತವಾಗಿವೆ ಮತ್ತು ಆರೋಗ್ಯಕರ ನಿಯಂತ್ರಣಗಳಿಗೆ ಸಂಬಂಧಿಸಿರುವ ಮೊಟ್ಟಮೊದಲ ಮನೋವಿಕೃತ ಅಧ್ಯಾಯಗಳೊಂದಿಗಿನ ರೋಗಿಗಳಲ್ಲಿ ಕುಕ್ಷೀಯ ಭಾಗವು ಹೆಚ್ಚಳಗೊಂಡಿರುತ್ತವೆ. ಆದಾಗ್ಯೂ, ಈ ಅಧ್ಯಯನಗಳಲ್ಲಿನ ಸರಾಸರಿ ಗಾತ್ರೀಯ ಬದಲಾವಣೆಗಳು MRI ವಿಧಾನಗಳಿಂದ ಪತ್ತೆಹಚ್ಚಲ್ಪಟ್ಟ ಮಿತಿಗಳಿಗೆ ಹತ್ತಿರವಾಗಿವೆ. ಆದ್ದರಿಂದ, ಸ್ಕಿಜೋಫ್ರೇನಿಯಾವು ರೋಗಲಕ್ಷಣದ ಬಿರುಸಾದ ಆರಂಭವಾಗುವಿಕೆಯ ಸಮಯದಲ್ಲಿ ಪ್ರಾರಂಭವಾಗುವ ನರ ಅವನತಿಯ ಪ್ರಕ್ರಿಯೆಯೇ, ಅಥವಾ ಆರಂಭಿಕ ವಯಸ್ಸಿನಲ್ಲಿಯೇ ಮಿದುಳಿನ ಅಪಸಾಮಾನ್ಯ ಭಾಗಗಳನ್ನು ಉತ್ಪತ್ತಿಮಾಡುವ ನರಬೆಳವಣಿಗೆಗೆ ಸಹಜವಾದ ಒಂದು ಪ್ರಕ್ರಿಯೆಯಾಗಿ ಇದನ್ನು ನಿರೂಪಿಸುವುದು ಉತ್ತಮವೇ ಎಂಬುದು ನಿರ್ಣಯಿಸಬೇಕಾದ ವಿಷಯವಾಗಿದೆ.[104]
ಹ್ಯಾಲೊಪೆರಿಡಾಲ್ನಂಥ ಮೊದಲ ಅಧ್ಯಾಯದ ಬುದ್ಧಿವಿಕಲ್ಪ ಮಾದರಿಯ ಮನೋವಿಕೃತಿ-ನಿರೋಧಕಗಳು ಬೂದುದ್ರವ್ಯದ ಭಾಗದಲ್ಲಿನ ಗಣನೀಯ ಪ್ರಮಾಣದ ಅಪಕರ್ಷಣಗಳೊಂದಿಗೆ ಸಂಬಂಧಹೊಂದಿದ್ದರೆ, ಓಲನ್ಝಾಪೈನ್ನಂಥ ಮಾದರಿಯಲ್ಲದ ಮನೋವಿಕೃತಿ-ನಿರೋಧಕಗಳು ಸಂಬಂಧಹೊಂದಿರಲಿಲ್ಲ.[105] ಮಾನವೇತರ ಅತ್ಯುನ್ನತ ಸಸ್ತನಿಗಳಲ್ಲಿ ಕೈಗೊಂಡ ಅಧ್ಯಯನವು ಕಂಡುಕೊಂಡಂತೆ, ಬೂದು ಮತ್ತು ಬಿಳಿಯ ದ್ರವ್ಯದ ಅಪಕರ್ಷಣಗಳು ಮಾದರಿಯ ಮತ್ತು ಮಾದರಿಯಲ್ಲದ ಮನೋವಿಕೃತಿ-ನಿರೋಧಕಗಳೆರಡರೊಂದಿಗೂ ಸಂಬಂಧಹೊಂದಿದ್ದವು.[106]
ಸ್ಕಿಜೋಫ್ರೇನಿಯಾದಲ್ಲಿನ ಅಸಮಗ್ರವಾದ ದಿಗ್ವಶತೆಯ ಅಪರ್ಷಣದ ಎರಡು ಸ್ಥಿರವಾದ ಅಥವಾ ಸಮಂಜಸವಾದ ತಾಣಗಳನ್ನು 2009ರಲ್ಲಿ ಕೈಗೊಳ್ಳಲಾದ ಡಿಫ್ಯೂಷನ್ ಟೆನ್ಸರ್ ಇಮೇಂಜಿಂಗ್ ಅಧ್ಯಯನಗಳ ಒಂದು ಪರ್ಯಾಯ-ವಿಶ್ಲೇಷಣೆಯು ಪತ್ತೆಮಾಡಿದೆ. ಎಡಮುಂಭಾಗದ ಹಾಲೆಯಲ್ಲಿನ ಒಂದು ಪ್ರದೇಶವು ಮುಂಭಾಗದ ಹಾಲೆ, ಥಲಾಮಸ್ ಮತ್ತು ಸಿಂಗ್ಯುಲೇಟ್ ಗೈರಸ್ನ್ನು ಪರಸ್ಪರ ಸಂಪರ್ಕಿಸುವ ಬಿಳಿಯ ದ್ರವ್ಯದ ಪ್ರದೇಶಗಳಿಂದ ಅಡ್ಡಹಾಯಲ್ಪಟ್ಟಿದೆ; ಗಂಡಸ್ಥಳದ ಹಾಲೆಯಲ್ಲಿನ ಎರಡನೇ ಪ್ರದೇಶವು ಮುಂಭಾಗದ ಹಾಲೆ, ಇನ್ಸುಲಾ, ಹಿಪೋಕ್ಯಾಂಪಸ್-ಅಮಿಗ್ಡಾಲ ದಿಂಡು, ಗಂಡಸ್ಥಳದ ಮತ್ತು ಹಿಂದಲೆಯ ಹಾಳೆ ಇವುಗಳನ್ನು ಪರಸ್ಪರ ಸಂಪರ್ಕಿಸುವ ಬಿಳಿಯ ದ್ರವ್ಯದ ಪ್ರದೇಶಗಳಿಂದ ಅಡ್ಡಹಾಯಲ್ಪಟ್ಟಿದೆ. ಸ್ಕಿಜೋಫ್ರೇನಿಯಾದಲ್ಲಿ ಬಿಳಿಯ ದ್ರವ್ಯದ ಪ್ರದೇಶಗಳ ಎರಡು ಜಾಲಬಂಧಗಳು ಸೋಂಕಿಗೆ ಒಳಗಾಗಲು ಸಾಧ್ಯವಿದೆ. ಏಕೆಂದರೆ ಅವು ಸಂಪರ್ಕಿಸುವ ಬೂದುದ್ರವ್ಯದ ಪ್ರದೇಶಗಳ "ಸಂಬಂಧಕಡಿದುಹಾಕುವಿಕೆ"ಯ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಲೇಖಕರು ಸೂಚಿಸಿದ್ದಾರೆ.[107] fMRI ಅಧ್ಯಯನಗಳ ಅವಧಿಯಲ್ಲಿ, ಮಿದುಳಿನ ಕೊರತೆಯ ಜಾಲ ಮತ್ತು ಉದ್ದೇಶ-ಧನಾತ್ಮಕ ಜಾಲಗಳಲ್ಲಿನ ಮಹಾನ್ ಸಂಪರ್ಕಜಾಲವು ಸ್ಕಿಜೋಫ್ರೇನಿಯಾಕ್ಕೆ ಈಡಾಗಿರುವ ರೋಗಿಗಳಲ್ಲಿ ಕಂಡುಬಂದಿವೆ, ಮತ್ತು ಆತ್ಮಾವಲೋಕನಕ್ಕೆ ಮತ್ತು ಬಾಹ್ಯಾವಲೋಕನಕ್ಕೆ ಕ್ರಮವಾಗಿ ಗಮನದ ಹೆಚ್ಚುವರಿ ಸ್ಥಾನನಿರ್ಣಯವನ್ನು ಪ್ರತಿಬಿಂಬಿಸಬಹುದಾಗಿದೆ. ಈ ಎರಡು ಜಾಲಗಳ ನಡುವಿನ ಮಹತ್ವದ ಪ್ರತಿ-ಅನ್ಯೋನ್ಯ ಸಂಬಂಧವು ಜಾಲಗಳ ನಡುವಿನ ಹೆಚ್ಚಿನ ಪ್ರಮಾಣದ ಪೈಪೋಟಿಯನ್ನು ಸೂಚಿಸುತ್ತದೆ.[108]
ಆನುವಂಶಿಕ ಅಪಾಯ ಮತ್ತು ದುರ್ಬಲಗೊಳಿಸಲಾಗದ ಬುದ್ಧಿವಿಕಲ್ಪದ-ರೀತಿಯ ಅನುಭವವದ ಸಂಯೋಜನೆಯು ನಂತರದ ರೋಗನಿರ್ಣಯವನ್ನು ಎಷ್ಟರಮಟ್ಟಿಗೆ ಊಹಿಸುತ್ತದೆ ಎಂಬುದನ್ನು ಕಂಡುಕೊಳ್ಳಲು ಸಂಶೋಧನೆಯನ್ನು ನಡೆಸಲಾಗುತ್ತಿದೆಯಾದರೂ, ಸ್ಕಿಜೋಫ್ರೇನಿಯಾದ ನಂತರದ ಬೆಳವಣಿಗೆಗಾಗಿ ಯಾವುದೇ ವಿಶ್ವಾಸಾರ್ಹ ಸೂಚಕಗಳು ಲಭ್ಯವಿಲ್ಲ.[109]
ಸ್ಕಿಜೋಫ್ರೇನಿಯಾದ ಒಂದು ಕೌಟುಂಬಿಕ ಇತಿಹಾಸ ಮತ್ತು ತಾತ್ಕಾಲಿಕ ಅಥವಾ ಸ್ವಯಂ-ಸೀಮಿತತೆಯ ಮನೋವಿಕೃತ ಅನುಭವಗಳ ಅಸ್ತಿತ್ವವನ್ನು ಒಳಗೊಂಡ ’ಅತಿ ಹೆಚ್ಚು-ಅಪಾಯದ ಮಾನಸಿಕ ಸ್ಥಿತಿಯ’ ಮಾನದಂಡಗಳನ್ನು ಈಡೇರಿಸುವ ಜನರು, ಒಂದು ವರ್ಷದ ನಂತರ ಇಂಥ ರೋಗಸ್ಥಿತಿಯೊಂದಿಗೆ ಗುರುತಿಸಲ್ಪಡುವ 20–40%ನಷ್ಟು ಸಾಧ್ಯತೆಗಳನ್ನು ಹೊಂದಿರುತ್ತಾರೆ.[110] ’ಉನ್ನತ-ಅಪಾಯದ’ ಮಾನದಂಡಗಳನ್ನು ಈಡೇರಿಸುವ ಜನರಲ್ಲಿ ಸಂಪೂರ್ಣ-ಬೆಳೆದ ಸ್ಕಿಜೋಫ್ರೇನಿಯಾವು ಬೆಳೆಯುವ ಸಾಧ್ಯತೆಗಳನ್ನು ಕಡಿಮೆಮಾಡುವಲ್ಲಿ ಮಾನಸಿಕ ಚಿಕಿತ್ಸೆಗಳು ಮತ್ತು ಔಷಧೀಯ ಚಿಕಿತ್ಸೆಯ ಬಳಕೆಯು ಪರಿಣಾಮಕಾರಿಯಾಗಿ ಕಂಡುಬಂದಿದೆ.[111] ಆದಾಗ್ಯೂ, ಮನೋವಿಕೃತಿ-ನಿರೋಧಕ ಔಷಧೀಯ ಚಿಕಿತ್ಸೆಯ ಪಾರ್ಶ್ವ-ಪರಿಣಾಮಗಳ ಬೆಳಕಿನಲ್ಲಿ ಸ್ಕಿಜೋಫ್ರೇನಿಯಾವನ್ನು ಎಂದಿಗೂ ಬೆಳೆಸಿಕೊಳ್ಳದಿರಬಹುದಾದ ಜನರ ಚಿಕಿತ್ಸೆಯು ವಿವಾದಾತ್ಮಕ[112] ಎನಿಸಿಕೊಂಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸಮರ್ಥವಾಗಿ ವಿರೂಪಗೊಳಿಸಬಲ್ಲ ಟಾರ್ಡೈವ್ ಡಿಸ್ಕಿನೇಸಿಯಾ ಮತ್ತು ಅಪರೂಪದ ಆದರೆ ಸಮರ್ಥವಾಗಿ ಮಾರಣಾಂತಿಕವಾದ ನ್ಯೂರೋಲೆಪ್ಟಿಕ್ ಮ್ಯಾಲಿಗ್ನೆಂಟ್ ರೋಗದ ಸಹಲಕ್ಷಣದ ಸಂದರ್ಭದಲ್ಲಿ ಇದು ಹೆಚ್ಚು ಅನ್ವಯವಾಗುತ್ತದೆ.[113] ಸ್ಕಿಜೋಫ್ರೇನಿಯಾಕ್ಕಾಗಿರುವ ಅತಿ ವ್ಯಾಪಕವಾಗಿ ಬಳಸಲಾಗಿರುವ ವ್ಯಾಧಿನಿರೋಧಕ ಆರೋಗ್ಯ ರಕ್ಷಣೆಯ ಸ್ವರೂಪವು ಸಾರ್ವಜನಿಕ ಶಿಕ್ಷಣದ ಆಂದೋಲನಗಳ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಇದು ಅಪಾಯಕರ ಅಂಶಗಳು ಹಾಗೂ ಮುಂಚಿನ ರೋಗಲಕ್ಷಣಗಳ ಕುರಿತು ಮಾಹಿತಿಯನ್ನು ಒದಗಿಸುತ್ತದೆ ಮತ್ತು ವಿಳಂಬದ ಅನುಭವವನ್ನು ಪಡೆಯುತ್ತಿರುವವರಿಗಾಗಿ ರೋಗಪತ್ತೆಯ ಕ್ರಮವನ್ನು ಸುಧಾರಿಸಲು ಹಾಗೂ ಮುಂಚಿತವಾಗಿ ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ.[114]
ಹೊಸ ವೈದ್ಯಕೀಯ ವಿಧಾನವಾದ ಬುದ್ಧಿವಿಕಲ್ಪದಲ್ಲಿನ ಮುಂಚಿನ ಮಧ್ಯಸ್ಥಿಕೆ ಎಂಬುದು ತಡೆಗಟ್ಟುವಿಕೆಯ ಒಂದು ದ್ವಿತೀಯಕ ಕಾರ್ಯವಿಧಾನವಾಗಿದ್ದು, ಕಾಯಿಲೆಯ ಮುಂದಿನ ಅಧ್ಯಾಯಗಳನ್ನು ತಡೆಗಟ್ಟಲು ಹಾಗೂ ಸ್ಕಿಜೋಫ್ರೇನಿಯಾದೊಂದಿಗೆ ಸಂಬಂಧ ಹೊಂದಿರುವ ಸುದೀರ್ಘಾವಧಿಯ ಅಸಾಮರ್ಥ್ಯವನ್ನು ತಡೆಗಟ್ಟಲು ಇದರ ಬಳಕೆಯಾಗುತ್ತದೆ.
ವಾಸಿಮಾಡುವಿಕೆ ಎಂಬ ಪರಿಕಲ್ಪನೆಯ ವ್ಯಾಖ್ಯಾನಕ್ಕೆ ಸಂಬಂಧಿಸಿ ಯಾವುದೇ ಒಮ್ಮತವಿಲ್ಲದಿರುವುದರಿಂದ ಈ ಪರಿಕಲ್ಪನೆಯು ವಿವಾದಾತ್ಮಕವಾಗಿಯೇ ಉಳಿದುಕೊಂಡಿದೆ. ಇಷ್ಟಾಗಿಯೂ, ರೋಗಲಕ್ಷಣಗಳ ಉಪಶಮನಕ್ಕಾಗಿರುವ ಕೆಲವೊಂದು ಮಾನದಂಡಗಳು ಇತ್ತೀಚೆಗಷ್ಟೇ ಸೂಚಿಸಲ್ಪಟ್ಟಿವೆ.[115] ಪ್ರಮಾಣಾನುಸಾರಿಯಾಗಿಸಿದ ವಿಧಾನಗಳನ್ನು ಬಳಸುವ ಮೂಲಕ ಸ್ಕಿಜೋಫ್ರೇನಿಯಾ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಆಗಾಗ ಮೌಲ್ಯಮಾಪನ ಮಾಡಲಾಗುತ್ತದೆ. ಧನಾತ್ಮಕ ಮತ್ತು ಋಣಾತ್ಮಕ ರೋಗದ ಸಹಲಕ್ಷಣದ ಅಳತೆಗೋಲು (ಪಾಸಿಟಿವ್ ಅಂಡ್ ನೆಗಟಿವ್ ಸಿಂಡ್ರೋಮ್ ಸ್ಕೇಲ್-PANSS) ಎಂಬುದು ಇವುಗಳಲ್ಲಿನ ಒಂದು ಅತಿಸಾಮಾನ್ಯ ವಿಧಾನ.[116]
ರೋಗಲಕ್ಷಣಗಳ ನಿರ್ವಹಣೆ ಮತ್ತು ಕ್ರಿಯೆಯ ಸುಧಾರಣೆಯು ಒಂದು ವಾಸಿಮಾಡುವಿಕೆಗಿಂತ ಹೆಚ್ಚು ಕಾರ್ಯಸಾಧ್ಯವಾದುದು ಎಂಬುದೊಂದು ಅಭಿಪ್ರಾಯವಿದೆ. ಕ್ಲೋರ್ಪ್ರೋಮಝೈನ್ನ ಅಭಿವೃದ್ಧಿ ಹಾಗೂ ಪರಿಚಯದೊಂದಿಗೆ 1950ರ ದಶಕದ ಮಧ್ಯಭಾಗದಲ್ಲಿ ಚಿಕಿತ್ಸೆಯನ್ನು ಅಮೂಲಾಗ್ರವಾಗಿ ಬದಲಾಯಿಸಲಾಯಿತು.[117] ಒಂದು ಆರೋಗ್ಯಲಾಭ ಮಾದರಿಯನ್ನು ಹೆಚ್ಚಿನ ರೀತಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಇದು ಭರವಸೆ, ಅಧಿಕೃತ ಸ್ಥಿತಿ ಮತ್ತು ಸಾಮಾಜಿಕ ಒಳಗೂಡಿಸುವಿಕೆಯ ಕಡೆಗೆ ಹೆಚ್ಚಿನ ಒತ್ತು ನೀಡುತ್ತದೆ.[118]
ಸ್ಕಿಜೋಫ್ರೇನಿಯಾದ ಗಂಭೀರಸ್ವರೂಪದ ಸನ್ನಿವೇಶಗಳು ಕಂಡುಬಂದಾಗ ಆಸ್ಪತ್ರೆಗೆ ಸೇರಿಸುವುದು ಅನಿವಾರ್ಯವಾಗಬಹುದು. ಇದು ಐಚ್ಛಿಕವಾಗಿರಬಹುದು ಅಥವಾ (ಒಂದು ವೇಳೆ ಮಾನಸಿಕ ಆರೋಗ್ಯದ ಕಾನೂನು ಇದಕ್ಕೆ ಅವಕಾಶ ನೀಡುವುದಾದರೆ) ಅನೈಚ್ಛಿಕವಾಗಿರಬಹುದು (ಇದಕ್ಕೆ ನಾಗರಿಕ ಅಥವಾ ಅನೈಚ್ಛಿಕ ಬದ್ಧತೆ ಎಂದು ಹೆಸರು). ಆರೈಕೆ ಕೇಂದ್ರಗಳಲ್ಲಿ ಇಟ್ಟುಕೊಳ್ಳದಿರುವಿಕೆಯ ಕಾರಣದಿಂದಾಗಿ ಸುದೀರ್ಘ-ಅವಧಿಯವರೆಗೆ ಒಳರೋಗಿಯಾಗಿ ಉಳಿದುಕೊಳ್ಳುವಿಕೆಗಳು ಈಗ ವಿರಳವಾಗಿವೆಯಾದರೂ, ಒಮ್ಮೊಮ್ಮೆ ಈಗಲೂ ಕಂಡುಬರಬಹುದು.[5] ಆಸ್ಪತ್ರೆಯೊಂದಕ್ಕೆ ದಾಖಲು ಮಾಡಿದ ನಂತರ (ಅಥವಾ ಅದರ ಬದಲಿಗೆ) ಸಿಗುವ ಪೂರಕ ಸೇವೆಗಳಲ್ಲಿ ಇವು ಸೇರಿರಬಹುದು: ನಿರುದ್ದಿಷ್ಟವಾಗಿ ಭೇಟಿ ನೀಡಬಹುದಾದ ಕೇಂದ್ರಗಳು, ಸಮುದಾಯ ಮಾನಸಿಕ ಆರೋಗ್ಯ ತಂಡವೊಂದರ ಅಥವಾ ಸ್ವಸಮರ್ಥನೀಯ ಸಮುದಾಯ ಚಿಕಿತ್ಸೆಯ ತಂಡವೊಂದರ ಸದಸ್ಯರು ನೀಡುವ ಭೇಟಿಗಳು, ಬೆಂಬಲಿತ ಉದ್ಯೋಗ ವ್ಯವಸ್ಥೆ[119] ಮತ್ತು ರೋಗಿಯ-ನೇತೃತ್ವದ ಬೆಂಬಲದ ಗುಂಪುಗಳು.
ಪಾಶ್ಚಿಮಾತ್ಯದ್ದಲ್ಲದ ಅನೇಕ ಸಮಾಜಗಳಲ್ಲಿ ಹೆಚ್ಚು ಔಪಚಾರಿಕವಾದ, ಸಮುದಾಯ-ನೇತೃತ್ವದ ವಿಧಾನಗಳಿಂದ ಮಾತ್ರವೇ ಸ್ಕಿಜೋಫ್ರೇನಿಯಾಕ್ಕೆ ಚಿಕಿತ್ಸೆಯನ್ನು ನೀಡಬಹುದು. ಹಲವಾರು ದಶಕಗಳವರೆಗೆ ವಿಶ್ವ ಆರೋಗ್ಯ ಸಂಸ್ಥೆಯ ವತಿಯಿಂದ ಕೈಗೊಳ್ಳಲಾದ ಬಹುವಿಧದ ಅಂತರರಾಷ್ಟ್ರೀಯ ಸಮೀಕ್ಷೆಗಳು ನೀಡಿರುವ ಅಭಿಪ್ರಾಯದ ಪ್ರಕಾರ, ಪಾಶ್ಚಿಮಾತ್ಯದ್ದಲ್ಲದ ದೇಶಗಳಲ್ಲಿರುವ ಸ್ಕಿಜೋಫ್ರೇನಿಯಾ ಸಮಸ್ಯೆಯೊಂದಿಗೆ ಗುರುತಿಸಲ್ಪಟ್ಟಿರುವ ಜನರಿಗಾಗಿರುವ ಫಲಿತಾಂಶವು, ಪಾಶ್ಚಾತ್ಯ ದೇಶಗಳಲ್ಲಿನ ಜನರಿಗಾಗಿರುವ ಫಲಿತಾಂಶಕ್ಕೆ ಹೋಲಿಸಿದಾಗ ಸರಾಸರಿ ಮಟ್ಟದಲ್ಲಿ ಉತ್ತಮವಾಗಿದೆ.[120] ಅನೇಕ ಪ್ರಾಯೋಗಿಕ ಚಿಕಿತ್ಸಕರು ಹಾಗೂ ಸಂಶೋಧಕರು ಸಾಮಾಜಿಕ ಸಂಪರ್ಕಶೀಲತೆ ಮತ್ತು ಮಾನ್ಯತೆಗಳ ಸಾಪೇಕ್ಷ ಮಟ್ಟಗಳು ವ್ಯತ್ಯಾಸಕ್ಕೆ ಕಾರಣ ಎಂದು ಶಂಕಿಸಿದ್ದಾರಾದರೂ,[121] ಮುಂದುವರಿದಂತೆ ವಿಭಿನ್ನ-ಸಂಸ್ಕೃತಿಗಳ ಅಧ್ಯಯನಗಳು ಸದರಿ ಕಂಡುಹಿಡಿದುದನ್ನು ಸ್ಪಷ್ಟೀಕರಿಸಲು ಪ್ರಯತ್ನಿಸುತ್ತಿವೆ.
ಮನೋವಿಕೃತಿ-ನಿರೋಧಕ ಔಷಧೀಯ ಚಿಕಿತ್ಸೆಯು ಸ್ಕಿಜೋಫ್ರೇನಿಯಾಕ್ಕಾಗಿರುವ ಮುಂಚೂಣಿಯಲ್ಲಿನ ಮನೋವೈದ್ಯಕೀಯ ಚಿಕಿತ್ಸೆಯಾಗಿದೆ.[ಮಡಿದ ಕೊಂಡಿ][122] ಇವು ಬುದ್ಧಿವಿಕಲ್ಪದ ಧನಾತ್ಮಕ ರೋಗಲಕ್ಷಣಗಳನ್ನು ಕಡಿಮೆ ಮಾಡಬಲ್ಲವು. ಬಹುತೇಕ ಮನೋವಿಕೃತಿ-ನಿರೋಧಕಗಳು ತಮ್ಮ ಮುಖ್ಯ ಪ್ರಭಾವವನ್ನು ಬೀರಲು ಸುಮಾರು 7–14 ದಿನಗಳನ್ನು ತೆಗೆದುಕೊಳ್ಳುತ್ತವೆ. ಆದಾಗ್ಯೂ, ಋಣಾತ್ಮಕ ರೋಗಲಕ್ಷಣಗಳನ್ನು ಗಣನೀಯವಾಗಿ ಸುಧಾರಿಸುವಲ್ಲಿ ಪ್ರಸ್ತುತ ಲಭ್ಯವಿರುವ ಮನೋವಿಕೃತಿ-ನಿರೋಧಕಗಳು ವಿಫಲಗೊಳ್ಳುತ್ತವೆ, ಮತ್ತು ಗ್ರಹಣಶಕ್ತಿಯ ಕುರಿತಾದ ಸುಧಾರಣೆಗಳಿಗೆ ಅಭ್ಯಾಸ ಪರಿಣಾಮವೇ ಕಾರಣವೆನ್ನಬಹುದು.[123][124][125][126]
ಆರಂಭಿಕ ಚಿಕಿತ್ಸೆಗೆ ಸಂಬಂಧಿಸಿದಂತೆ ಹಳೆಯ ಮಾದರಿಯ ಮನೋವಿಕೃತಿ-ನಿರೋಧಕ ಔಷಧಗಳಿಗೆ ಬದಲಿಗೆ ಹೊಸದಾಗಿರುವ ಮಾದರಿಯಲ್ಲದ ಮನೋವಿಕೃತಿ-ನಿರೋಧಕ ಔಷಧಿಗಳಿಗೆ ಸಾಮಾನ್ಯವಾಗಿ ಆದ್ಯತೆ ನೀಡಲಾಗುತ್ತದೆ. ಹೊಸದಾದ ಔಷಧಗಳು ಹೆಚ್ಚು ವೆಚ್ಚದಾಯಕವಾಗಿದ್ದರೂ ಹಾಗೂ ಶರೀರದ ತೂಕ ಗಳಿಕೆ ಹಾಗೂ ಸ್ಥೂಲತೆಗೆ ಸಂಬಂಧಿಸಿದ ಕಾಯಿಲೆಗಳನ್ನು ಅವು ತಂದೊಡ್ಡುವ ಸಾಧ್ಯತೆಗಳಿದ್ದರೂ ಈ ಆಯ್ಕೆಯಲ್ಲಿ ಬದಲಾವಣೆ ಕಂಡುಬಂದಿಲ್ಲ.[127]
2008ರಲ್ಲಿ, US ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಸ್ಥೆಯಿಂದ (ಕ್ಲಿನಿಕಲ್ ಆಂಟಿಸೈಕೋಟಿಕ್ ಟ್ರಯಲ್ಸ್ ಆಫ್ ಇಂಟರ್ವೆನ್ಷನ್ ಎಫೆಕ್ಟಿವ್ನೆಸ್, ಅಥವಾ CATIE) ಪ್ರಾಯೋಜಿಸಲ್ಪಟ್ಟ ಒಂದು ಪ್ರಮುಖ ಯಾದೃಚ್ಛಿಕೀಕೃತ ಪರೀಕ್ಷೆಯಿಂದ ಹೊರಬಿದ್ದ ಫಲಿತಾಂಶಗಳು ಕಂಡುಕೊಂಡ ಪ್ರಕಾರ, ಪರ್ಫೆನಾಜೈನ್ ಎಂಬ ಮೊದಲನೇ-ಪೀಳಿಗೆಯ ಮನೋವಿಕೃತಿ-ನಿರೋಧಕದ ಒಂದು ಪ್ರಾತಿನಿಧಿಕ ಮಾದರಿಯು 18 ತಿಂಗಳವರೆಗೆ ತೆಗೆದುಕೊಂಡ ಹಲವಾರು ಹೊಸದಾದ ಔಷಧವಸ್ತುಗಳಷ್ಟೇ (ಓಲನ್ಝಾಪೈನ್, ಪರ್ಫೆನಾಜೈನ್, ಕ್ವೆಟಿಯಾಪೈನ್, ರಿಸ್ಪೆರಿಡೋನ್, ಅಥವಾ ಝಿಪ್ರಾಸಿಡೋನ್) ಪರಿಣಾಮಕಾರಿಯಾಗಿದ್ದವು ಮತ್ತು ವೆಚ್ಚದ ವಿಷಯದಲ್ಲಿ ಅವಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದ್ದವು.
ರೋಗಿಗಳು ಸುದೀರ್ಘ ಅವಧಿಯವರೆಗೆ ಮುಂದುವರೆಸಲು ಒಪ್ಪಿದ್ದ ಮಾದರಿಯಲ್ಲದ ಮನೋವಿಕೃತಿ-ನಿರೋಧಕವಾದ ಓಲನ್ಝಾಪೈನ್, ಶರೀರದಲ್ಲಿ ಗಣನೀಯ ಪ್ರಮಾಣದಲ್ಲಿ ತೂಕಗಳಿಕೆಯು ಕಂಡುಬರುವುದಕ್ಕೆ ಹಾಗೂ ಚಯಾಪಚಯ ರೋಗದ ಸಹಲಕ್ಷಣದ ಅಪಾಯ ಕಂಡುಬರುವುದರೊಂದಿಗೆ ಗುರುತಿಸಿಕೊಂಡಿತ್ತು. ಇತರ ಔಷಧವಸ್ತುಗಳಿಗೆ ಕಳಪೆಯಾಗಿ ಸ್ಪಂದಿಸುತ್ತಿದ್ದ ಜನರಿಗೆ ಕ್ಲೋಝಾಪೈನ್ ಅತ್ಯಂತ ಪರಿಣಾಮಕಾರಿಯಾಗಿತ್ತಾದರೂ, ಸಮಸ್ಯಾತ್ಮಕ ಪಾರ್ಶ್ವ-ಪರಿಣಾಮಗಳನ್ನೂ ಇದು ಜೊತೆಯಲ್ಲೇ ಹೊಂದಿತ್ತು.
ಟಾರ್ಡೈವ್ ಡಿಸ್ಕಿನೇಸಿಯಾದೊಂದಿಗೆ ಬಳಲುತ್ತಿದ್ದ ರೋಗಿಗಳನ್ನು ಸದರಿ ಪರೀಕ್ಷಾ ಪ್ರಕ್ರಿಯೆಯು ಹೊರಗಿಟ್ಟಿದ್ದರಿಂದಾಗಿ, ಈ ಜನರಿಗೆ ಸಂಬಂಧಿಸಿದಂತೆ ಇದರ ಸಮಂಜಸತೆಯು ಅಸ್ಪಷ್ಟವಾಗಿದೆ.[128]
ಮನೋವಿಕೃತಿ-ನಿರೋಧಕಗಳ ಎರಡು ವರ್ಗಗಳು ಧನಾತ್ಮಕ ರೋಗಲಕ್ಷಣಗಳ ಚಿಕಿತ್ಸೆಗೆ ಸಂಬಂಧಿಸಿದಂತೆ ಅಷ್ಟೇ ಪರಿಣಾಮಕಾರಿಯಾಗಿವೆ ಎಂಬ ಸಾರ್ವತ್ರಿಕ ಅಭಿಪ್ರಾಯವೂ ಇದೆ. ಋಣಾತ್ಮಕ ರೋಗಲಕ್ಷಣಗಳಿಗೆ ಹಾಗೂ ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಿಕೊಂಡಿರುವ ಅರಿವಿನ ಕೊರತೆಗಳಿಗೆ ಮಾದರಿಯಲ್ಲದ ಔಷಧವಸ್ತುಗಳು ಹೆಚ್ಚುವರಿ ಪ್ರಯೋಜನವನ್ನು ಒದಗಿಸುತ್ತವೆ ಎಂದು ಕೆಲವೊಂದು ಸಂಶೋಧಕರು ಸೂಚಿಸಿದ್ದಾರೆ. ಆದರೂ ಈ ಪ್ರಭಾವಗಳ ಕುರಿತಾದ ವೈದ್ಯಕೀಯ ಪ್ರಾಮುಖ್ಯತೆಯನ್ನು ಇನ್ನೂ ಸಾಬೀತುಪಡಿಸಬೇಕಾಗಿದೆ.
ಚಲನಶೀಲತೆಗೆ ಧಕ್ಕೆ ತರುವ ಪಾರ್ಶ್ವ-ಪರಿಣಾಮಗಳ ಅಪಾಯವು ಇವುಗಳಲ್ಲಿ ಕಡಿಮೆ ಎಂಬ ಕಾರಣದಿಂದಾಗಿ, ಮಾದರಿಯಲ್ಲದ ಮನೋವಿಕೃತಿ-ನಿರೋಧಕಗಳು ಮುಂಚಿತವಾಗಿ ಬಿರುಸಾಗಿ ಕಾಣಿಸಿಕೊಳ್ಳುವ ಸ್ಕಿಜೋಫ್ರೇನಿಯಾ ಮುಂಚೂಣಿ ಚಿಕಿತ್ಸೆಗಳಾಗಿ ಅನೇಕ ವರ್ಷಗಳಿಂದ ಸ್ಥಾನವನ್ನು ಕಂಡುಕೊಂಡಿವೆ. ಇದಕ್ಕೂ ಮುಂಚೆ ಈ ವರ್ಗದಲ್ಲಿನ ನಿರ್ದಿಷ್ಟ ಔಷಧವಸ್ತುಗಳನ್ನು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿದ್ದ ಮಕ್ಕಳು ಹಾಗೂ ಹದಿಹರೆಯದವರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಬಳಸಲು ಆಹಾರ ಮತ್ತು ಔಷಧವಸ್ತು ಕಾರ್ಯಭಾರ ಇಲಾಖೆಯ ವತಿಯಿಂದ ಅನುಮೋದಿಸಲ್ಪಟ್ಟಿದ್ದವು. ಚಯಾಪಚಯ ರೋಗದ ಸಹಲಕ್ಷಣ ಮತ್ತು ಸ್ಥೂಲತೆಯ ಹೆಚ್ಚಳಗೊಂಡ ಒಂದು ಅಪಾಯದ ಫಲವಾಗಿ ಈ ಪ್ರಯೋಜನವು ಕಂಡುಬರುತ್ತದೆ. ತುಂಬಾ ಮುಂಚಿನ ವಯೋಮಾನದಲ್ಲಿಯೇ ಪ್ರಾರಂಭವಾದ ಸುದೀರ್ಘ-ಅವಧಿಯ ಬಳಕೆಗೆ ಸಂಬಂಧಿಸಿ ಇದೊಂದು ಕಾಳಜಿಯ ವಿಷಯವಾಗಿದೆ ಎನ್ನಬಹುದು. ಅದರಲ್ಲೂ ವಿಶೇಷವಾಗಿ ಸ್ಕಿಜೋಫ್ರೇನಿಯಾ ಸಮಸ್ಯೆಯಿರುವ ಮಕ್ಕಳು ಮತ್ತು ಹದಿಹರೆಯದವರ ವಿಷಯದಲ್ಲಿ, ವೈಯಕ್ತಿಕ ಅಥವಾ ಪ್ರತ್ಯೇಕ ಚಿಕಿತ್ಸೆ ಹಾಗೂ ಕೌಟುಂಬಿಕ-ಆಧಾರಿತ ಮಧ್ಯಸ್ಥಿಕೆಗಳ ಸಂಯೋಜನೆಯೊಂದಿಗೆ ಔಷಧೀಯ ಚಿಕಿತ್ಸೆಯನ್ನು ಬಳಸಬೇಕಾಗುತ್ತದೆ.[9]
ಮಾದರಿಯಲ್ಲದ ಮನೋವಿಕೃತಿ-ನಿರೋಧಕಗಳು ಮಾದರಿಯ ಮನೋವಿಕೃತಿ-ನಿರೋಧಕಗಳಿಗಿಂತ ಅಲ್ಪ ಪ್ರಮಾಣದ ಹೆಚ್ಚುವರಿ ಪಿರಮಿಡ್ಡಿನಾಕಾರದ ಪಾರ್ಶ್ವ-ಪರಿಣಾಮಗಳನ್ನು ಉಂಟುಮಾಡುತ್ತವೆ; ಅದರಲ್ಲೂ ಮಾದರಿಯ ಮನೋವಿಕೃತಿ-ನಿರೋಧಕಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸಿದಾಗ ಅಥವಾ ಕಡಿಮೆ ಪಟುತ್ವದ ಮನೋವಿಕೃತಿ-ನಿರೋಧಕಗಳನ್ನು ಆಯ್ಕೆಮಾಡಿಕೊಂಡಾಗ ಈ ಸಾಧ್ಯತೆ ಹೆಚ್ಚು ಎಂಬ ಸಮರ್ಥನೆಯನ್ನು ಇತ್ತೀಚಿನ ಅವಲೋಕನಗಳು ಬಲವಾಗಿ ನಿರಾಕರಿಸಿವೆ.[129]
ಮಾದರಿಯಲ್ಲದ ಮನೋವಿಕೃತಿ-ನಿರೋಧಕಗಳನ್ನು ತೆಗೆದುಕೊಳ್ಳುತ್ತಿರುವ ಸ್ಕಿಜೋಫ್ರೇನಿಯಾ ಸಮಸ್ಯೆಯಿರುವ ಮಹಿಳೆಯರಲ್ಲಿ ಉನ್ನತಮಟ್ಟಗಳ ಪ್ರೋಲ್ಯಾಕ್ಟಿನ್ ಸ್ರವಿಕೆಯ ಕಂಡುಬಂದಿದೆ.[130] ನ್ಯೂರೋಲೆಪ್ಟಿಕ್ ಮ್ಯಾಲಿಗ್ನೆಂಟ್ ರೋಗದ ಸಹಲಕ್ಷಣವನ್ನು ಬೆಳೆಸುವುದರ ಸಾಧ್ಯತೆಗಳನ್ನು ಹೊಸದಾದ ಮನೋವಿಕೃತಿ-ನಿರೋಧಕಗಳು ತಗ್ಗಿಸುತ್ತವೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ. ಈ ರೋಗವು ಅಪರೂಪದ್ದಾಗಿದ್ದರೂ ಸಹ ಒಂದು ಗಂಭೀರವಾದ ಮತ್ತು ಸಮರ್ಥವಾದ ಮಾರಣಾಂತಿಕ ನರವೈಜ್ಞಾನಿಕ ಅಸ್ವಸ್ಥತೆಯಾಗಿದ್ದು, ನ್ಯೂರೋಲೆಪ್ಟಿಕ್ ಅಥವಾ ಮನೋವಿಕೃತಿ-ನಿರೋಧಕ ಔಷಧವಸ್ತುಗಳಿಗೆ ಪ್ರತಿಯಾಗಿ ತೋರುವ ಒಂದು ವ್ಯತಿರಿಕ್ತ ಪ್ರತಿಕ್ರಿಯೆಯಿಂದ ಅನೇಕ ವೇಳೆ ಉಂಟಾಗುತ್ತದೆ.[131]
ಔಷಧೀಯ ಚಿಕಿತ್ಸೆಗೆ ರೋಗಲಕ್ಷಣಗಳು ನೀಡುವ ಪ್ರತಿಸ್ಪಂದನೆಯು ಭಿನ್ನಭಿನ್ನವಾಗಿರುತ್ತದೆ: ಕಡೇಪಕ್ಷ ಎರಡು ವಿಭಿನ್ನ ಮನೋವಿಕೃತಿ-ನಿರೋಧಕಗಳಿಗೆ ತೃಪ್ತಿಕರವಾಗಿ ಪ್ರತಿಸ್ಪಂದಿಸುವಲ್ಲಿ ರೋಗಲಕ್ಷಣಗಳು ವಿಫಲಗೊಂಡರೆ ಅದಕ್ಕೆ ಚಿಕಿತ್ಸೆ-ನಿರೋಧಕ ಸ್ಕಿಜೋಫ್ರೇನಿಯಾ ಎಂಬ ಪರಿಭಾಷೆಯನ್ನು ಬಳಸಲಾಗುತ್ತದೆ.[132] ಈ ವರ್ಗಕ್ಕೆ ಸೇರಿರುವ ರೋಗಿಗಳಿಗೆ ಕ್ಲೋಝಪೈನ್[133] ಎಂಬ ಔಷಧವಸ್ತುವನ್ನು ಶಿಫಾರಸು ಮಾಡಬಹುದು. ಇದು ಅತ್ಯುತ್ಕೃಷ್ಟ ಪರಿಣಾಮಶೀಲತೆಯ ಒಂದು ಔಷಧೀಯ ಚಿಕಿತ್ಸೆಯಾಗಿದ್ದರೂ, ಏಗ್ರಾನ್ಯುಲೋಸೈಟೋಸಿಸ್ ಮತ್ತು ಮಯೋಕಾರ್ಡೈಟಿಸ್ ಸೇರಿದಂತೆ ಸಮರ್ಥವಾಗಿ ಮಾರಣಾಂತಿಕವಾದ ಹಲವಾರು ಪಾರ್ಶ-ಪರಿಣಾಮಗಳನ್ನು ಇದು ತಂದೊಡ್ಡಬಹುದು.[134] ಛಿದ್ರಮನಸ್ಕ ರೋಗಿಗಳಲ್ಲಿ ಕಂಡುಬರುವ ಘನತೆಯ ದುರುಪಯೋಗವನ್ನು ತಗ್ಗಿಸುವ ಪ್ರವೃತ್ತಿಯ ಹೆಚ್ಚುವರಿ ಪ್ರಯೋಜನವನ್ನು ಕ್ಲೋಝಪೈನ್ ಹೊಂದಿರಲು ಸಾಧ್ಯವಿದೆ.[135] ಔಷಧೀಯ ಚಿಕಿತ್ಸೆಯನ್ನು ನಿಯಮಿತವಾಗಿ ತೆಗೆದುಕೊಳ್ಳಲು ಒಪ್ಪದ ಅಥವಾ ಸಾಧ್ಯವಾಗದ ಇತರ ರೋಗಿಗಳಲ್ಲಿ ನಿಯಂತ್ರಣವನ್ನು ಸಾಧಿಸಲು, ಪ್ರತಿ ಎರಡು ವಾರಕ್ಕೊಮ್ಮೆ ಮನೋವಿಕೃತಿ-ನಿರೋಧಕಗಳ ಸುದೀರ್ಘ-ಪ್ರಭಾವದ ಉಗ್ರಾಣದ ಔಷಧವಸ್ತುಗಳನ್ನು ಅವರಿಗೆ ನೀಡಬಹುದು. ಔಷಧವನ್ನು ತೆಗೆದುಕೊಳ್ಳಲು ನಿರಾಕರಿಸುವವರಿಗೆ ಈ ವಿಧದಲ್ಲಿ ಬಲವಂತವಾಗಿ ಔಷಧೀಯ ಚಿಕಿತ್ಸೆಯನ್ನು ನೀಡುವ ಕ್ರಮಗಳಿಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಆಸ್ಟ್ರೇಲಿಯಾದಂಥ ಎರಡು ರಾಷ್ಟ್ರಗಳಲ್ಲಿ ಕಾನೂನುಗಳು ಅವಕಾಶಮಾಡಿಕೊಟ್ಟಿವೆ. ಇಲ್ಲದಿದ್ದರೆ ಅವರು ಸಮುದಾಯದಲ್ಲಿ ಸ್ಥಿರವಾಗಿ ಮತ್ತು ಜೀವಂತಿಕೆಯಿಂದ ಇರಲು ಸಾಧ್ಯವಿಲ್ಲ.
ಸುದೀರ್ಘ-ಅವಧಿಯಲ್ಲಿ ಕೆಲವೊಂದು ರೋಗಿಗಳು ಮನೋವಿಕೃತಿ-ನಿರೋಧಕಗಳನ್ನು ತೆಗೆದುಕೊಳ್ಳದೆಯೂ ಚೇತರಿಕೆಯನ್ನು ಕಂಡುಕೊಳ್ಳಬಹುದು ಎಂದು ಕಡೇಪಕ್ಷ ಒಂದು ಅಧ್ಯಯನವು ಸೂಚಿಸಿದೆ.[136]
ಪರಸ್ಪರ ಎದುರುಬದುರಾಗಿ ನಿಂತಿರುವ EPA (ಒಂದು ಒಮೆಗಾ-3 ಕೊಬ್ಬಿನಾಮ್ಲ) ವಿಧಾನ ಮತ್ತು ಸ್ಕಿಜೋಫ್ರೇನಿಯಾದ ಒಂದು ಗೌಣ ಚಿಕಿತ್ಸೆಯಾದ ಪ್ಲಸಿಬೋ ಹುಸಿಮದ್ದಿನ ವಿಧಾನದ ನಾಲ್ಕು ಯಾದೃಚ್ಛಿಕೀಕೃತ ನಿಯಂತ್ರಿತ ಪರೀಕ್ಷೆಗಳಿಗೆ ಸಂಬಂಧಿಸಿ 2003ರಲ್ಲಿ ಹೊರಬಂದ ಒಂದು ಅವಲೋಕನದ ಅನುಸಾರ, ಪರೀಕ್ಷಾ ವಿಧಾನಗಳ ಪೈಕಿ ಎರಡು ವಿಧಾನಗಳು ಧನಾತ್ಮಕ ಮತ್ತು ಋಣಾತ್ಮಕ ರೋಗಲಕ್ಷಣಗಳ ಮೇಲಿನ ಒಂದು ಗಣನೀಯ ಸುಧಾರಣೆಯನ್ನು ಪತ್ತೆಹಚ್ಚಿವೆ, ಹಾಗೂ ಮನೋವಿಕೃತಿ-ನಿರೋಧಕಗಳಿಗೆ EPA ವಿಧಾನವು ಒಂದು ಪರಿಣಾಮಕಾರೀ ಗಣಚಿಕಿತ್ಸೆಯಾಗಬಲ್ಲದು ಎಂಬುದನ್ನು ಸೂಚಿಸಿದೆ.[137]
ಆದಾಗ್ಯೂ, ಒಂದು ಗಮನಾರ್ಹವಾದ ಪ್ರಭಾವವನ್ನು ಕಂಡುಕೊಳ್ಳುವಲ್ಲಿ ತೀರಾ ಇತ್ತೀಚಿನ ಪರ್ಯಾಯ-ವಿಶ್ಲೇಷಣೆಯು (2006) ವಿಫಲಗೊಂಡಿದೆ.[138] 2007ರ ಒಂದು ಅವಲೋಕನವು ಕಂಡುಕೊಂಡಿರುವ ಪ್ರಕಾರ, ಸ್ಕಿಜೋಫ್ರೇನಿಯಾದಲ್ಲಿನ ಒಮೆಗಾ-3 ಕೊಬ್ಬಿನಾಮ್ಲಗಳ ಅಧ್ಯಯನಗಳು ಅತ್ಯುತ್ಕೃಷ್ಟ ಗುಣಮಟ್ಟದ್ದಾಗಿದ್ದರೂ, ಸಂದೇಹಾಸ್ಪದವಾದ ವೈದ್ಯಕೀಯ ಪ್ರಾಮುಖ್ಯತೆಯ ಅಸಮಂಜಸವಾದ ಫಲಿತಾಂಶಗಳು ಮತ್ತು ಚಿಕ್ಕ ಪ್ರಭಾವದ ಗಾತ್ರಗಳನ್ನು ನೀಡಿವೆ.[139]
ಸ್ಕಿಜೋಫ್ರೇನಿಯಾದ ಚಿಕಿತ್ಸೆಯಲ್ಲಿ ಮಾನಸಿಕ ಚಿಕಿತ್ಸೆಯನ್ನು ವ್ಯಾಪಕವಾಗಿ ಶಿಫಾರಸು ಮಾಡಲಾಗುತ್ತದೆ ಮತ್ತು ಬಳಸಲಾಗುತ್ತದೆಯಾದರೂ, ಸಮಸ್ಯೆಗಳ ಮರುಕಳಿಸುವಿಕೆ ಅಥವಾ ತರಬೇತಿಯ ಕೊರತೆಯಿಂದಾಗಿ ಸೇವೆಗಳು ಕೆಲವೊಮ್ಮೆ ಔಷಧವಿಜ್ಞಾನ ಚಿಕಿತ್ಸೆಗೆ ಸೀಮಿತವಾಗಬಹುದು.[140]
ನಿರ್ದಿಷ್ಟ ರೋಗಲಕ್ಷಣಗಳನ್ನು[141][142][143] ಗುರಿಯಾಗಿಟ್ಟುಕೊಳ್ಳಲು ಹಾಗೂ ಆತ್ಮಾಭಿಮಾನ, ಸಾಮಾಜಿಕ ಕಾರ್ಯಸಾಧನೆ, ಮತ್ತು ಒಳನೋಟದಂಥ ಸಂಬಂಧಿತ ಚರ್ಚಾವಿಷಯಗಳನ್ನು ಸುಧಾರಿಸಲು ಅರಿವಿನ ನಡವಳಿಕೆಯ ಚಿಕಿತ್ಸೆಯನ್ನು (ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ-CBT) ಬಳಸಲಾಗುತ್ತದೆ.
ಮುಂಚಿನ ಪರೀಕ್ಷಾ ಪ್ರಯೋಗಗಳ ಫಲಿತಾಂಶಗಳು, 1990ರ ದಶಕದ ಮಧ್ಯಭಾಗದಲ್ಲಿನ ಇದರ ಆರಂಭಿಕ ಅನ್ವಯಿಕಗಳಿಂದ ಬಂದ ಪ್ರಗತಿಪರ ಚಿಕಿತ್ಸೆಯಾಗಿ ಅನಿರ್ಣಾಯಕವಾಗಿತ್ತಾದರೂ,[144] ತೀರಾ ಇತ್ತೀಚಿನ ಅವಲೋಕನಗಳು ಸ್ಪಷ್ಟವಾಗಿ ತೋರಿಸುವ ಪ್ರಕಾರ CBTಯು ಸ್ಕಿಜೋಫ್ರೇನಿಯಾದ ಮನೋವಿಕೃತ ರೋಗಲಕ್ಷಣಗಳಿಗೆ ಒಂದು ಪರಿಣಾಮಕಾರೀ ಚಿಕಿತ್ಸೆಯಾಗಿದೆ.[145][146]
ಅರಿವಿನ ನಿವಾರಣೋಪಾಯದ ಚಿಕಿತ್ಸೆಯು ಮತ್ತೊಂದು ವಿಧಾನವಾಗಿದ್ದು, ಇದು ಸ್ಕಿಜೋಫ್ರೇನಿಯಾದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ನರದ ಅರಿವಿನ ಕೊರತೆಗಳನ್ನು ನಿವಾರಿಸುವೆಡೆಗೆ ಗುರಿಯಿಟ್ಟುಕೊಂಡಿರುವ ಒಂದು ಕೌಶಲವಾಗಿದೆ. ನರಮಾನಸಿಕ ಪುನಃ ಸ್ಥಾಪನೆಯ ಕೌಶಲಗಳ ಆಧಾರದ ಮೇಲೆ, ಮುಂಚಿನ ಸಾಕ್ಷ್ಯವು ಇದನ್ನು ಅರಿವಿಗೆ ಸಂಬಂಧಿಸಿದ ರೀತಿಯಲ್ಲಿ ಪರಿಣಾಮಕಾರಿಯಂತೆ ತೋರಿಸಿದೆ. fMRIನಿಂದ ಅಳೆಯಲ್ಪಟ್ಟಂತೆ ಅಥವಾ ವಿಶ್ಲೇಷಿಸಲ್ಪಟ್ಟಂತೆ ಮಿದಳಿನ ಚುರುಕುಗೊಳಿಸುವಿಕೆಯಲ್ಲಿನ ಅಳೆಯಬಹುದಾದ ಬದಲಾವಣೆಗಳಿಗೆ ಸಂಬಂಧಿಸಿದ ಕೆಲವೊಂದು ಸುಧಾರಣೆಗಳು ಇದರಲ್ಲಿ ಕಂಡುಬರುತ್ತವೆ.[147][148]
ಅರಿವಿನ ವರ್ಧನಾ ಚಿಕಿತ್ಸೆ ಎಂದು ಹೇಳಲಾಗುವ ಇದೇ ಬಗೆಯ ವಿಧಾನವು, ಸಾಮಾಜಿಕ ಗ್ರಹಣಶಕ್ತಿಯಷ್ಟೇ ಅಲ್ಲದೇ ನರಗ್ರಹಣಶಕ್ತಿಯ ಮೇಲೂ ಗಮನಹರಿಸುವ ಉದ್ದೇಶವನ್ನು ಹೊಂದಿದ್ದು, ಇದು ಫಲದಾಯಕತೆಯನ್ನು ತೋರಿಸಿದೆ.[149]
ಸ್ಕಿಜೋಫ್ರೇನಿಯಾದ ಒಂದು ರೋಗನಿರ್ಣಯದೊಂದಿಗೆ ವ್ಯಕ್ತಿಯೊಬ್ಬನ ಸಮಗ್ರ ಕೌಟುಂಬಿಕ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಳ್ಳುವ ಅಥವಾ ಪರಿಗಣಿಸುವ ಕೌಟುಂಬಿಕ ಚಿಕಿತ್ಸೆ ಅಥವಾ ಶಿಕ್ಷಣವು, ಸಮಂಜಸವಾಗಿ ಪ್ರಯೋಜನಕಾರಿಯಾಗಿದೆ ಎಂದು ಕಂಡುಬಂದಿದ್ದು, ಇದಕ್ಕಾಗಿ ಕಡೇಪಕ್ಷ ಮಧ್ಯಸ್ಥಿಕೆಯ ಅವಧಿಯು ಸುದೀರ್ಘ-ಅವಧಿಯದ್ದಾಗಿರಬೇಕಾಗುತ್ತದೆ.[150][151][152]
ಚಿಕಿತ್ಸೆಯ ಜೊತೆಗೆ, ಕುಟುಂಬಗಳ ಮೇಲಿನ ಸ್ಕಿಜೋಫ್ರೇನಿಯಾದ ಪ್ರಭಾವ ಹಾಗೂ ವೃತ್ತಿಸಂಬಂಧವಾಗಿ ಇದು ಹೊರಹೊಮ್ಮಿಸುವ ಹೊರೆಗಳನ್ನು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿ ಈ ವಿಷಯದ ಕುರಿತಾಗಿ ಲಭ್ಯವಿರುವ ಹೇರಳ ಸಂಖ್ಯೆಯ ಸ್ವಯಂ-ನೆರವಿನ ಪುಸ್ತಕಗಳು ಮುಖ್ಯಪಾತ್ರವನ್ನು ವಹಿಸಿವೆ.[153][154]
ಸಾಮಾಜಿಕ ಪರಿಣತಿಗಳ ತರಬೇತಿಯಿಂದಾಗಿ ಪ್ರಯೋಜನಗಳು ದೊರೆತಿರುವುದರ ಕುರಿತು ಒಂದಷ್ಟು ಸಾಕ್ಷ್ಯವು ಲಭ್ಯವಿದೆಯಾದರೂ, ಗಣನೀಯವಾದ ಋಣಾತ್ಮಕ ಅಂಶಗಳಿಗೇನೂ ಕಮ್ಮಿಯಿಲ್ಲ.[155][156] ಸಂಗೀತ ಚಿಕಿತ್ಸೆ ಮತ್ತು ಇತರ ಸೃಜನಶೀಲ ಚಿಕಿತ್ಸೆಗಳ ಸಂಭವನೀಯ ಪ್ರಯೋಜನಗಳನ್ನು ಕೆಲವೊಂದು ಅಧ್ಯಯನಗಳು ತೋರಿಸಿಕೊಟ್ಟಿವೆ.[157][158][159]
ಸೊಟೇರಿಯಾ ಮಾದರಿಯು ಒಳರೋಗಿಯ ಆಸ್ಪತ್ರೆಯ ಚಿಕಿತ್ಸೆಗೆ ಪರ್ಯಾಯವಾಗಿದ್ದು, ಕನಿಷ್ಟತಮ ಔಷಧೀಯ ಚಿಕಿತ್ಸೆಯ ವಿಧಾನವೊಂದನ್ನು ಇದು ಬಳಸುತ್ತದೆ. ಸಾಮಾಜಿಕ ಪರಿಸರ-ಚಿಕಿತ್ಸಕ ಆರೋಗ್ಯಲಾಭದ ಒಂದು ವಿಧಾನವಾಗಿ ಇದು ವಿವರಿಸಲ್ಪಟ್ಟಿದ್ದು, ಇದರ ಸಂಸ್ಥಾಪಕರು ಈ ವಿಧಾನದ ಲಕ್ಷಣವನ್ನು ಹೀಗೆ ವಿವರಿಸಿದ್ದಾರೆ: "ಒಂದು ಪುಟ್ಟ, ಮನೆಯಂಥ, ಶಾಂತವಾದ, ಬೆಂಗಾವಲಾಗಿ ನಿಲ್ಲುವ, ರಕ್ಷಣಾ ಮನೋಭಾವದ, ಮತ್ತು ಸಹಿಷ್ಣುವಾಗಿರುವ ಸಾಮಾಜಿಕ ಪರಿಸರದಲ್ಲಿನ, ವ್ಯಕ್ತಿಗಳ ನಡುವಿನ ಮಧ್ಯಸ್ಥಿಕೆಗಳ, ದಿನವೊಂದರ 24 ಗಂಟೆಯೂ ಅನ್ವಯವಾಗುವ ವಿಧಾನವಿದು. ಸಾಮಾನ್ಯವಾಗಿ ನ್ಯೂರೋಲೆಪ್ಟಿಕ್ ಔಷಧ ಚಿಕಿತ್ಸೆಯ ಹಂಗಿಲ್ಲದ ಈ ವಿಧಾನವು ವೃತ್ತಿಪ್ರವೀಣರಲ್ಲದ ಓರ್ವ ಸಿಬ್ಬಂದಿಯಿಂದ ನಡೆಸಲ್ಪಡುತ್ತದೆ."[160]
ಸಂಶೋಧನೆಯ ಸಾಕ್ಷ್ಯವು ಸೀಮಿತವಾಗಿದ್ದರೂ 2008ರ ಒಂದು ಕ್ರಮಬದ್ಧ ಅವಲೋಕನವು ಕಂಡುಕೊಂಡಿರುವ ಪ್ರಕಾರ, ಸ್ಕಿಜೋಫ್ರೇನಿಯಾದ ಮೊದಲ ಮತ್ತು ಎರಡನೇ ಅಧ್ಯಾಯಗಳೊಂದಿಗೆ ರೋಗನಿರ್ಣಯಕ್ಕೆ ಒಳಗಾದ ಜನರಲ್ಲಿ ಈ ಕಾರ್ಯಕ್ರಮವು, ಔಷಧೀಯ ಚಿಕಿತ್ಸೆಯನ್ನೊಳಗೊಂಡ ಚಿಕಿತ್ಸೆಯಷ್ಟೇ ಸಮಾನವಾಗಿ ಪರಿಣಾಮಕಾರಿಯಾಗಿದೆ.[161]
ಇಲೆಕ್ಟ್ರೋಕಾನ್ವಲ್ಯೂಸಿವ್ ಚಿಕಿತ್ಸೆಯು ಒಂದು ಮುಂಚೂಣಿ ಚಿಕಿತ್ಸೆಯಾಗಿ ಪರಿಗಣಿಸಲ್ಪಟ್ಟಿಲ್ಲವಾದರೂ, ಇತರ ಚಿಕಿತ್ಸಾ ವಿಧಾನಗಳು ವಿಫಲಗೊಂಡ ಪ್ರಕರಣಗಳಲ್ಲಿ ಇದನ್ನು ಶಿಫಾರಸು ಮಾಡಬಹುದು. ಮನೋವಿದಳನ ಅಥವಾ ಮೂರ್ಛೆರೋಗದ ರೋಗಲಕ್ಷಣಗಳು ಕಂಡುಬಂದಾಗ ಇದು ಹೆಚ್ಚು ಪರಿಣಾಮಕಾರಿಯಾಗಿದೆ,[162] ಮತ್ತು ಹಿಂದೊಮ್ಮೆ ಪರಿಣಾಮಕಾರಿಯಾಗಿದ್ದು ಕಂಡುಬಂದಿದ್ದರೆ ಮನೋವಿದಳನ ಅಥವಾ ಮೂರ್ಛೆರೋಗಕ್ಕೆ ನೀಡುವ ಚಿಕಿತ್ಸೆಯಾಗಿ ಇದನ್ನು ಬಳಸಲು UKಯಲ್ಲಿ [NICE] ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ಶಿಫಾರಸು ಮಾಡಲಾಗಿದೆ. ಇಲ್ಲದಿದ್ದರೆ, ಸ್ಕಿಜೋಫ್ರೇನಿಯಾಕ್ಕಾಗಿ ಬಳಸಲು ಇದಕ್ಕೆ ಇನ್ನಾವುದೇ ಶಿಫಾರಸು ದೊರೆತಿಲ್ಲ. ಮನಶ್ಯಸ್ತ್ರ ಚಿಕಿತ್ಸೆಯು ಈಗ ಒಂದು ಅಪರೂಪದ ಚಿಕಿತ್ಸಾವಿಧಾನವಾಗಿದ್ದು, ಇದೊಂದು ಶಿಫಾರಿತ ಚಿಕಿತ್ಸೆಯಾಗಿಲ್ಲ.
ಯುರೋಪ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಸೇವಾ-ಬಳಕೆದಾರ ನೇತೃತ್ವದ ಆಂದೋಲನಗಳು ಆರೋಗ್ಯಲಾಭ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿವೆ; ಹಿಯರಿಂಗ್ ವಾಯ್ಸಸ್ ನೆಟ್ವರ್ಕ್ ಮತ್ತು ಪರೋನಿಯಾ ನೆಟ್ವರ್ಕ್ನಂಥ ಸಮೂಹಗಳು ಒಂದು ಸ್ವಯಂ-ಸೇವಾ ವಿಧಾನವನ್ನು ಅಭಿವೃದ್ಧಿಪಡಿಸಿದ್ದು, ಮುಖ್ಯವಾಹಿನಿಯ ಮನೋವೈದ್ಯಶಾಸ್ತ್ರದಿಂದ ಸ್ವೀಕೃತಗೊಂಡಿರುವ ಸಾಂಪ್ರದಾಯಿಕ ವೈದ್ಯಕೀಯ ಮಾದರಿಯ ಆಚೆಗೆ ಬೆಂಬಲ ಮತ್ತು ನೆರವನ್ನು ನೀಡುವ ಉದ್ದೇಶವನ್ನು ಅದು ಹೊಂದಿದೆ. ಮಾನಸಿಕ ಕಾಯಿಲೆ ಅಥವಾ ಮಾನಸಿಕ ಆರೋಗ್ಯಕ್ಕಾಗಿರುವ ಮಾನದಂಡಗಳ ಸ್ವರೂಪದಲ್ಲಿ ವೈಯಕ್ತಿಕ ಅನುಭವಕ್ಕೆ ಚೌಕಟ್ಟನ್ನು ಒದಗಿಸುವುದನ್ನು ತಪ್ಪಿಸುವ ಮೂಲಕ, ಅನುಭವವನ್ನು ಉತ್ತೇಜಿಸುವ ಹಾಗೂ ವೈಯಕ್ತಿಕ ಹೊಣೆಗಾರಿಕೆ ಹಾಗೂ ಒಂದು ಧನಾತ್ಮಕ ಸ್ವಸ್ವರೂಪವನ್ನು ಪ್ರೋತ್ಸಾಹಿಸುವ ಗುರಿಯನ್ನು ಅವು ಹೊಂದಿವೆ. ಆಸ್ಪತ್ರೆಗಳು ಮತ್ತು ಗ್ರಾಹಕರಿಂದ ನಡೆಸಲ್ಪಡುತ್ತಿರುವ ಸಮೂಹಗಳ ನಡುವಿನ ಪಾಲುದಾರಿಕೆಗಳು ಸಾಮಾನ್ಯವಾಗುತ್ತಿವೆ. ಸಾಮಾಜಿಕ ಹಿಂದೆಗೆತದ ನಿವಾರಣೆ, ಸಾಮಾಜಿಕ ಪರಿಣತಿಗಳನ್ನು ರೂಪಿಸುವುದು ಮತ್ತು ಮತ್ತೆ ಆಸ್ಪತ್ರೆಗೆ ಸೇರಿಸುವ ಕ್ರಮವನ್ನು ತಗ್ಗಿಸುವುದು ಇವೇ ಮೊದಲಾದವುಗಳ ಕಡೆ ಕಾರ್ಯನಿರ್ವಹಿಸುವುದರಿಂದಾಗಿ ಈ ಬೆಳವಣಿಗೆ ಕಂಡುಬಂದಿದೆ.
*ಭುಜಂಗಾಸನ | :*ಶಲಭಾಸನ | :*ವಕ್ರಾಸನ |
*ಮತ್ಸ್ಯಾಸನ | *‘ಓಂ’ ಪಠಿಸಿದರೆ ಮನಸ್ಸು ಶಾಂತ | :*ಧ್ಯಾನ |
ಆರ್ಥೋಮಾಲ್ಕ್ಯುಲರ್ ಮನೋವೈದ್ಯಶಾಸ್ತ್ರವು ಸ್ಕಿಜೋಫ್ರೇನಿಯಾವನ್ನು ಅಸ್ವಸ್ಥತೆಗಳ ಒಂದು ಸಮೂಹವಾಗಿ ಪರಿಗಣಿಸುತ್ತದೆ. ಇವುಗಳಲ್ಲಿ ಕೆಲವನ್ನು ನಿಯಾಸಿನ್ನಂಥ (B-3 ಜೀವಸತ್ವ) ಪೋಷಕಾಂಶಗಳ ದೊಡ್ಡ ಪ್ರಮಾಣದೊಂದಿಗೆ[164] ಉಪಚರಿಸಲು ಸಾಧ್ಯವಿದೆ.[165] ಆರ್ಥೋಮಾಲ್ಕ್ಯುಲರ್ ಮನೋವೈದ್ಯಶಾಸ್ತ್ರದ ಪ್ರತಿಪಾದಕರು ಸಮರ್ಥಿಸುವ ಪ್ರಕಾರ, ಗ್ಲೂಟೆನ್ಗೆ ದೊರಕುವ ಒಂದು ವ್ಯತಿರಿಕ್ತ ಪ್ರತಿಕ್ರಿಯೆಯು ಕೆಲವೊಂದು ಪ್ರಕರಣಗಳ ವ್ಯತ್ಪತ್ತಿಯಲ್ಲಿ ಸೇರಿಕೊಂಡಿದೆ. 1970ರ ದಶಕದಲ್ಲಿನ ಮೂರು ಬ್ರಿಟಿಷ್ ನಿಯತಕಾಲಿಕಗಳಲ್ಲಿ ಓರ್ವ ಲೇಖಕರಿಂದ ಚರ್ಚಿಸಲ್ಪಟ್ಟ ಈ ಸಿದ್ಧಾಂತವು[166]—ಸಾಬೀತುಗೊಂಡಿಲ್ಲ. 2006ರ ಒಂದು ಸಾಹಿತ್ಯಾವಲೋಕನವು ಸೂಚಿಸುವ ಪ್ರಕಾರ, ಉದರದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗಾಗಿ ಮತ್ತು ಸ್ಕಿಜೋಫ್ರೇನಿಯಾದ ಸಮಸ್ಯೆಯನ್ನು ಹೊಂದಿರುವ ರೋಗಿಗಳ ಒಂದು ಉಪಜೋಡಿಗಾಗಿ ಗ್ಲೂಟೆನ್ ಒಂದು ಅಂಶವಾಗಿರಬಹುದು. ಆದರೆ, ಇಂಥ ಒಂದು ಸಂಬಂಧವನ್ನು ನಿರ್ಣಯಾತ್ಮಕವಾಗಿ ದೃಢೀಕರಿಸಲು ಮುಂದುವರಿದ ಅಧ್ಯಯನವೊಂದರ ಅಗತ್ಯವಿದೆ ಎಂದು ಈ ಅವಲೋಕನವು ಸೂಚಿಸುತ್ತದೆ.[167]
2004ರಲ್ಲಿ ಬಂದ ಇಸ್ರೇಲೀ ಅಧ್ಯಯನವೊಂದರಲ್ಲಿ, ಗ್ಲೂಟೆನ್-ನಿರೋಧಕ ಪ್ರತಿಕಾಯಗಳು ಸ್ಕಿಜೋಫ್ರೇನಿಯಾದಿಂದ ಬಳಲುತ್ತಿರುವ 50 ರೋಗಿಗಳಲ್ಲಿ ಹಾಗೂ ಒಂದು ಹೋಲಿಸಲ್ಪಟ್ಟ ನಿಯಂತ್ರಣಾ ಸಮೂಹದಲ್ಲಿ ಅಳೆಯಲ್ಪಟ್ಟವು.
ಎರಡೂ ಗುಂಪುಗಳಲ್ಲಿನ ಎಲ್ಲಾ ಪ್ರತಿಕಾಯದ ಪರೀಕ್ಷೆಗಳೂ ಋಣಾತ್ಮಕ ಫಲಿತಾಂಶವನ್ನು ನೀಡಿದ್ದರಿಂದಾಗಿ, "ಗ್ಲೂಟೆನ್ನ ಸಂವೇದನಾಶೀಲತೆ ಹಾಗೂ ಸ್ಕಿಜೋಫ್ರೇನಿಯಾದ ನಡುವೆ ಒಂದು ಸಂಬಂಧವಿದೆ ಎಂಬುದು ಅಸಂಭವ" ಎಂಬ ತೀರ್ಮಾನಕ್ಕೆ ಬರಲಾಯಿತು.[168] ಕೆಲವೊಂದು ಸಂಶೋಧಕರು ಸೂಚಿಸುವ ಪ್ರಕಾರ, ಪಥ್ಯದ ಮತ್ತು ಪೋಷಕಾಂಶದ ಚಿಕಿತ್ಸೆಗಳು ಸ್ಕಿಜೋಫ್ರೇನಿಯಾದ ಚಿಕಿತ್ಸೆಯಲ್ಲಿ ಭರವಸೆಯನ್ನು ಮೂಡಿಸಬಹುದು.[169]
ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗ ಪಡೆದ ಹಾಗೂ 2001ರಲ್ಲಿ ಪ್ರಕಟಿಸಲ್ಪಟ್ಟ, ದಿ ಇಂಟರ್ನ್ಯಾಷನಲ್ ಸ್ಟಡಿ ಆಫ್ ಸ್ಕಿಜೋಫ್ರೇನಿಯಾ (ISoS) ಎಂಬ ಶಿಕ್ಷಣಕ್ರಮವು ವಿಶ್ವಾದ್ಯಂತ ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಲ್ಪಟ್ಟಿರುವ 1633 ವ್ಯಕ್ತಿಗಳ ಒಂದು ಸುದೀರ್ಘಾವಧಿಯ ಅಧ್ಯಯನವಾಗಿತ್ತು. ಸದರಿ ಶಿಕ್ಷಣಕ್ರಮದಲ್ಲಿನ ಸ್ಪಷ್ಟವಾಗಿ ಗೋಚರಿಸುವ ವಿಭಿನ್ನತೆ ಹಾಗೂ ಅದರ ಫಲಿತಾಂಶವು ಹೆಸರುವಾಸಿಯಾಗಿತ್ತು; ಅವುಗಳ ಪೈಕಿ ಮುನ್ನಡೆಗಾಗಿ ಲಭ್ಯವಿದ್ದ ಅರ್ಧದಷ್ಟು ಭಾಗದ ಮಂದಿ ಒಂದು ಅನುಕೂಲಕರ ಫಲಿತಾಂಶವನ್ನು ಹೊಂದಿದ್ದರು ಮತ್ತು 16%ನಷ್ಟು ಮಂದಿ ಸತತವಾದ ಶಿಕ್ಷಣಕ್ರಮದಿಂದ ಮುಂಚಿತವಾಗಿ ಹೊರಬಂದ ನಂತರ ಒಂದು ವಿಳಂಬಿತ ಆರೋಗ್ಯಲಾಭವನ್ನು ಪಡೆದರು.
ಹೆಚ್ಚು ವಾಡಿಕೆಯಂತೆ, ಮೊದಲ ಎರಡು ವರ್ಷಗಳಲ್ಲಿ ಸದರಿ ಶಿಕ್ಷಣಕ್ರಮವು ಸುದೀರ್ಘಾವಧಿಯ ಶಿಕ್ಷಣಕ್ರಮದ ಮುನ್ಸೂಚನೆಯನ್ನು ನೀಡಿತ್ತು. ಮುಂಚಿನ ಸಾಮಾಜಿಕ ಮಧ್ಯಸ್ಥಿಕೆಯೂ ಸಹ ಒಂದು ಉತ್ತಮ ಫಲಿತಾಂಶದೊಂದಿಗೆ ಸಂಬಂಧವನ್ನು ಹೊಂದಿತ್ತು. ರೋಗಸ್ಥಿತಿಯ ದೀರ್ಘಕಾಲಿಕ ಸ್ವರೂಪದ ಪ್ರಚಲಿತ ನಂಬಿಕೆಯಿಂದ ರೋಗಿಗಳು, ಆರೈಕೆ ಮಾಡುವವರು ಹಾಗೂ ಪ್ರಾಯೋಗಿಕ ಚಿಕಿತ್ಸಕರನ್ನು ವರ್ಗಾಯಿಸುವಲ್ಲಿ ಈ ಆವಿಷ್ಕಾರಗಳ ಪಾತ್ರ ಹಿರಿದಾದುದು ಎಂದು ಪರಿಗಣಿಸಲಾಯಿತು.[170]
ಉತ್ತರ ಅಮೆರಿಕಾದಲ್ಲಿನ ಪ್ರಮುಖ ಉದ್ದುದ್ದವಾದ ಅಧ್ಯಯನಗಳ ಒಂದು ಅವಲೋಕನವು ಫಲಿತಾಂಶಗಳಲ್ಲಿನ ಈ ವೈಪರೀತ್ಯವನ್ನು ಗಮನಿಸಿತು. ಆದರೂ ಸರಾಸರಿ ಲೆಕ್ಕದಲ್ಲಿ ಸದರಿ ಫಲಿತಾಂಶವು ಇತರ ಮನೋವಿಕೃತ ಮತ್ತು ವೈದ್ಯಕೀಯ ಅಸ್ವಸ್ಥತೆಗಳಿಗೆ ಸಂಬಂಧಿಸಿ ಹೆಚ್ಚು ತೀವ್ರವಾಗಿತ್ತು. ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಿಕೊಂಡಿರುವ ರೋಗಿಗಳ ಒಂದು ಮಧ್ಯಮಗಾತ್ರದ ಸಂಖ್ಯೆಯು ತಗ್ಗಿರುವುದು ಮತ್ತು ಸುಸ್ಥಿತಿಯಲ್ಲಿರುವುದು ಕಂಡುಬಂದಿತ್ತು; ಕೆಲವೊಬ್ಬರಿಗೆ ನಿರ್ವಹಣಾ ಔಷಧೀಯ ಚಿಕಿತ್ಸೆಯ ಅಗತ್ಯ ಕಂಡುಬರದಿರಬಹುದು ಎಂಬ ಪ್ರಶ್ನೆಯನ್ನು ಸದರಿ ಅವಲೋಕನವು ಎತ್ತಿತು.[171]
ಕಟ್ಟುನಿಟ್ಟಾದ ಆರೋಗ್ಯಲಾಭ ಮಾನದಂಡಗಳನ್ನು (ನಿರಂತರವಾಗಿ ಎರಡು ವರ್ಷಗಳವರೆಗಿನ ಧನಾತ್ಮಕ ಮತ್ತು ಋಣಾತ್ಮಕ ರೋಗಲಕ್ಷಣಗಳ ಮತ್ತು ಸಾಕಷ್ಟು ಸಾಮಾಜಿಕ ಮತ್ತು ಔದ್ಯೋಗಿಕ ಕಾರ್ಯನಿರ್ವಹಣೆಗಳ ಅನುಮೋದಿತ ತಗ್ಗಿಸುವಿಕೆ) ಬಳಸುವ ಒಂದು ವೈದ್ಯಕೀಯ ಅಧ್ಯಯನವು ಮೊದಲ ಐದು ವರ್ಷಗಳೊಳಗೆ 14%ನಷ್ಟು ಪ್ರಮಾಣದಲ್ಲಿನ ಒಂದು ಆರೋಗ್ಯಲಾಭವನ್ನು ಕಂಡುಕೊಂಡಿತು.[172] 5-ವರ್ಷ ಅವಧಿಯ ಒಂದು ಸಮುದಾಯ ಅಧ್ಯಯನವು ಕಂಡುಕೊಂಡ ಪ್ರಕಾರ, 62%ನಷ್ಟು ಮಂದಿ ವೈದ್ಯಕೀಯ ಮತ್ತು ಕ್ರಿಯಾತ್ಮಕ ಫಲಿತಾಂಶಗಳ ಒಂದು ಸಂಯೋಜಿತ ಅಳತೆಯ ಆಧಾರದ ಮೇಲೆ ಸರ್ವಾಂಗೀಣ ಸುಧಾರಣೆಯನ್ನು ತೋರಿಸಿದರು.[173]
ಮನೋವಿಕೃತಿ-ನಿರೋಧಕ ಔಷಧವಸ್ತುಗಳು ವ್ಯಾಪಕವಾಗಿ ಲಭ್ಯವಿಲ್ಲದಿರುವಾಗಲೂ, ಸ್ಕಿಜೋಫ್ರೇನಿಯಾ ಸಮಸ್ಯೆಯಿರುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ದೀರ್ಘಾವಧಿಯ ಫಲಿತಾಂಶಗಳನ್ನು ಹೊಂದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನಗಳು ತಿಳಿಸಿದ್ದು, ಈ ಪ್ರಮಾಣವು ಅಭಿವೃದ್ಧಿ ಹೊಂದಿದ ದೇಶಗಳಿಗಿಂತ (ಅಮೆರಿಕ ಸಂಯುಕ್ತ ಸಂಸ್ಥಾನಗಳು, ಯುನೈಟೆಡ್ ಕಿಂಗ್ಡಂ, ಐರ್ಲೆಂಡ್, ಡೆನ್ಮಾರ್ಕ್, ಝೆಕ್ ಗಣರಾಜ್ಯ, ಸ್ಲೋವಾಕಿಯಾ, ಜಪಾನ್, ಮತ್ತು ರಷ್ಯಾ)[174] ಅಭಿವೃದ್ಧಿಶೀಲ ದೇಶಗಳಲ್ಲಿ (ಭಾರತ, ಕೊಲಂಬಿಯಾ ಮತ್ತು ನೈಜೀರಿಯಾ) ಹೆಚ್ಚಿನದಾಗಿದೆ ಎಂದು ಸೂಚಿಸಿದೆ.
ಇಳಿತ ಮತ್ತು ಆರೋಗ್ಯಲಾಭದ ನಿಖರವಾದ ವ್ಯಾಖ್ಯೆಗಳು ಇನ್ನೂ ವ್ಯಾಪಕವಾಗಿ ಸಮರ್ಥಿಸಲ್ಪಟ್ಟಿಲ್ಲವಾದ್ದರಿಂದ, ಅಧ್ಯಯನಗಳಾದ್ಯಂತ ಪ್ರಮಾಣ ಅಥವಾ ಮಟ್ಟಗಳನ್ನು ಎಲ್ಲ ಸಮಯದಲ್ಲೂ ಹೋಲಿಸಲಾಗುವುದಿಲ್ಲ. "ಸ್ಕಿಜೋಫ್ರೇನಿಯಾದಲ್ಲಿನ ಇಳಿತದ ಕಾರ್ಯನಿರತ ಸಮೂಹ"ವೊಂದು ಪ್ರಮಾಣಾನುಸಾರಿಯಾಗಿಸಿದ ಇಳಿತ ಮಾನದಂಡಗಳನ್ನು ಪ್ರಸ್ತಾವಿಸಿದೆ. "ನಡವಳಿಕೆಯೊಂದಿಗೆ ಗಮನಾರ್ಹವಾಗಿ ಇನ್ನೆಂದೂ ಮಧ್ಯಪ್ರವೇಶಿಸದ ಮತ್ತು ಸ್ಕಿಜೋಫ್ರೇನಿಯಾದ ಒಂದು ಆರಂಭಿಕ ರೋಗನಿರ್ಣಯವನ್ನು ಸಮರ್ಥಿಸುವಲ್ಲಿ ವಿಶಿಷ್ಟವಾಗಿ ಬಳಕೆಯಾದ ಮಟ್ಟಕ್ಕಿಂತ ಕಡಿಮೆಯಿರುವಂಥ ಕಡಿಮೆ ತೀವ್ರತೆಯ ಯಾವುದೇ ರೋಗಲಕ್ಷಣಗಳವರೆಗಿನ ಪ್ರಮುಖ ಚಿಹ್ನೆಗಳು ಮತ್ತು ರೋಗಲಕ್ಷಣಗಳಲ್ಲಿನ ಸುಧಾರಣೆಗಳನ್ನು" ಈ ಮಾನದಂಡಗಳು ಒಳಗೊಂಡಿವೆ.[175] ಪ್ರಮಾಣಾನುಸಾರಿಯಾಗಿಸಿದ ಆರೋಗ್ಯಲಾಭ ಮಾನದಂಡಗಳು ಅಸಂಖ್ಯಾತ ವಿವಿಧ ಸಂಶೋಧಕರಿಂದಲೂ ಪ್ರಸ್ತಾವಿಸಲ್ಪಟ್ಟಿವೆ. "ಕಾರ್ಯನಿರ್ವಹಣೆಯ ರೋಗಸ್ವಭಾವದ ಮುಂಚಿನ ಮಟ್ಟಗಳಿಗೆ ಸಂಪೂರ್ಣವಾಗಿ ಹಿಂದಿರುಗುವಿಕೆ" ಅಥವಾ "ಪೂರ್ಣ ಕಾರ್ಯನಿರ್ವಹಣೆಗೆ ಸಂಪೂರ್ಣವಾಗಿ ಹಿಂದಿರುಗುವಿಕೆ"ಯೊಂದರ ಹೇಳಲ್ಪಟ್ಟ DSM ವ್ಯಾಖ್ಯೆಗಳೊಂದಿಗೆ ಇವು ಪ್ರಸ್ತಾವಿಸಲ್ಪಟ್ಟಿದ್ದು, ಸಾಕಷ್ಟಿಲ್ಲದ, ಅಳೆಯಲು ಅಸಾಧ್ಯವಾದ, ಸಾಮಾನ್ಯ ಮನಸ್ಸಾಮಾಜಿಕ ಕಾರ್ಯನಿರ್ವಹಣೆಯನ್ನು ಸಮಾಜವು ವ್ಯಾಖ್ಯಾನಿಸುವಂತಿರುವಲ್ಲಿನ ವ್ಯತ್ಯಸನೀಯತೆಯೊಂದಿಗೆ ಹೊಂದಿಕೊಳ್ಳಲಾಗದ, ಮತ್ತು ಸ್ವಯಂ-ಪೂರೈಕೆಯ ನಿರಾಶಾವಾದ ಹಾಗೂ ರೋಗಚಿಹ್ನೆಗೆ ಕೊಡುಗೆಯನ್ನು ನೀಡುವ ರೀತಿಯಲ್ಲಿರುವಂತೆ ಇದನ್ನು ನೋಡಲಾಗಿದೆ.[176] ಕೆಲವೊಂದು ಮಾನಸಿಕ ಆರೋಗ್ಯ ವೃತ್ತಿಪ್ರವೀಣರು ರೋಗರ್ನಿಣಯದೊಂದಿಗೆ ಗುರುತಿಸಲ್ಪಟ್ಟಿರುವ ವ್ಯಕ್ತಿಗಳಿಗಿಂತ ಮಿಗಿಲಾಗಿ, ಗ್ರಾಹಕ/ವಾರಸುದಾರ ಆಂದೋಲನದಲ್ಲಿರುವ ಗ್ರಹಿಕೆಗಳನ್ನು ಒಳಗೊಂಡಂತೆ ಸಾಕಷ್ಟು ವಿಭಿನ್ನವಾದ ಮೂಲ ಗ್ರಹಿಕೆಗಳು ಹಾಗೂ ಆರೋಗ್ಯಲಾಭದ ಪರಿಕಲ್ಪನೆಗಳನ್ನು ಹೊಂದಿರಬಹುದು.[177] ಸರಿಸುಮಾರು ಎಲ್ಲಾ ಸಂಶೋಧನಾ ಮಾನದಂಡಗಳ ಒಂದು ಗಮನಾರ್ಹ ಮಿತಿಯೆಂದರೆ, ಓರ್ವ ವ್ಯಕ್ತಿಯು ತನ್ನ ಜೀವನದ ಕುರಿತಾಗಿ ಹೊಂದಿರುವ ಸ್ವಂತ ಮೌಲ್ಯಮಾಪನಗಳು ಹಾಗೂ ಭಾವನೆಗಳನ್ನು ತಲುಪುವಲ್ಲಿ ಅಥವಾ ಗುರುತಿಸುವಲ್ಲಿ ವಿಫಲವಾಗಿರುವುದು. ಆತ್ಮಾಭಿಮಾನದ ಕೊರತೆ, ಸ್ನೇಹಿತರು ಮತ್ತು ಬಂಧುಗಳಿಂದ ದೂರವುಳಿದಿರುವುದು, ಶಾಲಾಜೀವನ ಮತ್ತು ವೃತ್ತಿಯಲ್ಲಿ ಕಂಡುಬರುವ ಅಡೆತಡೆಗಳು, ಮತ್ತು ಸಾಮಾಜಿಕ ರೋಗಚಿಹ್ನೆ, "ಹಾಗೇ ಸುಮ್ಮನೆ ಹಿಮ್ಮೆಟ್ಟಿಸಲಾಗದ ಅಥವಾ ಮರೆಯಲಾಗದ ಅನುಭವಗಳು" ಇವೇ ಮೊದಲಾದ ಅಂಶಗಳನ್ನು ಸ್ಕಿಜೋಫ್ರೇನಿಯಾ ಮತ್ತು ಆರೋಗ್ಯಲಾಭವು ಬಹುಕಾಲ ಒಳಗೊಂಡಿರುತ್ತವೆ.[118] ದಿನೇ ದಿನೇ ಪ್ರಭಾವಶಾಲಿಯಾಗಿ ರೂಪುಗೊಳ್ಳುತ್ತಿರುವ ಮಾದರಿಯು ಆರೋಗ್ಯಲಾಭವನ್ನು ವ್ಯಾಖ್ಯಾನಿಸುತ್ತಾ, ಇದು ಮಾದಕವಸ್ತು ಮತ್ತು ಮದ್ಯಸಾರದ ಸಮಸ್ಯೆಗಳಿಂದ ಹೊರಬಂದು "ಪೂರ್ವಸ್ಥಿತಿಯಲ್ಲಿ" ಇರುವುದಕ್ಕೆ ಸಮನಾಗಿದೆ, ಮತ್ತು ಭರವಸೆ, ಆಯ್ಕೆ, ಅಧಿಕೃತ ಸ್ಥಿತಿ, ಸಾಮಾಜಿಕವಾಗಿ ಸೇರ್ಪಡೆಗೊಳ್ಳುವಿಕೆ ಮತ್ತು ಸಾಧನೆಯಂಥ ಅಂಶಗಳನ್ನು ಒಳಗೊಂಡ ಒಂದು ವೈಯಕ್ತಿಕ ಪ್ರಯಾಣಕ್ಕೆ ಒತ್ತುನೀಡುತ್ತದೆ ಎಂದು ತಿಳಿಸಿದೆ.[118]
ಒಂದು ಉತ್ತಮವಾದ ಸರ್ವಾಂಗೀಣ ಮುನ್ನರಿವಿನೊಂದಿಗೆ ಹಲವಾರು ಅಂಶಗಳು ಸಂಬಂಧವನ್ನು ಹೊಂದಿವೆ. ಅವೆಂದರೆ: ಸ್ತ್ರೀಯಾಗಿರುವುದು, ರೋಗಲಕ್ಷಣಗಳ ಕ್ಷಿಪ್ರ (ಇದಕ್ಕೆ ಪ್ರತಿಯಾಗಿ ಗುಪ್ತವಾಗಿ ಬೆಳೆಯುತ್ತಿರುವ) ಪ್ರಾರಂಭ, ಮೊದಲ ಅಧ್ಯಾಯದ ಹಳೆಯ ವಯಸ್ಸು, ಪ್ರಧಾನವಾಗಿ (ಋಣಾತ್ಮಕವಾಗಿರುವುದರ ಬದಲು) ಧನಾತ್ಮಕವಾದ ರೋಗಲಕ್ಷಣಗಳು, ಮನಸ್ಥಿತಿಯ ರೋಗಲಕ್ಷಣಗಳ ಅಸ್ತಿತ್ವ, ಮತ್ತು ಕಾಯಿಲೆಗೆ-ಮುಂಚಿನ ಒಳ್ಳೆಯ ಕಾರ್ಯನಿರ್ವಹಣೆ.[178][179] ಸಂಕಲ್ಪಶಕ್ತಿ ಅಥವಾ ಮಾನಸಿಕ ಚೇತರಿಕೆಯಂಥ ಸಂಬಂಧಿತ ವ್ಯಕ್ತಿಯ ಬಲಗಳು ಹಾಗೂ ಆಂತರಿಕ ಸಂಪನ್ಮೂಲಗಳು ಅತ್ಯುತ್ತಮವಾದ ಮುನ್ನರಿವಿನೊಂದಿಗೆ ಸಂಬಂಧ ಹೊಂದಿವೆ.[171] ವ್ಯಕ್ತಿಯೋರ್ವನ ಜೀವನದಲ್ಲಿನ ಜನರಿಂದ ಹೊರಹೊಮ್ಮುವ ನಡವಳಿಕೆ ಹಾಗೂ ಬೆಂಬಲದ ಮಟ್ಟವು ಒಂದು ಗಮನಾರ್ಹವಾದ ಪ್ರಭಾವ ಬೀರುವುದು ಸಾಧ್ಯವಿದೆ; ಇದರ ಋಣಾತ್ಮಕ ಮಗ್ಗುಲುಗಳ ಪರಿಭಾಷೆಯಲ್ಲಿ ರೂಪುಗೊಂಡಿರುವ ಸಂಶೋಧನೆಯು ಮರುಕಳಿಸುವಿಕೆಗಿರುವ ಕೊಂಡಿಗಳನ್ನು ಸಮಂಜಸವಾಗಿ ಸೂಚಿಸಿದೆ. ಉನ್ನತವಾದ 'ಅಭಿವ್ಯಕ್ತಗೊಂಡ ದುಗುಡ' ಎಂದು ಹೆಸರಿಸಲ್ಪಟ್ಟಿರುವ ಹೇರುವ ಅಥವಾ ನಿಯಂತ್ರಕ ನಡವಳಿಕೆಗಳು, ಛಿದ್ರಾನ್ವೇಷಿ ಟೀಕೆಗಳು, ಹಗೆತನ ಇವೇ ಮೊದಲಾದ ಅಂಶಗಳು ಇಲ್ಲಿ ಉಲ್ಲೇಖಿಸಲ್ಪಡುತ್ತವೆ.[180] ಆದಾಗ್ಯೂ, ಮುನ್ಸೂಚನೆಯ ಅಂಶಗಳ ಮೇಲಿನ ಬಹುತೇಕ ಸಂಶೋಧನೆಯು ಅನ್ಯೋನ್ಯ ಸಂಬಂಧದ ಸ್ವರೂಪವನ್ನು ಹೊಂದಿದ್ದು, ಒಂದು ಸ್ಪಷ್ಟವಾದ ಕಾರಣ-ಮತ್ತು-ಪರಿಣಾಮದ ಸಂಬಂಧವನ್ನು ಅನೇಕ ವೇಳೆ ಸ್ಥಾಪಿಸುವುದು ಅಥವಾ ಸಮರ್ಥಿಸುವುದು ಕಷ್ಟವಾಗುತ್ತದೆ.
ಮನೋವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತಿರುವ 168,000ಕ್ಕೂ ಹೆಚ್ಚಿನ ಸ್ವೀಡಿಷ್ ನಾಗರಿಕರ ಒಂದು ಅಧ್ಯಯನದಲ್ಲಿ, ಸಾರ್ವತ್ರಿಕ ಜನಸಂಖ್ಯೆಯ ಸರಿಸುಮಾರು 80–85%ನಷ್ಟು ಭಾಗದ ಒಂದು ಸರಾಸರಿ ಜೀವನ ನಿರೀಕ್ಷಣೆಯೊಂದಿಗೆ ಸ್ಕಿಜೋಫ್ರೇನಿಯಾವು ಸಂಬಂಧವನ್ನು ಹೊಂದಿತ್ತು; ಪುರುಷರಿಗಿಂತ ಮಹಿಳೆಯರು ಕೊಂಚ ಉತ್ತಮ ಮಟ್ಟದ ಜೀವನ ನಿರೀಕ್ಷಣೆಯನ್ನು ಹೊಂದಿರುವುದು, ಮತ್ತು ಘನತೆಯ ದುರುಪಯೋಗ, ವ್ಯಕ್ತಿತ್ವ ಅಸ್ವಸ್ಥತೆ, ಹೃದಯಾಘಾತ ಮತ್ತು ಲಕ್ವಕ್ಕಿಂತ ಮಿಗಿಲಾದ ಒಂದು ಒಟ್ಟಾರೆಯಾದ ಉತ್ತಮ ಜೀವನ ನಿರೀಕ್ಷಣೆಯೊಂದಿಗೆ ಸ್ಕಿಜೋಫ್ರೇನಿಯಾದ ರೋಗನಿರ್ಣಯವು ಸಂಬಂಧಹೊಂದಿರುವುದು ಕಂಡುಬಂದಿತ್ತು.[181] ಇತರ ಪತ್ತೆಹಚ್ಚಲಾದ ಅಂಶಗಳಲ್ಲಿ ಧೂಮಪಾನ,[182] ಕಳಪೆ ಆಹಾರ ಕ್ರಮ, ಅಲ್ಪವೇ ಎನ್ನಬಹುದಾದ ವ್ಯಾಯಾಮ ಹಾಗೂ ಮನೋವೈದ್ಯಕೀಯ ಔಷಧವಸ್ತುಗಳ ಋಣಾತ್ಮಕ ಆರೋಗ್ಯ ಪ್ರಭಾವಗಳು ಸೇರಿವೆ.[7]
ಸ್ಕಿಜೋಫ್ರೇನಿಯಾದೊಂದಿಗೆ ಸಂಬಂಧಹೊಂದಿರುವ ಆತ್ಮಹತ್ಯೆಯ ಪ್ರಮಾಣವು ಸರಾಸರಿ ಪ್ರಮಾಣಕ್ಕಿಂತ ಹೆಚ್ಚಿನ ಮಟ್ಟದಲ್ಲಿದೆ. ಇದರ ಪ್ರಮಾಣವು 10%ನಷ್ಟಿದೆ ಎಂದು ಉಲ್ಲೇಖಿಸಲಾಗಿದ್ದರೂ, ಅಧ್ಯಯನಗಳು ಮತ್ತು ಅಂಕಿ-ಅಂಶಗಳ ಒಂದು ತೀರಾ ಇತ್ತೀಚಿನ ವಿಶ್ಲೇಷಣೆಯು ಪರಿಷ್ಕರಿಸಿರುವ ಪ್ರಕಾರ ಈ ಪ್ರಮಾಣವು 4.9%ನಷ್ಟಿದ್ದು, ಸಮಸ್ಯೆಯು ಬಿರುಸಾಗಿ ಆರಂಭಗೊಂಡ ಅಥವಾ ಮೊದಲ ಬಾರಿಗೆ ಆಸ್ಪತ್ರೆಗೆ ಸೇರಿಸಿದ ನಂತರದಲ್ಲಿ ಅನೇಕ ವೇಳೆ ಇದು ಕಂಡುಬರುತ್ತದೆ.[183] ಅನೇಕ ವೇಳೆ ಹೆಚ್ಚು ಮಂದಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ.[184] ಇದಕ್ಕೆ ವೈವಿಧ್ಯಮಯವಾದ ಕಾರಣಗಳು ಮತ್ತು ಅಪಾಯದ ಅಂಶಗಳಿವೆ.[185][186]
ಹಿಂಸಾತ್ಮಕ ನಡೆಗಳು ಮತ್ತು ಸ್ಕಿಜೋಫ್ರೇನಿಯಾದ ನಡುವಿನ ಸಂಬಂಧವು ಒಂದು ಚರ್ಚಾಸ್ಪದ ವಿಷಯವಾಗಿದೆ. ಪ್ರಸಕ್ತ ಸಂಶೋಧನೆಯು ಸೂಚಿಸುವ ಪ್ರಕಾರ, ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಲ್ಪಟ್ಟಿರುವ ವ್ಯಕ್ತಿಗಳು ಕೈಗೊಳ್ಳುವ ಹಿಂಸಾತ್ಮಕ ನಡೆಗಳು ಅಥವಾ ಚಟುವಟಿಕೆಗಳ ಶೇಕಡಾವಾರು ಪ್ರಮಾಣವು, ಯಾವುದೇ ಅಸ್ವಸ್ಥತೆಯನ್ನು ಹೊಂದಿರದ ಜನರು ಕೈಗೊಳ್ಳುವ ಇಂಥ ಕ್ರಮಗಳ ಶೇಕಡಾವಾರು ಪ್ರಮಾಣಕ್ಕಿಂತ ಹೆಚ್ಚಿರುತ್ತದೆಯಾದರೂ, ಮದ್ಯವ್ಯಸನದಂಥ ಅಸ್ತವ್ಯಸ್ತತೆಗಳಿಂದಾಗಿ ಉಂಟಾಗುವ ಹಿಂಸಾತ್ಮಕ ಕೃತ್ಯಗಳಿಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಸಂಬಂಧಪಟ್ಟ ಅಂಶಗಳನ್ನು, ಅದರಲ್ಲೂ ಗಮನಾರ್ಹವಾಗಿ ಸಮಾಜೋ-ಜನಸಂಖ್ಯಾಶಾಸ್ತ್ರದ ಚಲ ಪರಿಣಾಮಗಳು ಮತ್ತು ಘನತೆಯ ದುರುಪಯೋಗದಂಥ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ, ಇದೇ-ಹತ್ತಿರ ಹತ್ತಿರದ ಹೋಲಿಕೆಗಳಲ್ಲಿ ವ್ಯತ್ಯಾಸಗಳು ಕಡಿಮೆ ಮಟ್ಟದಲ್ಲಿರುತ್ತವೆ ಅಥವಾ ಕಂಡುಬರುವುದಿಲ್ಲ.[187] ಅಧ್ಯಯನಗಳು ಸೂಚಿಸಿರುವ ಪ್ರಕಾರ, ಪಾಶ್ಚಿಮಾತ್ಯ ದೇಶಗಳಲ್ಲಿ ಕೊಲೆಯ ಆಪಾದನೆಯನ್ನು ಹೊತ್ತುಕೊಂಡಿರುವವರ ಪೈಕಿ 5%ರಿಂದ 10%ನಷ್ಟು ಮಂದಿ ಒಂದು ಸ್ಕಿಜೋಫ್ರೇನಿಯಾ ಪಟ್ಟಿಯ ಅಸ್ವಸ್ಥತೆಯನ್ನು ಹೊಂದಿದ್ದಾರೆ.[188][189][190]
ಸ್ಕಿಜೋಫ್ರೇನಿಯಾದಲ್ಲಿ ಕಂಡುಬರುವ ಬುದ್ಧಿವಿಕಲ್ಪವು ಕೆಲವೊಮ್ಮೆ ಹಿಂಸಾತ್ಮಕ ಕೃತ್ಯಗಳ ಒಂದು ಹೆಚ್ಚಿನ ಪ್ರಮಾಣದ ಅಪಾಯದೊಂದಿಗೆ ಸಂಬಂಧಹೊಂದಿದೆ. ಭ್ರಮೆಗಳು ಅಥವಾ ಭ್ರಾಂತಿಗಳ ನಿರ್ದಿಷ್ಟ ಪಾತ್ರದ ಕುರಿತಾದ ಆವಿಷ್ಕಾರಗಳು ಸಮಂಜಸತೆಯನ್ನು ಹೊಂದಿಲ್ಲವಾದರೂ, ಭ್ರಮೆಯ ಅಸೂಯೆ, ಬೆದರಿಕೆಯ ಗ್ರಹಿಕೆ ಮತ್ತು ಅಣತಿಯ ಭ್ರಾಂತಿಗಳ ಮೇಲೆ ಗಮನವನ್ನು ಕೇಂದ್ರೀಕರಿಸಿವೆ. ಸ್ಕಿಜೋಫ್ರೇನಿಯಾದೊಂದಿಗೆ ಬಳಲುತ್ತಿರುವ ಒಂದು ನಿರ್ದಿಷ್ಟ ಬಗೆಯ ವ್ಯಕ್ತಿಯು ತಪ್ಪನ್ನು ಎಸಗುವ ಸಂಭವಗಳಿವೆ ಎಂದು ಪ್ರಸ್ತಾವಿಸಲ್ಪಟ್ಟಿದ್ದು, ಶೈಕ್ಷಣಿಕ ಅಡೆತಡೆಗಳು, ಕಡಿಮೆ IQ, ನಡತೆಯ ಅಸ್ವಸ್ಥತೆ, ಮುಂಚಿತವಾಗಿ-ಕಂಡುಬಂದ ಘನತೆಯ ದುರುಪಯೋಗ ಮತ್ತು ರೋಗನಿರ್ಣಯಕ್ಕೆ ಮುಂಚಿತವಾಗಿ ತಪ್ಪೆಸಗಿರುವುದರ ಒಂದು ಚರಿತ್ರೆಯಿಂದ ಅದು ನಿರೂಪಿಸಲ್ಪಟ್ಟಿದೆ.[188]
ಸ್ಕಿಜೋಫ್ರೇನಿಯಾದ ಒಂದು ರೋಗನಿರ್ಣಯದೊಂದಿಗಿನ ವ್ಯಕ್ತಿಗಳು ಹೆಚ್ಚು ಸಂದರ್ಭಗಳಲ್ಲಿ ಹಿಂಸಾತ್ಮಕ ಅಪರಾಧದ ಬಲಿಪಶುಗಳಾಗಿರುತ್ತಾರೆ- ಅಂದರೆ ಅವರು ದುಷ್ಕರ್ಮಿಗಳಾಗಿರುವುದರ ಕನಿಷ್ಟ ಪಕ್ಷ 14 ಪಟ್ಟು ಹೆಚ್ಚು ಸಂದರ್ಭಗಳಲ್ಲಿ ಈ ಸ್ಥಿತಿಯಿರುತ್ತದೆ.[191][192]
ಹಿಂಸಾತ್ಮಕ ಕೃತ್ಯಗಳನ್ನು ನಡೆಸುವ ಅಲ್ಪಸಂಖ್ಯೆಯ ಜನರ ಪೈಕಿ, ಘನತೆಯ ದುರುಪಯೋಗಕ್ಕೆ, ನಿರ್ದಿಷ್ಟವಾಗಿ ಹೇಳುವುದಾದರೆ ಮದ್ಯಸಾರದ ಬಳಕೆಗೆ[193] ಒಂದು ಸಂಕರ್ಪಕೊಂಡಿಯಿರುವುದು ಮತ್ತೊಂದು ಸಮಂಜಸವಾದ ಆವಿಷ್ಕಾರವಾಗಿದೆ. ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳು ಮಾಡುವ ಹಿಂಸೆ ಅಥವಾ ಅವರ ವಿರುದ್ಧ ನಡೆಯುವ ಹಿಂಸೆಯು, ಕೌಟುಂಬಿಕ ವ್ಯವಸ್ಥೆಯೊಂದರೊಳಗಿನ ಸಂಕೀರ್ಣ ಸಾಮಾಜಿಕ ಪಾರಸ್ಪರಿಕ ಕ್ರಿಯೆಗಳ ಸನ್ನಿವೇಶದಲ್ಲಿ ವಿಶಿಷ್ಟವಾಗಿ ಕಂಡುಬರುತ್ತದೆ,[194] ಮತ್ತು ಇದು ವೈದ್ಯಕೀಯ ಸೇವೆಗಳಲ್ಲಿ[195] ಮತ್ತು ವ್ಯಾಪಕ ಸಮುದಾಯದಲ್ಲಿ ಒಂದು ಚರ್ಚಾವಿಷಯವೂ ಆಗಿದೆ.[196]
ಸ್ಕಿಜೋಫ್ರೇನಿಯಾವು ಪುರುಷರು ಮತ್ತು ಮಹಿಳೆಯರಲ್ಲಿ ಸಮಾನವಾಗಿ ಕಂಡುಬರುತ್ತದೆಯಾದರೂ, ಇದು ವಿಶಿಷ್ಟವಾಗಿ ಪುರುಷರಲ್ಲಿ ಮುಂಚಿತವಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಪುರುಷರಲ್ಲಿ 20–28ರ ವಯೋಮಾನಗಳ ನಡುವೆ ಬಿರುಸಾದ ಸಂಭವಿಸುವಿಕೆಯ ಕಂಡುಬಂದರೆ, ಮಹಿಳೆಯರಲ್ಲಿ ಇದು 26–32ರ ನಡುವಿನ ವಯೋಮಾನದಲ್ಲಿ ಕಂಡುಬರುತ್ತದೆ.[1] ಬಾಲ್ಯದಲ್ಲಿ ಬಿರುಸಾದ ಆರಂಭವಾಗುವಿಕೆ ಹೆಚ್ಚು ಅಪರೂಪವಾಗಿದ್ದರೆ,[197] ಮಧ್ಯ-ವಯಸ್ಸು ಅಥವಾ ವೃದ್ಧಾಪ್ಯದಲ್ಲೂ ಇದೇ ಸ್ಥಿತಿಯಿರುತ್ತದೆ.[198] ಸ್ಕಿಜೋಫ್ರೇನಿಯಾದ ಜೀವಮಾನದ ಹರಡುವಿಕೆಯು ಸಾಮಾನ್ಯವಾಗಿ 1%ನಷ್ಟು ಪ್ರಮಾಣದಲ್ಲಿರುತ್ತದೆ. ಇದು ವ್ಯಕ್ತಿಗಳು ತಮ್ಮ ಜೀವಿತಾವಧಿಯ ಯಾವುದೇ ಸಮಯದಲ್ಲಿ ರೋಗವನ್ನು ಅನುಭವಕ್ಕೆ ತಂದುಕೊಳ್ಳಬಹುದಾದ ನಿರೀಕ್ಷೆಯ ಪ್ರಮಾಣ ಅಥವಾ ಅನುಪಾತವಾಗಿರುತ್ತದೆ. ಆದಾಗ್ಯೂ, ಅನೇಕ ಅಧ್ಯಯನಗಳ 2002ರ ಒಂದು ಕ್ರಮಬದ್ಧ ಅವಲೋಕನವು 0.55%ನಷ್ಟು ಪ್ರಮಾಣದಲ್ಲಿ ಜೀವಮಾನದ ಹರಡುವಿಕೆಯಿರುತ್ತದೆ ಎಂದು ಕಂಡುಕೊಂಡಿದೆ.[3] ಸ್ಕಿಜೋಫ್ರೇನಿಯಾವು ವಿಶ್ವಾದ್ಯಂತ ಒಂದೇ ಪ್ರಮಾಣದಲ್ಲಿ ಸಂಭವಿಸುತ್ತದೆ ಎಂದು ಸ್ವೀಕೃತ ಜ್ಞಾನವು ತಿಳಿಸಿದ್ದಾಗ್ಯೂ, ದೇಶದೊಳಗಡೆ,[199] ಮತ್ತು ಸ್ಥಳೀಯ ಹಾಗೂ ನೆರೆಹೊರೆಯ ಮಟ್ಟದಲ್ಲಿ, ವಿಶ್ವಾದ್ಯಂತವಾಗಿ[200] ಇದರ ಹರಡುವಿಕೆಯು ಬದಲಾಗುತ್ತಲೇ ಹೋಗುತ್ತದೆ.[201] ನಗರ ಪ್ರದೇಶದ ಒಂದು ವಾತಾವರಣದಲ್ಲಿ ಜೀವಿಸುವುದು ಮತ್ತು ಸ್ಕಿಜೋಫ್ರೇನಿಯಾ ರೋಗನಿರ್ಣಯದ ನಡುವಿನ ಸಂಬಂಧವು ಒಂದು ನಿರ್ದಿಷ್ಟವಾಗಿ ಸ್ಥಿರವಾಗಿರುವ ಮತ್ತು ಪುನರಾವರ್ತನೀಯವಾಗಿರುವ ಆವಿಷ್ಕಾರವಾಗಿದ್ದು, ಔಷಧ ವಸ್ತುವಿನ ಬಳಕೆ, ಜನಾಂಗೀಯ ಗುಂಪು ಮತ್ತು ಸಾಮಾಜಿಕ ಗುಂಪಿನ ಗಾತ್ರದಂಥ ಅಂಶಗಳ ನಂತರವೂ ನಿಯಂತ್ರಣಕ್ಕೆ ಒಳಗಾಗಿವೆ.[57]
ಸ್ಕಿಜೋಫ್ರೇನಿಯಾವು ದೈಹಿಕ ಅಸಾಮರ್ಥ್ಯಕ್ಕೆ ಒಂದು ಪ್ರಮುಖ ಕಾರಣವೆಂದು ಹೇಳಲಾಗಿದೆ. 1999ರಲ್ಲಿ ಕೈಗೊಳ್ಳಲಾದ 14 ದೇಶಗಳ ಅಧ್ಯಯನವೊಂದರಲ್ಲಿ, ಪಾದಪಾಣಿ ಲಕ್ವ (ಕ್ವಾಡ್ರಿಪ್ಲೇಗಿಯಾ) ಮತ್ತು ಬುದ್ಧಿಮಾಂದ್ಯ ಸ್ಥಿತಿಯ ನಂತರದ ಮೂರನೇ-ಅತಿ-ಅಸಾಮರ್ಥ್ಯಕಾರಕ ಸ್ಥಿತಿಯಾಗಿ ಕ್ರಿಯಾಶೀಲ ಬುದ್ಧಿವಿಕಲ್ಪಕ್ಕೆ ಶ್ರೇಯಾಂಕ ದೊರೆತಿದ್ದು, ಇದು ಪಾರ್ಶ್ವವಾಯು (ಪ್ಯಾರಾಪ್ಲೇಗಿಯಾ) ಮತ್ತು ಅಂಧತ್ವಕ್ಕಿಂತ ಮುಂದಿದೆ.[202]
ಸ್ಕಿಜೋಫ್ರೇನಿಯಾ-ರೀತಿಯ ರೋಗದ ಸಹಲಕ್ಷಣವೊಂದರ ನಮೂದುಗಳು 1800ರ ದಶಕಕ್ಕೂ ಮುಂಚಿನ ಗತಕಾಲದ ದಾಖಲೆಗಳಲ್ಲಿ ಅಪರೂಪವೆಂದೇ ಭಾವಿಸಲಾಗಿದೆ. ಆದರೂ, ವಿಚಾರಹೀನವಾದ, ಗ್ರಹಿಸುವುದಕ್ಕಾಗದ, ಅನಿಯಂತ್ರಿತ ನಡವಳಿಕೆಗಳ ನಮೂದುಗಳು ಸಾಮಾನ್ಯವಾಗಿದ್ದವು ಎಂದು ಹೇಳಬಹುದು.[203] ಪ್ರಾಚೀನ ಈಜಿಪ್ಟಿನ ಎಬರ್ಸ್ ಪ್ಯಾಪಿರಸ್ನಲ್ಲಿನ ಸಂಕ್ಷಿಪ್ತ ಟಿಪ್ಪಣಿಗಳು ಸ್ಕಿಜೋಫ್ರೇನಿಯಾವನ್ನು ಸೂಚಿಸಬಹುದು ಎಂಬುದೊಂದು ವ್ಯಾಖ್ಯಾನವಿದ್ದರೂ,[204] ಇತರ ಅವಲೋಕನಗಳು ಯಾವುದೇ ಸಂಬಂಧವನ್ನು ಸೂಚಿಸಿಲ್ಲ.[205] ಪ್ರಾಚೀನ ಗ್ರೀಕ್ ಮತ್ತು ರೋಮನ್ ಸಾಹಿತ್ಯದ ಒಂದು ಅವಲೋಕನವು ಸೂಚಿಸಿರುವ ಪ್ರಕಾರ, ಬುದ್ಧಿವಿಕಲ್ಪವು ವಿವರಿಸಲ್ಪಟ್ಟಿದ್ದರೂ ಅದರಲ್ಲಿ ಸ್ಕಿಜೋಫ್ರೇನಿಯಾದ ಮಾನದಂಡಗಳನ್ನು ಪೂರೈಸುವ ಒಂದು ರೋಗಸ್ಥಿತಿಯ ಯಾವುದೇ ನಮೂದು ಇರಲಿಲ್ಲ.[206] ಸ್ಕಿಜೋಫ್ರೇನಿಯಾದ ಕೆಲವೊಂದು ರೋಗಲಕ್ಷಣಗಳಿಗೆ ಹೋಲುವಂತಿರುವ ವಿಲಕ್ಷಣ ಮನೋವಿಕೃತ ನಂಬಿಕೆಗಳು ಮತ್ತು ನಡವಳಿಕೆಗಳು ಮಧ್ಯ ಯುಗಗಳ ಅವಧಿಯಲ್ಲಿನ ಅರೇಬಿಕ್ ವೈದ್ಯಕೀಯ ಮತ್ತು ಮಾನಸಿಕ ಸಾಹಿತ್ಯದಲ್ಲಿ ದಾಖಲಾಗಿದ್ದವು. ಉದಾಹರಣೆಗೆ, ದಿ ಕೆನನ್ ಆಫ್ ಮೆಡಿಸಿನ್ ನಲ್ಲಿ, ಸ್ಕಿಜೋಫ್ರೇನಿಯಾದ ರೋಗಲಕ್ಷಣಗಳನ್ನು ಒಂದಷ್ಟು ಹೋಲುವ ಒಂದು ರೋಗಸ್ಥಿತಿಯನ್ನು ಅವಿಸೆನ್ನಾ ಎಂಬಾತ ವಿವರಿಸಿದ್ದು, ಅವನ್ನು ಆತ ಜುನೂನ್ ಮಫ್ರಿತ್ (ತೀವ್ರ ಹುಚ್ಚು) ಎಂದು ಕರೆದ. ಹುಚ್ಚುತನದ (ಜುನೂನ್ ) ಇತರ ಸ್ವರೂಪಗಳಾದ ಗೀಳು, ರೇಬೀಸ್ ಮತ್ತು ಖೇದವಿಕಲ್ಪದ ಬುದ್ಧಿವಿಕಲ್ಪಗಳಿಂದ ತೀವ್ರ ಹುಚ್ಚನ್ನು ಆತ ಪ್ರತ್ಯೇಕಿಸಿದ. ಆದಾಗ್ಯೂ, ಸ್ಕಿಜೋಫ್ರೇನಿಯಾವನ್ನು ಹೋಲುತ್ತಿರುವ ಯಾವುದೇ ರೋಗಸ್ಥಿತಿಯೂ ಸೆರಾಫೆದ್ದೀನ್ ಸಾಬನ್ಕ್ಯುವೋಗ್ಲು ಎಂಬಾತ ಬರೆದ ಇಂಪೀರಿಯಲ್ ಸರ್ಜರಿ ಎಂಬ 15ನೇ ಶತಮಾನದ ಒಂದು ಪ್ರಮುಖ ಇಸ್ಲಾಮಿಕ್ ವೈದ್ಯಕೀಯ ಪಠ್ಯಪುಸ್ತಕದಲ್ಲಿ ದಾಖಲಾಗಿರಲಿಲ್ಲ.[207] ಲಭ್ಯವಿರುವ ಸೀಮಿತ ಗತಕಾಲದ ಸಾಕ್ಷ್ಯದ ನೆರವಿನಿಂದ ಸ್ಕಿಜೋಫ್ರೇನಿಯಾವು (ಇಂದು ಅದು ಪ್ರಚಲಿತವಾಗಿರುವಂತೆ) ಒಂದು ಆಧುನಿಕ ವಿದ್ಯಮಾನವಾಗಿರಬಹುದು, ಅಥವಾ ಪರ್ಯಾಯವಾಗಿ ಗತಕಾಲದ ಬರಹಗಳಲ್ಲಿ ವಿಷಾದರೋಗ ಅಥವಾ ಗೀಳಿನಂಥ ಸಂಬಂಧಿತ ಪರಿಕಲ್ಪನೆಗಳಿಂದ ಇದು ಮಬ್ಬುಗೊಳಿಸಲ್ಪಟ್ಟಿರಬಹುದು.[203]
ಜೇಮ್ಸ್ ಟಿಲ್ಲಿ ಮ್ಯಾಥ್ಯೂಸ್ಗೆ ಸಂಬಂಧಪಟ್ಟ 1797ರಲ್ಲಿನ ಒಂದು ವಿಸ್ತೃತವಾದ ರೋಗಿಯ ವರದಿ, ಮತ್ತು 1809ರಲ್ಲಿ ಪ್ರಕಟಗೊಂಡ ಫಿಲಿಪ್ ಪಿನೆಲ್ನಿಂದ ಮಾಡಲ್ಪಟ್ಟ ನಮೂದುಗಳು ವೈದ್ಯಕೀಯ ಮತ್ತು ಮನೋವೈದ್ಯಕೀಯ ಸಾಹಿತ್ಯದಲ್ಲಿನ ಸ್ಕಿಜೋಫ್ರೇನಿಯಾದ ಆರಂಭಿಕ ರೋಗ ಪ್ರಕರಣಗಳು ಎಂದು ಪರಿಗಣಿಸಲ್ಪಟ್ಟಿವೆ.[203] ಬೆನೆಡಿಕ್ಟ್ ಮೋರ್ಸೆಲ್ ಎಂಬಾತನಿಂದ 1853ರಲ್ಲಿ ನಮೂದಿಸಲ್ಪಟ್ಟಂತೆ ಸ್ಕಿಜೋಫ್ರೇನಿಯಾವು ಮೊದಲು ಹದಿಹರೆಯದವರು ಹಾಗೂ ಯುವ ಪ್ರೌಢಸ್ಥರಿಗೆ ಹಾನಿಯುಂಟುಮಾಡುವ ಒಂದು ವಿಶಿಷ್ಟವಾದ ರೋಗದ ಸಹಲಕ್ಷಣ ಎಂದು ವಿವರಿಸಲ್ಪಟ್ಟಿತ್ತು ಮತ್ತು ಇದನ್ನು ಡೆಮೆನ್ಸ್ ಪ್ರೆಕೋಸ್ ('ಮುಂಚಿತವಾದ ಬುದ್ಧಿಮಾಂದ್ಯ' ಎಂಬುದು ಇದರ ಅಕ್ಷರಶಃ ಅರ್ಥ) ಎಂದು ಹೆಸರಿಸಲಾಗಿತ್ತು. ಡೆಮೆನ್ಷಿಯಾ ಪ್ರೇಕಾಕ್ಸ್ ಎಂಬ ಪದವನ್ನು 1891ರಲ್ಲಿ ಅರ್ನಾಲ್ಡ್ ಪಿಕ್ ಎಂಬಾತ ಮನೋವಿಕೃತ ಅಸ್ವಸ್ಥತೆಯ ಕುರಿತಾದ ಒಂದು ರೋಗಿಯ ವರದಿಯಲ್ಲಿ ಉಪಯೋಗಿಸಿದ. 1893ರಲ್ಲಿ ಎಮಿಲ್ ಕ್ರೇಪೆಲಿನ್ ಎಂಬಾತ ಡೆಮೆನ್ಷಿಯಾ ಪ್ರೇಕಾಕ್ಸ್ ಮತ್ತು ಮನಸ್ಥಿತಿಯ ಅಸ್ತವ್ಯಸ್ತತೆಯ (ಉನ್ಮಾದಗ್ರಸ್ತ ಖಿನ್ನತೆ ಎಂಬ ಹೆಸರನ್ನು ಇದು ಹೊಂದಿದ್ದು,ಏಕಧ್ರುವೀಯ ಮತ್ತು ಎರಡು ಧ್ರುವೀಯ ಖಿನ್ನತೆಗಳೆರಡನ್ನೂ ಇದು ಒಳಗೊಂಡಿದೆ) ನಡುವಿನ ಮಾನಸಿಕ ಅಸ್ವಸ್ಥತೆಗಳ ವರ್ಗೀಕರಣದಲ್ಲಿ ಒಂದು ಹೊಸ ವಿಸ್ತೃತ ವೈಲಕ್ಷಣ್ಯವನ್ನು ಪರಿಚಯಿಸಿದ. ಡೆಮೆನ್ಷಿಯಾ ಪ್ರೇಕಾಕ್ಸ್ ಎಂಬುದು ಮೂಲತಃ ಮಿದುಳಿನ ಒಂದು ಕಾಯಿಲೆ,[208] ಅದರಲ್ಲೂ ನಿರ್ದಿಷ್ಟವಾಗಿ ಬುದ್ಧಿಮಾಂದ್ಯತೆಯ ಒಂದು ಸ್ವರೂಪ ಎಂಬುದು ಕ್ರೇಪೆಲಿನ್ನ ನಂಬಿಕೆಯಾಗಿತ್ತು. ಜೀವನದ ನಂತರದ ಅವಧಿಯಲ್ಲಿ ವಿಶಿಷ್ಟವಾಗಿ ಕಂಡುಬರುವ ಆಲ್ಝೈಮರ್ನ ಕಾಯಿಲೆಯಂಥ ಡೆಮೆನ್ಷಿಯಾದ ಇತರ ಸ್ವರೂಪಗಳಿಂದ ಇದು ಪ್ರತ್ಯೇಕಿಸಲ್ಪಟ್ಟಿದೆ ಎಂದು ಆತ ನಂಬಿದ್ದ.[209] ಕ್ರೇಪೆಲಿನ್ನ ವರ್ಗೀಕರಣವು ಕಾಲಕ್ರಮೇಣ ಮನ್ನಣೆಯನ್ನು ಗಳಿಸಿತು. ಆರೋಗ್ಯಲಾಭದ ಪ್ರಕರಣಗಳಿದ್ದಾಗ್ಯೂ, ಮತ್ತು ಇದು ಪಲ್ಲಟಗೊಳಿಸಿದ ಹರೆಯದ ಉನ್ಮಾದದಂಥ ಕೆಲವೊಂದು ರೋಗನಿರ್ಣಯಗಳ ಸಮರ್ಥನೆಯ ಪ್ರಕರಣಗಳಿದ್ದಾಗ್ಯೂ "ಬುದ್ಧಿಮಾಂದ್ಯ" ಎಂಬ ಪದದ ಬಳಕೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳು ಕೇಳಿಬಂದವು.[210]
ಸ್ಕಿಜೋಫ್ರೇನಿಯಾ ಎಂಬ ಪದವನ್ನು ಯೂಜೆನ್ ಬ್ಲ್ಯೂಗರ್ ಎಂಬಾತ 1908ರಲ್ಲಿ ಹುಟ್ಟುಹಾಕಿದ. ವ್ಯಕ್ತಿತ್ವ,ಆಲೋಚನೆ, ಸ್ಮೃತಿ, ಮತ್ತು ಗ್ರಹಿಕೆ ಇವುಗಳ ನಡುವಿನ ಕ್ರಿಯೆಯ ಪ್ರತ್ಯೇಕತೆಯನ್ನು ವಿವರಿಸುವ ಉದ್ದೇಶ ಇದರ ಹಿಂದಿತ್ತು. ಸ್ಕಿಜೋಫ್ರೇನಿಯಾ ಎಂಬ ಪದವನ್ನು ಭಾಷಾಂತರಿಸಿದಾಗ "ಮನಸ್ಸಿನ ಛಿದ್ರಗೊಳ್ಳುವಿಕೆ ಅಥವಾ ಒಡೆಯುವಿಕೆ" ಎಂಬ ಸ್ಥೂಲ ಅರ್ಥ ದೊರೆಯುತ್ತದೆ. ಗ್ರೀಕ್ ಮೂಲಗಳಾದ ಸ್ಕಿಜೇನ್ (σχίζειν, "ಸೀಳುವುದು") ಮತ್ತು ಫ್ರೇನ್ , ಫ್ರೇನ್- (φρήν, φρεν-, "ಮನಸ್ಸು")[211] ಎಂಬುದರಿಂದ ಸ್ಕಿಜೋಫ್ರೇನಿಯಾ ಎಂಬ ಪದ ಬಂದಿದೆ. ಮುಖ್ಯ ರೋಗಲಕ್ಷಣಗಳನ್ನು ಬ್ಲ್ಯೂಗರ್ 4 A'ಗಳೆಂಬಂತೆ ವಿವರಿಸಿದ: ಫ್ಲಾಟನ್ಡ್ ಅಫೆಕ್ಟ್ (ಕುಗ್ಗಿಸಿದ ಸೋಂಕು), ಆಟಿಸಂ (ಸ್ವಲೀನತೆ), ಇಂಪೇರ್ಡ್ ಅಸೋಸಿಯೇಷನ್ ಆಫ್ ಐಡಿಯಾಸ್ (ಕೆಡಿಸಿದ ಭಾವಸಾಹಚರ್ಯ) ಮತ್ತು ಆಂಬಿವೇಲೆನ್ಸ್ (ಉಭಯಪ್ರವೃತ್ತಿ).[212] ತನ್ನ ಕೆಲವೊಂದು ರೋಗಿಗಳ ಪರಿಸ್ಥಿತಿ ಹಾಳಾಗುವ ಬದಲು ಸುಧಾರಿಸಿದ್ದರಿಂದ ಕಾಯಿಲೆಯು ಒಂದು ಬುದ್ಧಿಮಾಂದ್ಯವಲ್ಲ ಎಂಬುದನ್ನು ಬ್ಲ್ಯೂಗರ್ ಅರಿತುಕೊಂಡ ಮತ್ತು ಆದ್ದರಿಂದ ಅದರ ಬದಲಿಗೆ ಸ್ಕಿಜೋಫ್ರೇನಿಯಾ ಎಂಬ ಪದವನ್ನು ಪ್ರಸ್ತಾವಿಸಿದ.
ಸ್ಕಿಜೋಫ್ರೇನಿಯಾ ಎಂಬ ಪದವನ್ನು ಕೇಳಿದಾಗ, ಇದಕ್ಕೆ ಒಳಗಾದವರು ಒಂದು "ಒಡಕು ವ್ಯಕ್ತಿತ್ವ"ವನ್ನು ಹೊಂದಿರುತ್ತಾರೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದು ಸಾಮಾನ್ಯವಾಗಿದೆ. ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಲ್ಪಟ್ಟಿರುವ ಕೆಲವೊಂದು ಜನರು ಧ್ವನಿಗಳನ್ನು ಕೇಳಬಹುದಾದರೂ ಮತ್ತು ದೂರದ ವ್ಯಕ್ತಿತ್ವಗಳಿಂದ ಬಂದ ಧ್ವನಿಗಳಂತೆ ಅದನ್ನು ಅನುಭವಿಸುತ್ತಾರಾದರೂ, ದೂರದ ಬಹು ವ್ಯಕ್ತಿಗಳ ನಡುವಿನ ಓರ್ವ ಬದಲಾಗುತ್ತಿರುವ ವ್ಯಕ್ತಿಯನ್ನು ಸ್ಕಿಜೋಫ್ರೇನಿಯಾವು ಒಳಗೊಳ್ಳುವುದಿಲ್ಲ. ಬ್ಲ್ಯೂಗರ್ನ ಸ್ಕಿಜೋಫ್ರೇನಿಯಾ ಎಂಬ ಪದದ ಅರ್ಥದ ಕಾರಣದಿಂದಾಗಿ ಆಂಶಿಕವಾಗಿ ಗೊಂದಲವು ಹುಟ್ಟಿಕೊಳ್ಳುತ್ತದೆ ಸ್ಕಿಜೋಫ್ರೇನಿಯಾ (ಅಕ್ಷರಶಃ ಅರ್ಥ "ಸೀಳು" ಅಥವಾ "ಒಡೆದುಹೋದ ಮನ"). 1933ರಲ್ಲಿ ಟಿ.ಎಸ್. ಎಲಿಯಟ್ ಕವಿಯು ಬರೆದ ಲೇಖನವೊಂದರಲ್ಲಿ ಸದರಿ ಪದದ ಅರ್ಥವು "ಒಡಕು ವ್ಯಕ್ತಿತ್ವ" ಎಂಬ ತಪ್ಪುಗ್ರಹಿಕೆಯಾಗಿ ಮೊಟ್ಟಮೊದಲು ಕಂಡುಬಂತು.[213]
ಇಪ್ಪತ್ತನೇ ಶತಮಾನದ ಪ್ರಥಮಾರ್ಧದಲ್ಲಿ, ಸ್ಕಿಜೋಫ್ರೇನಿಯಾವನ್ನು ಒಂದು ಆನುವಂಶಿಕ ನ್ಯೂನತೆ ಎಂಬಂತೆ ಪರಿಗಣಿಸಲಾಗಿತ್ತು, ಮತ್ತು ಇದರಿಂದ ಬಳಲುತ್ತಿರುವವರನ್ನು ಅನೇಕ ದೇಶಗಳಲ್ಲಿ ಸುಜನನಶಾಸ್ತ್ರಕ್ಕೆ ಈಡುಮಾಡಲಾಗಿತ್ತು. ಒಪ್ಪಿಗೆಯಿದ್ದೋ ಅಥವಾ ಇಲ್ಲದೆಯೋ, ನೂರಾರು ಸಾವಿರಾರು ಮಂದಿಯನ್ನು ಸಂತಾನಹರಣಕ್ಕೀಡುಮಾಡಲಾಯಿತು. ನಾಝಿ ಜರ್ಮನಿ, ಅಮೆರಿಕ ಸಂಯುಕ್ತ ಸಂಸ್ಥಾನಗಳು, ಮತ್ತು ಸ್ಕ್ಯಾಂಡಿನೇವಿಯಾದ ದೇಶಗಳಲ್ಲಿ ಇದು ಹೆಚ್ಚು ಪ್ರಮಾಣದಲ್ಲಿ ಸಂಭವಿಸಿತು.[214][215] "ಮಾನಸಿಕವಾಗಿ ಯೋಗ್ಯರಲ್ಲದವರು" ಎಂಬ ಹಣೆಪಟ್ಟಿಯನ್ನು ಕಟ್ಟಿಸಿಕೊಂಡ ಇತರ ಜನಗಳ ಜೊತೆಗೆ, ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಲ್ಪಟ್ಟ ಅನೇಕರನ್ನು ನಾಝಿ "ಆಕ್ಷನ್ T4" ಕಾರ್ಯಕ್ರಮದಲ್ಲಿ ಕೊಲ್ಲಲಾಯಿತು.[216]
1970ರ ದಶಕದ ಆರಂಭದಲ್ಲಿ, ಸ್ಕಿಜೋಫ್ರೇನಿಯಾದ ರೋಗನಿರ್ಣಯದ ಮಾನದಂಡಗಳು ಅಸಂಖ್ಯಾತ ವಿವಾದಗಳ ವಿಷಯವಾಗಿ ಪರಿಣಮಿಸಿ, ಅದರ ಫಲವಾಗಿ ಇಂದು ಬಳಸಲಾಗುತ್ತಿರುವ ಕಾರ್ಯಾಚರಣಾ ಮಾನದಂಡಗಳು ರೂಪುಗೊಳ್ಳಲು ಸಾಧ್ಯವಾಯಿತು. 1971ರಲ್ಲಿ ಬಂದ US-UKಯ ರೋಗನಿರ್ಣಯದ ಅಧ್ಯಯನದ ನಂತರ, ಯುರೋಪ್ಗಿಂತ ಅಮೆರಿಕಾದಲ್ಲಿ ಬಹುಮಟ್ಟಿಗೆ ಸ್ಕಿಜೋಫ್ರೇನಿಯಾದ ರೋಗನಿರ್ಣಯವು ಕಂಡುಬಂದಿದೆ ಎಂದು ಸ್ಪಷ್ಟವಾಯಿತು.[217]
USನಲ್ಲಿದ್ದ ಬಿಗಿಯಲ್ಲದ ರೋಗನಿರ್ಣಯದ ಮಾನದಂಡಗಳು ಇದಕ್ಕೆ ಆಂಶಿಕ ಕಾರಣವಾಗಿದ್ದವು. ಏಕೆಂದರೆ, ಯುರೋಪ್ ಮತ್ತು ಅದರ ICD-9 ಕೈಪಿಡಿಗೆ ಪ್ರತಿಯಾಗಿ USನ ಮಾನದಂಡಗಳು DSM-II ಕೈಪಿಡಿಯನ್ನು ಬಳಸುತ್ತಿದ್ದವು. 1972ರಲ್ಲಿ ಹೊರಬಂದ ಮತ್ತು ಸೈನ್ಸ್ ನಿಯತಕಾಲಿಕದಲ್ಲಿ ಆನ್ ಬೀಯಿಂಗ್ ಸೇನ್ ಇನ್ ಇನಸೇನ್ ಪ್ಲೇಸಸ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ಡೇವಿಡ್ ರೋಸೆನ್ಹ್ಯಾನ್ನ ಅಧ್ಯಯನವು, USನಲ್ಲಿನ ಸ್ಕಿಜೋಫ್ರೇನಿಯಾದ ರೋಗನಿರ್ಣಯವು ಸಾಕಷ್ಟು ವ್ಯಕ್ತಿನಿಷ್ಠ ಅಥವಾ ವೈಯಕ್ತಿಕ ಮೌಲ್ಯಮಾಪನವಾಗಿದ್ದು ಇದು ವಿಶ್ವಾಸಾರ್ಹವಲ್ಲ ಎಂಬ ತೀರ್ಮಾನಕ್ಕೆ ಬಂತು.[218] ಸ್ಕಿಜೋಫ್ರೇನಿಯಾದ ರೋಗಲಕ್ಷಣದ ಪರಿಷ್ಕರಣೆಗೆ ಮಾತ್ರವೇ ಅಲ್ಲದೇ, ಸಮಗ್ರ DSM ಕೈಪಿಡಿಯ ಪರಿಷ್ಕರಣೆಗೂ ಈ ಕೆಲವೊಂದು ಅಂಶಗಳು ಕಾರಣವಾಗುವುದರ ಜೊತೆಗೆ, 1980ರಲ್ಲಿ DSM-III ಕೈಪಿಡಿಯ ಪ್ರಕಟಣೆಗೂ ಕಾರಣವಾದವು.[219]
1970ರ ದಶಕದ ನಂತರದಲ್ಲಿ 40ಕ್ಕೂ ಹೆಚ್ಚಿನ ಸ್ಕಿಜೋಫ್ರೇನಿಯಾಕ್ಕಾಗಿರುವ ರೋಗನಿರ್ಣಯದ ಮಾನದಂಡಗಳು ಪ್ರಸ್ತಾವಿಸಲ್ಪಟ್ಟಿವೆ ಮತ್ತು ಮೌಲ್ಯಮಾಪನಕ್ಕೊಳಗಾಗಿವೆ.[34]
ಸೋವಿಯತ್ ಒಕ್ಕೂಟದಲ್ಲಿ ಸ್ಕಿಜೋಫ್ರೇನಿಯಾದ ರೋಗನಿರ್ಣಯವು ರಾಜಕೀಯ ಉದ್ದೇಶಗಳಿಗಾಗೂ ಬಳಸಲ್ಪಡುತ್ತಿದೆ. ಸೋವಿಯೆತ್ನ ಆಂಡ್ರಿ ಸ್ನೆಝ್ನೆವ್ಸ್ಕಿ ಎಂಬ ಪ್ರಸಿದ್ಧ ಮನೋವೈದ್ಯ ನಿಧಾನವಾಗಿ ಮುಂದುವರಿಯುವ ಸ್ಕಿಜೋಫ್ರೇನಿಯಾದ ಒಂದು ಹೆಚ್ಚುವರಿ ಉಪ-ವರ್ಗೀಕರಣವನ್ನು ಸೃಷ್ಟಿಸಿದ ಮತ್ತು ಪ್ರವರ್ತಿಸಿದ. ಪೇಚಾಟವುಂಟುಮಾಡುವ ಸಾಧ್ಯತೆ ಅಥವಾ ಸಾಮರ್ಥ್ಯವುಳ್ಳ ವಿಚಾರಣೆಯೊಂದನ್ನು ನಿಭಾಯಿಸುವಾಗ ರಾಜಕೀಯ ಭಿನ್ನಮತೀಯರ ಹೆಸರು ಕೆಡಿಸಲು ಹಾಗೂ ತ್ವರಿತವಾಗಿ ಸೆರೆವಾಸಕ್ಕೆ ತಳ್ಳಲು ಈ ರೋಗನಿರ್ಣಯವನ್ನು ಬಳಸಲಾಯಿತು.[220] ಸೋವಿಯೆತ್ ಒಕ್ಕೂಟದ ಅಸಂಖ್ಯಾತ ಭಿನ್ನಮತೀಯರಿಂದಾಗಿ ಈ ಅಭ್ಯಾಸವು ಪಾಶ್ಚಿಮಾತ್ಯರ ಮುಂದೆ ತೆರೆದುಕೊಂಡಿತು, ಮತ್ತು 1977ರಲ್ಲಿ ವಿಶ್ವ ಮನೋವೈದ್ಯಕೀಯ ಸಂಘವು ಮನೋವೈದ್ಯಶಾಸ್ತ್ರದ ಆರನೇ ವಿಶ್ವ ಸಮ್ಮೇಳನದಲ್ಲಿ ಸೋವಿಯತ್ ಒಕ್ಕೂಟದ ಈ ಅಭ್ಯಾಸವನ್ನು ಖಂಡಿಸಿತು.[221] ಸ್ಕಿಜೋಫ್ರೇನಿಯಾದ ಒಂದು ಸುಪ್ತ ಸ್ವರೂಪವು ಪ್ರಚಲಿತ ಪದ್ಧತಿಯನ್ನು ಭಿನ್ನಮತೀಯರು ವಿರೋಧಿಸುವಂತೆ ಮಾಡಿತು ಎಂದು ಹೇಳುವ ತನ್ನ ವಾದವನ್ನು ಸಮರ್ಥಿಸುವ ಬದಲು, ಸ್ನೆಝ್ನೆವ್ಸ್ಕಿಯು ವಿದೇಶದಲ್ಲಿ ತಾನು ಗಳಿಸಿದ್ದ ತನ್ನ ಗೌರವಾರ್ಥ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ 1980ರಲ್ಲಿ ಪಶ್ಚಿಮದೊಂದಿಗಿನ ತನ್ನೆಲ್ಲಾ ಸಂಪರ್ಕಗಳನ್ನೂ ಕಡಿದುಕೊಂಡ.[222]
ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಿಕೊಂಡಿರುವ ರೋಗಿಗಳ ಆರೋಗ್ಯಲಾಭದಲ್ಲಿನ ಒಂದು ಪ್ರಮುಖ ತಡೆಗೋಡೆಯಾಗಿ ಸಾಮಾಜಿಕ ರೋಗಚಿಹ್ನೆಯನ್ನು ಗುರುತಿಸಲಾಗಿದೆ.[223] 1999ರ ಅಧ್ಯಯನವೊಂದರಿಂದ ಪಡೆದ ದೊಡ್ಡ, ಪ್ರಾತಿನಿಧಿಕ ಸಮೀಕ್ಷಾ ಮಾದರಿಯಲ್ಲಿ, ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಲ್ಪಟ್ಟಿರುವ ವ್ಯಕ್ತಿಗಳು ಇತರರಿಗೆ ಪ್ರತಿಯಾಗಿ ಹಿಂಸಾತ್ಮಕವಾದುದೇನನ್ನೂ ಕೈಗೊಳ್ಳುವ "ಸಾಧ್ಯತೆಗಳು ತುಂಬಾ ಹೆಚ್ಚು" ಎಂಬ ಅಭಿಪ್ರಾಯವನ್ನು 12.8%ನಷ್ಟು ಅಮೆರಿಕನ್ನರು ವ್ಯಕ್ತಪಡಿಸಿದ್ದರೆ, ತಾವು "ಹೆಚ್ಚೂಕಮ್ಮಿ ಅದೇ ರೀತಿಯಲ್ಲಿ" ಇರುವುದಾಗಿ 48.1%ನಷ್ಟು ಮಂದಿ ಹೇಳಿದ್ದರು. ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಿಕೊಂಡಿರುವ ಜನರು ತಮ್ಮ ಚಿಕಿತ್ಸೆಗೆ ಸಂಬಂಧಿಸಿದಂತೆ ತೀರ್ಮಾನವನ್ನು ಕೈಗೊಳ್ಳುವಲ್ಲಿ ಒಂದೋ "ಅಷ್ಟೇನೂ ಸಮರ್ಥರಾಗಿರಲಿಲ್ಲ" ಇಲ್ಲವೇ "ಸಮರ್ಥರೇ ಆಗಿರಲಿಲ್ಲ" ಎಂದು 74%ಗಿಂತಲೂ ಹೆಚ್ಚಿನ ಮಂದಿ ಹೇಳಿದ್ದರೆ, ಇದನ್ನೆ ಹಣದ ನಿರ್ವಹಣೆಗೆ ಸಂಬಂಧಿಸಿದ ತೀರ್ಮಾನಗಳಿಗೆ 70.2%ನಷ್ಟು ಮಂದಿ ಅನ್ವಯಿಸಿದ್ದರು.[224]
ಬುದ್ಧಿವಿಕಲ್ಪದೊಂದಿಗಿನ ವ್ಯಕ್ತಿಗಳನ್ನು ಹಿಂಸಾತ್ಮಕ ವ್ಯಕ್ತಿಗಳೆಂಬಂತೆ ಗ್ರಹಿಸುವಿಕೆಯು, 1950ರ ದಶಕದಿಂದಲೂ ಹರಡುವಿಕೆಯಲ್ಲಿ ದುಪ್ಪಟ್ಟು ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ ಎಂದು ಒಂದು ಪರ್ಯಾಯ-ವಿಶ್ಲೇಷಣೆಯು ಅಭಿಪ್ರಾಯಪಟ್ಟಿದೆ.[225] ರೋಗಚಿಹ್ನೆಯನ್ನು ತಗ್ಗಿಸುವ ದೃಷ್ಟಿಯಿಂದ,[226] 2002ರಲ್ಲಿ ಜಪಾನಿನ ಮನೋವೈದ್ಯಶಾಸ್ತ್ರ ಮತ್ತು ನರವಿಜ್ಞಾನ ಶಾಸ್ತ್ರದ ಸಂಘವು ಸ್ಕಿಜೋಫ್ರೇನಿಯಾಕ್ಕಾಗಿರುವ ಪದವನ್ನು ಸೀಶಿನ್-ಬನ್ರೆಟ್ಸು-ಬ್ಯೋ ಎಂಬುದರಿಂದ 精神分裂病 (ಮನಸ್ಸಿನ-ಬಿರುಕು-ಕಾಯಿಲೆ) ಟೋಗೋ-ಶಿಟ್ಕೊ-ಶೊ ಎಂಬುದಕ್ಕೆ 統合失調症 (ಸಮನ್ವಯತೆಯ ಅಸ್ವಸ್ಥತೆ) ಬದಲಾಯಿಸಿತು. ಈ ಹೊಸ ಹೆಸರು ಜೈವಿಕ-ಮನಸ್ಸಾಮಾಜಿಕ ಮಾದರಿಯಿಂದ ಪ್ರೇರಣೆಯನ್ನು ಪಡೆದಿತ್ತು, ಮತ್ತು ಇದು ಪ್ರಕರಣಗಳ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಿತು. ಅಂದರೆ, ಮೂರು ವರ್ಷಗಳ ಅವಧಿಯಲ್ಲಿ ರೋಗನಿರ್ಣಯವು 36.7%ನಿಂದ 69.7%ನಷ್ಟಕ್ಕೆ ಏರಿರುವುದನ್ನು ಪ್ರಕರಣಗಳಲ್ಲಿನ ರೋಗಿಗಳಿಗೆ ತಿಳಿಸಲಾಯಿತು.[227]
ಎ ಬ್ಯೂಟಿಫುಲ್ ಮೈಂಡ್ ಎಂಬ ಪುಸ್ತಕ ಹಾಗೂ ಚಲನಚಿತ್ರವು ಜಾನ್ ಫೋರ್ಬ್ಸ್ ನ್ಯಾಶ್ ಎಂಬಾತನ ಜೀವನವನ್ನು ನಿರೂಪಿಸಿತು. ನ್ಯಾಶ್ ಓರ್ವ ನೊಬೆಲ್ ಪ್ರಶಸ್ತಿ-ವಿಜೇತ ಗಣಿತಶಾಸ್ತ್ರಜ್ಞನಾಗಿದ್ದು, ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಲ್ಪಟ್ಟಿದ್ದ. ದೇವ್ರಾಯ್ ಎಂಬ ಮರಾಠಿ ಭಾಷಾ ಚಲನಚಿತ್ರವು (ಅತುಲ್ ಕುಲಕರ್ಣಿ ಇದರ ಪ್ರಮುಖ ಪಾತ್ರದಲ್ಲಿದ್ದಾರೆ) ಸ್ಕಿಜೋಫ್ರೇನಿಯಾದೊಂದಿಗೆ ಗುರುತಿಸಿಕೊಂಡಿರುವ ರೋಗಿಯೊಬ್ಬನ ಕುರಿತಾದ ಚಿತ್ರಣವಾಗಿದೆ. ಪಶ್ಚಿಮ ಭಾರತದ ಹಿನ್ನೆಲೆಯಲ್ಲಿ ರೂಪಿಸಲ್ಪಟ್ಟಿರುವ ಈ ಚಿತ್ರವು, ರೋಗಿಯೊಬ್ಬನ ನಡವಳಿಕೆ, ಮನೋಧರ್ಮ, ಮತ್ತು ಹೋರಾಟದ ಜೊತೆಗೇ, ಅವನ ಪ್ರೀತಿಪಾತ್ರರ ಕುರಿತೂ ಚಿತ್ರಣವನ್ನು ನೀಡುತ್ತದೆ. ಕುಟುಂಬದ ಸದಸ್ಯರ ಕುರಿತಾಗಿ ಇತರ ವಸ್ತುನಿಷ್ಠ ಪುಸ್ತಕಗಳು ಸಂಬಂಧಿಗಳಿಂದ ಬರೆಯಲ್ಪಟ್ಟಿವೆ; ಆನ್ನೆ ಡೆವೆಸನ್ ಎಂಬ ಆಸ್ಟ್ರೇಲಿಯಾದ ಓರ್ವ ಪತ್ರಕರ್ತೆಯು ಸ್ಕಿಜೋಫ್ರೇನಿಯಾದೊಂದಿಗಿನ ತನ್ನ ಮಗನ ಹೋರಾಟದ ಕಥೆಯನ್ನು ನಂತರ ಚಲನಚಿತ್ರವಾದ ಟೆಲ್ ಮಿ ಐಯಾಮ್ ಹಿಯರ್ ,[228] ಎಂಬ ಕೃತಿಯಲ್ಲಿ ಹೇಳಿದ್ದಾಳೆ.
ಬಲ್ಗಾಕೋವ್ನ ದಿ ಮಾಸ್ಟರ್ ಅಂಡ್ ಮಾರ್ಗರಿಟಾ ದಲ್ಲಿ, ಬೆಲಿಯೋಝ್ನ ಮರಣದ ಕುರಿತು ಪ್ರೇತವು (ವೊಲ್ಯಾಂಡ್) ಹೇಳಿದ ಭವಿಷ್ಯವನ್ನು ಕೇಳಿಸಿಕೊಂಡ ನಂತರ ಇವಾನ್ ಬೆಝ್ಡೊಮ್ನಿಜ್ ಕವಿಯು ಆರೈಕೆ ಸಂಸ್ಥೆಯೊಂದಕ್ಕೆ ದಾಖಲಾಗುತ್ತಾನೆ ಮತ್ತು ಆತನಿಗೆ ಸ್ಕಿಜೋಫ್ರೇನಿಯಾ ಇರುವುದು ರೋಗನಿರ್ಣಯದಿಂದ ಗೊತ್ತಾಗುತ್ತದೆ. ಮಾರ್ಕ್ ವೊನ್ನೆಗಟ್ ಬರೆದ ದಿ ಈಡನ್ ಎಕ್ಸ್ಪ್ರೆಸ್ ಎಂಬ ಪುಸ್ತಕವು ಸ್ಕಿಜೋಫ್ರೇನಿಯಾದೊಂದಿಗಿನ ಆತನ ಹೋರಾಟ ಹಾಗೂ ಆತನ ಆರೋಗ್ಯಲಾಭದ ಪ್ರಯಾಣವನ್ನು ದಾಖಲಿಸುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.