ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿ, ಸುಧಾ ತಮ್ಮ ವೃತ್ತಿಪರ ಜೀವನವನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಆರಂಭಿಸಿದರು. ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಹಾಗೂ 'ಬಿಲ್ ಗೇಟ್ಸ್ ಪ್ರತಿಷ್ಠಾನ'ದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ. [1][2]
Quick Facts ಸುಧಾ ಮೂರ್ತಿ, ಜನನ ...
ಸುಧಾ ಮೂರ್ತಿ
ಜನನ
ಸುಧಾ ಕುಲಕರ್ಣಿ
ಧಾರವಾಡ ಜಿಲ್ಲೆಯ 'ಶಿಗ್ಗಾಂವ್' (ಈಗ ಹಾವೇರಿ ಜಿಲ್ಲೆಯಲ್ಲಿದೆ)
ರಾಷ್ಟ್ರೀಯತೆ
ಭಾರತೀಯ
ವಿದ್ಯಾಭ್ಯಾಸ
ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್ ಬಿ.ಇ.(ಎಲೆಕ್ಟ್ರಿಕಲ್) ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ (೧೯೭೪)
ಶಿಕ್ಷಣಸಂಸ್ಥೆ
ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರ
ಗಮನಾರ್ಹ ಕೆಲಸಗಳು
ನಾರಾಯಣ ಜೊತೆಗೂಡಿ ೧೯೮೧ ರಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪನೆ. ಇನ್ಫೋಸಿಸ್ ಫೌಂಡೇಷನ್’ ನೇತೃತ್ವ. ಲೇಖಕಿ
Close
ಇವರು ೧೯೫೦ರಲ್ಲಿ ಧಾರವಾಡ ಜಿಲ್ಲೆಯ 'ಶಿಗ್ಗಾಂವ್' (ಜಿಲ್ಲೆಯ) (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ೧೯೫೦ ರ ಆಗಸ್ಟ್ ೧೯, ರಂದು ಜನಿಸಿದರು.
ಜಯಶ್ರೀ ದೇಶಪಾಂಡೆಸುಧಾಮೂರ್ತಿಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.
ಸುಧಾ ಕುಲಕರ್ಣಿಯವರ ತಂದೆ, ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು, ಪ್ರಾಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ದಂಪತಿಗಳಿಗೆ ೪ ಜನ ಮಕ್ಕಳು. ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್' ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾ ಅವರ ಪ್ರಾಥಮಿಕ ಮಾಧ್ಯಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಅವರ ಹುಟ್ಟೂರಾದ ಹಾವೇರಿ ಜಿಲ್ಲೆಯ ಶಿಗ್ಗಾಂವ್ನಲ್ಲಿ ನಡೆಯಿತು. ೧೯೬೬ರಲ್ಲಿ ಹುಬ್ಬಳ್ಳಿಯ ನ್ಯೂ ಎಜ್ಯುಕೇಶನ್ ಸೊಸೈಟಿ ಯ ಗರ್ಲ್ಸ್ ಇಂಗ್ಲಿಷ್ ಸ್ಕೂಲ್ ನಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು.[3].
೧೯೭೨ರಲ್ಲಿ ಹುಬ್ಬಳ್ಳಿಯ ಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್ ನಲ್ಲಿ, ಇಲೆಕ್ಟ್ರಿಕಲ್ ಇಂಜನಿಯರಿಂಗ್ ನ ಎಲ್ಲ ಚತುರ್ಮಾಸಗಳಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.
೧೯೭೪ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸಾಯನ್ಸ್' ದಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.[4].
ಸುಧಾ ಮೂರ್ತಿ (ಆಗಿನ್ನೂ ಸುಧಾಕುಲಕರ್ಣಿ) ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು. ಆಬಳಿಕ ಇವರು ಪುಣೆಯ ವಾಲಚಂದ ಗ್ರೂಪ್ ಆಫ್ ಇಂಡಸ್ಟ್ರೀಜ್ದಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ನಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು.[5]
೧೯೯೬ರಲ್ಲಿ ತಮ್ಮ ಪತಿ ನಾರಾಯಣ ಮೂರ್ತಿಯವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸಿದರು.
ಸುಧಾ ಮೂರ್ತಿಯವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.