Remove ads
From Wikipedia, the free encyclopedia
ಲುಬ್ಧಕ ಎನ್ನುವುದು ದಕ್ಷಿಣಾಕಾಶದಲ್ಲಿರುವ ಮಹಾಶ್ವಾನ (ಕ್ಯಾನಿಸ್ ಮೇಜರ್) ನಕ್ಷತ್ರಪುಂಜಕ್ಕೆ ಸೇರಿದ ಪ್ರಥಮ ನಕ್ಷತ್ರ (ಸಿರಿಯಸ್; ಆಲ್ಫ ಕ್ಯಾನಿಸ್ ಮೆಜೋರಿಸ್). ವಿಷುವದಂಶ 6ಗಂ 45ಮಿ 8.917ಸೆ;[೧][೨] ಘಂಟಾವೃತ್ತಾಂಶ 160 41‘ 06" (ದಕ್ಷಿಣ). ಕಾಂತಿಮಾನ-1.42. ನಿರಪೇಕ್ಷ ಕಾಂತಿಮಾನ +1.43.[೩] AO ರೋಹಿತದರ್ಶಕೀಯ ಪ್ರರೂಪದ್ದು. ಸೂರ್ಯನಿಂದ 8.7 ಜ್ಯೋತಿರ್ವರ್ಷ ದೂರದಲ್ಲಿದೆ. ವ್ಯಾಸ ಸೂರ್ಯವ್ಯಾಸದ 2 ಪಟ್ಟು. ಸರಾಸರಿ ಉಷ್ಣತೆ 10,0000C. ಗೋಚರ ನಕ್ಷತ್ರಗಳ ಪೈಕಿ ಅತ್ಯಂತ ಪ್ರಕಾಶಮಾನ ನಕ್ಷತ್ರವಿದು. ಬರಿಯ ಕಣ್ಣಿಗೆ ಇದು ಒಂಟಿ ನಕ್ಷತ್ರದಂತೆ ಕಾಣುವುದಾದರೂ ವಾಸ್ತವವಾಗಿ ಇದೊಂದು ಯಮಳ ನಕ್ಷತ್ರ. ಇದನ್ನು ಪರಿಭ್ರಮಿಸುವ ಚಿಕ್ಕ ನಕ್ಷತ್ರದ (ಶ್ವೇತಕುಬ್ಜ, ಸಿರಿಯಸ್ B) ಪ್ರಕಾಶ ಲುಬ್ಧಕದ 1/10,000 ಪಾಲು ಮಾತ್ರ. ಸಂಗಾತಿಯ ಸಾಂದ್ರತೆ ನೀರಿನ ಸಾಂದ್ರತೆಯ 60,000ರಷ್ಟು. ಆಲ್ವಿನ್ ಗ್ರಾಹಮ್ ಕ್ಲಾರ್ಕ್ (1832-97) ಎಂಬಾತ ತನ್ನ 18.5" ವ್ಯಾಸದ ನೇತ್ರಮಸೂರವನ್ನು ಪರೀಕ್ಷಿಸುತ್ತಿದ್ದಾಗ ಲುಬ್ಧಕದ ಸಂಗಾತಿಯ ಇರವು ಪತ್ತೆಯಾಯಿತು (1862).[೪] ಇದಕ್ಕೆ ಮುಂಚೆಯೇ ಜರ್ಮನಿಯ ಖಗೋಳವಿಜ್ಞಾನಿ ಫ್ರೀಡ್ರಿಕ್ ವಿಲ್ಹೆಲ್ಮ್ ಬೆಸ್ಸೆಲ್ (1784-1846) ಮತ್ತು ಆವರ್ಸ್ ಎಂಬ ಮತ್ತೊಬ್ಬ ಖಗೋಳವಿಜ್ಞಾನಿ ಲುಬ್ಧಕದ ನೇರಚಲನೆಯಲ್ಲಿಯ ವೈಪರೀತ್ಯಗಳನ್ನು ಅಧ್ಯಯನ ಮಾಡುವಾಗ ಇದರ ಸಂಗಾತಿಯ ಇರವಿನ ಬಗ್ಗೆ ಮುನ್ನುಡಿದಿದ್ದರು. ಗಾತ್ರ ಭೂಮಿಯ ಗಾತ್ರದ 3 ಪಟ್ಟು. ರಾಶಿ ಭೂರಾಶಿಯ 50,000 ಪಟ್ಟು. ಸಾಂದ್ರತೆ ಸೂರ್ಯನ ಸಾಂದ್ರತೆಯ 36,000ರಷ್ಟು.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.