ಕನ್ನಡ ಚಲನಚಿತ್ರ From Wikipedia, the free encyclopedia
ರಾಜ ನನ್ನ ರಾಜ 1976 ರ ಕನ್ನಡ-ಭಾಷೆಯ ರೊಮ್ಯಾಂಟಿಕ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ಸಲೀಂ–ಜಾವೇದ್ ಬರೆದಿದ್ದಾರೆ. [1] ಮತ್ತು ಚಿತ್ರಕಥೆಯನ್ನು ರಚಿಸಿದ್ದು ಚಿ. ಉದಯಶಂಕರ್. ಚಲನಚಿತ್ರವನ್ನು ಎ. ವಿ. ಶೇಷಗಿರಿ ರಾವ್ ನಿರ್ದೇಶಿಸಿ, ಮತ್ತು ಎ.ಎಲ್. ಅಬ್ಬಯ್ಯ ನಾಯ್ಡು ನಿರ್ಮಿಸಿದ್ದಾರೆ. ರಾಜ್ ಕುಮಾರ್, ಆರತಿ ಮತ್ತು ಚಂದ್ರಶೇಖರ್_(ನಟ) ಚಿತ್ರದಲ್ಲಿ ನಟಿಸಿದ್ದಾರೆ.[2] ಜಿ.ಕೆ.ವೆಂಕಟೇಶ್ ಹಾಡುಗಳನ್ನು ಸಂಯೋಜಿಸಿದ್ದು ಅತ್ಯುತ್ತಮವಾಗಿ ಸ್ವೀಕರಿಸಲ್ಪಟ್ಟವು ಮತ್ತು ಈ ಗೀತೆಗಳು ಎವರ್-ಗ್ರೀನ್ ಹಿಟ್ ಎಂದು ಪರಿಗಣಿಸಲ್ಪಟ್ಟವು.[3]
ರಾಜ ನನ್ನ ರಾಜ | |
---|---|
ರಾಜ ನನ್ನ ರಾಜ | |
ನಿರ್ದೇಶನ | ಎ.ವಿ.ಶೇಷಗಿರರಾವ್ |
ನಿರ್ಮಾಪಕ | ಎ.ಎಲ್.ಅಬ್ಬಯ್ಯ ನಾಯ್ಡು |
ಚಿತ್ರಕಥೆ | ಚಿ.ಉದಯ ಶಂಕರ್ |
ಕಥೆ | ಸಲೀಂ-ಜಾವೇದ್ |
ಸಂಭಾಷಣೆ | ಚಿ.ಉದಯ ಶಂಕರ್ |
ಪಾತ್ರವರ್ಗ | ರಾಜಕುಮಾರ್ ಆರತಿ ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ), ಕೆ.ಎಸ್.ಅಶ್ವಥ್, ಟಿ.ಎನ್.ಬಾಲಕೃಷ್ಣ, ತೂಗುದೀಪ ಶ್ರೀನಿವಾಸ್, ರಾಜಾನಂದ್, ಭಟ್ಟಿ ಮಹದೇವಪ್ಪ,
ರಾಮಚಂದ್ರಶಾಸ್ತ್ರಿ, ಸಬಿತದೇವಿ, ಜಯಶ್ರೀ, ಬಿ.ಜಯ ಸಂಪತ್ - ಗೌರವ ನಟ , ಎಂ.ಪಿ.ಶಂಕರ್ - ಗೌರವ ನಟ |
ಸಂಗೀತ | ಜಿ.ಕೆ.ವೆಂಕಟೇಶ್ |
ಛಾಯಾಗ್ರಹಣ | ಆರ್.ಚಿಟ್ಟಿಬಾಬು |
ಸಂಕಲನ | ಪಿ.ಭಕ್ತವತ್ಸಲಂ |
ಬಿಡುಗಡೆಯಾಗಿದ್ದು | ೧೯೭೬ |
ನೃತ್ಯ | ಉಡುಪಿ ಬಿ.ಜಯರಾಂ |
ಸಾಹಸ | ಶಿವಯ್ಯ |
ಚಿತ್ರ ನಿರ್ಮಾಣ ಸಂಸ್ಥೆ | ಮಧು ಆರ್ಟ್ಸ್ ಫಿಲಂಸ್ |
ಸಾಹಿತ್ಯ | ಚಿ.ಉದಯ ಶಂಕರ್ |
ಹಿನ್ನೆಲೆ ಗಾಯನ | ಪಿ.ಬಿ.ಶ್ರೀನಿವಾಸ್ ,ರಾಜ್ ಕುಮಾರ್, ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ |
ಚಲನಚಿತ್ರವು ಪುನರ್ಜನ್ಮವನ್ನು ಮುಖ್ಯ ವಿಷಯವಾಗಿ ಹೊಂದಿರುತ್ತದೆ, ನಾಯಕ ನಟ ರಾಜ್ಕುಮಾರ್ ದ್ವಿಪಾತ್ರದಲ್ಲಿ ಪ್ರೇಮದ ನಾಟಕ ಮಾಡುತ್ತಾರೆ. ಚಿತ್ರವು ಬಿಡುಗಡೆಯಾದ ನಂತರ ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಯಶಸ್ಸನ್ನು ಕಂಡಿತು.[4] weekend-with-ramesh-ಒಂದು ಸಂಚಿಕೆಯಲ್ಲಿ , ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ಹೇಳಿದ್ದರು: ಇಳಯರಾಜ ಅವರು ಜಿ.ಕೆ.ವೆಂಕಟೇಶ್ ರವರ ಈ ಚಲನಚಿತ್ರಕ್ಕೆ ಗಿಟಾರ್ ವಾದಕರಾಗಿದ್ದರೆಂದು.[5] ಈ ಚಲನಚಿತ್ರವು ಕನ್ನಡ ಚಲನಚಿತ್ರಗಳಲ್ಲಿ ಸೌಮ್ಯವಾದ ಆಂಟಿಹೀರೋ ಪಾತ್ರವನ್ನು ಜನಪ್ರಿಯಗೊಳಿಸಿತು.
ಚಲನಚಿತ್ರವು 27 ಮೇ 1976 ರಂದು ಬಿಡುಗಡೆಯಾಯಿತು.[6] ಇದು 25 ವಾರಗಳ ನಾಟಕ ಪ್ರದರ್ಶನವನ್ನು ಕಂಡಿತ್ತು.[7] ಈ ಚಲನಚಿತ್ರದ ಮುಖ್ಯ ಕಥಾವಸ್ತು ಮತ್ತು ಮಗಧೀರ ನಡುವೆ ಹೋಲಿಕೆಗಳನ್ನು ಗುರುತಿಸಲಾಗಿದೆ.[8]
ರಾಜ ಎಂಬ ಯುವಕ ನಾಯಕಿ ಗೀತಾಳನ್ನು ಕಂಡಾಗಲೆಲ್ಲ ನೀನು ನನ್ನ ಹಿಂದಿನ ಜನ್ಮದ ಪ್ರೇಯಸಿ ಗಂಗಾ ಅಲ್ಲವೆ, ನೆನಪಿಸಿಕೋ ಎಂದು ಆಗಾಗ ಬಂದು ಪೀಡಿಸುತ್ತಿರುತ್ತಾನೆ. ಆಕೆಗೆ ಏನು ಮಾಡಿದರೂ ಇವನ ಮಾತುಗಳಲ್ಲಿ ವಿಶ್ವಾಸ ಬರದೇ ತಲೆ ಕೆಟ್ಟಂತಾಗುತ್ತದೆ. ಆಕೆಯ ಮದುವೆಯಾಗಬೇಕಿದ್ದ ವರ ಚಂದ್ರಶೇಖರ ಸಹ ಈ ಬಗ್ಗೆ ಸಿಟ್ಟಿಗೇಳುತ್ತಾನೆ. ರಾಜ ತನ್ನ ಮಾತನ್ನು ಸಾಬೀತು ಮಾಡಲು ಹಳೆಯ ಕಾಲದ ಅರಮನೆಗೆ ಕರೆದೊಯ್ದು ಆಗ ತಾನು ಮತ್ತು ಗಂಗಾ , ಈಗಿನ ಗೀತ - ಪ್ರೇಮಿಗಳಾಗಿದ್ದನ್ನು ಸಹಿಸದೇ ಯಾರೋ ಕೊಲೆ ಮಾಡಿದ್ದರೆಂದೂ, ಈ ಜನ್ಮದಲ್ಲಿ ನಮ್ಮನ್ನು ಮತ್ತೆ ಬೇರ್ಪಡಿಸಲಾಗದು ಎಂದು ಕಥೆ ಹೇಳುತ್ತಾನೆ.
ಆದರೆ ಮುಂದಿನ ಕಥೆ ಅಷ್ಟು ಸರಳವಲ್ಲ, ಎಲ್ಲಿಯೋ ಏನೋ ಖಳನಾಯಕರ ಪಾತ್ರವಿದೆ, ಪಿತೂರಿಯಿದೆ, ಆದರೆ ಈ ರಾಜ ಒಳ್ಳೆಯವನೆ, ಕೆಟ್ಟವನೆ ಎಂಬುದೇ ಮಿಕ್ಕ ಕಥೆ
ಜಿ.ಕೆ.ವೆಂಕಟೇಶ್ ಧ್ವನಿಮುದ್ರಿಕೆಯನ್ನು ರಚಿಸಿದ್ದಾರೆ ಮತ್ತು ಸಾಹಿತ್ಯವನ್ನು ಚಿ. ಉದಯಶಂಕರ್. ಆಲ್ಬಮ್ ಐದು ಚಿತ್ರಗೀತೆಗಳನ್ನು ಒಳಗೊಂಡಿದೆ.[9] ತನುವು ಮನವು ಹಾಡು ಮತ್ತೊಂದು ವೀಡಿಯೊ ಆವೃತ್ತಿಯನ್ನು ಹೊಂದಿದ್ದು ಅದನ್ನು ಚಲನಚಿತ್ರದಿಂದ ಅಳಿಸಲಾಗಿದೆ. ಆದಾಗ್ಯೂ, ಆವೃತ್ತಿಯನ್ನು ಕಾಶಿನಾಥ್ ಅವರ 1989 ರ ಚಲನಚಿತ್ರ ಪ್ರೇಯಸಿ ಪ್ರೀತಿಸು (12 ನೇ ನಿಮಿಷದಲ್ಲಿ) ನಲ್ಲಿ ಬಳಸಲಾಗಿದೆ.[10]
Tracklist | ||||
---|---|---|---|---|
ಸಂ. | ಹಾಡು | ಸಾಹಿತ್ಯ | Singer(s) | ಸಮಯ |
1. | "ನೂರು ಕಣ್ಣು ಸಾಲದು" | ಚಿ.ಉದಯಶಂಕರ್ | ಪಿ.ಬಿ.ಶ್ರೀನಿವಾಸ್, ಎಸ್..ಪಿ.ಬಾಲಸುಬ್ರಹ್ಮಣ್ಯಂ | 4:33 |
2. | "ನಿನದೆ ನೆನಪು" | ಚಿ.ಉದಯಶಂಕರ್ | ಪಿ.ಬಿ.ಶ್ರೀನಿವಾಸ್ | 3:38 |
3. | "ರಾಜ ನನ್ನ ರಾಜ (Title)" | ಚಿ.ಉದಯಶಂಕರ್ | Instrumental | 2:28 |
4. | "ತನುವು ಮನವು" | ಚಿ.ಉದಯಶಂಕರ್ | ರಾಜ್ಕುಮಾರ್, ಎಸ್. ಜಾನಕಿ | 4:25 |
5. | "ಕಲ್ಲೇಟಿಗಿಂತಾ ನಿನ್ನ" | ಚಿ.ಉದಯಶಂಕರ್ | ರಾಜ್ಕುಮಾರ್, ಎಸ್. ಜಾನಕಿ | 4:22 |
ಒಟ್ಟು ಸಮಯ: | 19:26 |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.