From Wikipedia, the free encyclopedia
ಇಳಯರಾಜಾ(ಜನನ:ಜೂನ್ ೨, ೧೯೪೩) ಭಾರತೀಯ ಚಲನಚಿತ್ರ ಸಂಗೀತಲೋಕದಲ್ಲಿ ಒಂದು ದೊಡ್ಡ ಹೆಸರು. ಅವರ ಮೂಲ ಹೆಸರು ಜ್ಞಾನದೇಶಿಕನ್. ಚಲನಚಿತ್ರ ಸಂಯೋಜಕ, ಗಾಯಕ, ಗೀತಸಾಹಿತಿಯಾಗಿ ಅವರು ಪ್ರಸಿದ್ಧರಾಗಿದ್ದಾರೆ. ಇವರು ರಾಯಲ್ ಫಿಲ್ಹಾರ್ಮಾನಿಕ್ ಆರ್ಕೆಸ್ಟ್ರಾಗಾಗಿ ಒಂದು ಸ್ವರಮೇಳವನ್ನು ಸಂಯೋಜಿಸಿದ ಭಾರತದ ಮೊದಲ ಸಂಗೀತಗಾರರು. ಅವರು ಲಂಡನ್ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ನ ಸ್ವರ್ಣ ಪದಕ ವಿಜೇತರು. ಶ್ರೀಯುತರು ತಮಿಳು, ಕನ್ನಡ, ಮಲಯಾಳಂ, ತೆಲುಗು, ಹಿಂದಿ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಸಂಗೀತ ಸಂಯೋಜನೆ, ಗಾಯನ ಮತ್ತು ಗೀತರಚನೆ ಮಾಡಿದ್ದಾರೆ.
ಚಿತ್ರಸಂಗೀತ ಲೋಕದ ಮಹಾನ್ ಸಾಧಕರಾದ ಇಳಯರಾಜಾ ಅವರು ಜೂನ್ ೨, ೧೯೪೩ರ ವರ್ಷದಲ್ಲಿ ದಲಿತ ಕುಟುಂಬವೊಂದರಲ್ಲಿ ಹುಟ್ಟಿದರು. ಪ್ರಾರಂಭದ ದಿನಗಳಲ್ಲಿ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರಾದ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿ ಬೆಳೆದ ಇಳಯರಾಜಾ, ಇಂದು ಚಲನಚಿತ್ರರಂಗದ ಮೇರು ಪರ್ವತವೇ ಆಗಿದ್ದಾರೆ.
ಇಳಯರಾಜಾ ಈ ಇಳೆಯ ಸಂಗೀತ ಲೋಕದ ರಾಜರೆಂದೇ ಖ್ಯಾತಿ ಗಳಿಸಿದ್ದಾರೆ.. ಅವರ ಪ್ರಸಿದ್ಧ ಚಿತ್ರಗಳನ್ನು ಹೇಳುತ್ತಾ ಹೋದರೂ ಕೂಡಾ ಹಲವು ಪುಟಗಳು ಬೇಕಾದೀತು. ಅವರಿಗೆ ರಾಷ್ಟ್ರ ಪ್ರಶಸ್ತಿ ತಂದ 'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಚಿತ್ರಗಳ ಆಚೆಗೆ ಕೂಡಾ ಅವರು ಸಂಗೀತ ಸಂಯೋಜಿಸಿರುವ ಸುಮಾರು ಸಾವಿರ ಚಿತ್ರಗಳು ಹತ್ತು ಸಾವಿರಕ್ಕೂ ಹೆಚ್ಚು ಗೀತೆಗಳಲ್ಲಿ ಸಂಗೀತ ಲೋಕದ ಮುತ್ತುರತ್ನಗಳು ವಿಶಿಷ್ಟವಾಗಿ ಅರಳಿವೆ. ಗೀತ ರಚನೆಕಾರರಾಗಿ ಮತ್ತು ಗಾಯಕರಾಗಿ ಕೂಡಾ ಅವರು ಅಪ್ರತಿಮರು.
ಕನ್ನಡದಲ್ಲಿ ಭರ್ಜರಿ ಬೇಟೆ, ನನ್ನ ನೀ ಗೆಲ್ಲಲಾರೆ, ಗೀತಾ, ಜನ್ಮಜನ್ಮದ ಅನುಬಂಧ, ನಮ್ಮೂರ ಮಂದಾರ ಹೂವೇ, ಪಲ್ಲವಿ ಅನುಪಲ್ಲವಿ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು. ಕನ್ನಡದಲ್ಲಿ ಸುಮಾರು ೨೩ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ.
ಹಿಂದಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಂದ 'ಚೀನೀ ಕಂ', 'ಪಾ' ವರೆಗಿನ ಹಲವು ಚಿತ್ರಗಳಲ್ಲಿ ಕೂಡಾ ಅವರ ಗಾನ ಗಂಗೆ ಹರಿದಿದೆ.
ಇಳಯರಾಜಾ ಅವರಿಗೆ ರಾಷ್ಟ್ರೀಯ ಮಟ್ಟದ ಚಲನಚಿತ್ರ ಪ್ರಶಸ್ತಿಗಳೇ ಅಲ್ಲದೆ, ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರ ಸಹಾ ಸಂದಿದೆ.
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.