ಮಲಗುವ ಕೋಣೆಯು (ಶಯನಗೃಹ) ಜನರು ಮಲಗುವ ಮನೆ, ದೊಡ್ಡಮನೆ, ದುರ್ಗ, ಅರಮನೆ, ಹೋಟೆಲ್, ಶಯನ ಮಂದಿರ, ಅಪಾರ್ಟ್‌ಮಂಟ್, ಕಾಂಡಮಿನಿಯಮ್, ಡ್ಯೂಪ್ಲೆಕ್ಸ್ ಅಥವಾ ಟೌನ್‍ಹೌಸ್‍ನಲ್ಲಿನ ಕೋಣೆ. ಒಂದು ಸಾಮಾನ್ಯ ಪಾಶ್ಚಾತ್ಯ ಮಲಗುವ ಕೋಣೆಯು ಪೀಠೋಪಕರಣಗಳಾಗಿ ಒಂದು ಅಥವಾ ಎರಡು ಹಾಸಿಗೆಗಳು (ಶಿಶುವಿಗಾಗಿ ತೊಟ್ಟಿಲು, ದಟ್ಟಗಾಲಿಡುವ ಮಗು, ಮಗು, ಹದಿಹರೆಯದವರಿಗಾಗಿ ಚಿಕ್ಕ ಹಾಸಿಗೆ, ಅಥವಾಅ ವಯಸ್ಕರಿಗೆ ದೊಡ್ಡ ಹಾಸಿಗೆ), ಬಟ್ಟೆಗಳ ಬೀರು, ಮತ್ತು ಹಾಸಿಗೆ ಪಕ್ಕದ ಮೇಜು ಹಾಗೂ ಅಲಂಕರಣ ಮೇಜು (ಇವೆರಡೂ ಸಾಮಾನ್ಯವಾಗಿ ಸೆಳೆಖಾನೆಗಳನ್ನು ಹೊಂದಿರುತ್ತವೆ). ಮಲಗುವ ಕೋಣೆಗಳು ಸಾಮಾನ್ಯವಾಗಿ ಮನೆಯ ನೆಲಮಟ್ಟದ ಮೇಲಿನ ಮಹಡಿಗಳಲ್ಲಿ ಒಂದರಲ್ಲಿ ಇರುತ್ತವೆ.

Thumb
ಮಲಗುವ ಕೋಣೆ

ದೊಡ್ಡ ವಿಕ್ಟೋರಿಯನ್ ಮನೆಗಳಲ್ಲಿ ಮಲಗುವ ಕೋಣೆಯಿಂದ ಮನೆಯ ಯಜಮಾನಿಗೆ ಬೂಡ್ವಾರ್‌ಗೆ ಮತ್ತು ಯಜಮಾನನಿಗೆ ಬಟ್ಟೆ ಬದಲಿಸುವ ಕೋಣೆಗೆ ಪ್ರವೇಶಿಸಲು ಸಾಧ್ಯವಾಗಿದ್ದುದು ಸಾಮಾನ್ಯವಾಗಿತ್ತು.[1] ಕೆಲವು ಮನೆಗಳಲ್ಲಿ ಮೇಲಟ್ಟದ ಮಲಗುವ ಕೋಣೆಗಳು ಇರುತ್ತವೆ; ಅವುಗಳನ್ನು ಹೊರಗಿನ ಗಾಳಿಯಿಂದ ಕೇವಲ ಚಾವಣಿಯು ಬೇರ್ಪಡಿಸುವುದರಿಂದ, ಅವುಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಬಹಳ ತಂಪಗಿದ್ದು ಬೇಸಿಗೆಯಲ್ಲಿ ಬಹಳ ಬಿಸಿಯಾಗಿರಬಹುದು.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.