Remove ads
From Wikipedia, the free encyclopedia
ಪೆರಗ್ವೆ, (ಅಧಿಕೃತವಾಗಿ ಪರಾಗ್ವೆ ಗಣರಾಜ್ಯ),ದಕ್ಷಿಣ ಅಮೆರಿಕದ ಸರಿಸುಮಾರು ಮಧ್ಯಭಾಗದಲ್ಲಿರುವ ಒಂದು ರಾಷ್ಟ್ರ. ಪೆರಗ್ವೆ ನದಿಯ ಎರಡೂ ದಂಡೆಗಳ ಮೇಲಿರುವ ಇದು ದಕ್ಷಿಣ ಮತ್ತು ನೈರುತ್ಯಗಳಲ್ಲಿ ಅರ್ಜೆಂಟೀನವನ್ನು, ಈಶಾನ್ಯದಲ್ಲಿ ಬ್ರೆಜಿಲ್ ದೇಶವನ್ನು ಮತ್ತು ವಾಯವ್ಯದಲ್ಲಿ ಬೊಲಿವಿಯ ದೇಶಗಳನ್ನು ಹೊಂದಿ ದಕ್ಷಿಣ ಅಮೆರಿಕ ಖಂಡದ ಹೃದಯ ಭಾಗದಲ್ಲಿದೆ. ಗ್ವರಾನಿ ಭಾಷೆಯಲ್ಲಿ ಇದರ ಅರ್ಥ "ದೊಡ್ಡ ನದಿಯಿಂದ" ಎಂದು. ಪರಾನ ನದಿಯೇ ಈ ದೊಡ್ಡ ನದಿ.
ಪೆರಗ್ವೆ ಗಣರಾಜ್ಯ República del Paraguay Tetã Paraguái | |
---|---|
Motto: ಸ್ಪಾನಿಷ್: Paz y justicia ("ಶಾಂತಿ ಮತ್ತು ನ್ಯಾಯ") | |
Anthem: "ಪರಾಗ್ವೆಯೋಸ್ ರಿಪಬ್ಲಿಕ ಒ ಮ್ಯುರ್ಟೆ" | |
Capital | ಅಸೂನ್‌ಸಿಯಾನ್ |
Largest city | ರಾಜಧಾನಿ |
Official languages | ಸ್ಪಾನಿಷ್, ಗ್ವರಾನಿ |
Government | ಸಾಂವಿಧಾನಿಕ ಗಣರಾಜ್ಯ |
• ರಾಷ್ಟ್ರಪತಿ | ನಿಕಾನೊರ್ ಡ್ವಾರ್ಟೆ ಫ್ರುಟೊಸ್ |
• ಉಪರಾಷ್ಟ್ರಪತಿ | ಲುಯಿಸ್ ಕ್ಯಾಸ್ಟಿಗ್ಲಿಯೋನಿ ಯೊರಿಯ |
ಸ್ವಾತಂತ್ರ್ಯ ಸ್ಪೇನ್ ಇಂದ | |
• ಘೋಷಿತ | ಮೇ ೧೪, ೧೮೧೧ |
• Water (%) | 2.3% |
Population | |
• ಜುಲೈ ೨೦೦೫ estimate | 6,158,000 (101st) |
GDP (PPP) | ೨೦೦೫ estimate |
• Total | $28.342 billion (96th) |
• Per capita | $4,555 (107th) |
HDI (2003) | 0.755 high · 88th |
Currency | ಗ್ವರಾನಿ (PYG) |
Time zone | UTC-4 |
• Summer (DST) | UTC-3 |
Calling code | 595 |
Internet TLD | .py |
೧೬ನೇ ಶತಮಾನದಲ್ಲಿ ಬಂದಿಳಿದ ಮೊದಲ ಯೂರೋಪಿಯನ್ನರು ಆಗಸ್ಟ್ ೧೫, ೧೫೩೭ರಂದು ಅಸೂನ್‌ಸಿಯಾನ್ ನಗರವನ್ನು ಹುಟ್ಟುಹಾಕಿದರು. ನಂತರ ಇದು ಅಮೆರಿಕದ ಸ್ಪಾನಿಷ್ ವಸಾಹತುಗಳ ಕೇಂದ್ರವಾಯಿತು. ಪ್ರಾಂತೀಯ ಸ್ಪಾನಿಷ್ ನಾಯಕರನ್ನು ಸೋಲಿಸಿ ಮೇ ೧೪, ೧೮೧೧ರಂದು ಸ್ವಾತಂತ್ಯ ಘೋಷಿಸಿಕೊಂಡರು.
ಪೆರಗ್ವೆ ಅಧ್ಯಕ್ಷೀಯ ಮಾದರಿಯ ಗಣರಾಜ್ಯ ಪ್ರಜಾಪ್ರಭುತ್ವ. ದೇಶದಲ್ಲಿ ಬಹುಪಕ್ಷೀಯ ವ್ಯವಸ್ಥೆಯಿದೆ. ಕಾರ್ಯಾಂಗದ ಅಧಿಕಾರವನ್ನು ಸರಕಾರ, ಶಾಸಕಾಂಗದ ಅಧಿಕಾರವನ್ನು ಸರಕಾರ ಮತ್ತು ರಾಷ್ಟ್ರೀಯ ಸಂಸತ್ತು ನಿರ್ವಹಿಸುತ್ತವೆ. ನ್ಯಾಯಾಂಗವು ಇವೆರಡಕ್ಕಿಂತ ಪ್ರತ್ಯೇಕವಾಗಿದ್ದು, ಸ್ವತಂತ್ರವಾಗಿದೆ.
ದೇಶದ ಆಗ್ನೇಯ ಗಡಿಯಲ್ಲಿ ಪರಾನ ನದಿಯಿದ್ದು ಇದರ ಮೇಲೆ ಕಟ್ಟಿರುವ ಇಟೈಪು ಅಣೆಕಟ್ಟು ಬ್ರೆಜಿಲ್ ಜೊತೆಗಿನ ಗಡಿಯಲ್ಲಿದೆ. ಇದು ಪ್ರಪಂಚದ ಅತಿ ದೊಡ್ಡ ಜಲವಿದ್ಯುತ್ ಸ್ಥಾವರವಾಗಿದೆ.
ಪೆರಗ್ವೆ ದೇಶ ಮಾರುಕಟ್ಟೆ ಆಧರಿತ ಅರ್ಥವ್ಯವಸ್ಥೆಯಾಗಿದ್ದು ಹೆಚ್ಚಿನ ಜನರು ಕೃಷಿ ಆಧರಿತ ಜೀವನ ನಡೆಸುತ್ತಾರೆ. ಇನ್ನೊಂದು ಪ್ರಧಾನ ಉದ್ಯಮವೆಂದರೆ ಹೊರದೇಶಗಳಿಂದ ಆಮದು ಮಾಡಿಕೊಂಡ ಸಾಮಾನುಗಳನ್ನು ದಕ್ಷಿಣ ಅಮೇರಿಕದ ಇತರ ದೇಶಗಳಿಗೆ ರಫ್ತು ಮಾಡುವುದು. ಪೆರಗ್ವೆಯ ಅರ್ಥವ್ಯವಸ್ಥೆ ಬ್ರೆಜಿಲ್ ದೇಶದ ಮೇಲೆ ಆಧರಿತವಾಗಿದೆ. ಇದಕ್ಕೆ ಕಾರಣ ಈ ದೇಶದ ಮೂಲಕ ಹಾದು ಹೋಗುವ ಕಾಲುವೆಯು ಪೆರಗ್ವೆ ದೇಶವನ್ನು ಬ್ರೆಜಿಲ್ ಕರಾವಳಿಯ ಬಂದರಿಗೆ ಸಂಪರ್ಕ ಮಾಡುತ್ತದೆ.
ದೇಶದ ಶೇ. ೯೫ರಷ್ಟು ಜನ ಸ್ಪಾನಿಷ್ ಮತ್ತು ಮೂಲಜನರ ಮಿಶ್ರತಳಿ. ಮೂಲ ಗ್ವರಾನಿ ಭಾಷೆಯನ್ನು ಶೇ. ೯೪ರಷ್ಟು ಜನ ಮಾತನಾಡುತ್ತಾರೆ. ಶೇ. ೭೫ರಷ್ಟು ಜನ ಸ್ಪಾನಿಷ್ ಭಾಷೆಯನ್ನು ಮಾತನಾಡಬಲ್ಲರು. ಇವೆರಡೂ ಅಧಿಕೃತ ಭಾಷೆಗಳು.
ದೇಶದಲ್ಲಿ ಕ್ಯಾಥೊಲಿಕ್ ಧರ್ಮದ ಬಹುಮತವಿದೆ.
ದಕ್ಷಿಣ ಅಮೇರಿಕ ಖಂಡದ ದೇಶಗಳು | |
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ |
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.