From Wikipedia, the free encyclopedia
ನೆಲ್ಲಿ | |
---|---|
Plant | |
Fruit | |
Scientific classification | |
ಸಾಮ್ರಾಜ್ಯ: | Plantae |
(ಶ್ರೇಣಿಯಿಲ್ಲದ್ದು): | Angiosperms |
(ಶ್ರೇಣಿಯಿಲ್ಲದ್ದು): | Eudicots |
(ಶ್ರೇಣಿಯಿಲ್ಲದ್ದು): | Rosids |
ಗಣ: | Malpighiales |
ಕುಟುಂಬ: | Phyllanthaceae |
ಪಂಗಡ: | Phyllantheae |
ಉಪಪಂಗಡ: | Flueggeinae |
ಕುಲ: | Phyllanthus |
ಪ್ರಜಾತಿ: | P. emblica |
Binomial name | |
Phyllanthus emblica L.[1] | |
Synonyms[2] | |
|
ಮಧ್ಯಮ ಗಾತ್ರದ, ಚಳಿಗಾಲದಲ್ಲಿ ಎಲೆಗಳು ಉದುರುವ ಚಿಕ್ಕ ಚಿಕ್ಕ ಎಲೆಗಳುಳ್ಳ ಮರ. ತೊಗಟೆಯು ಬಿಳಿ ಮಾಸು ಹಸಿರು ಹಳದಿ ಬಣ್ಣದ ಸಣ್ಣ ಸಣ್ಣ ಹೂಗಳು. ಕಾಯಿಗಳು ಗುಂಡಗೆ ಹಸಿರಾಗಿರುವುದು. ಬಲಿತ ಹಣ್ಣು ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ಮೇಲೆ ಸ್ಪಷ್ಟವಾದ ಕಾಣುವ ಆರು ರೇಖೆಗಳಿರುತ್ತದೆ.ಒಣಗಿದ ಕಾಯಿ ಕಪ್ಪಾಗಿದ್ದು, ಒಗರು ಹುಳಿಯಾಗಿರುತ್ತದೆ. ಇದನ್ನು ನೆಲ್ಲಿಚೆಟ್ಟು ಎನ್ನುತ್ತಾರೆ.. ಇದರಲ್ಲಿ ವಿಟಮಿನ್ Archived 2013-09-20 ವೇಬ್ಯಾಕ್ ಮೆಷಿನ್ ನಲ್ಲಿ. 'ಸಿ' ಹೇರಳವಾಗಿ ಸಿಗುತ್ತದೆ.
ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿ ಸಮ ತೂಕ ರಾತ್ರಿ ನೀರಿನಲ್ಲಿ ನೆನೆ ಹಾಕುವುದು. ಬೆಳಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.[3]
ಅಜೀರ್ಣವಾಗಿದ್ದರೆ ತಕ್ಕ ಉಪಚಾರ ಮಾಡುವುದು. ಒಂದು ಟೀ ಚಮಚ ನೆಲ್ಲಿಕಾಯಿ ರಸ ಅರ್ಧ ನೆಲ್ಲಿಚೆಟ್ಟಿನ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು ಮತ್ತು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಸುವಿನ ಹಾಲನ್ನು ಕುಡಿಯುವುದು.
ದಪ್ಪವಾಗಿರುವ ೫-೬ ಹಸೀ ನೆಲ್ಲಿಕಾಯಿಗಳನ್ನು ತಂದು ಬೀಜಗಳನ್ನು ಬೇರ್ಪಡಿಸಿ ಸ್ವಲ್ಪ ಬೆಚ್ಚಗೆ ಮಾಡಿ, ರಸವನ್ನು ಹಿಂಡಿಕೊಳ್ಳುವುದು. ನಂತರ ರಸವನ್ನು ಬಟ್ಟೆಯಲ್ಲಿ ಸೋಸಿ, ಕಬ್ಬಿನ ಹಾಲಿನಲ್ಲಿ ಹಾಕಿ ಕುಡಿಯುವುದು.
ಬೀಜಗಳನ್ನು ಬೇರ್ಪಡಿಸಿದ ಹಸಿ ನೆಲ್ಲಿಕಾಯಿಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಕಿಬ್ಬೊಟ್ಟೆ ಮತ್ತು ಹೊಕ್ಕಳ ಸುತ್ತ ಲೇಪಿಸುವುದು. ನೆಲ್ಲಿಕಾಯಿ ರಸವನ್ನು ಸಕ್ಕರೆ ಸೇರಿಸಿ ಕುಡಿಯುವುದು.
ನೆಲ್ಲಿ ಚೆಟ್ಟು ಮತ್ತು ನೇರಳೆ ಬೀಜಗಳನ್ನು ಸಮವಾಗಿ ಸೇರಿಸಿ ಕುಟ್ಟಿ ನುಣುಪಾದ ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು. ದಿವಸಕ್ಕೆ ಎರಡು ವೇಳೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.