Remove ads
From Wikipedia, the free encyclopedia
ನಿರ್ಮಲೀಕರಣ ಎಂಬುದು ತ್ಯಾಜ್ಯವಸ್ತುಗಳ ಅಪಾಯಗಳೊಂದಿಗಿನ ಮಾನವ ಸಂಪರ್ಕವನ್ನು ತಡೆಗಟ್ಟುವುದರ ಮೂಲಕ ಆರೋಗ್ಯವನ್ನು ಪ್ರವರ್ತಿಸುವ ನೈರ್ಮಲ್ಯದ ವಿಧಾನವಾಗಿದೆ. ಅಪಾಯಗಳು ದೈಹಿಕವಾದುದಾಗಿರಬಹುದು, ಸೂಕ್ಷ್ಮಜೀವಿಗಳಿಗೆ ಸಂಬಂಧಿಸಿದ್ದಾಗಿರಬಹುದು, ಜೈವಿಕವಾದುದಾಗಿರಬಹುದು ಅಥವಾ ಕಾಯಿಲೆಯ ರಾಸಾಯನಿಕ ಮಧ್ಯವರ್ತಿಗಳಿಂದ ಉಂಟಾದುದಾಗಿರಬಹುದು. ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಲ್ಲ ತ್ಯಾಜ್ಯವಸ್ತುಗಳೆಂದರೆ, ಮಾನವರ ಮತ್ತು ಪ್ರಾಣಿಗಳ ಮಲ, ಘನ ತ್ಯಾಜ್ಯವಸ್ತುಗಳು, ಮನೆಬಳಕೆಯ ತ್ಯಾಜ್ಯನೀರು (ಚರಂಡಿ ನೀರು, ಗ್ರಾಮಸಾರ, ಬೂದುನೀರು), ಕೈಗಾರಿಕಾ ತ್ಯಾಜ್ಯವಸ್ತುಗಳು, ಮತ್ತು ಕೃಷಿಯ ತ್ಯಾಜ್ಯವಸ್ತುಗಳು. ಎಂಜಿನಿಯರಿಂಗ್ ಪರಿಹಾರೋಪಾಯಗಳು (ಉದಾಹರಣೆಗೆ: ಚರಂಡಿ ವ್ಯವಸ್ಥೆ ಮತ್ತು ತ್ಯಾಜ್ಯನೀರು ಸಂಸ್ಕರಣೆ), ಸರಳ ತಂತ್ರಜ್ಞಾನಗಳು (ಉದಾಹರಣೆಗೆ: ಶೌಚಾಲಯಗಳು, ರೊಚ್ಚು ತೊಟ್ಟಿಗಳು), ಅಥವಾ ಅಷ್ಟೇ ಏಕೆ ನೈರ್ಮಲ್ಯಶಾಸ್ತ್ರದ ವೈಯಕ್ತಿಕ ಪರಿಪಾಠಗಳನ್ನು (ಉದಾಹರಣೆಗೆ: ಸಾಬೂನಿನಿಂದ ಸರಳವಾಗಿ ಕೈತೊಳೆಯುವಿಕೆ) ಬಳಸುವುದು ಇವೆಲ್ಲವೂ ತಡೆಗಟ್ಟುವಿಕೆಯ ನೈರ್ಮಲ್ಯದ ವಿಧಾನಗಳಲ್ಲಿ ಸೇರಿಕೊಂಡಿವೆ. WHOನಿಂದ (ವಿಶ್ವ ಆರೋಗ್ಯ ಸಂಸ್ಥೆಯಿಂದ) ವ್ಯಾಖ್ಯಾನಿಸಲ್ಪಟ್ಟಿರುವಂತೆ, ಮಾನವರ ಮಲ-ಮೂತ್ರಗಳ ಸುರಕ್ಷಿತ ವಿಲೇವಾರಿಗೆ ಸಂಬಂಧಿಸಿರುವ ಸೌಕರ್ಯಗಳು ಮತ್ತು ಸೇವೆಗಳ ವ್ಯವಸ್ಥೆಗೆ ನಿರ್ಮಲೀಕರಣವು ಸಾಮಾನ್ಯವಾಗಿ ಉಲ್ಲೇಖಿಸಲ್ಪಡುತ್ತದೆ. ಸಾಕಷ್ಟಿಲ್ಲದ ಅಥವಾ ಅಸಮರ್ಪಕವಾದ ನಿರ್ಮಲೀಕರಣವು ವಿಶ್ವಾದ್ಯಂತದ ಕಾಯಿಲೆಯ ಒಂದು ಪ್ರಮುಖ ಕಾರಣವಾಹಿದೆ ಮತ್ತು ನಿರ್ಮಲೀಕರಣದ ಸುಧಾರಿಸುವಿಕೆಯು ಕುಟುಂಬಗಳು ಮತ್ತು ಸಮುದಾಯಗಳಲ್ಲಿರುವವರ ಆರೋಗ್ಯದ ಮೇಲೆ ಒಂದು ಗಮನಾರ್ಹವಾದ ಪ್ರಯೋಜಕಾರಿ ಪ್ರಭಾವವನ್ನು ಹೊಂದಿದೆ ಎಂಬುದು ಸುಪರಿಚಿತ ಸಂಗತಿಯಾಗಿದೆ. ಕಸದ ಸಂಗ್ರಹಣೆ ಮತ್ತು ತ್ಯಾಜ್ಯನೀರಿನ ವಿಲೇವಾರಿಯಂಥ ಸೇವೆಗಳ ಮೂಲಕ, ನೈರ್ಮಲ್ಯದ ಸ್ಥಿತಿಗತಿಗಳ ನಿರ್ವಹಣೆ ಮಾಡುವುದಕ್ಕೂ 'ನಿರ್ಮಲೀಕರಣ' ಎಂಬ ಪದವು ಉಲ್ಲೇಖಿಸಲ್ಪಡುತ್ತದೆ.[೧]
This article has multiple issues. Please help improve it or discuss these issues on the talk page. (Learn how and when to remove these template messages)
No issues specified. Please specify issues, or remove this template. |
"ನಿರ್ಮಲೀಕರಣ " ಎಂಬ ಶಬ್ದವನ್ನು ಒಂದು ನಿರ್ದಿಷ್ಟ ಮಗ್ಗುಲು, ಪರಿಕಲ್ಪನೆ, ತಾಣ, ಅಥವಾ ಕಾರ್ಯತಂತ್ರಕ್ಕೆ ಅನ್ವಯಿಸಲು ಸಾಧ್ಯವಿದೆ. ಅದು ಹೇಗೆಂದರೆ:
ನಗರ ಪ್ರದೇಶದ ನಿರ್ಮಲೀಕರಣದ ಅತ್ಯಂತ ಪ್ರಾಚೀನ ಪುರಾವೆಯು ಹರಪ್ಪಾ, ಮೊಹೆಂಜೊ-ದಾರೊವಿನಲ್ಲಿ ಮತ್ತು ಇಂಡಸ್ ಕಣಿವೆ ನಾಗರಿಕತೆಗೆ ಸೇರಿದ, ಇತ್ತೀಚೆಗೆ ಪತ್ತೆಹಚ್ಚಲಾದ ರಾಖಿಗರ್ಹಿಯಲ್ಲಿ ಕಂಡುಬಂದಿತ್ತು. ಈ ನಗರ ಪ್ರದೇಶದ ಯೋಜನೆಯಲ್ಲಿ ವಿಶ್ವದ ಮೊದಲ ನಗರ ಪ್ರದೇಶದ ನಿರ್ಮಲೀಕರಣ ವ್ಯವಸ್ಥೆಗಳು ಸೇರಿದ್ದವು. ನಗರದೊಳಗಿನ ಪ್ರತ್ಯೇಕ ಮನೆಗಳು ಅಥವಾ ಮನೆಗಳ ಸಮೂಹಗಳು ಬಾವಿಗಳಿಂದ ನೀರನ್ನು ಪಡೆಯುತ್ತಿದ್ದವು. ಸ್ನಾನಮಾಡುವುದಕ್ಕಾಗಿ ಮೀಸಲಿಡಲಾಗಿತ್ತು ಎಂದು ಕಂಡುಬರುವ ಕೊಠಡಿಯೊಂದರಿಂದ ಬರುವ ತ್ಯಾಜ್ಯ ನೀರನ್ನು ಮುಚ್ಚಲ್ಪಟ್ಟ ಗಟಾರಗಳೆಡೆಗೆ ತಿರುಗಿಸಲಾಗಿತ್ತು; ಈ ಗಟಾರಗಳು ಪ್ರಮುಖ ಬೀದಿಗಳ ಅಕ್ಕಪಕ್ಕದಲ್ಲಿ ನೆಲೆಗೊಂಡಿದ್ದವು. ಮನೆಗಳು ಕೇವಲ ಒಳಗಿನ ಅಂಗಳಗಳು ಮತ್ತು ಚಿಕ್ಕದಾದ ಕಂಬಕ್ಕೆ ಮಾತ್ರವೇ ತೆರೆದುಕೊಂಡಿರುತ್ತಿದ್ದವು.
ರೋಮನ್ ನಗರಗಳು ಮತ್ತು ರೋಮನ್ ವಿಲ್ಲಾಗಳು ನಿರ್ಮಲೀಕರಣ ವ್ಯವಸ್ಥೆಗಳ ಅಂಶಗಳನ್ನು ಅಥವಾ ಘಟಕಗಳನ್ನು ಹೊಂದಿದ್ದವು; ಇವು ಪೊಂಪೆಯಿಯಂಥ ಪಟ್ಟಣಗಳ ಬೀದಿಗಳಲ್ಲಿ ನೀರನ್ನು ವಿತರಿಸುತ್ತಿದ್ದವು. ಅಷ್ಟೇ ಅಲ್ಲ, ಕಟ್ಟಡದ ಕಲ್ಲುಗಳು ಹಾಗೂ ಜನದಟ್ಟಣೆಯ ಪ್ರದೇಶಗಳಿಂದ ತ್ಯಾಜ್ಯನೀರನ್ನು ಸಂಗ್ರಹಿಸುವುದಕ್ಕೆ ಮತ್ತು ವಿಸರ್ಜಿಸುವುದಕ್ಕಾಗಿದ್ದ ಮರದ ಗಟಾರಗಳನ್ನು ಈ ನಿರ್ಮಲೀಕರಣ ವ್ಯವಸ್ಥೆಗಳು ಹೊಂದಿದ್ದವು. ಇದರ ಒಂದು ನಿದರ್ಶನವಾಗಿ, ರೋಮ್ನಲ್ಲಿನ ಟೈಬರ್ ನದಿಯೆಡೆಗೆ ಅಳವಡಿಸಲಾಗಿರುವ ಕ್ಲೋಕಾ ಮ್ಯಾಕ್ಸಿಮಾವನ್ನು ನೋಡಬಹುದು. ಆದರೆ ಮಧ್ಯಯುಗಗಳ ಉಚ್ಛ್ರಾಯಕಾಲದವರೆಗೆ ಯುರೋಪ್ನ ಬಹುತೇಕ ಭಾಗದಲ್ಲಿದ್ದ ಇತರ ನಿರ್ಮಲೀಕರಣ ವ್ಯವಸ್ಥೆಯ ಕುರಿತಾಗಿ ಮಹತ್ತರವಾದ ದಾಖಲೆಗಳು ಸಿಕ್ಕಿಲ್ಲ. ಮಧ್ಯಯುಗಗಳ ಅವಧಿಯಲ್ಲಿ ಯುರೋಪ್ ಮತ್ತು ಏಷ್ಯಾದ ಉದ್ದಗಲಕ್ಕೂ ನೈರ್ಮಲ್ಯರಹಿತ ಸ್ಥಿತಿಗತಿಗಳು ಮತ್ತು ಮಿತಿಮೀರಿದ ಜನದಟ್ಟಣೆಯ ಸ್ಥಿತಿಗಳು ವ್ಯಾಪಕವಾಗಿದ್ದವು. ಇದರ ಪರಿಣಾಮವಾಗಿ ಘೋರವಾದ ಸರ್ವವ್ಯಾಪಿ ವ್ಯಾಧಿಗಳು ನಿಯತಕಾಲಿಕವಾಗಿ ಕಂಡುಬಂದಿದ್ದವು; ಜಸ್ಟಿನಿಯನ್ನ ಪ್ಲೇಗು (541-42) ಮತ್ತು ಪ್ಲೇಗುಮಾರಿ (1347-1351) ಕಾಯಿಲೆಗಳು ಇದಕ್ಕೆ ನಿದರ್ಶನಗಳಾಗಿದ್ದು, ಇವು ಹತ್ತಾರು ಲಕ್ಷಗಳಷ್ಟು ಜನರನ್ನು ಸಾಯಿಸಿದವು ಹಾಗೂ ಸಮಾಜಗಳನ್ನು ಆಮೂಲಾಗ್ರವಾಗಿ ಮಾರ್ಪಡಿಸಿದವು.[೨]
ಮಧ್ಯಯುಗದ ಕಾಲದಾದ್ಯಂತವೂ ಯುರೋಪ್ನಲ್ಲಿ ಶಿಶುಗಳ ಮತ್ತು ಮಕ್ಕಳ ಅತಿ ಹೆಚ್ಚಿನ ಮರಣ ಪ್ರಮಾಣವು ಮೇಲುಗೈ ಸಾಧಿಸಿತು; ಇದಕ್ಕೆ ನಿರ್ಮಲೀಕರಣದಲ್ಲಿನ ನ್ಯೂನತೆಗಳು ಮಾತ್ರವೇ ಅಲ್ಲದೇ, ವ್ಯವಸಾಯಕ್ಕಿಂತ ವೇಗವಾಗಿ ವಿಸ್ತರಿಸಿದ್ದ ಜನಸಂಖ್ಯೆಗಾಗಿ ಆಹಾರದ ಪ್ರಮಾಣವು ಸಾಕಷ್ಟಿಲ್ಲದ್ದೂ ಒಂದು ಕಾರಣವಾಗಿತ್ತು.[೩] ಆಗಿಂದಾಗ್ಗೆ ಕಂಡುಬರುತ್ತಿದ್ದ ಯುದ್ಧಸ್ಥಿತಿ ಮತ್ತು ನಿರ್ದಯಿ ಆಡಳಿತಗಾರರಿಂದ ಆಗುತ್ತಿದ್ದ ನಾಗರಿಕರ ಶೋಷಣೆಯಿಂದಾಗಿ ಈ ಸ್ಥಿತಿಯು ಮತ್ತಷ್ಟು ಜಟಿಲಗೊಳಿಸಲ್ಪಟ್ಟಿತು. ಈ ಕಾಲದಲ್ಲಿನ ಓರ್ವ ಸಾಧಾರಣ ವ್ಯಕ್ತಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಜೀವನವೆನ್ನುವುದು ಅವಶ್ಯವಾಗಿ 'ಜುಗುಪ್ಸೆಯ, ಕ್ರೂರ ಮತ್ತು ಅಲ್ಪಕಾಲಿಕ'ವಾದುದಾಗಿತ್ತು.
ಪಾಕೀಜು ಚರಂಡಿಗಳಲ್ಲಿ ತ್ಯಾಜ್ಯನೀರಿನ ಸಂಗ್ರಹಣೆ ಮಾಡುವುದು, ಮರುಬಳಕೆಗಾಗಿ ಅಥವಾ ನದಿಗಳು, ಸರೋವರಗಳು ಅಥವಾ ಸಮುದ್ರದಲ್ಲಿ ಹರಿಯಬಿಡುವುದಕ್ಕಾಗಿ ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳಲ್ಲಿ ತ್ಯಾಜ್ಯನೀರನ್ನು ಸಂಸ್ಕರಣೆ ಮಾಡುವುದು ಇದು ನಗರ ಪ್ರದೇಶಗಳಲ್ಲಿನ ನಿರ್ಮಲೀಕರಣದ ಪ್ರಮಾಣಕ ತಂತ್ರಜ್ಞಾನವಾಗಿದೆ. ಪಾಕೀಜು ಚರಂಡಿಗಳು ಭೋರ್ಗರೆಯುವ ಗಟಾರಗಳೊಂದಿಗೆ ಸಂಯೋಜಿಸಲ್ಪಟ್ಟಿರಬಹುದು ಅಥವಾ ನೈರ್ಮಲ್ಯದ ಪಾಕೀಜು ಚರಂಡಿಗಳಾಗಿ ಅವುಗಳಿಂದ ಪ್ರತ್ಯೇಕಿಸಲ್ಪಟ್ಟಿರಬಹುದು. ಸಂಯೋಜಿಸಲ್ಪಟ್ಟ ಪಾಕೀಜು ಚರಂಡಿಗಳು ನಗರ ಪ್ರದೇಶಗಳ ಪ್ರಧಾನ, ಹಳೆಯದಾದ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಭಾರೀ ಮಳೆಸುರಿತ ಮತ್ತು ಅಸಮರ್ಪಕವಾದ ನಿರ್ವಹಣೆಯು, ಸಂಯೋಜಿಸಲ್ಪಟ್ಟ ಪಾಕೀಜು ಚರಂಡಿಯ ಉಕ್ಕಿ ಹರಿಯುವಿಕೆಗೆ ಅಥವಾ ನೈರ್ಮಲ್ಯದ ಪಾಕೀಜು ಚರಂಡಿಯ ಉಕ್ಕಿ ಹರಿಯುವಿಕೆಗೆ ಕಾರಣವಾಗಬಹುದು; ಅಂದರೆ, ಹೆಚ್ಚೂಕಮ್ಮಿ ದುರ್ಬಲಗೊಳಿಸಿದ ಕಚ್ಚಾ ಚರಂಡಿಯ ನೀರು ಪರಿಸರದೊಳಗೆ ಹರಿಯಬಿಟ್ಟಂತಾಗುವುದು. ಕೈಗಾರಿಕೆಗಳು ಅನೇಕವೇಳೆ ತ್ಯಾಜ್ಯನೀರನ್ನು ಪುರಸಭೆಯ ಪಾಕೀಜು ಚರಂಡಿಗಳೊಳಗೆ ಹರಿಯಬಿಡುತ್ತವೆ; ಕೈಗಾರಿಕೆಗಳು ತಮ್ಮ ವತಿಯಿಂದ ಹರಿಯಬಿಡಲ್ಪಟ್ಟ ವಸ್ತುಗಳನ್ನು ಪೂರ್ವ-ಸಂಸ್ಕರಣೆ ಮಾಡದಿದ್ದಲ್ಲಿ, ಇದು ತ್ಯಾಜ್ಯನೀರಿನ ಸಂಸ್ಕರಣೆಯನ್ನು ಜಟಿಲಗೊಳಿಸಬಲ್ಲದು.[೪]
ಸಾಂಪ್ರದಾಯಿಕವಾದ ತ್ಯಾಜ್ಯನೀರಿನ ಸಂಗ್ರಹಣಾ ವ್ಯವಸ್ಥೆಗಳು ಒಳಗೊಂಡಿರುವ ಅತೀವವಾದ ಹೂಡಿಕಾ ವೆಚ್ಚದ ಕಾರಣದಿಂದಾಗಿ, ಅನೇಕ ಅಭಿವೃದ್ಧಿಶೀಲ ದೇಶಗಳು ಸದರಿ ವೆಚ್ಚಗಳನ್ನು ತಡೆದುಕೊಳ್ಳುವುದು ಕಷ್ಟಕರವಾಗಿ ಪರಿಣಮಿಸಿದೆ. ಆದ್ದರಿಂದ ಕೆಲವೊಂದು ದೇಶಗಳು, ಸಹ ಅಸ್ತಿತ್ವದ ಚರಂಡಿ ವ್ಯವಸ್ಥೆಯಂಥ ಪರ್ಯಾಯವಾದ ತ್ಯಾಜ್ಯನೀರಿನ ಸಂಗ್ರಹಣಾ ವ್ಯವಸ್ಥೆಗಳನ್ನು ಉತ್ತೇಜಿಸಿದ್ದು, ಸಾಂಪ್ರದಾಯಿಕ ಚರಂಡಿ ವ್ಯವಸ್ಥೆಯಿಂದ ಬಂದಿರುವ ವಿಭಿನ್ನವಾಗಿರುವ ಜಾಲಬಂಧ ವಿನ್ಯಾಸಗಳನ್ನು ಹೊಂದಿರುವ, ಕಡಿಮೆ ಆಳದಲ್ಲಿನ ಚಿಕ್ಕದಾದ ವ್ಯಾಸದ ಕೊಳವೆಗಳನ್ನು ಈ ವ್ಯವಸ್ಥೆಯು ಬಳಸುತ್ತದೆ.
ಅಭಿವೃದ್ಧಿಹೊಂದಿದ ದೇಶಗಳಲ್ಲಿ, ಪುರಸಭೆಯ ತ್ಯಾಜ್ಯನೀರಿನ ಸಂಸ್ಕರಣೆಯು ಈಗ ವ್ಯಾಪಕವಾಗಿದೆಯಾದರೂ,[೫] ಅದಿನ್ನೂ ಸಾರ್ವತ್ರಿಕವಾಗಿಲ್ಲ (ತಂತ್ರಜ್ಞಾನಗಳ ಒಂದು ಸ್ಥೂಲ ಸಮೀಕ್ಷೆಗಾಗಿ ನೋಡಿ: ತ್ಯಾಜ್ಯನೀರು ಸಂಸ್ಕರಣೆ). ಅಭಿವೃದ್ಧಿಶೀಲ ದೇಶಗಳಲ್ಲಿ ಬಹುಪಾಲು ತ್ಯಾಜ್ಯನೀರನ್ನು ಈಗಲೂ ಸಂಸ್ಕರಿಸದೆಯೇ ಪರಿಸರದೊಳಗೆ ಹರಿಯಬಿಡಲಾಗುತ್ತದೆ. ಉದಾಹರಣೆಗೆ, ಲ್ಯಾಟಿನ್ ಅಮೆರಿಕಾದಲ್ಲಿ ಸಂಗ್ರಹಿಸಲ್ಪಟ್ಟ ಕೊಳಕು ನೀರಿನ ಪೈಕಿ ಸುಮಾರು 15%ನಷ್ಟು ಭಾಗವನ್ನು ಮಾತ್ರವೇ ಸಂಸ್ಕರಿಸಲಾಗುತ್ತದೆ (ನೋಡಿ: ಲ್ಯಾಟಿನ್ ಅಮೆರಿಕಾದಲ್ಲಿನ ನೀರು ಮತ್ತು ನಿರ್ಮಲೀಕರಣ).
ಸಂಸ್ಕರಿಸದ ತ್ಯಾಜ್ಯನೀರನ್ನು ನೀರಾವರಿಯ ವ್ಯವಸಾಯದಲ್ಲಿ ಮರುಬಳಕೆ ಮಾಡುವುದು ಅಭಿವೃದ್ಧಿಶೀಲ ದೇಶಗಳಲ್ಲಿ ಸಾಮಾನ್ಯವಾಗಿದೆ. ಸಂಸ್ಕರಿಸಲ್ಪಟ್ಟ ತ್ಯಾಜ್ಯನೀರನ್ನು ಭೂದೃಶ್ಯ ತೋಟಗಾರಿಕೆಯಲ್ಲಿ (ಅದರಲ್ಲೂ ವಿಶೇಷವಾಗಿ ಗಾಲ್ಫ್ ಮೈದಾನಗಳಲ್ಲಿ), ನೀರಾವರಿಯ ವ್ಯವಸಾಯದಲ್ಲಿ ಮತ್ತು ಕೈಗಾರಿಕಾ ಬಳಕೆಗಾಗಿ ಮರುಬಳಕೆ ಮಾಡುವುದು ಹೆಚ್ಚಿನ ಮಟ್ಟದಲ್ಲಿ ವ್ಯಾಪಕವಾಗುತ್ತಿದೆ.
ನಗರ ಪ್ರದೇಶವನ್ನಾವರಿಸಿದ ಅನೇಕ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ಕುಟುಂಬಗಳಿಗೆ ಪಾಕೀಜು ಚರಂಡಿಗಳ ಸಂಪರ್ಕವನ್ನು ಕಲ್ಪಿಸಲಾಗಿಲ್ಲ. ರೊಚ್ಚು ತೊಟ್ಟಿಗಳೊಳಗೆ ಅಥವಾ ಸ್ಥಳದಲ್ಲೇ ಮಾಡುವ ಇತರ ಬಗೆಯ ನಿರ್ಮಲೀಕರಣದ ವ್ಯವಸ್ಥೆಗಳೊಳಗೆ ತಮ್ಮ ತ್ಯಾಜ್ಯನೀರನ್ನು ಈ ಪ್ರದೇಶಗಳು ಹರಿಯಬಿಡುತ್ತವೆ.
ಪರಿಸರ ವಿಜ್ಞಾನದ ನಿರ್ಮಲೀಕರಣವನ್ನು ಸಾಂಪ್ರದಾಯಿಕ ನಿರ್ಮಲೀಕರಣ ವ್ಯವಸ್ಥೆಗಳಿಗಿರುವ ಒಂದು ಆಮೂಲಾಗ್ರ ಪರ್ಯಾಯ ವ್ಯವಸ್ಥೆಯಾಗಿ ಕೆಲವೊಮ್ಮೆ ಪ್ರಸ್ತುತಪಡಿಸಲಾಗುತ್ತದೆ. ಮಿಶ್ರಗೊಬ್ಬರ ಮಾಡುವಿಕೆಯ ಅಥವಾ ಹುಳುಗಳ ಮಿಶ್ರಗೊಬ್ಬರ ಮಾಡುವಿಕೆಯ ಶೌಚಾಲಯಗಳನ್ನು ಪರಿಸರ ವಿಜ್ಞಾನದ ನಿರ್ಮಲೀಕರಣವು ಆಧರಿಸಿದ್ದು, ಶುಚೀಕರಣ ಮತ್ತು ಪುನರ್ಬಳಕೆ ಮಾಡಲು ಪರಿವರ್ತಿಸುವುದಕ್ಕೆ ಸಂಬಂಧಿಸಿದಂತೆ ಮೂಲದಲ್ಲಿಯೇ ಮೂತ್ರ ಮತ್ತು ಮಲದ ಒಂದು ಹೆಚ್ಚುವರಿ ಬೇರ್ಪಡಿಕೆಯನ್ನು ಮಾಡಲಾಗುತ್ತದೆ. ಈ ರೀತಿಯಲ್ಲಿ ಇದು ಕಪ್ಪುನೀರಿನ ಸೃಷ್ಟಿಯನ್ನು ತೆಗೆದುಹಾಕುತ್ತದೆ ಮತ್ತು ತ್ಯಾಜ್ಯನೀರಿನಲ್ಲಿ (ಮೂತ್ರದಲ್ಲಿ) ಮಲದ ರೋಗಜನಕಗಳು ಇನ್ನೂ ಉಳಿದುಕೊಂಡಿದ್ದರೆ ಅದನ್ನೂ ತೆಗೆದುಹಾಕುತ್ತದೆ. ಒಂದು ವೇಳೆ ಪರಿಸರ ವಿಜ್ಞಾನದ ನಿರ್ಮಲೀಕರಣವನ್ನು ರೂಢಿಸಿಕೊಂಡಿದ್ದೇ ಆದಲ್ಲಿ, ಪುರಸಭೆಯ ತ್ಯಾಜ್ಯನೀರು ಕೇವಲ ಬೂದುನೀರನ್ನು ಮಾತ್ರವೇ ಒಳಗೊಂಡಿರುತ್ತದೆ; ಈ ಬೂದುನೀರನ್ನು ತೋಟಗಾರಿಕೆಗಾಗಿ ಮರುಬಳಕೆ ಮಾಡಬಹುದು. ಆದಾಗ್ಯೂ, ಬಹುತೇಕ ನಿದರ್ಶನಗಳಲ್ಲಿ ಬೂದುನೀರನ್ನು ಪಾಕೀಜು ಚರಂಡಿಗಳಿಗೆ ಹರಿಯಬಿಡುವ ಪರಿಪಾಠವು ಈಗಲೂ ಮುಂದುವರಿಯುತ್ತಿದೆ.
ನೀರು ಮತ್ತು ನಿರ್ಮಲೀಕರಣ ಸಂಬಂಧಿತ ಕಾಯಿಲೆಗಳನ್ನು ತಡೆಗಟ್ಟುವ ಒಂದು ಪ್ರಯತ್ನದಲ್ಲಿ ತ್ಯಾಜ್ಯವಸ್ತುವನ್ನು ಪ್ರತ್ಯೇಕಿಸುವುದರ ಪ್ರಾಮುಖ್ಯತೆಯು ತನ್ನ ಸ್ಥಾನವನ್ನು ಕಂಡುಕೊಂಡಿದ್ದು, ಅದು ಅಭಿವೃದ್ಧಿಹೊಂದಿದ ದೇಶಗಳನ್ನು ಮಾತ್ರವೇ ಅಲ್ಲದೇ ಅಭಿವೃದ್ಧಿಶೀಲ ದೇಶಗಳನ್ನೂ ಸಹ ಭಿನ್ನವಾಗಿರುವ ಮಟ್ಟಗಳಲ್ಲಿ ಸಂಕಟಕ್ಕೀಡುಮಾಡುತ್ತದೆ. ನಿರ್ಮಲೀಕರಣದ ಮತ್ತು ನೈರ್ಮಲ್ಯಶಾಸ್ತ್ರದ ಅಸಮರ್ಪಕವಾಗಿರುವ ಪರಿಪಾಠಗಳ ಕಾರಣದಿಂದಾಗಿ, ಪ್ರತಿ ವರ್ಷವೂ ಸುಮಾರು 5 ದಶಲಕ್ಷದಷ್ಟು ಜನರು ತಡೆಗಟ್ಟಬಹುದಾದ ಜಲವಾಹಿತ ಕಾಯಿಲೆಯಿಂದ[೬] ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ. ನಿರ್ಮಲೀಕರಣದ ಪರಿಣಾಮಗಳು ಸಮಾಜದ ಮೇಲೆ ಒಂದು ಬೃಹತ್ ಪ್ರಭಾವವನ್ನೂ ಹೊಂದಿದ್ದವು. ಗ್ರಿಫಿನ್ಸ್ ಪಬ್ಲಿಕ್ ಸ್ಯಾನಿಟೇಷನ್ ನಲ್ಲಿ ಪ್ರಕಟಿಸಲ್ಪಟ್ಟಿರುವ ಸಾಬೀತುಪಡಿಸಿದ ಅಧ್ಯಯನಗಳು ತೋರಿಸುವ ಪ್ರಕಾರ, ಹೆಚ್ಚಿನ ನಿರ್ಮಲೀಕರಣವು ಹೆಚ್ಚಿನ ಆಕರ್ಷಣೀಯತೆಯನ್ನು ಉಂಟುಮಾಡುತ್ತದೆ.
WHO ಮತ್ತು UNICEFಗಳ ವತಿಯಿಂದ ಪ್ರಸ್ತುತಪಡಿಸಲಾಗಿರುವ, ನೀರು ಮತ್ತು ನಿರ್ಮಲೀಕರಣಕ್ಕೆ ಸಂಬಂಧಿಸಿರುವ ಜಂಟಿ ಮೇಲ್ವಿಚಾರಣಾ ಕಾರ್ಯಸೂಚಿಯು ಸುಧಾರಿತ ನಿರ್ಮಲೀಕರಣವನ್ನು ಈ ರೀತಿ ವ್ಯಾಖ್ಯಾನಿಸಿದೆ:
ಆ ವ್ಯಾಖ್ಯಾನದ ಅನುಸಾರ, ವಿಶ್ವದ ಜನಸಂಖ್ಯೆಯ 62%ನಷ್ಟು ಭಾಗವು 2008ರಲ್ಲಿ ಸುಧಾರಿತ ನಿರ್ಮಲೀಕರಣಕ್ಕೆ ಸಂಪರ್ಕವನ್ನು ಹೊಂದಿದೆ ಮತ್ತು 1990ರಿಂದ ಇದ್ದ ಸ್ಥಿತಿಗೆ ಹೋಲಿಸಿದಾಗ ಇದು 8%ನಷ್ಟು ಹೆಚ್ಚಳವಾಗಿದೆ. ಅವರ ಪೈಕಿ ಅರ್ಧಕ್ಕಿಂತ ಕೊಂಚವೇ ಹೆಚ್ಚಿನ ಜನ ಅಥವಾ ವಿಶ್ವದ ಜನಸಂಖ್ಯೆಯ 31%ನಷ್ಟು ಜನರು, ಒಂದು ಪಾಕೀಜು ಚರಂಡಿಗೆ ಸಂಪರ್ಕ ಹೊಂದಿರುವ ಮನೆಗಳಲ್ಲಿ ವಾಸಿಸುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, 2.5 ಶತಕೋಟಿ ಜನರು ಸುಧಾರಿತ ನಿರ್ಮಲೀಕರಣಕ್ಕೆ ಸಂಪರ್ಕವನ್ನು ಹೊಂದಿಲ್ಲ ಮತ್ತು ಈ ಕಾರಣದಿಂದಾಗಿ, ತೆರೆದ ಮಲವಿಸರ್ಜನೆಯ ವ್ಯವಸ್ಥೆಯನ್ನು ಅಥವಾ, ಸಾರ್ವಜನಿಕ ಶೌಚಾಲಯಗಳು ಇಲ್ಲವೇ ತೆರೆದ ಗುಂಡಿ ಶೌಚಾಲಯಗಳಂಥ ಮಲವಿಸರ್ಜನೆಯ ಇತರ ನೈರ್ಮಲ್ಯರಹಿತ ಸ್ವರೂಪಗಳನ್ನು ಅವರು ಆಶ್ರಯಿಸಬೇಕಾಗಿದೆ.[೮] ಯಾವುದೇ ರೀತಿಯ ಸೌಕರ್ಯಗಳನ್ನೇ ಹೊಂದಿಲ್ಲದ 1.2 ಶತಕೋಟಿ ಜನರನ್ನು ಇದು ಒಳಗೊಂಡಿದೆ.[೯] ತ್ಯಾಜ್ಯವಸ್ತುವು ಕುಡಿಯುವ ನೀರನ್ನು ಮಲಿನಗೊಳಿಸುವ ಸಾಧ್ಯತೆಯಿರುವುದರಿಂದ ಮತ್ತು ಅತಿಸಾರದಂಥ ಜೀವ ಬೆದರಿಕೆಯೊಡ್ಡುವ ಕಾಯಿಲೆಗಳನ್ನು ಶಿಶುಗಳಿಗೆ ಉಂಟುಮಾಡಬಹುದಾಗಿರುವುದರಿಂದ, ಈ ಫಲಿತಾಂಶವು ಸಾರ್ವಜನಿಕ ಆರೋಗ್ಯದ ಕುರಿತಾದ ಗಣನೀಯವಾದ ಅಪಾಯಗಳನ್ನು ಮುಂದಿಡುತ್ತದೆ ಎನ್ನಬಹುದು. ಕೈ ತೊಳೆಯುವಿಕೆ ಮತ್ತು ನೀರಿನ ಶುದ್ಧೀಕರಣವನ್ನು ಒಳಗೊಂಡಿರುವ ಸುಧಾರಿತ ನಿರ್ಮಲೀಕರಣವು, ಪ್ರತಿವರ್ಷವೂ ಅತಿಸಾರದ ಕಾಯಿಲೆಗಳಿಂದ ನರಳುವ 1.5 ದಶಲಕ್ಷ ಮಕ್ಕಳ ಜೀವಗಳನ್ನು ಉಳಿಸಬಲ್ಲದು.[೯]
ಪ್ರಪಂಚದ ಜನಸಂಖ್ಯೆಯ 20%ಗೂ ಕಡಿಮೆ ಜನರು ವಾಸಿಸುವ ಅಭಿವೃದ್ಧಿಹೊಂದಿದ ದೇಶಗಳಲ್ಲಿ, ಜನಸಂಖ್ಯೆಯ 99%ನಷ್ಟು ಭಾಗವು ಸುಧಾರಿತ ನಿರ್ಮಲೀಕರಣದ ಸಂಪರ್ಕವನ್ನು ಹೊಂದಿದೆ ಮತ್ತು ಇವರ ಪೈಕಿ 81%ನಷ್ಟು ಮಂದಿ ಪಾಕೀಜು ಚರಂಡಿಗಳಿಗೆ ಸಂಪರ್ಕ ಹೊಂದಿದ್ದರು.
ಘನ ತ್ಯಾಜ್ಯವಸ್ತುವಿನ ವಿಲೇವಾರಿಯನ್ನು ನೆಲಭರ್ತಿಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕೈಗೊಳ್ಳಲಾಗುತ್ತದೆಯಾದರೂ, ಭಸ್ಮೀಕರಣ, ಪುನಃ ಬಳಕೆಗೆ ಪರಿವರ್ತಿಸುವಿಕೆ, ಮಿಶ್ರಗೊಬ್ಬರ ಮಾಡುವಿಕೆ ಮತ್ತು ಜೈವಿಕ ಇಂಧನವಾಗಿ ಪರಿವರ್ತಿಸುವುದು ಇವೂ ಸಹ ಇತರ ಮಾರ್ಗಗಳಾಗಿವೆ. ನೆಲಭರ್ತಿಗಳಿಗೆ ಸಂಬಂಧಿಸಿ ಹೇಳುವುದಾದರೆ, ಮುಂದುವರಿದ ದೇಶಗಳು ವಿಶಿಷ್ಟವೆಂಬಂತೆ ನೆಲದ ಮಣ್ಣಿನ ಮೇಲ್ಪದರದೊಂದಿಗೆ ದಿನಂಪ್ರತಿ ಮುಚ್ಚುವುದಕ್ಕೆ ಸಂಬಂಧಿಸಿದ ಕಟ್ಟುನಿಟ್ಟಿನ ವಿಹಿತಾಚರಣೆಗಳನ್ನು ಹೊಂದಿದ್ದರೆ, ಹಿಂದುಳಿದ ದೇಶಗಳು ವಾಡಿಕೆಯಂತೆ ಸಾಕಷ್ಟು ಬಿಗಿಯಾಗಿರದ ವಿಹಿತಾಚರಣೆಗಳನ್ನು ನೆಚ್ಚಿಕೊಂಡಿವೆ.[೧೦] ರೋಗವಾಹಕ ಸಂಪರ್ಕ ಹಾಗೂ ರೋಗಜನಕಗಳ ಹರಡುವಿಕೆಯನ್ನು ತಗ್ಗಿಸುವಲ್ಲಿ, ದಿನಂಪ್ರತಿ ಮುಚ್ಚುವುದರ ಪ್ರಾಮುಖ್ಯತೆಯು ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ದಿನಂಪ್ರತಿ ಮುಚ್ಚುವುದು ವಾಸನೆಯ ಹೊರಸೂಸುವಿಕೆಗಳನ್ನೂ ಕನಿಷ್ಟಗೊಳಿಸುತ್ತದೆ ಮತ್ತು ಗಾಳಿಯಲ್ಲಿ ಹಾರುವ ಕಸವನ್ನು ತಗ್ಗಿಸುತ್ತದೆ. ಅದೇ ರೀತಿಯಲ್ಲಿ, ನೆಲಭರ್ತಿಯ ಪರಿಧಿ ಮುಚ್ಚುವಿಕೆಗೆ ಸಂಬಂಧಿಸಿದಂತಿರುವ ಅವಶ್ಯಕತೆಗಳನ್ನು ಅಭಿವೃದ್ಧಿಹೊಂದಿದ ದೇಶಗಳು ವಿಶಿಷ್ಟವೆಂಬಂತೆ ಹೊಂದಿವೆ; ಜೇಡಿಮಣ್ಣಿನ-ಬಗೆಯ ಮಣ್ಣುಗಳ ಬಳಕೆಯನ್ನು ಇದು ಒಳಗೊಂಡಿದ್ದು, ಅಂತರ್ಜಲವನ್ನು ಮಲಿನಗೊಳಿಸಬಹುದಾದ (ಮತ್ತು ಇದರಿಂದಾಗಿ ಕುಡಿಯುವ ನೀರಿನ ಕೆಲವೊಂದು ಪೂರೈಕೆಗಳನ್ನು ಗಂಡಾಂತರಕ್ಕೆ ಒಳಗಾಗಿಸುವ) ತೊಟ್ಟಿಕ್ಕಿಸಿದ ದ್ರವದ ಸ್ಥಳಾಂತರಿಕೆಯನ್ನು ತಗ್ಗಿಸುವ ಸಲುವಾಗಿ ಇದನ್ನು ಕೈಗೊಳ್ಳಲಾಗುತ್ತದೆ.
ಭಸ್ಮೀಕರಣ ಆಯ್ಕೆಗಳಿಗೆ ಸಂಬಂಧಿಸಿ ಹೇಳುವುದಾದರೆ, ನಿರ್ದಿಷ್ಟ ವಿಷಕಾರಿ ಘಟಕಗಳನ್ನು ಒಳಗೊಂಡಂತೆ, ವಾಯು ಮಾಲಿನ್ಯಕಾರಕಗಳ ಬಿಡುಗಡೆಯು ಇದರ ಫಲವಾದ ಒಂದು ಪ್ರತಿಕೂಲ ಫಲಿತಾಂಶವಾಗಿದೆ. ಪುನಃ ಬಳಕೆಗಾಗಿ ಪರಿವರ್ತಿಸುವಿಕೆ ಮತ್ತು ಜೈವಿಕ ಇಂಧನದ ಪರಿವರ್ತನೆ ಇವುಗಳು ಸಮರ್ಥನೀಯ ಆಯ್ಕೆಗಳಾಗಿದ್ದು, ಅವು ಸಾಮಾನ್ಯವಾಗಿ ಮೇಲ್ಮಟ್ಟದ ಜೀವನಚಕ್ರದ ವೆಚ್ಚಗಳನ್ನು ಹೊಂದಿವೆ; ಅದರಲ್ಲೂ ನಿರ್ದಿಷ್ಟವಾಗಿ, ಪರಿಸರ ವಿಜ್ಞಾನದ ಒಟ್ಟು ಪರಿಣಾಮಗಳು ಪರಿಗಣಿಸಲ್ಪಟ್ಟಾಗ ಇದು ಅನ್ವಯವಾಗುತ್ತದೆ.[೧೧] ಮಿಶ್ರಗೊಬ್ಬರದ ಉತ್ಪನ್ನಕ್ಕೆ ಸಂಬಂಧಿಸಿದ ಮಾರುಕಟ್ಟೆ ಬೇಡಿಕೆಯಿಂದ ಮಿಶ್ರಗೊಬ್ಬರ ಮಾಡುವಿಕೆಯ ಮೌಲ್ಯವು ಅಂತಿಮವಾಗಿ ಸೀಮಿತಗೊಳಿಸಲ್ಪಡುತ್ತದೆ.
2015ರ ವೇಳೆಗೆ, ಮೂಲಭೂತ ನಿರ್ಮಲೀಕರಣಕ್ಕೆ ಸಂಪರ್ಕವನ್ನೇ ಹೊಂದಿಲ್ಲದ ಜನರ ಅನುಪಾತವನ್ನು ಅರ್ಧದಷ್ಟಕ್ಕೆ ತಗ್ಗಿಸುವ ಒಂದು ಗುರಿಯನ್ನು, ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿಯ ಉದ್ದೇಶಗಳು (ಮಿಲೆನಿಯಂ ಡೆವಲಪ್ಮೆಂಟ್ ಗೋಲ್ಸ್-MDGಗಳು) ಒಳಗೊಂಡಿವೆ. 2006ರ ಡಿಸೆಂಬರ್ನಲ್ಲಿ, MDGಗಳ ನಿರ್ಮಲೀಕರಣ ಗುರಿಯ ಸಾಧನೆಯೆಡೆಗೆ ನಡೆಯುತ್ತಿರುವ ನಿಧಾನಗತಿಯ ಪ್ರಗತಿಯನ್ನು ಗುರುತಿಸಿ, ವಿಶ್ವಸಂಸ್ಥೆಯ ಸಾರ್ವತ್ರಿಕ ಸಭೆಯು 2008ರ ವರ್ಷವನ್ನು 'ಅಂತರರಾಷ್ಟ್ರೀಯ ನಿರ್ಮಲೀಕರಣದ ವರ್ಷ'ವನ್ನು ಘೋಷಿಸಿತು. ಅರಿವನ್ನು ಬೆಳೆಸಲು ಹಾಗೂ ಗುರಿಯನ್ನು ಈಡೇರಿಸಲು ತೆಗೆದುಕೊಳ್ಳಬೇಕಾದ ಕ್ರಮದ ಕಡೆಗೆ ಸದರಿ ವರ್ಷ ಗುರಿಯಿಟ್ಟುಕೊಂಡಿದೆ. ಅದರ ನಿರ್ದಿಷ್ಟ ಕಾಳಜಿಗಳು ಈ ಕೆಳಕಂಡಂತಿವೆ:
ಓವರ್ಸೀಸ್ ಡೆವಲಪ್ಮೆಂಟ್ ಇನ್ಸ್ಟಿಟ್ಯೂಟ್ ವತಿಯಿಂದ ಹೊರಬಂದ ಸಂಶೋಧನೆಯು ಸೂಚಿಸುವ ಪ್ರಕಾರ, ಒಂದು ವೇಳೆ ನಿರ್ಮಲೀಕರಣದ ಕುರಿತಾದ MDGಯನ್ನು ಈಡೇರಿಸಬೇಕಾದಲ್ಲಿ ನಿರ್ಮಲೀಕರಣ ಮತ್ತು ನೈರ್ಮಲ್ಯಶಾಸ್ತ್ರದ ಪ್ರವರ್ತನೆಯನ್ನು ಅಭಿವೃದ್ಧಿಯ ಸಂದರ್ಭದಲ್ಲಿ ಉತ್ತಮವಾದ ರೀತಿಯಲ್ಲಿ 'ಮುಖ್ಯವಾಹಿನಿಗೆ ತರುವ' ಅಗತ್ಯವಿದೆ. ಸದ್ಯಕ್ಕೆ, ನಿರ್ಮಲೀಕರಣ ಮತ್ತು ನೈರ್ಮಲ್ಯಶಾಸ್ತ್ರದ ಪ್ರವರ್ತನೆಯು ನೀರಿನ ಸಂಸ್ಥೆಗಳ ಮೂಲಕ ಮುಖ್ಯವಾಗಿ ನೆರವೇರಿಸಲ್ಪಡುತ್ತಿದೆ. ಸದರಿ ಸಂಶೋಧನೆಯು ವಾದಿಸುವ ಪ್ರಕಾರ, ಅಸ್ತಿತ್ವದಲ್ಲಿರುವ ಅನೇಕ ಸಂಸ್ಥೆಗಳು ವಾಸ್ತವವಾಗಿ ಅಭಿವೃದ್ಧಿಶೀಲ ದೇಶಗಳಲ್ಲಿ ಉತ್ತಮವಾದ ನಿರ್ಮಲೀಕರಣ ಮತ್ತು ನೈರ್ಮಲ್ಯಶಾಸ್ತ್ರವನ್ನು ಅಭಿವೃದ್ಧಿಪಡಿಲು ಚಟುವಟಿಕೆಗಳನ್ನು ನಿರ್ವಹಿಸುವುದು ಅಗತ್ಯವಾಗಿದೆ. ಉದಾಹರಣೆಗೆ, ಶೈಕ್ಷಣಿಕ ಸಂಸ್ಥೆಗಳು ನೈರ್ಮಲ್ಯಶಾಸ್ತ್ರದ ಕುರಿತು ಬೋಧಿಸಬಹುದು, ಮತ್ತು ಆರೋಗ್ಯ ಸಂಸ್ಥೆಗಳು (ಉದಾಹರಣೆಗೆ, ಕಾಲರಾದ ಹಠಾತ್ ಆರಂಭಗಳನ್ನು ತಡೆಗಟ್ಟಲು) ನಿರೋಧಕ ಕಾರ್ಯಗಳಿಗೆ ತಮ್ಮ ಸಂಪನ್ಮೂಲಗಳನ್ನು ಸಮರ್ಪಿಸಿಕೊಳ್ಳಬಹುದು.[೧೨]
ಸಮುದಾಯ-ನೇತೃತ್ವದ ಒಟ್ಟು ನಿರ್ಮಲೀಕರಣದ (ಕಮ್ಯುನಿಟಿ-ಲೆಡ್ ಟೋಟಲ್ ಸ್ಯಾನಿಟೇಷನ್-CLTS) ಕುರಿತಾಗಿ ಇನ್ಸ್ಟಿಟ್ಯೂಟ್ ಆಫ್ ಡೆವಲಪಿಂಗ್ ಸ್ಟಡೀಸ್ (IDS) ವತಿಯಿಂದ ಸುಸಂಘಟಿಸಲ್ಪಟ್ಟ ಸಂಶೋಧನಾ ಕಾರ್ಯಕ್ರಮವು, ಅಭಿವೃದ್ಧಿಶೀಲ ದೇಶಗಳಲ್ಲಿನ ಗ್ರಾಮೀಣ ನಿರ್ಮಲೀಕರಣಕ್ಕೆ ಸಂಬಂಧಿಸಿದಂತೆ ಒಂದು ಆಮೂಲಾಗ್ರವಾಗಿ ವಿಭಿನ್ನವಾಗಿರುವ ವಿಧಾನವಾಗಿದೆ ಮತ್ತು ಸಾಂಪ್ರದಾಯಿಕವಾದ ಗ್ರಾಮೀಣ ನಿರ್ಮಲೀಕರಣ ಕಾರ್ಯಕ್ರಮಗಳು ವಿಫಲಗೊಂಡ ಕಡೆಗಳಲ್ಲಿ ಇದು ಆಶಾದಾಯಕ ಯಶಸ್ಸುಗಳನ್ನು ತೋರಿಸಿದೆ. CLTS ಎಂಬುದು ಗ್ರಾಮೀಣ ನಿರ್ಮಲೀಕರಣಕ್ಕೆ ಸಂಬಂಧಿಸಿದ ಒಂದು ಅನುದಾನರಹಿತವಾದ ವಿಧಾನವಾಗಿದ್ದು, ತೆರೆದ ವ್ಯವಸ್ಥೆಯ ಮಲವಿಸರ್ಜನೆಯ ಸಮಸ್ಯೆಯನ್ನು ಗುರುತಿಸುವಲ್ಲಿ ಸಮುದಾಯಗಳಿಗೆ ಅದು ನೆರವಾಗುತ್ತದೆ; ಅಷ್ಟೇ ಅಲ್ಲ, ಶುದ್ಧೀಕರಿಸಲು ಹಾಗೂ 'ತೆರೆದ ಮಲವಿಸರ್ಜನೆಯ ವ್ಯವಸ್ಥೆಯಿಂದ ಮುಕ್ತರಾಗಲು' ಸಮಷ್ಟಿಯ ಕ್ರಮವನ್ನು ತೆಗೆದುಕೊಳ್ಳುವಲ್ಲಿ ಅದು ನೆರವಾಗುತ್ತದೆ. ಸಹಯೋಗದಲ್ಲಿ ವಿವರವಾಗಿ ಯೋಜಿಸುವಂಥ ಮತ್ತು ಕ್ರಮ ಕೈಗೊಳ್ಳುವಲ್ಲಿ ಸಮುದಾಯಗಳನ್ನು ಪ್ರಚೋದಿಸುವ ಒಂದು ವಿಧಾನವಾಗಿ ಮಲ ಮತ್ತು ಬಾಯಿಯ ನಡುವಿನ ಹಾದಿಗಳನ್ನು ವಿಶ್ಲೇಷಿಸುವಂಥ ಸಮುದಾಯ-ನೇತೃತ್ವದ ವಿಧಾನಗಳನ್ನು ಇದು ಬಳಸಿಕೊಳ್ಳುತ್ತದೆ. ಅನೇಕ ದೇಶಗಳಲ್ಲಿ ನಿರ್ಮಲೀಕರಣಕ್ಕೆ ಸಂಬಂಧಿಸಿರುವ ಸಹಸ್ರಮಾನದ ಅಭಿವೃದ್ಧಿಯ ಉದ್ದೇಶವು ಜಾಡುಬಿಟ್ಟಿದೆ ಎಂದು ಸೂಚಿಸುವ IDSನ ಒಂದು 'ಗಮನಹರಿಸಲ್ಪಟ್ಟ' ಕಾರ್ಯನೀತಿಯ ಸಂಕ್ಷಿಪ್ತ ವಿವರವು, ತೆರೆದ ಮಲವಿಸರ್ಜನೆಯ ಪದ್ಧತಿಯು ಈಗಲೂ ಮೇಲುಗೈ ಸಾಧಿಸಿರುವ ಅನೇಕ ದೇಶಗಳು ಮತ್ತು ಪ್ರದೇಶಗಳಲ್ಲಿ ಒಂದು ಬೃಹತ್ ಪ್ರಮಾಣದಲ್ಲಿ CLTSನ್ನು ಹೇಗೆ ಅಳವಡಿಸಿಕೊಳ್ಳಬಹುದು ಹಾಗೂ ಹಬ್ಬಿಸಬಹುದು ಎಂದು ಕೇಳುತ್ತದೆ.[೧೩]
ಆಹಾರ ಉದ್ಯಮದೊಳಗಿನ ನಿರ್ಮಲೀಕರಣವೆಂದರೆ, ಪ್ರಕ್ರಿಯೆಯೊಂದರ ನೆರವಿನಿಂದ ಆಗುವ ಆಹಾರ-ಸಂಪರ್ಕದ ಮೇಲ್ಮೈಗಳ ಸಮರ್ಪಕ ಸಂಸ್ಕರಣೆ ಎಂದರ್ಥ; ಸದರಿ ಪ್ರಕ್ರಿಯೆಯು ಸಾರ್ವಜನಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಹೊಂದಿರುವ ಸೂಕ್ಷ್ಮಜೀವಿಗಳ ಸಸ್ಯಕ ಜೀವಕೋಶಗಳನ್ನು ನಾಶಪಡಿಸುವಲ್ಲಿ ಪರಿಣಾಮಕಾರಿಯಾಗಿರಬೇಕು, ಮತ್ತು ಇತರ ಹಲವಾರು ಅನಪೇಕ್ಷಿತ ಸೂಕ್ಷ್ಮಜೀವಿಗಳನ್ನು ಗಣನೀಯವಾಗಿ ತಗ್ಗಿಸುವ ಸಾಮರ್ಥ್ಯವನ್ನು ಹೊಂದಿರಬೇಕು, ಆದರೆ ಉತ್ಪನ್ನದ ಮೇಲಾಗಲೀ ಅಥವಾ ಗ್ರಾಹಕನಿಗೆ ಸಂಬಂಧಿಸಿರುವ ಅದರ ಸುರಕ್ಷತೆಯ ಮೇಲಾಗಲೀ ಅದು ಪ್ರತಿಕೂಲ ಪರಿಣಾಮವನ್ನು ಬೀರಬಾರದು (U.S. ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ಒಕ್ಕೂಟದ ಕಟ್ಟುಪಾಡುಗಳ ನೀತಿಸಂಹಿತೆ, 21CFR110, USA). USನಲ್ಲಿ ಆಹಾರ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ನಿರ್ಮಲೀಕರಣ ಪ್ರಮಾಣಕ ಕಾರ್ಯಾಚರಣೆಯ ಕಾರ್ಯವಿಧಾನಗಳು ಅವಶ್ಯವಾಗಿದ್ದು, ಅವನ್ನು 21 CFR ಭಾಗ 178.1010ರ ಸಂಯೋಜನೆಯೊಂದಿಗಿನ 9 CFR ಭಾಗ 416ರ ಕಟ್ಟುಪಾಡು ನಿಯಂತ್ರಿಸುತ್ತದೆ. ಅದೇ ರೀತಿಯಲ್ಲಿ ಜಪಾನ್ ದೇಶದಲ್ಲಿ, ಆಹಾರ ನಿರ್ಮಲೀಕರಣ ಕಾನೂನಿನ ಅನುಸರಣೆಯ ಮೂಲಕ ಆಹಾರದ ನೈರ್ಮಲ್ಯವನ್ನು ಸಾಧಿಸುವುದು ಅಗತ್ಯವಾಗಿದೆ.[೧೪]
ಇದರ ಜೊತೆಗೆ, ಆಹಾರ ಮತ್ತು ಜೈವಿಕ ಔಷಧೀಯ ಕೈಗಾರಿಕೆಗಳಲ್ಲಿ, ನೈರ್ಮಲ್ಯದ ಉಪಕರಣ ಎಂದರೆ ಕ್ಲೀನ್-ಇನ್-ಪ್ಲೇಸ್ (CIP), ಮತ್ತು ಸ್ಟೆರಿಲೈಸೇಷನ್-ಇನ್-ಪ್ಲೇಸ್ (SIP) ಕಾರ್ಯವಿಧಾನಗಳನ್ನು ಬಳಸಿಕೊಂಡು ಸಂಪೂರ್ಣವಾಗಿ ಶುದ್ಧೀಕರಿಸಬಹುದಾದ ಉಪಕರಣ ಎಂದರ್ಥ: ಇದು ಶುದ್ಧೀಕರಿಸುವ ಪರಿಹಾರೋಪಾಯಗಳು ಮತ್ತು ಇತರ ದ್ರವಗಳಿಂದ ಸಂಪೂರ್ಣವಾಗಿ ಬರಿದುಮಾಡಬಹುದಾದ ವ್ಯವಸ್ಥೆಯಾಗಿದೆ. ಇದರ ವಿನ್ಯಾಸವು ಒಂದು ಕನಿಷ್ಟ ಪ್ರಮಾಣದ ಸ್ಥಗನ ಪ್ರದೇಶವನ್ನು[೧೫] ಅಥವಾ ಶುದ್ಧೀಕರಿಸುವ ಸಂದರ್ಭದಲ್ಲಿನ ಪ್ರಕ್ಷುಬ್ಧ ಹರಿವು ಉತ್ಪನ್ನದ ಸಂಚಯನಗಳನ್ನು ವಿಸರ್ಜಿಸಲು ಸಾಕಷ್ಟಿಲ್ಲದ ವಿಸ್ತೀರ್ಣಗಳನ್ನು ಹೊಂದಿರಬೇಕು. ಒಟ್ಟಾರೆಯಾಗಿ ಹೇಳುವುದಾದರೆ, ಚೊಕ್ಕಟವಾಗಿಸುವಿಕೆಯನ್ನು ಸುಧಾರಿಸಲೆಂದು, ತುಕ್ಕುಹಿಡಿಯದ, ಕ್ರೋಮಿಯಂ ಸೇರಿಸಿದ ಉಕ್ಕಿನ 316L ಬಗೆಯಿಂದ (ಚಿಕ್ಕ ಪ್ರಮಾಣಗಳಲ್ಲಿ ಮಾಲಿಬ್ಡಿನಮ್ನ್ನು ಒಳಗೊಂಡಿರುವ ಒಂದು ಮಿಶ್ರಲೋಹ) ಈ ಉಪಕರಣವನ್ನು ಮಾಡಲಾಗಿದೆ. 0.5 ಮೈಕ್ರೋಮೀಟರ್ಗಿಂತಲೂ ಕಡಿಮೆಯಿರುವ ಒಂದು ಮೇಲ್ಮೈ ಒರಟುತನಕ್ಕಾಗಿ ಇದರ ಮೇಲ್ಮೈಗೆ ಸಾಮಾನ್ಯವಾಗಿ ವಿದ್ಯುತ್ ಬಳಸಿದ ಹೊಳಪು ನೀಡಲಾಗಿರುತ್ತದೆ. ಮೇಲ್ಮೈಗೆ ಬ್ಯಾಕ್ಟೀರಿಯಾl ಅಂಟಿಕೊಳ್ಳುವಿಕೆಯ ಸಾಧ್ಯತೆಯನ್ನು ತಗ್ಗಿಸುವ ಸಲುವಾಗಿ ಈ ಕ್ರಮವನ್ನು ಅನುಸರಿಸಲಾಗುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.