Remove ads
From Wikipedia, the free encyclopedia
ಜಲ ಮಾಲಿನ್ಯ ವು ನೀರು ಮೂಲಗಳಾದ ಸರೋವರ, ನದಿ, ಸಮುದ್ರಗಳು, ಅಂತರ್ಜಲ ಕಶ್ಮಲೀಕರಣವನ್ನು ಒಳಗೊಂಡಿದೆ. ಎಲ್ಲ ಜಲ ಮಾಲಿನ್ಯದ ಪರಿಣಾಮಗಳೂ ನೀರಿನ ಮೂಲಗಳನ್ನು ಅವಲಂಬಿಸಿರುವ ಲೋಹರೂಪದ ನಾಣ್ಯಗಳು ಮತ್ತು ಜನರಿಗೆ ಹಾಗೂ ಬಯೊಸಿನೊಸಿಸ್ ಪರಿಣಾಮ ಬೀರುತ್ತವೆ. ಸೂಕ್ತ ಜಲ ಚಿಕಿತ್ಸೆ ಇಲ್ಲದೇ ಮಲಿನಕಾರಿ ಮತ್ತು ಹಾನಿಕಾರಕಗಳನ್ನು ನೀರಿನ ಮೂಲಗಳಿಗೆ ವಿಸರ್ಜಿಸಿದಾಗ ಮಾಲಿನ್ಯ ಉಂಟಾಗುತ್ತದೆ.
ಜಲ ಮಾಲಿನ್ಯವು ಜಾಗತಿಕ ಸಂದರ್ಭದಲ್ಲಿ ಪ್ರಮುಖ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ಮರಣ ಮತ್ತು ಕಾಯಿಲೆಗಳಿಗೆ ಮುಖ್ಯ ಕಾರಣಗಳಲ್ಲಿ ಜಲಮಾಲಿನ್ಯವು ಒಂದಾಗಿದ್ದು,[೧][೨] ಪ್ರತೀದಿನ ಇದರಿಂದಾಗಿ 14,000ಕ್ಕಿಂತ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಗಣಿಸಲಾಗಿದೆ.[೨] ಅಭಿವೃದ್ಧಿಶೀಲ ದೇಶಗಳಲ್ಲಿ ಜಲ ಮಾಲಿನ್ಯವು ಗಂಭೀರ ಸಮಸ್ಯೆಯಾಗಿದೆ, ಔದ್ಯಮಿಕ ದೇಶಗಳೂ ಸಹ ಮಾಲಿನ್ಯಗಳಿಂದ ತೊಂದರೆಯನ್ನು ಅನುಭವಿಸುತ್ತಿವೆ.
ನೀರು ಪ್ರಮುಖವಾಗಿ ಮಾನವನ ಉಪಯೋಗಕ್ಕೆ ಕುಡಿಯುವ ನೀರಿನ ರೀತಿ ಬಳಕೆಯಾಗುವಲ್ಲಿ ವಿಷಯುಕ್ತಗಳ ಸೇರಿಸುವಿಕೆಯಿಂದ ಹಾಳಾಗುತ್ತದೆ ಮತ್ತು ಮೀನಿನ ಥರದ ಜೈವಿಕ ಕುಟುಂಬಗಳು ಈ ಹಿನ್ನೆಲೆಯಲ್ಲಿ ತನ್ನ ಸೀಮಿತ ಸಾಮರ್ಥ್ಯದಲ್ಲಿ ಪ್ರಭಾವಬೀರುವುದು. ಪಾರಿಸರಿಕ ವಿದ್ಯಮಾನಗಳಾದ ಜ್ವಾಲಾಮುಖಿಗಳು, ಹಾವಸೆಗಳು, ಚಂಡಮಾರುತಗಳು, ಭೂಕಂಪಗಳ ಗಂಭೀರ ವ್ಯತ್ಯಾಸಕ್ಕೆ ಪರಿಸರದಲ್ಲಿ ನೀರಿನ ಸ್ಥಿತಿ ಮತ್ತು ನೀರಿನ ಗುಣಮಟ್ಟ ಪ್ರಮುಖವಾದ ಕಾರಣಗಳು. ಜಲ ಮಾಲಿನ್ಯವು ಹಲವಾರು ಕಾರಣಗಳನ್ನು ಹಾಗೂ ಗುಣಲಕ್ಷಣಗಳನ್ನು ಹೊಂದಿದೆ.
ಮೇಲ್ಮೈ ನೀರು ಮತ್ತು ಅಂತರ್ಜಲವು ಆಗಾಗ ಅಧ್ಯಯನ ಮತ್ತು ಪ್ರತ್ಯೇಕ ಮೂಲಗಳಿಂದ ನಿರ್ವಹಿಸಲ್ಪಡುತ್ತದೆ, ಮತ್ತು ಅವೆಲ್ಲವೂ ಅಂತರ್ ಸಂಬಂಧ ಉಳ್ಳದ್ದಾಗಿದೆ.[೩] ಮೇಲ್ಮೈ ನೀರಿನ ಮಾಲಿನ್ಯವನ್ನು ಅವುಗಳ ಮೂಲದ ಆಧಾರದ ಮೇಲೆ ಸಾಮಾನ್ಯವಾಗಿ ಎರಡು ಬಗೆಗಳಾಗಿ ವಿಂಗಡಿಸಲಾಗಿದೆ.
ಪ್ರತ್ಯಕ್ಷ ಮೂಲ ಮಾಲಿನ್ಯವು ವಿಭಿನ್ನ ರಹದಾರಿಗಳಾದ ಕೊಳವೆ ಅಥವಾ ನಾಲೆಗಳನ್ನು ಅವಲಂಬಿಸಿ ನೀರಿನ ದಾರಿಯನ್ನು ಸಂಪರ್ಕಿಸಿ ಸೋಂಕು ಉಂಟುಮಾಡುತ್ತದೆ. ಚರಂಡಿಗಳ ಶುದ್ಧೀಕರಣ ಘಟಕಗಳಿಂದ ಹೊರಟ ಕಶ್ಮಲಗಳು, ಕಾರ್ಖಾನೆ, ನಗರದ ಕಾರ್ಖಾನೆಗಳ ಹೊಲಸನ್ನು ಈ ಉದಾಹರಣೆಗಳು ಒಳಗೊಳ್ಳುತ್ತವೆ. ಅಮೆರಿಕ ಸಂಯುಕ್ತ ಸಂಸ್ಥಾನದ ಶುದ್ಧ ನೀರಿನ ಕಾನೂನು ಪ್ರತ್ಯಕ್ಷ ಮೂಲ ಮಾಲಿನ್ಯಕ್ಕೆ ವಿಧೇಯಕ| ವಿವರಿಸಿದೆ.[೪] 1987ರಲ್ಲಿ ತಿದ್ದುಪಡಿಯಾದ ಶುದ್ಧ ನೀರಿನ ಕಾನೂನಿನಲ್ಲಿ ಪುರಸಭೆಯ ಚರಂಡಿ ವ್ಯವಸ್ಥೆ, ಕಾರ್ಖಾನೆಗಳ ನೀರಿನ ತ್ಯಾಜ್ಯ, ನಿರ್ಮಾಣ ಸ್ಥಳಗಳ ನೀರಿನ ತ್ಯಾಜ್ಯಗಳನ್ನೂ ಕೂಡಾ ಸೇರಿಸಿದೆ.[೫]
ಪರೋಕ್ಷ ಮೂಲ ಮಾಲಿನ್ಯವು ಒಂದೇ ಮಾಲಿನ್ಯ ಮೂಲಗಳಿಂದ ಕಶ್ಮಲಗೊಳಿಸಲ್ಪಡುವುದಿಲ್ಲ. ಪರೋಕ್ಷ ಮೂಲ ಮಾಲಿನ್ಯವು ವಿಶಾಲ ಪ್ರದೇಶದಿಂದ ಸಣ್ಣ ಪ್ರಮಾಣದ ಕಲ್ಮಶ ಸೇರಿದ ಪರಿಣಾಮವಾಗಿರುತ್ತದೆ.ಕೃಷಿ ಭೂಮಿಯಲ್ಲಿನ ರಾಸಾಯನಿಕ ಗೊಬ್ಬರಗಳಿಂದ ಸಾರಜನಕದ ಮಂಡಲವು ಕರಗಿರುವುದು ಇದಕ್ಕೆ ಉದಾಹರಣೆ. ಕೃಷಿ ಭೂಮಿ ಅಥವಾ ಅರಣ್ಯ ಪ್ರದೇಶಗಳಿಂದ ಹರಿಯುವ ಕಶ್ಮಲ ನೀರಿನ ಕಾಲುವೆಗಳಿಂದ ಪೋಷಕಾಂಶಗಳು ಹೊರಹೋಗುವುದೂ ಪರೋಕ್ಷ ಮೂಲ ಮಾಲಿನ್ಯಕ್ಕೆ ಉದಾಹರಣೆ.
ಕೆಲವೊಮ್ಮೆ ವಾಹನ ನಿಲುಗಡೆಯ ಸ್ಥಳಗಳಿಂದ, ರಸ್ತೆಗಳಿಂದ, ಮುಖ್ಯ ರಸ್ತೆಗಳಿಂದ ಹೋಗುವ ಕಲುಶಿತ ನೀರನ್ನೂ ನಗರ ಕಲುಶಿತಗಳ ಹರಿಯುವಿಕೆಯೆಂದು ಪರೋಕ್ಷ ಮೂಲ ಮಾಲಿನ್ಯದ ವ್ಯಾಪ್ತಿಯಲ್ಲಿ ಸೇರಿಸಲಾಗುತ್ತದೆ. ಅಂತಿಮವಾಗಿ, ಇದನ್ನು ನಾಲೆಗಳ ಮೂಲಕ ಹರಿಸಿ ಕೊಳವೆಗಳಿಂದ ಹೊರವಲಯದ ನೀರಿಗೆ ಸಂಪರ್ಕಿಸಲಾಗುತ್ತದೆ, ಆದ್ದರಿಂದ ಇದನ್ನು ಪ್ರತ್ಯಕ್ಷ ಮೂಲ ಎಂದು ಗುರುತಿಸಬಹುದು. ಇಂತಹ ನೀರನ್ನು ನೇರವಾಗಿ ಬಳಸುವುದಿಲ್ಲ, ಮತ್ತು ನೀರನ್ನು ಬಸಿದು ಅಂತರ್ಜಾಲಕ್ಕೆ ಸಂಪರ್ಕಿಸಲಾಗಿದ್ದರಿಂದ ಇದು ಪರೋಕ್ಷ ಮೂಲ.
ಅಂತರ್ಜಲ ಮತ್ತು ಮೇಲ್ಮೈ ನೀರಿನ ಹೋಲಿಕೆ, ಹೊಂದಾಣಿಕೆ ತುಂಬಾ ಸೂಕ್ಷ್ಮವಾದುದು. ಆದ್ದರಿಂದ ಅಂತರ್ಜಲ ಮಾಲಿನ್ಯವನ್ನು ಸುಲಭವಾಗಿ ಮೇಲ್ಮೈ ನೀರಿನ ಮಾಲಿನ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ.[೩] ಅಂತರ್ಜಲ ನೀರಿನ ದಾರಿಗಳು ಮೇಲ್ಮೈ ನೀರಿನ ದಾರಿಗಳನ್ನು ಕಲುಶಿತಗಳಿಂದ ಸೋಕುವುದಿಲ್ಲವಾದ್ದರಿಂದ, ಪ್ರತ್ಯಕ್ಷ ಮೂಲ ಮತ್ತು ಪರೋಕ್ಷ ಮೂಲಗಳ ವ್ಯತ್ಯಾಸ ಮುಖ್ಯವಲ್ಲ. ಭೂಮಿಗೆ ಬಿದ್ದ ಒಂದು ತುಣುಕು ವಿಷ ರಾಸಾಯನಿಕವು, ಮೇಲ್ಮೈ ನೀರಿನ ಪದರಗಳಿಂದ ದೂರವಿದ್ದಲ್ಲಿ, ಪ್ರತ್ಯಕ್ಷ ಮೂಲ ಅಥವಾ ಪರೋಕ್ಷ ಮೂಲದ ವ್ಯಾಪ್ತಿಗೆ ಒಳಪಡದಿದ್ದರೂ ಮಾಲಿನ್ಯಕ್ಕೆ ದಾರಿ ಮಾಡಿಕೊಟ್ಟಿರುತ್ತದೆ. ಮಣ್ಣು ಮತ್ತು ಜಲಶಾಸ್ತ್ರ ಗುಣಲಕ್ಷಣಗಳ ಜೊತೆಗೆ ಪರಿಸರದ ಕಶ್ಮಲಗಳನ್ನೂ ಅಂತರ್ಜಲದ ವಿಶ್ಲೇಷಣೆಯು ವಿಶ್ಲೇಷಿಸುತ್ತದೆ.
ನಿರ್ದಿಷ್ಟ ಮಾಲಿನ್ಯಕಾರಕಗಳಾದ ರಾಸಾಯನಿಕಗಳು, ರೋಗಜನಕ ವೈರಸ್ಗಳು ನೀರನ್ನು ಸೇರಿ ಭೌತಿಕ ಅಥವಾ ಐಂದ್ರಿಕ ಬದಲಾವಣೆಗಳಾದ ವಾತಾವರಣದ ಉಷ್ಣತೆಯ ಏರಿಕೆ, ಬಿಳಿಚಿಕೊಳ್ಳುವಂತಹ ಪರಿಣಾಮಗಳು ಉಂಟಾಗುತ್ತವೆ.ನಿಯಂತ್ರಿಸಲ್ಪಟ್ಟ ಬಹಳಷ್ಟು ರಾಸಾಯನಿಕಗಳು ಮತ್ತು ಪದಾರ್ಥಗಳು (ಕ್ಯಾಲ್ಶಿಯಂ, ಸೋಡಿಯಂ, ಐರನ್, ಮ್ಯಾಂಗನೀಸ್, ಇತ್ಯಾದಿಗಳು) ನೈಸರ್ಗಿಕವಾಗಿ ಇರುವುದರಿಂದಾಗಿ, ನೀರಿನ ಸಾರವು ಯಾವುದು ನೈಸರ್ಗಿಕ ನೀರಿನ ಘಟಕ ಮತ್ತು ಯಾವುದು ಕಲುಶಿತ ಎಂಬುದನ್ನು ಕಂಡುಹಿಡಿಯುವ ಸಾಧನವಾಗಿದೆ.
ಆಮ್ಲಜನಕವು ನೈಸರ್ಗಿಕ ಪದಾರ್ಥಗಳಾದ ಮರಗಿಡಗಳಂತೆ ಮತ್ತು ಮನುಷ್ಯ ನಿರ್ಮಿತ ರಾಸಾಯನಿಕಗಳಂತೆ ಪಕೂತೂತುತುಕಕೀೀೀಕೂಕತೀಚಖಾಲಿಯಾಗುತ್ತಿರುವಂಥದ್ದಾಗಿದೆ. ಉಳಿದಂತೆ ನೈಸರ್ಗಿಕ ಮತ್ತು ಮಾನವನ ಮೂಲ ಪದಾರ್ಥಗಳ ಮಾಲಿನ್ಯವು ಬೆಳಕನ್ನು ತಡೆಯುವ ಮತ್ತು ಮರಗಿಡಗಳ ಬೆಳವಣಿಗೆಗೆ ಕಾರಣವಾಗುವ ಮತ್ತು ಕೆಲವು ಮೀನುಗಳ ಪುಪ್ಪುಸದ ಬೆಳವಣಿಗೆಯು ಕುಂಠಿತಗೊಳ್ಳುವುದಕ್ಕೆ ಕಾರಣವಾಗುತ್ತವೆ.[೬]
ಬಹಳಷ್ಟು ರಾಸಾಯನಿಕ ಪದಾರ್ಥಗಳು ವಿಷಯುಕ್ತವಾಗಿವೆ.ರೋಗಕಾರಕ ವೈರಸ್ಗಳು ನೀರಿನಿಂದ ಉಂಟಾಗುವ ಖಾಯಿಲೆಗಳನ್ನು ಮಾನವ ಮತ್ತು ಪ್ರಾಣಿಗಳಲ್ಲಿ ಉತ್ಪತ್ತಿಸುತ್ತದೆ.ನೀರಿನ ನೈಸರ್ಗಿಕತೆಯನ್ನು ಬದಲಾಯಿಸುವುದರಿಂದ ನೀರು ಆಮ್ಲತೆ (pHನಲ್ಲಿ ಬದಲಾವಣೆ), {1ವಿದ್ಯುತ್ ವಾಹಕತೆ{/1}, ತಾಪಮಾನ, ಮತ್ತು ಸಾರವನ್ನು ಕಳೆದುಕೊಳ್ಳುತ್ತದೆ.ಸಾರ ಕಳೆದುಕೊಂಡ ಮೇಲ್ಮೈ ನೀರಿನ ರಾಸಾಯನಿಕಗಳಿಂದ ನೀರು ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ.
ಕಾಲಿಫಾರ್ಮ್ ಏಕಾಣುಜೀವಿಯು ಸಾಮಾನ್ಯವಾಗಿ ಜಲ ಮಾಲಿನ್ಯದ ಏಕಾಣುಜೀವಿಯ ಸೂಚಕ. ಮಾನವನ ಆರೋಗ್ಯ ಸಮಸ್ಯೆಗಳಿಗೆ ಸಂಭಂಧಿಸಿದ ಈ ಕೆಳಗಿನ ಸೂಕ್ಷ್ಮಾಣು ಜೀವಿಗಳು ಮೇಲ್ಮೈ ನೀರಿನ ಪದರಗಳಲ್ಲಿ ಕಂಡುಬರುತ್ತವೆ.
ಗಮನಾರ್ಹ ಗುಣಮಟ್ಟದ ರೋಗಾಣುಗಳು ಅಸಮರ್ಪಕವಾದ ಚರಂಡಿಗಳಿಂದ ಹೊರಟ ಉತ್ಪನ್ನವಾಗಿರುತ್ತದೆ.[೯] ಕನಿಷ್ಠ ಕ್ರಮವೂ ಇಲ್ಲದೇ ನಿರ್ಮಿಸಿದ ಚರಂಡಿಗಳು ಇದಕ್ಕೆ ಕಾರಣವಾಗಿರುತ್ತದೆ.( ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಸಮಸ್ಯೆ ಗಂಭೀರವಾಗಿರುತ್ತದೆ.) ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಹಳೆಯ ನಗರಗಳಲ್ಲಿ ಹಳೆಯ ಮೂಲಸೌಲಭ್ಯಗಳು, ಬಿರುಕುಂಟಾದ ಚರಂಡಿ ಸಂಗ್ರಹ ವ್ಯವಸ್ಥೆಯು (ಕೊಳವೆಗಳು, ಯಂತ್ರಗಳು, ನಿಯಂತ್ರಕಗಳು) ಅಶುಚಿಯಾದ ನೀರನ್ನು ಹೊರಬಿಡುತ್ತವೆ. ಮಳೆಯಿಂದಾಗಿ ಹೊರಬೀಳುವ ನೀರನ್ನು ಹೊರಬಿಡಲು ಕೆಲವು ನಗರಗಳಲ್ಲಿ ಸಂಯೋಜಿತ ಚರಂಡಿ ವ್ಯವಸ್ಥೆಯೂ ಇದೆ.[೧೦] ಸರಿಯಾಗಿ ಪಾಲನೆ ಮಾಡದ ಜಾನುವಾರುಗಳಿಂದಲೂ ರೋಗಾಣುಗಳು ಉದ್ಭವಿಸಬಹುದು.
ಮಾಲಿನ್ಯಕಾರಕಗಳಲ್ಲಿ ಜೈವಿಕ ಮತ್ತು ಅಜೈವಿಕ ಪದಾರ್ಥಗಳು ಸೇರಿವೆ.
ಜೈವಿಕ ಜಲ ಮಾಲಿನ್ಯಕಾರಕಗಳು:
ಅಜೈವಿಕ ಜಲ ಮಾಲಿನ್ಯಕಾರಕಗಳು:
ಬರಿಗಣ್ಣಿಗೆ ಕಾಣುವ ಮಾಲಿನ್ಯ - ನಗರದ ಚರಂಡಿಗಳಲ್ಲಿ ತೇಲಬಲ್ಲ ಪದಾರ್ಥಗಳು ಹಾಗೂ ಕಸಕಡ್ಡಿಗಳು ಸಮುದ್ರದಲ್ಲಿ ಮೇಲ್ಮಟ್ಟದಲ್ಲಿ ಕಾಣುವಂಥವು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:
ಮಾನವನ ಮಧ್ಯಪ್ರವೇಶದಿಂದಾಗಿ ನೀರಿನ ಮೂಲಗಳಲ್ಲಿ ಉಂಟಾಗುವ ತಾಪಮಾನದಲ್ಲಾಗುವ ಏರಿಳಿತಗಳು ತಾಪ ಮಾಲಿನ್ಯಕ್ಕೆ ಕಾರಣವಾಗುತ್ತವೆ.ತಾಪ ಮಾಲಿನ್ಯಕ್ಕೆ ಮುಖ್ಯ ಕಾರಣವೆಂದರೆ ಕಾರ್ಖಾನೆಗಳ ಉತ್ಪಾದನೆ ಮತ್ತು ವಿದ್ಯುತ್ ಉತ್ಪಾದನಾ ಘಟಕಗಳು ಬಳಸುವ ಶೈತ್ಯೀ ಕರಣ ಉಪಕರಣಗಳು. ಉಷ್ಣವನ್ನು ತಡೆದುಕೊಳ್ಳುವ ಜೀವಿಗಳು ದಾಳಿಯಿಡುವಂತೆ, ಹೆಚ್ಚಿಸಿದ ನೀರಿನ ಉಷ್ಣಾಂಶವು ಆಮ್ಲಜನಕದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ (ಇದು ಮೀನನ್ನು ನಾಶಪಡಿಸಬಹುದು) ಮತ್ತು ಪರಿಸರ ವ್ಯವಸ್ಥೆಯ ಮೇಲೆ ಪ್ರಭಾವ ಬೀರುತ್ತದೆ, ನಗರದ ತ್ಯಾಜ್ಯವೂ ಕೂಡಾ ಮೇಲ್ಮೈ ನೀರಿನ ಪದರದಲ್ಲಿ ಉಷ್ಣಾಂಶವನ್ನು ಹೆಚ್ಚಿಸಬಲ್ಲುದಾಗಿದೆ. ಅತಿ ಶೀತ ನೀರನ್ನು ಉಷ್ಣ ಸರೋವರಗಳ ಮೂಲಕ್ಕೆ ಬೆರೆಸುವುದೂ ತಾಪ ಮಾಲಿನ್ಯಕ್ಕೆ ಕಾರಣವಾಗಬಹುದು.
ಜಲ ಮಾಲಿನ್ಯ ಕಾರಕಗಳ ರಾಸಾಯನಿಕ ಪರಿಣಾಮಗಳು ಮತ್ತು ಸಾಗಣೆ ==
ಬಹಳಷ್ಟು ಮಾಲಿನ್ಯಕಾರಕಗಳು ಕಾಲಕ್ರಮೇಣ ನದಿಗಳಿಂದ ಸಮುದ್ರಗಳಿಗೆ ಕೊಂಡೊಯ್ಯಲ್ಪಡುತ್ತವೆ. ಹೈಡ್ರಾಲಜಿ ಸಾಗಣೆಯ ಮಾದರಿಗಳ ಅಧ್ಯಯನದ ಪ್ರಕಾರ, ಜಗತ್ತಿನ ಕೆಲವು ಪ್ರದೇಶಗಳಲ್ಲಿ ಇದರ ಪರಿಣಾಮವನ್ನು ನದಿ ಸಮುದ್ರ ಸೇರುವಲ್ಲಿಂದ ನೂರಾರು ಮೈಲುಗಳವರೆಗೂ ಕಾಣಬಹುದಾಗಿದೆ. ಆಧುನಿಕ ಗಣಕಯಂತ್ರ ಮಾದರಿಗಳಾದ SWMM ಅಥವಾ DSSAM ಮಾದರಿಗಳನ್ನು ಬಳಸಿ ಜಲವಾಸಿಗಳ ವ್ಯವಸ್ಥೆಯ ಗತಿಯ ಪರೀಕ್ಷೆಯನ್ನು ಜಗತ್ತಿನ ಹಲವೆಡೆ ಮಾಡಲಾಗಿದೆ. ಕೋಪ್ಪಾಡ್ಸ್ (ಒಂದು ಜಾತಿಯ ಮೀನು) ರೀತಿಯ ಸೂಚಕ ಶೋಧಿತ ಆಹಾರದ ಜೀವಿಗಳಲ್ಲಿ ಮಾಲಿನ್ಯಕಾರಕಗಳ ಗತಿಯನ್ನು ನ್ಯೂ ಯಾರ್ಕ್ ಬ್ರೈಟ್ ನಲ್ಲಿ ಅಭ್ಯಸಿಸಲು ಉಪಯೋಗಿಸಲಾಗಿದೆ. ಉದಾಹರಣೆಗಾಗಿ, ಗರಿಷ್ಠ ಪ್ರಮಾಣದವಿಷಯುಕ್ತ ಪದಾರ್ಥಗಳನ್ನು ಹಡ್ಸನ್ ನದಿಯ ಬಾಯಿಗೆ ಸುರಿದಿರಲಿಲ್ಲ, ಆದರೆ 100 ಕಿಲೋಮೀಟರು ದಕ್ಷಿಣದಲ್ಲಿ ಸುರಿಯಲಾಗಿತ್ತು. ಹಲವಾರು ದಿನಗಳ ನಂತರ ಜಲಚರಗಳ ಅಂಗಾಂಶಗಳಲ್ಲಿ ಈ ವಿಷಕಾರಕಗಳು ಮತ್ತೆ ಒಂದುಗೂಡುತ್ತಿವೆ.ಭೂಮಿಯ ಸಂಕುಚಿತತೆಯಿಂದಾಗಿ ಹಡ್ಸನ್ ನದಿಯು ದಕ್ಷಿಣದ ತೀರದ ಗುಂಟ ಹರಿದಿದೆ. ರಾಸಾಯನಿಕಗಳು ಆಮ್ಲಜನಕವನ್ನು ಉಪಯೋಗಿಸಿದ್ದರಿಂದ ದಕ್ಷಿಣದ ತೀರದಲ್ಲಿ ಆಮ್ಲಜನಕವಿಲ್ಲದ ಸ್ಥಿತಿಯಿಂದಾಗಿ ಹಾವಸೆಗಳು ಮತ್ತು ಅತಿಯಾದ ಪೋಷಕಾಂಶಗಳಿಂದ ಅಜೀರ್ಣಗೊಂಡು ಕಡಲು ಪಾಚಿಗಳು ಸಾಯುತ್ತಿವೆ. ಆಹಾರಸರಪಣಿಯಲ್ಲಿ ವಿಷಯುಕ್ತ ಪದಾರ್ಥಗಳನ್ನು ಸೇವಿಸಿದ ಸಣ್ಣ ಮೀನುಗಳನ್ನು ತಿಂದ ಕೋಪ್ಪಾಡ್ಸ್ಗಳನ್ನು ತಿಂದು ಮೀನು ಮತ್ತುಕಪ್ಪೆಚಿಪ್ಪು ಗಳು ಸತ್ತಿವೆ. ಪ್ರತಿಯೊಂದು ಮಾಲಿನ್ಯಕಾರಕವೂ (ಉದಾಹರಣೆಗೆ ಭಾರೀ ಲೋಹಗಳು, ಪಾದರಸ, ನಿರಂತರ ಜೈವಿಕ ಮಾಲಿನ್ಯಕಾರಕಗಳಾದ DDT) ಪ್ರತೀ ಹಂತದ ಆಹಾರ ಸರಪಣಿಯನ್ನು ಮಾಲಿನ್ಯಗೊಳಿಸುತ್ತದೆ. ಸಾಂದರ್ಭಿಕವಾಗಿ ಈ ಅಂತರ್ಬದಲಾವಣೆಯನ್ನು ಹೊಂದುತ್ತಿರುವ ಜೈವಿಕ ಪದಾರ್ಥಗಳ ಮೊತ್ತವನ್ನು ಜೈವಿಕ ಗಾತ್ರವೃದ್ಧಿ ಎಂದು ಕರೆಯಲಾಗುತ್ತದೆ.
ದೊಡ್ಡ ಗಾಳಿ (ಸುಳಿಗಾಳಿಗಳು) ಸಮುದ್ರದಲ್ಲಿ ಪ್ಲಾಸ್ಟಿಕ್ ಕಸಗಳನ್ನು ತೇಲಿಬಿಡುತ್ತವೆ. ಭಾರೀ ಪ್ಯಾಸಿಫಿಕ್ ಕಸಗಳ ರಾಶಿ ಎಂದೇ ಕರೆಯಲ್ಪಟ್ಟಿದ್ದ ಮಾಲಿನ್ಯಕಾರಕಗಳನ್ನು ಉತ್ತರ ಪ್ಯಾಸಿಫಿಕ್ ಗಾಳಿಯು ಕೊಂಡೊಯ್ದಿದ್ದು, ಇದರ ಗಾತ್ರ ಸುಮಾರು ಟೆಕ್ಸಾಸ್ ನಗರದ ಗಾತ್ರಕ್ಕಿಂತ 100 ಪಟ್ಟು ದೊಡ್ಡದಾಗಿದೆ. ಈ ಅಳಿಯದ ವಸ್ತುಗಳು ಕಡಲಿನ ಹಕ್ಕಿಗಳ ಮತ್ತು ಪ್ರಾಣಿಗಳ ಹೊಟ್ಟೆಯಲ್ಲಿ ಸುತ್ತಿಕೊಳ್ಳುತ್ತವೆ.ಇದರ ಪರಿಣಾಮ ಆಹಾರದ ಬೇಡಿಕೆಗೆ ಮತ್ತು ಹಸಿವಿಗೆ ಜೀರ್ಣಕಾರಕಗಳು ಅಡ್ಡಿ ಮಾಡುವಂತಾಗುತ್ತದೆ.
ಕೆಲವು ರಾಸಾಯನಿಕಗಳು ತುಂಬಾ ದಿನಗಳ ಕಾಲ ಅಂತರ್ಜಲದ ಸರೋವರಗಳಲ್ಲಿರುವುದರಿಂದ ಕೊಳೆಯುತ್ತವೆ ಅಥವಾ ರಾಸಾಯನಿಕ ಪ್ರತಿಕ್ರಿಯೆಗೆ ಒಳಗಾಗುತ್ತವೆ. ತುಂಬಾ ಮುಖ್ಯವಾಗಿ, ಶುಚೀಕರಣ ಕಾರ್ಖಾನೆಗಳಲ್ಲಿ ಬಳಸುವ ಕ್ಲೋರಿನೇಟೆಡ್ ಹೈಡ್ರೋಕಾರ್ಬನ್ಸ್ ಗಳಾದ ಟ್ರಿಕ್ಲೊರೊಇಥೆಲೀನ್ ( ಕಾರ್ಖಾನೆಗಳಲ್ಲಿ ಲೋಹಗಳ ಶುಚಿ ಮತ್ತು ಎಲೆಕ್ಟ್ರಾನಿಕ್ ಉತ್ಪಾದನೆಗಳಲ್ಲಿ ಬಳಸುವ) ಮತ್ತು ಟೆಟ್ರಾಕ್ಲೊರೊಇಥೆಲೀನ್. (ಇತ್ತೀಚೆಗೆ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ಗಳಲ್ಲಿ ಶುಚಿ ಮಾಡುವುದರಿಂದ ಈ ಎಲ್ಲ ರಾಸಾಯನಿಕಗಳ ಬಳಕೆ ತಗ್ಗಿದೆ.) ಈ ಎರಡೂ ರಾಸಾಯನಿಕಗಳು ಕಾನ್ಸರ್ ಕಾರಕಗಳು ಮತ್ತು ಸ್ವತಂತ್ರವಾಗಿ ಅಥವಾ ಭಾಗಶಃ ಪ್ರತಿಕ್ರಿಯೆಯನ್ನು ತೋರಿಸುವುದರಿಂದ ಹೊಸ ಹೊಸ ವಿಷಯುಕ್ತ ರಾಸಾಯನಿಕಗಳನ್ನು (ಡಿಕ್ಲೊರೊಎಥಿಲೀನ್ ಮತ್ತು ವಿನೈಲ್ ಕ್ಲೋರೈಡ್ ಗಳನ್ನೂ ಸೇರಿದಂತೆ) ಉತ್ಪತ್ತಿಸುತ್ತವೆ.
ಅಂತರ್ಜಲ ಮಾಲಿನ್ಯವನ್ನು ತಗ್ಗಿಸುವುದು ಕಷ್ಟ, ಏಕೆಂದರೆ ಮೇಲ್ಮೈ ಜಲ ಮಾಲಿನ್ಯಕ್ಕಿಂತ ತುಂಬ ದೂರದ ತನಕ ಅಂತರ್ಜಲವು ಕೊಳವೆ ಬಾವಿಗಳ ಮೂಲಕ ಪ್ರವೇಶಿಸುತ್ತವೆ. ಮಣ್ಣು ಮತ್ತು ಶಿಲಾಂತರ್ಗತ ಜಲದಾರಿಗಳು ನೀರನ್ನು ಸಾಮಾನ್ಯ ಶುದ್ಧೀಕರಣದಿಂದ ಶುದ್ಧಿಗೊಳಿಸುತ್ತದೆ ಮತ್ತು ರಾಸಾಯನಿಕ ಪ್ರತಿಕ್ರಿಯೆ ಮತ್ತು ಜೈವಿಕ ಪ್ರಕ್ರಿಯೆಯಂತಹ ಕೆಲವು ಸಂದರ್ಭಗಳಲ್ಲೂ ಶುದ್ಧಿಗೊಳಿಸುತ್ತಿದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಮಣ್ಣಿನಲ್ಲಿರುವ ರಾಸಾಯನಿಕಗಳೊಂದಿಗೆ ಮಾಲಿನ್ಯಕಾರಕಗಳು ಸೇರುತ್ತವೆ. ಅಂತರ್ಜಲವು ಬಿರುಕುಗಳ ಮಧ್ಯೆ ಮತ್ತು ಭೂ ರಂಧ್ರಗಳ ಮಧ್ಯೆ ಸಾಗುವುದರಿಂದ ಶುದ್ಧೀಕರಣ ಪ್ರಕ್ರಿಯೆ ಸಾಧ್ಯವಾಗುವುದಿಲ್ಲ, ನಂತರ ಈ ನೀರು ಮೇಲ್ಮೈ ನೀರಿನ ಜೊತೆ ಬೆರೆಯುತ್ತದೆ. ಇದರಿಂದಾಗಿ ಮಾನವನ ಒಲವು ಸ್ವಾಭಾವಿಕ ಗುಂಡಿಯ ನೀರದಾರಿಯ ಸ್ಥಳವಿಶ್ಲೇಷಣಾ ಶಾಸ್ತ್ರದ ಕಡೆಗೆ ಹರಿದಿದೆ.
ವಿವಿಧ ಮೂಲಗಳ ಮಾಲಿನ್ಯಕಾರಕಗಳ ಉಪ ಪರಿಣಾಮಗಳದ್ದೇ ಒಂದು ವಿಭಿನ್ನ ಸ್ಥಿತಿ. ಕೆಸರಿನ ನೀರು ಮೇಲ್ಮೈ ನೀರಿನ ಜೊತೆ ಹರಿದು ಹೋಗುವದು, ನೀರಿನ ಕಣಗಳು ಸೂರ್ಯನ ಕಿರಣಗಳಿಗೆ ಅಡ್ಡಿ ಪಡಿಸುವುದು, ಹಸಿರು ಕಾಡಿನ ದ್ಯುತಿಸಂಶ್ಲೇಷಣಾ ಕ್ರಿಯೆಗೆ ಅಡ್ಡಿ, ಇವೆಲ್ಲವೂ ಉದಾಹರಣೆಗಳಷ್ಟೇ.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2008) |
ಜಲ ಮಾಲಿನ್ಯವು ಭೌತಿಕ, ರಾಸಾಯನಿಕ ಮತ್ತು ಜೈವಿಕ ವಿಧಾನಗಳಂಥ ವಿಶಾಲ ಹರವುಳ್ಳ ವಿಭಾಗಗಳಿಂದ ವಿಶ್ಲೇಷಿಸಲ್ಪಡುತ್ತದೆ. ಸಾಮಾನ್ಯವಾಗಿ ವಿಶ್ಲೇಷಣೆಗೆಂದೇ ವಿಶೇಷವಾದ ಮಾದರಿಗಳನ್ನು ಅನುಸರಿಸಲಾಗುತ್ತದೆ. ಉಷ್ಣಾಂಶವನ್ನು ಅಳೆಯಲಿಕ್ಕೆ ಸಾಮಾನ್ಯ ಮಾದರಿಗಳಲ್ಲದೇ in situ ನಂಥ ಕೆಲವು ವಿಧಾನಗಳನ್ನು ಪ್ರಯೋಗಿಸಲಾಗಿದೆ ಸರ್ಕಾರೀ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳು ಗುಣಮಟ್ಟದ, ಯೋಗ್ಯವಾದ ಪರೀಕ್ಷಾ ವಿಧಾನಗಳನ್ನು ತುಲನಾತ್ಮಕ ಫಲಿತಾಂಶಕ್ಕೆ ಸೂಕ್ತವಾಗುವಂತೆ ಅಭಿವೃದ್ಧಿಪಡಿಸಿದೆ.[೧೩]
ಗುಣಮಟ್ಟದ ಅಗತ್ಯತೆ ಮತ್ತು ನೀರಿನಲ್ಲಿನ ರೋಗಾಣುಗಳ ಆಧಾರದ ಮೇಲೆ ಭೌತಿಕ ಅಥವಾ ರಾಸಾಯನಿಕ ಪರೀಕ್ಷೆಯು ವಿಭಿನ್ನ ಮಾದರಿಗಳಲ್ಲಿ ನಡೆಯುತ್ತದೆ. ಕೆಲವು ಮಾಲಿನ್ಯಕಾರಕಗಳ ಮಾದರಿಯ ಪರಿಶೋಧನೆಯನ್ನು ಮಳೆಗಾಲದ ಸಂದರ್ಭದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ರೋಗಾಣುಗಳ ಮಾದರಿಗಳಲ್ಲಿ ಪದೇ ಪದೇ ಬದಲಾಗುತ್ತಿರುವ ವೈರಸ್ಗಳ ಗುಣಮಟ್ಟದ ಮಟ್ಟ ಇದಕ್ಕೆ ಕಾರಣ.ಸ್ವಯಂ ನಿಯಂತ್ರಣ ಸಾಧನಗಳಿಂದ ಹೊರಗೆ ಹರಿಬಿಡುವ ಹಂತದಲ್ಲಿ ವಿಜ್ಞಾನಿಗಳು ಈ ಮಾದರಿಯ ಅಂಕಿ-ಅಂಶಗಳನ್ನು ಕಲೆಹಾಕುತ್ತಿದ್ದಾರೆ.
ಜೈವಿಕ ಪರೀಕ್ಷೆಯ ಮಾದರಿಯು ಮೇಲ್ಮೈ ನೀರನ್ನು ಅವಲಂಬಿಸಿರುವ ಮರಗಿಡಗಳು, ಪ್ರಾಣಿಗಳನ್ನು ಒಳಗೊಂಡಿರುತ್ತದೆ.ಜನಗಣತಿ ಮತ್ತು ಜಲಮೂಲಕ್ಕೆ ವಾಪಸಾದ, ಅಥವಾ ವಿಷದ ಪ್ರಮಾಣದ ಜೈವಿಕ ಪರೀಕ್ಷೆಗೆ ಪರಿಶೀಲಿಸದ ವಿಶ್ಲೇಷಣಾ ಶೈಲಿಯನ್ನು ಇದು ಅವಲಂಬಿಸಿರುತ್ತದೆ.
ವಾತಾವರಣದ ಉಷ್ಣಾಂಶ, ಘನ ಸಾರ ಮತ್ತು ಮಲಿನತೆಯ ಆಧಾರದ ಮೇಲೆ ಸಾಮಾನ್ಯ ಭೌತಿಕ ಜಲ ಪರೀಕ್ಷೆಯನ್ನು ಮಾಡಲಾಗುತ್ತದೆ.
ಜಲ ಮಾದರಿಗಳು ರಸಾಯನಶಾಸ್ತ್ರದ ಸಿದ್ಧಾಂತಗಳನ್ನು ಅವಲಂಬಿಸಿ ಪರೀಕ್ಷಿಸಲ್ಪಡುತ್ತವೆ. ಜೈವಿಕ ಮತ್ತು ಅಜೈವಿಕ ಸಂಯುಕ್ತಗಳಿಗೆ ಹಲವಾರು ಪ್ರಸಿದ್ಧ ವಿಧಾನಗಳು ಲಭ್ಯವಿವೆ. ಪದೇ ಪದೇ ಉಪಯೋಗಿಸಲ್ಪಟ್ಟವುಗಳೆಂದರೆ, ಪಿ ಎಚ್ ಮಟ್ಟ, ಜೈವಿಕ ರಾಸಾಯನಿಕ ಆಮ್ಲಜನಕದ ಅಗತ್ಯತೆ, ರಾಸಾಯನಿಕ ಆಮ್ಲಜನಕದ ಅಗತ್ಯತೆ, ಪೋಷಕಾಂಶಗಳಾದ ನೈಟ್ರೇಟ್, ಫಾಸ್ಪರಸ್ ಸಂಯುಕ್ತಗಳು, ಲೋಹಗಳಾದ ತಾಮ್ರ, ತವರ, ಕ್ಯಾಡ್ಮಿಯಂ, ಸೀಸ, ಪಾದರಸ, ತೈಲಗಳಾದ ಗ್ರೀಸ್, ಪೆಟ್ರೋಲಿಯಮ್ ಹೈಡ್ರೋಕಾರ್ಬನ್ ಗಳು, ಕ್ರಿಮಿನಾಶಕಗಳು.
ಜೈವಿಕ ಪರೀಕ್ಷೆಯು ಮರಗಿಡಗಳ ಬಳಕೆ, ಪ್ರಾಣಿಗಳು ಹಾಗೂ/ಅಥವಾಅಸಮ ನೈಸರ್ಗಿಕ ವ್ಯವಸ್ಥೆಯನ್ನು ನಿಯಂತ್ರಿಸುವದನ್ನು ಒಳಗೊಂಡಿರುತ್ತದೆ.
ನಗರಗಳಲ್ಲಿ ಮನೆಯ ಚರಂಡಿಯನ್ನು ಕೇಂದ್ರೀಕೃತ ಚರಂಡಿ ಶುದ್ಧೀಕರಣ ಘಟಕಗಳನ್ನಾಗಿ ಪರಿಗಣಿಸಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಈ ರೀತಿಯ ಬಹಳಷ್ಟು ಘಟಕಗಳು ಸ್ಥಳೀಯ ಸರ್ಕಾರೀ ಸಂಸ್ಥೆಗಳಿಂದ ನಡೆಸಲ್ಪಡುತ್ತದೆ. ನಗರಸಭೆಯ ಚಿಕಿತ್ಸಾ ಘಟಕಗಳು, ಬಿಒಡಿ ಮತ್ತು ಜಡ ಘನಗಳಂತಹ ಸಮ್ಮಿಳಿತ ಮಾಲಿನ್ಯಕಾರಕಗಳನ್ನು ನಿಯಂತ್ರಿಸುತ್ತವೆ. ಸುಸಜ್ಜಿತ ನಿರ್ವಹಣಾ ವ್ಯವಸ್ಥೆಗಳು ಶೇಕಡಾ 90ರವರೆಗೆ ಮಾಲಿನ್ಯಕಾರಕಗಳನ್ನು ನಿವಾರಿಸಬಲ್ಲವು. ಕೆಲವು ಘಟಕಗಳು ಪೋಷಕಾಂಶಗಳನ್ನು ಮತ್ತು ರೋಗಾಣು ವೈರಸ್ ಗಳನ್ನು ಚಿಕಿತ್ಸಿಸಲು ವಿಶೇಷ ಉಪವ್ಯವಸ್ಥೆಗಳನ್ನು ಹೊಂದಿವೆ. ಕಾರ್ಖಾನೆಗಳ ತ್ಯಾಜ್ಯಜಲದಲ್ಲಿ ಕಂಡುಬರುವ ವಿಷಯುಕ್ತ ಪರಾರ್ಥಗಳನ್ನು ಉಪಚರಿಸಲು ನಗರಸಭೆಯ ಬಹಳಷ್ಟು ಘಟಕಗಳು ಸೌಲಭ್ಯವನ್ನು ಹೊಂದಿರುವುದಿಲ್ಲ.[೧೪]
ನಗರದಲ್ಲಿ ಚರಂಡಿಯ ನೈರ್ಮಲ್ಯ ಕಾಮಗಾರಿಯು ಈ ಕೆಳಗಿನ ಒಂದು ಅಥವಾ ಒಂದಕ್ಕಿಂತ ಹೆಚ್ಚು ತಾಂತ್ರಿಕತೆಯನ್ನು ಬಳಸಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ:
ಮನೆಗಳಲ್ಲಿ ಅಥವಾ ವಾಣಿಜ್ಯ ಬಳಕೆಯ ನಂತರ ನಗರಸಭೆಯ ಶುಚೀಕರಣ ಘಟಕಗಳಿಂದ ಬೇರೆಯಾದ ಸ್ವತಂತ್ರ ಸಂಗ್ರಾಹಕ ಗಳಿಂದ ಸರಿಯಾಗಿ ಉಪಚರಿಸದೇ ಹೊಲಸು ನೀರನ್ನು ಮಣ್ಣಿಗೆ ಹರಿಬಿಡಲಾಗುತ್ತದೆ.ಪರ್ಯಾಯವಾಗಿ, ಹಳ್ಳಿಗಳಲ್ಲಿರುವಂತೆ ಮನೆಬಳಕೆಯ ತ್ಯಾಜ್ಯ ಜಲವನ್ನು ಸ್ವತಂತ್ರ ನಿರ್ವಹಣೆಯ ಶುಚೀಕರಣ ಘಟಕಗಳಿಗೆ ಹರಿಬಿಡಬಹುದು.
ಕೆಲವು ಉದ್ಯಮಗಳು ಸಾಮಾನ್ಯ ಮನೆಬಳಕೆಯಿಂದ ಹೊರಡುವಂತಹ ತ್ಯಾಜ್ಯಜಲವನ್ನು ಹೊರಬಿಡುತ್ತವೆ. ಅವುಗಳನ್ನು ನಗರಸಭೆಯ ವ್ಯವಸ್ಥೆಯೇ ನಿರ್ವಹಿಸುತ್ತವೆ. ಇನ್ನೂ ಕೆಲವು ಉದ್ಯಮಗಳು ಅತಿ ಅವಧಾನಿತ ಮಾಲಿನ್ಯಕಾರಕ ಬಂಧಗಳು (ಉದಾಹರಣೆಗೆ ತೈಲ, ಗ್ರೀಸ್) ವಿಷಯುಕ್ತ ಮಾಲಿನ್ಯಕಾರಕಗಳು (ಉದಾಹರಣೆಗೆ ಭಾರೀ ಲೋಹಗಳು, ಚಂಚಲ ಜೈವಿಕ ಮಾಲಿನ್ಯಕಾರಕಗಳು ಅಥವಾ ವಿಭಕ್ತ ಮಾಲಿನ್ಯಕಾರಕಗಳಾದ ಅಮೋನಿಯಾ ಮುಂತಾದವುಗಳು) ವಿಶೇಷ ಉಪಚಾರವನ್ನು ಬಯಸುತ್ತವೆ. ಈ ಕೆಲವು ವ್ಯವಸ್ಥೆಗಳು ವಿಷಯುಕ್ತ ಬಂಧಗಳ ಪೂರ್ವೋಪಚಾರವನ್ನು ಮಾಡಿ ನಗರಸಭೆಯ ಭಾಗೋಪಚರಿಸಲ್ಪಟ್ಟ ತ್ಯಾಜ್ಯಜಲಕ್ಕೆ ಹರಿಬಿಡುತ್ತವೆ. ಉದ್ಯಮಗಳು ಭಾರೀ ಪ್ರಮಾಣದ ತ್ಯಾಜ್ಯಜಲವನ್ನು ಸಂಪೂರ್ಣವಾಗಿ ತಮ್ಮ ಸ್ವಂತ ಸ್ಥಳದ ಉಪಚಾರ ವ್ಯವಸ್ಥೆಯಿಂದ ಹರಿಬಿಡುತ್ತವೆ.
ಮಾಲಿನ್ಯ ನಿರೋಧ ಪ್ರಕ್ರಿಯೆಯಲ್ಲಿ ಸಾಫಲ್ಯಯುತವಾಗಿ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವಲ್ಲಿ ಹಲವು ಉದ್ಯಮಗಳು ಉತ್ಪನ್ನ ಪ್ರಕ್ರಿಯೆಯನ್ನು ಪುನರ್ನಕ್ಷಿಸಿವೆ. ವಿದ್ಯುತ್ ಘಟಕಗಳ ಮೂಲಕ ಅಥವಾ ಉತ್ಪನ್ನ ಘಟಕಗಳ ಮೂಲಕ ಕಾಯಿಸಲ್ಪಟ್ಟ ನೀರು ಈ ಕೆಳಗಿನವುಗಳಿಂದ ನಿರ್ವಹಿಸಲ್ಪಟ್ಟಿದೆ:
ಪರೋಕ್ಷ ಮೂಲದ ನಿಯಂತ್ರಣ
ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ಹರಿದು ಹೋದ ಕೆಸರು (ಸಡಿಲ ಮಣ್ಣು) ಕೃಷಿ ಭೂಮಿಯ ಮಾಲಿನ್ಯಕ್ಕೆ ಕಾರಣವಾಗಿದೆ.[೬] ರೈತರು, ಕೊರೆತ ನಿರ್ವಹಣೆಯ ಮೂಲಕ ಹೊರ ಹರಿದುಹೋಗುವ ಮಣ್ಣನ್ನು ತಮ್ಮ ಸ್ಥಳಗಳಲ್ಲೇ ಉಳಿಸಿಕೊಳ್ಳಬಹುದು. ಭೂ ಮೇಲ್ಪದರದ ಅಗೆತ, ಬೆಳೆಗೆ ಹಸಿಗೊಬ್ಬರ ಹಾಕುವಿಕೆ, ಫಸಲು ತಿರುಗಿಸುವಿಕೆ, ದೀರ್ಘಕಾಲಿಕ ಬೆಳೆಗಳ ನಾಟಿ ಮತ್ತು ನದೀತೀರದ ಸಸ್ಯತಡೆ[೧೬][೧೭]: pp. 4-95–4-96 ಯಂಥ ಸಾಮಾನ್ಯ ತಂತ್ರಗಳು.
[[ನೈಟ್ರೊಜನ್|ಸಾರಜನಕ]ದ] ಪೋಷಕಾಹಾರ ಮತ್ತು ಫಾಸ್ಪರಸ್ಗಳು ಹಾಗೂ ಪ್ರಾಣಿಗಳ ನೈಸರ್ಗಿಕ ಗೊಬ್ಬರ ಹಾಗೂ ನಗರದ ಅಥವಾ ಕಾರ್ಖಾನೆಗಳ ತ್ಯಾಜ್ಯಜಲ ಅಥವಾ ಕೆಸರು ನೀರು ಕೃಷಿ ಭೂಮಿಗೆ ವಾಣಿಜ್ಯ ರಸಗೊಬ್ಬರಗಳಾಗಿ ನೇರವಾಗಿ ಬಳಸಲ್ಪಡುತ್ತವೆ; ಪೋಷಕಾಂಶಗಳೂ ಕೂಡಾ ಬೆಳೆಗಳಿಂದ ಹೊರಹೋಗುವ ತ್ಯಾಜ್ಯ, ನೀರಾವರಿ ನೀರು, ವನ್ಯಜೀವಿಗಳು, ಮತ್ತು ಪರಿಸರದಿಂದ ಹೊರಹೋಗುತ್ತವೆ.[೧೭]: p. 2-9 ಪೋಷಕಾಂಶಗಳ ಅತಿ ಬಳಕೆಯನ್ನು ತಪ್ಪಿಸಲು ರೈತರು ಪೋಷಕಾಂಶಗಳ ನಿರ್ವಹಣೆಯನ್ನು ಅಭಿವೃದ್ಧಿ ಮತ್ತು ಅನುಸರಣೆ ಮಾಡಬೇಕು.[೧೬][೧೭]: pp. 4-37–4-38
ಕ್ರಿಮಿನಾಶಕಗಳ ಪರಿಣಾಮವನ್ನು ನಿಯಂತ್ರಿಸಲು ರೈತರು ಸಂಯೋಜಿತ ಕೀಟ ನಿರ್ವಹಣೆಯಂತಹ (ಜೈವಿಕ ಕೀಟ ನಿಯಂತ್ರಣವನ್ನೂ ಒಳಗೊಂಡ) ನೀರಿನ ಗುಣಮಟ್ಟವನ್ನು ರಕ್ಷಿಸುವ, ರಾಸಾಯನಿಕ ಕ್ರಿಮಿನಾಶಕಗಳ ಅವಲಂಬನೆಯನ್ನು ಕಡಿಮೆಮಾಡುವ, ಕೀಟಗಳ ನಿರ್ವಹಣಾ ನಿಯಂತ್ರಣ ತಂತ್ರಗಳನ್ನು ಉಪಯೋಗಿಸಬಹುದು.[೧೮]
ಪ್ರತ್ಯಕ್ಷ ಮೂಲ ತ್ಯಾಜ್ಯಜಲದ ಉಪಚಾರ
ಅಮೆರಿಕದಲ್ಲಿ ಭಾರೀ ಪ್ರಮಾಣದ ಜಾನುವಾರು ಮತ್ತು ಕೋಳಿ ನಿರ್ವಹಣಾ ಕಾರ್ಖಾನೆಯ ವ್ಯವಸಾಯ ಕ್ಷೇತ್ರಗಳು, ಅವಧಾನಿತ ಪ್ರಾಣಿ ಪೂರೈಕೆಯ ಕ್ರಿಯೆ ಅಥವಾ ಬಂಧಿತ ಪ್ರಾಣಿ ಪೂರೈಕೆಯ ಕ್ರಿಯೆ ಎಂದು ಕರೆಯಲ್ಪಟ್ಟಿವೆ. ಇವು ಈಗ ಸರ್ಕಾರದ ನೀತಿ ನಿಯಮಗಳ ವೃದ್ಧಿಗೆ ವಿಷಯವಾಗಿದೆ.[೧೯][೨೦] ಪ್ರಾಣಿಗಳ ತ್ಯಾಜ್ಯವನ್ನು ಸಾಮಾನ್ಯವಾಗಿ ಹಸಿರು ಹುಲ್ಲಿನ ಬುಡಗಳಿಗೆ ಹರಿಬಿಡಲಾಗುತ್ತದೆ. ನಿರ್ಮಿತ ಜೌಗು ಪ್ರದೇಶಗಳಲ್ಲಿ ಕೆಲವೊಂದು ಬಾರಿ ಪ್ರಾಣಿಗಳ ತ್ಯಾಜ್ಯದ ಮೂಲಕ ಆಮ್ಲಜನಕ ರಹಿತ ಜಲಸ್ಥಿತಿ ಯನ್ನು ಉಂಟು ಮಾಡಲಾಗುತ್ತದೆ. ಮಣ್ಣಿನ ಉತ್ತಮೀಕರಣಕ್ಕಾಗಿ ಕೆಲವು ಪ್ರಾಣಿಗಳ ತ್ಯಾಜ್ಯವನ್ನು ಒಣಹುಲ್ಲಿನ ಜೊತೆ ಅತೀ ಉಷ್ಣದಲ್ಲಿ ಬೆರೆಸಿ ಏಕಾಣುಜೀವಿಗಳನ್ನು ಹೋಗಲಾಡಿಸಿ ನೈಸರ್ಗಿಕ ಗೊಬ್ಬರವನ್ನು ತಯಾರಿಸಲಾಗುತ್ತದೆ.
ಕಟ್ಟಡ ನಿರ್ಮಾಣ ಸ್ಥಳದ ತ್ಯಾಜ್ಯವು ಈ ಕೆಳಗಿನವುಗಳಿಂದ ನಿರ್ವಹಿಸಲ್ಪಟ್ಟಿದೆ:
ವಿಷಯುಕ್ತ ರಾಸಾಯನಿಕಗಳಾದ ವಾಹನ ಇಂಧನ ಮತ್ತು ಗಾರೆಯ ತ್ಯಾಜ್ಯಗಳ ಹೊರಹೋಗುವಿಕೆಯು ಈ ಕೆಳಗಿನವುಗಳಿಂದ ಸುರಕ್ಷಿಸಲ್ಪಟ್ಟಿದೆ:
ಮಾಲಿನ್ಯಕಾರಕಗಳ ವಿಸರ್ಜನೆಯ ರೀತಿಯಲ್ಲೇ ಪರಿಣಾಮಕಾರೀ ನಿರ್ವಹಣೆಯು ನಗರದ ಹೊರಹರಿವಿನ ವೇಗ ಮತ್ತು ಗತಿಯನ್ನು ನಿಯಂತ್ರಿಸುತ್ತದೆ. ಸ್ಥಳೀಯ ಸರ್ಕಾರೀ ನಿರ್ವಹಣೆಯು ನಗರದ ಹೊರಹರಿವಿನ ಪ್ರಮಾಣವನ್ನು ಕಡಿಮೆಗೊಳಿಸಲು ವಿವಿಧ ತಂತ್ರಗಳನ್ನು ಉಪಯೋಗಿಸುತ್ತಿದೆ. ಜಲಗುಣದ ನಿಯಂತ್ರಣ, ಜಲಗುಣದ ಉತ್ತಮೀಕರಣ ಮತ್ತು ಈ ಎರಡೂ ಕಾರ್ಯಗಳನ್ನು ಪ್ರಯೋಗಿಸುವ ಈ ತಂತ್ರಗಳು ಉತ್ತಮ ನಿರ್ವಹಣಾ ಪ್ರಯತ್ನಗಳು ಎಂದು ಅಮೆರಿಕದಲ್ಲಿ ಕರೆಯಲ್ಪಟ್ಟಿದೆ.[೨೩]
ಮಾಲಿನ್ಯ ಮುನ್ಸೂಚನಾ ಪ್ರಯತ್ನಗಳು ಕಡಿಮೆ ಪ್ರಭಾವಿತ ಬೆಳವಣಿಗೆಯ ತಂತ್ರಗಳು, ಹಸಿರು ಛಾವಣಿಯ ಸ್ಥಾಪನೆ ಮತ್ತು ರಾಸಾಯನಿಕಗಳ ನಿರ್ವಹಣೆಯ ಉತ್ತಮೀಕರಣ ( ಉದಾಹರಣೆಗೆ ವಾಹನ ಇಂಧನಗಳ, ತೈಲ, ರಾಸಾಯನಿಕ ಗೊಬ್ಬರಗಳ, ವಿಷಕಾರಕಗಳ ನಿರ್ವಹಣೆ).[೨೪] ಹೊರಹರಿವಿನ ಸಾವಧಾನಿಸುವಿಕೆ ವ್ಯವಸ್ಥೆಯು ಅಂತರ್ವ್ಯಾಪಿಸಿದ ಹೊಂಡಗಳು, ಜೈವಿಕ ಧಾರಣ ವ್ಯವಸ್ಥೆ, ನಿರ್ಮಿತ ಜವುಗು ಪ್ರದೇಶ, ಧಾರಣಾ ಹೊಂಡಗಳು ಮತ್ತು ಇನ್ನಿತರ ಸಂಬಂಧೀ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.[೨೫][೨೬]
ಅಣು ಮಾಲಿನ್ಯದ ಹೊರಹರಿವು ಅಂತರ್ವ್ಯಾಪಕ ಹೊಂಡಗಳು ಮತ್ತು ಜೈವಿಕ ಧಾರಣಾ ಹೊಂಡಗಳಂತಹ ತ್ಯಾಜ್ಯಜಲದ ನಿರ್ವಹಣಾ ವ್ಯವಸ್ಥೆಯನ್ನು ನೇರವಾಗಿ ಅಂತರ್ಜಲಕ್ಕೆ ಹರಿಬಿಡುವುದನ್ನು ತಡೆಯಲು ನಿರ್ಮಿಸಲಾಗಿದೆ. ಧಾರಣಾ ಹೊಂಡಗಳಲ್ಲಿ ಸೂರ್ಯಕಿರಣಗಳಿಂದ ನೀರು ಬಿಸಿಯಾಗುವುದರಿಂದ ವಾತಾವರಣದ ಉಷ್ಣವನ್ನು ಕಡಿಮೆಗೊಳಿಸುವುದಕ್ಕೆ ಸಶಕ್ತವಾಗಿಲ್ಲ.[೨೩]: p. 5-58
ಅಭಿವೃದ್ಧಿಯುತ ದೇಶಗಳಲ್ಲಿ, ಕಳೆದ ಕೆಲವು ದಶಕಗಳಿಂದ ಜಲಮಾಲಿನ್ಯದ ಪ್ರತ್ಯಕ್ಷ ಮೂಲದ ತಡೆಯು ಮುಖ್ಯ ಉದ್ದೇಶವಾಗಿದೆ. ಬಹಳಷ್ಟು ಮೂಲಗಳ ಪ್ರತ್ಯಕ್ಷ ಮೂಲವನ್ನು ಪರಿಣಾಮಕಾರಿಯಾಗಿ ಕಾರ್ಖಾನೆಗಳು ನಿಯಂತ್ರಣ ಮಾಡುತ್ತಿವೆ ಮತ್ತು ನಗರದ ಹಾಗೂ ಉದ್ಯಮಗಳ ತ್ಯಾಜ್ಯಗಳ ಚರಂಡಿ ನಿರ್ವಹಣಾ ಘಟಕಗಳು ಪರೋಕ್ಷ ಮೂಲ ಮಾಲಿನ್ಯದ ಈಗಿನ ಮುಖ್ಯ ಗಮನವಾಗಿದೆ.[೨೭]
ಗುಣಮಟ್ಟ ಮತ್ತು ಪರಿಮಾಣದ ನೀರನ್ನು ಭೂಮಿಗೆ ಹರಿಸುವುದನ್ನು ಸಂಯುಕ್ತ ಸಾಮ್ರಾಜ್ಯದಲ್ಲಿ ಸಾಮಾನ್ಯ ನಿಯಮಗಳಿಂದ ಸಂರಕ್ಷಿಸಲಾಗಿದೆ.16ನೇ ಶತಮಾನದ ಅಪರಾಧೀ ಕಾಯಿದೆಯಲ್ಲಿ ಜಲ ಮಾಲಿನ್ಯದ ಬಗ್ಗೆ ಕೆಲವು ರಕ್ಷಣೆಯನ್ನು ಪ್ರಯತ್ನಿಸಿದೆ, ಆದರೆ ನದಿಗಳ ಕಾನೂನು 1951-1961 ರಲ್ಲಿ ಮಾಲಿನ್ಯಕ್ಕೆ ಸಂಬಂಧಿಸಿದ ಜಲ ಮಾಲಿನ್ಯವನ್ನು ಯಾಂತ್ರೀಕೃತ ಪ್ರಯೋಗವಾಗಿಸಿದೆ. ಈ ಎಲ್ಲಾ ಕಾನೂನುಗಳು 1984ರ ಮಾಲಿನ್ಯ ನಿಯಂತ್ರಣ ಕಾಯಿದೆ ಯಿಂದ ಬಲಪಡೆದುಕೊಂಡಿದೆ, ಈ ಕಾನೂನು ಹಿಂದಿನ ಕಾನೂನುಗಳ ಅಧಿವೃದ್ಧಿ ಮತ್ತು ಬೆಳವಣಿಗೆಯಾಗಿದೆ. ಸರೋವರ ಮತ್ತು ನದಿ, ಅಂತರ್ಜಲ ಅಥವಾ ಸಮುದ್ರವನ್ನು ಮಾಲಿನ್ಯವಾಗಿಸುವುದು ಅಥವಾ ಅಸಮರ್ಪಕ ರೀತಿಯಲ್ಲಿ ರಾಸಾಯನಿಕಗಳನ್ನು ಚೆಲ್ಲುವುದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಂಗ್ಲಂಡ್ ಮತ್ತು ವೇಲ್ಸ್ಗಳಲ್ಲಿ ವಾತಾವರಣ ಸಂಸ್ಥೆಗಳು ಮತ್ತು ಸ್ಕಾಟ್ಲ್ಯಾಂಡ್ ಎಸ್ಇಪಿಎನಲ್ಲಿ ಮಾತ್ರ ಈ ಪರವಾನಗಿ ಕೊಡಲಾಗುತ್ತದೆ.
ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 19ನೇ ಶತಮಾನದಲ್ಲಿ ಮಾಲಿನ್ಯ ನಿಯಂತ್ರಣವು ಜಲ ಮಾಲಿನ್ಯ ನಿಯಂತ್ರಣದಡಿಯಲ್ಲಿ ಜಾರಿಗೆ ಬಂತು ಮತ್ತು ಒಳಾಡಳಿತ ರಾಜ್ಯ ಸಂವಿಧಾನವು 1899ರಲ್ಲಿ ಜಾರಿಗೆ ಬಂದಿದೆ.ರಾಜ್ಯ ಸಂವಿಧಾನದ ಅಸಮ್ಮತಿಯ ಕಾನೂನು, 1899ರ ನದಿಗಳ ಮತ್ತು ಹಾರ್ಬರ್ಗಳ ಕಾನೂನು ರಾಷ್ಟ್ರೀಯ ನೌಕಾಸಂಚಾರದ ನದಿಗಳಿಗೆ, ಕೊಳಗಳಿಗೆ,ಪ್ರವಾಹಗಳಿಗೆ, ಮತ್ತು ಉಳಿದ ನೌಕಾಸಂಚಾರ ಯೋಗ್ಯ ಜಲಮೂಲಗಳಿಗೆ ತಿರಸ್ಕರಿತ ವಿಷಗಳನ್ನು ಬೆರೆಸುವುದನ್ನು ನಿಷೇಧಿಸಿದೆ.1948ರಲ್ಲಿ ಜಾರಿಗೆ ತರಲಾದ ಜಲ ಮಾಲಿನ್ಯ ನಿಯಂತ್ರಣ ಕಾನೂನು ಜನಸಾಮಾನ್ಯರಿಗೆ ಜಲ ಮಾಲಿನ್ಯ ತಡೆಯಲು ಅಧಿಕೃತತೆಯನ್ನು ನೀಡಿದೆ. ಹೀಗಿದ್ದರೂ ಈ ಕಾನೂನು ಗಂಭೀರ ಮಾಲಿನ್ಯ ವನ್ನು ತಡೆಗಟ್ಟಲು ಶಕ್ತವಾಗಿಲ್ಲ.
ಜನಸಾಮಾನ್ಯರ ತಿಳುವಳಿಕೆಯನ್ನು ಹೆಚ್ಚಿಸಲು ಮತ್ತು ಜಲ ಮಾಲಿನ್ಯದ ಬಗ್ಗೆ ಕಾಳಜಿ ಮೂಡಿಸಲು 1972ರ ಜಲ ಮಾಲಿನ್ಯ ಕಾನೂನನ್ನು ಪುನರ್ನವೀಕರಿಸಲು ಸಂಘಸಂಸ್ಥೆಗಳು ಮುಂದಾಗಿವೆ. ಸುರಕ್ಷಿತ ಜಲ ಕಾನೂನು ಎಂದೇ ಪರಿಚಿತವಾಗಿರುವ 1972ರ ಜಲ ಮಾಲಿನ್ಯ ನಿಯಂತ್ರಣ ಕಾನೂನು, ಪ್ರತ್ಯಕ್ಷ ಮೂಲ ಮಾಲಿನ್ಯದ ನಿಯಂತ್ರಣಕ್ಕೆ ಮೂಲ ತಾಂತ್ರಿಕತೆಯನ್ನು ಸ್ಥಾಪಿಸಿದೆ.[೨೮] ಉದ್ಯಮಗಳಿಗೆ ಮತ್ತು ನಗರಸಭೆಯ ಚರಂಡಿ ಶುದ್ಧೀಕರಣಾ ಘಟಕಗಳಿಗೆ ತ್ಯಾಜ್ಯಜಲದ ಮಾನದಂಡಗಳನ್ನುಸಂಯುಕ್ತಸಂಸ್ಥಾನದ ವಾತಾವರಣ ಸುರಕ್ಷಾ ಸಂಸ್ಥೆಯು ಪೂರ್ವನಿರ್ಧರಿಸಿದೆ.ಈ ಕಾನೂನು ಮೇಲ್ಮೈ ನೀರಿನ ಮೂಲಗಳಿಗೂ ಜಲ ಗುಣಮಟ್ಟದ ಮಾನದಂಡಗಳನ್ನು ನಿರ್ಧರಿಸುವ ಅಗತ್ಯವಿದೆ. ನಗರಸಭಾ ಚರಂಡಿ ಶುದ್ಧೀಕರಣ ಘಟಕಗಳಿಗೆ ಭಾರೀ ಹಣಕಾಸಿನ ನೆರವಿನ ಲಭ್ಯತೆಯನ್ನು ಈ ಕಾನೂನು ಅಂಗೀಕರಿಸಿದೆ. ಪರೋಕ್ಷ ಮೂಲ ಮಾಲಿನ್ಯಕ್ಕೂ ಕೂಡಾ ಇದಕ್ಕೆ ಹತ್ತಿರವಾದ ಮಾನದಂಡಗಳನ್ನು 1972ರ ಕಾಯಿದೆಯಲ್ಲಿ ತರುವ ಅಗತ್ಯವಿರಲಿಲ್ಲ.
1987ರ ಮಹಾಸಭೆಯು ಜಲ ಗುಣಮಟ್ಟದ ಕಾನೂನಿನ ವಿಸ್ತೀರ್ಣವನ್ನು ಹೆಚ್ಚಿಸಿದೆ.[೨೯] ನಗರಸಭೆ ಮತ್ತು ಉದ್ಯಮಗಳ ಚರಂಡಿ ನೀರಿನ ಹೊರಹರಿಯುವಿಕೆಯನ್ನು ಪ್ರತ್ಯಕ್ಷ ಮೂಲದ ಮತ್ತು ಅಗತ್ಯವಿರುವ ಸೌಲಭ್ಯಗಳ ಪರವಾನಗಿಗೆ ಸೂತ್ರಗಳನ್ನು ತಿಳಿಸಿದೆ. 1987ರ ಕಾನೂನು ಹಣಕಾಸಿನ ವ್ಯವಸ್ಥೆಯನ್ನು ನಗರಸಭೆಯ ಚಿಕಿತ್ಸಾ ಯೋಜನೆ ಮತ್ತು ಪರೋಕ್ಷ ಮೂಲ ಪ್ರಾತ್ಯಕ್ಷಿಕಾ ಕೊಡುಗೆ ಯೋಜನೆಗೆ ಪುನರ್ಆಯೋಜಿಸಿದೆ. 2002ರ ಗ್ರೇಟ್ ಲೇಕ್ಸ್ ಲೆಗಸಿ ಕಾನೂನಿಗೆ ಸಿಡಬ್ಲ್ಯೂಎ ಇನ್ನೂ ಹೆಚ್ಚು ಅಭಿವೃದ್ಧಿಯನ್ನು ತಂದಿದೆ.[೩೦]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.