From Wikipedia, the free encyclopedia
ಜಾನ್ ವಿನ್ಸ್ಟನ್ ಓನೊ ಲೆನ್ನನ್ ,[1][2] MBE (9 ಅಕ್ಟೋಬರ್ 1940 – 8 ಡಿಸೆಂಬರ್ 1980) ಓರ್ವ ಇಂಗ್ಲಿಷ್ ರಾಕ್ ಸಂಗೀತಗಾರ, ಹಾಡುಗಾರ-ಗೀತರಚನೆಕಾರ, ಲೇಖಕ, ಮತ್ತು ಶಾಂತಿ ಸಕ್ರಿಯವಾದಿಯಾಗಿದ್ದ. ದಿ ಬೀಟಲ್ಸ್ ಸಂಗೀತ ತಂಡದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬನಾಗಿ ಈತ ವಿಶ್ವಾದ್ಯಂತ ಕೀರ್ತಿಯನ್ನು ಸಂಪಾದಿಸಿದ. ಪಾಲ್ ಮೆಕ್ಕರ್ಟ್ನಿಯ ಜೊತೆಗೂಡಿ, 20ನೇ ಶತಮಾನದ ಅತ್ಯಂತ ಪ್ರಭಾವಪೂರ್ಣ ಹಾಗೂ ಯಶಸ್ವೀ ಹಾಡುಬರೆಯುವ ಪಾಲುದಾರಿಕೆಗಳನ್ನು ಲೆನ್ನನ್ ರೂಪಿಸಿದ ಮತ್ತು "ರಾಕ್ ಅಂಡ್ ರೋಲ್ ಚರಿತ್ರೆಯಲ್ಲಿನ ಅತ್ಯಂತ ಜನಪ್ರಿಯ ಸಂಗೀತದ ಪೈಕಿ ಕೆಲವೊಂದನ್ನು ಬರೆದ".[3] ತನಿಗಾಯನಗಳ ಕೋಷ್ಟಕದ ಇತಿಹಾಸದಲ್ಲಿ ಮೆಕ್ಕರ್ಟ್ನಿ ನಂತರದ ಎರಡನೇ ಅತ್ಯಂತ ಯಶಸ್ವೀ ಗೀತರಚನೆಕಾರ ಎಂದು ಅವನಿಗೆ ಬಿಲ್ಬೋರ್ಡ್ ಶ್ರೇಯಾಂಕವನ್ನು ನೀಡಿದೆ.[4]
ಜಾನ್ ಲೆನ್ನನ್ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | John Winston Lennon |
ಸಂಗೀತ ಶೈಲಿ | Rock, pop rock, psychedelic rock, experimental rock, rock and roll |
ವೃತ್ತಿ | Musician, singer-songwriter, artist, peace activist, writer, record producer |
ವಾದ್ಯಗಳು | Vocals, guitar, piano, bass, harmonica |
ಸಕ್ರಿಯ ವರ್ಷಗಳು | 1957–1975, 1980 |
Labels | Parlophone, Capitol, Apple, EMI, Geffen, Polydor |
Associated acts | The Quarrymen, The Beatles, Plastic Ono Band, The Dirty Mac, Yoko Ono |
ಅಧೀಕೃತ ಜಾಲತಾಣ | www.johnlennon.com |
Notable instruments | |
Rickenbacker 325 Epiphone Casino Gibson J-160E Martin D-28 Gibson Les Paul Junior |
ಚಲನಚಿತ್ರಗಳಿಗೆ ಸಂಬಂಧಿಸಿದ ತನ್ನ ಸಂಗೀತದಲ್ಲಿ ಒಂದು ಬಂಡಾಯದ ಸ್ವರೂಪ ಹಾಗೂ ತೀಕ್ಷ್ಣವಾದ ಚಾತುರ್ಯವನ್ನು, ಪುಸ್ತಕಗಳಲ್ಲಿ, ಮತ್ತು ಪತ್ರಿಕಾಗೋಷ್ಠಿಗಳು ಹಾಗೂ ಸಂದರ್ಶನಗಳಲ್ಲಿ ಹೊರಗೆಡವಿದ. ತನ್ನ ಪತ್ನಿ ಯೊಕೊ ಒನೊಳೊಂದಿಗೆ, ಓರ್ವ ಶಾಂತಿಯ ಸಕ್ರಿಯವಾದಿಯಾಗಿ ಹಾಗೂ ದೃಷ್ಟಿಗೋಚರ ಕಲಾವಿದನಾಗಿ ತಾನು ಕೈಗೊಂಡ ಕೆಲಸಗಳ ಮೂಲಕ ಆತ ವಿವಾದಾತ್ಮಕ ವ್ಯಕ್ತಿಯೆನಿಸಿಕೊಂಡಿದ್ದ. ದಿ ಬೀಟಲ್ಸ್ ತಂಡದ ನಂತರ, ಮೆಚ್ಚುಗೆಗೆ ಪಾತ್ರವಾದ ಜಾನ್ ಲೆನ್ನನ್/ಪ್ಲಾಸ್ಟಿಕ್ ಒನೊ ಬ್ಯಾಂಡ್ ಮತ್ತು ಇಮ್ಯಾಜಿನ್ ನಂಥ ಗೀತಸಂಪುಟಗಳು, ಹಾಗೂ "ಗಿವ್ ಪೀಸ್ ಎ ಚಾನ್ಸ್" ಮತ್ತು "ಇಮ್ಯಾಜಿನ್"ನಂಥ ಸಾಂಪ್ರದಾಯಿಕ ರೂಪದ ಹಾಡುಗಳ ನೆರವಿನೊಂದಿಗೆ ಲೆನ್ನನ್ ಒಂಟಿಗಾಯನದ ಒಂದು ಯಶಸ್ವೀ ವೃತ್ತಿಜೀವನವನ್ನು ಅನುಭವಿಸಿದ. ತನ್ನ ಮಗ ಸೀನ್ನನ್ನು ಪ್ರವರ್ಧಮಾನಕ್ಕೆ ತರುವ ಉದ್ದೇಶದೊಂದಿಗೆ ಸ್ವತಃ ತಾನೇ ವಿಧಿಸಿಕೊಂಡಿದ್ದ "ನಿವೃತ್ತಿ"ಯ ನಂತರ, ಡಬಲ್ ಫ್ಯಾಂಟಸಿ ಎಂಬ ಒಂದು ಪುನರಾಗಮನದ ಗೀತಸಂಪುಟದೊಂದಿಗೆ ಲೆನ್ನನ್ ಮರಳಿದನಾದರೂ, ಅದರ ಬಿಡುಗಡೆಯಾದ ನಂತರದ ಒಂದು ತಿಂಗಳೊಳಗೆ ಆತ ಕೊಲೆಯಾದ. ಸದರಿ ಗೀತಸಂಪುಟವು 1981ರ ವರ್ಷದ ಗೀತಸಂಪುಟಕ್ಕಾಗಿರುವ ಗ್ರಾಮಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
2002ರಲ್ಲಿ, BBCಯ ವತಿಯಿಂದ ಕೈಗೊಳ್ಳಲಾದ 100 ಮಹೋನ್ನತ ಬ್ರಿಟನ್ನರು ಎಂಬ ವಿಷಯಕ್ಕೆ ಸಂಬಂಧಿಸಿದ ಒಂದು ಜನಮತ ಸಂಗ್ರಹಕ್ಕೆ ಪ್ರತಿಕ್ರಿಯಿಸಿದವರು, ಲೆನ್ನನ್ಗೆ ಎಂಟನೆಯ ಸ್ಥಾನವನ್ನು ನೀಡಿದರು. 2004ರಲ್ಲಿ, ರೋಲಿಂಗ್ ಸ್ಟೋನ್ ನಿಯತಕಾಲಿಕವು ತನ್ನ "ದಿ ಇಮ್ಮಾರ್ಟಲ್ಸ್: ದಿ ಫಿಫ್ಟಿ ಗ್ರೇಟೆಸ್ಟ್ ಆರ್ಟಿಸ್ಟ್ಸ್ ಆಫ್ ಆಲ್ ಟೈಮ್" ಪಟ್ಟಿಯಲ್ಲಿ ಲೆನ್ನನ್ಗೆ 38ನೇ ಶ್ರೇಯಾಂಕವನ್ನು ನೀಡಿತು (ದಿ ಬೀಟಲ್ಸ್ಗೆ ಮೊದಲನೇ ಶ್ರೇಯಾಖವು ದಕ್ಕಿತ್ತು). 2008ರಲ್ಲಿ ರೋಲಿಂಗ್ ಸ್ಟೋನ್ ನಿಯತಕಾಲಿಕದ ವತಿಯಿಂದ ಆತ ಐದನೇ ಸಾರ್ವಕಾಲಿಕ ಮಹಾನ್ ಹಾಡುಗಾರ ಎಂಬ ಶ್ರೇಯಾಂಕಕ್ಕೂ ಪಾತ್ರನಾದ.[5] ಮರಣಾನಂತರದಲ್ಲಿ ಅವನ ಹೆಸರು, 1987[6]ರಲ್ಲಿ ಗೀತರಚನೆಕಾರರ ಕೀರ್ತಿಭವನಕ್ಕೆ ಹಾಗೂ 1994ರಲ್ಲಿ ರಾಕ್ ಅಂಡ್ ರೋಲ್ ಕೀರ್ತಿಭವನಕ್ಕೆ ಹೀಗೆ ಎರಡೂ ಕಡೆಯಲ್ಲೂ ಸೇರಿಸಲ್ಪಟ್ಟಿತು.[7]
ಲಿವರ್ಪೂಲ್ನ ಆಕ್ಸ್ಫರ್ಡ್ ಸ್ಟ್ರೀಟ್ನ ಲಿವರ್ಪೂಲ್ ಹೆರಿಗೆ ಆಸ್ಪತ್ರೆಯಲ್ಲಿ, ಜೂಲಿಯಾ ಲೆನ್ನನ್ (ಹುಟ್ಟಿದಾಗಿನ ಹೆಸರು ಸ್ಟಾನ್ಲೆ) ಮತ್ತು ಆಲ್ಫ್ರೆಡ್ (ಆಲ್ಫ್, ಅಥವಾ ಫ್ರೆಡ್ಡೀ) ಲೆನ್ನನ್ ದಂಪತಿಗಳಿಗೆ ಮಗನಾಗಿ ಜಾನ್ ವಿನ್ಸ್ಟನ್ ಲೆನ್ನನ್ ಜನಿಸಿದ. ಆಗ IIನೇ ಜಾಗತಿಕ ಸಮರದಲ್ಲಿನ ಜರ್ಮನ್ ವಾಯುದಾಳಿಯೊಂದರ ಒಂದು ಗತಿಯ ಅವಧಿಯು ಚಾಲ್ತಿಯಲ್ಲಿತ್ತು. ಆಸ್ಪತ್ರೆಯನ್ನು ತಲುಪಲು ಜೂಲಿಯಾಳ ಸೋದರಿಯಾದ ಮೇರಿ "ಮಿಮಿ" ಸ್ಮಿತ್, ಕತ್ತಲಾಗಿಸಲಾದ ಹಿಂದಿನ ರಸ್ತೆಗಳ ಮೂಲಕ ಓಡಿಬಂದಿದ್ದಳು. ಆಸ್ಪತ್ರೆಯವರೆಗಿನ ಎರಡು ಮೈಲುಗಳ ಅವಳ ಓಟದಲ್ಲಿ, ತಾನು ಹೋಗುತ್ತಿರುವ ದಾರಿಯನ್ನು ನೋಡಲು ಆಕೆ ಸನಿಹದಲ್ಲಿ ನಡೆಯುತ್ತಿದ್ದ ಸ್ಫೋಟಗಳ ನೆರವನ್ನು ಪಡೆದಳು.[8][9][10] ಲೆನ್ನನ್ಗೆ, ಆತನ ತಂದೆಯ ಕಡೆಯ ಅಜ್ಜನಾದ ಜಾನ್ 'ಜ್ಯಾಕ್' ಲೆನ್ನನ್, ಮತ್ತು ವಿನ್ಸ್ಟನ್ ಚರ್ಚಿಲ್ರ ಹೆಸರುಗಳನ್ನು ಮಿಶ್ರಮಾಡಿ ಇಡಲಾಯಿತು.[10] IIನೇ ಜಾಗತಿಕ ಸಮರದ ಅವಧಿಯಲ್ಲಿ, ಆಲ್ಫ್ ಓರ್ವ ವಾಣಿಜ್ಯನೌಕೆಯ ನಾವಿಕನಾಗಿದ್ದ ಮತ್ತು ಹೆಚ್ಚು ಕಾಲ ಮನೆಯಿಂದ ಆಚೆಯೇ ಇರುತ್ತಿದ್ದ. ಆದರೆ ಜೂಲಿಯಾಗೆ ತನ್ನ ವೇತನದ ಚೆಕ್ಕುಗಳನ್ನು ನಿಯತವಾಗಿ ಕಳಿಸುತ್ತಿದ್ದ. ಲಿವರ್ಪೂಲ್ನ 9 ನ್ಯೂಕ್ಯಾಸಲ್ ರಸ್ತೆ ಎಂಬ ವಿಳಾಸದಲ್ಲಿ ಪುಟ್ಟ ಲೆನ್ನನ್ನೊಂದಿಗೆ ಜೂಲಿಯಾ ವಾಸಿಸುತ್ತಿದ್ದಳು. 1943ರಲ್ಲಿ ರಜೆಯಿಲ್ಲದೆಯೇ ಆಲ್ಫ್ ಗೈರುಹಾಜರಾದಾಗ, ಈ ಚೆಕ್ಕುಗಳು ಬರುವುದು ನಿಂತಿತು.[11][12] ಅಂತಿಮವಾಗಿ, 1944ರಲ್ಲಿ ಆಲ್ಫ್ ಮನೆಗೆ ಬಂದಾಗ, ತನ್ನ ಹೆಂಡತಿ ಮತ್ತು ಮಗನ ನಿಗಾ ನೋಡಿಕೊಳ್ಳುವುದಾಗಿ ಆತ ತಿಳಿಸಿದ. ಆದರೆ ಜೂಲಿಯಾ (ಅಷ್ಟುಹೊತ್ತಿಗಾಗಲೇ ಆಕೆ ಇನ್ನೊಬ್ಬ ವ್ಯಕ್ತಿಯ ಮಗುವಿಗೆ ಅವಳು ಗರ್ಭಿಣಿಯಾಗಿದ್ದಳು) ಈ ಅಭಿಪ್ರಾಯವನ್ನು ತಿರಸಕ್ರಿಸಿದಳು.[13] ಅವಳ ಸೋದರಿಯಾದ ಮಿಮಿ ಸ್ಮಿತ್ಳಿಂದ (ಜೂಲಿಯಾ ಕುರಿತಾಗಿ ದೂರು ನೀಡಲು ಲಿವರ್ಪೂಲ್ನ ಸಮಾಜ ಸೇವೆಗಳನ್ನು ಸಂಪರ್ಕಿಸಿದ್ದು ಇವಳೇ) ಗಣನೀಯ ಪ್ರಮಾಣದಲ್ಲಿ ಒತ್ತಡ ಬಂದಾಗ, ಅವಳು ಲೆನ್ನನ್ನ ರಕ್ಷಣೆಯ ಹೊಣೆಗಾರಿಕೆಯನ್ನು ಮಿಮಿಗೆ ವರ್ಗಾಯಿಸಿದಳು.[14] 1946ರ ಜುಲೈನಲ್ಲಿ, ಮಿಮಿಯನ್ನು ಭೇಟಿಯಾದ ಆಲ್ಫ್, ಲೆನ್ನನ್ನನ್ನು ಬ್ಲ್ಯಾಕ್ಪೂಲ್ಗೆ ಕರೆದೊಯ್ದ. ಅವನೊಂದಿಗೆ ರಹಸ್ಯವಾಗಿ ನ್ಯೂಝಿಲೆಂಡ್ಗೆ ವಲಸೆಹೋಗುವುದು ಅವನ ಉದ್ದೇಶವಾಗಿತ್ತು.[15] ಜೂಲಿಯಾ ಅವರನ್ನು ಅನುಸರಿಸಿದಳು, ಮತ್ತು ಒಂದು ಬಿಸಿಯೇರಿದ ವಾದದ ನಂತರ, ಜೂಲಿಯಾ ಹಾಗೂ ತನ್ನ ನಡುವೆ ಒಬ್ಬರನ್ನು ಆಯ್ಕೆಮಾಡಿಕೊಳ್ಳುವಂತೆ ಐದು-ವರ್ಷ-ವಯಸ್ಸಿನ ಲೆನ್ನನ್ಗೆ ಆಲ್ಫ್ ಒತ್ತಾಯಿಸಿದ. ಲೆನ್ನನ್ ತನ್ನ ತಂದೆಯನ್ನು ಎರಡು ಬಾರಿ ಆರಿಸಿದ. ಆದಾಗ್ಯೂ ಜೂಲಿಯಾ ಆಚೆಗೆ ನಡೆಯುತ್ತಿದ್ದಂತೆ, ಲೆನ್ನನ್ ಅಳಲು ಶುರುಮಾಡಿ, ಅವಳನ್ನು ಹಿಂಬಾಲಿಸಿದ. ಇದಾದ ನಂತರ ಲೆನ್ನನ್ನೊಂದಿಗೆ ಇಪ್ಪತ್ತು ವರ್ಷಗಳವರೆಗೆ ಆಲ್ಫ್ ಸಂಪರ್ಕವನ್ನು ಕಳೆದುಕೊಂಡ. ಬೀಟಲ್ ಗೀಳು ಉತ್ತುಂಗಕ್ಕೇರಿದ ಸಂದರ್ಭದಲ್ಲಿ, ಅಪ್ಪ ಮತ್ತು ಮಗ ಮತ್ತೊಮ್ಮೆ ಭೇಟಿಯಾದರು.[16]
ತನ್ನ ಬಾಲ್ಯ ಹಾಗೂ ಹರೆಯದ ಉಳಿದ ಅವಧಿಯಾದ್ಯಂತ ತನ್ನ ಚಿಕ್ಕಮ್ಮ ಮಿಮಿ ಹಾಗೂ ಅವಳ ಪತಿ ಜಾರ್ಜ್ ಸ್ಮಿತ್ರೊಂದಿಗೆ ಲೆನ್ನನ್ ಜೀವನವನ್ನು ಸಾಗಿಸಿದ. ಅವರಿಗೆ ತಮ್ಮದೇ ಸ್ವಂತದ ಮಕ್ಕಳಿರಲಿಲ್ಲ. ವೂಲ್ಟನ್ನಲ್ಲಿನ "ಮೆಂಡಿಪ್ಸ್" (251 ಮೆನ್ಲವ್ ಅವೆನ್ಯೂ) ಎಂಬ ಮನೆಯಲ್ಲಿ ಅವರೆಲ್ಲರೂ ಇದ್ದರು. ಲೆನ್ನನ್ಗಾಗಿ ಮಿಮಿ ಸಣ್ಣಕಥೆಗಳ ಸಂಪುಟಗಳನ್ನು ಖರೀದಿಸಿ ತಂದುಕೊಟ್ಟರೆ, ತನ್ನ ಕುಟುಂಬದ ತೋಟದಲ್ಲಿ ಓರ್ವ ಹೈನುಗಾರನಾಗಿದ್ದ ಜಾರ್ಜ್, ಪದಬಂಧಗಳನ್ನು ಬಿಡಿಸುವುದರಲ್ಲಿ ಲೆನ್ನನ್ನನ್ನು ತೊಡಗಿಸುತ್ತಿದ್ದ, ಮತ್ತು ಅವನಿಗಾಗಿ ಒಂದು ಹಾರ್ಮೋನಿಕಾವನ್ನು ತಂದುಕೊಟ್ಟ. (1955ರ ಜೂನ್ 5ರಂದು ಸ್ಮಿತ್ ಮರಣಿಸಿದ).[15][17] ಜೂಲಿಯಾ ಲೆನ್ನನ್ 'ಮೆಂಡಿಪ್ಸ್' ಮನೆಗೆ ಹೆಚ್ಚೂಕಮ್ಮಿ ಪ್ರತಿದಿನವೂ ಭೇಟಿನೀಡುತ್ತಿದ್ದಳು, ಮತ್ತು ಲೆನ್ನನ್ 11 ವರ್ಷದವನಾಗಿದ್ದಾಗ ಲಿವರ್ಪೂಲ್ನ 1 ಬ್ಲಾಮ್ಫೀಲ್ಡ್ ರಸ್ತೆಯಲ್ಲಿನ ಅವಳ ಮನೆಯಲ್ಲಿ ಅವಳನ್ನು ಅನೇಕ ಬಾರಿ ಭೇಟಿಮಾಡುತ್ತಿದ್ದ. ಬಾಂಜೊ ವಾದ್ಯವನ್ನು (ಇದಕ್ಕೆ ಕೈವೀಣೆ ಎನ್ನುತ್ತಾರೆ) ಹೇಗೆ ನುಡಿಸುವುದು ಎಂಬುದನ್ನು ಲೆನ್ನನ್ಗೆ ಜೂಲಿಯಾ ಕಲಿಸಿದಳು, ಮತ್ತು ಅವನಿಗಾಗಿ ಎಲ್ವಿಸ್ ಪ್ರೆಸ್ಲಿಯ ಧ್ವನಿಮುದ್ರಿಕೆಗಳನ್ನು ಕೇಳಿಸಿದಳು. ಫ್ಯಾಟ್ಸ್ ಡೊಮೈನೊನ "ಆರ್ ನಾಟ್ ದಟ್ ಎ ಷೇಮ್" ಎಂಬ ಹಾಡನ್ನು ಅವನು ಮೊದಲು ಕಲಿತ.[18][19]
ಫ್ಲೀಟ್ವುಡ್ನೊಂದಿಗೆ ಲೆನ್ನನ್ ದೊಡ್ಡ ರೀತಿಯಲ್ಲಿ ತೊಡಗಿಸಿಕೊಂಡಿದ್ದ. ತನ್ನ ಸೋದರ ಸಂಬಂಧಿಯಾದ ಸ್ಟಾನ್ಲೆ ಪಾರ್ಕೆಸ್ನನ್ನು ಲೆನ್ನನ್ ಅಲ್ಲಿ ನಿಯತವಾಗಿ ಭೇಟಿಮಾಡುತ್ತಿದ್ದ. ಲೆನ್ನನ್ನ ದೊಡ್ಡಮ್ಮ ಎಲಿಜಬೆತ್ಳ (ಇವಳು ಮೇಟರ್ ಎಂದೇ ಹೆಸರಾಗಿದ್ದಳು) ಮಗನಾಗಿದ್ದ ಈತ, ವರಸೆಯಲ್ಲಿ ಕಿರಿಯ ಜಾನ್ಗೆ 'ದೊಡ್ಡ ಅಣ್ಣ'ನಾಗಿದ್ದ. ದುರದೃಷ್ಟವಶಾತ್ ಎಲಿಜಬೆತ್ಳ ಗಂಡ ಹಾಗೂ ಸ್ಟಾನ್ಲೆಯ ಅಪ್ಪನಾದ ಜಾರ್ಜ್ ಪಾರ್ಕೆಸ್, ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡ ಮತ್ತು ಅವರು 33 ಗ್ಯಾಲೊವೇ ರಸ್ತೆಯಲ್ಲಿನ ನಿವಾಸಕ್ಕೆ ತಮ್ಮ ನೆಲೆಯನ್ನು ಬದಲಿಸಿಕೊಂಡರು. ಅಲ್ಲಿ ಅವರು ಫ್ಲೀಟ್ವುಡ್ನ ಸ್ಥಳೀಯ ಸಲಹಾ ವಕೀಲನಾದ ಶ್ರೀ ಹಡ್ಸನ್ ಎಂಬಾತನೊಂದಿಗೆ ವಾಸಿಸಿದರು. ತನ್ನ ದೊಡ್ಡಮ್ಮ ಹ್ಯಾರಿಯೆಟ್ಳ ಮಗಳಾದ, ತನ್ನ ಮತ್ತೋರ್ವ ಸೋದರ ಸಂಬಂಧಿ ಲೈಲಾಳೊಂದಿಗೆ ಶಾಲೆಯ ರಜಾದಿನಗಳಲ್ಲಿ ಅನೇಕಬಾರಿ ಲಿವರ್ಪೂಲ್ಗೆ ಹೋಗಿ ಫ್ಲೀಟ್ವುಡ್ಗೆ ವಾಪಾಸಾಗುತ್ತಿದ್ದುದನ್ನು ಸ್ಟಾನ್ಲೆ ನೆನಪಿಸಿಕೊಳ್ಳುತ್ತಾನೆ.[20] ಪ್ರತ್ಯೇಕ ಪ್ರದರ್ಶನಗಳನ್ನು ನೋಡಲು, ಬೇಸಿಗೆಯ ರಜೆಯಲ್ಲಿ ಟ್ರಾಮ್ನ ಮೂಲಕ ಬ್ಲ್ಯಾಕ್ಪೂಲ್ವರೆಗೆ ವಾರದಲ್ಲಿ ಎರಡು ಅಥವಾ ಮೂರು ಬಾರಿ ಹೋಗುತ್ತಿದ್ದುದನ್ನು ಸ್ಟಾನ್ಲೆ ನೆನಪಿಸಿಕೊಳ್ಳುತ್ತಾನೆ. ಬ್ಲ್ಯಾಕ್ಪೂಲ್ ಟವರ್ ಸರ್ಕಸ್ಗೆ ಭೇಟಿ ನೀಡಿ, ಡಿಕಿ ವ್ಯಾಲಂಟೈನ್, ಅರ್ಥರ್ ಆಸ್ಕೀ, ಮ್ಯಾಕ್ಸ್ ಬೈಗ್ರೇವ್ಸ್ನಂಥ ಕಲಾವಿದರು ಹಾಗೂ ಅವರ ದೊಡ್ಡ ವಾದ್ಯವೃಂದವನ್ನು ಅವರು ನೋಡುತ್ತಿದ್ದರು. ಆದಾಗ್ಯೂ, ಜಾರ್ಜ್ ಫಾರ್ಮ್ಬಿ ಎಂಬಾತನನ್ನು ಜಾನ್ ವಿಶೇಷವಾಗಿ ಇಷ್ಟಪಟ್ಟಿದ್ದ ಎಂದು ಸ್ಟಾನ್ಲೆ ನೆನಪಿಸಿಕೊಂಡು ಹೇಳುತ್ತಾನೆ. ಪ್ರೆಸ್ಟನ್ನಿಂದ ಫ್ಲೀಟ್ವುಡ್ಗೆ ಬಸ್ ಮೂಲಕ ಪಯಣಿಸುವಾಗ, ಈ ಜೋಡಿಯು ನಿಯತವಾಗಿ ಫಾರ್ಮ್ಬಿಯ ಮನೆಯನ್ನು ಹಾದುಹೋಗುತ್ತಿತ್ತು. ಅಲ್ಲಿ ಆತ ಮತ್ತು ಅವನ ಪತ್ನಿ ತಮ್ಮ ಮನೆಯ ಮುಂದಿರುವ ತಮ್ಮ ತೋಟದಲ್ಲಿ ಆರಾಮಕುರ್ಚಿಯಲ್ಲಿ ಅನೇಕಬಾರಿ ಕುಳಿತಿರುತ್ತಿದ್ದರು. ತಾನು ಮತ್ತು ಜಾನ್ ಕೈಬೀಸಿದಾಗ ಅವರೂ ಸಹ ಇವರೆಡೆಗೆ ಕೈಬೀಸುತ್ತಿದ್ದುದನ್ನು ಸ್ಟಾನ್ಲೆ ನೆನಪಿಸಿಕೊಳ್ಳುತ್ತಾನೆ. ಸ್ಟಾನ್ಲೆ ಮತ್ತು ಕಿರಿಯ ಜಾನ್ ಇಬ್ಬರೂ ಫ್ಲೀಟ್ವುಡ್ ಫ್ಲೈಯರ್ಸ್ ಸ್ಪೀಡ್ವೇ ಕ್ಲಬ್ ಹಾಗೂ ಫ್ಲೀಟ್ವುಡ್ ಟೌನ್ FCಯ ಉತ್ಕಟ ಅಭಿಮಾನಿಗಳಾಗಿದ್ದರು.[21]
ಓರ್ವ ಆಂಗ್ಲಿಕನ್ ಆಗಿ ಲೆನ್ನನ್ ಬೆಳೆದ ಮತ್ತು ತನ್ನ ಹನ್ನೊಂದು-ಪ್ಲಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗುವವರೆಗೂ ಡೊವೆಲ್ಡೇಲ್ ಪ್ರಾಥಮಿಕ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದ.[22][23] 1952ರ ಸೆಪ್ಟೆಂಬರ್ನಿಂದ 1957ರವರೆಗೆ, ಲಿವರ್ಪೂಲ್ನಲ್ಲಿನ ಕ್ವಾರಿ ಬ್ಯಾಂಕ್ ಪ್ರೌಢಶಾಲೆಯಲ್ಲಿ ಆತ ಅಧ್ಯಯನವನ್ನು ಮುಂದುವರಿಸಿದ. ಅಲ್ಲಿ ಆತ, ಆದದ್ದಾಗಲಿ ಎಂಬ ಮನೋವೃತ್ತಿಯ ಓರ್ವ ವಿದ್ಯಾರ್ಥಿಯಾಗಿದ್ದು, ಹಾಸ್ಯಮಯ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾ ಮತ್ತು ತನ್ನ ಶಿಕ್ಷಕರನ್ನು ಅನುಕರಣೆ ಮಾಡುತ್ತಾ ಕಾಲಕಳೆದ.[24][25]
1957ರಲ್ಲಿ ಲೆನ್ನನ್ಗೆ ಅವನ ಮೊದಲ ಗಿಟಾರ್ನ್ನು ತಂದುಕೊಟ್ಟಳು. ಅದೊಂದು ವಿದ್ಯುತ್ ನೆರವಿಲ್ಲದೆ ನುಡಿಸಬಹುದಾದ ಗ್ಯಾಲೋಟೋನ್ ಚಾಂಪಿಯನ್ ಗಿಟಾರ್ ಆಗಿತ್ತು (ಇದೊಂದು ಅಗ್ಗದ ಮಾದರಿಯಾಗಿದ್ದು, "ಒಡೆದುಹೋಗುವುದಿಲ್ಲ ಎಂಬ ಖಾತ್ರಿಯನ್ನು ಅದಕ್ಕೆ ನೀಡಲಾಗಿತ್ತು").[26] ಸಂಗೀತವು ಲೆನ್ನನ್ಗೆ ಬೇಜಾರು ಹುಟ್ಟಿಸಬಹುದು ಎಂಬುದು ಮಿಮಿಯ ನಂಬಿಕೆಯಾಗಿತ್ತಾದ್ದರಿಂದ, ಇದನ್ನು ಅವಳ ಮನೆಯ ಬದಲಿಗೆ ತನ್ನ ಮನೆಗೇ ತಲುಪಿಸುವಂತೆ ಜೂಲಿಯಾ ಒತ್ತಾಯಿಸಿದ್ದಳು. ತಾನು ಮುಂದೊಂದು ದಿನ ಪ್ರಖ್ಯಾತನಾಗಿಯೇ ಆಗುತ್ತೇನೆ ಎಂಬ ಲೆನ್ನನ್ನ ಹೇಳಿಕೆಯ ಬಗ್ಗೆ ಸಂಶಯವನ್ನು ಹೊಂದಿದ್ದ ಅವಳು, "ಈ ಗಿಟಾರೇನೋ ಚೆನ್ನಾಗಿದೆ ಜಾನ್, ಆದರೆ ಇದರಿಂದ ನಿನ್ನ ಜೀವನವನ್ನು ರೂಪಿಸಿಕೊಳ್ಳು ಎಂದಿಗೂ ಸಾಧ್ಯವಿಲ್ಲ" ಎಂದು ಪದೇಪದೇ ಹೇಳುತ್ತಿದ್ದಳು.[26][27] 1958ರ ಜುಲೈ 15ರಂದು, ಲೆನ್ನನ್ 17 ವರ್ಷದವನಾಗಿದ್ದಾಗ, ಮೆನ್ಲವ್ ಅವೆನ್ಯೂದಲ್ಲಿ (ಮಿಮಿಯ ಮನೆಗೆ ಸನಿಹದಲ್ಲಿ) ಜೂಲಿಯಾ ಕೊಲ್ಲಲ್ಪಟ್ಟಳು. ಕರ್ತವ್ಯದಲ್ಲಿ ತೊಡಗಿರದ ಆರಕ್ಷಕ ಅಧಿಕಾರಿಯೊಬ್ಬನ ಕಾರು ಅವಳಿಗೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿತು.[28] ಅವಳ ಸಾವು, ಲೆನ್ನನ್ ಮತ್ತು ಮೆಕ್ಕರ್ಟ್ನಿಯ ನಡುವಣ ಒಂದು ಸಂಬಂಧವಾಗಿದ್ದು, ಆತನೂ ಕೂಡ ತನ್ನ ತಾಯಿಯನ್ನು (ಆಕೆಗೆ ಸ್ತನ ಕ್ಯಾನ್ಸರ್ ಆಗಿತ್ತು) 1956ರ ಅಕ್ಟೋಬರ್ 31ರಂದು ಕಳೆದುಕೊಂಡಿದ್ದ.[29]
ತನ್ನೆಲ್ಲಾ GCE O-ಮಟ್ಟದ ಪರೀಕ್ಷೆಗಳಲ್ಲಿ ಲೆನ್ನನ್ ಅನುತ್ತೀರ್ಣನಾದ ಮತ್ತು ತನ್ನ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಮಿಮಿಯ ನೆರವಿನೊಂದಿಗೆ ಕೇವಲ ಲಿವರ್ಪೂಲ್ ಕಾಲೇಜ್ ಆಫ್ ಆರ್ಟ್ನಲ್ಲಿ ಮಾತ್ರವೇ ಆತನಿಗೆ ಸೇರಲು ಅವಕಾಶ ದೊರೆಯಿತು. ಅಲ್ಲಿ, ಅವನೋರ್ವ ತರುಣ ಪುಂಡನಾಗಿದ್ದಾಗ, ತನ್ನ ಭಾವೀ ಪತ್ನಿಯಾದ ಸಿಂಥಿಯಾ ಪೋವೆಲ್ಳನ್ನು ಅವನು ಭೇಟಿಯಾದ.[30] ತರಗತಿಯಲ್ಲಿ ಕುಳಿತಿರುವಾಗ ಲೆನ್ನನ್ ಆಗಾಗ ಅಡ್ಡಿಪಡಿಸುವುದು, ತನ್ನ ಶಿಕ್ಷಕರನ್ನು ಅಣಕಮಾಡುವುದು ಇವೇ ಮೊದಲಾದ ಚೇಷ್ಟೆಗಳನ್ನು ಮಾಡುತ್ತಿದ್ದ. ಇದರಿಂದಾಗಿ ಅವನನ್ನು ಓರ್ವ ವಿದ್ಯಾರ್ಥಿಯೆಂದು ಸ್ವೀಕರಿಸಲು ಅವರು ನಿರಾಕರಿಸುತ್ತಿದ್ದರು.[31][32] ಪೋವೆಲ್ಳಿಂದ ನೆರವು ಸಿಕ್ಕರೂ ಸಹ, ಆರ್ಟ್ ಕಾಲೇಜಿನ ವಾರ್ಷಿಕ ಪರೀಕ್ಷೆಯೊಂದರಲ್ಲಿ ಲೆನ್ನನ್ ಅನುತ್ತೀರ್ಣಗೊಂಡ, ಮತ್ತು ಕಾಲೇಜಿನ ತನ್ನ ಅಂತಿಮ ವರ್ಷಕ್ಕೆ ಮುಂಚಿತವಾಗಿಯೇ ಅಲ್ಲಿಂದ ಆತ ಹೊರಬಿದ್ದ.[33]
ದಿ ಕ್ವಾರಿಮೆನ್ ಎಂಬ ತನ್ನ ಹಿಂದಿನ ವಾದ್ಯವೃಂದದ ಕೆಲವೊಂದು ಸದಸ್ಯರೊಂದಿಗೆ ದಿ ಬೀಟಲ್ಸ್ ಎಂಬ ವಾದ್ಯವೃಂದವನ್ನು ಲೆನ್ನನ್ ರೂಪಿಸಿದ. ಒಂದು ಅಥವಾ ಎರಡು ಪಾಠಗಳಾದ ನಂತರ ತನ್ನ ಗಿಟಾರ್ ಶಿಕ್ಷಣದ ಮನೆಮೇಷ್ಟ್ರನ್ನು ಕೈಬಿಟ್ಟ ಲೆನ್ನನ್ 1957ರ ಮಾರ್ಚ್ನಲ್ಲಿ ದಿ ಕ್ವಾರಿಮೆನ್ ವಾದ್ಯವೃಂದವನ್ನು ಕಟ್ಟಿದ್ದ; ಆತ ಮತ್ತು ಆತನ ವಾದ್ಯವೃಂದದ ಇತರ ಸದಸ್ಯರು ಓದುತ್ತಿದ್ದ ಕ್ವಾರಿ ಬ್ಯಾಂಕ್ ಪ್ರೌಢಶಾಲೆಯಿಂದ ವಾದ್ಯವೃಂದದ ಈ ಹೆಸರು ವ್ಯತ್ಪತ್ತಿಯಾಗಿತ್ತು.[34] ವೂಲ್ಟನ್ನಲ್ಲಿನ ಸೇಂಟ್ ಪೀಟರ್ಸ್ ಚರ್ಚ್ ತೋಟದ ಧರ್ಮಸಂತೆಯಲ್ಲಿ ಆಯೋಜಿಸಲಾಗಿದ್ದ ವಾದ್ಯವೃಂದದ ಎರಡನೇ ಕಚೇರಿಯ ಸಮಯದಲ್ಲಿ ಜುಲೈ 6ರಂದು ಆತ ಮೊದಲಿಗೆ ಪಾಲ್ ಮೆಕ್ಕರ್ಟ್ನಿಯನ್ನು ಭೇಟಿಯಾದ.[35][36] ಮೆಕ್ಕರ್ಟ್ನಿ ದಿ ಕ್ವಾರಿಮೆನ್ ವಾದ್ಯವೃಂದವನ್ನು ಸೇರಿಕೊಂಡ. ಅವನ ತಂದೆ ಈ ಕುರಿತು ಮಾತಾಡುತ್ತಾ, ಲೆನ್ನನ್ ಅವನನ್ನು "ತುಂಬಾ ತೊಂದರೆಯಲ್ಲಿ ಸಿಕ್ಕಿಸುತ್ತಾನೆ" ಎಂದು ಹೇಳಿದ್ದ, ಆದರೆ ನಂತರದಲ್ಲಿ 20 ಫಾರ್ತ್ಲಿನ್ ರಸ್ತೆಯಲ್ಲಿನ ಮುಂಭಾಗದ ಕೋಣೆಯಲ್ಲಿ ತಾಲೀಮು ನಡೆಸಲು ವಾದ್ಯವೃಂದಕ್ಕೆ ಅನುವು ಮಾಡಿಕೊಟ್ಟ.[37][38] ಅಲ್ಲಿ, ಲೆನ್ನನ್ ಮತ್ತು ಮೆಕ್ಕರ್ಟ್ನಿ ಜೊತೆಜೊತೆಯಾಗಿ ಹಾಡುಗಳನ್ನು ಬರೆಯಲು ಶುರುಮಾಡಿದರು. "ಹಲೋ, ಲಿಟ್ಲ್ ಗರ್ಲ್" ಎಂಬ ತನ್ನ ಮೊಟ್ಟಮೊದಲ ಹಾಡನ್ನು ಬರೆದಾಗ ಅವನಿಗೆ 18 ವರ್ಷ ವಯಸ್ಸಾಗಿತ್ತು; ಐದು ವರ್ಷಗಳ ನಂತರ ಈ ಹಾಡು UKಯ ಅಗ್ರಸ್ಥಾನದಲ್ಲಿನ ಹಾಡುಗಳ ಪಟ್ಟಿಯಲ್ಲಿ ಯಶಸ್ವೀ 10ನೇ ಸ್ಥಾನವನ್ನು ಅಲಂಕರಿಸಿತ್ತು.[39] ಜಾರ್ಜ್ ಹ್ಯಾರಿಸನ್ ಎಂಬಾತ ಪ್ರಮುಖ ಗಿಟಾರ್ ವಾದಕನಾಗಿ ವಾದ್ಯವೃಂದವನ್ನು ಸೇರಿಕೊಂಡರೆ, ಆರ್ಟ್ ಸ್ಕೂಲ್ನಿಂದ ಲೆನ್ನನ್ನ ಸ್ನೇಹಿತನಾಗಿದ್ದ ಸ್ಟುವರ್ಟ್ ಸಟ್ಕ್ಲಿಫ್ ಬೇಸ್ ವಾದ್ಯಗಾರನಾಗಿ ತಂಡಕ್ಕೆ ಸೇರಿಕೊಂಡ.[40][41] ಹಲವಾರು ಬಾರಿ ಹೆಸರುಗಳನ್ನು ಬದಲಾಯಿಸಿದ ನಂತರ ಈ ಗುಂಪು ದಿ ಬೀಟಲ್ಸ್ ಎಂಬ ಹೆಸರನ್ನು ಅಂತಿಮಗೊಳಿಸಲು ನಿರ್ಧರಿಸಿತು. ಲೆನ್ನನ್ ಯಾವಾಗಲೂ ತಂಡದ ನಾಯಕನಾಗಿಯೇ ಪರಿಗಣಿಸಲ್ಪಟ್ಟಿದ್ದ. ಮೆಕ್ಕರ್ಟ್ನಿ ಈ ಕುರಿತು ಹೀಗೆ ಹೇಳಿದ್ದಾನೆ: "ನಾವೆಲ್ಲಾ ಜಾನ್ನ ಕಡೆಗೇ ದೃಷ್ಟಿನೆಟ್ಟುಕೊಂಡಿರುತ್ತಿದ್ದೆವು. ಆತ ನಮ್ಮೆಲ್ಲರಿಗಿಂತ ದೊಡ್ಡವನಾಗಿದ್ದ ಮತ್ತು ನಾಯಕಪಟ್ಟಕ್ಕೆ ಆತ ಸೂಕ್ತವ್ಯಕ್ತಿಯಾಗಿದ್ದ. ಚಾತುರ್ಯ ತೋರುವುದರಲ್ಲೂ ಆತ ಚುರುಕಾಗಿದ್ದ, ಬುದ್ಧಿವಂತನಾಗಿದ್ದ ಹಾಗೂ ಅದೇ ಥರದ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದ".[42][43]
1960ರ ಆಗಸ್ಟ್ನಲ್ಲಿ, ಜರ್ಮನಿಯ ಹಂಬರ್ಗ್ನಲ್ಲಿನ 48-ನೈಟ್ ರೆಸಿಡೆನ್ಸಿಗಾಗಿ ದಿ ಬೀಟಲ್ಸ್ ತಂಡವನ್ನು ಗೊತ್ತುಪಡಿಸಲಾಯಿತು.[44][45] ಈ ಪ್ರವಾಸದ ಕುರಿತು ಲೆನ್ನನ್ ತನ್ನ ಚಿಕ್ಕಮ್ಮ ಮಿಮಿಗೆ ಹೇಳಿದಾಗ ಅವಳಿಗೆ ಗಾಬರಿಯಾಯಿತು. ಹೀಗಾಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸುವಂತೆ ಆಕೆ ಅವನಲ್ಲಿ ಕೇಳಿಕೊಂಡಳು.[46] ಹಂಬರ್ಗ್ನಲ್ಲಿನ ಮೊದಲ ನಿಗದಿಯಾದ ಕೆಲಸದ ನಂತರ, ವಾದ್ಯವೃಂದವು 1961ರ ಏಪ್ರಿಲ್ನಲ್ಲಿ ಮತ್ತೊಂದು ಆಹ್ವಾನವನ್ನು, ಮತ್ತು 1962ರ ಏಪ್ರಿಲ್ನಲ್ಲಿ ಮೂರನೇ ಆಹ್ವಾನವನ್ನು ಒಪ್ಪಿಕೊಂಡಿತು.
1962ರಿಂದಲೂ ದಿ ಬೀಟಲ್ಸ್ ತಂಡದ ವ್ಯವಸ್ಥಾಪಕನಾಗಿದ್ದುಕೊಂಡು ಬಂದಿದ್ದ ಬ್ರಿಯಾನ್ ಎಪ್ಸ್ಟಿನ್, ಕಲಾವಿದರ ನಿರ್ವಹಣೆಯ ಯಾವುದೇ ಪೂರ್ವಾನುಭವವನ್ನು ಹೊಂದಿರಲಿಲ್ಲ. ಆದರೆ ಅದೇನೇ ಇದ್ದರೂ, ಅವರ ಆರಂಭಿಕ ವಸ್ತ್ರಸಂಹಿತೆ ಹಾಗೂ ವೇದಿಕೆಯ ಮೇಲೆ ಅವರು ನಡೆದುಕೊಳ್ಳಬೇಕಾದ ರೀತಿಯ ಮೇಲೆ ಒಂದು ಪ್ರಬಲವಾದ ಪ್ರಭಾವವನ್ನು ಹೊಂದಿದ್ದ.[47] ಸೂಟುಗಳು ಹಾಗೂ ಟೈಗಳನ್ನು ಧರಿಸುವ ಪರಿಕಲ್ಪನೆಗೆ ಲೆನ್ನನ್ನ ವಿರೋಧವಿತ್ತು. ಆದರೂ, "ನನಗೆ ಯಾರಾದರೂ ದುಡ್ಡು ಕೊಡುತ್ತಾರೆಂದರೆ, ಒಂದು ಬಲೂನನ್ನೂ ಸಹ ಧರಿಸಲು ನಾನು ಸಿದ್ಧ" ಎಂದು ಹೇಳುತ್ತಾ ಇದಕ್ಕೆ ಆತ ಒಪ್ಪಿಕೊಂಡ.[48] ದಿ ಬೀಟಲ್ಸ್ ವಾದ್ಯವೃಂದವು ತನ್ನ ಮೊಟ್ಟಮೊದಲ ಎರಡು-ಪಾರ್ಶ್ವಗಳ ಮೂಲ ಏಕಗೀತೆಯ ಧ್ವನಿಮುದ್ರಿಕೆಯಾದ "ಲವ್ ಮಿ ಡೂ" b/w "P.S. ಐ ಲವ್ ಯೂ" ಎಂಬುದನ್ನು ಅಕ್ಟೋಬರ್ 5ರಂದು ಬಿಡುಗಡೆಮಾಡಿತು; ಇದು ಬ್ರಿಟಿಷ್ ಕೋಷ್ಟಕದಲ್ಲಿ 17ನೇ ಸ್ಥಾನಕ್ಕೆ ತಲುಪಿತು. ಪ್ಲೀಸ್ ಪ್ಲೀಸ್ ಮಿ ಎಂಬ ತಮ್ಮ ಮೊಟ್ಟಮೊದಲ ಗೀತಸಂಪುಟವನ್ನು ದಿ ಬೀಟಲ್ಸ್ ತಂಡದವರು 1963ರ ಫೆಬ್ರವರಿ 11ರಂದು 10 ಗಂಟೆಯೊಳಗಾಗಿ ಧ್ವನಿಮುದ್ರಿಸಿಕೊಂಡರು. ಆ ದಿನವು ಲೆನ್ನನ್ ಶೀತಬಾಧೆಯ ಪರಿಣಾಮಗಳಿಂದ ಬಳಲುತ್ತಿದ್ದ ದಿನವಾಗಿತ್ತು ಎಂಬುದು ವಿಶೇಷ.[49] ಮೂಲತಃ ಗೀತಸಂಪುಟದ ಮೊದಲ ಮುದ್ರಣದ ಮೇಲಿದ್ದ ಲೆನ್ನನ್-ಮೆಕ್ಕರ್ಟ್ನಿ ಹಾಡುಗಳಷ್ಟೇ ಅಲ್ಲದೇ, ಏಕಗೀತೆಯಾದ "ಫ್ರಂ ಮಿ ಟು ಯೂ" ಹಾಗೂ ಅದರ B-ಪಾರ್ಶ್ವದ "ಥ್ಯಾಂಕ್ ಯು ಗರ್ಲ್" ಗೀತೆಗಳಿಗೆ ಸಂಬಂಧಿಸಿ" ಮೆಕ್ಕರ್ಟ್ನಿ-ಲೆನ್ನನ್" ಹೆಸರುಗಳ ಸ್ಮರಣೆಯನ್ನು ನಮೂದಿಸಲಾಗಿತ್ತು, ಆದರೆ ಇದನ್ನು ನಂತರ "ಲೆನ್ನನ್-ಮೆಕ್ಕರ್ಟ್ನಿ" ಎಂಬುದಾಗಿ ಬದಲಿಸಲಾಯಿತು.[50] ಒಂದು ಹಾಡನ್ನು ಪೂರೈಸಲು ಲೆನ್ನನ್ ಹಾಗೂ ಮೆಕ್ಕರ್ಟ್ನಿ ಸಾಮಾನ್ಯವಾಗಿ ಒಂದು ಅಥವಾ ಎರಡು ಗಂಟೆಯನ್ನು ತೆಗೆದುಕೊಳ್ಳುತ್ತಿದ್ದರು. ಅವುಗಳಲ್ಲಿ ಬಹುಪಾಲು ಹಾಡುಗಳನ್ನು ಸಂಗೀತ ಕಚೇರಿಯ ನಂತರ ಹೊಟೇಲಿನ ಕೋಣೆಗಳಲ್ಲಿ, ವಿಮ್ಪೋಲ್ ಸ್ಟ್ರೀಟ್ನಲ್ಲಿ — ಜೇನ್ ಆಶರ್ನ ಮನೆ — ಅಥವಾ ಕ್ಯಾವೆಂಡಿಷ್ ಅವೆನ್ಯೂದಲ್ಲಿ; ಮೆಕ್ಕರ್ಟ್ನಿಯ ಮನೆ[51] ಅಥವಾ ಕೆನ್ವುಡ್ನಲ್ಲಿ (ಲೆನ್ನನ್ನ ಮನೆ) ಬರೆಯಲಾಗುತ್ತಿತ್ತು.[52]
1963ರ ಆರಂಭದ ಹೊತ್ತಿಗೆ ದಿ ಬೀಟಲ್ಸ್ ತಂಡವು ಮುಖ್ಯವಾಹಿನಿಯ ಅಥವಾ ಓಲಾಟದ ಶೈಲಿಯ ಜಾಸ್ ಸಂಗೀತದ ಯಶಸ್ಸನ್ನು ಸಾಧಿಸಿತ್ತು. ಯುನೈಟೆಡ್ ಕಿಂಗ್ಡಂನಲ್ಲಿನ ಬೀಟಲ್ಗೀಳಿನ ಒಂದು ವರ್ಷದ ನಂತರ, ದಿ ಎಡ್ ಸಲಿವಾನ್ ಷೋ ನಲ್ಲಿ ತಂಡವು ಐತಿಹಾಸಿಕವಾದ ರೀತಿಯಲ್ಲಿ USಗೆ ಪಾದಾರ್ಪಣೆ ಮಾಡಿದ ಒಂದು ವರ್ಷದ ನಂತರ, ಎರಡು-ವರ್ಷದ ಒಂದು ತಡೆರಹಿತ ಉತ್ಪಾದಕತೆಯ ಅವಧಿಯೊಂದರಲ್ಲಿ ಅವರು ತೊಡಗಿಸಿಕೊಂಡರು; ಅಂದರೆ ನಿರಂತರವಾದ ಅಂತರರಾಷ್ಟ್ರೀಯ ಪ್ರವಾಸಗಳು, ಚಲನಚಿತ್ರಗಳನ್ನು ಮಾಡುವುದು, ಮತ್ತು ಯಶಸ್ವೀ ಗೀತೆಗಳನ್ನು ಬರೆಯುವುದು ಅವರ ಬಿಡುವಿರದ ಕಾರ್ಯವೈಖರಿಯಲ್ಲಿ ಸೇರಿದ್ದವು. ಇನ್ ಹಿಸ್ ಓನ್ ರೈಟ್ ಮತ್ತು ಎ ಸ್ಪಾನಿಯಾರ್ಡ್ ಇನ್ ದಿ ವರ್ಕ್ಸ್ [53] ಎಂಬ ಎರಡು ಪುಸ್ತಕಗಳನ್ನು ಲೆನ್ನನ್ ಬರೆದರೆ, 1965ರಲ್ಲಿನ ರಾಣಿಯ ಹುಟ್ಟುಹಬ್ಬದ ಗೌರವ ಸಲ್ಲಿಕೆಯ ಸಂದರ್ಭದಲ್ಲಿ ಬ್ರಿಟಿಷ್ ಸಾಮ್ರಾಜ್ಯದಿಂದ ದೊರೆತ ಸ್ಥಾನಮಾನದ ಸದಸ್ಯರಾಗಿ ದಿ ಬೀಟಲ್ಸ್ ತಂಡವು ನೇಮಕಗೊಳ್ಳುವ ಮೂಲಕ ಬ್ರಿಟಿಷ್ ಅಧಿಕಾರರೂಢವರ್ಗದಿಂದ ಮಾನ್ಯತೆಯನ್ನು ಸಂಪಾದಿಸಿತು[54]
ಕೇಕೆಹಾಕಿ ಕೂಗುವವರಿಗಾಗಿ ತಾವು ಸಂಗೀತ ಹಾಡುತ್ತಿದ್ದರೂ ಯಾರೊಬ್ಬರೂ ಅದನ್ನು ಕೇಳಿಸಿಕೊಳ್ಳುತ್ತಿಲ್ಲ ಎಂದು ಆಪಾದಿಸಿದ ಲೆನ್ನನ್ ತಮ್ಮ ಸಂಗೀತಗಾರಿಕೆಯು ತೊಂದರೆಗೀಡಾಗಲು ಪ್ರಾರಂಭಿಸಿದೆ ಎಂದು ನುಡಿದ.[55] 1965ರಲ್ಲಿ ಆತ ತನ್ನ "ಹೆಲ್ಪ್!" ಎಂಬ ಹಾಡನ್ನು ಬರೆಯುವ ಹೊತ್ತಿಗೆ, ಲೆನ್ನನ್ ಒಂದಷ್ಟು ದಪ್ಪಗಾಗಿದ್ದ (ಇದಕ್ಕೆ ಆತನ "ಫ್ಯಾಟ್ ಎಲ್ವಿಸ್" ಅವಧಿಯೇ ಕಾರಣ ಎಂದು ಆತ ನಂತರ ಉಲ್ಲೇಖಿಸಿದ್ದ)[56] ಮತ್ತು ನೆರವಿಗಾಗಿ ಹಾಗೂ ಬದಲಾವಣೆಯನ್ನು ಅರಸುತ್ತಾ ತಾನು ಒಳಗೊಳಗೇ ಅಳುತ್ತಿರುವುದೇ ಇದಕ್ಕೆ ಕಾರಣ ಎಂದು ಆತ ಅರ್ಥಮಾಡಿಕೊಂಡ.[57]
ಈ ಬದಲಾವಣೆಗೆ ಸಂಬಂಧಿಸಿದ ಪರಿವರ್ತಕವು 1966ರ ಮಾರ್ಚ್ 4ರಂದು ಸಂಭವಿಸಿತು. ಲಂಡನ್ನ ಈವ್ನಿಂಗ್ ಸ್ಟಾಂಡರ್ಡ್ ಪತ್ರಿಕೆಗಾಗಿ ಮೌರೀನ್ ಕ್ಲೀವ್ ಎಂಬಾತ ಲೆನ್ನನ್ನನ್ನು ಸಂದರ್ಶನ ಮಾಡುವಾಗ, ಮತ್ತು ಕ್ರೈಸ್ತಧರ್ಮದ ಕುರಿತು ಮಾತಾಡುವಾಗ ಈ ಸಂದರ್ಭ ಉದ್ಭವವಾಯಿತು. ಲೆನ್ನನ್ ಕ್ರೈಸ್ತಧರ್ಮದ ಕುರಿತು ಮಾತನಾಡುತ್ತಾ, "ಕ್ರೈಸ್ತಧರ್ಮವು ಇನ್ನು ಹೋಗಲಿದೆ. ಇದು ಕಣ್ಮರೆಯಾಗಿ ಮುಳುಗಿ ಹೋಗಲಿದೆ… ನಾವೀಗ ಜೀಸಸ್ಗಿಂತಲೂ ಹೆಚ್ಚು ಜನಪ್ರಿಯರಾಗಿದ್ದೇವೆ- ರಾಕ್ ಅಂಡ್ ರೋಲ್ ಮೊದಲು ಹೋಗುತ್ತದೋ ಅಥವಾ ಕ್ರೈಸ್ತಧರ್ಮ ಮೊದಲು ಹೋಗುತ್ತದೋ ಎಂದು ನನಗೆ ಗೊತ್ತಿಲ್ಲ" ಎಂದು ಹೇಳಿದ.[58] ಲೆನ್ನನ್ನ ಹೇಳಿಕೆಯನ್ನು ಇಂಗ್ಲಂಡ್ನಲ್ಲಿ ಕಾರ್ಯತಃ ಯಾರೂ ಲಕ್ಷಿಸಲಿಲ್ಲವಾದರೂ, ಡೇಟ್ಬುಕ್ ಎಂಬ ಅಮೆರಿಕಾದ ಹದಿಹರೆಯದವರ ನಿಯತಕಾಲಿಕವು ಇದನ್ನು ಐದು ತಿಂಗಳ ನಂತರ ಉಲ್ಲೇಖಿಸಿದಾಗ ಅದು ವಿವಾದವೊಂದನ್ನು ಸೃಷ್ಟಿಸಿತು. ಬೀಟಲ್ಸ್ನ ಧ್ವನಿಮುದ್ರಿಕೆಗಳನ್ನು ಸುಟ್ಟುಹಾಕುವಿಕೆ, ಕು ಕ್ಲುಕ್ಸ್ ಕ್ಲಾನ್ನ ಒಳ ಸೇರುವಿಕೆ ಮತ್ತು ಲೆನ್ನನ್ ವಿರುದ್ಧದ ಬೆದರಿಕೆಗಳಿಂದಾಗಿ ವಾದ್ಯವೃಂದವು ಪ್ರವಾಸವನ್ನು ರದ್ದುಗೊಳಿಸಲು ತೀರ್ಮಾನಿಸಬೇಕಾಗಿ ಬಂತು.
ಆದರೆ ತಂಡವಿಲ್ಲದೆಯೇ ಏನನ್ನೋ ಕಳೆದುಕೊಂಡ ಭಾವನೆ ಲೆನ್ನನ್ನಲ್ಲಿ ಕೆಲವೇ ದಿನಗಳಲ್ಲಿ ಮೂಡಿತು. "ಇನ್ನಾವುದೂ ಪ್ರವಾಸವಿಲ್ಲ... ದಿ ಬೀಟಲ್ಸ್ ತಂಡವಿಲ್ಲದ ಜೀವನವೆಂದರೆ, ಅದು ಭವಿಷ್ಯದಲ್ಲಿನ ಒಂದು ಗಾಢಾಂಧಕಾರದಂತೆ", ಎಂದು ಹೇಳಿದ ಆತ, ಈ ಅವಧಿಯಲ್ಲಿ ವಾದ್ಯವೃಂದವನ್ನು ತೊರೆಯಲು ನಿರ್ಧರಿಸಿದ.[59] ನೇರವಾಗಿ ಸಂಗೀತ ಕಚೇರಿಗಳನ್ನು ನೀಡಿದ ಅನುಭವಗಳ ಹಿನ್ನೆಲೆಯಲ್ಲಿ ಸ್ಟುಡಿಯೋದಲ್ಲಿ ಧ್ವನಿಮುದ್ರಣ ಮಾಡುವ ಹಾಗೂ ಹಾಡುಗಳನ್ನು ಬರೆಯುವುದರ ಕಡೆಗೆ ತಂಡದ ಸದಸ್ಯರು ಗಮನ ಹರಿಸಿದರು. ಈ ಹಂತದವರೆಗೆ, ಲೆನ್ನನ್ ಓರ್ವ ಪ್ರಭಾವೀ ಗೀತರಚನೆಕಾರನಾಗಿದ್ದ (ಅವನ ಬಹುತೇಕ ಹಾಡುಗಳು ಏಕಗೀತೆಯ ಧ್ವನಿಮುದ್ರಿಕೆಗಳಾಗಿ ಹೊರಬಂದಿದ್ದವು), ಆದರೆ ರಿವಾಲ್ವರ್ ಎಂಬ ಗೀತಸಂಪುಟ ಬಂದಂದಿನಿಂದ ಮೆಕ್ಕರ್ಟ್ನಿಯು ವಾದ್ಯವೃಂದದ ಪ್ರೇರಕಶಕ್ತಿಯಾಗಿ ಮಾರ್ಪಟ್ಟ. ಹ್ಯಾರಿಸನ್ ಕೂಡಾ ಯಥೇಚ್ಛವಾಗಿ ಗೀತೆಗಳನ್ನು ರಚಿಸಬಲ್ಲ ಓರ್ವ ಗೀತರಚನೆಕಾರನಾಗಿ ರೂಪುಗೊಳ್ಳುತ್ತಿದ್ದ. ಹೆಗ್ಗುರುತಿನ ಗೀತಸಂಪುಟ ಸಾರ್ಜೆಂಟ್ ಪೆಪ್ಪರ್ಸ್ ಲೋನ್ಲಿ ಹಾರ್ಟ್ಸ್ ಕ್ಲಬ್ ಬ್ಯಾಂಡ್ ಎಂಬ ಅವರ ಹೆಗ್ಗುರುತಿನ ಗೀತಸಂಪುಟವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸಂಭವಿಸಿದ ಬ್ರಿಯಾನ್ ಎಪ್ಸ್ಟಿನ್ನ ಆಕಸ್ಮಿಕ ಸಾವು ಕೂಡಾ ತಂಡದೊಳಗಿನ ಕ್ರಿಯಾಶಕ್ತಿಯನ್ನು ಬದಲಾಯಿಸಿತು.
ಎಪ್ಸ್ಟೀನ್ ನಂತರದ ತಂಡದ ಮೊಟ್ಟಮೊದಲ ಯೋಜನೆಯಾದ ಮ್ಯಾಜಿಕಲ್ ಮಿಸ್ಟರಿ ಟೂರ್ ಎಂಬ ಚಲನಚಿತ್ರಕ್ಕೆ ಸಂಬಂಧಿಸಿ ಮೆಕ್ಕರ್ಟ್ನಿಯು ಸಂಗೀತಮೇಳವನ್ನು ಸಂಯೋಜಿಸಿದ. ಇದು ವಿಮರ್ಶಾತ್ಮಕವಾಗಿ ತಂಡದ ಮೊಟ್ಟಮೊದಲ ಅಪಯಶಸ್ಸಾಗಿ ಪರಿಣಮಿಸಿತು. ಈ ಕುರಿತು ಲೆನ್ನನ್ ನಂತರ ಮಾತನಾಡುತ್ತಾ, "ನಾವಾಗ ಕಷ್ಟದಲ್ಲಿದ್ದೆವು ಎಂದು ನನಗೆ ಗೊತ್ತಿತ್ತು. ಸಂಗೀತವನ್ನು ನುಡಿಸುವುದಕ್ಕಿಂತ ಮಿಗಿಲಾದ ಬೇರಾವುದನ್ನೂ ಮಾಡುವ ನಮ್ಮ ಸಾಮರ್ಥ್ಯದ ಕುರಿತು ನನಗೆ ಯಾವುದೇ ಭ್ರಮೆಗಳಿರಲಿಲ್ಲ, ಮತ್ತು ನಾನು ಭಯಗೊಂಡಿದ್ದೆ" ಎಂದು ಹೇಳಿದ್ದ.[60]
ಸನ್ನಿವೇಶಗಳನ್ನು ಮತ್ತಷ್ಟು ಜಟಿಲಗೊಳಿಸಲೇನೋ ಎಂಬಂತೆ ದಿ ಬೀಟಲ್ಸ್ ತಂಡವು, ಲೆನ್ನನ್ ಹೇಳುವ ರೀತಿಯಲ್ಲಿ, "ಪಕ್ಕಾ ವ್ಯವಹಾರಸ್ತನಾಗಿ ಮಾರ್ಪಟ್ಟಿತು". ಆಪಲ್ ಎಂಬ ಹೆಸರಿನ ತಮ್ಮದೇ ಸ್ವಂತದ ಧ್ವನಿಮುದ್ರಣ (ಮತ್ತು ಚಲನಚಿತ್ರ, ಸಿದ್ಧ ಉಡುಪು, ಇಲೆಕ್ಟ್ರಾನಿಕ್ಸ್ ಮತ್ತು ಪ್ರಕಟಣೆ) ಕಂಪನಿಯನ್ನು ಕಟ್ಟಿಕೊಂಡಿತು. ಅಷ್ಟು ಹೊತ್ತಿಗೆ ಲೆನ್ನನ್ ಯೊಕೊ ಒನೊಳನ್ನು ಭೇಟಿಯಾಗಿದ್ದ ಮತ್ತು ತನ್ನದೇ ಮಾದಕವಸ್ತುಗಳ ಪ್ರಪಂಚದೊಳಗೆ ಹಿಂದಕ್ಕೆ ಸರಿದಿದ್ದ. ಮೆಕ್ಕರ್ಟ್ನಿ ತನ್ನ ಭಾವೀಪತ್ನಿಯಾದ ಲಿಂಡಾ ಈಸ್ಟ್ಮನ್ಳನ್ನು ಭೇಟಿಯಾಗಿದ್ದ, ಮತ್ತು ಆಪಲ್ ಕಂಪನಿಯ ವೃತ್ತಿಪರ ವ್ಯವಸ್ಥಾಪನೆಯ ಅಗತ್ಯ ತಮಗಿದೆ ಎಂದು ತಂಡಕ್ಕೆ ಅರಿವಾಯಿತು. ಮಿಕ್ ಜಾಗರ್ ನೀಡಿದ ಎಚ್ಚರಿಕೆಗಳ ಹೊರತಾಗಿಯೂ, ಚುಕ್ಕಾಣಿಯನ್ನು ಹಿಡಿಯಲು ಕೇಳುವುದಕ್ಕಾಗಿ ಲೆನ್ನನ್ ಅಮೆರಿಕಾದ ಸಂಗೀತ ನಿರ್ವಾಹಕ ಅಲೆನ್ ಕ್ಲೈನ್ನನ್ನು ಸಂಪರ್ಕಿಸಿದ (ದಿ ರೋಲಿಂಗ್ ಸ್ಟೋನ್ಸ್ ತಂಡವನ್ನೂ ಸಹ ಕ್ಲೈನ್ ನಿರ್ವಹಿಸಿದ್ದ). ಅಧಿಕಾರವನ್ನು ವಹಿಸಿಕೊಳ್ಳುವುದಕ್ಕಾಗಿ ತನ್ನ ಭಾವೀ ವಿವಾಹ ಸಂಬಂಧಿಗಳನ್ನು ಆರಿಸಿಕೊಂಡಿದ್ದಕ್ಕಾಗಿ ಮೆಕ್ಕರ್ಟ್ನಿ ತನ್ನ ಅಸಮಾಧಾನವನ್ನು ಕೂಡ ವ್ಯಕ್ತಪಡಿಸಿದ. ಆದಾಗ್ಯೂ, ಕ್ಲೈನ್ನೊಂದಿಗೆ ಹ್ಯಾರಿಸನ್ ಮತ್ತು ಸ್ಟಾರ್ ಕೂಡಾ ತೆರಳಿದರು, ಮತ್ತು ಉದ್ವೇಗಗಳು ಹೆಚ್ಚಾಗುತ್ತಲೇ ಇದ್ದವು.
ದಿ ಬೀಟಲ್ಸ್ ತಂಡವು ಅಬೆ ರೋಡ್ ಎಂಬ ತನ್ನ ಅಂತಿಮ ಗೀತಸಂಪುಟವನ್ನು ಬಿಡುಗಡೆ ಮಾಡುತ್ತಿದ್ದಂತೆ, 1069ರ ಸೆಪ್ಟೆಂಬರ್ನಲ್ಲಿ ಲೆನ್ನನ್ ತಂಡವನ್ನು ಬಿಟ್ಟನಾದರೂ, ತಂಡವು ತನ್ನ ಧ್ವನಿಮುದ್ರಣದ ಒಡಂಬಡಿಕೆಯನ್ನು ಮರು-ಸಂಧಾನಕ್ಕೆ ಒಳಪಡಿಸಿದ್ದರಿಂದ ಈ ಕುರಿತು ಪ್ರಕಟಣೆಯೊಂದನ್ನು ನೀಡದಿರಲು ಒಪ್ಪಿಕೊಂಡ. 1970ರ ಏಪ್ರಿಲ್ನಲ್ಲಿ ಮೆಕ್ಕರ್ಟ್ನಿಯು ಒಂದು ಸ್ವಯಂ ಪ್ರಶ್ನೆ-ಮತ್ತು-ಉತ್ತರದ ಸಂದರ್ಶನವೊಂದನ್ನು ನೀಡಿ, ಲೆನ್ನನ್ ಇನ್ನು ಮುಂದೆ ದಿ ಬೀಟಲ್ಸ್ ತಂಡದ ಸದಸ್ಯನಾಗಿರುವುದಿಲ್ಲ ಎಂದು ಘೋಷಿಸಿದಾಗ ಲೆನ್ನನ್ ಕುಪಿತನಾದ.[61] ಇದನ್ನು ಕೇಳಿಸಿಕೊಂಡ ಲೆನ್ನನ್ನ ಪ್ರತಿಕ್ರಿಯೆ ಹೀಗಿತ್ತು, "ಓ ಜೀಸಸ್! ಇದಕ್ಕೆ ಸಂಬಂಧಿಸಿದ ಎಲ್ಲಾ ಕೀರ್ತಿಯನ್ನೂ ಆತ [ಮೆಕ್ಕರ್ಟ್ನಿ] ಪಡೆಯುತ್ತಾನೆ!" ಲೆನ್ನನ್ ನಂತರ ರೋಲಿಂಗ್ ಸ್ಟೋನ್ ಗೆ ಹೇಳಿದ್ದು ಹೀಗಿತ್ತು: "ಪಾಲ್ ಮಾಡಿದ ರೀತಿಯಲ್ಲೇ ಮಾಡದೇ ನಾನು ಮೂರ್ಖನಾಗಿದ್ದೆ, ಧ್ವನಿಮುದ್ರಿಕೆಯೊಂದನ್ನು ಮಾರಲು ಅದನ್ನು ಬಳಸುವುದೇ ಆ ಕ್ರಮವಾಗಿತ್ತು." (ಮೆಕ್ಕರ್ಟ್ನಿಯ ಮೊದಲ ಏಕಗೀತೆಯ ಗೀತಸಂಪುಟ) ಮತ್ತು ಅವನು ಹೀಗೆ ನಂತರ ಬರೆದ, "ವಾದ್ಯವೃಂದವನ್ನು ನಾನು ಪ್ರಾರಂಭಿಸಿದೆ. ನಾನೇ ಮುಗಿಸಿದೆ".[62]
1970ರಲ್ಲಿ, ರೋಲಿಂಗ್ ಸ್ಟೋನ್ ಗಾಗಿ ಲೆನ್ನನ್ನೊಂದಿಗೆ ಜಾನ್ ವೆನ್ನರ್ ಒಂದು ಸಂದರ್ಶನವನ್ನು ನಡೆಸಿದ (ಇದಕ್ಕೆ "ಲೆನ್ನನ್ ನೆನಪಿಸಿಕೊಳ್ಳುತ್ತಾನೆ" ಎಂಬ ಶೀರ್ಷಿಕೆಯಿತ್ತು). ಒನೊಳಿಗೆ ಸಂಬಂಧಿಸಿದಂತೆ ತಂಡದ ಇತರ ಸದಸ್ಯರು ಹೊಂದಿದ ಭಾವನೆಯಂತೆಯೇ, ಮೆಕ್ಕರ್ಟ್ನಿಯೆಡೆಗೆ ಲೆನ್ನನ್ ಹೊಂದಿದ್ದ ಕಹಿಮನೋಭಾವ ಮತ್ತು ಹಗೆತನವನ್ನು ಈ ಸಂದರ್ಶನವು ಹೊರಹೊಮ್ಮಿಸಿತು. ಲೆನ್ನನ್ ಹೇಳೀದ್ದು ಹೀಗೆ: "ಪಾಲ್ನ ಅಕ್ಕಪಕ್ಕದವರಾಗಿದ್ದುಕೊಂಡು ನಮಗೆ ಸಾಕಾಗಿಹೋಗಿತ್ತು... ಬ್ರಿಯಾನ್ ಎಪ್ಸ್ಟಿನ್ ಮರಣಿಸಿದ ನಂತರ ನಾವು ಕುಸಿದೆವು. ಪಾಲ್ ಅಧಿಕಾರವನ್ನು ವಹಿಸಿಕೊಂಡ ಮತ್ತು ಎಣಿಕೆಯಂತೆ ನಮಗೆ ಮಾರ್ಗದರ್ಶನ ನೀಡುತ್ತಾ ಹೋದ. ಆದರೆ, ನಾವು ಪ್ರಗತಿ ಸಾಧಿಸದಿದ್ದರೆ ನಾಯಕತ್ವವನ್ನು ಏನೆಂದು ಕರೆಯಬೇಕು?"[63]
1968ರ ಅಂತ್ಯದ ವೇಳೆಗೆ, ಡರ್ಟಿ ಮ್ಯಾಕ್ ತಂಡದ ಒಂದು ಭಾಗವಾಗಿ ದಿ ರೋಲಿಂಗ್ ಸ್ಟೋನ್ಸ್ನ ರಾಕ್ ಅಂಡ್ ರೋಲ್ ಸರ್ಕಸ್ ಚಲನಚಿತ್ರದಲ್ಲಿ ಲೆನ್ನನ್ ಕಾರ್ಯನಿರ್ವಹಿಸಿದ. ಲೆನ್ನನ್, ಎರಿಕ್ ಕ್ಲಾಪ್ಟನ್, ಕೀತ್ ರಿಚರ್ಡ್ಸ್ ಮತ್ತು ಮಿಚ್ ಮಿಚೆಲ್ರನ್ನು ಒಳಗೊಂಡಿದ್ದ ಮಹಾನ್ ತಂಡವು ಒನೊಳ ಕಾರ್ಯನಿರ್ವಹಣೆಗೂ ಆಸರೆಯಾಗಿ ನಿಂತಿತು.[64] ಲೆನ್ನನ್ ಮತ್ತು ಒನೊ 1969ರ ಮಾರ್ಚ್ 20ರಂದು ಮದುವೆಯಾದರು, ಮತ್ತು ಕೆಲವೇ ದಿನಗಳಲ್ಲಿ "ಬ್ಯಾಗ್ ಒನ್" ಎಂಬ ಹೆಸರಿನ 14 ಶಿಲಾಮುದ್ರಣಗಳ ಒಂದು ಸರಣಿಯನ್ನು ಬಿಡುಗಡೆಮಾಡಿದರು. ಇದು ತಮ್ಮ ಮಧುಚಂದ್ರದ[65] ಕ್ಷಣಗಳಿಂದ ಪಡೆಯಲಾದ ದೃಶ್ಯಗಳಾಗಿದ್ದು, ಅವುಗಳ ಪೈಕಿ ಎಂಟು ದೃಶ್ಯಗಳನ್ನು ಅಸಭ್ಯ ಎಂದು ಪರಿಗಣಿಸಲಾಯಿತು ಹಾಗೂ ಬಹುತೇಕ ಚಿತ್ರಗಳನ್ನು ಬಹಿಷ್ಕರಿಸಲಾಯಿತು ಹಾಗೂ ಮುಟ್ಟುಗೋಲು ಹಾಕಿಕೊಳ್ಳಲಾಯಿತು.[66]
ಪ್ರಯೋಗಾತ್ಮಕ ಸಂಗೀತದ ಮೂರು ಗೀತಸಂಪುಟಗಳನ್ನು ಲೆನ್ನನ್ ಮತ್ತು ಒನೊ ಒಟ್ಟಾಗಿ ಧ್ವನಿಮುದ್ರಿಸಿದರು: Unfinished Music No.1: Two Virgins ,[67]... ಗೀತಸಂಪುಟವು ತನ್ನ ಸಂಗೀತದ ಹೂರಣಕ್ಕಿಂತ ಅದರ ಮುಖಚಿತ್ರಕ್ಕೇ ಹೆಚ್ಚು ಪ್ರಸಿದ್ಧಿ ಪಡೆಯಿತು. ...Unfinished Music No.2: Life with the Lions , ಹಾಗೂ ವೆಡಿಂಗ್ ಆಲ್ಬಂ -ಇವು ಉಳಿದೆರಡು ಗೀತಸಂಪುಟಗಳಾಗಿದ್ದವು. ಲೈವ್ ಪೀಸ್ ಇನ್ ಟೊರಂಟೋ 1969 ಎಂಬುದು ದಿ ಬೀಟಲ್ಸ್ನ ವಿಘಟನೆಗೆ ಮುಂಚಿತವಾಗಿಯೇ ಧ್ವನಿಮುದ್ರಿಸಲಾಗಿದ್ದ ಅವನ ಮೊಟ್ಟಮೊದಲ "ಏಕಗಾಯನದ" ಗೀತಸಂಪುಟವಾಗಿತ್ತು. ಇದನ್ನು ದಿ ಪ್ಲಾಸ್ಟಿಕ್ ಒನೊ ಬ್ಯಾಂಡ್ನೊಂದಿಗೆ ಟೊರಂಟೋದಲ್ಲಿನ ರಾಕ್ 'ಎನ್' ರೋಲ್ ಉತ್ಸವವೊಂದರಲ್ಲಿ ಧ್ವನಿಮುದ್ರಿಸಲಾಗಿತ್ತು. ಒಂಟಿಗಾಯನದ ಮೂರು ಏಕಗೀತೆಯ ಧ್ವನಿಮುದ್ರಿಕೆಗಳನ್ನೂ ಸಹ ಆತ ಧ್ವನಿಮುದ್ರಿಸಿದ. ಅವುಗಳೆಂದರೆ: ಯುದ್ಧ-ವಿರೋಧಿ ರಾಷ್ಟ್ರಗೀತೆಯಾದ, "ಗಿವ್ ಪೀಸ್ ಎ ಚಾನ್ಸ್", "ಕೋಲ್ಡ್ ಟರ್ಕಿ", ಮತ್ತು "ಇನ್ಸ್ಟಂಟ್ ಕರ್ಮ!".
1970ರಲ್ಲಿ ದಿ ಬೀಟಲ್ಸ್ನ ವಿಘಟನೆಯಾದ ನಂತರ, ಜಾನ್ ಲೆನ್ನನ್/ಪ್ಲಾಸ್ಟಿಕ್ ಒನೊ ಬ್ಯಾಂಡ್ ಎಂಬ ಗೀತಸಂಪುಟವನ್ನು ಲೆನ್ನನ್ ಬಿಡುಗಡೆಮಾಡಿದ. ಇದೊಂದು ಕಚ್ಚಾ ಭಾವನಾತ್ಮಕ ಗೀತಸಂಪುಟವಾಗಿದ್ದು, ಲೆನ್ನನ್ ತನ್ನ ತಾಯಿಯನ್ನು ಕಳೆದುಕೊಂಡಾಗಿನ ಹಾಗೂ ದಿ ಬೀಟಲ್ಸ್ನಿಂದ ಬೇರೆಯಾದಾಗಿನ ಅವನ ನೋವನ್ನು ಒಳಗೊಂಡಿತ್ತು. ಇದು "ವರ್ಕಿಂಗ್ ಕ್ಲಾಸ್ ಹೀರೋ" ಎಂಬ ಹಾಡನ್ನೂ ಒಳಗೊಂಡಿತ್ತು. "ಫಕಿಂಗ್" ಎಂಬ ಪದವನ್ನು ಸದರಿ ಹಾಡಿನಲ್ಲಿ ಬಳಸಿದ್ದ ಕಾರಣದಿಂದಾಗಿ ಅದು BBC ರೇಡಿಯೋದಿಂದ ನಿಷೇಧಿಸಲ್ಪಟ್ಟಿತ್ತು.[68]
ಅವನ ಇಮ್ಯಾಜಿನ್ ಗೀತಸಂಪುಟವು 1971ರಲ್ಲಿ ಬಂತು, ಹಾಗೂ ಅದರ ಶೀರ್ಷಿಕೆ ಗೀತೆಯು ಯುದ್ಧ-ವಿರೋಧಿ ಆಂದೋಲನಗಳಿಗಾಗಿ ಒಂದು ರಾಷ್ಟ್ರಗೀತೆಯಾಗಿ ಮಾರ್ಪಟ್ಟಿತು. "ಹೌ ಡು ಯು ಸ್ಲೀಪ್?" ಎಂಬ ಧ್ವನಿಪಥವನ್ನೂ ಇದು ಒಳಗೊಂಡಿದ್ದು-- ಇದು ಮೆಕ್ಕರ್ಟ್ನಿಯ ಮೇಲಿನ ಒಂದು ಸಂಗೀತದ ದಾಳಿಯಾಗಿತ್ತು. 70ರ ದಶಕದ ಮಧ್ಯಭಾಗದಲ್ಲಿ ಲೆನ್ನನ್ ತನ್ನ ಮನೋಭಾವವನ್ನು ಮೃದುಗೊಳಿಸಿಕೊಂಡು, ಈ ಹಾಡನ್ನು ತನಗೋಸ್ಕರವೇ ಬರೆದುಕೊಂಡಿದ್ದು ಎಂದು ಸಮರ್ಥಿಸಿಕೊಂಡನಾದರೂ,[69][70] 1980ರಲ್ಲಿ ಈ ಕುರಿತು ಮಾತನಾಡುತ್ತಾ, "ಹಾಡೊಂದನ್ನು ಸೃಷ್ಟಿಸಲು.... ಪಾಲ್ ವಿರುದ್ಧದ ನನ್ನ ಅಸಮಾಧಾನವನ್ನು ನಾನು ಬಳಸಿದೆ.... ಇದೊಂದು ಭೀಕರವಾದ ಕೆಟ್ಟ ಭಯಾನಕ ಕಡುಹಗೆತನವಲ್ಲ... 'ಹೌ ಡು ಯು ಸ್ಲೀಪ್' ಹಾಡನ್ನು ಬರೆಯುವುದಕ್ಕೋಸ್ಕರ ನನ್ನ ಅಸಮಧಾನವನ್ನು ನಾನು ಬಳಸಿದೆ ಮತ್ತು ಪಾಲ್ ಹಾಗೂ ದಿ ಬೀಟಲ್ಸ್ ತಂಡದಿಂದ, ಮತ್ತು ಪಾಲ್ನೊಂದಿಗಿನ ಸಂಬಂಧದಿಂದ ಹಿಂದೆಸರಿದೆ. ನಾನು ನಿಜವಾಗಿಯೂ ಎಲ್ಲ ಸಮಯಗಳಲ್ಲೂ ಆ ರೀತಿಯ ಆಲೋಚನೆಗಳನ್ನು ನನ್ನ ತಲೆಯಲ್ಲಿ ಹೊತ್ತು ತಿರುಗುವುದಿಲ್ಲ" ಎಂದು ಹೇಳಿದ.[36]
1971ರ ಆಗಸ್ಟ್ 31ರಂದು, ಲೆನ್ನನ್ ಇಂಗ್ಲಂಡ್ ಬಿಟ್ಟು ನ್ಯೂಯಾರ್ಕ್ಗೆ ತೆರಳಿದ ಹಾಗೂ 1971ರ ಡಿಸೆಂಬರ್ನಲ್ಲಿ "ಹ್ಯಾಪಿ ಕ್ರಿಸ್ಮಸ್ (ವಾರ್ ಈಸ್ ಓವರ್)" ಏಕಗೀತೆಯ ಧ್ವನಿಮುದ್ರಿಕೆಯನ್ನು ಬಿಡುಗಡೆಮಾಡಿದ.[71] ಸದರಿ ಏಕಗೀತೆಯ ಧ್ವನಿಮುದ್ರಿಕೆಯ ಕುರಿತು ಪ್ರಚಾರ ಮಾಡಲು, ಲೆನ್ನನ್ ಮತ್ತು ಒನೊ 9 ಪ್ರಮುಖ ನಗರಗಳಲ್ಲಿನ (ಮತ್ತು 7 ವಿವಿಧ ಭಾಷೆಗಳಲ್ಲಿನ) ಜಾಹೀರಾತು ಹಲಗೆಗಳಿಗಾಗಿ ಹಣಪಾವತಿಸಿದರು. ಆ ಜಾಹೀರಾತು ಫಲಕಗಳು: "ವಾರ್ ಈಸ್ ಓವರ್!... ಇಫ್ ಯು ವಾಂಟ್ ಇಟ್" ಎಂದು ಪ್ರಕಟಿಸಿದವು.[72] ಸಮ್ ಟೈಂ ಇನ್ ನ್ಯೂಯಾರ್ಕ್ ಸಿಟಿ ಸಂಪುಟವು ನಂತರ 1972ರಲ್ಲಿ ಬಿಡುಗಡೆಯಾದವು. ಎಲಿಫೆಂಟ್ಸ್ ಮೆಮರಿಯೊಂದಿಗೆ ದಾಖಲಿಸಲ್ಪಟ್ಟ ಈ ಸಂಪುಟವು, ಮಹಿಳೆಯರ ಹಕ್ಕುಗಳು, ಜನಾಂಗ ಸಂಬಂಧಗಳು, ಉತ್ತರ ಐರ್ಲೆಂಡ್ನಲ್ಲಿ ಬ್ರಿಟನ್ನ ಪಾತ್ರ, ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಒಂದು ಹಸಿರು ಕಾರ್ಡ್ ಪಡೆಯುವಲ್ಲಿನ ಲೆನ್ನನ್ನ ಸಮಸ್ಯೆಗಳು ಇತ್ಯಾದಿ ವಿಷಯಗಳ ಕುರಿತಾದ ಹಾಡುಗಳನ್ನು ಒಳಗೊಂಡಿತ್ತು.[73] 1960ರ ದಶಕದ ಅಂತ್ಯದಿಂದಲೂ ವಾಮ-ಪಂಥದ ರಾಜಕೀಯದಲ್ಲಿ ಲೆನ್ನನ್ ಆಸಕ್ತಿ ಹೊಂದಿದ್ದ, ಮತ್ತು ವರದಿಯಾಗಿರುವ ಪ್ರಕಾರ ಟ್ರಾಟ್ಸ್ಕಿ-ಬೆಂಬಲಿಗ ವರ್ಕರ್ಸ್ ರೆವಲ್ಯೂಷನರಿ ಪಾರ್ಟಿಗೆ ಹಣವನ್ನು ದೇಣಿಗೆಯಾಗಿ ನೀಡಿದ್ದ.[74]
1972ರಲ್ಲಿ, "ವುಮನ್ ಈಸ್ ದಿ ನಿಗರ್ ಆಫ್ ದಿ ವರ್ಲ್ಡ್" ಎಂಬ ಗೀತಸಂಪುಟವನ್ನು ಲೆನ್ನನ್ ಬಿಡುಗಡೆ ಮಾಡಿದ. ದಿ ಡಿಕ್ ಕ್ಯಾವೆಟ್ ಷೋ ದಲ್ಲಿ ಇದನ್ನು ಪ್ರಸ್ತುತಪಡಿಸಲು ಲೆನ್ನನ್ಗೆ ಅವಕಾಶ ಸಿಕ್ಕಿತಾದರೂ, ಈ ಹಾಡನ್ನು ಪ್ರಸಾರ ಮಾಡಲು ಹಲವು ರೇಡಿಯೋ ಕೇಂದ್ರಗಳು ನಿರಾಕರಿಸಿದವು.[75] 1972ರ ಆಗಸ್ಟ್ 30ರಂದು, ಲೆನ್ನನ್ ಹಾಗೂ ಎಲಿಫೆಂಟ್ಸ್ ಮೆಮರಿ ನ್ಯೂಯಾರ್ಕ್ನಲ್ಲಿನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಎರಡು ಸಹಾಯಾರ್ಥ ಕಚೇರಿಗಳನ್ನು ನೀಡಿದರು. ಸ್ಟೇಟನ್ ಐಲಂಡ್ನಲ್ಲಿನ ವಿಲ್ಲೋಬ್ರೂಕ್ ಸ್ಟೇಟ್ ಸ್ಕೂಲ್ ಮಾನಸಿಕ ಚಿಕಿತ್ಸಾಲಯದಲ್ಲಿನ ರೋಗಿಗಳ ಸಹಾಯಾರ್ಥವಾಗಿ ಈ ಕಚೇರಿಯನ್ನು ನೀಡಲಾಗಿತ್ತು.[76] ಇವು ಲೆನ್ನನ್ನ ಕಟ್ಟಕಡೆಯ ಪೂರ್ಣ-ಪ್ರಮಾಣದ ಕಚೇರಿಗಳ ಹಾಜರಿಗಳಾಗಿ ಪರಿಣಮಿಸಿದವು.[7]
1973ರ ನವೆಂಬರ್ನಲ್ಲಿ, ಮೈಂಡ್ ಗೇಮ್ಸ್ ಸಂಪುಟವನ್ನು ಲೆನ್ನನ್ ಬಿಡುಗಡೆಮಾಡಿದ. ಇದು "ದಿ ಪ್ಲಾಸ್ಟಿಕ್ U.F. ಒನೊ ಬ್ಯಾಂಡ್"ಗೆ ಅರ್ಪಿಸಲ್ಪಟ್ಟಿತು. ರಿಂಗೋ ಎಂಬ ಸ್ಟಾರ್ನ ಗೀತಸಂಪುಟಕ್ಕೂ (ಹಾಡಿನ ತನ್ನದೇ ಸ್ವಂತ ಪ್ರದರ್ಶನ ಆವೃತ್ತಿಯು ಜಾನ್ ಲೆನ್ನನ್ ಆಂಥಾಲಜಿ ಯಲ್ಲಿ ಕಾಣಿಸಿಕೊಳ್ಳುತ್ತದೆ) ಆತ ಹಾಡುಬರೆದ, ಹ್ಯಾರಿ ನಿಲ್ಸನ್ನ ಗೀತಸಂಪುಟವಾದ ಪುಸ್ಸಿ ಕ್ಯಾಟ್ಸ್ ನ್ನು ನಿರ್ಮಿಸಿದ ಮತ್ತು ಮಿಕ್ ಜಾಗರ್ಗಾಗಿ "ಟೂ ಮೆನಿ ಕುಕ್ಸ್ (ಸ್ಪಾಯಿಲ್ ದಿ ಸೂಪ್)"ನ್ನೂ ನಿರ್ಮಾಣ ಮಾಡಿದ. 1974ರ ಸೆಪ್ಟೆಂಬರ್ನಲ್ಲಿ, ವಾಲ್ಸ್ ಅಂಡ್ ಬ್ರಿಜಸ್ ಹಾಗೂ ಏಕಗೀತೆಯ ಧ್ವನಿಮುದ್ರಿಕೆಯಾದ "ವಾಟೆವರ್ ಗೆಟ್ಸ್ ಯೂ ಥ್ರೂ ದಿ ನೈಟ್" (ಎಲ್ಟನ್ ಜಾನ್ನೊಂದಿಗಿನ #1 ಶ್ರೇಯಾಂಕದ ದ್ವಂದ್ವಗಾಯನ) ಎಂಬ ಸಂಪುಟಗಳನ್ನು ಲೆನ್ನನ್ ಬಿಡುಗಡೆ ಮಾಡಿದ. ಗೀತಸಂಪುಟದಿಂದ ಆಯ್ದ ಎರಡನೇ ಏಕಗೀತೆಯ ಧ್ವನಿಮುದ್ರಿಕೆಯಾದ "#9 ಡ್ರೀಮ್" ಡಿಸೆಂಬರ್ನಲ್ಲಿ ಬಿಡುಗಡೆಯಾಯಿತು. ಸ್ಟಾರ್ಗಾಗಿ ಆತ "ಗುಡ್ನೈಟ್ ವಿಯೆನ್ನಾ" ವನ್ನು ಬರೆದ, ಮತ್ತು ಧ್ವನಿಮುದ್ರಣದ ಸಮಯದಲ್ಲಿ ಪಿಯಾನೊವನ್ನು ನುಡಿಸಿದ.[77] ನವೆಂಬರ್ 28ರಂದು, ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಲ್ಟನ್ ಜಾನ್ನ ಕೃತಜ್ಞತಾ ನಿವೇದನೆಯ ಕಚೇರಿಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡು ಲೆನ್ನನ್ ಅಚ್ಚರಿ ಮೂಡಿಸಿದ. "ವಾಟೆವರ್ ಗೆಟ್ಸ್ ಯೂ" ಸಂಪುಟವು #1 ಸ್ಥಾನಕ್ಕೆ ತಲುಪುವುದೆಂದು ಜಾನ್ನೊಂದಿಗೆ ಕಟ್ಟಿದ ಪಂದ್ಯವೊಂದರಲ್ಲಿ ಆತ ಸೋತ ನಂತರ ಈ ಅಚ್ಚರಿಯನ್ನು ಆತ ನೀಡಿದ.[78] "ಲಕಿ ಇನ್ ದಿ ಸ್ಕೈ ವಿತ್ ಡೈಮಂಡ್ಸ್", "ವಾಟೆವರ್ ಗೆಟ್ಸ್ ಯೂ ಥ್ರೂ ದಿ ನೈಟ್" ಮತ್ತು "ಐ ಸಾ ಹರ್ ಸ್ಟಾಂಡಿಂಗ್ ದೇರ್" ಗೀತೆಗಳನ್ನು ಲೆನ್ನನ್ ಪ್ರಸ್ತುತಪಡಿಸಿದ.
1975ರ ಜನವರಿಯಲ್ಲಿ, ಡೇವಿಡ್ ಬೋವೀ ಮತ್ತು ಕಾರ್ಲೋಸ್ ಅಲೋಮಾರ್ ಜೊತೆ ಸೇರಿಕೊಂಡು "ಫೇಮ್"ನ ಸಹ-ಗೀತರಚನೆ ಮತ್ತು ಧ್ವನಿಮುದ್ರಣವನ್ನು ಮಾಡಿದ. ಇದು ಬೋವೀಯ ಮೊಟ್ಟಮೊದಲ US #1 ಯಶಸ್ವೀ ಸಂಪುಟವೆನಿಸಿಕೊಂಡಿತು.[79] ಫಿಲ್ ಸ್ಪೆಕ್ಟರ್ನನ್ನು ಸಹ-ನಿರ್ಮಾಪಕನನ್ನಾಗಿ ಇರಿಸಿಕೊಂಡು, 1975ರ ಫೆಬ್ರವರಿಯಲ್ಲಿ ರಾಕ್ 'ಎನ್' ರೋಲ್ ಎಂಬ ಹೊದಿಕೆ ಗೀತೆಗಳ ಒಂದು ಗೀತಸಂಪುಟವನ್ನು ಲೆನ್ನನ್ ಬಿಡುಗಡೆಮಾಡಿದ.
1975ರ ಏಪ್ರಿಲ್ 18ರಂದು, ಎ ಸಲ್ಯೂಟ್ ಟು ಲ್ಯೂ ಗ್ರೇಡ್ ಎಂಬ ATVಯ ವಿಶೇಷ ಕಾರ್ಯಕ್ರಮದಲ್ಲಿ ಲೆನ್ನನ್ ಕಡೆಯ ಬಾರಿಗೆ ವೇದಿಕೆಯಲ್ಲಿ ಕಾಣಿಸಿಕೊಂಡ. "ಇಮ್ಯಾಜಿನ್", "ಸ್ಟಾಂಡ್ ಬೈ ಮಿ" (ದೂರದರ್ಶನದ ಆವೃತ್ತಿಯಿಂದ ಕತ್ತರಿಸಿ ತೆಗೆದದ್ದು), ಹಾಗೂ ತನ್ನ ರಾಕ್ 'ಎನ್' ರೋಲ್ LPಯಿಂದ ಆರಿಸಲಾದ "ಸ್ಲಿಪಿಂಗ್ ಅಂಡ್ ಸ್ಲೈಡಿಂಗ್" ಗೀತೆಗಳನ್ನು ಅಂದು ಆತ ಪ್ರಸ್ತುತಪಡಿಸಿದ.[80] ಲೆನ್ನನ್ಗೆ ಬೆಂಬಲವಾಗಿ BOMF ವಾದ್ಯವೃಂದವಿತ್ತು (ಆ ಸಂಜೆ ಅದಕ್ಕೆ "Etc." ಎಂಬ ಹೆಸರು ನೀಡಲಾಗಿತ್ತು).[81] ವಾದ್ಯವೃಂದದ ಸದಸ್ಯರು ಎರಡು-ಮುಖದ ಮುಖವಾಡಗಳನ್ನು ಧರಿಸಿದ್ದು ಅವು ಗ್ರೇಡ್ನಲ್ಲಿನ ತೋಡುವೆಗಳಾಗಿದ್ದವು. ದಿ ಬೀಟಲ್ಸ್ನ ಪ್ರಕಟಣಾ ಕಂಪನಿಗೆ ಸಂಬಂಧಿಸಿದ ಗ್ರೇಡ್ನ ನಿಯಂತ್ರಣದ ಕುರಿತಾಗಿ ಅವರೊಂದಿಗೆ ಲೆನ್ನನ್ ಮತ್ತು ಮೆಕ್ಕರ್ಟ್ನಿ ವಿರುದ್ಧವಾಗಿದ್ದರು. ದಿ ಬೀಟಲ್ಸ್ನ ಪ್ರಕಾಶಕನಾದ ಡಿಕ್ ಜೇಮ್ಸ್, ಮ್ಯಾಕ್ಲೆನ್ ಮ್ಯೂಸಿಕ್ (ಲೆನ್ನನ್ನ ಹಾಗೂ ಮೆಕ್ಕರ್ಟ್ನಿಯ ಪ್ರಕಾಶನ ಕಂಪನಿ) ಕಂಪನಿಯಲ್ಲಿನ ತನ್ನ ಅಧಿಕಾಂಶದ ಷೇರನ್ನು 1969ರಲ್ಲಿ ಗ್ರೇಡ್ ಕಂಪನಿಗೆ ಮಾರಿದ್ದ. "ಇಮ್ಯಾಜಿನ್"ನ ಸಂದರ್ಭದಲ್ಲಿ, "ಅಂಡ್ ನೋ ಇಮಿಗ್ರೇಷನ್ ಟೂ" ಎಂಬ ಪಂಕ್ತಿಯನ್ನು ಲೆನ್ನನ್ ನಡುವೆಯಲ್ಲಿ ಸೇರಿಸಿದ್ದ. ಇದು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಉಳಿಯುವುದಕ್ಕೆ ಸಂಬಂಧಿಸಿದ ಆತನ ಹೋರಾಟಕ್ಕೆ ಒಂದು ಉಲ್ಲೇಖವಾಗಿತ್ತು.[73] 1975ರ ಅಕ್ಟೋಬರ್ನಲ್ಲಿ, ಶೇವ್ಡ್ ಫಿಶ್ ಎಂಬ ತನ್ನ ಮಹೋನ್ನತ ಸಂಕಲನವನ್ನು ಬಿಡುಗಡೆ ಮಾಡುವ ಮೂಲಕ, ಮತ್ತೊಂದು ಗೀತಸಂಪುಟಕ್ಕಾಗಿ EMI/ಕ್ಯಾಪಿಟಲ್ನೊಂದಿಗಿನ ತನ್ನ ಒಪ್ಪಂದದ ಹೊಣೆಗಾರಿಕೆಯನ್ನು ಪೂರೈಸಿದ.
1976ರ ಜೂನ್ನಲ್ಲಿ, ರಿಂಗೋ ಸ್ಟಾರ್ ಜೊತೆಗೂಡಿ "ಕುಕಿನ್' (ಇನ್ ದಿ ಕಿಚನ್ ಆಫ್ ಲವ್)" ಎಂಬ ಹಾಡನ್ನು ಲೆನ್ನನ್ ಬರೆದ ಹಾಗೂ ಧ್ವನಿಮುದ್ರಿಸಿದ. ಇದು 1980ರಲ್ಲಿ ಅವನ ಪುನರಾಗಮನವಾಗುವವರೆಗಿನ ಕೊನೆಯ ಧ್ವನಿಮುದ್ರಣದ ಅವಧಿಯಾಗಿತ್ತು.[82] ಕ್ಯಾಪಿಟಲ್/EMIನಿಂದ ಬರಲಿದ್ದ ರಾಕ್ 'ಎನ್' ರೋಲ್ ಮ್ಯೂಸಿಕ್ ಎಂಬ ಒಂದು ಬೀಟಲ್ಸ್ ಸಂಕಲನಕ್ಕಾಗಿ ಹೊದಿಕೆಯನ್ನು ವಿನ್ಯಾಸಗೊಳಿಸುವುದಾಗಿ ಲೆನ್ನನ್ ಒಂದು ಪ್ರಸ್ತಾಪವನ್ನು ಮುಂದುಮಾಡಿದ. ಆದರೆ ಅವನ ಈ ಪ್ರಸ್ತಾಪವನ್ನು EMI ನಿರಾಕರಿಸಿತು.[83][84]
1977ರಲ್ಲಿ, ಲೆನ್ನನ್ ಟೋಕಿಯೋದಲ್ಲಿ ಒಂದು ಪ್ರಕಟಣೆಯನ್ನು ನೀಡಿ, "ಯಾವುದೇ ಮಹಾನ್ ತೀರ್ಮಾನವಿಲ್ಲದೆ, ಕುಟುಂಬದ ಹೊರಗಡೆ ಕೃತಿಗಳನ್ನು ಸೃಷ್ಟಿಸುವಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ನಾವು ಸಮಯವನ್ನು ತೆಗೆದುಕೊಳ್ಳಬಹುದು ಎಂದು ನಮಗನ್ನಿಸುವ ತನಕವೂ ನಮ್ಮ ಮಗುವಿನೊಂದಿಗೆ ಇರಲು ನಾವು ಮೂಲತಃ ನಿರ್ಧರಿಸಿದ್ದೇವೆ" ಎಂದು ತಿಳಿಸಿದ.[85][86] ಮರಣಾನಂತರದಲ್ಲಿ ಸ್ಕೈರೈಟಿಂಗ್ ಬೈ ದಿ ವರ್ಡ್ ಆಫ್ ಮೌತ್ ಎಂಬ ಶೀರ್ಷಿಕೆಯಡಿ ಒಂದು ಪುಸ್ತಕವಾಗಿ ಪ್ರಕಟವಾದ ಒಂದು ಹಸ್ತಪ್ರತಿಯ ಕರಡನ್ನೂ ಸಹ ಅವನು ಇದೇ ಅವಧಿಯಲ್ಲಿ ಸಿದ್ಧಪಡಿಸಿದ. ಅಷ್ಟೇ ಅಲ್ಲ, ಮರಣಾನಂತರದಲ್ಲಿ ಪ್ರಕಟಗೊಂಡ ಹಲವಾರು ರೇಖಾಚಿತ್ರಗಳ ಸರಣಿಯನ್ನೂ ಆತ ಇದೇ ಅವಧಿಯಲ್ಲಿ ರಚಿಸಿದ.
1980ರ ನವೆಂಬರ್ನಲ್ಲಿ ಡಬಲ್ ಫ್ಯಾಂಟಸಿ ಸಂಪುಟವನ್ನು ಬಿಡುಗಡೆ ಮಾಡುವ ಮೂಲಕ ಆತ ನಿವೃತ್ತಿಯಿಂದ ಹೊರಬಂದ. ಇದೂ ಸಹ ಒನೊಳನ್ನು ಒಳಗೊಂಡಿತ್ತು. ಅದಕ್ಕೆ ಮುಂಚಿನ ಜೂನ್ ತಿಂಗಳಲ್ಲಿ, 43-ಅಡಿಯ ಸ್ಲೂಪ್ ಹಡಗಿನಲ್ಲಿ ಲೆನ್ನನ್ ಬರ್ಮುಡಾಕ್ಕೆ ಪಯಣಿಸಿದ. ಅಲ್ಲಿ ಆತ ಗೀತಸಂಪುಟಕ್ಕಾಗಿ ಹಾಡುಗಳನ್ನು ಬರೆದ.[87] ಗೀತಸಂಪುಟದ ಹೆಸರು ಫ್ರೀಸಿಯಾ ಹೂವಿನ ಒಂದು ಜಾತಿಗೆ ಉಲ್ಲೇಖಿಸಲ್ಪಟ್ಟಿದ್ದು, ಇದನ್ನು ಬರ್ಮುಡಾದ ಸಸ್ಯತೋಟಗಳಲ್ಲಿ ಲೆನ್ನನ್ ಕಂಡಿದ್ದ ಮತ್ತು ಒನೊಳೊಂದಿಗಿನ ತನ್ನ ಮದುವೆಗೆ ಇದನ್ನೊಂದು ಕರಾರುವಾಕ್ಕಾದ ವಿವರಣೆಯಾಗಿ ಅವನು ನೋಡಿದ.[88] ಮತ್ತೊಂದು ಗೀತಸಂಪುಟಕ್ಕಾಗಿ ಲೆನ್ನನ್ ಸಾಕಷ್ಟು ಸಾಮಗ್ರಿಯನ್ನು ಬರೆದಿದ್ದ ಹಾಗೂ ಧ್ವನಿಮುದ್ರಿಸಿದ್ದ ಮತ್ತು ಮಿಲ್ಕ್ ಅಂಡ್ ಹನಿ ಎಂಬ ಮತ್ತೊಂದು ಸಂಪುಟಕ್ಕೆ ಆತ ಅಷ್ಟುಹೊತ್ತಿಗಾಗಲೇ ಯೋಜಿಸಿದ್ದ. ಇದು 1984ರಲ್ಲಿ ಅವನ ಮರಣಾನಂತರ ಬಿಡುಗಡೆಯಾಯಿತು.[89]
1980ರ ಡಿಸೆಂಬರ್ 8ರ ರಾತ್ರಿ, ಅಪರಾಹ್ನ ಸುಮಾರು 10:50 ಗಂಟೆಯಲ್ಲಿ, ಮಾರ್ಕ್ ಡೇವಿಡ್ ಚಾಪ್ಮನ್ ಎಂಬಾತ ಡಕೋಟಾ ವಾಸದ ಮಹಡಿ ಕಟ್ಟಡದ ಪ್ರವೇಶದ್ವಾರದಲ್ಲಿ ಲೆನ್ನನ್ನನ್ನು ಹಿಂಭಾಗದಿಂದ ನಾಲ್ಕುಬಾರಿ ಗುಂಡಿಕ್ಕಿದ. ಅದಕ್ಕೂ ಮುಂಚಿನ ಸಂಜೆಯಲ್ಲಿ, ಡಬಲ್ ಫ್ಯಾಂಟಸಿ ಯ ಒಂದು ಪ್ರತಿಯ ಮೇಲೆ ಲೆನ್ನನ್ ತನ್ನ ಹಸ್ತಾಕ್ಷರವನ್ನು ಹಾಕಿ ಚಾಪ್ಮನ್ಗೆ[90] ನೀಡಿದ್ದ. ಈತ ಅಕ್ಟೋಬರ್ನಿಂದಲೂ ಲೆನ್ನನ್ ಕೊಲೆಗೆ ಹೊಂಚುಹಾಕುತ್ತಲೇ ಇದ್ದ.
ಸನಿಹದ ರೂಸ್ವೆಲ್ಟ್ ಆಸ್ಪತ್ರೆಯ ತುರ್ತುಚಿಕಿತ್ಸಾ ಕೋಣೆಗೆ ಲೆನ್ನನ್ನನ್ನು ಸಾಗಿಸಲಾಯಿತಾದರೂ, ಅಲ್ಲಿಗೆ ತರುವಾಗಲೇ ರಾತ್ರಿ 11:07ರ ಸಮಯದಲ್ಲಿ ಆತ ಮರಣಹೊಂದಿದ್ದ ಎಂದು ಪ್ರಕಟಿಸಲಾಯಿತು. ಮಾರನೆಯ ದಿನದಂದು, ಒನೊ ಒಂದು ಹೇಳಿಕೆಯನ್ನು ನೀಡಿ, "ಜಾನ್ಗೆ ಅಂತ್ಯಸಂಸ್ಕಾರ ಮಾಡಲಾಗುವುದಿಲ್ಲ" ಎಂದು ನುಡಿದಳು. ಆಕೆ ತನ್ನ ಮಾತನ್ನು ಮುಂದುವರಿಸುತ್ತಾ, "ಮಾನವ ಕುಲವನ್ನು ಜಾನ್ ಪ್ರೀತಿಸಿದ ಮತ್ತು ಅದಕ್ಕಾಗಿ ಪ್ರಾರ್ಥಿಸಿದ. ದಯವಿಟ್ಟು ಅದನ್ನೇ ಅವನಿಗಾಗಿ ಪ್ರಾರ್ಥಿಸಿ. ಪ್ರೀತಿಯೊಂದಿಗೆ, ಯೊಕೊ ಮತ್ತು ಸೀನ್" ಎಂದು ಹೇಳುವ ಮೂಲಕ ತನ್ನ ಹೇಳಿಕೆಯನ್ನು ಮುಗಿಸಿದಳು.[91]
ಎರಡನೇ ದರ್ಜೆಯ ಕೊಲೆ ಮಾಡಿದ್ದಕ್ಕಾಗಿ ಚಾಪ್ಮನ್ ತಪ್ಪೊಪ್ಪಿಕೊಂಡ ಮತ್ತು ಅವನಿಗೆ 20ವರ್ಷಗಳ ಅವಧಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು; ನಂಬಿಕೆಯ ವಾಗ್ದಾನವನ್ನು ಪದೇ ಪದೇ ನಿರಾಕರಿಸಿದ್ದಕ್ಕಾಗಿ ಆತ ಸೆರೆಮನೆಯಲ್ಲೇ ಉಳಿದ.[92][93] ಲೆನ್ನನ್ನ ದೇಹವನ್ನು ನ್ಯೂಯಾರ್ಕ್ನ ಹಾರ್ಟ್ಸ್ಡೇಲ್ನಲ್ಲಿನ ಫರ್ನ್ಕ್ಲಿಫ್ ಸ್ಮಶಾನದಲ್ಲಿ ದಹಿಸಲಾಯಿತು.[94] ಕೆಲವೊಂದು ದಾಖಲೆಗಳ ಪ್ರಕಾರ, ಲೆನ್ನನ್ನ ಚಿತಾಭಸ್ಮವನ್ನು ಸ್ಟ್ರಾಬೆರಿ ಹೊಲಗಳ ಮೇಲೆ ಒನೊ ಎರಚಿದಳು; ಮತ್ತೆ ಕೆಲವರ ಪ್ರಕಾರ ಅವಳು ಅದನ್ನು ಇಟ್ಟುಕೊಂಡಳು.[95]
ಅವನ ಕೊಲೆಗೆ ಎರಡು ದಿನಗಳ ಮುಂಚಿತವಾಗಿ, BBCಯ ಆಂಡಿ ಪೀಬಲ್ಸ್ ಜೊತೆಯಲ್ಲಿ ಲೆನ್ನನ್ ಮಾತನಾಡುತ್ತಾ, ನ್ಯೂಯಾರ್ಕ್ ನಗರದಲ್ಲಿನ ಬೇರಾವುದಾದರೂ ಕಡೆಗೆ ತೆರಳಿ ಕ್ಷೇಮದಿಂದಿರಬೇಕೆಂದು ತನಗನ್ನಿಸುತ್ತಿದೆ ಎಂದು ಹೇಳಿಕೊಂಡಿದ್ದ..[96] ಮತ್ತೊಂದು ಸನ್ನಿವೇಶದಲ್ಲಿ, ಇನ್ನೂ ಬೀಟಲ್ ತಂಡದ ಓರ್ವ ಸದಸ್ಯನಾಗಿರುವಾಗ, ಅವನು ಹೇಗೆ ಸಾಯಬಹುದು ಎಂಬ ಬಗ್ಗೆ ಲೆನ್ನನ್ನನ್ನು ಕೇಳಲಾಗಿತ್ತು. "ಪ್ರಾಯಶಃ ನಾನು ಯಾರಾದರೊಬ್ಬ ತಲೆಕೆಟ್ಟವನಿಂದ ಸಾಯಿಸಲ್ಪಡಬಹುದು" ಎಂದು ಲೆನ್ನನ್ ಉತ್ತರಿಸಿದ್ದ.[97] ತನ್ನ ಕೊಲೆಗೆ ಮುಂಚೆ ದಿ ಡಕೋಟಾ ಅವರ್ಸ್ನಲ್ಲಿ ಡೇವ್ ಷಾವೊಲಿನ್ನೊಂದಿಗಿನ ಒಂದು ಸಂದರ್ಶನದ ಅವಧಿಯಲ್ಲಿ, ಲೆನ್ನನ್ ಹೇಳಿದ್ದು ಹೀಗೆ: "ನನ್ನ ಕೆಲಸವನ್ನು ನಾನು ಯಾವಾಗಲೂ ಅಖಂಡವಾಗಿಯೇ ಪರಿಗಣಿಸಿದ್ದೇನೆ; ಕೆಲಸವು ಬೀಟಲ್ಸ್ನೊಂದಿಗೆ ಇರಬಹುದು, ಡೇವಿಡ್ ಬೋವೀ, ಎಲ್ಟನ್ ಜಾನ್, ಅಥವಾ ಯೊಕೊ ಒನೊ ಜೊತೆಯಲ್ಲಿರಬಹುದು. ಮತ್ತು ನಾನು ಸತ್ತುಹೋಗಿ, ನನ್ನನ್ನು ಹೂಳುವವರೆಗೂ ನನ್ನ ಕೆಲಸವು ಮುಗಿಯುವುದಿಲ್ಲ ಎಂದೂ ನಾನು ಪರಿಗಣಿಸಿದ್ದೇನೆ. ಆ ಸಮಯವಿನ್ನೂ ತುಂಬಾ ತುಂಬಾ ದೂರವಿದೆ ಎಂದು ನನ್ನ ಭಾವನೆ."[98]
ತನ್ನ ಪ್ರಮುಖ ಸಂದರ್ಶನಗಳಲ್ಲೊಂದರಲ್ಲಿ ಲೆನ್ನನ್ ಮಾತನಾಡುತ್ತಾ, ಒನೊಳನ್ನು ತಾನು ಭೇಟಿಯಾಗುವವರೆಗೂ ಮಹಿಳೆಯರೆಡೆಗಿನ ತನ್ನ ಕಟ್ಟಭಿಮಾನದ ದೃಷ್ಟಿಯನ್ನು ತಾನು ಎಂದಿಗೂ ಪ್ರಶ್ನಿಸಿರಲಿಲ್ಲ ಎಂದು ತಿಳಿಸಿದ. ಲೆನ್ನನ್ ಯಾವಾಗಲೂ ತನ್ನ ಮಗ ಜೂಲಿಯನ್ನಿಂದ ದೂರವಿದ್ದ, ಆದರೆ ಎರಡನೇ ಮಗನಾದ ಸೀನ್ಗೆ ಹತ್ತಿರದಲ್ಲಿದ್ದು, ಅವನನ್ನು "ನನ್ನ ಹೆಮ್ಮೆ" ಎಂದು ಕರೆಯುತ್ತಿದ್ದ. ಆತನ ಅಂತ್ಯಕಾಲವು ಸಮೀಪಿಸುತ್ತಿದ್ದಂತೆ, ಒನೊಳೊಂದಿಗಿನ ತನ್ನ ಸಂಬಂಧದಲ್ಲಿ 'ಮನೆಯ ಯಜಮಾನಿಯ' ಪಾತ್ರವನ್ನು ವಹಿಸಿಕೊಂಡ ನಂತರ, ತಾನು ಮನೆಯ ಯಜಮಾನನ ಪಾತ್ರವನ್ನು ಸ್ವೀಕರಿಸಿರುವುದಾಗಿ ಲೆನ್ನನ್ ತಿಳಿಸಿದ.[36] ಬೀಟಲ್ಸ್ ತಂಡದಲ್ಲಿನ ಅವನ ಸಹವರ್ತಿಗಳ ಎಲ್ಲಾವಾಗಲೂ ಕೇಳಲಾಗುತ್ತಿತ್ತು ಮತ್ತು ಪ್ರತಿ ಸಂದರ್ಶನದಲ್ಲೂ ಅವನ ಉತ್ತರವು ಬದಲಾಗುತ್ತಿತ್ತು.
1957ರಲ್ಲಿ ಲಿವರ್ಪೂಲ್ ಆರ್ಟ್ ಕಾಲೇಜಿನಲ್ಲಿ ಲೆನ್ನನ್ನನ್ನು ಸಿಂಥಿಯಾ ಪೋವೆಲ್ ಭೇಟಿಮಾಡಿದಳು.[30] ಲೆನ್ನನ್ ಅವಳ ಶೈಲಿಯ ವ್ಯಕ್ತಿಯಾಗಿಲ್ಲದಿದ್ದರೂ ಕೂಡ, ಅವನಿಂದ ಅವಳು ಆಕರ್ಷಣೆಗೆ ಒಳಗಾದಳು. ಬ್ರಿಗಿಟ್ಟೆ ಬಾರ್ಡಾಟ್ ರೀತಿಯಲ್ಲಿ ಕಾಣುತ್ತಿದ್ದ ಮತ್ತೋರ್ವ ಹುಡುಗಿಯ ಕುರಿತು ಸಮರ್ಥಿಸುವ ರೀತಿಯಲ್ಲಿ ಲೆನ್ನನ್ ವರ್ಣಿಸುವುದನ್ನು ಕೇಳಿದ ನಂತರ, ಪೋವೆಲ್ ತನ್ನ ಕೂದಲ ಬಣ್ಣವನ್ನು ಹೊಂಬಣ್ಣಕ್ಕೆ ಬದಲಾಯಿಸಿದಳು.[99] ಬೇಸಿಗೆಯ ರಜಾದಿನಗಳಿಗೆ ಮುಂಚಿತವಾಗಿ ತನ್ನೊಂದಿಗೆ ಹಾಗೂ ಕೆಲವು ಸ್ನೇಹಿತರೊಂದಿಗೆ ಪಥಿಕ ಗೃಹವೊಂದಕ್ಕೆ ಹೋಗಲು ಪೋವೆಲ್ಳನ್ನು ಲೆನ್ನನ್ ಕೇಳಿಕೊಂಡ ಸಂದರ್ಭದಲ್ಲಿನ ಒಂದು ಕಾಲೇಜಿನ ಸಂತೋಷಕೂಟದ ನಂತರ ಅವರ ಸಂಬಂಧ ಪ್ರಾರಂಭವಾಯಿತು.[100] ತನಗೆ ಈಗಾಗಲೇ (ಹಾಯ್ಲೇಕ್ನಲ್ಲಿನ ಬ್ಯಾರಿ ಎಂಬ ಯುವಕನ ಜೊತೆಗೆ) ನಿಶ್ಚಿತಾರ್ಥವಾಗಿದೆ ಎಂದು ಅವನಿಗೆ ಪೋವೆಲ್ ತಿಳಿಸಿದಳು. ಆದರೆ ಲೆನ್ನನ್ ಜೋರಾಗಿ ಅಬ್ಬರಿಸುತ್ತಾ, "ನನ್ನನ್ನು ಮದುವೆಯಾಗು ಎಂದೇನೂ ನಾನು ನಿನ್ನನ್ನು ಕೇಳಲಿಲ್ಲ, ನಾನು ಹಾಗೇನಾದರೂ ಕೇಳಿದೆನಾ!?" ಎಂದು ಕೂಗಾಡಿದ.[101] ಲೆನ್ನನ್ ಅನೇಕ ವೇಳೆ ತನ್ನ ಅಸೂಯೆಯನ್ನು ಹೊರಗೆಡವುತ್ತಿದ್ದ, ಮತ್ತು ಸಟ್ಕ್ಲಿಫೆಯೊಂದಿಗೆ ಆಕೆ ನರ್ತಿಸುತ್ತಿದ್ದುದನ್ನು ಕಂಡ ನಂತರ ಅಂದು (ಅವಳ ತಲೆಯನ್ನು ಗೋಡೆಗೆ ಒತ್ತುಕೊಟ್ಟುಕೊಂಡು) ಅವಳ ಕೆನ್ನೆಗೆ ಒಮ್ಮೆ ಬಾರಿಸಿದ್ದ.[102] 1962ರ ಮಧ್ಯದಲ್ಲಿ, ತಾನು ಲೆನ್ನನ್ನ ಮಗುವಿಗೆ ಗರ್ಭಿಣಿಯಾಗಿರುವುದು ಪೋವೆಲ್ಗೆ ತಿಳಿಯಿತು.[103] ಲಿವರ್ಪೂಲ್ನಲ್ಲಿನ ಮೌಂಟ್ ಪ್ಲಸೆಂಟ್ ನೋಂದಣಿ ಕಚೇರಿಯಲ್ಲಿ ಆಗಸ್ಟ್ 23ರಂದು ಅವರಿಬ್ಬರೂ ಮದುವೆಯಾದರು. ಬೀಟಲ್ ತಂಡದ ಸದಸ್ಯನೊಬ್ಬನಿಗೆ ಮದುವೆಯಾಗಿದೆ ಎಂದು ಗೊತ್ತಾದಲ್ಲಿ ಕೆಲವೊಂದು ಅಭಿಮಾನಿಗಳು ಆವರಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದು ಎಂದು ಆಲೋಚಿಸಿದ ವ್ಯವಸ್ಥಾಪಕ ಎಪ್ಸ್ಟೀನ್, ಈ ಸಂಬಂಧವನ್ನು ಗುಟ್ಟಾಗಿಡುವಂತೆ ಲೆನ್ನನ್ಗೆ ಒತ್ತಾಯಿಸಿದ. 1963ರ ಏಪ್ರಿಲ್ 8ರಂದು ಸೆಫ್ಟನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಾನ್ ಚಾರ್ಲ್ಸ್ ಜೂಲಿಯನ್ ಲೆನ್ನನ್ ಜನ್ಮತಳೆದ.[104]
ಲೆನ್ನನ್ ಪ್ರವಾಸದಲ್ಲಿ ಇದ್ದುದರಿಂದ ಅವನಿಗೆ ತನ್ನ ನವಜಾತ ಶಿಶುವನ್ನು ಮೂರುದಿನಗಳವರೆಗೆ ನೋಡಲಾಗಲಿಲ್ಲ. ನಂತರ ಆತ ಎಪ್ಸ್ಟೀನ್ ಜೊತೆಯಲ್ಲಿ ರಜೆಯನ್ನು ಕಳೆಯಲು ಸ್ಪೇನ್ಗೆ ತೆರಳಿದ. ಇದರಿಂದಾಗಿ ಅವರಿಬ್ಬರ ನಡುವೆ ಒಂದು ಪ್ರಣಯ ಪ್ರಸಂಗ ನಡೆಯುತ್ತಿದೆ ಎಂಬ ಊಹೋಪೋಹಗಳು ಹುಟ್ಟಿಕೊಂಡವು (ಎಪ್ಸ್ಟೀನ್ ಓರ್ವ ಸಲಿಂಗಕಾಮಿ ಎಂದು ಕರೆಯಲ್ಪಟ್ಟಿದ್ದ). ಇದಾದ ಕೆಲವೇ ದಿನಗಳಲ್ಲಿ, 1963ರ ಜೂನ್ 18ರಂದು ನಡೆದ ಮೆಕ್ಕರ್ಟ್ನಿಯ ಇಪ್ಪತ್ತೊಂದನೇ ಹುಟ್ಟುಹಬ್ಬದ ಸಂತೋಷಕೂಟದಲ್ಲಿ, ಕ್ಯಾವರ್ನ್ ಕ್ಲಬ್ MC ಬಾಬ್ ವೂಲರ್ ಮೇಲೆ ಲೆನ್ನನ್ ದೈಹಿಕ ಹಲ್ಲೆಯನ್ನು ನಡೆಸಿದ್ದ. "ನಿನ್ನ ಮಧುಚಂದ್ರ ಹೇಗಿತ್ತು ಜಾನ್?" ಎಂದು ಆತ ಕೇಳಿದ್ದೇ ಈ ಹಲ್ಲೆಗೆ ಕಾರಣವಾಗಿತ್ತು. ಶಬ್ದ ಚಮತ್ಕಾರ ಮತ್ತು ಸ್ನೇಹಪೂರ್ವಕ ಆದರೆ ತೀಕ್ಷ್ಣವಾದ ಟೀಕೆಗಳನ್ನು[105] ಮಾಡುವಲ್ಲಿ ಹೆಸರುವಾಸಿಯಾಗಿದ್ದ MC, ತಮಾಷೆಗಾಗಿ ಅದನ್ನು ಹೇಳಿದ್ದ;[106][107] ಆದಾಗ್ಯೂ, ಲೆನ್ನನ್ನ ಮದುವೆಯಾದಂದಿನಿಂದ ಹತ್ತು ತಿಂಗಳು ಕಳೆದುಹೋಗಿದ್ದವು, ಮತ್ತು ಮುಂದೂಡಲ್ಪಟ್ಟ ಮಧುಚಂದ್ರವು ನಡೆಯುವುದಕ್ಕೆ ಇನ್ನೂ ಎರಡು ತಿಂಗಳುಗಳಿದ್ದವು.[108] ಕುಡಿದಿದ್ದ ಲೆನ್ನನ್ಗೆ ಈ ವಿಷಯವು ಸರಳವಾಗಿತ್ತು: "ಅವನು ನನ್ನನ್ನು ಓರ್ವ ಸಲಿಂಗಕಾಮಿ ಎಂದು ಕರೆದ. ಆದ್ದರಿಂದ ನಾನು ಅವನ ಪಕ್ಕೆಲಬುಗಳನ್ನು ಮುರಿದೆ" ಎಂದು ಹೇಳಿಕೊಂಡ.[107] 1991ರಲ್ಲಿ, ಲೆನ್ನನ್/ಎಪ್ಸ್ಟೀನ್ರ ರಜಾದಿನದ ಒಂದು ಕಾದಂಬರಿ ರೂಪದ ವಿವರಣೆಯನ್ನು ದಿ ಅವರ್ಸ್ ಅಂಡ್ ಟೈಮ್ಸ್ ಎಂಬ ಹೆಸರಿನ ಒಂದು ಸ್ವತಂತ್ರ ಚಲನಚಿತ್ರವನ್ನಾಗಿಸಲಾಯಿತು.[109] ಲೆನ್ನನ್ ತನ್ನ ಮಗ ಜೂಲಿಯನ್ನಿಂದ ತುಂಬಾ ದೂರದಲ್ಲಿದ್ದ. ಹೀಗಾಗಿ ತನ್ನ ತಂದೆಗಿಂತ ಮೆಕ್ಕರ್ಟ್ನಿಯೊಂದಿಗೇ ಆತ ಹತ್ತಿರನಾದ. ಜೂಲಿಯನ್ ನಂತರ ಹೇಳಿದ್ದು ಹೀಗೆ: "ನನ್ನ ಅಪ್ಪ ನನ್ನೊಂದಿಗೆ ಹೇಗಿದ್ದ ಎಂಬುದರ ಹಿಂದಿನ ಸತ್ಯವನ್ನು ತಿಳಿದುಕೊಳ್ಳಲು ಎಂದಿಗೂ ಬಯಸಿರಲಿಲ್ಲ. ನನ್ನ ಬಗೆಗೆ ತೀರಾ ಕೆಟ್ಟದಾದ ರೀತಿಯಲ್ಲಿ ಮಾತನಾಡಿಕೊಳ್ಳಲಾಗುತ್ತಿತ್ತು... ಶನಿವಾರವೊಂದರ ರಾತ್ರಿಯಲ್ಲಿ ನಾನು ವಿಸ್ಕಿ ಬಾಟಲಿಯಿಂದ ಹೊರಗೆ ಬರುವೆ ಎಂದು ಆತ ಹೇಳಿದಂತೆ ಇದು ಇರುತ್ತಿತ್ತು.[36] ಈ ಥರದ ಅಸಂಬದ್ಧ ಮಾತುಗಳು ಕೇಳಿಬರುತ್ತಿದ್ದವು. ನೀವೇ ಆಲೋಚಿಸಿ ಹೇಳಿ, ಅದರಲ್ಲಿ ಪ್ರೀತಿ ಎಂಬುದೇನಾದರೂ ಇದೆಯೇ? ಪಾಲ್ ಮತ್ತು ನಾನು ಒಂದಷ್ಟು ಅಲೆದಾಡುವುದು ವಾಡಿಕೆಯಾಗಿತ್ತು... ಅಪ್ಪ ಮತ್ತು ನಾನು ಮಾಡುತ್ತಿದ್ದುದಕ್ಕಿಂತ ಇದು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿತ್ತು. ನಮ್ಮಿಬ್ಬರ ನಡುವಿನ ಸ್ನೇಹ ಅಮೋಘವಾಗಿತ್ತು ಮತ್ತು ನಾನು ಹಾಗೂ ನನ್ನ ತಂದೆ ಒಟ್ಟಿಗೆ ಇರುವಾಗ ತೆಗೆಯಲಾಗಿದ್ದ ಛಾಯಾಚಿತ್ರಗಳಿಗಿಂತ, ನಾನು ಮತ್ತು ಪಾಲ್ ಒಟ್ಟಿಗೇ ಆಡುತ್ತಿದ್ದಾಗಿನ ಛಾಯಾಚಿತ್ರಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು ಎನಿಸುತ್ತದೆ."[110]
ಲೆನ್ನನ್ನ ವಿಶ್ವಾಸರಾಹಿತ್ಯತೆಗಳ ಕುರಿತು ಸಿಂಥಿಯಾ ಲೆನ್ನನ್ಗೆ ಅರಿವಾಗಿತ್ತು, ಆದರೆ ದಿನೇ ದಿನೇ ಹೆಚ್ಚುತ್ತಿದ್ದ ಆತನ ಮಾದಕವಸ್ತುವಿನ ಬಳಕೆಯಿಂದಾಗಿ ತಮ್ಮಿಬ್ಬರ ನಡುವೆ ಅಗಲಿಕೆಯುಂಟಾಯಿತು ಎಂದು ಅವಳು ಉಲ್ಲೇಖಿಸಿದ್ದಾಳೆ. ಒನೊಳೊಂದಿಗಿನ ಲೆನ್ನನ್ನ ಸ್ನೇಹದ ಕುರಿತೂ ಅವಳಿಗೆ ಗೊತ್ತಿತ್ತು. ಪೋವೆಲ್ ಪ್ರಕಾರ, ಅಂತಿಮವಾಗಿ, ಪ್ರಾಯಶಃ ಒನೊ ಮಾತ್ರವೇ ಲೆನ್ನನ್ಗೆ ಸೂಕ್ತವಾದ ಹೆಣ್ಣಾಗಿ ಹೊಂದುತ್ತಾಳೆ ಭಾವಿಸಿದ ಅವಳು, ಅದನ್ನೇ ಅವನಿಗೆ ಸೂಚಿಸಿದಳು.[111] ಸಮಾಲೋಚನೆ ನಡೆಸಲು ಲೆನ್ನನ್ ಹಾಗೂ ದಿ ಬೀಟಲ್ಸ್ ತಂಡವು ಬ್ಯಾಂಗರ್ಗೆ ಹೋದಾಗ, ಪೋವೆಲ್ ಮತ್ತು ಲೆನ್ನನ್ ಇಬ್ಬರೂ ರೈಲಿನ ಪ್ಲ್ಯಾಟ್ಫಾರಂನ ಮೇಲೆ ಬೇರ್ಪಡೆಯಾದರು. ಅವಳನ್ನು ಗುರುತಿಸದ ಓರ್ವ ಆರಕ್ಷಕನು ಅವಳು ರೈಲಿಗೆ ಹತ್ತದಂತೆ ಅವಳನ್ನು ತಡೆಹಿಡಿದ. ರೈಲುನಿಲ್ದಾಣದಿಂದ ಲೆನ್ನನ್ ಹತ್ತಿದ್ದ ರೈಲು ಹೊರಟಾಗ, ಅವಳಿಗೆ ಕಣ್ಣೀರನ್ನು ತಡೆಯಲಾಗಲಿಲ್ಲ. ಇಮ್ಯಾಜಿನ್ ಎಂಬ ಸಾಕ್ಷ್ಯಚಿತ್ರದಲ್ಲಿ ಅವಳು ಹೀಗೆ ವಿವರಿಸಿದ್ದಾಳೆ, "ಸಾಮಾನ್ಯವಾಗಿ ನಾನು ಹಾಗೆ ಅಳುತ್ತಿರಲಿಲ್ಲ, ನಾನು ಶಾಂತಳಾಗಿಯೇ ಇರುವವಳಾಗಿದ್ದೆ... ನಾನು ಯಾವಾಗ ಬೇಕಾದರೂ ಅಲ್ಲಿಗೆ ಹೋಗಬಹುದು ಎಂದು ನನಗೆ ಗೊತ್ತಿತ್ತು. ಆದರೆ ಆ ಸನ್ನಿವೇಶದಲ್ಲಿ ನನಗೆ ತುಂಬಾ ದುಃಖವಾಯಿತು. ಇದು ನಮ್ಮ ಜೀವನದ ಪ್ರತೀಕವಾಗಿತ್ತು... ಈ ನಿಲ್ದಾಣದಲ್ಲಿ ನಾನು ಕೆಳಗಿಳಿಯುತ್ತಿದ್ದೇನೆ ಎಂಬುದನ್ನು ಅದು ಸೂಚಿಸಿತ್ತು."[112] ಅವಳು ವ್ಯಭಿಚಾರದಲ್ಲಿ ತೊಡಗಿದ್ದಳೇ ಹೊರತು ತಾನಲ್ಲ ಎಂದು ವಾದಿಸುವ ಮೂಲಕ, ಲೆನ್ನನ್ ವಿಚ್ಛೇದನಕ್ಕಾಗಿ ಪೋವೆಲ್ ಮೇಲೆ ಮೊಕದ್ದಮೆ ಹೂಡಲು ಯತ್ನಿಸಿದ.[113] ಒನೊ ಗರ್ಭಿಣಿಯಾಗಿರುವುದು ಪತ್ತೆಯಾದಾಗ, ವಿಚ್ಛೇದನಕ್ಕಾಗಿ ಪೋವೆಲ್ ಲೆನ್ನನ್ಗೆ ಮನವಿ ಸಲ್ಲಿಸಿದಳು. ಇದಕ್ಕೆ ಸಂಬಂಧಿಸಿದ ಸಂಧಾನಗಳು ನಡೆಯುತ್ತಿರುವಾಗ 75,000£ ಹಣಕ್ಕಿಂತ ಹೆಚ್ಚಿನ ಮೊತ್ತವನ್ನು ನೀಡಲು ಲೆನ್ನನ್ ನಿರಾಕರಿಸಿದ. ಸಾಮಾನ್ಯವಾಗಿ ಭಾವಿಸಿರುವಂತೆ ಈ ಸಂದರ್ಭದಲ್ಲಿ ಆತ, "ಇದನ್ನು ಪಡೆಯಲು ನಿನಗಾವ ಅರ್ಹತೆಯಿದೆ? ದೇವರೇ, ಒಂದು ರೀತಿಯಲ್ಲಿ ಇದು ರಕ್ತಮಯ ಮಡುಗಳನ್ನು ಗೆದ್ದಂತೆ" ಎಂದು ಹೇಳಿದ. ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳಲಾಯಿತು. ವರ್ಷಕ್ಕೆ 2,400£ನಂತೆ 100,000£ನಷ್ಟು ಹಣವನ್ನು ಪೋವೆಲ್ ಸ್ವೀಕರಿಸಿದಳು. ಜೂಲಿಯನ್ ಮತ್ತು ಲೆನ್ನನ್ನ ಮನೆಯ (ಕೆನ್ವುಡ್) ಅವಳ ಸುಫರ್ದಿಗೆ ಬಂದವು.[114]
ಲೆನ್ನನ್ ಮತ್ತು ಒನೊ ಹೇಗೆ ಭೇಟಿಯಾದರು ಎಂಬುದರ ಕುರಿತಾಗಿ ಎರಡು ಕಥನಗಳಿವೆ: ಮೊದಲನೆಯದು ಹೇಳುವ ಪ್ರಕಾರ, 1966ರ ನವೆಂಬರ್ 9ರಂದು ಲಂಡನ್ನಲ್ಲಿನ ಇಂಡಿಕಾ ಕಲಾಚಿತ್ರಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಒನೊ ತನ್ನ ಕಲ್ಪನಾತ್ಮಕ ಕಲಾ ಪ್ರದರ್ಶನವನ್ನು ಸಿದ್ಧಗೊಳಿಸುತ್ತಿದ್ದಳು, ಮತ್ತು ಕಲಾಚಿತ್ರಶಾಲೆಯ ಮಾಲೀಕನಾದ ಜಾನ್ ಡನ್ಬಾರ್ ಎಂಬಾತ ಅವರಿಬ್ಬರನ್ನೂ ಪರಸ್ಪರ ಪರಿಚಯಿಸಿದ.[115][116] ಒನೊಳ "ಹ್ಯಾಮರ್ ಎ ನೈಲ್" ಎಂಬ ಕಲಾಕೃತಿಯು ಲೆನ್ನನ್ನ ಕುತೂಹಲ ಕೆರಳಿಸಿತು: ಕಲಾಪೋಷಕರು ಮೊಳೆಯೊಂದನ್ನು ಮರದ ಹಲಗೆಯೊಂದಕ್ಕೆ ಬಡಿದು, ಅದನ್ನು ಒಂದು ಕಲಾಕೃತಿಯನ್ನಾಗಿಸಿದ್ದರು. ಚೊಕ್ಕವಾದ ಹಲಗೆಯಲ್ಲಿ ಲೆನ್ನನ್ ಒಂದು ಮೊಳೆಯನ್ನು ಬಡಿಯಲು ಬಯಸಿದ, ಆದರೆ ಪ್ರದರ್ಶನವು ಇನ್ನೂ ಆರಂಭವಾಗಿರಲಿಲ್ಲವಾದ್ದರಿಂದ ಒನೊ ಅವನನ್ನು ತಡೆದಳು. ಡನ್ಬಾರ್ ನಂತರ ಒನೊಳನ್ನು ಉದ್ದೇಶಿಸಿ, "ಇವನಾರೆಂದು ನಿನಗೆ ಗೊತ್ತಿಲ್ಲವೇ?" ಎಂದು ಕೇಳಿದ. ದಿ ಬೀಟಲ್ಸ್ ತಂಡದ ಕುರಿತಾಗಿ ಒನೊ ಕೇಳಿರಲಿಲ್ಲವಾದರೂ, ತನಗೆ ಲೆನ್ನನ್ ಐದು ಷಿಲಿಂಗ್ಗಳನ್ನು ಕೊಡಬೇಕು ಎಂಬ ಷರತ್ತಿನೊಂದಿಗೆ ತನ್ನ ಪಟ್ಟು ಸಡಿಲಿಸಿದಳು. ಲೆನ್ನನ್ ಆಗ, "ನಾನು ನಿನಗೆ ಒಂದು ಕಾಲ್ಪನಿಕವಾದ ಐದು ಷಿಲಿಂಗ್ಗಳನ್ನು ಕೊಡುವೆ ಮತ್ತು ಒಂದು ಕಾಲ್ಪನಿಕವಾದ ಮೊಳೆಯನ್ನು ಹೊಡಯುವೆ" ಎಂದು ಹೇಳಿದ.[36] ಎರಡನೇ ಕಥನವು ಹೇಳುವ ಪ್ರಕಾರ, 1965ರ ಅಂತ್ಯದಲ್ಲಿ, ಒನೊ ಲಂಡನ್ನಿನಲ್ಲಿರುವಾ ಜಾನ್ ಕೇಜ್ ಎಂಬಾತ ತೊಡಗಿಸಿಕೊಂಡಿದ್ದ ಪುಸ್ತಕವೊಂದಕ್ಕೆ ಮೂಲ ಸಂಗೀತದ ಪ್ರಸ್ತಾರಸೂಚಿಗಳನ್ನು ಸಂಕಲಿಸುತ್ತಿದ್ದಳು.[117] ಅವಳು ಈ ಕುರಿತು ಮೆಕ್ಕರ್ಟ್ನಿಯನ್ನು ಭೇಟಿಯಾಗಿ ಕೇಳಿಕೊಂಡಾಗ, ಅವನು ತನ್ನೆಲ್ಲಾ ಮೂಲಕೃತಿಗಳನ್ನು ಕಾಯ್ದಿಟ್ಟುಕೊಂಡಿದ್ದರಿಂದಾಗಿ ಯಾವುದೇ ಹಸ್ತಪ್ರತಿಯನ್ನು ಕೊಡಲು ನಿರಾಕರಿಸಿದ. ಆದರೆ ಲೆನ್ನನ್ ಈ ಕುರಿತು ಸಹಾಯ ಮಾಡಬಹುದು ಎಂದು ಆತ ಸೂಚಿಸಿದ. ಈ ಕುರಿತು ಲೆನ್ನನ್ನನ್ನು ಆಕೆ ಸಂಪರ್ಕಿಸಿದಾಗ, ಆತ ರಬ್ಬರ್ ಸೋಲ್ ಕೃತಿಯಿಂದ ಮೊದಲ್ಗೊಂಡು "ದಿ ವರ್ಡ್"ವರೆಗಿನ ಕೈಬರಹದ ಮೂಲ ಸಾಹಿತ್ಯವನ್ನು ಒನೊಗೆ ನೀಡಿದ. ನೊಟೇಷನ್ಸ್ ಎಂಬ ಕೇಜ್ನ ಪುಸ್ತಕದಲ್ಲಿ ಅವೆಲ್ಲವೂ ನಕಲು ಮಾಡಲ್ಪಟ್ಟವು.[118]
ಲಂಡನ್ನಲ್ಲಿದ್ದ ಒನೊಳಿಂದ ಭಾರತದಲ್ಲಿದ್ದ ಲೆನ್ನನ್ಗೆ ಹೇರಳವಾಗಿ ಅಂಚೆಕಾರ್ಡುಗಳು ಬರಲಾರಂಬಿಸಿದಾಗ, ಭಾರತದಿಂದ ಮರಳಿದ ನಂತರ 1968ರ ಮೇ ತಿಂಗಳಲ್ಲಿ ಲೆನ್ನನ್ ಒನೊಳೊಂದಿಗೆ ತನ್ನ ಲೈಂಗಿಕ ಸಂಬಂಧವನ್ನು ಪ್ರಾರಂಭಿಸಿದ.[72] ಸಿಂಥಿಯಾ ಲೆನ್ನನ್ ರಜೆಯ ಮೇಲೆ ಗ್ರೀಸ್ನಲ್ಲಿದ್ದುದರಿಂದ, ಒನೊಳನ್ನು ಲೆನ್ನನ್ ತನ್ನ ಮನೆಗೆ ಆಹ್ವಾನಿಸಿದ. ಟೂ ವರ್ಜಿನ್ಸ್ ಎಂದು ನಂತರ ಹೆಸರಾದ ಗೀತಸಂಪುಟವೊಂದನ್ನು ಧ್ವನಿಮುದ್ರಿಸುತ್ತಾ ಅವರು ರಾತ್ರಿಯನ್ನು ಕಳೆದರು, ಮತ್ತು ಬೆಳಕು ಹರಿಯುವ ಹೊತ್ತಿಗೆ ತಾವು ಪ್ರಣಯದಲ್ಲಿ ತೊಡಗಿದುದಾಗಿ ನಂತರ ಹೇಳಿಕೊಂಡರು.[119][120] ಭಾನುವಾರದಂದು ಬೆಳಗ್ಗೆ ವೃತ್ತಪತ್ರಿಕೆಗಳನ್ನು ತಂದು, ಅವನ್ನು ಕಾಫಿಯ ಮೇಜಿನ ಮೇಲಿರಿಸದ. ಆದರೆ ಅವುಗಳಲ್ಲಿ ಒಂದನ್ನು ತೆಗೆದುಕೊಳ್ಳಲು ಒನೊ ಪ್ರಯತ್ನಿಸಿದಾಗ, ಅವಳ ಕೈಗೆ ಬಡಿಯುತ್ತಾ ಲೆನ್ನನ್ ಹೇಳಿದ, "ನಾನು ಅವನ್ನು ಮೊದಲು ಓದುತ್ತೇನೆ".[121]
ಸಿಂಥಿಯಾ ಮನೆಗೆ ಹಿಂದಿರುಗಿದಾಗ, ಅವಳು ಲೆನ್ನನ್ ಮತ್ತು ಒನೊರನ್ನು ಕಂಡಳು. ಸಿಂಥಿಯಾಳ ಜೋಲಂಗಿಯನ್ನು ಒನೊ ಧರಿಸಿದ್ದಳು, ಅವರಿಬ್ಬರೂ ಒಟ್ಟಿಗೇ ಚಹಾವನ್ನು ಸೇವಿಸುತ್ತಿದ್ದರು. ಲೆನ್ನನ್ ಹಾಗೇ ಸುಮ್ಮನೆ, "ಓಹ್, ಹಾಯ್" ಎಂದ.[122] ಅದೇ ವರ್ಷದ ನಂತರದಲ್ಲಿ ಲೆನ್ನನ್ನ ವ್ಯಭಿಚಾರದ ಆಧಾರದ ಮೇಲೆ ಸಿಂಥಿಯಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದಳು. ಒನೊಳ ಗರ್ಭಸ್ಥಿತಿಯಿಂದ ಸದರಿ ವ್ಯಭಿಚಾರ ಪ್ರಕರಣವು ಸಾಬೀತಾಯಿತು. 1968ರ ನವೆಂಬರ್ 21ರಂದು ಒನೊಗೆ ಜಾನ್ ಒನೊ ಲೆನ್ನನ್ II ಮಗುವಿನ ಗರ್ಭಪಾತವಾಯಿತು.[123]
ಆರಂಭದಿಂದಲೂ, ಈ ಹೊಸ ಸಂಬಂಧವು ಒಂದು ರೀತಿಯಲ್ಲಿ ವಿಲಕ್ಷಣವಾಗಿತ್ತು. 1981ರಲ್ಲಿ ಬಂದ ಸಂದರ್ಶನವೊಂದರಲ್ಲಿ, ಒನೊ ಮುಂದಾಲೋಚನೆಯಿಲ್ಲದ ಈ ರೀತಿಯಲ್ಲಿ ಟೀಕಿಸಿದಳು: "...'ನಿನಗೆ ಗೊತ್ತಲ್ಲ, ನೀನೊಬ್ಬ ಸಲಿಂಗಕಾಮಿ ಎಂದು ನನಗನ್ನಿಸುತ್ತದೆ' ಎಂದು ನಾನು ಲೆನ್ನನ್ಗೆ ಆಗಾಗ ಹೇಳುತ್ತಿದ್ದೆ. ಏಕೆಂದರೆ, ನಾವು ಒಟ್ಟಿಗೇ ಇರಲು ಶುರುಮಾಡಿದ ನಂತರ, ಜಾನ್ ನನಗೆ ಹೀಗೆ ಹೇಳುತ್ತಿದ್ದ: 'ನಾನು ನಿನ್ನನ್ನು ಇಷ್ಟಪಟ್ಟಿದ್ದು ಏಕೆಂದು ಗೊತ್ತಾ? ಏಕೆಂದರೆ ನೀನು ಉಡುಗೆ ತೊಡುಗೆ ಧರಿಸಿರುವ ಓರ್ವ ದಡ್ಡಿಯ ಥರ ಕಾಣಿಸುತ್ತೀಯೆ.’"[124][124] 2000ರ ಅಕ್ಟೋಬರ್ 1ರ ದಿ ಮಿರರ್ ಪತ್ರಿಕೆಯ ಪ್ರಕಾರ, "ಜಾನ್ ಮತ್ತು ಯೊಕೊರ ವಿಲಕ್ಷಣ ಸಂಬಂಧದಿಂದ ಘಾಸಿಗೊಂಡವರಲ್ಲಿ ಸಿಂಥಿಯಾ ಒಬ್ಬಳೇ ಆಗಿರಲಿಲ್ಲ." ಲೇಖಕ ಆಲ್ಬರ್ಟ್ ಹ್ಯಾರಿ ಗೋಲ್ಡ್ಮನ್ ಪ್ರಕಾರ, ಲೆನ್ನನ್ ಒನೊಳನ್ನು ತನ್ನೆಲ್ಲಾ ಸಮಸ್ಯೆಗಳನ್ನೂ ಪರಿಹರಿಸುವ ಒಂದು “ಮಾಯಾಸ್ವರೂಪ”ವಾಗಿ ಪರಿಗಣಿಸಿದ್ದ. ಆದರೆ ಇದೊಂದು "ಮಹಾನ್ ಭ್ರಮೆ"ಯಾಗಿತ್ತು, ಮತ್ತು ಹೀಗಾಗಿ ಅವಳು ಪುರುಷ ಸಂಗಾತಿಯನ್ನು ಇಟ್ಟುಕೊಳ್ಳುವ ಮೂಲಕ ಲೆನ್ನನ್ನನ್ನು ಮುಕ್ತವಾಗಿ ವಂಚಿಸಿದಳು. ಅಂತಿಮವಾಗಿ “ಅವನು ಹಾಗೂ ಯೊಕೊ ಇಬ್ಬರೂ ವರ್ಷಗಟ್ಟಲೆ ಮಿತಿಮೀರಿದ ಮಾದಕವಸ್ತುಗಳನ್ನು ಬಳಸಿದ ಪರಿಣಾಮವಾಗಿ, ಅತಿಯಾದ ದುಡಿತ, ಭಾವನಾತ್ಮಕ ಕುಸಿತಗಳು, ಕಪಟ ಚಿಕಿತ್ಸೆಗಳು, ಮತ್ತು ವಿಲಕ್ಷಣವಾದ ಆಹಾರ ಕ್ರಮಗಳಿಂದಾಗಿ ತಮ್ಮ ಕಾರ್ಯಸಾಮರ್ಥ್ಯಕ್ಕೆ ಧಕ್ಕೆ ತಂದುಕೊಂಡರು. ಸಾಮೂಹಿಕ ಮಾಧ್ಯಮದ ಕಪಟಕಾಂತಿಯಲ್ಲಿ ನಿರಂತರವಾಗಿ ಇದ್ದುದರ ಪರಿಣಾಮಗಳ ಕುರಿತು ಏನನ್ನೂ ಹೇಳದಿರುವ ಸ್ಥಿತಿಗೆ ಅವರು ತಲುಪಿದರು.”[125] ಆದಾಗ್ಯೂ, ಅವರ ಬೇರ್ಪಡುವಿಕೆಯ ನಂತರವೂ, ಅವರು "ಒಂದು ತಂಡವಾಗಿ ಜತೆಗೂಡಿ ಕೆಲಸಮಾಡುವ ಹಂತವನ್ನು ದಾಟಿದ ನಂತರವೂ, ಅವರು ನಿರಂತರ ಸಂವಹನೆಯನ್ನು ಉಳಿಸಿಕೊಂಡಿದ್ದರು. ಅವರ ಸಂಬಂಧವು ಮತ್ತೊಂದು ವಿಲಕ್ಷಣ ತಿರುವನ್ನು ಪಡೆದುಕೊಂಡಿತ್ತು. ಜತೆಯಲ್ಲಿ ವಾಸಿಸುವುದು ಇನ್ನು ಮುಂದೆ ಸಾಧ್ಯವಿಲ್ಲ ಎಂಬುದರ ಜೊತೆಗೇ, ಬೇರೆಯಾಗಿದ್ದುಕೊಂಡೂ ಬದುಕಿರುವುದು ತಮಗೆ ಸಾಧ್ಯವಿಲ್ಲ ಎಂಬುದನ್ನು ಅವರು ಕಂಡುಕೊಂಡರು.”[126]
ದಿ ಬೀಟಲ್ಸ್ ತಂಡದಲ್ಲಿನ ಲೆನ್ನನ್ನ ಕೊನೆಯ ಎರಡು ವರ್ಷಗಳ ಅವಧಿಯಲ್ಲಿ, ಆತ ಮತ್ತು ಒನೊ ವಿಯೆಟ್ನಾಂ ಯುದ್ಧ ವಿರುದ್ಧ ಸಾರ್ವಜನಿಕ ಪ್ರತಿಭಟನೆಗಳನ್ನು ಆರಂಭಿಸಿದರು. 1965ರಲ್ಲಿ ರಾಣಿ ಎಲಿಜಬೆತ್ ತನಗೆ ದಯಪಾಲಿಸಿದ್ದ MBE ಬಿರುದು ಬಾವಲಿಯನ್ನು ಲೆನ್ನನ್ 1969ರಲ್ಲಿ ಹಿಂದಿರುಗಿಸಿದ.[127] ಈ ಕುರಿತು ಆತ ಹೀಗೆ ಬರೆದ: "ಮಹಾರಾಣಿಯೇ, ವಿಯೆಟ್ನಾಂನಲ್ಲಿ ಅಮೆರಿಕಾಗೆ ನಾವು ನೀಡಿದ ಬೆಂಬಲಕ್ಕೆ ವಿರುದ್ಧವಾಗಿ ನೈಜೀರಿಯಾ-ಬಯಾಫ್ರಾ ವಿಷಯದಲ್ಲಿ ಬ್ರಿಟನ್ ತೊಡಗಿಸಿಕೊಂಡಿರುವುದಕ್ಕೆ ಪ್ರತಿಯಾಗಿ, ಮತ್ತು "ಯಥಾರ್ಥ ಹೇಳಿಕೆ"ಯಿಂದ ಕೆಳಗಿಳಿಯುತ್ತಿರುವುದಕ್ಕೆ ಪ್ರತಿಯಾಗಿ ಇದನ್ನು ಪ್ರತಿಭಟನೆಯ ಸಂಕೇತವಾಗಿ ಹಿಂದಿರುಗಿಸುತ್ತಿರುವೆ. ಪ್ರೀತಿಯೊಂದಿಗೆ. ಬ್ಯಾಗ್ನ ಜಾನ್ ಲೆನ್ನನ್."[128] 1969ರ ಮಾರ್ಚ್ 20ರಂದು ಈ ಜೋಡಿಯು ಜಿಬ್ರಾಲ್ಟರ್ನಲ್ಲಿ ಮದುವೆಮಾಡಿಕೊಂಡಿತು, ಮತ್ತು ಶಾಂತಿಗಾಗಿ ಒಂದು ಅಂತರರಾಷ್ಟ್ರೀಯ "ಬೆಡ್-ಇನ್" ಕಾರ್ಯಕ್ರಮಕ್ಕಾಗಿ ಪ್ರಚಾರ ಮಾಡುತ್ತಾ ಆಮ್ಸ್ಟರ್ಡ್ಯಾಂನಲ್ಲಿ ತನ್ನ ಮಧುಚಂದ್ರವನ್ನು ನಡೆಸಿತು. ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಮತ್ತೊಂದು "ಬೆಡ್-ಇನ್" ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿದ್ದರು. ಆದರೆ ಅಲ್ಲಿ ಅವರಿಗೆ ಪ್ರವೇಶವನ್ನು ನಿರಾಕರಿಸಲಾಯಿತು. ನಂತರ ಈ ಜೋಡಿಯು ನೆರೆಯ ಮಾಂಟ್ರಿಯಲ್ಗೆ ತೆರಳಿತು, ಮತ್ತು ದಿ ಕ್ವೀನ್ ಎಲಿಜಬೆತ್ ಹೊಟೇಲ್ನಲ್ಲಿನ ಒಂದು "ಬೆಡ್-ಇನ್" ಅವಧಿಯಲ್ಲಿ "ಗಿವ್ ಪೀಸ್ ಎ ಚಾನ್ಸ್"ನ್ನು ಧ್ವನಿಮುದ್ರಿಸಿಕೊಂಡಿತು.[129] ತಮ್ಮ "ಬ್ಯಾಗಿಸಂ"ನಲ್ಲಿದ್ದಂತೆ, ಪ್ರದರ್ಶನ ಕಲೆಯೊಂದಿಗೆ ವಕೀಲತನವನ್ನು ಲೆನ್ನನ್ ಮತ್ತು ಒನೊ ಅನೇಕ ವೇಳೆ ಸಂಯೋಜಿಸುತ್ತಿದ್ದರು. ಇದನ್ನು ವಿಯೆನ್ನಾದ ಒಂದು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮೊದಲು ಪರಿಚಯಿಸಲಾಯಿತು. ಈ ಅವಧಿಯನ್ನು ಲೆನ್ನನ್ ದಿ ಬೀಟಲ್ಸ್ ತಂಡದ ಹಾಡಾಗಿರುವ "ದಿ ಬ್ಯಾಲಡ್ ಆಫ್ ಜಾನ್ ಅಂಡ್ ಯೊಕೊ"ನಲ್ಲಿ ವಿವರಿಸಿದ್ದಾನೆ.[130] 1969ರ ಏಪ್ರಿಲ್ನಲ್ಲಿ, ಆಪಲ್ ರೆಕಾರ್ಡ್ಸ್ನ ಮಾಳಿಗೆಯಲ್ಲಿ ತನ್ನ ಮಧ್ಯದ ಹೆಸರನ್ನು ಲೆನ್ನನ್ ಒನೊ ಎಂದು ಬದಲಿಸಿಕೊಂಡ.[131] ಕಾರು ಅಪಘಾತವೊಂದರಲ್ಲಿ ಒನೊ ಗಾಯಗೊಂಡಾಗ, ಲೆನ್ನನ್ ಬೃಹತ್ ಗಾತ್ರದ ಹಾಸಿಗೆಯೊಂದನ್ನು ಧ್ವನಿಮುದ್ರಣದ ಸ್ಟುಡಿಯೋಗೆ ತರಿಸುವ ವ್ಯವಸ್ಥೆ ಮಾಡಿದ. ದಿ ಬೀಟಲ್ಸ್ ವಾದ್ಯವೃಂದದ ಕೊನೆಯ ಗೀತಸಂಪುಟವಾದ ಅಬೆ ರೋಡ್ ಗೆ ಸಂಬಂಧಿಸಿದಂತೆ ಆತ ಕಾರ್ಯನಿರ್ವಹಿಸುತ್ತಿದ್ದುದರಿಂದ ಈ ನಿರ್ಧಾರಕ್ಕೆ ಬಂದ.[132] ದಿ ಬೀಟಲ್ಸ್ ತಂಡದ ವಿಘಟನೆಯ ಕಹಿಯಿಂದ ತಪ್ಪಿಸಿಕೊಳ್ಳಲು, ಅವರು ಖಾಯಮ್ಮಾಗಿ ನ್ಯೂಯಾರ್ಕ್ಗೆ ತೆರಳುವುದು ಉಚಿತ ಎಂದು ಒನೊ ಸಲಹೆ ನೀಡಿದಳು. 1971ರ ಆಗಸ್ಟ್ 31ರಂದು ಅವರು ಅದರಂತೆಯೇ ಮಾಡಿದರು. ಪೂರ್ವದ 55ನೇ ಬೀದಿಯ, 5ನೇ ಮಾರ್ಗದಲ್ಲಿದ್ದ ಸೇಂಟ್ ರೆಜಿಸ್ ಹೊಟೇಲಿನಲ್ಲಿ ಅವರು ಮೊದಲು ನೆಲೆಗೊಂಡರು, ಮತ್ತು ನಂತರದಲ್ಲಿ ನ್ಯೂಯಾರ್ಕ್ ನಗರದ ಗ್ರೀನ್ವಿಚ್ ಹಳ್ಳಿಯ 105 ಬ್ಯಾಂಕ್ ಸ್ಟ್ರೀಟ್ನಲ್ಲಿರುವ ಒಂದು ಬೀದಿ-ಮಟ್ಟದ ವಸತಿಗೃಹಕ್ಕೆ 1971ರ ಅಕ್ಟೋಬರ್ 16ರಂದು ಅವರು ವರ್ಗಾವಣೆಗೊಂಡರು. ಒಂದು ದರೋಡೆಗೆ ಈಡಾದ ನಂತರ, ಹೆಚ್ಚು ಸುರಕ್ಷತೆಯಿರುವ ಡಕೋಟಾ ಪ್ರದೇಶದ 1 ಪಶ್ಚಿಮದ 72ನೇ ಬೀದಿಯ ತಾಣವೊಂದಕ್ಕೆ 1973ರ ಫೆಬ್ರವರಿಯಲ್ಲಿ ವರ್ಗಾವಣೆಗೊಂಡರು.[133]
1973ರ ಜೂನ್ನಲ್ಲಿ, ಮೈಂಡ್ ಗೇಮ್ಸ್ ಸಂಪುಟವನ್ನು ಲೆನ್ನನ್ ಧ್ವನಿಮುದ್ರಿಸಬೇಕೆಂದುಕೊಂಡಿದ್ದಾಗ, ತಾನು ಹಾಗೂ ಲೆನ್ನನ್ ಬೇರೆಯಾಗಬೇಕು ಎಂದು ಒನೊ ನಿರ್ಧರಿಸಿದಳು. ಮೇ ಪಾಂಗ್ ಎಂಬ ತಮ್ಮ ಆಪ್ತ ಸಹಾಯಕಿಯನ್ನು ಲೆನ್ನನ್ ತನ್ನ ಸಂಗಾತಿಯನ್ನಾಗಿ ಸ್ವೀಕರಿಸಲಿ ಎಂದು ಒನೊ ಸಲಹೆ ನೀಡಿದಳು.[134] ಲೆನ್ನನ್ ತಕ್ಷಣವೇ ಪಾಂಗ್ಳೊಂದಿಗೆ ಕ್ಯಾಲಿಫೋರ್ನಿಯಾಗೆ ತೆರಳಿದ, ಮತ್ತು ಹದಿನೆಂಟು ತಿಂಗಳ ಅವಧಿಯ ಕಾರ್ಯವೊಂದರಲ್ಲಿ ತೊಡಗಿಸಿಕೊಂಡ. ಇದನ್ನೇ ನಂತರದಲ್ಲಿ ಆತ "ಕಳೆದ ವಾರಾಂತ್ಯ" ಎಂದು ಕರೆದ.[110] ಲೆನ್ನನ್ ಮತ್ತು ಪಾಂಗ್ ಇಬ್ಬರೂ ಲಾಸ್ ಏಂಜಲೀಸ್ನಲ್ಲಿ ವಾಸಿಸುತ್ತಿರುವಾಗ, ಲೆನ್ನನ್ನ ಕುಡಿತದ ನಡವಳಿಕೆಯು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಮಾಡಲ್ಪಟ್ಟಿತು. ಈ ಅವಕಾಶವನ್ನು ಬೀಟಲ್ಸ್ ತಂಡದ ಇತರ ಸದಸ್ಯರೊಂದಿಗೆ ರಾಜಿಮಾಡಿಕೊಳ್ಳಲು ಮತ್ತು ನಾಲ್ಕು ವರ್ಷಗಳಿಂದ ನೋಡಲಾಗದಿದ್ದ ತನ್ನ ಮಗ ಜೂಲಿಯನ್ನೊಂದಿಗೆ ಮತ್ತೆ ಸಂಬಂಧ ಕುದುರಿಸಿಕೊಳ್ಳಲು ಬಳಸಿಕೊಂಡ.[135]
1974ರ ಮೇ ತಿಂಗಳಲ್ಲಿ, ಲೆನ್ನನ್ ಮತ್ತು ಪಾಂಗ್ ನ್ಯೂಯಾರ್ಕ್ಗೆ ಹಿಂದಿರುಗಿದರು. ಅಲ್ಲಿ ಲೆನ್ನನ್, ವಾಲ್ಸ್ ಅಂಡ್ ಬ್ರಿಜಸ್ ಕೃತಿಗೆ ಸಂಬಂಧಿಸಿದ ಕೆಲಸವನ್ನು ಪ್ರಾರಂಭಿಸಿದ. 1974ರ ಆಗಸ್ಟ್ 23ರ ಸಂಜೆ, ತಮ್ಮ ಮಹಡಿಯ ಉಪ್ಪರಿಗೆಯಿಂದ ಲೆನ್ನನ್ ಮತ್ತು ಪಾಂಗ್ ಇಬ್ಬರೂ ತಾವು ಒಂದು UFOನ್ನು ನೋಡಿದುದಾಗಿ ಸಮರ್ಥಿಸಿದರು. ವಾಲ್ಸ್ ಅಂಡ್ ಬ್ರಿಜಸ್ ಗೀತಸಂಪುಟದೊಂದಿಗೆ ನೀಡಲಾದ ಒಂದು ಕಿರುಪುಸ್ತಕದಲ್ಲಿ ಈ ದೃಶ್ಯದ ಕುರಿತು ಲೆನ್ನನ್ ಉಲ್ಲೇಖಿಸಿದ.[136] ಎಲ್ಟನ್ ಜಾನ್ಗೆ ಲೆನ್ನನ್ ಒಂದು ಪಂದ್ಯವನ್ನು ಸೋತಾಗ ಮತ್ತು 1974ರ ನವೆಂಬರ್ನಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಅವನೊಂದಿಗೆ ವೇದಿಕೆಯಲ್ಲಿ ಸೇರಿಕೊಂಡಾಗ, ಒನೊ ಪ್ರೇಕ್ಷಕ ಸಮೂಹದಲ್ಲಿ ಕುಳಿತಿದ್ದಳು.[137] ಅವಳು ಅಲ್ಲಿ ಇದ್ದುದರ ಕುರಿತು ತನಗೇನೂ ಗೊತ್ತಿರಲಿಲ್ಲ ಎಂದು ಲೆನ್ನನ್ ನಂತರ ವಾದಿಸಿದರೂ, ಅವಳ ಆಸನಗಳಿಗಾಗಿ ಅವನೇ ವ್ಯವಸ್ಥೆ ಮಾಡಿದ್ದುದು ತಿಳಿದುಬಂತು.[137]
ಲೆನ್ನನ್ ಮತ್ತು ಒನೊ 1975ರಲ್ಲಿ ರಾಜಿಮಾಡಿಕೊಂಡರು. ಅವರ ಮಗನಾದ ಸೀನ್ ಲೆನ್ನನ್, ಲೆನ್ನನ್ನ 35ನೇ ಹುಟ್ಟುಹಬ್ಬದಂದು, ಅಂದರೆ 1975ರ ಅಕ್ಟೋಬರ್ 9ರಂದು ಜನಿಸಿದ. ಸೀನ್ನ ಮರಣದ ನಂತರ, ನ್ಯೂಯಾರ್ಕ್ನಲ್ಲಿನ ಡಕೋಟಾ ಪ್ರಾಂತ್ಯದಲ್ಲಿರುವ ಸಾಕಷ್ಟು ಏಕಾಂತವಾಗಿರುವ ಪ್ರದೇಶದಲ್ಲಿ ಈ ಜೋಡಿಯು ವಾಸಿಸತೊಡಗಿತು. ತಮ್ಮ ಮಗುವಿನ ನಿಗಾವಣೆ ನೋಡಲು ಲೆನ್ನನ್ ಸಂಗೀತದಿಂದ ನಿವೃತ್ತಿಪಡೆದು ಓರ್ವ ಮನೆಯ ಯಜಮಾನನಾಗಿ ಮಾರ್ಪಟ್ಟ. ತನ್ನ ಸಂಗೀತ ಸರಣಿಯಲ್ಲಿ ಲೋಪಕ್ಕೆ ಆತ ಹಲವಾರು ಕಾರಣಗಳನ್ನು ನೀಡಿದ: ತಾನು 22 ವರ್ಷದವನಾಗಿದ್ದಾಗಿನಿಂದಲೂ ಆತ ಒಪ್ಪಂದದ ಅಡಿಯಲ್ಲಿದ್ದು, ಸದರಿ ಜವಾಬ್ದಾರಿಯಿಂದ ಅವನು ಈಗ ಮುಕ್ತನಾಗಿದ್ದುದು; ಹಿಂದೊಮ್ಮೆ ಜನಪ್ರಿಯವಾಗಿದ್ದಂತೆ ರಾಕ್ ಅಂಡ್ ರೋಲ್ ಪ್ರಕಾರವು ತನ್ನ ಆಸಕ್ತಿಯನ್ನು ಕಾಯ್ದುಕೊಳ್ಳದಿದ್ದುದು; ಮತ್ತು, ತನ್ನ ಮೊದಲ ಮಗನೊಂದಿಗಿನ ಸೀಮಿತ ಮಟ್ಟದ ಸಂಬಂಧ ಕಾರಣದಿಂದಾಗಿ, ಆತ ತನ್ನೆಲ್ಲಾ ಸಮಯವನ್ನೂ ಸೀನ್ಗಾಗಿ ಮೀಸಲಿಡಲು ಅವನು ನಿರ್ಧರಿಸಿದ್ದು -ಇವು ಆ ಕಾರಣಗಳಲ್ಲಿ ಸೇರಿದ್ದವು.[36]
ತನ್ನ ಮೊದಲ ಮಗನೊಂದಿಗಿನ ಲೆನ್ನನ್ನ ಸಂಬಂಧವು ಯಾವಾಗಲೂ ತೋರಿಕೆಯದ್ದು ಅಥವಾ ಬಲವಂತದ್ದಾಗಿತ್ತು. ಲೆನ್ನನ್ ಮತ್ತು ಒನೊ ನ್ಯೂಯಾರ್ಕ್ಗೆ ತೆರಳಿದ ನಂತರ, 1973ರವರೆಗೆ ಜೂಲಿಯನ್ ತನ್ನ ತಂದೆಯನ್ನು ಮತ್ತೊಮ್ಮೆ ನೋಡಿರಲಿಲ್ಲ.[138] ಪಾಂಗ್ಳ ಪ್ರೋತ್ಸಾಹದೊಂದಿಗೆ, ಲೆನ್ನನ್ನನ್ನು ಲಾಸ್ ಏಂಜಲೀಸ್ನಲ್ಲಿ ಭೇಟಿಮಾಡಲು ಜೂಲಿಯನ್ ಮತ್ತು ಪೋವೆಲ್ಗೆ ಅವಕಾಶ ಸಿಕ್ಕಿತು. ಅಲ್ಲಿ ಅವರೆಲ್ಲರೂ ಡಿಸ್ನೆಲ್ಯಾಂಡ್ಗೆ ಭೇಟಿಯಿತ್ತರು.[139] ತನ್ನ ತಂದೆಯನ್ನು ಜೂಲಿಯನ್ ಹೆಚ್ಚು ನಿಯತವಾಗಿ ಕಾಣಲು ಪ್ರಾರಂಭಿಸಿದ, ಮತ್ತು 1974ರಲ್ಲಿ ಬಂದ ಲೆನ್ನನ್ನ ಗೀತಸಂಪುಟವಾದ ವಾಲ್ಸ್ ಅಂಡ್ ಬ್ರಿಜಸ್ ನಿಂದ ಆಯ್ದ "ಯಾ ಯಾ" ಹಾಡಿಗೆ ಸಂಬಂಧಿಸಿ ಆತ ಡ್ರಮ್ ವಾದನವನ್ನು ಮಾಡುತ್ತಿದ್ದ.[140][141] 1973ರಲ್ಲಿ ಲೆನ್ನನ್ ಜೂಲಿಯನ್ಗಾಗಿ ಒಂದು ಗಿಬ್ಸನ್ ಲೆಸ್ ಪಾಲ್ ಗಿಟಾರ್, ಹಾಗೂ ಒಂದು ಡ್ರಮ್ ಯಂತ್ರವನ್ನು ಕ್ರಿಸ್ಮಸ್ನ ಕೊಡುಗೆಯಾಗಿ ತಂದ, ಮತ್ತು ಕೆಲವೊಂದು ಸ್ವರಮೇಳಗಳನ್ನು ನುಡಿಸಿ ತೋರಿಸುವ ಮೂಲಕ ಸಂಗೀತದಲ್ಲಿ ಜೂಲಿಯನ್ಗೆ ಇದ್ದ ಆಸಕ್ತಿಯನ್ನು ಪ್ರೋತ್ಸಾಹಿಸಿದ.[142][143] ಈ ಕುರಿತು ನೆನಪಿಸಿಕೊಳ್ಳುವ ಜೂಲಿಯನ್, "ಅಪ್ಪ ಮತ್ತು ನಾನು ಆಗ ಚೆನ್ನಾಗಿಯೇ ಇದ್ದೆವು, "ನಾವು ಸಾಕಷ್ಟು ತಮಾಷೆಯನ್ನು ಮಾಡುತ್ತಿದ್ದೆವು, ಸಾಕಷ್ಟು ನಗುತ್ತಿದ್ದೆವು ಮತ್ತು ಆತ ಮೇ ಪಾಂಗ್ ಜೊತೆಯಲ್ಲಿದ್ದಾಗ ಸಾಮಾನ್ಯವಾಗಿ ಅದೊಂದು ಸಂತೋಷದ ಅವಧಿಯಾಗಿರುತ್ತಿತ್ತು. ಆ ಸಮಯದಲ್ಲಿ ಅಪ್ಪ ಹಾಗೂ ಮೇ ಪಾಂಗ್ ಜೊತೆಯಲ್ಲಿನ ನನ್ನ ನೆನಪುಗಳು ತುಂಬಾ ನಿಚ್ಚಳವಾಗಿವೆ - ಅವರೊಂದಿಗಿನ ನೆನಪಿಸಿಕೊಳ್ಳಬಹುದಾದ ಸಮಯ ಅದಾಗಿತ್ತು."[144]
1980ರಲ್ಲಿ ಪ್ಲೇಬಾಯ್ ಪತ್ರಿಕೆಯಲ್ಲಿ ಬಂದ ತನ್ನ ಸಂದರ್ಶನದಲ್ಲಿ, "ಸೀನ್ ಓರ್ವ ಯೋಜಿತ ಮಗುವಾಗಿದ್ದ, ಮತ್ತು ಈ ಸಂಬಂಧವಾಗಿ ವ್ಯತ್ಯಾಸ ಕಂಡುಬರುತ್ತದೆ" ಎಂದು ಹೇಳಿದುದಾಗಿ ಉಲ್ಲೇಖಿಸಲ್ಪಟ್ಟಿತ್ತು. ಜೂಲಿಯನ್ನನ್ನು ಒಂದು ಮಗುವಿಗಿಂತ ಕಡಿಮೆಯಾಗೇನೂ ನಾನು ಪ್ರೀತಿಸುವುದಿಲ್ಲ. ಅವನು ಒಂದು ವಿಸ್ಕಿಯ ಬಾಟಲಿಯಿಂದ ಬಂದಿರಬಹುದು ಅಥವಾ ಆ ಕಾಲದಲ್ಲಿ ಅವರು ಮಾತ್ರೆಗಳನ್ನು ಹೊಂದಿರದೇ ಇರಬಹುದು, ಆತ ಈಗಲೂ ನನ್ನ ಮಗನೇ. ಆತ ಇಲ್ಲಿದ್ದಾನೆ. ಅವನು ನನಗೆ ಸೇರಿದವ, ಮತ್ತು ಯಾವಾಗಲೂ ನನ್ನೊಂದಿಗೇ ಇರುತ್ತಾನೆ."[36] ತನ್ನ ಸಾವಿಗೆ ಕೆಲವೇ ದಿನ ಮುಂಚಿನ ಸಂದರ್ಶನವೊಂದರಲ್ಲಿ, 17 ವರ್ಷದ ಜೂಲಿಯನ್ನೊಂದಿಗೆ ಒಂದು ಸಂಪರ್ಕವನ್ನು ಮರು-ಸ್ಥಾಪಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಹೇಳೀದ್ದ ಲೆನ್ನನ್, "ಭವಿಷ್ಯದಲ್ಲಿ ಜೂಲಿಯನ್ ಮತ್ತು ನಾನು ಒಂದು ಸಂಬಂಧವನ್ನು ಹೊಂದಿರುತ್ತೇವೆ" ಎಂದು ಭರವಸೆಯಿಂದ ಮುನ್ನುಡಿದಿದ್ದ. ಜೂಲಿಯನ್ ಮತ್ತು ಸೀನ್ ಲೆನ್ನನ್ ಇಬ್ಬರೂ ತಮ್ಮ ತಂದೆಯು ಮರಣಿಸಿದ ವರ್ಷಗಳ ನಂತರ ಧ್ವನಿಮುದ್ರಣದ ವೃತ್ತಿಜೀವನವನ್ನು ಅನುಸರಿಸಿಕೊಂಡು ಹೋದರು.[145] ಲೆನ್ನನ್ನ ಮರಣದ ನಂತರ, ಲೆನ್ನನ್ನ ಉಯಿಲು ಪತ್ರದಲ್ಲಿ ಜೂಲಿಯನ್ನ ಹೆಸರು ಉಲ್ಲೇಖಿಸಲ್ಪಟ್ಟಿರಲಿಲ್ಲ ಎಂದು ಬಹಿರಂಗವಾಯಿತು.[146] ಜೂಲಿಯನ್ಗೆ ಒನೊ 20 ದಶಲಕ್ಷ £ನಷ್ಟು ಹಣವನ್ನು ಕೊಟ್ಟಾಗ, ವರದಿಯಾಗಿರುವ ಮೊತ್ತಕ್ಕೆ ಹೋಲಿಸಿದಾಗ ಇದು ತೀರಾ ಕಡಿಮೆಯಾಗಿದೆ ಎಂದು ಹೇಳುವ ಮೂಲಕ ಜೂಲಿಯನ್ ಅದನ್ನು ತಿರಸ್ಕರಿಸಿದ.[110]
ರಿಂಗೋ ಸ್ಟಾರ್ನೊಂದಿಗಿನ ಅವನ ಸ್ನೇಹವು ಸುಸಂಗತವಾಗಿ ಸೌಹಾರ್ದಯುತವಾಗಿತ್ತಾದರೂ, ಬೀಟಲ್ಸ್ ತಂಡದಲ್ಲಿನ ತನ್ನ ಇತರ ಸಹವರ್ತಿಗಳ ಕಡೆಗಿನ ಲೆನ್ನನ್ನ ಬಹಿರಂಗ ಭಾವನೆಗಳು ಪದೇಪದೇ ಬದಲಾಗುತ್ತಿದ್ದವು. ಆರಂಭಿಕ ಬೇರ್ಪಡುವಿಕೆಯ ನಂತರ ಆತ ಹ್ಯಾರಿಸನ್ ಜೊತೆಗೆ ನಿಕಟತೆಯನ್ನು ಬೆಳೆಸಿಕೊಂಡಿದ್ದ, ಆದರೆ ಲೆನ್ನನ್ ಅಮೆರಿಕಾಗೆ ತೆರಳಿದಾಗ ಈ ಇಬ್ಬರೂ ಬೇರೆಯಾದರು. 1974ರ ಡಿಸೆಂಬರ್ನಲ್ಲಿ, ಹ್ಯಾರಿಸನ್ ತನ್ನ ಡಾರ್ಕ್ ಹಾರ್ಸ್ ಪ್ರವಾಸಕ್ಕಾಗಿ ನ್ಯೂಯಾರ್ಕ್ನಲ್ಲಿದ್ದ, ಮತ್ತು ವೇದಿಕೆಯ ಮೇಲೆ ಅವನೊಂದಿಗೆ ಸೇರಿಕೊಳ್ಳಲು ಲೆನ್ನನ್ ಸಮ್ಮತಿಸಿದ. ಆದಾಗ್ಯೂ, ದಿ ಬೀಟಲ್ಸ್ನೊಂದಿಗಿನ ಪಾಲುದಾರಿಕೆಯನ್ನು ಕಾನೂನುಬದ್ಧವಾಗಿ ರದ್ದುಪಡಿಸುವ ಒಪ್ಪಂದವೊಂದಕ್ಕೆ (ನ್ಯೂಯಾರ್ಕ್ನ ಪ್ಲಾಜಾ ಹೊಟೇಲ್ನಲ್ಲಿ ಡಿಸೆಂಬರ್ 19ರಂದು ನಡೆಯಬೇಕಿತ್ತು) ಸಹಿಹಾಕಲು ಲೆನ್ನನ್ ತಿರಸ್ಕರಿಸಿದ್ದರಿಂದಾಗಿ ನಂತರದಲ್ಲಿ ವಾದವೊಂದು ಹುಟ್ಟಿಕೊಳ್ಳಲು ಕಾರಣವಾಯಿತು ಮತ್ತು ಲೆನ್ನನ್ ಮತ್ತೆಂದೂ ಕಾಣಿಸಿಕೊಳ್ಳಲಿಲ್ಲ. (ಫ್ಲೋರಿಡಾದಲ್ಲಿನ ವಾಲ್ಟ್ ಡಿಸ್ನೆ ವರ್ಲ್ಡ್ನಲ್ಲಿ ಪಾಂಗ್ ಮತ್ತು ಜೂಲಿಯನ್ನೊಂದಿಗೆ ರಜೆ ಕಳೆಯಲು ಬಂದಿದ್ದಾಗ, ಲೆನ್ನನ್ ಅಂತಿಮವಾಗಿ ಕಾಗದಪತ್ರಗಳಿಗೆ ಸಹಿಹಾಕಿದ.[135]) 1980ರಲ್ಲಿ, ಐ ಮಿ ಮೈನ್ ಎಂಬ ಆತ್ಮಕಥೆಯನ್ನು ಹ್ಯಾರಿಸನ್ ಬಿಡುಗಡೆ ಮಾಡಿದ ನಂತರ, ತನಗೆ ಸೂಕ್ತ ರೀತಿಯಲ್ಲಿ ಗೌರವ ಸಲ್ಲಿಸಿಲ್ಲ ಎಂದು ಲೆನ್ನನ್ ಕೋಪಗೊಂಡಿದ್ದ ಮತ್ತು ತನ್ನ ಅಸಮಾಧಾನವನ್ನು ತೋರಿಸುವ ಸಲುವಾಗಿ ಒಂದಷ್ಟು ಕಟುವಾದ ಟೀಕೆಗಳನ್ನು ಮಾಡಿದ್ದ.[36]
ಲೆನ್ನನ್ನ ಅತ್ಯಂತ ಉತ್ಕಟವಾದ ಭಾವನೆಗಳು ಮೆಕ್ಕರ್ಟ್ನಿಗಾಗಿ ಮೀಸಲಿರಿಸಲ್ಪಟ್ಟವು. "ಹೌ ಡು ಯು ಸ್ಲೀಪ್?" ಹಾಡಿನ ಜೊತೆಗೆ, ತಂಡವು ಒಡೆದಾಗ ಪತ್ರಿಕೆಗಳ ಮೂಲಕ ಮೂರುವರ್ಷಗಳವರೆಗೆ ಲೆನ್ನನ್ ಮೆಕ್ಕರ್ಟ್ನಿಯೊಂದಿಗೆ ವಾದಮಾಡಿದ್ದ. 1974ರಲ್ಲಿ, ಈ ಇಬ್ಬರೂ ಮತ್ತೆ ಹತ್ತಿರಕ್ಕೆ ಬಂದರು, ಮತ್ತು ದಿ ಬೀಟಲ್ಸ್ ತಂಡವು ಒಡೆದಾಗಿನಿಂದ ಕೇವಲ ಒಂದೇ ಒಂದು ಬಾರಿ ಜೊತೆಯಾಗಿ ಹಾಡನ್ನೂ ಹಾಡಿದರು (ನೋಡಿ: ಎ ಟೂಟ್ ಅಂಡ್ ಎ ಸ್ನೋರ್ ಇನ್ '74 ). ನಂತರದ ವರ್ಷಗಳಲ್ಲಿ, ಆ ಇಬ್ಬರೂ ಮತ್ತೆ ಬೇರೆಯಾದರು. ಕೊನೆಯ ಬಾರಿಗೆ ಮೆಕ್ಕರ್ಟ್ನಿಯು ಭೇಟಿನೀಡಿದ್ದಾಗ, ತಾವು ಸಾಟರ್ಡೆ ನೈಟ್ ಲವ್ ಸಂಚಿಕೆಯನ್ನು ವೀಕ್ಷಿಸಿದ್ದಾಗಿ ಲೆನ್ನನ್ ಹೇಳಿದ್ದ. ಇದರಲ್ಲಿ ಲೋರ್ನ್ ಮೈಕೇಲ್ಸ್ 3,000$ನಷ್ಟು ನಗದು ಆಹ್ವಾನವನ್ನು ನೀಡಿ, ಸದರಿ ಕಾರ್ಯಕ್ರಮದಲ್ಲಿ ದಿ ಬೀಟಲ್ಸ್ ತಂಡವು ಮತ್ತೆ ಒಂದಾಗಲೆಂದು ಆಶಿಸಿದ್ದ.[147] ತಮ್ಮ ಪಾಲಿನ ಹಣದ ಕುರಿತು ಹಕ್ಕುಸಾಧಿಸಲು ಸ್ಟುಡಿಯೋಕ್ಕೆ ಹೋಗಿ ಕೂರುವುದು ಒಂದು ನಗೆಪಾಟಲು ಎಂದು ಅವರು ಪರಿಗಣಿಸಿದರಾದರೂ, ಅವರು ಸಾಕಷ್ಟು ಬಳಲಿದ್ದರು.[36] 2000ರ ದೂರದರ್ಶನ ಚಲನಚಿತ್ರವಾದ ಟೂ ಆಫ್ ಅಸ್ ನಲ್ಲಿ ಈ ಘಟನೆಯು ಕಾದಂಬರೀಕರಿಸಲ್ಪಟ್ಟಿತು.[148]
ಲೆನ್ನನ್ ಮೆಕ್ಕರ್ಟ್ನಿಯೊಂದಿಗೆ ಯಾವಾಗಲೂ ಒಂದು ಸಂಗೀತಕ ಸ್ಪರ್ಧಾತ್ಮಕತೆಯನ್ನು ಹೊಂದಿದ್ದ ಮತ್ತು ಅವನ ಸಂಗಿದ ಕಡೆಗೆ ಕಿವಿಯನ್ನು ನೆಟ್ಟಿರುತ್ತಿದ್ದ. ಮೆಕ್ಕರ್ಟ್ನಿಯು "ಕೆಲಸಕ್ಕೆ ಬಾರದ ಕೃತಿ"ಯನ್ನು ಎಲ್ಲಿಯ ತನಕ ತಯಾರಿಸುತ್ತಿದ್ದನೋ ಅಲ್ಲಿಯವರೆಗೂ ಲೆನ್ನನ್ ತನ್ನ "ನಿವೃತ್ತಿಯ" ಸಮಯದಲ್ಲಿ ಸಂತೃಪ್ತನಾಗಿದ್ದ.[149] 1980ರಲ್ಲಿ, "ಕಮಿಂಗ್ ಅಪ್"ನ್ನು ಮೆಕ್ಕರ್ಟ್ನಿ ಬಿಡುಗಡೆ ಮಾಡಿದ, ಮತ್ತು ಇದು ಲೆನ್ನನ್ ಗಮನಕ್ಕೆ ಬಂದಿತು. "ಆ ಹಾಡಿನ ಗುಂಗಿನಿಂದ ನಾನು ಆಚೆಬರಲಾರೆ" ಎಂದು ತಮಾಷೆಯಾಗಿ ದೂರುತ್ತಿದ್ದ ಅವನು, ಅದನ್ನು ಮತ್ತೊಮ್ಮೆ ಧ್ವನಿಮುದ್ರಿಸಲು ಬಲವಂತಕ್ಕೆ ಒಳಗಾದ.[36][149]
ತನ್ನ ಕಲಾತ್ಮಕ ಸಹಯೋಗಗಳ ಕುರಿತಾದ ಲೆನ್ನನ್ನ ಬಹುಪಾಲು ಹೇಳಿಕೆಯ ಸಾರಾಂಶವು ಪ್ರಾಯಶಃ ಹೀಗಿರುತ್ತಿತ್ತು: "ಓರ್ವ ಪಾಲುದಾರನಾಗಿ ನನ್ನೊಂದಿಗೆ ಕೆಲಸಮಾಡಲು ನಾನು ಎಂದಾದರೂ ಕೇಳಿದ ಇಬ್ಬರು ವ್ಯಕ್ತಿಗಳೆಂದರೆ... ಒಬ್ಬ ಪಾಲ್ ಮೆಕ್ಕರ್ಟ್ನಿ, ಹಾಗೂ ಮತ್ತೊಬ್ಬರು ಯೊಕೊ ಒನೊ. ಇದು ಪರವಾಗಿಲ್ಲ ಎನ್ನಬಹುದುದಾದದ್ದು, ಹೌದಾ?"[150]
1980ರಲ್ಲಿ, ತಂಡದ ಸದಸ್ಯರು ದಿಗಿಲು ಬೀಳಿಸುವ ಶತ್ರುಗಳೋ ಅಥವಾ ಅತ್ಯುತ್ತಮ ಸ್ನೇಹಿತರೋ ಎಂದು ಲೆನ್ನನ್ಗೆ ಕೇಳಲಾಗಿತ್ತು. ಅವರು ಎರಡೂ ವರ್ಗಕ್ಕೆ ಸೇರಿದವರಲ್ಲ ಎಂದು ಉತ್ತರಿಸಿದ್ದ ಲೆನ್ನನ್, ಬಹಳ ಕಾಲದಿಂದ ಅವರ ಪೈಕಿ ಯಾರೊಬ್ಬರನ್ನೂ ತಾನು ನೋಡಿಲ್ಲ ಎಂದೂ ಹೇಳಿದ್ದ. ಆದರೆ ತನ್ನ ಮಾತನ್ನು ಮುಂದುವರೆಸುತ್ತಾ, "ಆ ಆಸಾಮಿಗಳನ್ನು ನಾನು ಈಗಲೂ ಪ್ರೀತಿಸುತ್ತೇನೆ. ದಿ ಬೀಟಲ್ಸ್ನದು ಮುಗಿದ ಕಥೆ, ಆದರೆ ಜಾನ್, ಪಾಲ್, ಜಾರ್ಜ್ ಮತ್ತು ರಿಂಗೋರೊಂದಿಗಿನ ಸ್ನೇಹ ಮುಂದುವರಿಯುತ್ತದೆ" ಎಂದು ನುಡಿದಿದ್ದ.[36]
1969ರ ಮಾರ್ಚ್ನಲ್ಲಿ ಆಮ್ಸ್ಟರ್ಡ್ಯಾಂ ಹಿಲ್ಟನ್ನಲ್ಲಿ ನಡೆಸಿದ ತಮ್ಮ ಮಧುಚಂದ್ರವನ್ನು ಲೆನ್ನನ್ ಮತ್ತು ಒನೊ "ಶಾಂತಿಗಾಗಿ ಮಿಲನ" ಎಂಬ ಆಂದೋಲನಕ್ಕೆ ಬಳಸಿಕೊಂಡರು. ಇದು ವಿಶ್ವಾದ್ಯಂತದ ಮಾಧ್ಯಮ ವರದಿಯನ್ನು ಆಕರ್ಷಿಸಿತು.[110] 1969ರ ಜೂನ್ನಲ್ಲಿ ಮಾಂಟ್ರಿಯಲ್ನಲ್ಲಿ ಕೈಗೊಳ್ಳಲಾದ ಎರಡನೇ "ಬೆಡ್-ಇನ್" ಅವಧಿಯಲ್ಲಿ, "ಗಿವ್ ಪೀಸ್ ಎ ಚಾನ್ಸ್" ಎಂಬ ಹಾಡನ್ನು ಅವರು ದಿ ಕ್ವೀನ್ ಎಲಿಜಬೆತ್ನಲ್ಲಿನ ತಮ್ಮ ಹೊಟೇಲು ಕೋಣೆಯಲ್ಲಿ ಧ್ವನಿಮುದ್ರಿಸಿಕೊಂಡರು. 1969ರ ಅಕ್ಟೋಬರ್ 15ರಂದು ಎರಡನೇ ವಿಯೆಟ್ನಾಂ ಸಾಲಾವಧಿ ವಿಸ್ತರಣಾ ದಿನದಂದು ವಾಷಿಂಗ್ಟನ್, D.C.ಯಲ್ಲಿ ಸುಮಾರು ಕಾಲು ದಶಲಕ್ಷದಷ್ಟು ಪ್ರದರ್ಶನಕಾರರಿಂದ ಈ ಹಾಡು ಹಾಡಲ್ಪಟ್ಟಿತು.[151] 1971ರ ಆಗಸ್ಟ್ನಲ್ಲಿ ಲೆನ್ನನ್ ಮತ್ತು ಒನೊ ನ್ಯೂಯಾರ್ಕ್ ನಗರಕ್ಕೆ ತೆರಳಿದಾಗ, ಶಾಂತಿಯ ಸಕ್ರಿಯವಾದಿಗಳಾದ ಜೆರ್ರಿ ರೂಬಿನ್ ಮತ್ತು ಅಬೀ ಹಾಫ್ಮನ್ರೊಂದಿಗೆ ಅವರು ಗೆಳೆತನ ಮಾಡಿಕೊಂಡರು. 1971ರ ಡಿಸೆಂಬರ್ 10ರಂದು ಮಿಚಿಗನ್ನ ಆನ್ ಆರ್ಬೊರ್ನಲ್ಲಿ ನಡೆದ "ಉಚಿತ ಜಾನ್ ಸಿಂಕ್ಲೇರ್" ಕಚೇರಿಯಲ್ಲಿ ಲೆನ್ನನ್ ತನ್ನ ಪ್ರತಿಭೆಯನ್ನು ಪ್ರಸ್ತುತಪಡಿಸಿದ.[152] ಸಿಂಕ್ಲೇರ್ ಓರ್ವ ಯುದ್ಧ-ವಿರೋಧಿ ಸಕ್ರಿಯವಾದಿಯಾಗಿದ್ದು, ವೈಟ್ ಪ್ಯಾಂಥರ್ ಪಾರ್ಟಿಯ ಸಹ-ಸಂಸ್ಥಾಪಕ ಹಾಗೂ ಕವಿಯಾಗಿದ್ದ. ಬೇಹುಗಾರಿಕೆಯ ಆರಕ್ಷಕ ಸಿಬ್ಬಂದಿಯೋರ್ವನಿಗೆ ಗಾಂಜಾದಿಂದ ಮಾಡಿದ ಎರಡು ಸಿಗರೇಟುಗಳನ್ನು ಮಾರಿದ್ದಕ್ಕಾಗಿ ಆತ ಶಿಕ್ಷೆಗೊಳಗಾಗಿ ಹತ್ತುವರ್ಷದಿಂದ ಸಂಸ್ಥಾನದ ಸೆರೆಮನೆಯಲ್ಲಿ ತನಗೆ ವಹಿಸಿದ ಕೆಲಸವನ್ನು ಮಾಡುತ್ತಿದ್ದ. ಇದಕ್ಕೂ ಮುಂಚೆ ಗಾಂಜಾವನ್ನು ಹೊಂದಿದ್ದಕ್ಕಾಗಿ ಅವನನ್ನು ಅನೇಕ ಬಾರಿ ತಪ್ಪಿತಸ್ಥನೆಂದು ತೀರ್ಮಾನಿಸಲಾಗಿತ್ತು.[153] ಡೇವಿಡ್ ಪೀಲ್, ಫಿಲ್ ಓಕ್ಸ್, ಸ್ಟೆವಿ ವಂಡರ್ ಮತ್ತು ಇತರ ಸಂಗೀತಗಾರರೊಂದಿಗೆ ಲೆನ್ನನ್ ಮತ್ತು ಒನೊ ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಯುದ್ಧ-ವಿರೋಧಿ ತೀವ್ರಗಾಮಿ ಮತ್ತು ಯಿಪಿ ಪಕ್ಷದ ಸದಸ್ಯನಾದ, ಜೆರ್ರಿ ರೂಬಿನ್, ಹಾಗೂ ಬ್ಲ್ಯಾಕ್ ಪ್ಯಾಂಥರ್ಸ್ಗೆ ಸೇರಿದ ಬಾಬಿ ಸೀಯೇಲ್ರೊಂದಿಗೂ ಅವರಿಬ್ಬರೂ ಕಾಣಿಸಿಕೊಂಡಿದ್ದರು.[154] ಆಗಷ್ಟೇ ಬರೆದಿದ್ದ "ಜಾನ್ ಸಿಂಕ್ಲೇರ್" ಎಂಬ ಹಾಡನ್ನು ಲೆನ್ನನ್ ಪ್ರಸ್ತುತಪಡಿಸಿದ. ಈ ಹಾಡಿನಲ್ಲಿ ಬರುವ, "ಲೆಟ್ ಹಿಮ್ ಬಿ, ಸೆಟ್ ಹಿಮ್ ಫ್ರೀ, ಲೆಟ್ ಹಿಮ್ ಬಿ ಲೈಕ್ ಯು ಅಂಡ್ ಮಿ" ಎಂಬ ಸಾಲಿನ ಮೂಲಕ ಆತ ವಿಧಾಯಕ ಶಕ್ತಿಗಳಿಗೆ ಕರೆನೀಡಿದ. ಈ ಜಮಾವಣೆಯಲ್ಲಿ ಸುಮಾರು 20,000 ಜನರು ಭಾಗವಹಿಸಿದ್ದರು, ಮತ್ತು ಸಂಗೀತ ಕಚೇರಿ ನಡೆದ ಮೂರು ದಿನಗಳ ನಂತರ ಮಿಚಿಗನ್ ಸಂಸ್ಥಾನವು ಸೆರೆಮನೆಯಿಂದ ಸಿಂಕ್ಲೇರ್ನನ್ನು ಬಿಡುಗಡೆಮಾಡಿತು.[155] ಎರಡು-CDಗಳ ಜಾನ್ ಲೆನ್ನನ್ ಆಂಥಾಲಜಿ (1998) ಮತ್ತು ಅಕೂಸ್ಟಿಕ್ ಗೀತಸಂಪುಟದ (2004) ಮೂಲಕ ಈ ಪ್ರದರ್ಶನವನ್ನು ಬಿಡುಗಡೆ ಮಾಡಲಾಯಿತು. ನಂತರ, ದಿ ಡೇವಿಡ್ ಫ್ರಾಸ್ಟ್ ಷೋ ನಲ್ಲಿ ಲೆನ್ನನ್ ಈ ಹಾಡನ್ನು ಪ್ರಸ್ತುತ ಪಡಿಸಿದ. ಒನೊ ಹಾಗೂ ಜೆರ್ರಿ ರೂಬಿನ್ ಅವನಿಗೆ ಜತೆ ನೀಡಿದರು.[152] ಡೇವಿಡ್ ಶೇಲರ್ ಎಂಬ ಹೆಸರಿನ ಹಿಂದಿನ MI5 ಗುಪ್ತಚರ ಅಧಿಕಾರಿಯ ಪ್ರಕಾರ, ಐರಿಷ್ ಗಣತಂತ್ರದ ಸೇನೆಗೆ ಲೆನ್ನನ್ ಹಣಕಾಸಿನ ನೆರವನ್ನು ಒದಗಿಸಿದ. ಈ ವಿವರಣೆಯನ್ನು ಸಿನ್ ಫೆನ್ ಸಮರ್ಥಿಸಲೂ ಇಲ್ಲ ಅಥವಾ ನಿರಾಕರಿಸಲೂ ಇಲ್ಲ.[156] ಬ್ಲಡಿ ಸಂಡೆ ಅವಘಡಗಳ ಉತ್ತರಕ್ರಿಯೆಗಳಿಗಾಗಿರುವ ಲೆನ್ನನ್ನ ಸಲ್ಲಿಕೆಗಳ ಸ್ವರೂಪದಲ್ಲಿ ಈ ಹಣಕಾಸಿನ ನೆರವು" ಇದ್ದ ಸಾಧ್ಯತೆಯಿತ್ತು ಎಂದು ಅವನ ಕುರಿತಾದ A&E ಬಯಾಗ್ರಫಿಯ ಕಾರ್ಯಕ್ರಮವು ಉಲ್ಲೇಖಿಸಿತು.
1972ರಲ್ಲಿ, ಲೆನ್ನನ್ನನ್ನು USನಿಂದ ಗಡೀಪಾರು ಮಾಡಲು ನಿಕ್ಸನ್ ಆಡಳಿತವು ಪ್ರಯತ್ನಿಸಿತು. ಲೆನ್ನನ್ನ ಯುದ್ಧ-ವಿರೋಧಿ ಚಟುವಟಿಕೆಗಳು ಹಾಗೂ ಜಾರ್ಜ್ ಮೆಕ್ಗವರ್ನ್ ಕಡೆಗಿನ ಬೆಂಬಲವು ತನಗೆ ಮರು-ಚುನಾವಣೆಯನ್ನು ತಂದೊಡ್ಡಬಹುದು ಎಂದು ರಿಚರ್ಡ್ ನಿಕ್ಸನ್ ಭಾವಿಸಿದ್ದೇ ಇದಕ್ಕೆ ಕಾರಣವಾಗಿತ್ತು.[157] ರಿಪಬ್ಲಿಕನ್ ಸೆನೆಟ್ ಸದಸ್ಯನಾದ ಸ್ಟ್ರೋಮ್ ಥರ್ಮಾಂಡ್ ಎಂಬಾತನು 1972ರ ಫೆಬ್ರವರಿಯ ಜ್ಞಾಪನಾ ಪತ್ರವೊಂದರಲ್ಲಿ ಈ ಕುರಿತು ಸೂಚಿಸುತ್ತಾ, "ಗಡೀಪಾರು ಮಾಡುವಿಕೆಯು ಲೆನ್ನನ್ ವಿರುದ್ಧದ ಒಂದು ಕಾರ್ಯತಂತ್ರದ ಪ್ರತ್ಯುಪಾಯವಾಗಿದೆ" ಎಂದು ತಿಳಿಸಿದ.[158] ಇದರ ಮುಂದಿನ ತಿಂಗಳೇ ವಲಸೆ ಮತ್ತು ದೇಶೀಕರಣ ಸೇವೆಯು ಲೆನ್ನನ್ನ ವಿರುದ್ಧದ ಗಡೀಪಾರು ಮಾಡುವಿಕೆಯ ಚಟುವಟಿಕೆಗಳನ್ನು ಪ್ರಾರಂಭಿಸಿತು. ಲಂಡನ್ನಲ್ಲಿ ಆತ ಕ್ಯಾನಬಿಸ್ ಎಂಬ ಮಾದಕವಸ್ತುವನ್ನು ಹೊಂದಿದ್ದಕ್ಕೆ ಸಂಬಂಧಿಸಿದಂತಿರುವ ಆತನ ವಿರುದ್ಧದ 1968ರ ಅಪರಾಧ ಅಪರಾಧ ನಿರ್ಣಯವು, ಅವನ US ಪ್ರವೇಶವನ್ನು ಅನರ್ಹಗೊಳಿಸಿದೆ ಎಂಬುದರ ಆಧಾರದ ಮೇಲೆ ಈ ಚಟುವಟಿಕೆಗಳು ಪ್ರಾರಂಭವಾದವು. ನಂತರದ ನಾಲ್ಕುವರ್ಷಗಳನ್ನು ಲೆನ್ನನ್ ಗಡೀಪಾರು ಮಾಡುವಿಕೆಗೆ ಸಂಬಂಧಿಸಿದ ವಿಚಾರಣೆಗಳಲ್ಲಿ ಕಳೆದ.[73] ಅವನನ್ನು ಗಡೀಪಾರು ಮಾಡುವ ಹೋರಾಟಗಳು ಮುಂದುವರಿಯುತ್ತಿರುವಂತೆಯೇ, ನ್ಯೂಯಾರ್ಕ್ ನಗರದಲ್ಲಿನ ಪ್ರದರ್ಶನಾ ಮೆರವಣಿಗೆಗಳಲ್ಲಿ ಹಾಗೂ TV ಕಾರ್ಯಕ್ರಮಗಳಲ್ಲಿ ಲೆನ್ನನ್ ಕಾಣಿಸಿಕೊಂಡ. 1972ರ ಫೆಬ್ರವರಿಯಲ್ಲಿ ಪ್ರಸಾರವಾದ ಒಂದು ವಾರದ ಅವಧಿಯ ಮೈಕ್ ಡೊಗ್ಲಸ್ ಷೋ ಎಂಬ TV ಕಾರ್ಯಕ್ರಮವೂ ಇದರಲ್ಲಿ ಸೇರಿದ್ದು, ಜೆರ್ರಿ ರೂಬಿನ್ ಹಾಗೂ ಬಾಬಿ ಸೀಯೇಲ್ ಇದರಲ್ಲಿ ಆತನ ಅತಿಥಿಗಳಾಗಿ ಕಾಣಿಸಿಕೊಂಡರು.[159]
60 ದಿನಗಳೊಳಗೆ USನ್ನು ತೊರೆಯುವಂತೆ 1973ರ ಮಾರ್ಚ್ 23ರಂದು ಲೆನ್ನನ್ಗೆ ಆದೇಶಿಸಲಾಯಿತು. ಆದರೆ ಒನೊಗೆ ಖಾಯಂ ನಿವಾಸವನ್ನು ಮಂಜೂರುಮಾಡಲಾಯಿತು.[160] ಇದಕ್ಕೆ ಪ್ರತಿಯಾಗಿ, 1973ರ ಏಪ್ರಿಲ್ 1ರಂದು ಅಮೆರಿಕನ್ ಬಾರ್ ಅಸೋಸಿಯೇಷನ್ನ ನ್ಯೂಯಾರ್ಕ್ ಶಾಖೆಯಲ್ಲಿ ಲೆನ್ನನ್ ಮತ್ತು ಒನೊ ಒಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿ, "ನ್ಯುಟೋಪಿಯಾ"ದ ಒಂದು ಕಲ್ಪನಾತ್ಮಕ ಸ್ಥಿತಿಯ ರೂಪುಗೊಳ್ಳುವಿಕೆಯನ್ನು ಪ್ರಕಟಿಸಿದರು; ಇದೊಂದು "ಯಾವುದೇ ಭೂಮಿಯಿಲ್ಲದ, ಗಡಿಗಳಿಲ್ಲದ, ರಹದಾರಿಗಳಿಲ್ಲದ, ಕೇವಲ ಜನರರಿರುವ" ಒಂದು ಪ್ರದೇಶವಾಗಿದ್ದು, ಅದರ ಎಲ್ಲಾ ನಿವಾಸಿಗಳೂ ರಾಯಭಾರಿಗಳೇ ಆಗಿರುವುದರ ವಿಶೇಷತೆಯನ್ನು ಅದು ಒಳಗೊಂಡಿತ್ತು.[161] ನ್ಯುಟೋಪಿಯಾದ ಬಿಳಿಯ ಧ್ವಜವಾದ ಎರಡು ಬಿಳಿಯ ಕರವಸ್ತ್ರಗಳನ್ನು ಕೈಗಳಲ್ಲಿ ಆಡಿಸುವ ಮೂಲಕ, ಲೆನ್ನನ್ ದಂಪತಿಗಳು USನಲ್ಲಿ ರಾಜಕೀಯ ಆಶ್ರಯಕ್ಕಾಗಿ ಕೋರಿದರು. ಪತ್ರಿಕಾಗೋಷ್ಠಿಯ ಸಮಗ್ರ ಭಾಗವನ್ನೂ 2006ರಲ್ಲಿ ಲಯನ್ಸ್ ಗೇಟ್ನಿಂದ ಬಿಡುಗಡೆ ಮಾಡಲ್ಪಟ್ಟ ದಿ U.S. ವರ್ಸಸ್ ಜಾನ್ ಲೆನ್ನನ್ ಎಂಬ ಸಾಕ್ಷ್ಯಚಿತ್ರದಲ್ಲಿ ನೋಡಬಹುದು.[162] 1973ರ ಜೂನ್ನಲ್ಲಿ, ವಾಷಿಂಗ್ಟನ್, D.C.ಯಲ್ಲಿನ ವಾಟರ್ಗೇಟ್ ಸಂಬಂಧಿ ವಿಚಾರಣೆಗಳಲ್ಲಿ ಭಾಗವಹಿಸುವ ಮೂಲಕ, ಲೆನ್ನನ್ ಮತ್ತು ಒನೊ ತಮ್ಮ ಕೊನೆಯ ರಾಜಕೀಯ ಹೇಳಿಕೆಯನ್ನು ನೀಡಿದರು.[163]
ಲೆನ್ನನ್ನನ್ನು ಗಡೀಪಾರು ಮಾಡುವ ಆದೇಶವು 1975ರಲ್ಲಿ ರದ್ದುಮಾಡಲ್ಪಟ್ಟಿತು. 1976ರಲ್ಲಿ, ಲೆನ್ನನ್ನ US ವಲಸೆಯ ಸ್ಥಿತಿಗತಿಯು ಅಂತಿಮವಾಗಿ ಅನುಕೂಲಕರವಾಗಿ ಪರಿಹರಿಸಲ್ಪಟ್ಟಿತು, ಮತ್ತು ಆತ ತನ್ನ ಹಸಿರು ಕಾರ್ಡ್ ಸ್ವೀಕರಿಸಿದ. ನಿಕ್ಸನ್ನ ಉತ್ತರಾಧಿಕಾರಿಯಾದ ಜೆರಾಲ್ಡ್ ಫೋರ್ಡ್, ಈ ಸಮರವನ್ನು ಮತ್ತಷ್ಟು ಮುಂದುವರಿಸುವಲ್ಲಿ ಅಲ್ಪ ಆಸಕ್ತಿಯನ್ನು ತೋರಿಸಿದ. 1977ರ ಜನವರಿ 19ರಂದು ಜಿಮ್ಮಿ ಕಾರ್ಟರ್ ಅಧ್ಯಕ್ಷನಾಗಿ ಅಧಿಕಾರ ಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಾಗ, ಲೆನ್ನನ್ ಮತ್ತು ಒನೊ ಇಬ್ಬರೂ ಉದ್ಘಾಟನಾ ಸಮಾರಂಭದ ಕೂಟದಲ್ಲಿ ಭಾಗವಹಿಸಿದ್ದರು.[164]
ಲೆನ್ನನ್ನ ಮರಣಾನಂತರ, ಜಾನ್ ವೇಯ್ನರ್ ಎಂಬ ಚರಿತ್ರೆಕಾರ ಲೆನ್ನನ್ [165] ಕುರಿತಾದ FBI ಕಡತಗಳಿಗಾಗಿ ಮಾಹಿತಿ ಕಾಯಿದೆಯ ಸ್ವಾತಂತ್ರ್ಯ ಮನವಿಯನ್ನು ಸಲ್ಲಿಸಿದ. ನಿಕ್ಸನ್ ಮರು-ಚುನಾವಣಾ ಪ್ರಚಾರಕ್ಕೆ ಮುಂಚಿತವಾಗಿ ಲೆನ್ನನ್ನ ಯುದ್ಧ-ವಿರೋಧಿ ಪ್ರಚಾರವನ್ನು ನಿಲ್ಲಿಸಲು, 1972ರಲ್ಲಿ ಲೆನ್ನನ್ನ್ನು ಗಡಿಪಾರು ಮಾಡುವ ನಿಕ್ಸನ್ ಆಡಳಿತದ ಪ್ರಯತ್ನದಲ್ಲಿನ ಇಲಾಖೆಯ ಪಾತ್ರವನ್ನು ಇದು ದಾಖಲಿಸಿತ್ತು.[166] ಲೆನ್ನನ್ ಕುರಿತಾಗಿ ತನ್ನ ಬಳಿ 281 ಪುಟಗಳಷ್ಟು ಕಡತವಿದೆ ಎಂದು FBI ಒಪ್ಪಿಕೊಂಡಿತಾದರೂ, ಅವುಗಳಲ್ಲಿ ಬಹುಪಾಲನ್ನು ಬಿಡುಗಡೆ ಮಾಡಲು ನಿರಾಕರಿಸಿತು. ಅವು "ರಾಷ್ಟ್ರೀಯ ಭದ್ರತೆಯ" ಮಾಹಿತಿಯನ್ನು ಒಳಗೊಂಡಿವೆ ಎಂಬುದು ಇದರ ಹಿಂದಿದ್ದ ಕಾರಣವಾಗಿತ್ತು. 1983ರಲ್ಲಿ, ದಕ್ಷಿಣ ಕ್ಯಾಲಿಫೋರ್ನಿಯಾದ ಅಮೆರಿಕನ್ ಸಿವಿಲ್ ಲಿಬರ್ಟೀಸ್ ಯೂನಿಯನ್ ನೆರವಿನೊಂದಿಗೆ FBI ವಿರುದ್ಧ ವೇಯ್ನರ್ ಮೊಕದ್ದಮೆ ಹೂಡಿದ. ತಡೆಹಿಡಿಯಲಾಗಿದ್ದ ಪುಟಗಳನ್ನು ಬಿಡುಗಡೆ ಮಾಡುವಂತೆ FBIನ್ನು ಒತ್ತಾಯಿಸಲು ಇದು ಖಟ್ಲೆಯ 14 ವರ್ಷಗಳಷ್ಟು ಕಾಲವನ್ನು ತೆಗೆದುಕೊಂಡಿತು.[167] ವೇಯ್ನರ್ನನ್ನು ಪ್ರತಿನಿಧಿಸುತ್ತಿದ್ದ ACLU ಒಕ್ಕೂಟವು, 1991ರಲ್ಲಿ ಒಂಬತ್ತನೇ ಸಂಚಾರಿ ನ್ಯಾಯಪೀಠದಲ್ಲಿ FBI ವಿರುದ್ಧದ ತಮ್ಮ ದಾವೆಯಲ್ಲಿ ಒಂದು ಅನುಕೂಲಕರವಾದ ತೀರ್ಮಾನವನ್ನು ಗೆದ್ದಿತು.[168] 1992ರ ಏಪ್ರಿಲ್ನಲ್ಲಿ ಬುಷ್ ನ್ಯಾಯ ಖಾತೆಯು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿತಾದರೂ, ಸದರಿ ಪ್ರಕರಣವನ್ನು ಮರುಪರಿಶೀಲನೆ ಮಾಡಲು ನ್ಯಾಯಾಲಯವು ನಿರಾಕರಿಸಿತು.[169] 1997ರಲ್ಲಿ ನ್ಯಾಯಾಲಯದ ಆಚೆಯಿದ್ದ ಪ್ರಕರಣದಲ್ಲಿ ಬಾಕಿ ಉಳಿದಿದ್ದ ಬಹುತೇಕ ಸಮಸ್ಯೆಗಳನ್ನು ನ್ಯಾಯ ಖಾತೆಯು ಇತ್ಯರ್ಥಗೊಳಿಸಿತು. ಈ ಅವಧಿಯಲ್ಲಿ 10 ದಾಖಲೆಗಳನ್ನು ಹೊರತುಪಡಿಸಿದ ವಾದಿಸಲಾದ ಬಹುತೇಕ ದಸ್ತಾವೇಜುಗಳು ಬಿಡುಗಡೆಯಾಗಿ,[170], "ನಿರೀಕ್ಷಿತ ಅಪಾಯ"ವನ್ನು ದಸ್ತಾವೇಜುಗಳು ಒಳಗೊಂಡಿದ್ದರೆ ಮಾತ್ರವೇ ಅವುಗಳ ಬಿಡುಗಡೆಯನ್ನು ತಡೆಹಿಡಿಯಬೇಕು ಎಂಬ ಅಧ್ಯಕ್ಷ ಬಿಲ್ಕ್ಲಿಂಟನ್ನ ಹೊಸ ನಿಯಮವನ್ನು ತನ್ಮೂಲಕ ಅದು ಪ್ರತಿನಿಧಿಸಿತು.[169] 2000ರ ಜನವರಿಯಲ್ಲಿ, ಗಿಮ್ಮಿ ಸಮ್ ಟ್ರುತ್: ದಿ ಜಾನ್ ಲೆನ್ನನ್ FBI ಫೈಲ್ಸ್ ಎಂಬ ಶೀರ್ಷಿಕೆಯ ಪುಸ್ತಕವೊಂದನ್ನು ವೇಯ್ನರ್ ಪ್ರಕಟಿಸಿದ. ಯುದ್ಧ-ವಿರೋಧಿ ಸಕ್ರಿಯವಾದಿಗಳ ದಿನವಹಿ ಚಲನವಲನಗಳನ್ನು ವಿವರಿಸುವ ರಹಸ್ಯ ಮಾಹಿತಿದಾರಿಂದ ಬಂದ ಸುದೀರ್ಘ ವರದಿಗಳು, ಶ್ವೇತಭವನಕ್ಕೆ ನೀಡಲಾದ ಜ್ಞಾಪನಾ ಪತ್ರಗಳು, ಲೆನ್ನನ್ ಕಾಣಿಸಿಕೊಂಡಿದ್ದ TV ಕಾರ್ಯಕ್ರಮಗಳ ನಕಲುಗಳು, ಮತ್ತು ಮಾದಕವಸ್ತುವನ್ನು ಹೊಂದಿದ್ದ ಆಪಾದನೆಗಳ ಮೇಲೆ ಸ್ಥಳೀಯ ಆರಕ್ಷಕರು ಲೆನ್ನನ್ನನ್ನು ದಸ್ತಗಿರಿ ಮಾಡಬಹುದೆಂಬ ಒಂದು ಪ್ರಸ್ತಾವನೆಯನ್ನು ಒಳಗೊಂಡಿರುವ ಯಥಾಪ್ರತಿಗಳನ್ನು ಈ ಪುಸ್ತಕವು ಒಳಗೊಂಡಿದೆ.[165][171] ಕಥೆಯನ್ನು ದಿ U.S. ವರ್ಸಸ್ ಜಾನ್ ಲೆನ್ನನ್ ಎಂಬ ಸಾಕ್ಷ್ಯಚಿತ್ರದಲ್ಲಿ ಹೇಳಲಾಗಿದೆ. ಲೆನ್ನನ್ನ FBI ಕಡತದಲ್ಲಿನ ಕೊನೆಯ ಹತ್ತು ದಸ್ತಾವೇಜುಗಳನ್ನು 2006ರ ಡಿಸೆಂಬರ್ನಲ್ಲಿ ಬಿಡುಗಡೆಮಾಡಲಾಯಿತು. ಈ ದಸ್ತಾವೇಜುಗಳು "ಗೋಪ್ಯತೆಯ ಒಂದು ಸುಸ್ಪಷ್ಟ ಭರವಸೆಯ ಅಡಿಯಲ್ಲಿ ವಿದೇಶೀ ಸರ್ಕಾರವೊಂದರಿಂದ ಒದಗಿಸಲ್ಪಟ್ಟ ರಾಷ್ಟ್ರೀಯ ಭದ್ರತಾ ಮಾಹಿತಿ"ಯನ್ನು ಒಳಗೊಂಡಿದೆ ಮತ್ತು 1971ರಲ್ಲಿ ಲಂಡನ್ ಯುದ್ಧ-ವಿರೋಧಿ ಸಕ್ರಿಯವಾದಿಗಳೊಂದಿಗಿನ ಲೆನ್ನನ್ನ ಸಂಬಂಧಗಳ ಕುರಿತು ವರದಿಮಾಡಿದೆ ಎಂಬ ಕಾರಣದಿಂದಾಗಿ ಈ ದಸ್ತಾವೇಜುಗಳನ್ನು ತಡೆಹಿಡಿಯಲಾಗಿತ್ತು.[172][173][174]
ಹಂಬರ್ಗ್ನಲ್ಲಿ ಲೆನ್ನನ್ಗೆ ಮೊದಲ ಬಾರಿಗೆ ಮಾದಕವಸ್ತುಗಳ ಪರಿಚಯವಾಯಿತು. ದಿ ಬೀಟಲ್ಸ್ ತಂಡವು ಸುದೀರ್ಘಾವಧಿಯವರೆಗೆ ಪ್ರದರ್ಶನ ನೀಡಬೇಕಾಗಿರುತ್ತಿದ್ದರಿಂದ ಗ್ರಾಹಕರಿಂದ ಅಥವಾ ಆಸ್ಟ್ರಿಡ್ ಕಿರ್ಚರ್ಳಿಂದ ಅವರಿಗೆ ಪ್ರೆಲ್ಯುಡಿನ್ನ್ನು ಆಗಾಗ್ಗೆ ನೀಡಲಾಗುತ್ತಿತ್ತು. ಆಸ್ಟ್ರಿಡ್ ಕಿರ್ಚರ್ಳಿಗಾಗಿ ಅವಳ ತಾಯಿ ಈ ಪ್ರೆಲ್ಯುಡಿನ್ನ್ನು ತಂದಿರುತ್ತಿದ್ದಳು.[175] ಮೆಕ್ಕರ್ಟ್ನಿ ವಾಡಿಕೆಯಂತೆ ಒಂದನ್ನು ತೆಗೆದುಕೊಳ್ಳುತ್ತಿದ್ದ. ಆದರೆ ಲೆನ್ನನ್ ಅನೇಕ ಬಾರಿ ನಾಲ್ಕು ಅಥವಾ ಐದನ್ನು ತೆಗೆದುಕೊಳ್ಳುತ್ತಿದ್ದ, ಮತ್ತು ನಂತರದಲ್ಲಿ ಆತ "ಬ್ಲ್ಯಾಕ್ ಬಾಂಬರ್ಸ್" ಮತ್ತು "ಪರ್ಪಲ್ ಹಾರ್ಟ್ಸ್" ಎಂದು ಕರೆಯಲ್ಪಡುತ್ತಿದ್ದ ಆಂಫೆಟಮೀನ್ಗಳನ್ನುತೆಗೆದುಕೊಂಡ.[175][176] ದಿ ಬೀಟಲ್ಸ್ ತಂಡವು ಮೊದಲ ಬಾರಿಗೆ 1964ರಲ್ಲಿ ಬಾಬ್ ಡೈಲನ್ನೊಂದಿಗೆ ಗಾಂಜಾವನ್ನು ಸೇದಿತು; "ಐ ವಾಂಟ್ ಟು ಹೋಲ್ಡ್ ಯುವರ್ ಹ್ಯಾಂಡ್" ಎಂಬ ಹಾಡಿನಲ್ಲಿನ "ಐ ಕಾಂಟ್ ಹೈಡ್" ಎಂಬ ಸಾಹಿತ್ಯವನ್ನು "ಐ ಗೆಟ್ ಹೈ" ಎಂಬುದಾಗಿ ಡೈಲನ್ ತಪ್ಪುತಪ್ಪಾಗಿ ಹೇಳಿದ ಮತ್ತು ದಿ ಬೀಟಲ್ಸ್ ತಂಡವು ಈಗಾಗಲೇ ಮಾದಕವಸ್ತುವಿನೊಂದಿಗೆ ಚೆನ್ನಾಗಿ ಪಳಗಿದೆ ಎಂದು ಭಾವಿಸಿದ.[177][178] ಲೆನ್ನನ್ ನಂತರ ಈ ಕುರಿತು ಮಾತನಾಡುತ್ತಾ, ಹೆಲ್ಪ್! ನ ಚಿತ್ರೀಕರಣವನ್ನು 1965ರಲ್ಲಿ ಮಾಡುವಾಗ, ದಿ ಬೀಟಲ್ಸ್ ತಂಡವು "ಉಪಾಹಾರಕ್ಕಾಗಿ ಗಾಂಜಾವನ್ನು ಸೇದಿತು", ಮತ್ತು "ನಮ್ಮೆಲ್ಲರ ಕಣ್ಣುಗಳೂ ಗಾಜಿನಂತಾಗಿ, ಎಲ್ಲರೂ ಮುಸಿಮುಸಿ ನಗುತ್ತಿದ್ದುದರಿಂದ" ನಮ್ಮೊಂದಿಗೆ ಮಾತಾಡಲು ಇತರ ಜನರಿಗೆ ಕಷ್ಟವಾಗುತ್ತಿತ್ತು" ಎಂದು ಹೇಳಿದ.[36]
ದಿ ಬೀಟಲ್ಸ್ ತಂಡದ ಕೀರ್ತಿ ಮತ್ತು ತೀವ್ರಸ್ವರೂಪದ ಪ್ರವಾಸಗಳ ಒತ್ತಡದಿಂದಾಗಿ, ಹಾಗೂ ಮಾದಕವಸ್ತುಗಳ ಬಳಕೆಯನ್ನು ದಿನೇ ದಿನೇ ಹೆಚ್ಚುಮಾಡಿದ್ದರಿಂದಾಗಿ ತಮ್ಮ ವೈವಾಹಿಕ ಜೀವನದಾದ್ಯಂತ ಸಮಸ್ಯೆಗಳು ತಾಂಡವವಾಡುತ್ತಿದ್ದವು ಎಂದು 1995ರ ಸಂದರ್ಶನವೊಂದರಲ್ಲಿ ಸಿಂಥಿಯಾ ಹೇಳಿದಳು.[179] ಆತನ ಕೊನೆಯ ಮದುವೆಯ ಸಂದರ್ಭದಲ್ಲಿ ಲೆನ್ನನ್ LSDಯನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ, ಮತ್ತು ತಿಮೊಥಿ ಲಿಯರಿ, ರಿಚರ್ಡ್ ಆಲ್ಪರ್ಟ್, ಹಾಗೂ ರಾಲ್ಫ್ ಮೆಟ್ಜ್ನರ್ ಬರೆದಿರುವ ದಿ ಸೈಕಿಡೆಲಿಕ್ ಎಕ್ಸ್ಪೀರಿಯೆನ್ಸ್ ಕೃತಿಯನ್ನು ಓದಿದ. ಈ ಪುಸ್ತಕವು ಟಿಬೆಟನ್ ಬುಕ್ ಆಫ್ ದಿ ಡೆಡ್ ನ್ನು ಆಧರಿಸಿತ್ತು ಹಾಗೂ ಅದರಿಂದ ಉಲ್ಲೇಖಿಸಲ್ಪಟ್ಟಿತ್ತು.[180][181] ನಂತರ ಆತ ಹೆರಾಯಿನ್ ಬಳಸಿದ, ಹಾಗೂ "ಕೋಲ್ಡ್ ಟರ್ಕಿ"ಯಲ್ಲಿ ತಾನು ಅನುಭವಕ್ಕೆ ತಂದುಕೊಂಡ ನಿರ್ವರ್ತನ ಚಿಹ್ನೆಗಳ ಕುರಿತು ಬರೆದ.[182] 1967ರ ಆಗಸ್ಟ್ 24ರಂದು, ದಿ ಬೀಟಲ್ಸ್ ತಂಡವು ಮಹರ್ಷಿ ಮಹೇಶ್ ಯೋಗಿಯವರನ್ನು ಲಂಡನ್ ಹಿಲ್ಟನ್ನಲ್ಲಿ ಭೇಟಿಮಾಡಿತು, ಮತ್ತು ವೈಯಕ್ತಿಕ ಸೂಚನೆಯ ಅನುಸಾರ ಒಂದು ವಾರಾಂತ್ಯದಲ್ಲಿ ಪಾಲ್ಗೊಳ್ಳಲು ನಂತರ ಉತ್ತರ ವೇಲ್ಸ್ನಲ್ಲಿನ ಬ್ಯಾಂಗರ್ಗೆ ತೆರಳಿತು.[183] ಭಾರತದಲ್ಲಿನ ಮಹರ್ಷಿಯ ಆಶ್ರಮದಲ್ಲಿ ನಂತರ ಲೆನ್ನನ್ ಕಳೆದ ಸಮಯವು ಫಲದಾಯಕವಾಗಿತ್ತು. ಏಕೆಂದರೆ, ದಿ ಬೀಟಲ್ಸ್ , ಹಾಗೂ ಅಬೆ ರೋಡ್ ಗಾಗಿ ಧ್ವನಿಮುದ್ರಿಸಲ್ಪಟ್ಟ ಬಹುತೇಕ ಹಾಡುಗಳನ್ನು ಲೆನ್ನನ್ ಮತ್ತು ಮೆಕ್ಕರ್ಟ್ನಿ ಅಲ್ಲಿಯೇ ಸಂಯೋಜಿಸಿದರು.[184] ನಂತರ ಲೆನ್ನನ್ ಮಹರ್ಷಿಯವರಿಗೆ ವಿರುದ್ಧವಾಗಿ ನಿಂತನಾದರೂ, ಸಂದರ್ಶಿಸಿದ ಸಮಯದಲ್ಲೂ ಸಹ ಧ್ಯಾನವನ್ನು ಸಮರ್ಥಿಸಿದ.[185] 1968ರಲ್ಲಿ, ಲೆನ್ನನ್ನನ್ನು ಕೆನ್ವುಡ್ನಲ್ಲಿನ ಪೀಟ್ ಶೋಟ್ಟನ್ ಎಂಬ ಹೆಸರಿನ ಅವನ ಶಾಲಾಕಾಲದ ಸ್ನೇಹಿತ ಹಾಗೂ ಸಹಾಯಕನೊಂದಿಗೆ ಬಿಟ್ಟು ಸಿಂಥಿಯಾ ಲೆನ್ನನ್ ವಿಹಾರದ ರಜೆಯ ಮೇಲೆ ಗ್ರೀಸ್ಗೆ ತೆರಳಿದಳು.
1970ರಲ್ಲಿ, ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ನಲ್ಲಿನ ಡಾ. ಅರ್ಥರ್ ಜನೋವ್ರ ಚಿಕಿತ್ಸೆಯಡಿಯಲ್ಲಿ ಲೆನ್ನನ್ ಮತ್ತು ಒನೊ ಮೂಲಭೂತ ಚಿಕಿತ್ಸೆಗೆ ತಮ್ಮನ್ನು ಒಳಪಡಿಸಿಕೊಂಡರು. ಬಾಲ್ಯದ ಆರಂಭದಿಂದ ಮೊದಲ್ಗೊಂಡಿರುವ ಭಾವನಾತ್ಮಕ ನೋವನ್ನು ಬಿಡುಗಡೆ ಮಾಡುವುದನ್ನು ಈ ಚಿಕಿತ್ಸೆಯು ಒಳಗೊಂಡಿತ್ತು. ಜನೋವ್ರೊಂದಿಗೆ ಒನೊ ಸತತವಾಗಿ ವಾದಿಸುತ್ತಿದ್ದುದರಿಂದ, ಚಿಕಿತ್ಸೆಯ ಒಂದು ಸಂಪೂರ್ಣ ಅವಧಿಯನ್ನು ಮುಗಿಸುವುದಕ್ಕೆ ಮುಂಚೆಯೇ ಲೆನ್ನನ್ ಹಾಗೂ ಒನೊ ಈ ಚಿಕಿತ್ಸಾಕ್ರಮದಿಂದ ಹೊರಬಂದರು.[36][186] "ಮದರ್" ಎಂಬ ಹಾಡು ಮೂಲಭೂತ ಚಿಕಿತ್ಸೆಗೆ ಸಂಬಂಧಿಸಿದ ಲೆನ್ನನ್ನ ಅನುಭವ ಹಾಗೂ ಗ್ರಹಿಕೆಯನ್ನು ಆಧರಿಸಿದೆ.
ಲೆನ್ನನ್ ತನ್ನ ಹಾಸ್ಯಪ್ರಜ್ಞೆಗೆ ಹೆಸರಾಗಿದ್ದ. ವಿಶೇಷವಾಗಿ ಬೀಟಲ್ಗೀಳಿನ ಕಾಲದಲ್ಲಿ ಇದು ಹೆಚ್ಚಾಗಿತ್ತು. "ಐ ವಾಂಟ್ ಟು ಹೋಲ್ಡ್ ಯುವರ್ ಹ್ಯಾಂಡ್" ಹಾಡನ್ನು ಪ್ರಸ್ತುತಪಡಿಸುವ ಸಮಯದಲ್ಲಿ "ಐ ವಾಂಟ್ ಟು ಹೋಲ್ಡ್ ಯುವರ್ ಗ್ಲಾಂಡ್" ಎಂಬುದಾಗಿ ಸಾಹಿತ್ಯದಲ್ಲಿನ ಪದಗಳನ್ನು ಲೆನ್ನನ್ ಅನೇಕ ಬಾರಿ ಬದಲಿಸಿದ್ದ. ಕಿರಿಚಿಕೊಳ್ಳುತ್ತಿರುವ ಪ್ರೇಕ್ಷಕರ ಧ್ವನಿಗಿಂತ ಮೇಲ್ಮಟ್ಟದಲ್ಲಿ ಹಾಡುಗಾರರ ಧ್ವನಿಯನ್ನು ಕೇಳಿಸಿಕೊಳ್ಳುವುದು ಕಷ್ಟವಾಗಿದ್ದರಿಂದ ಇದು ನಡೆದುಹೋಗುತ್ತಿತ್ತು. ಬ್ರಿಟಿಷ್ ರಾಯಲ್ಟಿಯ ಸದಸ್ಯರ ಸಮ್ಮುಖದಲ್ಲಿ 1963ರಲ್ಲಿ ನಡೆದ ರಾಯಲ್ ವೆರೈಟಿ ಷೋನಲ್ಲಿ, ಜಮಾವಣೆಗೊಂಡಿದ್ದ ಪ್ರೇಕ್ಷಕರನ್ನುದ್ದೇಶಿಸಿದ ಮಾತನಾಡಿದ ಲೆನ್ನನ್, "ನಮ್ಮ ಮುಂದಿನ ಹಾಡಿಗಾಗಿ ನಿಮ್ಮ ಸಹಾಯವನ್ನು ಕೇಳಲು ನಾನು ಬಯಸುತ್ತೇನೆ. ಕಡಿಮೆ ದರ್ಜೆಯ ವರ್ಗದಲ್ಲಿ ಕುಳಿತಿರುವ ಜನರು ಚಪ್ಪಾಳೆ ತಟ್ಟಬೇಕು.... ಮತ್ತು ಉಳಿದ ಜನರು ಕೇವಲ ಅವರವರ ಆಭರಣಗಳನ್ನು ಲಟಲಟ ಸದ್ದುಮಾಡಿದರೆ ಸಾಕು" ಎಂದು ನುಡಿದ.[187]
"ಗೆಟ್ ಬ್ಯಾಕ್"ನ್ನು ಪ್ರಸ್ತುತಪಡಿಸುವ ಸಂದರ್ಭದಲ್ಲಿ, "ಡಿಗ್ ಎ ಪೋನಿ"ಯನ್ನು ಪರಿಚಯಿಸುವಾಗ ಲೆನ್ನನ್ ಈ ರೀತಿ ಕಿರುಚಿಕೊಂಡ: "ಐ ಡಿಗ್ ಎ ಪಿಗ್ಮಿ ಬೈ ಚಾರ್ಲ್ಸ್ ಹಾವ್ಟ್ರೆ ಅಂಡ್ ದಿ ಡೆಫ್ ಏಡ್ಸ್; ಫೇಸ್ ಒನ್ ಇನ್ ವಿಚ್ ಡೋರಿಸ್ ಗೆಟ್ಸ್ ಹರ್ ಓಟ್ಸ್!" ಪದಗುಚ್ಛವನ್ನು ನಂತರ ಪರಿಷ್ಕರಿಸಿ ಲೆಟ್ ಇಟ್ ಬಿ ಸಂಪುಟದಲ್ಲಿ "ಟೂ ಆಫ್ ಅಸ್"ಗಿಂತ ಮುಂಚೆ ಬರುವಂತೆ ಮಾಡಲಾಯಿತು. "ಗೆಟಿಂಗ್ ಬೆಟರ್"ನಲ್ಲಿರುವಂತೆ ಮೆಕ್ಕರ್ಟ್ನಿಯ ಲಘುತಾಳದ ಸಾಹಿತ್ಯಕ್ಕೆ ಲೆನ್ನನ್ ಅನೇಕಬಾರಿ ಸಂವಾದಿರಾಗ ಸೇರಿಸುತ್ತಿದ್ದ:
ಮೋರ್ಕ್ಯಾಂಬಿ ಅಂಡ್ ವೈಸ್ ಕಾರ್ಯಕ್ರಮದಂಥ ಹಲವಾರು ದೂರದರ್ಶನ ಹಾಸ್ಯ ಕಾರ್ಯಕ್ರಮಗಳಲ್ಲಿ ದಿ ಬೀಟಲ್ಸ್ ತಂಡದ ಉಳಿದವರೊಂದಿಗೆ ಲೆನ್ನನ್ ಕಾಣಿಸಿಕೊಂಡ, ಮತ್ತು ನಾಟ್ ಓನ್ಲಿ ಬಟ್ ಆಲ್ಸೋ ನಲ್ಲಿ ಪುರುಷರ ಶೌಚಾಲಯದ ಓರ್ವ ಬಾಗಿಲುಕಾಯುವವನ ಪಾತ್ರದಲ್ಲಿ ಆತ ಅಭಿನಯಿಸಿದ.[189][190] ಲೆನ್ನನ್ನ ಹಾಸ್ಯವು ಕೆಲವೊಮ್ಮೆ ಅಪಹಾಸ್ಯ ಅಥವಾ ಕಟುಹಾಸ್ಯವಾಗಿಬಿಡುತ್ತಿತ್ತು. ತನ್ನ ಆತ್ಮಕಥೆಗಾಗಿ ಒಂದು ಶೀರ್ಷಿಕೆಯನ್ನು ಸೂಚಿಸುವಂತೆ ಲೆನ್ನನ್ನನ್ನು ಎಪ್ಸ್ಟೀನ್ ಕೇಳಿದಾಗ, "ಕ್ವೀರ್ ಜ್ಯೂ " ಎಂಬ ಶೀರ್ಷಿಕೆ ಹೇಗಿರುತ್ತದೆ?" ಎಂದು ಲೆನ್ನನ್ ಉತ್ತರಿಸಿದ್ದು ಇದಕ್ಕೊಂದು ಉದಾಹರಣೆ.[191] ಸದರಿ ಪುಸ್ತಕಕ್ಕೆ ಎ ಸೆಲ್ಲಾರ್ಫುಲ್ ಆಫ್ ನಾಯ್ಸ್ ಎಂಬ ಶೀರ್ಷಿಕೆಯನ್ನು ಇಡಲಾಗುವುದು ಎಂಬುದನ್ನು ಕೇಳ್ಪಟ್ಟಾಗ, ಲೆನ್ನನ್ ತನ್ನ ಸ್ನೇಹಿತನೊಬ್ಬನೊಂದಿಗೆ ಮಾತಾಡುತ್ತಾ, "ಇದು ಹೆಚ್ಚಿನಂಶ ಎ ಸೆಲ್ಲಾರ್ಫುಲ್ ಆಫ್ ಬಾಯ್ಸ್ ಎಂಬ ರೀತಿಯಲ್ಲಿ ಕೇಳಿಸುತ್ತದೆ" ಎಂದ.[192]
1967ರಲ್ಲಿ, ಹೌ ಐ ವನ್ ದಿ ವಾರ್ ಎಂಬ ಬ್ರಿಟಿಷ್ ವಿಡಂಬನಾತ್ಮಕ ಹಾಸ್ಯ ಕಾರ್ಯಕ್ರಮದಲ್ಲಿ ಲೆನ್ನನ್ ಕಾಣಿಸಿಕೊಂಡ. ಇದು ಬೀಟಲ್ಸ್ ತಂಡವನ್ನು ಹೊರತುಪಡಿಸಿದ ಅವನ ಏಕೈಕ ಚಲನಚಿತ್ರ ಪಾತ್ರವಾಗಿತ್ತು.
ತನ್ನ ಹಸಿರು ಕಾರ್ಡ್ನ್ನು ಪಡೆದ ಕೆಲವೇ ದಿನಗಳಲ್ಲಿ 1976ರಲ್ಲಿ ಬಂದ, ದೂರದರ್ಶನದ ಮೂಲಕ ಪ್ರಸಾರವಾದ ಒಂದು ಸುದ್ದಿ ಸಮಾವೇಶದಲ್ಲಿ ವರದಿಗಾರನೊಬ್ಬ ಲೆನ್ನನ್ನನ್ನು ಪ್ರಶ್ನಿಸುತ್ತಾ, ಆತನನ್ನು ಹಿಂದೊಮ್ಮೆ ಗಡೀಪಾರು ಮಾಡಲು ಪ್ರಯತ್ನಿಸಿದ್ದಕ್ಕಾಗಿ ನಿಕ್ಸನ್ ಆಡಳಿತದೆಡೆಗೆ ಏನಾದರೂ ಕಹಿಭಾವನೆ ಅಥವಾ ದ್ವೇಷವನ್ನು ಹೊಂದಿರುವುದುಂಟೇ ಎಂದು ಕೇಳಿದಾಗ, ಆತ ಹಲ್ಲುಕಿರಿದು ನಗುತ್ತಾ "ಎಲ್ಲಾ ಹಿಮ್ಮಡಿಗಳನ್ನೂ ಕಾಲವು ಗಾಯಮಾಡುತ್ತದೆ" (ಟೈಂ ವೂಂಡ್ಸ್ ಆಲ್ ಹೀಲ್ಸ್) ಎಂದು ಚುರುಕಾಗಿ ಮಾರುತ್ತರ ನೀಡಿದ.[162]
ತನ್ನ ಚಿಕ್ಕಪ್ಪ ಜಾರ್ಜ್ನ ಪ್ರೋತ್ಸಾಹದೊಂದಿಗೆ, ತನ್ನ ಜೀವನದ ಆರಂಭದ ದಿನಗಳಲ್ಲೇ ಬರಹಗಾರಿಕೆ ಮತ್ತು ಚಿತ್ರಕಲೆಯನ್ನು ಲೆನ್ನನ್ ಪ್ರಾರಂಭಿಸಿದ. ಇದರ ಪರಿಣಾಮವಾಗಿ ತನ್ನ ಶಾಲಾಪುಸ್ತಕದಲ್ಲಿ ತನ್ನದೇ ಸ್ವಂತದ ವಿಕಟ ಚಿತ್ರಾವಳಿಯನ್ನು ಸೃಷ್ಟಿಸಿ, ಅದಕ್ಕೆ "ದಿ ಡೇಲಿ ಹೌಲ್" ಎಂಬ ಹೆಸರನ್ನು ಇಟ್ಟಿದ್ದ. ಹೆಚ್ಚು ಸಂದರ್ಭಗಳಲ್ಲಿ ಹೆಳವರ ಕುರಿತಾದ ಚಿತ್ರಗಳನ್ನು ಮತ್ತು ವಿಡಂಬನಕಾರಿ ಬರಹಗಳನ್ನು ಇದು ಒಳಗೊಂಡಿರುತ್ತಿತ್ತು. ಪದಚಮತ್ಕಾರದೊಂದಿಗಿನ ಬರಹಗಳು ಅದರಲ್ಲಿ ಹೆಚ್ಚುಬಾರಿ ಕಾಣಿಸಿಕೊಳ್ಳುತ್ತಿದ್ದವು. "ಟುಮಾರೊ ವಿಲ್ ಬಿ ಮಗ್ಗಿ, ಫಾಲೋಡ್ ಬೈ ಟಗ್ಗಿ, ವುಗ್ಗಿ ಅಂಡ್ ಥಗ್ಗಿ" ಎಂಬ ಶೈಲಿಯಲ್ಲಿ ಹೇಳುವ ಮೂಲಕ ಲೆನ್ನನ್ ಒಂದು ಹವಾಮಾನ ವರದಿಯನ್ನು ಬರೆದಿದ್ದ.[193][194] ತನ್ನದೇ ಶಾಲೆಯ ಶಿಕ್ಷಕರ ವಿಕಟಚಿತ್ರಗಳನ್ನು ಅವನು ಅನೇಕಬಾರಿ ಬರೆಯುತ್ತಿದ್ದ ಮತ್ತು ಆತ ಹಂಬರ್ಗ್ನಲ್ಲಿದ್ದಾಗ, ಅವನು ಸಿಂಥಿಯಾಗೆ (ಆತನ ಭಾವೀಪತ್ನಿ) ಪ್ರೇಮಕವನಗಳು ಹಾಗೂ ಚಿತ್ರಗಳನ್ನು ಕಳಿಸಿದ್ದ. ಅದರಲ್ಲಿ ಒಮ್ಮೆ ಆತ "ಅವರ್ ಫಸ್ಟ್ ಕ್ರಿಸ್ಮಸ್, ಐ ಲವ್ ಯೂ, ಯೆಸ್, ಯೆಸ್, ಯೆಸ್" ಎಂದು ಬರೆದಿದ್ದ.[195]
ಲಿವರ್ಪೂಲ್ನ ಮೆರ್ಸಿ ಬೀಟ್ ನಿಯತಕಾಲಿಕವು ಸ್ಥಾಪನೆಗೊಂಡಾಗ, ಲೇಖನಗಳನ್ನು ಬರೆದುಕೊಡುವಂತೆ ಲೆನ್ನನ್ಗೆ ಕೇಳಿಕೊಳ್ಳಲಾಗಿತ್ತು. ದಿ ಬೀಟಲ್ಸ್ ತಂಡದ ಹುಟ್ಟಿನ ಕುರಿತು ಕಾಣಿಸಿಕೊಂಡ ಅವನ ಮೊದಲ ತುಣುಕು ಹೀಗಿತ್ತು: "ಎ ಮ್ಯಾನ್ ಅಪಿಯರ್ಡ್ ಆನ್ ಎ ಫ್ಲೇಮಿಂಗ್ ಪೈ, ಅಂಡ್ ಸೆಡ್ ಯೂ ಆರ್ ಬೀಟಲ್ಸ್ ವಿತ್ ಆನ್ 'A'."[196] ಲೆನ್ನನ್ನಿಂದ ಬರೆಯಲ್ಪಟ್ಟಿರುವ ಮೊದಲ ಎರಡು ಪುಸ್ತಕಗಳು ಸಾಹಿತ್ಯಿಕ ಅಸಂಬದ್ಧಕ್ಕೆ ಉದಾಹರಣೆಗಳಾಗಿವೆ. ಅವೆಂದರೆ: ಇನ್ ಹಿಸ್ ಓನ್ ರೈಟ್ (1964) ಮತ್ತು ಎ ಸ್ಪಾನಿಯಾರ್ಡ್ ಇನ್ ದಿ ವರ್ಕ್ಸ್ (1965). ಲೆನ್ನನ್ನ ಮರಣಾನಂತರ ಅವನ ಪುಸ್ತಕಗಳು ಪ್ರಕಟವಾಗಲು ಒನೊ ನಂತರದಲ್ಲಿ ಅನುವುಮಾಡಿಕೊಟ್ಟಳು. ಆ ಪುಸ್ತಕಗಳ ವಿವರ ಹೀಗಿದೆ: ಸ್ಕೈರೈಟಿಂಗ್ ಬೈ ದಿ ವರ್ಡ್ ಆಫ್ ಮೌತ್ (1986) ಮತ್ತು ಐ: ಜಪಾನ್ ಥ್ರೂ ಜಾನ್ ಲೆನ್ನನ್ಸ್ ಐಸ್: ಎ ಪರ್ಸನಲ್ ಸ್ಕೆಚ್ಬುಕ್ (1992). ಎರಡನೆಯ ಪುಸ್ತಕದಲ್ಲಿ ಜಪಾನಿಯರ ಪದಗಳ ಅರ್ಥನಿರೂಪಣೆಯನ್ನು ಚಿತ್ರಿಸುವ ರೇಖಾಚಿತ್ರಗಳಿವೆ. 1999ರಲ್ಲಿ ರಿಯಲ್ ಲವ್: ದಿ ಡ್ರಾಯಿಂಗ್ಸ್ ಫಾರ್ ಸೀನ್ ಪುಸ್ತಕವು ಬಂದಿತು. ದಿ ಬೀಟಲ್ಸ್ ಆಂಥಾಲಜಿ ಪುಸ್ತಕದಲ್ಲಿ ಲೆನ್ನನ್ನಿಂದ ಬರೆಯಲ್ಪಟ್ಟ ಬರಹಗಳು ಹಾಗೂ ರೇಖಾಚಿತ್ರಗಳಿದ್ದವು.[197] ಅಸಂಬದ್ಧ ಭಾಷೆಯ ಕುರಿತಾದ ಲೆನ್ನನ್ನ ಪ್ರೀತಿಯು ಸ್ಟಾನ್ಲೆ ಅನ್ವಿನ್ ಕಡೆಗೆ ಅವನಿಗಿರುವ ಕೃತಜ್ಞತಾ ಭಾವನೆಯಿಂದ ಪ್ರಭಾವಿತಗೊಂಡಿತ್ತು.[198]
ತನ್ನ ಒಂಟಿಗಾಯನದ ವೃತ್ತಿಜೀವನದಾದ್ಯಂತ ಲೆನ್ನನ್ ತನ್ನದೇ ಸ್ವಂತ ಗೀತಸಂಪುಟಗಳ ಮೇಲೆ (ಅಷ್ಟೇ ಅಲ್ಲ, ಎಲ್ಟನ್ ಜಾನ್ನಂಥ ಇತರ ಕಲಾವಿದರ ಗೀತಸಂಪುಟಗಳ ಮೇಲೂ) ಕೆಲವೊಂದು ಗುಪ್ತನಾಮಗಳಲ್ಲಿ ಕಾಣಿಸಿಕೊಂಡಿದ್ದಾನೆ. ಅವುಗಳೆಂದರೆ: ಡಾ. ವಿನ್ಸ್ಟನ್ ಓ'ಬೂಗಿ, ಮೆಲ್ ಟಾರ್ಮೆಂಟ್ (ಹಾಡುಗಾರ ಮೆಲ್ ಟಾರ್ಮೆ ಕುರಿತಾದ ಒಂದು ನಾಟಕ), ಮತ್ತು ದಿ ರೆವರೆಂಡ್ ಫ್ರೆಡ್ ಘರ್ಕಿನ್. ಅಲ್ಪಕಾಲ ಅಸ್ತಿತ್ವದಲ್ಲಿದ್ದ 1968ರ ಮಹಾನ್ ತಂಡವಾದ ದಿ ಡರ್ಟಿ ಮ್ಯಾಕ್ನಲ್ಲಿ, ವಿನ್ಸ್ಟನ್ ಲೆಗ್-ಥೈ ಎಂಬ ಹೆಸರಿನಡಿಯಲ್ಲಿ ಲೆನ್ನನ್ ಕಾರ್ಯಕ್ರಮ ನೀಡಿದ್ದ. ಒನೊಳ ಗೀತಸಂಪುಟಗಳ ಮೇಲೆ ಆತ ಜಾನ್ ಓ'ಸಿಯಾನ್ ಮತ್ತು ಜೋಯೆಲ್ ನೊಹನ್ ಆಗಿ ಕಾಣಿಸಿಕೊಂಡಿದ್ದ, ಮತ್ತು
ಆತ ಮತ್ತು ಒನೊ (ಅಡಾ ಘರ್ಕಿನ್ "ಏಟ್ ಎ ಘರ್ಕಿನ್", ಮತ್ತು ಇತರ ಉಪನಾಮಗಳೊಂದಿಗೆ) ಇಂಥ ಹೆಸರುಗಳನ್ನಿಟ್ಟುಕೊಂಡು ಪ್ರವಾಸ ಮಾಡಿದ್ದರು. ಇದರಿಂದಾಗಿ ಅನಪೇಕ್ಷಿತ ಸಾರ್ವಜನಿಕ ಗಮನವನ್ನು ತಡೆಗಟ್ಟುವುದು ಸಾಧ್ಯವಾಗಿತ್ತು.[199]
ತನ್ನ ವೃತ್ತಿಜೀವನದ ಅವಧಿಯಲ್ಲಿ ತನ್ನ ಸರಣಿಯಲ್ಲಿನ ಸಂಗೀತಗಾರರನ್ನೂ ಲೆನ್ನನ್ ಹಲವಾರು ವೈವಿಧ್ಯಮಯ ಸಂಗೀತ ತಂಡಗಳ ಹೆಸರಿನಡಿಯಲ್ಲಿ ಹೆಸರಿಸಿದ್ದ. ಅವುಗಳೆಂದರೆ:
BRIT ಪ್ರಶಸ್ತಿಗಳು:
ದಿ ಬೀಟಲ್ಸ್ನೊಂದಿಗೆ ಹಾಗೂ ತನ್ನ ಒಂಟಿಸಂಗೀತದ ವೃತ್ತಿಜೀವನದಲ್ಲಿ ಹಲವಾರು ಗಿಟಾರ್ಗಳನ್ನು ಲೆನ್ನನ್ ನುಡಿಸಿದ್ದಾನೆ. ರಿಕನ್ಬ್ಯಾಕರ್ (ಅದರ ನಾಲ್ಕು ಭಿನ್ನರೂಪಗಳು), ಎಪಿಫೋನ್ ಕ್ಯಾಸಿನೊ, ಹಾಗೂ ಗಿಬ್ಸನ್ ಮತ್ತು ಫೆಂಡರ್ ಗಿಟಾರ್ಗಳ ಹಲವಾರು ಮಾದರಿಗಳು ಇದರಲ್ಲಿ ಸೇರಿವೆ. ಪಿಯಾನೊ ವಾದ್ಯವು ಅವನ ಆಯ್ಕೆಯ ಮತ್ತೊಂದು ಸಂಗೀತ ಉಪಕರಣವಾಗಿತ್ತು. ಇದರ ನೆರವಿನಿಂದಲೂ ಆತ ಅನೇಕ ಹಾಡುಗಳನ್ನು ಸಂಯೋಜಿಸಿದ್ದಾನೆ. ಪಿಯಾನೊ ನುಡಿಸುತ್ತಾ ಮೆಕ್ಕರ್ಟ್ನಿಯೊಂದಿಗೆ ಸಮಯಸ್ಫೂರ್ತಿಯಿಂದ ಹಾಡುವ ಲೆನ್ನನ್ನ ವಿಶಿಷ್ಟ ಶೈಲಿಯು 1963ರಲ್ಲಿ "ಐ ವಾಂಟ್ ಟು ಹೋಲ್ಡ್ ಯುವರ್ ಹ್ಯಾಂಡ್" ಎಂಬ ಕೃತಿಯ ಸೃಷ್ಟಿಗೆ ಕಾರಣವಾಯಿತು. ಹಾರ್ಮೋನಿಕಾ, ಹಲವಾರು ತಾಳ ವಾದ್ಯಗಳು ಮತ್ತು ಕೊಳಲುನ್ನೂ ಸಹ ಆತ ನುಡಿಸಬಲ್ಲವನಾಗಿದ್ದ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.