ಜಗನ್ನಾಥ ದಾಸರು (ಕ್ರಿ.ಶ.೧೭೨೮-೧೮೦೯) ಕನ್ನಡನಾಡಿನ ಹರಿದಾಸ ಪಂಥದ ಪ್ರಮುಖರಲ್ಲಿ ಒಬ್ಬರು.ಆಧ್ಯಾತ್ಮಿಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು.ಜಗನ್ನಾಥ ದಾಸನನ್ನು ತನ್ನ ಅಪರೋಕ್ಷ ಜ್ಞಾನದಿಂದ ರಂಗನೊಲಿದ ದಾಸ ಎಂದೂ ರಂಗೋಲೆ ಹಾಕುವ ಕಲಾ ಪರಿಣತಿಯಿದ್ದುದರಿಂದ ರಂಗೋಲಿ ದಾಸ ಎಂದು ಕರೆಯಲಾಗುತ್ತಿತ್ತು.
ಜನನ
ಇವರು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಟ್ಟಿ ಎಂಬ ಗ್ರಾಮದಲ್ಲಿ ಜನಿಸಿದರು.ತಂದೆ ನರಸಿಂಹಾಚಾರ್ಯರು, ತಾಯಿ ಲಕ್ಷ್ಮೀಬಾಯಿ. ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ.
ಜೀವನ
ಶ್ರೀನಿವಾಸನ ವಿದ್ಯಾಭ್ಯಾಸ ಮಂತ್ರಾಲಯದ ಸುಪ್ರಸಿದ್ದ ಶ್ರೀವರದೇಂದ್ರ ತೀರ್ಥರಲ್ಲಿ ಪಡೆದು,ಆಚಾರ್ಯ ಪಟ್ಟವನ್ನು ಪಡೆದ ನಂತರ ಮಾನ್ವಿಗೆ ಬಂದು ಶಿಷ್ಯರಿಗೆ ಪಾಠವನ್ನು ಹೇಳುತ್ತಾ ಗುರುಕುಲದ ಒಡೆಯರಾಗಿ ಘನ ಪಂಡಿತರೆಂದು ಪ್ರಸಿದ್ಧರಾದರು.ಇವರು ಗೋಪಾಲದಾಸರನ್ನು ಗುರುಗಳಾಗಿ ಸ್ವೀಕರಿಸಿದರು.ಗುರುವಿನ ಅಪ್ಪಣೆ ಯಂತೆ ಆತನು ಪಂಢರಪುರಿಗೆ ಹೋಗಿ, ಚಂದ್ರಭಾಗಾ ನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಜಗನ್ನಾಥ ವಿಠಲ ಎಂಬ ಅಂಕಿತವನ್ನು ಬರೆದಿದ್ದು ಕಲ್ಲೊಂದು ಅಲ್ಲಿ ಸಿಕ್ಕತು, ಅಂದಿನಿಂದ ಆತನು ಜಗನ್ನಾಥ ದಾಸ, ದೈವದತ್ತವಾದ ಅಂಕಿತದಲ್ಲಿ ದಿವ್ಯ ನಾಮಸಂಕೀರ್ತನೆ ಮಾಡುತ್ತಾ ಹೊರಟನು.
ಬೃಂದಾವನ
ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಬೃಂದಾವನದಲ್ಲಿ ಜಗನ್ನಾಥ ದಾಸರ ಕಂಭ ಇದೆ.
ಕೃತಿಗಳು
೧.ಹರಿಕಥಾಮೃತಸಾರವು ೩೨ ಸಂಧಿಗಳು ಮತ್ತು ಭಾಮಿನಿ ಷಟ್ಪದಿಯಲ್ಲಿ ರಚಿತವಾಗಿರುವ ಕೃತಿ.
ಇಲ್ಲಿನ ಮಾಧ್ವಮತ ತತ್ವ ನಿರೂಪಣೆ ಪ್ರಮಾಣಭೂತವಾದುದು . ಇದನ್ನು ದ್ವೈತ ಸಿದ್ಧಾಂತದ ಒಂದು ಪುಟ್ಟ ಕೋಶವೆನ್ನಬಹುದು.
೨.ತಂತ್ರಸಾರ - ಹಾಡು.
೩.ತತ್ವ ಸುವ್ವಾಲಿ - ತ್ರಿಪದಿ.
ಕೀರ್ತನೆಗಳು
೧.ಅರಿತವರಿಗತಿಸುಲಭ ಹರಿಯ ಪೂಜೆ |ಪ|
ಅರಿಯದವ ನಿರ್ಭಾಗ್ಯತರ ಲೋಕದೊಳಗೆ||ಅ.ಪ||
೨.ದಾಸೋಹಂ ತಾವು ದಾಸೋಹಂ |ಪ|
ವಾಸುದೇವ ವಿತತಾಘಸಂಘ ತವ ||ಅ.ಪ||
೩.ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ|ಪ| ಸಂಗಸುಖವನಿತ್ತು ಕಾಯೊ ಕರುಣಾ ಸಾಗರ|ಅ.ಪ||
೪.ಸಿರಿರಮಣ ತವಚರಣ ದೊರಕುವುದು ಹ್ಯಾಗಿನ್ನು ಪರಮಪಾಪಿಷ್ಠ ನಾನು|ಪ|.
ನರ ಹರಿಯೆ ನಿನ್ನ ನಾಮಸ್ಮರಣೆ ಮಾಡಿದೆ ನರಕಕ್ಕೆ ಗುರಿಯಾದೆನೊ ದೇವ||ಅ.ಪ||
Wikiwand in your browser!
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.