Remove ads
From Wikipedia, the free encyclopedia
ಗ್ರೇಟ್ ಬ್ರಿಟನ್ ಒಂದು ದ್ವೀಪ[೫], ಇದು ಯೂರೋಪ್ ಖಂಡದ ವಾಯುವ್ಯ ಭಾಗದಲ್ಲಿದೆ. ಇದು ವಿಶ್ವದ ಒಂಭತ್ತನೆಯ ಅತಿ ದೊಡ್ಡ ದ್ವೀಪವಾಗಿದೆ, ಹಾಗೂ ಯುರೋಪ್ನ ದೊಡ್ಡ ದ್ವೀಪವಾಗಿದೆ. ಇದರ ಜನಸಂಖ್ಯೆಯು 2009ರ ಮಧ್ಯದಲ್ಲಿ ಸುಮಾರು 61.8 ಮಿಲಿಯನ್ನಷ್ಟಿತ್ತು,[೩] ಇದು ಭೂಮಿ ಮೇಲಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮೂರನೆಯ ದ್ವೀಪವಾಗಿದೆ. ಗ್ರೇಟ್ ಬ್ರಿಟನ್ ಸುಮಾರು 1,000[೬] ಸಣ್ಣ ದ್ವೀಪಗಳು ಮತ್ತು ಉಪ ದ್ವೀಪಗಳಿಂದ ಸುತ್ತುವರೆದಿದೆ. ಐರ್ಲ್ಯಾಂಡ್ನ ದ್ವೀಪವು ಇದರ ಪಶ್ಚಿಮಕ್ಕೆ ಇದೆ. ರಾಜಕೀಯವಾಗಿ, ಗ್ರೇಟ್ ಬ್ರಿಟನ್ ದ್ವೀಪವು ಹಲವಾರು ದ್ವೀಪಗಳಿಂದ ಸುತ್ತುವರೆದಿದ್ದು ಅದರಲ್ಲಿ ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಮತ್ತು ವೇಲ್ಸ್ಗಳು ಒಳಗೊಂಡಿವೆ.
Native name:
| |
---|---|
Geography | |
Location | Northern Europe |
Coordinates | 53.826°N 2.422°W |
Archipelago | British Isles |
ವಿಸ್ತೀರ್ಣ | ೨,೧೯,೦೦೦ km೨ (೮೪,೬೦೦ sq mi)[೨] |
Area rank | 9th |
ಸಮುದ್ರ ಮಟ್ಟದಿಂದ ಎತ್ತರ | ೧,೩೪೪ m (೪,೪೦೯ ft) |
ಸಮುದ್ರ ಮಟ್ಟದಿಂದ ಎತ್ತರದ ಸ್ಥಳ | Ben Nevis |
Country | |
ಯುನೈಟೆಡ್ ಕಿಂಗ್ಡಂ | |
ಇಂಗ್ಲೆಂಡ್ Scotland Wales | |
Largest city | London |
Demographics | |
Population | approximately 61,792,000 (as of mid-2009)[೩] |
ಸಾಂದ್ರತೆ | ೨೭೭ /km೨ (೭೧೭ /sq mi) |
Ethnic groups | British (Cornish, English, Scottish & Welsh)[೪] |
ದ್ವೀಪದ ಪ್ರದೇಶವು ಗ್ರೇಟ್ಬ್ರಿಟನ್ ಮತ್ತು ಉತ್ತರ ಐರ್ಲ್ಯಾಂಡ್ನ ಯುನೈಟೆಡ್ ಕಿಂಗ್ಡಮ್ನ ಪ್ರಮುಖ ರಾಜ್ಯವಾಗಿದೆ, ಬಹುಪಾಲು ಯುನೈಟೆಡ್ಕಿಂಗ್ಡಮ್ನ ಕ್ಷೇತ್ರವು ಗ್ರೇಟ್ ಬ್ರಿಟನ್ನಲ್ಲಿದೆ. "ಗ್ರೇಟ್ ಬ್ರಿಟನ್" ಪದಗಳು (ಇದನ್ನು ’ಜಿಬಿ’ ಎಂದು ಕೂಡಾ ಚಿಕ್ಕದಾಗಿ ಬಳಸಲಾಗುತ್ತದೆ) 'ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಅಂಡ್ ನಾರ್ತರ್ನ್ ಐರ್ಲ್ಯಾಂಡ್' ದೇಶವನ್ನು ಸಾಂಪ್ರದಾಯಿಕವಾಗಿ ಹೇಳುವ ಚಿಕ್ಕದಾದ ರೂಪವಾಗಿದೆ, ಅಲ್ಲದೆ ಈಗ ’ಯುಕೆ' ಎಂದು ಹೇಳುವುದು ಇತ್ತೀಚೆಗೆ ಹೆಚ್ಚಾಗಿದೆ. ಇಂಗ್ಲೆಂಡ್, ಸ್ಕಾಟ್ಲ್ಯಾಂಡ್, ಮತ್ತು ವೇಲ್ಸ್ನ ಹೆಚ್ಚು ಭಾಗಗಳು ಗ್ರೇಟ್ ಬ್ರಿಟನ್ ದ್ವೀಪದಲ್ಲಿವೆ ಜೊತೆಗೆ ಈ ದೇಶಗಳ ರಾಜಧಾನಿಗಳು ಕೂಡ ಗ್ರೇಟ್ ಬ್ರಿಟನ್ನಲ್ಲಿವೆ ಅವು ಕ್ರಮವಾಗಿ: ಲಂಡನ್, ಎಡಿನ್ಬರ್ಗ್, ಮತ್ತು ಕಾರ್ಡಿಫ್.
1 ಮೇ 1707ರಂದು ಕ್ವೀನ್ ಆನ್ ಅವರ ನೇತೃತ್ವದಲ್ಲಿ ಆಕ್ಟ್ಸ್ ಆಫ್ ಯೂನಿಯನ್ 1707ನಂತೆ ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ದೇಶಗಳನ್ನು ಒಳಗೊಂಡಂತೆ ರಾಜಕೀಯ ಒಕ್ಕೂಟ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ನಿರ್ಮಾಣವಾಯಿತು.
ಯುನೈಟೆಡ್ ಕಿ೦ಗ್ಡಮ್ ಆಫ್ ಗ್ರೇಟ್ ಬ್ರಿಟನ್ ಹಾಗು ಐರ್ಲೆ೦ಡ್ ಅನ್ನು ಕಟ್ಟಲು,1801ರಲ್ಲಿ, ಹೊಸ ಆಕ್ಟ್ ಆಫ್ ಯೂನಿಯನ್ ಅಡಿಯಲ್ಲಿ, ಈ ದೇಶವು ಐರ್ಲ್ಯಾಂಡ್ ದೇಶದೊಂದಿಗೆ ವಿಲೀನವಾಯಿತು. ಐರಿಶ್ ವಾರ್ ಆಫ್ ಇ೦ಡಿಪೆಂಡೆನ್ಸ್ನ ನಂತರ, ಐರ್ಲ್ಯಾ೦ಡ್ನ ಬಹಳಷ್ಟು ಭಾಗವನ್ನು ಯೂನಿಯನ್ ವಶಪಡಿಸಿಕೊ೦ಡಿತು. ಈಗ ಈ ರಾಜ್ಯವನ್ನು ಯುನೈಟೆಡ್ ಕಿ೦ಗ್ಡಮ್ ಆಫ್ ಗ್ರೇಟ್ ಬ್ರಿಟನ್ ಹಾಗು ನಾರ್ಥ್ರನ್ ಐರ್ಲ್ಯಾ೦ಡ್ ಎಂದು ನಾಮಕರಣ ಮಾಡಲಾಗಿದೆ.
ಗ್ರೇಟ್ ಬ್ರಿಟನ್ ಯುನೈಟೆಡ್ ಕಿ೦ಗ್ಡಮ್ ಆಫ್ ಗ್ರೇಟ್ ಬ್ರಿಟನ್ ಹಾಗು ನಾರ್ಥ್ರನ್ ಐರ್ಲ್ಯಾ೦ಡ್ನ ಒಂದು ಅತೀ ದೊಡ್ಡ ದ್ವೀಪವಾಗಿದೆ ರಾಜಕೀಯವಾಗಿ, ಗ್ರೇಟ್ ಬ್ರಿಟನ್ ಇ೦ಗ್ಲೆ೦ಡ್, ಸ್ಕಾಟ್ಲ್ಯಾ೦ಡ್ ಹಾಗು ವೇಲ್ಸ್ ರಾಜ್ಯಗಳಿಗೂ ಸಹ ಅನ್ವಯಿಸುವುದರಿ೦ದ,[೭] ಇದು ಇನ್ನು ಹಲವಾರು ದ್ವೀಪಗಳಾದ ಐಲ್ ಆಫ್ ವೈಟ್, ಆ೦ಗ್ಲಿಸೆ,ದಿ ಐಲ್ಸ್ ಆಫ್ ಸಿಲ್ಲಿ, ಹೆಬ್ರಿಡ್ಸ್, ಹಾಗು ದ್ವೀಪ ಸಮೂಹಗಳಾದ ಒರ್ಕ್ನಿ ಹಾಗು ಶೆಟ್ಲ್ಯಾಂಡ್ಗಳನ್ನು ಸಹ ಒಳಗೊ೦ಡಿದೆ. ಸ್ವ೦ತ ಆಡಳಿತದ ಮೇಲೆ ಅವಲ೦ಬಿತವಾಗಿರುವ ರಾಜ್ಯದಲ್ಲಿ ಬರುವ ಪ್ರದೇಶಗಳಾದರೂ ಸಹ ತನ್ನದೇ ಆದ ಶಾಸನ ಹಾಗು ಕ೦ದಾಯ ತೆರಿಗೆಯ ವ್ಯವಸ್ಥೆಯನ್ನು ಹೊ೦ದಿರುವುದರಿ೦ದಾಗಿ, ಐಸ್ಲ್ ಆಫ್ ಮ್ಯಾನ್ ಹಾಗು ದಿ ಚಾನೆಲ್ ಆಫ್ ಐಲ್ಯಾ೦ಡ್ಗಳನ್ನು ಯುನೈಟೆಡ್ ಕಿ೦ಗ್ಡಮ್ನ ಒಂದು ಭಾಗವಾಗಿ ಪರಿಗಣಿಸಲಾಗುವುದಿಲ್ಲ.[೭][೮]
ಸ್ಕಾಟ್ಲ್ಯಾ೦ಡ್ನ ಜೇಮ್ಸ್ VI ಹಾಗು ಇ೦ಗ್ಲೆ೦ಡ್ನ I ನೇತೃತ್ವದಲ್ಲಿ ವೈಯಕ್ತಿಕ ಯುನಿಯನ್ನ ವ್ಯಾಪ್ತಿಯಲ್ಲಿ ಬರುವ ಯುನಿಯನ್ ಆಫ್ ಕ್ರೌನ್ಸ್ 1603ರಲ್ಲಿ ಯೂನಿಯನ್ ಆಫ್ ದಿ ಕಿ೦ಗ್ಡಮ್ಸ್ ಆಫ್ ಇ೦ಗ್ಲೆ೦ಡ್ ಹಾಗೂ ಸ್ಕಾಟ್ಲ್ಯಾ೦ಡ್ಗಳನ್ನು ರಚಿಸಿತು. 1707ರಲ್ಲಿ ಆಕ್ಟ್ಸ್ ಆಫ್ ಯೂನಿಯನ್ ಎರಡು ದೇಶಗಳ ಸ೦ಸತ್ತುಗಳನ್ನು ವಿಲೀನಗೊಳಿಸುವುದರ ಮೂಲಕ ಎರಡು ದೇಶಗಳನ್ನು ಜೋಡಿಸಿತು ಹಾಗು ಸ೦ಪೂರ್ಣವಾಗಿ ದ್ವೀಪವನ್ನು ಆವರಿಸಿರುವ೦ತೆ ಕಿ೦ಗ್ಡಮ್ ಆಫ್ ಗ್ರೇಟ್ ಬ್ರಿಟನ್ ಅನ್ನು ಸ್ಥಾಪಿಸಿತು.
ಯುರೋಪ್ ಖಂಡದ ವಾಯುವ್ಯ ದಿಕ್ಕಿನಲ್ಲಿ ಹಾಗು ಐರ್ಲ್ಯಾ೦ಡ್ನ ಪೂರ್ವದಲ್ಲಿ ಗ್ರೇಟ್ ಬ್ರಿಟನ್ ಸ್ಥಿತವಾಗಿದೆ. ಇದು ಖಂಡದಿಂದ ಬೇರ್ಪಡಲು ಕಾರಣವೆ೦ದರೆ, ಉತ್ತರದಲ್ಲಿನ ಸಾಗರ ಹಾಗು ಸ್ಟ್ರೈಟ್ಸ್ ಆಫ್ ಡೊವರ್ವರೆಗೂ ಹರಿಯುವ ೩೪ kilometres (೨೧ miles)ಇ೦ಗ್ಲಿಷ್ ಚಾನೆಲ್.[೯] ಉತ್ತರ-ದಕ್ಷಿಣ ಅಕ್ಷದಲ್ಲಿ, ಅಕ್ಷಾ೦ಶವು ಸುಮಾರು ಹತ್ತು ಡಿಗ್ರೀ ಅಷ್ಟು ಚಾಚಿದೆ ಹಾಗು 209,331 km² ರಷ್ಟು ವಿಸ್ತಾರವಾಗಿದೆ(80,823 ಸ್ಕ್ವೇರ್ ಮೈಲ್ಸ್).[೧೦] ಉತ್ತರದ ಚಾನೆಲ್, ಐರಿಶ್ ಸಾಗರ, ಹಾಗು ಸೆ೦ಟ್ ಜಾರ್ಜ್ ಚಾನೆಲ್ಗಳು ಐರ್ಲ್ಯಾ೦ಡ್ನ ದ್ವೀಪಗಳನ್ನು ಇತರ ದ್ವೀಪಗಳಿ೦ದ ಪಶ್ಚಿಮದಲ್ಲಿ ಬೇರ್ಪಡಿಸುತ್ತವೆ.[೧೧] ದ್ವೀಪವು ಬಾಹ್ಯರಚನೆಯಲ್ಲಿ ಚಾನೆಲ್ ಟುನೆಲ್ ನಿ೦ದ ಕಾ೦ಟಿನೆ೦ಟಲ್ ಯುರೋಪ್ಗೆ ಹೊ೦ದಿಕೊ೦ಡಿದೆ ಹಾಗು, ಇದು ಅತೀ ಉದ್ದದ ಸಮುದ್ರ ಒಳಭಾಗದಲ್ಲಿ ನಿರ್ಮಾಣವಾದ ರೈಲ್ವೆ ಟನೆಲ್ ಆಗಿದೆ, ಅಲ್ಲದೆ ಇದರ 1993ರಲ್ಲಿ ಪೂರ್ಣವಾಯಿತು. ಭೌಗೋಳಿಕವಾಗಿ, ಈ ದ್ವೀಪವು ಅತೀ ಕಡಿಮೆ, ಹಾಗು ತರ೦ಗಾ೦ತರಗಳಲ್ಲಿ ಇರುವ ಹಳ್ಳಿಗಾಡಿನ ಪ್ರದೇಶಗಳನ್ನು ಪೂರ್ವದಲ್ಲಿ ಹಾಗು ದಕ್ಷಿಣದಲ್ಲಿ ಹೊ೦ದಿವೆ, ಅಲ್ಲದೆ ಬೆಟ್ಟಗಳು ಹಾಗು ಗುಡ್ಡಗಳು ಪಶ್ಚಿಮದಲ್ಲಿ ಹಾಗು ಉತ್ತರದಲ್ಲಿ ಹೆಚ್ಚಾಗಿ ಕ೦ಡುಬರುತ್ತವೆ. ಇದನ್ನು ಸುಮಾರು 1,000 ಸಣ್ಣ ದ್ವೀಪಗಳನ್ನು ಹಾಗು ಕಿರುದ್ವೀಪಗಳು ಸುತ್ತುವರೆದಿವೆ.
ಎರಡು ತುದಿಗಳ ಅತೀ ಹೆಚ್ಚಿನ ದೂರವೆ೦ದರೆ 968 ಕಿಮಿ / 601.5 ಮೈಲ್ಸ್ (ಭೂಮಿಯ ತುದಿ, ಕಾರ್ನ್ವಾಲ್ ಹಾಗು ಜಾನ್ ಒ’ಗ್ರೋಟ್ಸ್ , ಕೆಯ್ತ್ನೆಸ್ ಮಧ್ಯೆ), ಅಥವಾ ರಾಷ್ತ್ರೀಯ ರಸ್ತೆ ಜಾಲಗಳಲ್ಲಿ ಸುಮಾರು 1,349 ಕಿಮಿ/ 838 ಮೈಲ್ಸ್ಗಳಷ್ಟಾಗುತ್ತದೆ.
ಜಾವಾ ಹಾಗು ಹೊ೦ಶುಗಳ ನಂತರದಲ್ಲಿ ಬರುವ ಮೂರನೆ ಅತೀ ದೊಡ್ಡ ದ್ವೀಪ ಇದಾಗಿದೆ.[೧೨]
ಈಗಿನ ಉತ್ತರ ಸಮುದ್ರದಲ್ಲಿ ಮುಳುಗಿರುವ ಇ೦ಗ್ಲೀಷ್ ಚಾನೆಲ್ ಅನ್ನು ಸುಮಾರು 450,000 ಹಾಗು 180,000 ರಷ್ಟು ವರ್ಷ ಹಳೆಯ ಕಾಲದಲ್ಲಿ ಎರಡು ಮಹಾದುರ೦ತದ ಗ್ಲೇಶಿಯಲ್ ರೀತಿಯ ಪ್ರವಾಹದಿ೦ದಾಗಿ ವಿಲ್ಡ್-ಅರ್ಟೊಸ್ ಅನ್ಟಿಕ್ಲೈನ್, ಇದು ಒಂದು ಪ್ರೊಲಾಜಿಕಲ್ ಸರೋವರದ ಹಿ೦ಭಾಗದಲ್ಲಿ ಉ೦ಟಾದ ಶಿಖೆಯ ಛಿದ್ರತೆಯಿ೦ದಾಗಿ ಉ೦ಟಾಗಿದೆ ಎಂದು ಪರಿಗಣಿಸಲಾಗಿತ್ತು.[೧೩] ಸುಮಾರು 10,000 ರಷ್ಟು ಹಳೆಯ ಕಾಲದಲ್ಲಿ, ಡೆವೆನ್ಷಿಯನ್ ಗ್ಲೇಸಿಏಶನ್ ನ ಅತೀ ಕಡಿಮೆ ಸಮುದ್ರ ಮಟ್ಟದಲ್ಲಿ, ಗ್ರೇಟ್ ಬ್ರಿಟನ್ ದ್ವೀಪವಾಗಿರಲಿಲ್ಲ, ಆದರೆ ವಾಯುವ್ಯ ಯುರೋಪ್ ನ ದಿಕ್ಕಿನಲ್ಲಿನ ಎತ್ತರದ ಪ್ರದೇಶದಲ್ಲಿ, ಯುರೇಶಿಯನ್ ಐಸ್ ಪದರದ ಅಡಿಯಲ್ಲಿ ಭಾಗಶಃ ಹೂತುಹೋಗಿತ್ತು ಇ೦ದಿನ ಮಟ್ಟಕ್ಕಿ೦ತ ಕಡಿಮೆ 120 metres (390 ft)ಸಮುದ್ರ ಮಟ್ಟದಲ್ಲಿ, ಹಾಗು ಉತ್ತರ ಸಮುದ್ರ ಪ್ರದೇಶ ತೇವಾ೦ಶ ರಹಿತವಾಗಿತ್ತು, ಹಾಗು ಇದು ಯುರೋಪ್ಗೆ ಭೂ ಸೇತುವೆಯಾಗಿ ಕಾರ್ಯವನ್ನು ನಿರ್ವಹಿಸುತ್ತಿತ್ತು, ಇದನ್ನು ಡಾಗರ್ ಲ್ಯಾ೦ಡ್ ಎಂದು ಹೆಸರಿಸಲಾಗಿದೆ. ಗ್ಲೇಶಿಯಲ್ ಕಾಲಾವಧಿಯ, ಮ೦ಜುಗಡ್ಡೆಯ ಕಾಲದ ಕೊನೆಯಲ್ಲಿ ಸಮುದ್ರ ಮಟ್ಟವು ನಿಧಾನವಾಗಿ ಕಡಿಮೆಯಾಗಿ ನಂತರದಲ್ಲಿ ಇದು ಸಾಮಾನ್ಯವಾಗಿ, ಅ೦ದರೆ ಡಾಗರ್ಲ್ಯಾ೦ಡ್ ಉತ್ತರದ ಸಮುದ್ರದಲ್ಲಿ ಮುಳುಗಿಹೋಯಿತು, ಇದರಿ೦ದಾಗಿ ಹಿ೦ದಿದ್ದ ಬ್ರಿಟೀಶ್ ಪೆನಿನ್ಸುಲ ಯುರೋಪಿಯನ್ನ ಪ್ರಮುಖ ಪ್ರದೇಶಗಳಿ೦ದ ಸುಮಾರು 6500 ಬಿಸಿ.ಯಲ್ಲಿ ಬೇರ್ಪಟ್ಟಿತು.[೧೪]
ಯುರೋಪಿಯನ್ ಮುಖ್ಯ ಭೂಭಾಗಗಳಿಂದ ನೆಲದ ಸೇತುವೆಗಳನ್ನು ಯಾರು ದಾಟಿದರೋ ಅದೇ ಜನಗಳು ದ್ವೀಪದಲ್ಲಿ ಮೊದಲು ವಾಸಿಸಿದರು. ಕೆಲವು 500,000 ವರ್ಷಗಳ ಹಿಂದಿನ ಆದಿ ಮಾನವರ ಜಾಡುಗಳು ಕಂಡುಬಂದಿವೆ (ಬಾಕ್ಸ್ಗ್ರವ್ ಕ್ವಾರಿ, ಸಸ್ಸೆಕ್ಸ್ನಲ್ಲಿ)[೧೫] ಮತ್ತು ಆಧುನಿಕ ಮಾನವರ ಜಾಡು ಸುಮಾರು 30,000 ವರ್ಷಗಳ ಹಳೆಯದು. ಸುಮಾರು 10,000 ವರ್ಷಗಳ ಹಿಂದಿನವರೆಗೆ, ಗ್ರೇಟ್ ಬ್ರಿಟನ್ ಐರ್ಲ್ಯಾಂಡಿಗೆ ಸೇರಿತ್ತು, ಮತ್ತು ಈಗಿನ ಡೆನ್ಮಾರ್ಕ್ ಮತ್ತು ನೆದರ್ಲ್ಯಾಂಡ್ ಎನಿಸಿಕೊಳ್ಳುವ ಆಗಿನ ಕೆಳಗಿನ ಜೌಗು ಪ್ರದೇಶಗಳ ಪಟ್ಟಿಯ ಖಂಡಕ್ಕೆ 8,000ಷ್ಟು ಇತ್ತೀಚೆಗೆ ಸೇರಿಕೊಂಡಿತ್ತು. ಬ್ರಿಸ್ಟಲ್ ಹತ್ತಿರದ ಚೆಡ್ಡರ್ ಗಾರ್ಜ್ನಲ್ಲಿ, ಪ್ರಾಣಿ ಜಾತಿಯ ಮುಖ್ಯ ಭೂಭಾಗ ಯೂರೋಪ್ಗೆ ಸ್ವಾಭಾವಿಕವಾಗಿರುವ ಚಿಗರೆಗಳ, ಕಂದು ಬಣ್ಣದ ಕರಡಿಗಳ, ಮತ್ತು ಕಾಡು ಕುದುರೆಗಳ ಅವಶೇಷಗಳ ಜೊತೆಗೆ ಸುಮಾರು 7150 ಬಿಸಿ ಹಿಂದಿನ ’ಚೆಡ್ಡರ್ ಮಾನವ’ ಎಂಬ ಮಾನವ ಅಸ್ಥಿಪಂಜರಗಳು ದೊರೆತಿವೆ. ಆದ್ದರಿಂದ, ಪ್ರಾಣಿಗಳು ಮತ್ತು ಮನುಷ್ಯರು ಮುಖ್ಯ ಭೂಭಾಗ ಯೂರೋಪ್ ಮತ್ತು ಗ್ರೇಟ್ ಬ್ರಿಟನ್ಗಳ ಮಧ್ಯೆ ದಾಟುವ ಜಾಗದಲ್ಲಿ ಓಡಾಡಿರಬಹುದು.[೧೬] ಪದರಿನ ಸಮಸ್ಥಿತಿಯ ಕುಸಿತದಿಂದ ಮತ್ತು ನೀರ್ಗಲ್ಲನದಿಯ ಕರಗುವಿಕೆಯಿಂದ ಸಮುದ್ರದ ಮಟ್ಟವು ಮೇಲೆ ಹೋದಾಗ ಪ್ಲೀಸ್ಟೊಸೀನ್ ಹಿಮಯುಗದ ಅಂತ್ಯದಲ್ಲಿ ಗ್ರೇಟ್ ಬ್ರಿಟನ್ ಒಂದು ದ್ವೀಪವಾಯಿತು.
ಜಾನ್ ಟಿ. ಕೋಖ್ ಮತ್ತು ಇತರರ ಪ್ರಕಾರ, ಕಂಚಿನ ಯುಗದ ಕೊನೆಯಲ್ಲಿ ಬ್ರಿಟನ್ ಹಡಗಿನ ವ್ಯಾಪಾರದ-ಜಾಲದ ಅಟ್ಲಾಂಟಿಕ್ ಕಂಚಿನ ಯುಗ ಎಂದು ಕರೆಯಲ್ಪಡುವ ಸಂಸ್ಕೃತಿಯ ಭಾಗವಾಗಿತ್ತು, ಇದಕ್ಕೆ ಐರ್ಲ್ಯಾಂಡ್, ಫ್ರಾನ್ಸ್, ಸ್ಪೇನ್ ಮತ್ತು ಪೋರ್ಚುಗಲ್ಗಳೂ ಇದರಲ್ಲಿ ಸೇರಿದ್ದವು ಹಾಗೂ ಅಲ್ಲಿ ಲೋಹದ ಯುಗದ ಭಾಷೆಗಳು ಹುಟ್ಟಿಕೊಂಡವು.[೧೭][೧೮][೧೯][೨೦][೨೧][೨೨]
ಇದರ ಕಬ್ಬಿಣ ಯುಗದ ನಿವಾಸಿಗಳು ಬ್ರಿಟನ್ನರೆಂದು ಹೆಸರಾಗಿವೆ, ಇವರು ಲೋಹದ ಯುಗದ ಭಾಷೆಯನ್ನು ಮಾತನಾಡುವ ಗುಂಪುಗಳು. ರೋಮನ್ನರು ದ್ವೀಪದ ಬಹು ಭಾಗವನ್ನು ಗೆದ್ದರು (ಉತ್ತರ ಇಂಗ್ಲೆಂಡ್ನಲ್ಲಿ ಹೇಡ್ರಿಯನ್ ಗೋಡೆಯವರೆಗೆ) ಮತ್ತು ಇದು ಬ್ರಿಟಾನಿಯ ದ ಪ್ರಾಚೀನ ರೋಮನ್ ಪ್ರಾಂತವಾಯಿತು. ರೋಮನ್ ಸಾಮ್ರಾಜ್ಯದ ಪತನದ 500 ವರ್ಷಗಳ ನಂತರ, ದ್ವೀಪದ ದಕ್ಷಿಣ ಮತ್ತು ಪೂರ್ವದ ಬ್ರಿಟನ್ನರು ಜರ್ಮನಿಗೆ ಸಂಬಂಧಪಟ್ಟ ಭಾಷೆಗಳನ್ನು ಮಾತನಾಡುವ ಬುಡಕಟ್ಟು ಜನರಿಂದ (ಆಂಗಲ್ಗಳು, ಸಾಕ್ಸನ್ಗಳು, ಮತ್ತು ಜೂಟ್ಸ್ಗಳು, ಇವರೆಲ್ಲರನ್ನೂ ಒಟ್ಟಾಗಿ ಅನೇಕ ಸಲ ಆಂಗ್ಲೊ-ಸಾಕ್ಸನ್ಗಳು ಎಂದು ಕರೆಯುತ್ತಾರೆ) ವಿಲೀನಗೊಂಡರು ಅಥವ ಸ್ಥಳಾಂತರಗೊಂಡರು. ಸುಮಾರು ಅದೇ ಸಮಯದಲ್ಲಿ ಐರ್ಲ್ಯಾಂಡಿನಿಂದ ಬಂದ ಸ್ಕಾಟ್ಲ್ಯಾಂಡ್ ಸಂಬಂಧಪಟ್ಟ ಬುಡಕಟ್ಟಿನ ಜನರು ಉತ್ತರ-ಪಶ್ಚಿಮದ ಭಾಗವನ್ನು ದಾಳಿ ಮಾಡಿದರು, ಉತ್ತರ ಬ್ರಿಟನ್ನ ಬ್ರಿಟನ್ನರು ಹಾಗೂ ಪಿಕ್ಟ್ಗಳನ್ನೂ ವಿಲೀನಗೊಳಿಸಿಕೊಂಡರು, ಕಡೆಯಲ್ಲಿ ಸ್ಕಾಟ್ಲ್ಯಾಂಡ್ ಅಧಿಪತ್ಯವನ್ನು 9ನೇ ಶತಮಾನದಲ್ಲಿ ರೂಪಿಸಿದರು. ಸ್ಕಾಟ್ಲ್ಯಾಂಡಿನ ದಕ್ಷಿಣ-ಪೂರ್ವ ಭಾಗವನ್ನು ಆಂಗಲ್ಗಳು ವಸಾಹತುವನ್ನಾಗಿಸಿದರು ಮತ್ತು ರೂಪಿಸಿದರು, 1018ರ ವರೆಗೆ ಇದು ನಾರ್ತಂಬ್ರಿಯ ಅಧಿಪತ್ಯದ ಭಾಗವಾಗಿತ್ತು. ಅಂತಿಮವಾಗಿ, ಆಂಗಲ್ಗಳ ನಂತರ ಬ್ರಿಟನ್ನ ದಕ್ಷಿಣ-ಪೂರ್ವ ಜನಸಂಖ್ಯೆಯನ್ನು ಇಂಗ್ಲಿಷ್ ಜನರೆಂದು ಉಲ್ಲೇಖಿಸಿದರು.
ಬ್ರಿಟನ್ನರನ್ನು ಜರ್ಮನ್ಗೆ ಸಂಬಂಧಪಟ್ಟ ಭಾಷೆಯನ್ನು ಮಾತನಾಡುವವರು ವೆಲ್ಷ್ ಎಂದು ಕರೆಯುತ್ತಾರೆ. ಈ ಪದವು ಪ್ರತ್ಯೇಕವಾಗಿ ವೇಲ್ಸ್ನಲ್ಲಿ ವಾಸಿಸುವ ಜನರಿಗೆ ಈಗ ಅನ್ವಯಿಸುತ್ತದೆ, ಆದರೆ ಇದು ವಾಲಸ್ ಎಂಬ ಪದವನ್ನೂ ಉಳಿಸಿಕೊಂಡಿದೆ, ಮತ್ತು ಎರಡನೇ ಉಚ್ಚಾರಾಂಶವಾದ ಕಾರ್ನ್ವಾಲ್ನಲ್ಲಿ ಕೂಡ. ಕುಮ್ರಿ , ಬ್ರಿಟನ್ನರು ತಮ್ಮನ್ನು ಬಣ್ಣಿಸಿಕೊಳ್ಳಲು ಬಳಸುವ ಹೆಸರಿದು, ಇದೇ ರೀತಿ ವೇಲ್ಸ್ನ ಜನರನ್ನು ಆಧುನಿಕ ವೆಲ್ಷ್ ಎಂದು ಕರೆಯುತ್ತಾರೆ, ಆದರೆ ಕುಂಬ್ರಿಯ ಎಂಬ ಇಂಗ್ಲಿಷ್ ಹೆಸರಿನಲ್ಲೂ ಉಳಿದುಕೊಂಡಿದೆ. 9ನೆಯ ಶತಮಾನದಲ್ಲಿ, ಉತ್ತರ ಇಂಗ್ಲಿಷ್ ರಾಜ್ಯಗಳ ಡ್ಯಾನಿಶ್ ಆಕ್ರಮಿತ ಪ್ರದೇಶಗಳು ಡ್ಯಾನಿಶ್ ನಿಯಂತ್ರಣದಲ್ಲಿಯೇ ಇದ್ದವು. (ಒಂದು ಪ್ರದೇಶವನ್ನು ಡೇನ್ಲಾ ಎಂದು ಕರೆಯಲಾಗುತ್ತಿತ್ತು). ಹತ್ತನೆಯ ಶತಮಾನದಲ್ಲಿ ಇಂಗ್ಲಿಷ್ ರಾಜ್ಯಗಳು ಒಬ್ಬನೇ ಆಡಳಿತಗಾರನ ಅಡಿಯಲ್ಲಿದ್ದವು. 1066ರಲ್ಲಿ, ಇಂಗ್ಲೆಂಡ್ ನಾರ್ಮನ್ನರಿಂದ ಸೋಲಲ್ಪಟ್ಟಿತು, ಅವರು ಫ್ರೆಂಚ್ ಆಡಳಿತವನ್ನು ಪರಿಚಯಿಸಿ ಕೊನೆಯಲ್ಲಿ ಸಮೀಕರಿಸಲಾಯಿತು. 1282ರಲ್ಲಿ ವೇಲ್ಷ್ ಆಂಗ್ಲೋ-ನಾರ್ಮನ್ ನಿಯಂತ್ರಣದಡಿಯಲ್ಲಿ ಬಂದಿತು, ಅಧಿಕೃತವಾಗಿ 16ನೆಯ ಶತಮಾನದಲ್ಲಿ ಇಂಗ್ಲೆಂಡ್ ಜೊತೆಯಲ್ಲಿ ಸೇರಿತು.
20 ಅಕ್ಟೋಬರ್ 1604ರಂದು ಕಿಂಗ್ ಜೇಮ್ಸ್ (ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ ಎರಡರ ಗದ್ದುಗೆ ಏರಿ ಯಶಸ್ವಿಯಾಗಿ ಹೆಸರು ಗಳಿಸಿದ) ತನ್ನನ್ನು ತಾನು "ಕಿಂಗ್ ಆಫ್ ಗ್ರೇಟ್ ಬ್ರಿಟನ್, ಫ್ರಾನ್ಸ್ ಅಂಡ್ ಐರ್ಲ್ಯಾಂಡ್" ಎಂದು ಘೋಷಿಸಿಕೊಂಡ.[೨೩] ಆದಾಗ್ಯೂ, ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ 1707ರವರೆಗೆ ಬೇರೆ ದೇಶಗಳಾಗಿ ತಮ್ಮ ಪಾರ್ಲಿಮೆಂಟ್ ಹೊಂದಿದ್ದವು. 1 ಮೇ 1707ರಲ್ಲಿ ಒಂಟಿ ಸಂಯುಕ್ತ ಪಾರ್ಲಿಮೆಂಟ್ನೊಂದಿಗೆ ಯುನೈಟೆಡ್ ಕಿಂಗ್ಡಮ್ ಸೃಷ್ಟಿಯಾಗಲು ಕಾರಣವಾಯಿತು. ಟ್ರೀಟಿ ಆಫ್ ಯೂನಿಯನ್ ಎಂಬುದು "ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್"ನ ಎಲ್ಲಾ ರಾಜ್ಯಗಳ ದ್ವೀಪಗಳನ್ನು ಸೂಚಿಸುತ್ತದೆ. ಎಲ್ಲಾ ಪುಸ್ತಕಗಳಲ್ಲಿ, "ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್"ನಲ್ಲಿ 1707 ಮತ್ತು 1800ರ ಅವಧಿಯಲ್ಲಿದ್ದ ಎಲ್ಲಾ ದ್ವೀಪಗಳನ್ನು ವಿವರಿಸುತ್ತವೆ.
ಹಳೆಯ ಹೆಸರುಗಳಲ್ಲಿನ ಪದಗಳಿಗೆ ಸಂಬಂಧಿಸಿದಂತೆ ಬ್ರಿಟನ್ನ ಮೂಲ ಹೆಸರನ್ನು ಸೂಚಿಸಿದ್ದು ಅರಿಸ್ಟಾಟಲ್ (c. 384–322 BC), ಆತನ ಪುಸ್ತಕ ಆನ್ ದಿ ಯೂನಿವರ್ಸ್, ಸಂಪುಟ. III.ರಲ್ಲಿ ಆತನ ಕೆಲಸಗಳನ್ನು ನಮೂದಿಸಲು, "... ಸಾಗರದಲ್ಲಿ , ಎರಡು ದ್ವೀಪಗಳಿವೆ , ಮತ್ತು ಅವು ತುಂಬಾ ದೊಡ್ಡವು, ಅವನ್ನು ಬ್ರಿಟಾನಿಕ್, ಅಲ್ಬೀನಿಯನ್ ಮತ್ತು ಐಯೆರ್ನಾ ಎಂದು ಕರೆಯಲಾಗುತ್ತದೆ". 2,000 ವರ್ಷಗಳಿಂದ ಕುದುರುಗಡಲಿಗೆ ಒಂದೇ ಹೆಸರಿದೆ: ದ್ವೀಪದ ಗುಂಪನ್ನು ವಿವರಿಸಲು ಭೂಗೋಳ ಶಾಸ್ತ್ರಜ್ಞರು ಬಳಸಿದ ಪದಗಳಿಂದ ಬ್ರಿಟಿಶ್ ದ್ವೀಪಗಳ ಹೆಸರುಗಳು ಬಂದಿವೆ. ಪ್ಲೈನಿ ದಿ ಎಲ್ಡರ್ (c. 23–79 AD) ಆತನ ನ್ಯಾಚುರಲ್ ಹಿಸ್ಟರಿ ಯ (iv.xvi.102) ಗ್ರೇಟ್ ಬ್ರಿಟನ್ ದಾಖಲೆಗಳಲ್ಲಿರುವಂತೆ : "ಇದು ಆಲ್ಬಿಯನ್ ಎಂದು ಹೆಸರಾಗಿತ್ತು."
ಗ್ರೇಟ್ ಬ್ರಿಟನ್ನ ಮೊದಲ ಹೆಸರು ಆಲ್ಬಿಯನ್ (Ἀλβίων) ಅಥವಾ ಇನ್ಸುಲಾ ಅಲ್ಬಿಯೋನಮ್ , ಲ್ಯಾಟಿನ್ನ ಆಲ್ಬಸ್ ಅರ್ಥ ಬಿಳಿ , ಅಥವಾ "island of the Albiones" ಮೊದಲು ನಮೂದಿತವಾದದ್ದು ಪೈಥಿಯಾಸ್ನ ಮಸ್ಸಾಲಿಯೊಟ್ ಪೆರಿಪ್ಲಸ್ನಲ್ಲಿ.
ಬ್ರಿಟನ್ ಹೆಸರು ಲ್ಯಾಟಿನ್ನ ಬ್ರಿಟಾನಿಯಾ ಅಥವಾ Brittānia , ಬ್ರಿಟನ್ನವರ ಭೂಮಿಯಿಂದ ಬಂದಿದೆ. ಹಳೆಯ ಇಂಗ್ಲಿಷ್ ಪದವನ್ನು ಪ್ರೆಂಚ್ ಪದಗಳಾದ Breoton, Breoten, Bryten, Breten ಗಳಿಂದ ಬದಲಾಯಿಸಲಾಗಿದೆ (Breoton-lond, Breten-lond ಕೂಡಾ). ಕ್ರಿಸ್ತ ಪೂರ್ವ ಮೊದಲನೆಯ ಶತಮಾನದಲ್ಲಿ ರೋಮನ್ನರಿಂದ ಬ್ರಿಟಾನಿಯಾ ಹೆಸರು ಸೂಚಿಸಲ್ಪಟ್ಟಿತು. ಸುಮಾರು 320ಬಿಸಿಯಲ್ಲಿ ಪುರಾತನ ಗ್ರೀಕ್ ಪ್ರಯಾಣಿಕ ಪೈಥಿಯಾಸ್ರ ಬರವಣಿಗೆಯಿಂದ ಪ್ರಾರಂಭವಾಯಿತು.
ಈ ಪ್ರಿಟಾನಿಕ್ ದ್ವೀಪದ ಜನರನ್ನು Πρεττανοι, ಪ್ರಿಟೆನಿ ಅಥವಾ ಪ್ರಿಟನಿ ಎನ್ನಲಾಗುತ್ತದೆ.[೨೪] ಪ್ರಿಟೆನಿ ಯು ವೆಲ್ಷ್ ಭಾಷೆಯ Prydain ಪದದ ಮೂಲ, ಬ್ರಿಟನ್ ಪದವು ಗೊಯಿಡೆಲಿಕ್ ಪದ Cruithneದಿಂದ ಬಳಕೆಗೆ ಬಂದಿದೆ.[೨೫] ಕೊನೆಯದಾಗಿ ಪಿಕ್ಟ್ಸ್ ಅಥವಾ ಕ್ಯಲೆಡೋನಿಯನ್ಸ್ ಎಂದು ರೋಮನ್ನರಿಂದ ಕರೆಯಲ್ಪಟ್ಟಿತು.
ಹಳೆಯ ಇಂಗ್ಲಿಷ್ ಅವಧಿಯ ನಂತರ, ಬ್ರಿಟನ್ ಪದವನ್ನು ಐತಿಹಾಸಿಕ ಪದವಾಗಿ ಮಾತ್ರ ಬಳಸಲಾಗುತ್ತಿತ್ತು. "ಗ್ರೇಟ್ ಬ್ರಿಟನ್" ಪದಗಳನ್ನು ಮೊಟ್ಟ ಮೊದಲಿಗೆ 1474ರಲ್ಲಿ ಅಧಿಕೃತವಾಗಿ ಬಳಸಲಾಯಿತು, ಇಂಗ್ಲೆಂಡ್ನ ಎಡ್ವರ್ಡ್ IV ನ ಮಗಳು ಸಿಸಿಲಿ ಮತ್ತು ಸ್ಕಾಟ್ಲ್ಯಾಂಡ್ನ ಜೇಮ್ಸ್ IIIನ ಮಗ ಜೇಮ್ಸ್ ಅವರುಗಳ ಮದುವೆಯ ಪ್ರಸ್ತಾಪದ ಸಮಯದಲ್ಲಿ ಈ ಹೆಸರನ್ನು ವರ್ಣಿಸಲಾಗಿದ್ದು ಹೀಗೆ "this Nobill Isle, callit Gret Britanee." ಇದನ್ನು ಮತ್ತೆ 1604ರಲ್ಲಿ ಮತ್ತೆ ಬಳಸಲಾಯಿತು.[೨೬]
"ಗ್ರೇಟ್ ಬ್ರಿಟನ್" ಹೆಚ್ಚಾಗಿ "ಯುನೈಟೆಡ್ ಕಿಂಗ್ಡಮ್ ಆಫ್ ಗ್ರೇಟ್ ಬ್ರಿಟನ್ ಮತ್ತು ನಾರ್ಥರ್ನ್ ಐರ್ಲ್ಯಾಂಡ್" (UK) ಅನ್ನು ಸೂಚಿಸುತ್ತದೆ. ಇದು ಅತಿದೊಡ್ಡ ದ್ವೀಪವನ್ನು ಸೂಚಿಸುತ್ತದೆ, ಅಥವಾ ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಮತ್ತು ವೇಲ್ಷ್ನ ಒಂದು ಘಟಕ (ಈ ಮೂರು ದೇಶಗಳು ಚಿಕ್ಕ ದ್ವೀಪಗಳನ್ನು ಒಳಗೊಂಡಿವೆ). ಇದು ಉತ್ತರ ಐರ್ಲ್ಯಾಂಡನ್ನು ಒಳಗೊಂಡಿಲ್ಲ.[೨೭]
1975ರಲ್ಲಿ ಸರ್ಕಾರವು ಬ್ರಿಟನ್ ಎಂಬ ಪದವನ್ನು ದೃಢೀಕರಿಸಿತು, ಗ್ರೇಟ್ ಬ್ರಿಟನ್ ಅಲ್ಲ, ಇದನ್ನು ಯುನೈಟೆಡ್ ಕಿಂಗ್ಡಮ್ನ ಚಿಕ್ಕ ಹೆಸರಾಗಿ ಕೂಡ ಬಳಸಬಹುದು.[೨೮] ಬ್ರಿಟಿಶ್ ಎಂಬುದು ಯುನೈಟೆಡ್ ಕಿಂಗ್ಡಮ್ನ ಎಲ್ಲ ಜನರಿಗೂ ಅನ್ವಯಿಸುತ್ತದೆ — ಇದರಲ್ಲಿ ವೆಲ್ಷ್, ಸ್ಕಾಟಿಶ್, ಇಂಗ್ಲಿಷ್, ಮತ್ತು ಉತ್ತರ ಐರಿಶ್ ಕೂಡಾ ಸೇರುತ್ತವೆ.[೨೯]
GB ಮತ್ತು GBR ಎಂಬ ಸಂಕ್ಷಿಪ್ತ ಪದಗಳನ್ನು ಅಂತರರಾಷ್ಟ್ರೀಯ ಸಂಕೇತ ಭಾಷೆಯಾಗಿ ಯುನೈಟೆಡ್ ಕಿಂಗ್ಡಮ್ನ ಸಮಾನಾರ್ಥಕ ಪದವಾಗಿ ಬಳಸುತ್ತಾರೆ. ಉದಾಹರಣೆಗಳೆಂದರೆ: ಯೂನಿವರ್ಸಲ್ ಪೋಸ್ಟಲ್ ಯೂನಿಯನ್ Archived 25 January 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಅಂತರರಾಷ್ಟ್ರೀಯ ಕ್ರೀಡಾ ತಂಡಗಳು, NATO, ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಸ್ಟ್ಯಾಂಡರ್ಡೈಸೇಶನ್ ದೇಶದ ಸಂಕೇತಗಳು ISO 3166-2 ಮತ್ತು ISO 3166-1 ಆಲ್ಫಾ-3, ಮತ್ತು ಅಂತರರಾಷ್ಟ್ರೀಯ ಲೈಸೆನ್ಸ್ ಪ್ಲೇಟ್ ಸಂಕೇತಗಳು.
ಇಂಟರ್ನೆಟ್ನಲ್ಲಿ, .ukಯನ್ನು ಯುನೈಟೆಡ್ ಕಿಂಗ್ಡಮ್ ದೇಶದ ಸಂಕೇತವಾಗಿ ಬಳಸಲಾಗುತ್ತದೆ. .gb ಯನ್ನು ಕೂಡಾ ಮೇಲ್ಮಟ್ಟದ ಡೊಮೈನ್ ಆಗಿ ಬಳಸಲಾಗುತ್ತದೆ, ಆದರೆ ಹೊಸ ನೊಂದಣಿಗಳನ್ನು ತೆಗೆದುಕೊಳ್ಳುತ್ತಿಲ್ಲ.
ದ್ವೀಪಗಳ ಚಿಕ್ಕದಾದ ಸ್ಥಳದ ವಿಸ್ತೀರ್ಣವು, ಸಾಪೇಕ್ಷವಾಗಿ ಕೊನೆಯ ಐಸ್ ಯುಗದಿಂದ ಈಚೆಗೆ ವೃದ್ದಿಯಾದ ಹ್ಯಾಬಿಟ್ಯಾಟ್ (ಸಸ್ಯ ಅಥವಾ ಪ್ರಾಣಿ ಸಹಜವಾಗಿ ಹುಟ್ಟಿ ಬೆಳೆಯುವ ಸ್ಥಳ)ಗಳ ಇತ್ತೀಚಿನ ಕಾಲ, ಮತ್ತು ಯುರೋಪ್ ಭೂಖಂಡದಿಂದ ಬ್ವೀಪವು ಭೌತಿಕವಾಗಿ ಬೇರೆಯಾಗಿರುವುದು, ಮತ್ತು ಋತುಗಳ ಮಾರ್ಪಾಡುಗಳ ಪರಿಣಾಮಗಳ ಫಲಿತಾಂಶವಾಗಿ, ಪ್ರಾಣಿ ವೈವಿಧ್ಯತೆಯು ವಿನಮ್ರವಾಗಿದೆ.[೩೧] ಗ್ರೇಟ್ ಬ್ರಿಟನ್ ಕೈಗಾರಿಕೀಕರಣ ಮತ್ತು ನಗರೀಕರಣವನ್ನು ಹೆಚ್ಚಿಸುವಿಕೆಯನ್ನು ಸಹ ಒಳಗೊಂಡಿದ್ದು, ಸಮಗ್ರ ತಳಿಗಳ ನಾಶಕ್ಕೆ ಇದು ಸಹ ಕಾರಣವಾಯಿತು.[೩೨] 20ನೆಯ ಶತಮಾನದ ಸಮಯದಲ್ಲಿ UKನಲ್ಲಿ 100 ತಳಿಗಳು ನಿರ್ನಾಮಗೊಂಡಿವೆ, ನಿರ್ನಾಮವಾಗುವ ವೇಗದ ಹಿನ್ನೆಲೆಯು ಸುಮಾರು 100 ಪಟ್ಟಿನದು ಎಂದು 2006ರಿಂದ ನಡೆದ DEFRA ಅಧ್ಯಯನವು ಸೂಚಿಸಿದೆ.[೩೩] ಏನೇ ಆದರೂ, ಕಂದು ಇಲಿ, ಕೆಂಪು ನರಿ, ಮತ್ತು ಪರಿಚಯಿಸಿದ ಬೂದು ಅಳಿಲುಗಳಂತಹ, ಕೆಲವು ತಳಿಗಳು, ನಗರದ ಪ್ರದೇಶಗಳಿಗೆ ಚೆನ್ನಾಗಿ ಹೊಂದಿಕೊಂಡಿವೆ.
ಹೆಗ್ಗಣಗಳು ಗ್ರೇಟ್ ಬ್ರಿಟನ್ನ ಸಸ್ತನಿ ಪ್ರಾಣಿ ವರ್ಗಗಳ ಸಂಪೂರ್ಣ ಸಂಖ್ಯೆಯ 40% ನಷ್ಟಿವೆ. ಈ ಸಸ್ತನಿ ವರ್ಗಗಳಲ್ಲಿ ಅಳಿಲುಗಳು, ಮೂಷಕಗಳು, ವೋಲ್ಗಳು, ಇಲಿಗಳು ಮತ್ತು ಇತ್ತೀಚಿಗೆ ಮರುಪರಿಚಯಿಸಿದ ಯುರೋಪಿನ ನೀರುನಾಯಿಗಳು ಒಳಗೊಂಡಿವೆ.[೩೨] ಅಲ್ಲಿ ಮೊಲಗಳು, ಉದ್ದಕಿವಿಗಳ ಮೂಲಗಳು, ಮುಳ್ಳುಹಂದಿಗಳು, ಮೂಗಿಲಿಗಳು, ಮುಖಮಲ್ ಹೆಗ್ಗಣಗಳು ಮತ್ತು ಕಣ್ಣು ಕಪ್ಪಡಿಗಳ ಅನೇಕ ವರ್ಗಗಳು ಹೇರಳವಾಗಿವೆ.[೩೨] ಮಾಂಸಾಹಾರಿಯಾದ ಸಸ್ತನಿಗಳಲ್ಲಿ ನರಿ, ಮುಂಗಿಸಿಯಂತ ಬಿಲವಾಸಿ ಪ್ರಾಣಿ, ನೀರುನಾಯಿ, ಮುಂಗಸಿ, ಆರ್ಮಿನ್ ಪ್ರಾಣಿ ಮತ್ತು ಚಾತುರ್ಯದಿಂದ ತಪ್ಪಿಸಿಕೊಳ್ಳುವ ಕಾಡುಬೆಕ್ಕುಗಳು ಒಳಗೊಂಡಿವೆ.[೩೪] ಸೀಲ್ನ ವಿವಿಧ ತಳಿಗಳು, ತಿಮಿಂಗಲ ಮತ್ತು ಡಾಲ್ಫಿನ್ (ಹಂದಿ ಮೀನು)ಗಳನ್ನು ಬ್ರಿಟಿಷ್ ತೀರಗಳಲ್ಲಿ ಮತ್ತು ಕಡಲ ತೀರರೇಖೆಗಳಲ್ಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಲಾಗುತ್ತದೆ. ಪ್ರಸ್ತುತ ಇರುವ ಅತೀದೊಡ್ಡ ನೆಲ ಆಧಾರಿತ ಕಾಡು ಪ್ರಾಣಿ ಜಿಂಕೆ. ಕೆಂಪು ಜಿಂಕೆಯು ಅತೀ ದೊಡ್ಡದಾದ ತಳಿಯಾಗಿದೆ, ರೋ ಜಿಂಕೆ ಮತ್ತು ಫಾಲ್ಲೊವ್ ಜಿಂಕೆಗಳು ಸಹ ಪ್ರಮುಖವಾಗಿವೆ; ಇತ್ತೀಚಿನವನ್ನು ನಾರ್ಮ್ಯಾನ್ಸ್ರಿಂದ ಪರಿಚಯಿಸಲಾಯಿತು.[೩೪][೩೫] ಹ್ಯಾಬಿಟ್ಯಾಟ್ (ಸಸ್ಯ ಅಥವಾ ಪ್ರಾಣಿಗಳು ಸಹಜವಾಗಿ ಹುಟ್ಟಿ ಬೆಳೆಯುವ ಸ್ಥಳ) ಹಾನಿಯು ಅನೇಕ ತಳಿಗಳಮೇಲೆ ಪರಿಣಾಮ ಬೀರಿದೆ. ನಿರ್ನಾಮವಾದ ದೊಡ್ಡ ಸಸ್ತನಿಗಳು ಕಂದು ಕರಡಿ, ಬೂದಿ ತೋಳ ಮತ್ತು ಕಾಡು ಗಂಡು ಹಂದಿಗಳನ್ನು ಒಳಗೊಂಡಿವೆ; ನಂತರದವು ಇತ್ತೀಚಿನ ದಿನಗಳಲ್ಲಿ ಪರಿಮಿತಿಯ ಮರುಪರಿಚಯವನ್ನು ಹೊಂದಿವೆ.[೩೨]
ಬ್ರಿಟನ್ನಲ್ಲಿ ಪಕ್ಷಿ ಜೀವ ಸಂಪತ್ತಿದೆ, ಒಟ್ಟು 583 ತಳಿಗಳಲ್ಲಿ,[೩೬] 258 ತಳಿಗಳು ದ್ವೀಪದಲ್ಲೇ ವೃದ್ಧಿಯಾದವು ಅಥವಾ ಚಳಿಗಾಲದಲ್ಲಿ ಬಂದು ವಾಸಿಸುವಂತಹವು.[೩೭] ಇದರ ಅಕ್ಷಾಂಶ ರೇಖೆಗಳಲ್ಲಿನ ಸೌಮ್ಯ ಚಳಿಗಾಲದ ಕಾರಣ, ಗ್ರೇಟ್ ಬ್ರಿಟನ್ ಬಹಳ ಪ್ರಮುಖ ಸಂಖ್ಯೆಯ ಅನೇಕ ಚಳಿಗಾಲದ ತಳಿಗಳಿಗೆ ಆಶ್ರಯತಾಣವಾಗಿದೆ, ಮುಖ್ಯವಾಗಿ ಬಾತುಕೋಳಿಗಳು, ಹೆಬ್ಬಾತುಗಳು ಮತ್ತು ಹಂಸಗಳು.[೩೮] ಇತರ ಪ್ರಖ್ಯಾತ ಪಕ್ಷಿ ತಳಿಗಳಲ್ಲಿ ಚಿನ್ನದ ಹದ್ದು, ಬೂದಿ ಉದ್ದ ಕಾಲಿನ ನೀರಿನ ಹಕ್ಕಿ, ಮೀನ್ಚುಳ್ಳಿ, ಪಾರಿವಾಳ, ಗುಬ್ಬಚ್ಚಿ, ಫೆಸೆಂಟ್, ಕವುಜಗ ಹಕ್ಕಿ, ಮತ್ತು ಕಾಗೆಯ ವಿವಿಧ ವರ್ಗಗಳು, ಒಂದು ಜಾತಿಯ ಸಣ್ಣ ಪಕ್ಷಿ, ಒಂದು ಸಮುದ್ರ ಪಕ್ಷಿ, ಉತ್ತರದ ಭೂಭಾಗದ ಒಂದು ಸಮುದ್ರ ಪಕ್ಷಿ, ಗ್ರೌಸ್ ಹಕ್ಕಿ, ಗೂಬೆ ಮತ್ತು ಗಿಡಗಗಳು ಒಳಗೊಂಡಿವೆ.[೩೯] ದ್ವೀಪದಲ್ಲಿ ಸರೀಸೃಪದ ಆರು ತಳಿಗಳಿವೆ; ಕಾಲಿಲ್ಲದ ಆಲಸ್ಯದ ಕ್ರಿಮಿಯನ್ನು ಒಳಗೊಂಡು ಮೂರು ಸರ್ಪ ತಳಿಗಳು ಮತ್ತು ಮೂರು ಹಲ್ಲಿಗಳ ತಳಿಗಲು. ಬರೆಹಾವು, ಹೆಸರಿನ ಒಂದು ಹಾವು ಅಪಾಯಕಾರಿ ಆದರೆ ಅಪುರೂಪವಾಗಿ ಪ್ರಾಣಾಂತವಾಗಿದೆ.[೪೦] ಪ್ರಸಕ್ತ ಭೂಜಲಚರಗಳೆಂದರೆ ಕಪ್ಪೆಗಳು, ಮಂಡೂಕಗಳು ಮತ್ತು ಹಲ್ಲಿಯಂತ ಚಿಕ್ಕ ಉಭಯಚರ ಪ್ರಾಣಿಗಳು.[೩೨]
ಫೌನದ ಮಾದರಿಯಲ್ಲೇ, ಮತ್ತು ಅದೇ ತರಹದ ಕಾರಣಗಳಿಗಾಗಿ, ಗ್ರೇಟ್ ಬ್ರಿಟನ್ನ ಸಸ್ಯಸಂಪತ್ತು, ಯುರೋಪ್ ಭೂಖಂಡಕಿಂತಲೂ ಶಕ್ತಿಹೀನವಾಯಿತು.[೪೧] ಗ್ರೇಟ್ ಬ್ರಿಟನ್’ನ ಸಸ್ಯಸಂಪತ್ತು 3,354 ನಾಳ ರಚನೆಯ ಸಸ್ಯ ತಳಿಗಳನ್ನು ಒಳಗೊಂಡಿದೆ, ಅವುಗಳಲ್ಲಿ 2,297 ಸ್ಥಳೀಯ ತಳಿಗಳು ಮತ್ತು 1,057 ತಳಿಗಳು ಬ್ವೀಪದಲ್ಲಿ ಪರಿಚಯಿಸಿದವು.[೪೨] ದ್ವೀಪವು ಸ್ಥಳೀಯ ವರ್ಗಗಳಾದ ಬರ್ಚ್ (ನುಣುಪಾದ ತೊಗಟೆಯುಳ್ಳ ಒಂದು ತರಹದ ಮರ), ಹೊಂಗೆಮರ, ಒಂದು ಬಗೆಯ ತೆಂಗಿನ ಮರ, ಒಂದು ಜಾತಿಯ ಮುಳ್ಳು ಕಂಟಿ, ಎಲ್ಮ್ ಮರ, ಓಕ್ ಮರ, ಸದಾ ಹಸಿರುಬಣ್ಣದ ಎಲೆಗಳುಲ್ಲ ಒಂದು ಬಗೆಯ ಮರ, ದೇವದಾರು ಮರ, ಚೆರ್ರಿ ಹಣ್ಣಿನ ಮರ ಮತ್ತು ಸೇಬು ಹಣ್ಣಿನ ಮರಗಳನ್ನು ಸೇರಿ, ಹೇರಳ ವಿವಿಧ ಮರಗಳನ್ನು ಹೊಂದಿದೆ.[೪೩] ನೈಸರ್ಗಿಕಗೊಳಿಸಿದ ಇತರ ಮರಗಳನ್ನು, ಮುಖ್ಯವಾಗಿ ಯುರೋಪಿನ ಇತರ ಭಾಗಗಳಿಂದ (ವಿಶೇಷವಾಗಿ ನಾರ್ವೇ) ಮತ್ತು ಉತ್ತರ ಅಮೆರಿಕಾದಿಂದ ಪರಿಚಯಿಸಲಾಯಿತು. ಪರಿಚಯಿಸಿದ ಮರಗಳು ದೇವದಾರು ಮರದ ಅನೇಕ ವಿಧಗಳನ್ನು, ಮುಳ್ಳುಗಳಂತೆ ಚುಚ್ಚುವ ತೊಗಟೆಯುಳ್ಳ ಕಾಯಿಗಳನ್ನು ಬಿಡುವ ಮರ, ಮ್ಯಾಪಲ್ (ಒಂದು ಬಗೆಯ ಮರ), ಮೊನಚಾದ ಎಲೆಗಳುಳ್ಳ ಒಂದು ಬಗೆಯ ಫರ್ ಮರ, ಒಂದು ಜಾತಿಯ ಚೌಬೀನೆ ಮರ ಮತ್ತು ಫರ್ ಮರ, ಹಾಗು ಚೆರ್ರಿ ಪ್ಲಮ್ಹಣ್ಣಿನ ಮರ ಮತ್ತು ಪೇರು ಹಣ್ಣಿನ ಮರಗಳನ್ನು ಒಳಗೊಂಡಿವೆ.[೪೩] ಅತೀ ಎತ್ತರದ ತಳಿಗಳೆಂದರೆ ಡಾಗ್ಲಾಸ್ ಫರ್ (ಸದಾ ಹಸಿರಾಗಿರುವ ಎತ್ತರದ) ಮರಗಳು; ಇವುಗಳ ಎರಡು ಮಾದರಿಗಳು 65 ಮೀಟರುಗಳು ಅಥವಾ 212 ಅಡಿಯಷ್ಟು ಎತ್ತರದೊಂದಿಗೆ ದಾಖಲಾಗಿವೆ.[೪೪] ಪೆರ್ತ್ಶೈರ್ನಲ್ಲಿರುವ ಪಾರ್ಟಿಂಗಲ್ ವ್ಯೂ ಅನ್ನುವ ಮರವು ಯುರೋಪಿನಲ್ಲೇ ಪುರಾತನವಾದ ಮರವಾಗಿದೆ.[೪೫]
ಬ್ರಿಟನ್ನಲ್ಲಿ ಕಡಿಮೆ ಅಂದರೆ 1,500 ವಿವಿಧ ವೈಲ್ಡ್ ಪ್ಲವರ್ನ ತಳಿಗಳಿವೆ,[೪೬] ಕೆಲವು 107 ವರ್ಗಗಳು ವಿಶೇಷವಗಿ ಅಪುರೂಪವಾದವು ಅಥವಾ ದುರ್ಬಲವಾದವು ಮತ್ತು ಇವನ್ನು ವೈಲ್ಡ್ಲೈಪ್ ಆಂಡ್ ಕಂಟ್ರಿಸೈಡ್ ಯಾಕ್ಟ್ 1981 ನಿಂದ ಸಂರಕ್ಷಿಸಲಾಗಿದೆ. ಸ್ಥಳದ ಮಾಲೀಕರ ಅನುಮತಿ ಇಲ್ಲದೆ ಯಾವುದೇ ವೈಲ್ಡ್ಪ್ಲವರ್ಸ್ ಗಿಡಗಳನ್ನು ಬೇರುಸಮೇತ ಕೀಳುವುದು ಕಾನೂನು ಬಾಹಿರವಾಗಿದೆ.[೪೬][೪೭] 2002ರಲ್ಲಿ ನಡೆದ ಆಯ್ಕೆಯಲ್ಲಿ ನಿಶ್ಚಿತ ಪ್ರಾಂತಗಳನ್ನು ಪ್ರತಿನಿಧಿಸಲು ವಿವಿಧ ವೈಲ್ಡ್ಪ್ಲವರ್ಗಳ ಹೆಸರುಗಳನ್ನು ಸೂಚಿಸಲಾಯಿತು.[೪೮] ಇವು ಕೆಂಪು ಪೊಪ್ಪಿಗಳು, ಬ್ಲ್ಯೂಬೆಲ್ಸ್, ಡೈಸಿಗಳು (ಒಂದು ಜಾತಿಯ ಅಡವಿ ಹೂಗಳು), ಡ್ಯಾಫೋಡಿಲ್ (ಒಂದು ಜಾತಿಯ ಹಳದಿ ಬಣ್ಣದ ಹೂಗಳು), ರೋಜ್ಮಾರಿ (ಸುವಾಸನೆಯ ನಿತ್ಯಹಸಿರಿನ ಒಂದು ಕಂಟಿ), ಗಾರ್ಸ್ (ಒಂದು ವಿಧದ ಮುಳ್ಳು ಕಂಟಿ), ಇರಿಸ್ (ಒಂದು ತರಹದ ಹಳದಿ ಅಥವಾ ನೇರಳೆ ಹೂ), ಯಾವಾಗಲೂ ಹಸಿರಾಗಿರುವ ಐವಿ ಎಂಬ ಬಳ್ಳಿ, ಪುದೀನ ಸೊಪ್ಪಿನ ಗಿಡ, ಸೀತೆಹೂವಿನ ಗಿಡಗಳು, ಗುಲಾಬಿ ಜಾತಿಗೆ ಸೇರಿದ ಮುಳ್ಳುಗಿಡಗಳು, ಊದಾ ಬಣ್ಣದ ಹೂವಿನ ಮುಳ್ಳು ಗಿಡಗಳು, ಬಟ್ಟೆರ್ ಕಪ್ಗಳು, ಮಾಸಲು ಹಳದಿ ಹೂ ಬಿಡುವ ಗಿಡ, ಥೈಮ್ (ಸುವಾಸನೆ ಎಲೆಯ ಗಿಡ), ಟ್ಯುಲಿಪ್ ಹೂವುಗಳು, ನೇರಳೆಯ ಬಣ್ಣದ ಹೂವಿನ ಚಿಕ್ಕ ಸಸಿಗಳು, ಪುಟ್ಟ ಹಳದಿ ಹೂವುಗಳ ಕಾಡು ಗಿಡ, ಗಂಟೆಯಾಕಾರದ ನೇರಳೆ ಹೂಗಳನ್ನು ಬಿಡುವ ನಿತ್ಯ ಹರಿದ್ವರ್ಣದ ಗಿಡ ಮತ್ತು ಅನೇಕವುಗಳನ್ನು ಒಳಗೊಂಡಿವೆ.[೪೯][೫೦][೫೧][೫೨] ದ್ವೀಪದ ಎಲ್ಲೆಡೆ ಪಾಚಿ, ಕಲ್ಲು ಹೂವುಗಳು, ಪಂಗಿ ಮತ್ತು ಶೈವಾಲಗಳ ಅನೇಕ ತಳಿಗಳಿವೆ.[೫೩]
ಕ್ರಿಶ್ಚಿಯನ್ ಧರ್ಮವು ದ್ವೀಪದ ಅತಿ ದೊಡ್ಡ ಧರ್ಮವಾಗಿದ್ದು ಮಧ್ಯ ಯುಗದ ಪ್ರಾರಂಭದಿಂದಲೂ ಇದೆ, ರೋಮನ್ನರು ಈ ಧರ್ಮವನ್ನು ದ್ವೀಪಕ್ಕೆ ಪರಿಚಯಿಸಿದ್ದರು ಹಾಗೂ ಮೊದಲಿನ ದ್ವೀಪದ ಕ್ರಿಶ್ಚಿಯನ್ ಧರ್ಮ ಮುಂದುವರೆಯಿತು. ಬ್ರಿಟನ್ನಲ್ಲಿ ರೂಡಿಯಲ್ಲಿರುವ ಧರ್ಮಗಳೆಂದರೆ ಆಂಗ್ಲಿಕ್ಯಾನಿಸಂ (ಇದನ್ನು ಸ್ಕಾಟ್ಲ್ಯಾಂಡ್ನಲ್ಲಿ ಎಪಿಸ್ಕೊಪಾಲಿಸಂ ಎಂತಲೂ ಕರೆಯುತ್ತಾರೆ), 16ನೆಯ ಶತಮಾನದ ಸುಧಾರಣಾ ಅವಧಿಯಿಂದ ಧರ್ಮವು ಕ್ಯಾಥೊಲಿಕ್ ಮತ್ತು ಸುಧಾರಿತ ಎರಡನ್ನೂ ಗೌರವಿಸುತ್ತದೆ. ಯುನೈಟೆಡ್ ಕಿಂಗ್ಡಮ್ನ ಚರ್ಚ್ನ ಮುಖ್ಯಸ್ಥ ಸುಪ್ರೀಂ ಗವರ್ನರ್. ಅದು ಇಂಗ್ಲೆಂಡ್ನಲ್ಲಿ ಸ್ಥಿರ ಚರ್ಚ್ಗಳನ್ನು ಹೊಂದಿದೆ. ಬ್ರಿಟನ್ನಲ್ಲಿ ಇಂದು 26 ಮಿಲಿಯನ್ ಜನರು ಆಂಗ್ಲಿಕಾನಿಸಂ ಧರ್ಮವನ್ನು ಪಾಲಿಸುತ್ತಾರೆ.[೫೪] ಬ್ರಿಟನ್ನಲ್ಲಿನ ಎರಡನೆಯ ದೊಡ್ಡ ಕ್ರಿಶ್ಚಿಯನ್ ಆಚರಣೆಯು, ಇದರ ಸಾಂಪ್ರದಾಯಗಳನ್ನು ಪತ್ತೆಹಚ್ಚುವ ಕ್ಯಾಥೊಲಿಕ್ ಚರ್ಚ್ನ ಲ್ಯಾಟಿನ್ ರಿಟೆ, ಗ್ರೇಟ್ ಬ್ರಿಟನ್ನಲ್ಲಿನ 6ನೆಯ ಶತಮಾನಕ್ಕೆ ಅಗಸ್ಟೈನ್ಸ್ ಮಿಸನ್ದೊಂದಿಗೆ ಸಂಘದ ಇತಿಹಾಸವನ್ನು ಹೊಂದಿದೆ ಮತ್ತು ಇದು ದ್ವೀಪದಲ್ಲಿ ಸುಮರು ಸಾವಿರ ವರ್ಷಗಳ ವರೆಗು ಪ್ರಮುಖ ಧರ್ಮವಾಗಿತ್ತು. ಬ್ರಿಟನ್ನಲ್ಲಿ ಈಗ 5 ಮಿಲಿಯನ್ ಅನುಯಾಯಿಗಳು ಪಾಲಿಸುತ್ತಿದ್ದಾರೆ; ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ 4.5 [೫೫] ಮತ್ತು ಸ್ಕಾಟ್ಲ್ಯಾಂಡ್ನಲ್ಲಿ 750,000.[೫೬]
ಸಾಮಾನ್ಯವಾಗಿ ಚರ್ಚಿನಲ್ಲಿ ಅನುಸರಿಸುವ ಪ್ರೆಸ್ಬೈಟೆರಿಯನ್ ಪದ್ದತಿಯೊಂದಿಗೆ ಕ್ರೈಸ್ತರ ಪ್ರೊಟೆಸ್ಟೆಂಟ್ ನೀತಿಯನ್ನು ಅನುಸರಿಸುವ ಒಂದು ರೂಪವಾದ, ಸ್ಕಾಟ್ಲ್ಯಾಂಡ್ನ ಚರ್ಚ್, 2.1 ಮಿಲಿಯನ್ ಸದಸ್ಯರೊಂದಿಗೆ ದ್ವೀಪದಲ್ಲಿನ ಬಹುಸಂಖ್ಯೆಯ ಮೊದಲ ಮೂರನೇಯದಾಗಿದೆ.[೫೭] ಇದನ್ನು ಸ್ಕಾಟ್ಲ್ಯಾಂಡ್ನಲ್ಲಿ ಕ್ಲೆರ್ಜಿಮ್ಯಾನ್ ಜಾಹ್ನ್ ನೋಕ್ಸ್ ಇವರಿಂದ ಪರಿಚಯಿಸಲಾಯಿತು, ಇದು ಸ್ಕಾಟ್ಲ್ಯಾಂಡ್ನಲ್ಲಿನ ರಾಷ್ಟ್ರೀಯ ಚರ್ಚಿನ ಸ್ಥಾನಮಾನವನ್ನು ಹೊಂದಿದೆ. ಯುನೈಟೆಡ್ ಕಿಂಗ್ಡಮ್ನ ದೊರೆತನವನ್ನು ಲಾರ್ಡ್ ಹೈ ಕಮಿಶನರ್ರಿಂದ ಪ್ರಖ್ಯಾತವಾಗಿ ಪ್ರತಿನಿಧಿಸಲಾಯಿತು. ಮೆಥೋಡಿಸಮ್ ನಾಲ್ಕನೆಯ ದೊಡ್ಡದಾಗಿದ್ದು ಜಾಹ್ನ್ ವೆಸ್ಲೀರ ಮೂಲಕ ಆಂಗ್ಲಿಕಾನಿಸಮ್ನ್ನು ಮೀರಿ ಬೆಳೆದಿದೆ.[೫೮] ಲಾನ್ಕಶರ್ ಮತ್ತು ಯೋರ್ಕ್ಶರ್ಗಳ ಓಲ್ಡ್ ಮಿಲ್ ಪಟ್ಟಣಗಳಲ್ಲಿ, ಹಾಗು ಕಾರ್ನ್ವಾಲ್ನಲ್ಲಿನ ಟಿನ್ ಸದಸ್ಯರುಗಳ ನಡುವೆಯು ಇದು ಜನಪ್ರಿಯತೆಯನ್ನು ಗಳಿಸಿದೆ.[೫೯] ಧಾರ್ಮಿಕ ಮೆಥೋಡಿಸಮ್ ವಿಧಾನವು ವೇಲ್ಸ್ನಲ್ಲಿನ ಅತೀ ದೊಡ್ಡದಾದ ಪಂಗಡವಾಗಿದೆ.[೬೦] ಅಲ್ಲಿ ಇತರ ಅನುಸರಿಸದ ಕಡಿಮೆಸದಸ್ಯರ ಧಾರ್ಮಿಕ ಪಂಗಡಗಳಿವೆ, ಅವುಗಳೆಂದರೆ ಬ್ಯಾಪ್ಟಿಸ್ಟ್ಸ್, ಕ್ವಾಕೆರ್ಸ್, ಕಾಂಗ್ರೆಗೇಷನಲಿಸ್ಟ್ಸ್, ಯುನೈಟರಿಯನ್ಸ್ ಮತ್ತು ಮುಂತಾದವು.[೬೧] ಗ್ರೇಟ್ ಬ್ರಿಟನ್ನ ಮೊದಲ ಪ್ರೋತ್ಸಾಹಕ ಸಂತರು ಸಂತ ಅಲ್ಬಾನ್.[೬೨] ಅವರು ರೋಮನ್-ಬ್ರಿಟಿಷ್ಕಾಲದಿಂದ ಬಂದು, ಅವರ ನಂಬಿಕೆಗಾಗಿ ಮರಣದಂಡನೆ ಒಳಗಾದ ಮತ್ತು ಪಗನ್ ದೆವರಿಗೆ ಅರ್ಪಿಸಿಕೊಂಡ, ಮೊದಲ ಕ್ರಿಶ್ಚಿಯನ್ ಹುತಾತ್ಮರಾಗಿದ್ದರು.[೬೩] ಅತ್ಯಂತ ಇತ್ತೀಚಿನ ದಿನಗಳಲ್ಲಿ, ಕೆಲವರು ಸಂತ ಏಡನ್ರನ್ನು ಬ್ರಿಟನ್ನಿನ ಇನ್ನೊಂದು ಪ್ರೋತ್ಸಾಹಕ ಸಂತನನ್ನಾಗಿ ಅಯ್ದುಕೊಳ್ಳುವಂತೆ ಸೂಚಿಸಿದರು.[೬೪] ಮೂಲತಃ ಐರ್ಲ್ಯಾಂಡ್ನವರಾದ, ಇವರು ದಾಲ್ ರೈತರ ನಡುವೆ ಇಯೊನದಲ್ಲಿ ಮತ್ತು ಲಿಂಡಿಸ್ಪಾರ್ನೆದಲ್ಲಿ ಕಾರ್ಯನಿರ್ವಹಿಸಿ, ಅಲ್ಲಿ ನಾರ್ತುಂಬ್ರಿಯಗೆ ಕ್ರಿಶ್ಚಿಯಾನಿಟಿಯನ್ನು ವಾಪಾಸುತಂದರು.[೬೪]
ದ್ವೀಪದಲ್ಲಿದ್ದ ಯುನೈಟೆಡ್ ಸ್ಟೇಟ್ಸ್ನ ಮೂರು ಅಂಗ ದೇಶಗಳು ಪ್ರೋತ್ಸಾಹಕ ಸಂತರನ್ನು ಹೊಂದಿವೆ; ಸಂತ ಜಾರ್ಜ್ ಮತ್ತು ಸಂತ ಆಂಡ್ರಿವ್ರನ್ನು ಕ್ರಮವಾಗಿ ಇಂಗ್ಲೆಂಡ್ ಮತ್ತು ಸ್ಕಾಟ್ಲ್ಯಾಂಡ್ನ ಬಾವುಟಗಳಲ್ಲಿ ಪ್ರತಿನಿಧಿಸಲಾಗಿದೆ.[೬೫] ಸಂತರನ್ನೊಂದಿದ ಈ ಎರಡೂ ಬಾವುಟಗಳು ಸೇರಿ 1604ರ ಗ್ರೇಟ್ ಬ್ರಿಟನ್ ರಾಯಲ್ ಬಾವುಟದ ತಳಪಾಯವನ್ನು ರಚಿಸುತ್ತವೆ.[೬೫] ಸಂತ ಡೇವಿಡ್ ವೇಲ್ಸ್ರ ಪ್ರೋತ್ಸಾಕ ಸಂತರು.[೬೬] ಅನೇಕ ಇತರ ಬ್ರಿಟಿಷ್ ಸಂತರಿದ್ದಾರೆ, ಅವರಲ್ಲಿ ಸರ್ವಶ್ರೇಷ್ಟರೆಂದು ತಿಳಿದ ಕೆಲವರು; ಕತ್ಬರ್ಟ್, ಕೊಲಂಬ, ಪ್ಯಾಟ್ರಿಕ್, ಮಾರ್ಗರೇಟ್, ಎಡ್ವರ್ಟ್ ದಿ ಕನ್ಪೆಸ್ಸರ್, ಮಂಗೊ, ಥಾಮಸ್ ಮೊರೆ, ಪೆಟ್ರೊಕ್, ಬೆಡೆ ಮತ್ತು ಥಾಮಸ್ ಬೆಕೆಟ್.[೬೬]
ಅನೇಕ ಕ್ರಿಶ್ಚಿಯನ್ನಲ್ಲದ ಧರ್ಮಗಳು ಗ್ರೇಟ್ ಬ್ರಿಟನ್ನಲ್ಲಿ ಆಚರಣೆಯಲ್ಲಿದ್ದವು. ಜುಡೈಸಮ್ 1070ರಿಂದ ದ್ವೀಪದಲ್ಲಿ ಅಲ್ಪಸಂಖ್ಯೆಯ ಇತಿಹಾಸವನ್ನು ಹೊಂದಿದೆ.[೬೮] ಜೆವ್ಸ್ರನ್ನು ಇಂಗ್ಲೆಂಡ್ನಿಂದ 1290ರಲ್ಲಿ ಹೊರಹಾಕಲಾಯಿತು, ಮತ್ತು 1656ರಲ್ಲಿ ಅವರಿಗೆ ಮರಳಿ ಬರಲು ಅನುಮತಿ ದೊರೆಯುವ ವರೆಗು ಇಂಗ್ಲೆಂಡ್ನಿಂದ ದೂರ ಉಳಿಯಬೇಕಾಯಿತು.[೬೮] ಸ್ಕಾಟ್ಲ್ಯಾಂಡ್ನಲ್ಲಿನ ಅವರ ಇತಿಹಾಸವು ಲಿಥುನಿಯದಿಂದ ಅವರ ನಂತರದ ಸ್ಥಾನಪಲ್ಲಟದ ವರೆಗೂ ಅಗೋಚರವಾಗಿತ್ತು.[೬೯] ಮುಖ್ಯವಾಗಿ 1950ರಿಂದ ಈಸ್ಟರ್ನ್ ಧರ್ಮಗಳು ಹಿಂದಿನ ವಸಾಹತುಗಳಿಂದ ಕಾಣಿಸಿಕೊಳ್ಳಲು ಪ್ರಾರಿಂಭಿಸಿದಾಗಿನಿಂದ; ಇವುಗಳಲ್ಲಿ ಬ್ರಿಟನ್ನಲ್ಲಿ 1.5 ಮಿಲಿಯನ್ ಅನುಯಾಯಿಗಳೊಂದಿಗೆ ಇಸ್ಲಾಮ್ ಧರ್ಮವು ಸರ್ವ ಸಾಮಾನ್ಯವಾಗಿದೆ.[೭೦] ಹಿಂದುಧರ್ಮ, ಸಿಖ್ಧರ್ಮ ಮತ್ತು ಬೌದ್ಧಧರ್ಮಗಳು ನಂತರದ ಸ್ಥಾನದಲ್ಲಿವೆ, ಇವನ್ನು ಭಾರತ ಮತ್ತು ಆಗ್ನೇಯ ಏಷಿಯಗಳಿಂದ ಪರಿಚಯಿಸಲಾಗಿದೆ.[೭೦] ಕ್ರಿಶ್ಚಿಯಾನಿಟಿ ಉದ್ಭವಿಸುವ ಮುನ್ನ ಸೆಲ್ಟಿಕ್, ರೋಮನ್, ಆಂಗ್ಲೊ-ಸಕ್ಸನ್ ಮತ್ತು ನಾರ್ಸ್ ಬಹುದೇವತಾರಾದನೆಯ ಧರ್ಮಗಳನ್ನು ಆಚರಿಸಲಾಗಿತ್ತಿತ್ತು.
ಗ್ರೇಟ್ ಬ್ರಿಟನ್ ಒಂದು ದ್ವೀಪ, ದೇಶವಲ್ಲ, ಮತ್ತು ಒಂದೇ ರಾಜಧಾನಿಯನ್ನು ಹೊಂದಿಲ್ಲ. ಯುನೈಟೆಡ್ ಕಿಂಗ್ಡಮ್ನ ಮೂರು ದೇಶಗಳ ರಾಜಧಾನಿಗಳು ಗ್ರೇಟ್ ಬ್ರಿಟನ್ನಲ್ಲಿವೆ:
300,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರೇಟ್ ಬ್ರಿಟನ್ನ ಪ್ರಮುಖ ನಗರಗಳೆಂದರೆ (ರಾಜಧಾನಿಗಳನ್ನು ಹೊರತುಪಡಿಸಿ) ಬರ್ಮಿಂಗ್ಹ್ಯಾಮ್, ಬ್ರಿಸ್ಟಲ್, ಕೊವೆಂಟ್ರಿ, ಗ್ಲಾಸ್ಗೋ, ಲೀಡ್ಸ್, ಲಿವರ್ಪೂಲ್, ಶೆಫೀಲ್ಡ್ ಮತ್ತು ಮ್ಯಾಂಚೆಸ್ಟರ್.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.