ಕುವೆಂಪು ವಿಶ್ವವಿದ್ಯಾನಿಲಯ - ಕರ್ನಾಟಕ ರಾಜ್ಯದಲ್ಲಿರುವ ವಿಶ್ವವಿದ್ಯಾನಿಲಯಗಳಲ್ಲಿ ಒಂದು. ಇದರ ಧ್ಯೇಯವಾಕ್ಯ ವಿಶ್ವಮಾನವ ಪರಿಕಲ್ಪನೆಯನ್ನು ಒಳಗೊಂಡಿದೆ. ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಠಿ ಎಂಬ ಮಾತುಗಳೊಂದಿಗೆ ಲಾಂಛನವನ್ನು ಮಾಡಲಾಗಿದೆ.[5]

Quick Facts ಹಿಂದಿನ ಹೆಸರು‍, ಧ್ಯೇಯ ...
ಕುವೆಂಪು ವಿಶ್ವವಿದ್ಯಾನಿಲಯ/Kuvempu University
ಹಿಂದಿನ ಹೆಸರು‍
Sahyadri University
ಧ್ಯೇಯಬೋಧನೆ ಮೂಲಕ ಕ್ರಿಯಾಶೀಲತೆಯ ಪೋಷಣೆ
Motto in English
"Foster Creativity in Teaching"
ಪ್ರಕಾರPublic
ಸ್ಥಾಪನೆ1987 (1987)[1]
ಕುಲಪತಿಗಳುVajubhai Rudabhai Vala
Governor of Karnataka
ಉಪ-ಕುಲಪತಿಗಳುProf. Jogan Shankar[2]
ವಿದ್ಯಾರ್ಥಿಗಳು9,386[3]
ಪದವಿ ಶಿಕ್ಷಣ5,831[3]
ಸ್ನಾತಕೋತ್ತರ ಶಿಕ್ಷಣ3,308[3]
ಡಾಕ್ಟರೇಟ್ ವಿದ್ಯಾರ್ಥಿಗಳು
238
ಇತರೆ ವಿದ್ಯಾರ್ಥಿಗಳು
12
ಸ್ಥಳShimoga, Karnataka, India
13°55′0.12″N 75°34′0.12″E
ಆವರಣRural
230 acres (93 ha) (Main campus)[4]
ಕ್ರೀಡೆಗಳುFootball, cricket, basketball, hockey, tennis, swimming, etc.
ಮಾನ್ಯತೆಗಳುUGC, NAAC, AIU
ಜಾಲತಾಣwww.kuvempu.ac.in
Close

ಪರಿಚಯ

ಈ ವಿಶ್ವವಿದ್ಯಾನಿಲಯವನ್ನು ಕನ್ನಡ ಸಾಹಿತ್ಯಲೋಕದ ಅಗ್ರಗಣ್ಯರಲ್ಲೊಬ್ಬರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ, ರಾಷ್ಟ್ರಕವಿ ಕುವೆಂಪು ಅವರ ಹೆಸರಿನಲ್ಲಿ ೧೯೮೭ನೇ ಇಸ್ವಿ ಜೂನ್ ೨೯ರಂದು ಪ್ರಾರಂಭಿಸಲಾಯಿತು. ಇದರ ಮೊದಲ ಕುಲಪತಿಗಳು ಲೇಖಕರಾದ ಶಾಂತಿನಾಥ ದೇಸಾಯಿ ಅವರು. ಮಲೆನಾಡಿನ ಪ್ರಕೃತಿ ಮಡಿಲಲ್ಲಿರುವ ಜ್ಞಾನ ಸಹ್ಯಾದ್ರಿ ಪ್ರಾಂಗಣದಲ್ಲಿ ಈ ವಿಶ್ಯವಿದ್ಯಾನಿಲಯ ಸ್ಥಾಪಿತವಾಗಿದೆ. ಈ ಪ್ರಾಂಗಣವು ಭದ್ರಾ ನದಿಯ ಹತ್ತಿರವಿದ್ದು, ಶಿವಮೊಗ್ಗದಿಂದ ೨೮ಕಿ.ಮೀ. ದೂರದಲ್ಲಿಯೂ, ಭದ್ರಾವತಿಯ ಕೈಗಾರಿಕಾ ಪಟ್ಟಣದಿಂದ ೧೮ ಕಿ.ಮೀ ದೂರದಲ್ಲಿಯೂ ಇರುವ ಶಂಕರಘಟ್ಟ ಎಂಬ ಗ್ರಾಮಕ್ಕೆ ಹೊಂದಿಕೊಂಡಿದೆ. ತರೀಕೆರೆಯಿಂದ ೧೮ ಕಿ.ಮೀ ದೂರದಲ್ಲಿದೆ. ಈ ವಿಶ್ವವಿದ್ಯಾಲಯದ ಕುರಿತಾದ ಗೀತೆಯನ್ನು ಕನ್ನಡದ ಪ್ರೇಮ ಕವಿ ಎಂದೇ ಖ್ಯಾತರಾದ ಕೆ.ಎಸ್. ನರಸಿಂಹಸ್ವಾಮಿಯವರು ರಚಿಸಿದ್ದಾರೆ.

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.