From Wikipedia, the free encyclopedia
ಏಷ್ಯ ಮೈನರ್: ಏಷ್ಯದ ಪಶ್ಚಿಮದ ತುದಿಯಲ್ಲಿ, ಆಧುನಿಕ ತುರ್ಕಿಯ ಏಷ್ಯನ್ ಭಾಗವನ್ನೊಳಗೊಂಡ ಪರ್ಯಾಯದ್ವೀಪ. ವಿಸ್ತೀರ್ಣ ೭೪೩೩೨.೭೧೩ ಚ.ಕಿಮೀ. ಆಂಟಿ-ಟಾರಸ್ ಪರ್ವತಶ್ರೇಣಿಯೇ ಇದರ ಪುರ್ವದ ಗಡಿ. ಪಶ್ಚಿಮ ಉತ್ತರ ದಕ್ಷಿಣಗಳಲ್ಲಿ ಕ್ರಮವಾಗಿ ಏಜಿಯನ್, ಕಪ್ಪು ಮತ್ತು ಮೆಡಿಟರೇನಿಯನ್ ಸಮುದ್ರಗಳಿವೆ. ಏಜಿಯನ್ ಸಮುದ್ರಕ್ಕೂ ಕಪ್ಪು ಸಮುದ್ರಕ್ಕೂ ನಡುವೆ ಕೊಂಡಿಯಂತಿರುವ ಮಾರ್ಮರ ಸಮುದ್ರದಿಂದ ಐರೋಪ್ಯ ತುರ್ಕಿಯೂ ಏಷ್ಯನ್ ತುರ್ಕಿಯೂ ಪ್ರತ್ಯೇಕಗೊಂಡಿವೆ.
ಏಷ್ಯ ಮೈನರ್ ಎಂಬ ಹೆಸರನ್ನು ಈಗಿನ ಅರ್ಥದಲ್ಲಿ ಮೊಟ್ಟಮೊದಲಿಗೆ ಬಳಸಲಾದದ್ದು ೫ನೆಯ ಶತಮಾನದಲ್ಲಿ-ಒರೋಸ್ಹಿಯಸ್ ಬರೆದ ಹಿಸ್ಟೋರಿಯ ಅಡ್ವರ್ಸಸ್ ಪೆಗಾನೋಸ್ ಕೃತಿಯಲ್ಲಿ ರೋಮಿನ ಏಷ್ಯನ್ ಪ್ರಾಂತ್ಯವನ್ನು ಸೂಚಿಸಲಿಕ್ಕಾಗಿ ಅನಟೋಲಿಯ ಅಥವಾ ಲೆವಾಂಟ್ ಎಂಬುದಕ್ಕೆ ಏಷ್ಯ ಮೈನರ್ ಪರ್ಯಾಯಶಬ್ದ ವಾಗಿತ್ತು. ಅನಂತರ ಬೈeóÁಂಟೈನರಿಂದ ತುರ್ಕರು ಗೆದ್ದುಕೊಂಡ ಪ್ರದೇಶಕ್ಕೆ ಈ ಹೆಸರು ಬಂದದ್ದು 10ನೆಯ ಶತಮಾನದಲ್ಲಿ.
ಪೋರ್ಚುಗಲ್ಲಿನಿಂದ ಮಲಯ ದ್ವೀಪಸ್ತೋಮದ ವರೆಗೆ ಅಕ್ಷಾಂಶರೇಖೆಗಳಂತೆ ಹಬ್ಬಿರುವ ಮಡಿಕೆ ಪರ್ವತಗಳ ಪಟ್ಟಿಯಲ್ಲಿ ಏಷ್ಯ ಮೈನರ್ ಪ್ರದೇಶವೂ ಒಂದು ಭಾಗ. ಪರ್ವತರಚನೆಯ ಕಾರ್ಯ ಇಲ್ಲಿ ಇತ್ತೀಚೆಗೆ ತಾನೇ ಮುಗಿದಿದೆ. ಆದರೆ ಟ್ಯೋಆಡ್ನಲ್ಲಿ ಪದೇ ಪದೇ ಸಂಭವಿಸುವ ಭೂಕಂಪಗಳೂ ಕೇರಿಯದ ಕೆಲವು ಭಾಗಗಳಲ್ಲಿ ಹೊಮ್ಮುವ ಬಿಸಿ ಬುಗ್ಗೆಗಳೂ ವಿಷಾನಿಲಗಳೂ ಯಾನಾರ್ ಟಾಸಿನ ಸತತಜ್ವಾಲೆಯೂ ಇದಕ್ಕೆ ಸಾಕ್ಷಿ. ಏಷ್ಯ ಮೈನರಿನಲ್ಲಿ ಜೀವಂತ ಅಗ್ನಿಪರ್ವತಗಳು ಯಾವುವೂ ಈಗ ಇಲ್ಲ.
ಏಷ್ಯ ಮೈನರಿನ ನಡುವಣ ಪ್ರಸ್ಥಭೂಮಿ ಪಶ್ಚಿಮದಲ್ಲಿ ಸಮುದ್ರಮಟ್ಟದಿಂದ ೪೨೫ಮೀ ಎತ್ತರವಾಗಿದ್ದು ಪುರ್ವದ ತುದಿಯಲ್ಲಿ ೧೧೨೫ಮೀಗಳಿಗೆ ಏರುತ್ತದೆ. ಇದಕ್ಕೆ ಆಗ್ನೇಯದಲ್ಲೂ ದಕ್ಷಿಣದಲ್ಲೂ ಟಾರಸ್ ಪರ್ವತಶ್ರೇಣಿಗಳು ಹಬ್ಬಿವೆ. ಇವು ಈಶಾನ್ಯಾಭಿಮುಖವಾಗಿ ಹಬ್ಬಿ ಅಮಾನಸ್ ಶ್ರೇಣಿಗಳೊಂದಿಗೆ ಕೂಡಿಕೊಂಡು ಮುಂದುವರಿದು ಆಂಟಿ-ಟಾರಸ್ ಎನಿಸಿಕೊಳ್ಳುತ್ತವೆ. ಸಿಲಿಸಿಯ ಕರಾವಳಿ ಪ್ರದೇಶವಿರುವುದು ಟಾರಸ್ ಮತ್ತು ಅಮಾನಸ್ ಮಡಿಕೆಗಳಿಂದ ಸಂಭವಿಸಿರುವ ಕೋನ ಪ್ರದೇಶದಲ್ಲಿ.
ಏಷ್ಯ ಮೈನರಿನ ಉತ್ತರದಲ್ಲಿರುವವು ಪಾಂಟಿಕ್ ಪರ್ವತಶ್ರೇಣಿಗಳು. ಇವು ದಕ್ಷಿಣ ಮತ್ತು ಪುರ್ವದ ಶ್ರೇಣಿಗಳಿಗಿಂತ ತಗ್ಗು ಇವನ್ನು ಅನೇಕ ನದಿಗಳು ವಿಭಾಗಿಸುತ್ತವೆ. ಪರ್ಯಾಯದ್ವೀಪದ ಪಶ್ಚಿಮ ಪರ್ವತಗಳು ಪುರ್ವ-ಪಶ್ಚಿಮವಾಗಿ ಹಬ್ಬಿರುವ ಮಡಿಕೆ ಶ್ರೇಣಿಗಳು. ಕರಾವಳಿಯಿಂದ ಪ್ರಸ್ಥಭೂಮಿ ಪ್ರದೇಶಕ್ಕೆ ಹಾದುಹೋಗಲು ಅನುಕೂಲವಾದ ವಿಶಾಲ ಕಣಿವೆಗಳು ಇಲ್ಲಿ ಅನೇಕ ಉಂಟು. ಇಲ್ಲಿನ ಪರ್ವತಶ್ರೇಣಿಗಳು ಪಶ್ಚಿಮದ ಸಮುದ್ರದೊಳಕ್ಕೆ ಇಳಿದಿರುವುದರಿಂದ ಸಮುದ್ರತೀರ ಅಂಕುಡೊಂಕು. ತೀರದ ದ್ವೀಪಗಳಿಗೂ ಕರಾವಳಿಗೂ ನಡುವಣ ಸಮುದ್ರದ ಆಳ ಹೆಚ್ಚು. ಈ ಕಾರಣಗಳಿಂದಾಗಿ ಇಲ್ಲಿ ನೈಸರ್ಗಿಕ ಬಂದರುಗಳು ಅನೇಕ. ಮಾರ್ಮರ ಸಮುದ್ರದೊಳಕ್ಕೂ ಲಂಬಕೋನೀಯವಾಗಿ ಪರ್ವತಶ್ರೇಣಿಗಳು ಇಳಿದಿವೆ. ಏಷ್ಯ ಮೈನರಿನ ನದಿಗಳು ವರ್ಷವೆಲ್ಲ ತುಂಬಿ ಹರಿಯುವುದಿಲ್ಲ. ಇವುಗಳ ಕೆಳಭಾಗದಲ್ಲಿ ಮರಳು ಹೆಚ್ಚು. ಇವುಗಳಿಂದಾಗಿ ಈ ಪ್ರದೇಶದ ಕರಾವಳಿಯ ರೇಖೆಯೇ ಹಿಂದಿನ ಕಾಲಕ್ಕೂ ಈಗ್ಯೂ ಬಹಳ ವ್ಯತ್ಯಾಸಗೊಂಡಿದೆ. ಏಷ್ಯ ಮೈನರಿನ ಮುಖ್ಯ ನದಿಗಳಿವು: ಪಶ್ಚಿಮದಲ್ಲಿ ಗೆಡಿಜ್, ಬುಯುಕ್ ಮೆಂಡೆರಿಸ್ ಮತ್ತು ಕೋಕ; ಉತ್ತರದಲ್ಲಿ ಸಕರ್ಯ, ಕಿಜೆಲ್ ಇರ್ಮಕ್ ಮತ್ತು ಯೆಸಿಲ್ ಇರ್ಮಕ್; ದಕ್ಷಿಣದಲ್ಲಿ ಸೇಹಾನ್ ಮತ್ತು ಕೇಹಾನ್. ಪ್ರಸ್ಥಭೂಮಿಯ ನಟ್ಟನಡುವೆ ಇರುವ ಟeóï ಗೋಲು ಅದರ ಹೆಸರೇ ಸೂಚಿಸುವಂತೆ ಲವಣಸರೋವರ.
ಪರ್ಯಾಯ ದ್ವೀಪವನ್ನು ಸುತ್ತುವರಿದ ಪರ್ವತಶ್ರೇಣಿಗಳಿಂದಾಗಿ ನಡುವಣ ಪ್ರಸ್ಥಭೂಮಿಯಲ್ಲಿನ ವಾಯುಗುಣ ವೈಪರಿತ್ಯಗಳಿಂದ ಕೂಡಿದ್ದಾಗಿದೆ. ಅಲ್ಲಿ ವರ್ಷಕ್ಕೆ ೩-೪ ತಿಂಗಳು ಹಿಮದ ಹೊದಿಕೆ; ನಡುಬೇಸಿಗೆಯಲ್ಲಿ ಬಿಸಿಲು ಧಗೆ ಅಸಾಧ್ಯ. ಎಲ್ಲ ಋತುಗಳಲ್ಲೂ ಗಾಳಿ ಮೊರೆಯುತ್ತ ಬೀಸುತ್ತದೆ. ಮಳೆಯಾಗುವುದು ವಸಂತ ಋತುವಿನಲ್ಲಿ ಮತ್ತು ಬೇಸಿಗೆಯ ಆದಿಯಲ್ಲಿ. ಚಳಿಗಾಲದಲ್ಲಿ ಪ್ರಸ್ಥಭೂಮಿಯ ನಡುಭಾಗದಿಂದ ದಕ್ಷಿಣಕ್ಕೆ ಬೀಸುವ ಗಾಳಿ ಸಮುದ್ರತೀರಕ್ಕೆ ಇಳಿಯುವಾಗ ತನ್ನ ಶೈತ್ಯವನ್ನು ತ್ಯಜಿಸುತ್ತದೆ. ಆದರೂ ಒಮ್ಮೊಮ್ಮೆ ಥಂಡಿ ಅಧಿಕವಾಗಿ ಅಲ್ಲಿನ ಕಿತ್ತಳೆ ಫಸಲೆಲ್ಲ ನಾಶವಾಗುವುದುಂಟು.
ಚಳಿಗಾಲದಲ್ಲಿ ಪುರ್ವಾಭಿಮುಖವಾಗಿ ಬೀಸುವ ಚಕ್ರಮಾರುತಗಳಿಂದ ತೀರಪ್ರದೇಶಗಳಲ್ಲಿ ಮಳೆಯಾಗುತ್ತದೆ.
Seamless Wikipedia browsing. On steroids.