From Wikipedia, the free encyclopedia
ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟ ( ೧೯೧೪ ಫೆಬ್ರುವರಿ - ೨೭-೧೦-೨೦೦೦) ಕನ್ನಡದ ಪ್ರಸಿದ್ಧ ಕವಿಗಳಲ್ಲೊಬ್ಬರು.
ಎಸ್. ವಿ. ಪರಮೇಶ್ವರ ಭಟ್ಟ | |
---|---|
ಜನನ | ೧೯೧೪ ತೀರ್ಥಹಳ್ಳಿ, ಶಿವಮೊಗ್ಗ, ಕರ್ನಾಟಕ |
ಮರಣ | ೨೭ ಅಕ್ಟೊಬರ್ ೨೦೦೦ |
ವೃತ್ತಿ | ಕವಿ |
ಭಾಷೆ | ಕನ್ನಡ |
ಪ್ರಕಾರ/ಶೈಲಿ | ಕವಿತೆ |
೧೯೧೪ ಫೆಬ್ರುವರಿ ಸದಾಶಿವರರಾಯರು ಮತ್ತು ಲಕ್ಷ್ಮನವರ ಪುತ್ರರಾಗಿ ತೀರ್ಥಹಳ್ಳಿಯಲ್ಲಿ ೧೮ ಫೆಬ್ರವರಿ ೧೯೧೪ರಲ್ಲಿ ಜನಿಸಿದರು. ಅವರ ತಂದೆ ಸದಾಶಿವರಾಯರು ವೈದಿಕ ಕುಲದವರಾದರೂ ಲೌಕಿಕಕ್ಕೆ ಬೇಕಾದ ಇಂಗ್ಲೇಷ್, ಕನ್ನಡಗಳಲ್ಲಿ ಶಿಕ್ಷಣ ಪಡೆದು, ತೀರ್ಥಹಳ್ಳಿಯ ಸಮೀಪದ ಮಾಳೋರಿನಲ್ಲಿ ಶಾಲಾ ಉಪಾಧ್ಯಾಯರಾಗಿದ್ದರು. ಸದಾಶಿವರಾಯರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಯರಿಗೆ ತಂದೂರಿಗೆ ವರ್ಗವಾದಾಗ ಪರಮೇಶ್ವರರಿಗೆ ಖಾಸಗಿಯಾಗಿ ಪಾಠ ಹೇಳಿ, ಲೋವರ್ ಸೆಕೆಂಡರಿ ಪರೀಕ್ಷೆ ಕಟ್ಟಿಸಿದರು. ತಂದೆಯವರು ಎಸ್.ವಿ.ಪಿ. ಯವರಿಗೆ ಹಲವಾರು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ತಂದೆಯವರಿಗೆ ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿ, ಹವ್ಯಾಸಗಳಿದ್ದುದರಿಂದ ಮಗನನ್ನು ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರಷ್ಟೇ ಅಲ್ಲದೇ, ಅವನಿಗೂ ಕಾಲಿಗೆ ಗೆಜ್ಜೆ ಕಟ್ಟಿ ಮುಖಕ್ಕೆ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿಸಿ, ಕುಣಿಸಿ ನೋಡಿ ಆನಂದ ಪಟ್ಟರು. ಅವನ ಬಾಲಕೃಷ್ಣ, ಉತ್ತರೆಯ ವೇಷಗಳು ಅವರಿಗೆ ಮೆಚ್ಚುಗೆಯಾಗಿದ್ದವು. ಎಸ್.ವಿ.ಪಿ.ಯವರಿಗೆ ತಂದೆ ಸದಾಶಿವರಾಯರೆ ಮೊದಲ ಗುರು. ಇವರ ಚಿಕ್ಕಪ್ಪ ಪಿಟೀಲು ವಿದ್ವಾಂಸರಾಗಿದ್ದರು. ಅವರ ಮಗ ಲಕ್ಷ್ಮಣ ಶಾಸ್ತ್ರಿ, ವಾಸುದೇವಾಚಾರ್ಯರು ಮತ್ತು ಚೆನ್ನಕೇಶವಯ್ಯನವರಲ್ಲಿ ಸಂಗೀತ ಕಲಿತು, ಸರ್ಕಾರಿ ಶಾಲೆಗಳಲ್ಲಿ ಸಂಗೀತದ ಉಪಧ್ಯಾಯರಾಗಿ ಸೇವೆ ಸಲ್ಲಿಸಿದರು. ಇದರಿಂದ ಎಸ್.ವಿ.ಪಿ.ಯವರ ಕುಟುಂಬಕ್ಕೆ ಸಂಗೀತ, ಕಲೆಗಳಲ್ಲಿ ಆಸಕ್ತಿ ಇದ್ದುದು ತಿಳಿದು ಬರುತ್ತದೆ. ಪರಮೇಶ್ವರರು ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳಾಗಿದ್ದರು. ಶಾಸ್ತ್ರಿಗಳು [೧][೨]
ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಪರಮೇಶ್ವರಭಟ್ಟರು ಬೆಂಗಳೂರಿನಲ್ಲಿ ಎಂ.ಎ.ವರೆಗೆ ಓದಿದರು.ಬಳಿಕ ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಪ್ರಾಧ್ಯಪಕರಾಗಿ ,ವಿಭಾಗದ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಮಂಗಳೂರು ವಿಶ್ವವಿದ್ಯಾಲಯ
Darshanop
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.