Remove ads
ವರ್ಷದ ಹವಮಾನ-ಆಧಾರಿತ ಉಪವಿಭಾಗ From Wikipedia, the free encyclopedia
ಭೂಮಿಯು ಸೂರ್ಯನ ಸುತ್ತ ತನ್ನ ಕಕ್ಷೆಯಲ್ಲಿ ಒಂದು ಪೂರ್ಣ ಸುತ್ತು ತಿರುಗಲು ಒಂದು ವರ್ಷ ಬೇಕಾಗುತ್ತದೆ. ಹೀಗೆ ತಿರುಗುವಾಗ ಹವಾಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎಂದು ಕರೆಯಲಾಗುತ್ತದೆ. ಒಂದು ವರ್ಷದಲ್ಲಿ ಋತುಗಳು ನಿರ್ದಿಷ್ಟ ಕಾಲದಲ್ಲಿ ಒಂದರ ನಂತರ ಒಂದರಂತೆ ಪುನರಾವರ್ತಗೊಳ್ಳುತ್ತವೆ. ಭಾರತೀಯ ಪದ್ಧತಿಯ ಋತುಗಳಿಗೂ ಆಂಗ್ಲ ಪದ್ಧತಿಯ ಋತುಗಳಿಗೂ ವ್ಯತ್ಯಾಸವಿದೆ.
ಪ್ರಕೃತಿ ಸರಣಿಯ ಭಾಗ ಹವಾಮಾನ |
ಋತುಗಳು |
---|
ವಸಂತ · ಬೇಸಿಗೆಕಾಲ |
ಉಷ್ಣವಲಯ
ಒಣ ಋತು · ತಂಪು ಋತು |
ಚಂಡಮಾರುತ ಗಳು |
ಗುಡುಗುಮಳೆ · ಮಹಾ ಗುಡುಗುಮಳೆ |
ಅವಕ್ಷೇಪನ |
ಸೋನೆ ಮಳೆ · ಮಳೆ · ಹಿಮ · ಗ್ರೌಪುಲ್ |
ವಿಷಯಗಳು |
ಪವನ ವಿಜ್ಞಾನ · ಹವಾಮಾನ |
ಹವಾಮಾನ ಪೋರ್ಟಲ್ |
ಭಾರತೀಯ (ಹಿಂದೂ) ಪದ್ಧತಿಯ ಪ್ರಕಾರ ಒಂದು ವರ್ಷದಲ್ಲಿ ೬ ಋತುಗಳಿವೆ. ಪ್ರತಿಯೊಂದು ಋತವಿನ ಅವಧಿ ಎರಡು ತಿಂಗಳು. ಹಿಂದೂ ವರ್ಷವು ಚಾಂದ್ರಮಾನ ಯುಗಾದಿಯಿಂದ ಆರಭವಾಗುತ್ತದೆ. ಹಿಂದೂ ಪದ್ಧತಿಯ ಋತುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
ಋತು | ಆಂಗ್ಲ ಹೆಸರು | ಮಾಸಗಳು | ಆಂಗ್ಲ ಮಾಸ ಕಾಲ | ವಾತಾವರಣ |
---|---|---|---|---|
ವಸಂತ | Spring | ಚೈತ್ರ, ವೈಶಾಖ | ಮಾರ್ಚ್-ಮೇ | ಮರಗಿಡಗಳು, ಉಲ್ಲಾಸಮಯ ವಾತಾವರಣ, ನೂತನ ವರ್ಷಾರಂಭ |
ಗ್ರೀಷ್ಮ | Summer | ಜ್ಯೇಷ್ಠ, ಆಷಾಢ | ಮೇ-ಜೂಲೈ | ಬೇಸಿಗೆ ಅಥವಾ ಸೆಕೆಗಾಲ |
ವರ್ಷ | Monsoon | ಶ್ರಾವಣ, ಭಾದ್ರಪದ | ಜುಲೈ-ಸೆಪ್ಟೆಂಬರ | ಮಳೆಗಾಲ |
ಶರತ್ | Autumn | ಆಶ್ವಯುಜ, ಕಾರ್ತಿಕ | ಸೆಪ್ಟೆಂಬರ-ನವಂಬರ | ಮಳೆಗಾಲ ಮುಂದುವರಿಕೆ |
ಹೇಮಂತ | Winter | ಮಾರ್ಗಶಿರ, ಪುಷ್ಯ | ನವಂಬರ-ಜನವರಿ | ಚಳಿಗಾಲ ಆರಂಭ |
ಶಿಶಿರ | Winter & Fall | ಮಾಘ, ಫಾಲ್ಗುಣ | ಜನವರಿ-ಮಾರ್ಚ | ಚಳಿಗಾಲ ಮುಂದುವರಿಕೆ ಹಾಗೂ ಕೊನೆ, ವರ್ಷದ ಕೊನೆಯ ಋತು |
ಆಂಗ್ಲ ಪದ್ಧತಿಯಲ್ಲಿ ನಾಲ್ಕು ಋತುಗಳು ಅಥವಾ ಕಾಲಗಳಿವೆ. ಇವುಗಳೆಂದರೆ ಸ್ಪ್ರಿಂಗ್ (spring) ಅಥವಾ ವಸಂತ, ಸಮ್ಮರ್ (summer) ಅಥವಾ ಬೇಸಿಗೆ ಕಾಲ, ಆಟಂ (autumn) ಅಥವಾ ಶರದೃತು ಹಾಗೂ ವಿಂಟರ್ (winter) ಅಥವಾ ಚಳಿಗಾಲ.
ಭೂಮಿಯು ಸೂರ್ಯನನ್ನು ಸುತ್ತುವ ಕಕ್ಷೆಯು ಅಂಡಾಕೃತಿಯಲ್ಲಿದ್ದು ಈ ಕಕ್ಷೆಗೆ ಸೂರ್ಯನು ಕೇಂದ್ರ ಬಿಂದುವಾಗಿರುವುದಿಲ್ಲ. ಇದರಿಂದ ಒಂದು ವರ್ಷದಲ್ಲಿ ಭೂಮಿ ಹಾಗೂ ಸೂರ್ಯನ ನಡುವಿನ ಅಂತರವು ಒಂದೇ ಸಮವಾಗಿರದೆ ವ್ಯತ್ಯಯವಾಗುತ್ತಿರುತ್ತದೆ. ಈ ವ್ಯತ್ಯಯವಾಗುವ ಅಂತರವೇ ಋತುಗಳಿಗೆ ಕಾರಣ ಎಂಬ ಸಾಮಾನ್ಯವಾದ ತಪ್ಪು ಗ್ರಹಿಕೆಯಿದೆ. ಇದು ತಪ್ಪೆಂದು ಅರಿಯಲು ಭೂಗೋಳದ ಉತ್ತರಾರ್ಧ ಹಾಗೂ ದಕ್ಷಿಣಾರ್ಧದಲ್ಲಿ ಏಕಕಾಲದಲ್ಲಿ ಇರುವ ಋತುಗಳನ್ನು ಗಮನಿಸಬಹುದು. ಉತ್ತರಾರ್ಧದಲ್ಲಿ ಬೇಸಿಗೆ ಇರುವಾಗ ದಕ್ಷಿಣಾರ್ಧದಲ್ಲಿ ಚಳಿಗಾಲವಿರುತ್ತದೆ.
ಋತುಗಳು ಉಂಟಾಗಲು ಮುಖ್ಯ ಕಾರಣವೆಂದರೆ ಭೂಮಿಯು ತನ್ನ ಅಕ್ಷದಲ್ಲಿ ತಿರುಗುವಾಗ ೨೩.೫ ಡಿಗ್ರಿಗಳಷ್ಟು ವಾಲಿರುವುದು. ಈ ವಾಲಿಕೆಯಿಂದ ಭೂಮಿಯ ಉತ್ತರಾರ್ಧವು ನಿರ್ದಿಷ್ಟ ಅವಧಿಯಲ್ಲಿ ಸೂರ್ಯನಿಗೆ ಸಮೀಪವಾಗಿಯೂ ಕೆಲವೊಮ್ಮೆ ದೂರವಾಗಿಯೂ ಇರುತ್ತದೆ. ಇದೇ ರೀತಿ ದಕ್ಷಿಣಾರ್ಧವೂ ಅವಧಿಯಲ್ಲಿ ಸೂರ್ಯನಿಗೆ ಸಮೀಪವಾಗಿಯೂ ಕೆಲವೊಮ್ಮೆ ದೂರವಾಗಿಯೂ ಆದರೆ ಉತ್ತರಾರ್ಧದ ವಿರುದ್ಧವಾಗಿ ಇರುತ್ತದೆ.
ಭೂಮಿಯ ಉತ್ತರಾರ್ಧವು ಸೂರ್ಯನ ಕಡೆಗೆ ವಾಲಿರುವಾಗ ಉತ್ತರಾರ್ಧದಲ್ಲಿ ಸೆಕೆಗಾಲವಿರುತ್ತದೆ. ಈ ಅವಧಿಯಲ್ಲಿ ಉತ್ತರಾರ್ಧದಲ್ಲಿ ಸೂರ್ಯನು ಮಧ್ಯಾಹ್ನದ ವೇಳೆ ನಡು ನೆತ್ತಿಯ ಮೇಲೆ ಬರುತ್ತಾನೆ ಹಾಗೂ ಹಗಲುಗಳ ಅವಧಿಯು ಹೆಚ್ಚಾಗಿರುತ್ತದೆ. ಸೂರ್ಯನ ಕಿರಣಗಳು ಉತ್ತರಾರ್ಧವನ್ನು ಹೆಚ್ಚು ನೇರವಾಗಿ ತಲುಪುತ್ತವೆ.
ಉತ್ತರಾರ್ಧವು ಸೂರ್ಯನಿಂದ ದೂರಕ್ಕಿರುವಾಗ ಅಲ್ಲಿ ಚಳಿಗಾಲವಿರುತ್ತದೆ. ಸೂರ್ಯನು ಕ್ಷಿತಿಜದ ಮೇಲೆ ಕಡಿಮೆ ಸಮಯವಿರುತ್ತಾನೆ ಮತ್ತು ನಡುನೆತ್ತಿಗೆ ಏರುವುದಿಲ್ಲ. (ಭಾರತವು ಅದರಲ್ಲೂ ಕರ್ನಾಟಕವು ಉತ್ತರಾರ್ಧದಲ್ಲಿದ್ದರೂ ಭೂಮಧ್ಯ ರೇಖೆಗೆ ಸಮೀಪವಿರುವುದರಿಂದ ಇಲ್ಲಿ ಹೆಚ್ಚು ವ್ಯತ್ಯಾಸವು ತಿಳಿದು ಬರುವುದಿಲ್ಲ). ಹಗಲುಗಳಿಗಿಂತ ರಾತ್ರಿಗಳು ಉದ್ದವಾಗಿರುತ್ತವೆ. ಸೂರ್ಯನ ಕಿರಣಗಳು ಓರೆಯಾಗಿ ಉತ್ತರಾರ್ಧವನ್ನು ತಲುಪುತ್ತವೆ. ಉತ್ತರಾರ್ಧದಲ್ಲಿ ಚಳಿಗಾಲವಿರುವಾಗ ಭೂಮಿಯು ಸೂರ್ಯನಿಗೆ ಹೆಚ್ಚು ಹತ್ತಿರವಿರುವುದು ಇಲ್ಲಿ ಗಮನಿಸಬೇಕಾದ ಅಂಶ. ಭೂಮಿಯು ಸರಿ ಸುಮಾರು ಜನವರಿ ೪ರಂದು ಸೂರ್ಯನಿಗೆ ಅತಿ ಹತ್ತಿರವಾಗಿರುತ್ತದೆ ಮತ್ತು ಈ ಅವಧಿಯಲ್ಲಿ ಉತ್ತರಾರ್ಧದಲ್ಲಿ ಚಳಿಗಾಲವು ಪರಾಕಾಷ್ಠೆಯಲ್ಲಿರುವ ಸಮಯವಾಗಿರುತ್ತದೆ.
ದಕ್ಷಿಣಾರ್ಧದಲ್ಲಿ ಋತುಗಳು ಉತ್ತರಾರ್ಧದ ವಿರುದ್ಧವಾಗಿರುತ್ತವೆ. ಉತ್ತರಾರ್ಧದಲ್ಲಿ ಚಳಿಗಾಲವಿರುವಾಗ ಇಲ್ಲಿ ಸೆಕೆಗಾಲವಿರುತ್ತದೆ. ಆಸ್ಟ್ರೇಲಿಯಾದಲ್ಲಿ ಬೇಸಿಗೆಯಲ್ಲಿ ಕ್ರಿಸ್ಮಸ್ ಹಬ್ಬವನ್ನಾಚರಿಸುತ್ತಾರೆ. ಉತ್ತರಾರ್ಧದಲ್ಲಿ ಸೆಕೆಗಾಲವಿರುವಾಗ ದಕ್ಷಿಣಾರಾರ್ಧದಲ್ಲಿ ಚಳಿಗಾಲವಿರುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.