From Wikipedia, the free encyclopedia
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS )(ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್) ಎಂಬುದು ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ಸಂಶೋಧನಾ ಸೌಲಭ್ಯವಾಗಿದ್ದು, ಇದನ್ನು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ. ಈ ನಿಲ್ದಾಣದ ನಿರ್ಮಾಣವನ್ನು 1998 ರಲ್ಲಿ ಪ್ರಾರಂಭಿಸಲಾಗಿದ್ದು, 2011 ರ ಉತ್ತರಾರ್ಧದಲ್ಲಿ ಪೂರ್ಣಗೊಳಿಸಬೇಕೆಂದು ನಿರ್ಧರಿಸಲಾಗಿದೆ. ನಿಲ್ದಾಣವು ಕೊನೆಯ ಪಕ್ಷ 2015 ರವರೆಗೆ ಮತ್ತು 2020 ರವರೆಗೆ ಕಾರ್ಯಾಚರಣೆಯಲ್ಲಿರಬೇಕೆಂದು ನಿರೀಕ್ಷಿಸಲಾಗಿದೆ.[೬][೭]
ಹಿಂದಿನ ಯಾವುದೇ ಬಾಹ್ಯಕಾಶ ನಿಲ್ದಾಣಕ್ಕಿಂತ ಅತ್ಯಂತ ದೊಡ್ಡ ಪಾರ್ಶ್ವಛೇದೀಯ ವ್ಯಾಪ್ತಿಯೊಂದಿಗೆ, ISS ಅನ್ನು ಭೂಮಿಯಿಂದ ಬರಿಕಣ್ಣಿನಲ್ಲಿ ನೋಡಬಹುದಾಗಿದೆ.[೮] ಅಲ್ಲದೇ ಇದು ಹಿಂದೆಂದೂ ಭೂಮಿಯನ್ನು ಸುತ್ತಿರದ ಅತ್ಯಂತ ದೊಡ್ಡ, ಮಾನವ ನಿರ್ಮಿತ ಉಪಗ್ರಹವಾಗಿದೆ.[೯] ಇದರಲ್ಲಿ ISS ಸೂಕ್ಷ್ಮಗುರುತ್ವ ಪರಿಸರವನ್ನು ಹೊಂದಿರುವ ಸಂಶೋಧನಾ ಪ್ರಯೋಗಾಲಯದಂತೆ ಸೇವೆಸಲ್ಲಿಸುತ್ತದೆ. ಈ ಪ್ರಯೋಗಾಲಯದಲ್ಲಿ ಸಿಬ್ಬಂದಿ ಜೀವವಿಜ್ಞಾನ, ರಾಸಾಯನಿಕ ಶಾಸ್ತ್ರ, ಔಷಧಿ, ಶರೀರವಿಜ್ಞಾನ ಮತ್ತು ಭೌತಶಾಸ್ತ್ರಮತ್ತು ಖಗೋಳವಿಜ್ಞಾನಕ್ಕೆ ಸಂಬಂಧಪಟ್ಟ ಮತ್ತು ಪವನಶಾಸ್ತ್ರಕ್ಕೆ ಸಂಬಂಧ ಪಟ್ಟ ವೀಕ್ಷಣೆಗಳಲ್ಲಿ ಪ್ರಯೋಗಗಳನ್ನು ನಡೆಸುತ್ತಾರೆ.[೧೦][೧೧][೧೨] ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳ ಪರೀಕ್ಷೆಗಾಗಿ ನಿಲ್ದಾಣವು ವಿಶಿಷ್ಟ ವಾತಾವರಣವನ್ನು ಒದಗಿಸುತ್ತದೆ. ಇಂತಹ ವ್ಯವಸ್ಥೆಗಳು ಚಂದ್ರ ಮತ್ತು ಮಂಗಳದ ಯಾತ್ರೆಗೆ ಅಗತ್ಯವಾಗಿವೆ.[೧೩] ISS ಅನ್ನು ಆರು ಜನ ಗಗನಯಾತ್ರಿಗಳ ಮತ್ತು ಅಂತರಿಕ್ಷಯಾತ್ರಿಗಳ ಗಗನಯಾತ್ರೆಯ ಸಿಬ್ಬಂದಿ ನಿರ್ವಹಿಸುತ್ತದೆ. ಅಲ್ಲದೇ 2000 ಇಸವಿಯ ಅಕ್ಟೋಬರ್ 31 ರಂದು ಗಗನಯಾತ್ರೆ 1 ಅನ್ನು ಆರಂಭಿಸಿದಾಗಿನಿಂದ, ಒಟ್ಟು Error: Error: Second date should be year month day This is not a valid number. Please refer to the documentation at {{Number table sorting}}
for correct input. years and Error: Error: Need valid year month day This is not a valid number. Please refer to the documentation at {{Number table sorting}}
for correct input. days ಗಗನಯಾತ್ರೆಯ ವರೆಗೂ ಬಾಹ್ಯಾಕಾಶದಲ್ಲಿ ಮಾನವನ ಉಪಸ್ಥಿತಿಗೆ ಯಾವುದೇ ಅಡೆತಡೆ ಇರದಂತೆ ನಿಲ್ದಾಣದ ಕಾರ್ಯಯೋಜನೆಯನ್ನು ನಿರ್ವಹಿಸುತ್ತಾರೆ. ಹೀಗೆ ಈ ಕಾರ್ಯಯೋಜನೆಯು, ಯಾವುದೇ ಅಡೆತಡೆಯಿಲ್ಲದೇ ದೀರ್ಘಕಾಲದ ವರೆಗೆ ಬಾಹ್ಯಾಕಾಶದಲ್ಲಿದ್ದ ಮಾನವನ ಉಪಸ್ಥಿತಿಯ ಇತ್ತೀಚಿನ ದಾಖಲೆಯನ್ನು ಹೊಂದಿದೆ. ಮಿರ್ (ಬಾಹ್ಯಾಕಾಶ ನಿಲ್ದಾಣ)ನಲ್ಲಿ 3,644 ದಿನಗಳವರೆಗೆ ಇದ್ದ ಹಿಂದಿನ ದಾಖಲೆಯನ್ನು ಮೀರಿಸಿ ಗಗನಯಾತ್ರೆ 26 ರ ಸಿಬ್ಬಂದಿ ಬಾಹ್ಯಾಕಾಶದಲ್ಲಿದ್ದರು.[೧೪] As of 25 ನವೆಂಬರ್ 2010[update][೧೫]
ISS ಎಂಬುದು ಅಮೇರಿಕಾದ ಫ್ರೀಡಮ್ , ಸೋವಿಯತ್ ರಷ್ಯಾ /ರಷ್ಯಾದ ಮಿರ್ -2, ಯುರೋಪಿನ ಕೊಲಂಬಸ್ ಮತ್ತು ಜಪಾನೀಯರಕಿಬೋ ವನ್ನು ಒಳಗೊಂಡ ಅನೇಕ ಬಾಹ್ಯಾಕಾಶ ನಿಲ್ದಾಣ ಯೋಜನೆಗಳ ಸಮನ್ವಯವಾಗಿದೆ.[೧೬][೧೭] ಬಜೆಟ್ ನ (ಆಯವ್ಯಯದಲ್ಲಿನ) ಕೊರತೆಯ ನಿರ್ಬಂಧದಿಂದಾಗಿ ಈ ಯೋಜನೆಗಳು, ಏಕೀಕೃತ ಅಂತರರಾಷ್ಟ್ರೀಯ ಯೋಜನೆಯಾಗಿ ವಿಲೀನಗೊಂಡವು.[೧೬] ISS ಯೋಜನೆಯನ್ನು 1994 ರಲ್ಲಿ ಷಟಲ್(ಬಾನಗಾಡಿ)-ಮಿರ್ ಕಾರ್ಯಕ್ರಮದೊಂದಿಗೆ ಪ್ರಾರಂಭಿಸಲಾಯಿತು.[೧೮] ಅಲ್ಲದೇ ನಿಲ್ದಾಣದ ಪ್ರಥಮ ಘಟಕ(ಮಾಡ್ಯೂಲ್) ವಾದ ಜಾರ್ಯಾ ವನ್ನು, ರಷ್ಯಾ 1998 ರಲ್ಲಿ ಉಡಾವಣೆ ಮಾಡಿತು.[೧೬] ಸಾಮಾನ್ಯ ವಾಯು ಒತ್ತಡವಿರುವಂತೆ ಏರ್ಪಡಿಸಲಾದ ಘಟಕಗಳು, ಬಾಹ್ಯ ಟ್ರಸ್ (ಕೆಳದಿಮ್ಮಿಕಟ್ಟು) ಗಳು, ಮತ್ತು ಇತರ ಘಟಕಗಳನ್ನು, ಅಮೇರಿಕದ ಬಾಹ್ಯಾಕಾಶ ಬಾನಗಾಡಿ(ಬಾಹ್ಯಾಕಾಶ ಸಾರಿಗೆ ವ್ಯವಸ್ಥೆ), ರಷ್ಯಾದ ಪ್ರೋಟಾನ್ ರಾಕೆಟ್ಸ್ ಮತ್ತು ರಷ್ಯಾದ ಸೊಯೊಸ್ ರಾಕೆಟ್ಸ್ ಗಳಿಂದ ಉಡಾವಣೆ ಮಾಡುವ ಮೂಲಕ ಜೋಡಣೆಯು ಮುಂದುವರೆದಿದೆ.[೧೭] As of ಮೇ 2010[update], ನಿಲ್ದಾಣವು ಸಾಮಾನ್ಯ ವಾಯು ಒತ್ತಡವಿರುವಂತೆ ಏರ್ಪಡಿಸಲಾದ ಹದಿನಾಲ್ಕು ಘಟಕಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೇ ಅತ್ಯಂತ ವ್ಯಾಪಕವಾದ ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ (ITS) ಅನ್ನು ಕೂಡ ಒಳಗೊಂಡಿದೆ. ಅಲ್ಲದೇ ಇದಕ್ಕೆ ಹದಿನಾರು ಸೌರ ದ್ಯುತಿವಿದ್ಯುಜ್ಜನಕ ಸರಣಿಗಳ ಮೂಲಕ ವಿದ್ಯುತ್ ಅನ್ನು ಒದಗಿಸಲಾಗುತ್ತದೆ.(ಅಂತರರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯ ವಿದ್ಯುತ್ ವ್ಯವಸ್ಥೆ). ಇದನ್ನು ರಷ್ಯಾದ ಘಟಕಗಳ ಮೇಲಿರುವ ನಾಲ್ಕು ಸಣ್ಣ ಸರಣಿಗಳ ಜೊತೆಯಲ್ಲಿ ಮೇಲ್ಮುಖವಾದ ಬಾಹ್ಯ ಆಸರೆ ಕಟ್ಟುಗಳ, ಟ್ರಸ್ ಗಳ ಮೇಲೆ ಜೋಡಿಸಲಾಗಿರುತ್ತದೆ.[೧೯] ನಿಲ್ದಾಣವನ್ನು 278 km (173 mi) ರಿಂದ 460 km (286 mi) ರಷ್ಟು ಎತ್ತರದ ಕಕ್ಷೆಯೊಳಗೆ ಸುಸ್ಥಿತಿಯಲ್ಲಿಟ್ಟು ನೋಡಿಕೊಳ್ಳಲಾಗುತ್ತದೆ. ಅಲ್ಲದೇ ಸರಿಸುಮಾರು 27,743.8 km/h (17,239.2 mph) ವೇಗದಲ್ಲಿ ಒಂದು ದಿನಕ್ಕೆ 15.7 ರಷ್ಟು ಕಕ್ಷೆಯನ್ನು ಕ್ರಮಿಸುವ ಮೂಲಕ ಪ್ರಯಾಣ ಮಾಡಲಾಗುತ್ತದೆ.[೨೦]
ಇದನ್ನು ಐದು ಸಹಭಾಗಿತ್ವದ ಬಾಹ್ಯಾಕಾಶ ಸಂಸ್ಥೆಗಳ ಜಂಟಿ ಯೋಜನೆಯ ರೂಪದಲ್ಲಿ ನಿರ್ವಹಿಸಲಾಗುತ್ತದೆ. ನಿಲ್ದಾಣದ ವಿಭಾಗಗಳನ್ನು ಭೂಮಿ ಮೇಲಿನ ಗಗನಯಾತ್ರೆಯ (ವೈಜ್ಞಾನಿಕ ಕಾರ್ಯಾಚರಣೆಯ)ನಿಯಂತ್ರಣ ಕೇಂದ್ರಗಳು ನಿಯಂತ್ರಿಸುತ್ತವೆ. ಇವುಗಳನ್ನು ಅಮೇರಿಕದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA)(ನಾಸಾ), ಯುರೋಪಿಯನ್ ಸ್ಪೇಸ್ ಏಜೆನ್ಸಿ(ESA)(ಯುರೋಪಿನ ಬಾಹ್ಯಾಕಾಶ ಸಂಸ್ಥೆ), ರಷ್ಯಾನ್ ಫೆಡರಲ್ ಸ್ಪೇಸ್ ಏಜೆನ್ಸಿ (RKA), ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ (JAXA) ಮತ್ತು ಕೆನಡಿಯನ್ ಸ್ಪೇಸ್ ಏಜೆನ್ಸಿ (CSA) ನೋಡಿಕೊಳ್ಳುತ್ತವೆ.[೨೧][೨೨] ನಿಲ್ದಾಣದ ಮಾಲಿಕತ್ವ ಮತ್ತು ಬಳಕೆಯನ್ನು ಅಂತರ ಸರ್ಕಾರೀ ಒಪ್ಪಂದಗಳು ಮತ್ತು ಕರಾರುಗಳಲ್ಲಿ ದೃಢಪಡಿಸಲಾಗಿದೆ,[೨೩] ಇದು ರಷ್ಯನ್ ಫೆಡರೇಷನ್ ಗೆ, US ಆರ್ಬಿಟಲ್ ಸೆಗ್ಮೆಂಟ್ ನೊಂದಿಗೆ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ (ರಷ್ಯನ್ ಕಕ್ಷೆಯ ಭಾಗ)ನಲ್ಲಿರುವ ಅದರ ಘಟಕಗಳ ಮೇಲೆ ಸಂಪೂರ್ಣ ಹಕ್ಕನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ.[೨೪] ನಿಲ್ದಾಣದ ಉಳಿದ ಹಕ್ಕನ್ನು ಇತರ ಅಂತರರಾಷ್ಟ್ರೀಯ ಸಹಯೋಗಿಗಳ ನಡುವೆ ಹಂಚಿಕೆ ಮಾಡಲಾಗಿದೆ.[೨೩] ಈ ನಿಲ್ದಾಣ ನಿರ್ಮಿಸಲು 30 ವರ್ಷಗಳ ಅವಧಿಗೆ ತಗಲುವ ವೆಚ್ಚ €100 ಬಿಲಿಯನ್ ಎಂದು ESA ಅಂದಾಜು ಮಾಡಿದೆ,[೨೫] ಅಲ್ಲದೇ 35 ರಿಂದ 160 ಬಿಲಿಯನ್ US ಡಾಲರ್ ಗಳಾಗಬಹುದೆಂದೂ ಕೂಡ ಅಂದಾಜುಮಾಡಲಾಗಿದೆ. ISS ಅನ್ನು ಹಿಂದೆಂದೂ ನಿರ್ಮಿಸದ ಅತ್ಯಂತ ದುಬಾರಿ ವೆಚ್ಚದ ಬಾಹ್ಯಾಕಾಶ ನಿಲ್ದಾಣವೆಂದು ನಂಬಲಾಗುತ್ತದೆ.[೨೬] ISS ಅನ್ನು ನಿರ್ಮಿಸುವ ಯೋಜನೆಯಲ್ಲಿ ತಗಲುವ ಅಧಿಕ ವೆಚ್ಚದಿಂದಾಗಿ, ಈ ಯೋಜನೆಯ ಹಣಕಾಸು, ಸಂಶೋಧನಾ ಸಾಮರ್ಥ್ಯಗಳು ಮತ್ತು ಇದರ ತಾಂತ್ರಿಕ ವಿನ್ಯಾಸವನ್ನು ಟೀಕಿಸಲಾಗಿದೆ.[೨೭][೨೮] ಈ ನಿಲ್ದಾಣಕ್ಕೆ ಸೊಯುಜ್ ಬಾಹ್ಯಾಕಾಶನೌಕೆ , ಪ್ರೋಗ್ರೆಸ್ ಬಾಹ್ಯಾಕಾಶನೌಕೆ, ಬಾನಗಾಡಿಗಳು, ಅಟೊಮೇಟೆಡ್ ಟ್ರಾನ್ಸ್ಫರ್ ವೆಹಿಕಲ್ ಮತ್ತು H-II ಟ್ರಾನ್ಸ್ಫರ್ ವೆಹಿಕಲ್ ಗಳು ಸೇವೆಸಲ್ಲಿಸುತ್ತವೆ.[೨೨] ಅಲ್ಲದೇ 15 ವಿವಿಧ ರಾಷ್ಟ್ರಗಳಿಂದ ಗಗನಯಾತ್ರಿಗಳು, ಅಂತರಿಕ್ಷಯಾತ್ರಿಗಳು ಇಲ್ಲಿಗೆ ಭೇಟಿ ನೀಡಿದ್ದಾರೆ.[೯]
The International Space Station on 23 May 2010 as seen from the departing Space Shuttle Atlantis during STS-132. | ||
ಐಎಸ್ಎಸ್ ಇನ್ಸಿಗ್ನಿಯಾ | ||
Station statistics | ||
---|---|---|
COSPAR ID | 1998-067A | |
Call sign | ಅಪ್ಲ್ಹಾ | |
Crew | ೬ | |
Launch | ೧೯೯೮–೨೦೧೧ | |
Launch pad | KSC LC-39, Baikonur LC-1/5 & LC-81/23 | |
Mass | 369,914 kg (815,521 lb) | |
Length | 51 m (167.3 ft) from PMA-2 to Zvezda | |
Width | 109 m (357.5 ft) along truss, arrays extended | |
Height | c. 20 m (c. 66 ft) nadir–zenith, arrays forward–aft (27 November 2009)Expression error: Unexpected < operator. | |
Pressurised volume | 837 m3 (29,561 cu ft) | |
Atmospheric pressure | 101.3 kPa (29.91 inHg, 1 atm) | |
Perigee | 347 km (187 nmi) AMSL (18 June 2010) | |
Apogee | 360 km (194 nmi) AMSL (18 June 2010) | |
Orbital inclination | 51.6 degrees | |
Average speed | 7,706.6 m/s (27,743.8 km/h, 17,239.2 mph) | |
Orbital period | 91 minutes | |
Days in orbit | 9491 (೧೪ ನವೆಂಬರ್ ೨೦೨೪) | |
Days occupied | 8778 (೧೪ ನವೆಂಬರ್ ೨೦೨೪) | |
Number of orbits | 148976 (೧೪ ನವೆಂಬರ್ ೨೦೨೪) | |
Orbital decay | 2 km/month | |
Statistics as of 23 May 2010 (unless noted otherwise) | ||
References: [೧][೨][೩][೪][೫] | ||
Configuration | ||
Station elements as of 18 ಮೇ 2010[update] (exploded view) |
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ವೆಂಬುದು ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ವಾಸಯೋಗ್ಯ ಉಪಗ್ರಹವಾಗಿದ್ದು, ಇದನ್ನು ಪ್ರಸ್ತುತದಲ್ಲಿ ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಜೋಡಿಸಿ ಸ್ಥಾಪಿಸಲಾಗುತ್ತಿದೆ. ISS ಮುಖ್ಯವಾಗಿ NASA ದ ಬಾನಗಾಡಿಯಂತಹ ಬಾಹ್ಯಾಕಾಶ ನೌಕೆಗೆ ಸಂಶೋಧನ ಪ್ರಯೋಗಾಲಯವನ್ನು ಒದಗಿಸಿದೆ. ಏಕೆಂದರೆ ಇದು ಬಾಹ್ಯಾಕಾಶ ಪರಿಸರದಲ್ಲಿ(ಹಗುರವಾಗಿರುವಿಕೆ) ದೀರ್ಘಕಾಲವಿರುವಂತಹ ವೇದಿಕೆಯಾಗಿದ್ದು, ಇಲ್ಲಿ ವ್ಯಾಪಕವಾದ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತದೆ.[೯][೨೯] ಕಾಯಂ ಸಿಬ್ಬಂದಿಯ ಉಪಸ್ಥಿತಿಯು, ಬಾಹ್ಯಾಕಾಶನೌಕೆಗೆ ಅದರ ಪ್ರಯೋಗಗಳನ್ನು ಮತ್ತು ಘಟಕಗಳನ್ನು ಸ್ವತಃ ಎಚ್ಚರಿಕೆಯಿಂದ ನೋಡಿಕೊಳ್ಳುವ, ಅಗತ್ಯವಾದದ್ದನ್ನು ಪುನಃ ಭರ್ತಿಮಾಡಿಕೊಳ್ಳುವ, ಸರಿಮಾಡುವ ಮತ್ತು ಬದಲಾಯಿಸುವ ಸಾಮರ್ಥ್ಯ ಒದಗಿಸುತ್ತದೆ. ಭೂಮಿಯ ಮೇಲಿರುವ ವಿಜ್ಞಾನಿಗಳು ಸಿಬ್ಬಂದಿ ವರ್ಗ ರವಾನಿಸುವ ದತ್ತಾಂಶವನ್ನು ಅತಿ ವೇಗವಾಗಿ ಪರಿಶೀಲಿಸುತ್ತಾರೆ. ಅಲ್ಲದೇ ಪ್ರಯೋಗಗಳನ್ನು ಮಾರ್ಪಡಿಸಬಹುದು ಅಥವಾ ಹೊಸದನ್ನು ಆರಂಭಿಸಬಹುದು. ಸಿಬ್ಬಂದಿರಹಿತ(ಮಾನವರಹಿತ) ಬಾಹ್ಯಾಕಾಶನೌಕೆಯಲ್ಲಿ ಸಾಮಾನ್ಯವಾಗಿ ಅನುಕೂಲತೆಗಳಿರುವುದಿಲ್ಲ.[೨೯] ಅನೇಕ ತಿಂಗಳುಗಳ ಕಾಲಾವಧಿಯ ವರೆಗೆ ಗಗನಯಾತ್ರೆಗಳು ಮಾಡುವ ಮತ್ತು ಸಿಬ್ಬಂದಿ ನಡೆಸುವ ಪ್ರತಿ ದಿನದ ವೈಜ್ಞಾನಿಕ ಪ್ರಯೋಗಗಳನ್ನು ಅವರು ದಾಖಲಿಸಿ ಗಮನಿಸುತ್ತಾರೆ.(ಸರಿಸುಮಾರಾಗಿ ವಾರಕ್ಕೆ 160 ಮಾನವ ಗಂಟೆಗಳಂತೆ).[೧೦][೩೦] ಗಗನಯಾತ್ರೆ 15 ಮುಗಿಯುವ ಹೊತ್ತಿಗೆ 138 ಪ್ರಮುಖ ವಿಜ್ಞಾನ ಪರೀಕ್ಷೆಗಳನ್ನು ISS ನ ಮೇಲೆ ನಡೆಸಲಾಗಿತ್ತು.[೩೧] ಪರಿಶೋಧನಾ ಉದ್ದೇಶದ ಸಂಶೋಧನೆಗಾಗಿ, ಮೂಲ ವಿಜ್ಞಾನದ ಮೂಲಕ ಆಯಾ ಕ್ಷೇತ್ರಗಳಲ್ಲಿ ಮಾಡಲಾಗುವ ಪರೀಕ್ಷೆಗಳಿಂದ ಪಡೆಯುವ, ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರತಿ ತಿಂಗಳೂ ಪ್ರಕಟಿಸಲಾಗುತ್ತದೆ.[೧೩] ಬಾಹ್ಯಾಕಾಶನೌಕೆಯ ವ್ಯವಸ್ಥೆಗಳನ್ನು ಪರೀಕ್ಷಿಸಲು, ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ತುಲನಾತ್ಮಕವಾಗಿ ಸುರಕ್ಷಿತವಾಗಿರುವ ಸ್ಥಳವನ್ನು ISS ಒದಗಿಸುತ್ತದೆ. ಈ ವ್ಯವಸ್ಥೆಯು ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ದೀರ್ಘಕಾಲದವರೆಗೆ ಕೈಗೊಳ್ಳುವ ಯಾತ್ರೆಗೆ ಅವಶ್ಯಕವಾಗಿರುತ್ತದೆ. ಇದು ಕಕ್ಷೆಯ ಮೇಲಿನ ವ್ಯವಸ್ಥೆಗಳ ನಿರ್ವಹಣೆಯಲ್ಲದೇ, ಸರಿಮಾಡುವುದರಲ್ಲಿ ಮತ್ತು ಬದಲಾಯಿಸುವುದರಲ್ಲಿನ ಅನುಭವ ನೀಡುತ್ತದೆ. ಭೂಮಿಯಿಂದ ಮುಂದೆ ಬಾಹ್ಯಾಕಾಶ ನೌಕೆಯನ್ನು ಚಲಾಯಿಸಲು ಈ ಅನುಭವದ ಅಗತ್ಯವಿರುತ್ತದೆ. ಗಗನಯಾತ್ರೆಯ ಅಪಾಯವನ್ನು ತಗ್ಗಿಸಲಾಗಿದೆ. ಅಲ್ಲದೇ ಅಂತರಗ್ರಹ ಬಾಹ್ಯಾಕಾಶನೌಕೆಯ ಸಾಮರ್ಥ್ಯಗಳನ್ನು ಪರಿಷ್ಕರಿಸಲಾಗಿದೆ.[೧೩] ಶೈಕ್ಷಣಿಕ ಪ್ರಭಾವ ಮತ್ತು ಅಂತರರಾಷ್ಟ್ರೀಯ ಸಹಯೋಗ, ಸಿಬ್ಬಂದಿ ಯಾತ್ರೆಯ ಭಾಗವಾಗಿವೆ. ISS ನ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ವಿಕಸಿತ ಪ್ರಯೋಗಗಳನ್ನು ನಡೆಸಿ ಮತ್ತು ಶೈಕ್ಷಣಿಕ ಪ್ರದರ್ಶನಗಳನ್ನು ಮಾಡುವ ಮೂಲಕ ಸಂಭಂಧಿಸಿದ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸುತ್ತಾರೆ. ಅಲ್ಲದೇ ISS ಪ್ರಯೋಗಗಳು, NASA ಪರೀಕ್ಷಕನ ಪ್ರಯೋಗಗಳು, ಮತ್ತು ISS ಇಂಜಿನಿಯರಿಂಗ್ ಕಾರ್ಯಚಟುವಟಿಕೆಯ ಶಾಲಾಕೊಠಡಿ ಆವೃತ್ತಿಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಾರೆ. ISS ಕಾರ್ಯಯೋಜನೆಯು ಅದು ಪ್ರತಿನಿಧಿಸುವ ಅಂತರರಾಷ್ಟ್ರೀಯ ಸಹಯೋಗದೊಂದಿಗೆ, ಸ್ವತಃ 14 ರಾಷ್ಟ್ರಗಳಿಗೆ ಬಾಹ್ಯಾಕಾಶದಲ್ಲಿ ಇರಲು ಮತ್ತು ಒಟ್ಟಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ. ಅಲ್ಲದೇ ಭವಿಷ್ಯದ ಬಹು-ರಾಷ್ಟ್ರೀಯ ವೈಜ್ಞಾನಿಕ ಕಾರ್ಯಾಚರಣೆಗೆ ಪಠ್ಯ ವಿಷಯಗಳನ್ನು(ಪಾಠ) ಒದಗಿಸುತ್ತದೆ.[೨೨][೩೨]
ಇಲ್ಲಿ ISS, ನಿಲ್ದಾಣದ ಮೇಲೆ ಅಗತ್ಯವಿರುವ ಒಂದು ಅಥವಾ ಅಧಿಕ ಅಸಾಮಾನ್ಯವಾದ ವಿಶೇಷ ಸ್ಥಿತಿಗಳ ಸಾಂದರ್ಭಿಕ ಪ್ರಯೋಗಗಳನ್ನು ನಡೆಸಲು ವೇದಿಕೆ ಒದಗಿಸುತ್ತದೆ. ಸಂಶೋಧನೆಯ ಪ್ರಧಾನ ಕ್ಷೇತ್ರಗಳು ಕೆಳಕಂಡಂತಿವೆ: ಮಾನವ ಸಂಶೋಧನೆ, ಬಾಹ್ಯಾಕಾಶ ಔಷಧಿ, ಜೀವ ಶಾಸ್ತ್ರಗಳು, ಭೌತಿಕ ಶಾಸ್ತ್ರಗಳು, ಖಗೋಳ ವಿಜ್ಞಾನ ಮತ್ತು ಪವನಶಾಸ್ತ್ರ.[೧೦][೧೧][೧೨] 2005 ರ NASA ಅಧಿಕಾರ ಅಧಿಕೃತಗೊಳಿಸುವ ಕಾಯಿದೆ , ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಅಮೇರಿಕನ್ ಭಾಗವನ್ನು, ಇತರ ಸಂಯುಕ್ತ ಪ್ರತಿನಿಧಿಗಳಿಂದ ಮತ್ತು ಖಾಸಗಿ ಕ್ಷೇತ್ರಗಳಿಂದ, ISS ಅನ್ನು ಹೆಚ್ಚಾಗಿ ಬಳಸುವಂತೆ ಮಾಡುವ, ಉದ್ದೇಶ ಹೊಂದಿರುವ ರಾಷ್ಟ್ರೀಯ ಪ್ರಯೋಗಾಲಯವೆಂದು ಪ್ರಮಾಣೀಕೃತವಾಗಿದೆ.[೩೩] ISS ನ ಮೇಲೆ ನಡೆಸಿದ ಸಂಶೋಧನೆಯು, ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಒಡ್ಡುವಿಕೆಯಿಂದ ಮಾನವನ ದೇಹದ ಮೇಲೆ ಉಂಟಾಗುವ ಪರಿಣಾಮಗಳ ಬಗೆಗಿನ ಜಾಗೃತಿ ಜ್ಞಾನವನ್ನು ಸುಧಾರಿಸುತ್ತದೆ. ಪ್ರಸ್ತುತ ಕೆಳಕಂಡ ವಿಷಯಗಳು ಅಧ್ಯಯನಕ್ಕೆ ಒಳಪಟ್ಟಿವೆ: ಸ್ನಾಯು ಕ್ಷೀಣತೆ, ಆಸ್ಟಿಯೊಪೊರೋಸಿಸ್(ಅಸ್ಥಿರಂಧ್ರತೆ)ಮತ್ತು ಸ್ರವಿ ಬದಲಾವಣೆ. ಇದರಿಂದ ಪಡೆದ ದತ್ತಾಂಶವನ್ನು ಬಾಹ್ಯಾಕಾಶದಲ್ಲಿ ವಾಸಮಾಡಬಹುದೇ ಮತ್ತು ಸುದೀರ್ಘವಾದ ಮಾನವಸಹಿತ ಆಕಾಶಯಾನವನ್ನು ಕಾರ್ಯಸಾಧ್ಯವೇ ಎಂಬುದನ್ನು ನಿರ್ಧರಿಸಲು ಬಳಸಲಾಗುತ್ತದೆ. ಆಗ 2006 ರ ಹೊತ್ತಿಗೆ ಪಡೆಯಲಾದ ಅಸ್ಥಿರಂಧ್ರತೆ ಮತ್ತು ಸ್ನಾಯು ಕ್ಷೀಣಿಸುವಿಕೆಗಳ ಬಗೆಗಿನ ಮಾಹಿತಿ ದತ್ತಾಂಶವು, ಅಂತರಗ್ರಹದ ಮೇಲೆ ದೀರ್ಘಕಾಲದ ಸುತ್ತಾಟದ ನಂತರ (ಉದಾಹರಣೆಗೆ ಮಂಗಳಕ್ಕೆ ಹೋಗಲು ಆರು ತಿಂಗಳು ಪ್ರಯಾಣ ಮಾಡಬೇಕು) ಗಗನಯಾತ್ರಿಗಳು ಗ್ರಹದ ಮೇಲೆ ಇಳಿದರೆ, ಅವರ ಮೂಳೆ ಮುರಿದು ಹೋಗಬಹುದು ಮತ್ತು ಚಲನಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾದ ಸಾಧ್ಯತೆಗಳಿವೆ ಎಂಬುದನ್ನು ಸೂಚಿಸುತ್ತದೆ.[೩೪][೩೫] ISSನಲ್ಲಿ ನ್ಯಾಷನಲ್ ಸ್ಪೇಸ್ ಅಂಡ್ ಬಯೋ ಮೆಡಿಕಲ್ ರಿಸರ್ಚ್ ಇನ್ ಸ್ಟಿಟ್ಯೂಟ್(NSBRI) ಬೃಹತ್ ಮಟ್ಟದ ವೈದ್ಯಕೀಯ ಅಧ್ಯಯನಗಳನ್ನು ನಡೆಸುತ್ತಿದೆ. ಇವುಗಳಲೆಲ್ಲ ಅಡ್ವಾನ್ಸ್ಡ್ ಡಯಗ್ನಾಸ್ಟಿಕ್ ಅಲ್ಟ್ರಾಸೌಂಡ್ ಇನ್ ಮೈಕ್ರೋಗ್ರಾವಿಟಿ ಅಧ್ಯಯನವು ಅತ್ಯಂತ ಪ್ರಮುಖವಾಗಿದೆ. ಈ ಅಧ್ಯಯನದಲ್ಲಿ ಗಗನಯಾತ್ರಿಗಳು (ISS ನ ಹಿಂದಿನ ಕಮಾಂಡರ್ ಗಳಾದ ಲೆರಾಯ್ ಚಿಯೊ ಮತ್ತು ಗೆನ್ಯಾಡಿ ಪ್ಯಡಲ್ಕ)ದೂರದಲ್ಲಿರುವ ತಜ್ಞರ ಮಾರ್ಗದರ್ಶನದಡಿ ಅಲ್ಟ್ರಾಸೌಂಡ್ ಸ್ಕ್ಯಾನ್ (ಶ್ರವಣಾತೀತ ಸ್ಕ್ಯಾನ್)ಅನ್ನು ಮಾಡುತ್ತಾರೆ. ಈ ಅಧ್ಯಯನವು, ಬಾಹ್ಯಾಕಾಶದಲ್ಲಿನ ವೈದ್ಯಕೀಯ ಪರಿಸ್ಥಿತಿಯ ನಿರ್ಣಯ ಮತ್ತು ಚಿಕಿತ್ಸೆಯನ್ನು ಪರಿಗಣಿಸುತ್ತದೆ. ಸಾಮಾನ್ಯವಾಗಿ, ISS ನಲ್ಲಿ ಯಾವ ವೈದ್ಯರೂ ಇರದ ಕಾರಣ, ವೈದ್ಯಕೀಯ ಪರಿಸ್ಥಿತಿಯನ್ನು ನಿರ್ಣಯಿಸುವುದು ಒಂದು ಸವಾಲಾಗಿರುತ್ತದೆ. ತಜ್ಞ ವೈದ್ಯರನ್ನು ತಲುಪಲು ಕಷ್ಟವಾಗಿರುವ ತುರ್ತುಪರಿಸ್ಥಿತಿ ಮತ್ತು ಗ್ರಾಮೀಣ ಕಾಳಜಿಯ ಸಂದರ್ಭದಲ್ಲಿ, ದೂರದಿಂದ ನಿರ್ದೇಶಿತ ಅಲ್ಟ್ರಾಸೌಂಡ್ ಸ್ಕ್ಯಾನ್ ಗಳನ್ನು ಭೂಮಿಯ ಮೇಲೆ ಅಳವಡಿಸಬಹುದಾಗಿದೆ ಎಂದು ಮುಂಗಾಣಲಾಗಿದೆ.[೩೬][೩೭][೩೮] ನಿಲ್ದಾಣದ ಹತ್ತಿರವಿರುವ-ತೂಕರಹಿತ ಪರಿಸರ, ವಿಕಸನ, ಅಭಿವೃದ್ಧಿ, ಪ್ರಗತಿ ಹಾಗು ಸಸ್ಯಗಳ ಮತ್ತು ಪ್ರಾಣಿಗಳ ಆಂತರಿಕ ಕಾರ್ಯವಿಧಾನದಲ್ಲಿ ಉಂಟುಮಾಡುವ ಪರಿಣಾಮವನ್ನು ಸಂಶೋಧಕರು ಪರೀಕ್ಷಿಸುತ್ತಾರೆ. ಈ ಕೆಲವು ದತ್ತಾಂಶಕ್ಕೆ ಪ್ರತಿಕ್ರಿಯೆಯಾಗಿ, NASA ತನ್ನ ಪ್ರಯೋಗಗಳಲ್ಲಿ ತ್ರಿವಿಮೀತಿಯ, ಮಾನವರಂತಹ ಅಂಗಾಂಶ ಮತ್ತು ಬಾಹ್ಯಾಕಾಶದಲ್ಲಿ ರಚನೆಗೊಂಡ ಅಸಾಮಾನ್ಯವಾದ ಪ್ರೋಟೀನ್ ಸ್ಫಟಿಕಗಳ, ಬೆಳವಣಿಗೆಯ ಮೇಲೆ ಸೂಕ್ಷ್ಮ ಗುರುತ್ವದ ಪರಿಣಾಮವನ್ನು ಪರೀಕ್ಷಿಸಲು ಬಯಸುತ್ತದೆ.[೧೧] ಸೂಕ್ಷ್ಮ ಗುರುತ್ವದಲ್ಲಿ ನಡೆಸುವ ಸ್ರವಿಯ ಭೌತಶಾಸ್ತ್ರದ ಪರೀಕ್ಷೆಯು, ಸಂಶೋಧಕರಿಗೆ ದ್ರವಗಳ ಪ್ರವೃತ್ತಿಯ ಮಾದರಿಯನ್ನು ಉತ್ತಮವಾಗಿ ರಚಿಸಲು ಅವಕಾಶ ನೀಡುತ್ತದೆ. ಏಕೆಂದರೆ ಸ್ರಾವಗಳು ಸಂಪೂರ್ಣವಾಗಿ ಸೂಕ್ಷ್ಮಗುರುತ್ವದಲ್ಲಿ ಸೇರಿಕೊಳ್ಳುತ್ತವೆ. ಆದರೆ ಈ ತೆರನಾದ ಪ್ರವೃತ್ತಿಯ ಸ್ರಾವಗಳು ಭೂಮಿಯ ಮೇಲೆ ಚೆನ್ನಾಗಿ ಬೆರೆಯುವುದಿಲ್ಲ ಎಂಬುದನ್ನು ಭೌತವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದರ ಜೊತೆಯಲ್ಲಿ, ಕಡಿಮೆ ಗುರುತ್ವ ಮತ್ತು ತಾಪಮಾನದಿಂದಾಗಿ ನಿಧಾನಗೊಂಡ ಪ್ರತಿಕ್ರಿಯೆಗಳ ಪರೀಕ್ಷೆಗಳು, ವಿಜ್ಞಾನಿಗಳಿಗೆ ಅಧಿವಾಹಕತೆಯ ಬಗ್ಗೆ ಆಳವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತವೆ.[೧೧] ವಸ್ತು ವಿಜ್ಞಾನದ ಅಧ್ಯಯನವು ISS ನ ಅತ್ಯಂತ ಪ್ರಮುಖ ಸಂಶೋಧನಾ ಚಟುವಟಿಕೆಯಾಗಿದೆ. ಇದು ಭೂಮಿಯ ಮೇಲೆ ಬಳಸಲಾಗುವ ವಿಧಾನಗಳನ್ನು ಉತ್ತಮಗೊಳಿಸುವ ಮೂಲಕ ಆರ್ಥಿಕ ಅನುಕೂಲತೆಗಳನ್ನು ಪಡೆಯುವ ಗುರಿ ಹೊಂದಿದೆ.[೩೯] ದಹನಕ್ರಿಯೆಯ ಮೇಲೆ ಕಡಿಮೆ ಗುರುತ್ವ ಪರಿಸರದ ಪರಿಣಾಮವು ಕೂಡ ಮತ್ತೊಂದು ಆಸಕ್ತಿದಾಯಕ ಕ್ಷೇತ್ರವಾಗಿದೆ. ಇದನ್ನು ದಹನದ ದಕ್ಷತೆಯ ಅಧ್ಯಯನದ ಮೂಲಕ ಹಾಗು ಉತ್ಸರ್ಜನಗಳ ಮತ್ತು ಮಲೀನಕಾರಿಗಳ ನಿಯಂತ್ರಣದ ಮೂಲಕ ಮಾಡಲಾಗುತ್ತದೆ. ಈ ಆವಿಷ್ಕಾರಗಳು ಶಕ್ತಿ ಉತ್ಪಾದನೆಯ ಬಗೆಗಿನ ನಮ್ಮ ಜ್ಞಾನವನ್ನು ಬೆಳೆಸುತ್ತವೆ. ಅಲ್ಲದೇ ಆರ್ಥಿಕ ಮತ್ತು ಪರಿಸರದ ಲಾಭವನ್ನು ಪಡೆಯುವಂತೆ ಮಾಡುತ್ತವೆ. ISS ನಲ್ಲಿ ಸಂಶೋಧಕರು ಭವಿಷ್ಯದಲ್ಲಿ ನಡೆಸಬೇಕಾದ ಸಂಶೋಧನೆಯ ಯೋಜನೆಗಳು ಕೆಳಕಂಡಂತಿವೆ: ಏರೊಸಾಲ್ ಗಳು,(ಗಾಳಿಯಲ್ಲಿ ಹರಡಿದ ಮಂಜು) ಓಝೋನ್, ನೀರಿನ ಹಬೆ ಮತ್ತು ಭೂಮಿಯ ವಾತಾವರಣದಲ್ಲಿ ಆಕ್ಸೈಡ್ ಗಳು ಹಾಗು ಕಾಸ್ಮಿಕ್ ಕಿರಣ ಗಳು, ಬ್ರಹ್ಮಾಂಡದ ಧೂಳಿ, ಪ್ರತಿದ್ರವ್ಯ, ಮತ್ತು ವಿಶ್ವದಲ್ಲಿನ ಡಾರ್ಕ್ ಮ್ಯಾಟರ್ (ಅಜ್ಞಾತ ಕಪ್ಪು ದ್ರವ್ಯ) ನ ಶೋಧನೆ.[೧೧]
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ವೆಂಬುದು ಅಂತರರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ವಾಸಯೋಗ್ಯ ಉಪಗ್ರಹವಾಗಿದ್ದು, ಇದನ್ನು ಪ್ರಸ್ತುತದಲ್ಲಿ ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ಜೋಡಿಸಿ ಸ್ಥಾಪಿಸಲಾಗುತ್ತಿದೆ. ISS ಮುಖ್ಯವಾಗಿ NASA ದ ಬಾನಗಾಡಿಯಂತಹ ಬಾಹ್ಯಾಕಾಶ ನೌಕೆಗೆ ಸಂಶೋಧನ ಪ್ರಯೋಗಾಲಯವನ್ನು ಒದಗಿಸಿದೆ. ಏಕೆಂದರೆ ಇದು ಬಾಹ್ಯಾಕಾಶ ಪರಿಸರದಲ್ಲಿ(ಹಗುರವಾಗಿರುವಿಕೆ) ದೀರ್ಘಕಾಲವಿರುವಂತಹ ವೇದಿಕೆಯಾಗಿದ್ದು, ಇಲ್ಲಿ ವ್ಯಾಪಕವಾದ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತದೆ.[೯][೨೯] ಕಾಯಂ ಸಿಬ್ಬಂದಿಯ ಉಪಸ್ಥಿತಿಯು, ಬಾಹ್ಯಾಕಾಶನೌಕೆಗೆ ಅದರ ಪ್ರಯೋಗಗಳನ್ನು ಮತ್ತು ಘಟಕಗಳನ್ನು ಸ್ವತಃ ಎಚ್ಚರಿಕೆಯಿಂದ ನೋಡಿಕೊಳ್ಳುವ, ಅಗತ್ಯವಾದದ್ದನ್ನು ಪುನಃ ಭರ್ತಿಮಾಡಿಕೊಳ್ಳುವ, ಸರಿಮಾಡುವ ಮತ್ತು ಬದಲಾಯಿಸುವ ಸಾಮರ್ಥ್ಯ ಒದಗಿಸುತ್ತದೆ. ಭೂಮಿಯ ಮೇಲಿರುವ ವಿಜ್ಞಾನಿಗಳು ಸಿಬ್ಬಂದಿ ವರ್ಗ ರವಾನಿಸುವ ದತ್ತಾಂಶವನ್ನು ಅತಿ ವೇಗವಾಗಿ ಪರಿಶೀಲಿಸುತ್ತಾರೆ. ಅಲ್ಲದೇ ಪ್ರಯೋಗಗಳನ್ನು ಮಾರ್ಪಡಿಸಬಹುದು ಅಥವಾ ಹೊಸದನ್ನು ಆರಂಭಿಸಬಹುದು. ಸಿಬ್ಬಂದಿರಹಿತ(ಮಾನವರಹಿತ) ಬಾಹ್ಯಾಕಾಶನೌಕೆಯಲ್ಲಿ ಸಾಮಾನ್ಯವಾಗಿ ಅನುಕೂಲತೆಗಳಿರುವುದಿಲ್ಲ.[೨೯] ಅನೇಕ ತಿಂಗಳುಗಳ ಕಾಲಾವಧಿಯ ವರೆಗೆ ಗಗನಯಾತ್ರೆಗಳು ಮಾಡುವ ಮತ್ತು ಸಿಬ್ಬಂದಿ ನಡೆಸುವ ಪ್ರತಿ ದಿನದ ವೈಜ್ಞಾನಿಕ ಪ್ರಯೋಗಗಳನ್ನು ಅವರು ದಾಖಲಿಸಿ ಗಮನಿಸುತ್ತಾರೆ.(ಸರಿಸುಮಾರಾಗಿ ವಾರಕ್ಕೆ 160 ಮಾನವ ಗಂಟೆಗಳಂತೆ).[೧೦][೩೦] ಗಗನಯಾತ್ರೆ 15 ಮುಗಿಯುವ ಹೊತ್ತಿಗೆ 138 ಪ್ರಮುಖ ವಿಜ್ಞಾನ ಪರೀಕ್ಷೆಗಳನ್ನು ISS ನ ಮೇಲೆ ನಡೆಸಲಾಗಿತ್ತು.[೩೧] ಪರಿಶೋಧನಾ ಉದ್ದೇಶದ ಸಂಶೋಧನೆಗಾಗಿ, ಮೂಲ ವಿಜ್ಞಾನದ ಮೂಲಕ ಆಯಾ ಕ್ಷೇತ್ರಗಳಲ್ಲಿ ಮಾಡಲಾಗುವ ಪರೀಕ್ಷೆಗಳಿಂದ ಪಡೆಯುವ, ವೈಜ್ಞಾನಿಕ ಆವಿಷ್ಕಾರಗಳನ್ನು ಪ್ರತಿ ತಿಂಗಳೂ ಪ್ರಕಟಿಸಲಾಗುತ್ತದೆ.[೧೩] ಬಾಹ್ಯಾಕಾಶನೌಕೆಯ ವ್ಯವಸ್ಥೆಗಳನ್ನು ಪರೀಕ್ಷಿಸಲು, ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿ ತುಲನಾತ್ಮಕವಾಗಿ ಸುರಕ್ಷಿತವಾಗಿರುವ ಸ್ಥಳವನ್ನು ISS ಒದಗಿಸುತ್ತದೆ. ಈ ವ್ಯವಸ್ಥೆಯು ಚಂದ್ರ ಮತ್ತು ಮಂಗಳ ಗ್ರಹಗಳ ಮೇಲೆ ದೀರ್ಘಕಾಲದವರೆಗೆ ಕೈಗೊಳ್ಳುವ ಯಾತ್ರೆಗೆ ಅವಶ್ಯಕವಾಗಿರುತ್ತದೆ. ಇದು ಕಕ್ಷೆಯ ಮೇಲಿನ ವ್ಯವಸ್ಥೆಗಳ ನಿರ್ವಹಣೆಯಲ್ಲದೇ, ಸರಿಮಾಡುವುದರಲ್ಲಿ ಮತ್ತು ಬದಲಾಯಿಸುವುದರಲ್ಲಿನ ಅನುಭವ ನೀಡುತ್ತದೆ. ಭೂಮಿಯಿಂದ ಮುಂದೆ ಬಾಹ್ಯಾಕಾಶ ನೌಕೆಯನ್ನು ಚಲಾಯಿಸಲು ಈ ಅನುಭವದ ಅಗತ್ಯವಿರುತ್ತದೆ. ಗಗನಯಾತ್ರೆಯ ಅಪಾಯವನ್ನು ತಗ್ಗಿಸಲಾಗಿದೆ. ಅಲ್ಲದೇ ಅಂತರಗ್ರಹ ಬಾಹ್ಯಾಕಾಶನೌಕೆಯ ಸಾಮರ್ಥ್ಯಗಳನ್ನು ಪರಿಷ್ಕರಿಸಲಾಗಿದೆ.[೧೩] ಶೈಕ್ಷಣಿಕ ಪ್ರಭಾವ ಮತ್ತು ಅಂತರರಾಷ್ಟ್ರೀಯ ಸಹಯೋಗ, ಸಿಬ್ಬಂದಿ ಯಾತ್ರೆಯ ಭಾಗವಾಗಿವೆ. ISS ನ ಸಿಬ್ಬಂದಿ, ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ವಿಕಸಿತ ಪ್ರಯೋಗಗಳನ್ನು ನಡೆಸಿ ಮತ್ತು ಶೈಕ್ಷಣಿಕ ಪ್ರದರ್ಶನಗಳನ್ನು ಮಾಡುವ ಮೂಲಕ ಸಂಭಂಧಿಸಿದ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸುತ್ತಾರೆ. ಅಲ್ಲದೇ ISS ಪ್ರಯೋಗಗಳು, NASA ಪರೀಕ್ಷಕನ ಪ್ರಯೋಗಗಳು, ಮತ್ತು ISS ಇಂಜಿನಿಯರಿಂಗ್ ಕಾರ್ಯಚಟುವಟಿಕೆಯ ಶಾಲಾಕೊಠಡಿ ಆವೃತ್ತಿಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಾರೆ. ISS ಕಾರ್ಯಯೋಜನೆಯು ಅದು ಪ್ರತಿನಿಧಿಸುವ ಅಂತರರಾಷ್ಟ್ರೀಯ ಸಹಯೋಗದೊಂದಿಗೆ, ಸ್ವತಃ 14 ರಾಷ್ಟ್ರಗಳಿಗೆ ಬಾಹ್ಯಾಕಾಶದಲ್ಲಿ ಇರಲು ಮತ್ತು ಒಟ್ಟಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ. ಅಲ್ಲದೇ ಭವಿಷ್ಯದ ಬಹು-ರಾಷ್ಟ್ರೀಯ ವೈಜ್ಞಾನಿಕ ಕಾರ್ಯಾಚರಣೆಗೆ ಪಠ್ಯ ವಿಷಯಗಳನ್ನು(ಪಾಠ) ಒದಗಿಸುತ್ತದೆ.[೨೨][೩೨]
ಇಲ್ಲಿ ISS, ನಿಲ್ದಾಣದ ಮೇಲೆ ಅಗತ್ಯವಿರುವ ಒಂದು ಅಥವಾ ಅಧಿಕ ಅಸಾಮಾನ್ಯವಾದ ವಿಶೇಷ ಸ್ಥಿತಿಗಳ ಸಾಂದರ್ಭಿಕ ಪ್ರಯೋಗಗಳನ್ನು ನಡೆಸಲು ವೇದಿಕೆ ಒದಗಿಸುತ್ತದೆ. ಸಂಶೋಧನೆಯ ಪ್ರಧಾನ ಕ್ಷೇತ್ರಗಳು ಕೆಳಕಂಡಂತಿವೆ: ಮಾನವ ಸಂಶೋಧನೆ, ಬಾಹ್ಯಾಕಾಶ ಔಷಧಿ, ಜೀವ ಶಾಸ್ತ್ರಗಳು, ಭೌತಿಕ ಶಾಸ್ತ್ರಗಳು, ಖಗೋಳ ವಿಜ್ಞಾನ ಮತ್ತು ಪವನಶಾಸ್ತ್ರ.[೧೦][೧೧][೧೨] 2005 ರ NASA ಅಧಿಕಾರ ಅಧಿಕೃತಗೊಳಿಸುವ ಕಾಯಿದೆ , ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಅಮೇರಿಕನ್ ಭಾಗವನ್ನು, ಇತರ ಸಂಯುಕ್ತ ಪ್ರತಿನಿಧಿಗಳಿಂದ ಮತ್ತು ಖಾಸಗಿ ಕ್ಷೇತ್ರಗಳಿಂದ, ISS ಅನ್ನು ಹೆಚ್ಚಾಗಿ ಬಳಸುವಂತೆ ಮಾಡುವ, ಉದ್ದೇಶ ಹೊಂದಿರುವ ರಾಷ್ಟ್ರೀಯ ಪ್ರಯೋಗಾಲಯವೆಂದು ಪ್ರಮಾಣೀಕೃತವಾಗಿದೆ.[೩೩] ISS ನ ಮೇಲೆ ನಡೆಸಿದ ಸಂಶೋಧನೆಯು, ಬಾಹ್ಯಾಕಾಶದಲ್ಲಿ ದೀರ್ಘಕಾಲದವರೆಗೆ ಒಡ್ಡುವಿಕೆಯಿಂದ ಮಾನವನ ದೇಹದ ಮೇಲೆ ಉಂಟಾಗುವ ಪರಿಣಾಮಗಳ ಬಗೆಗಿನ ಜಾಗೃತಿ ಜ್ಞಾನವನ್ನು ಸುಧಾರಿಸುತ್ತದೆ. ಪ್ರಸ್ತುತ ಕೆಳಕಂಡ ವಿಷಯಗಳು ಅಧ್ಯಯನಕ್ಕೆ ಒಳಪಟ್ಟಿವೆ: ಸ್ನಾಯು ಕ್ಷೀಣತೆ, ಆಸ್ಟಿಯೊಪೊರೋಸಿಸ್(ಅಸ್ಥಿರಂಧ್ರತೆ)ಮತ್ತು ಸ್ರವಿ ಬದಲಾವಣೆ. ಇದರಿಂದ ಪಡೆದ ದತ್ತಾಂಶವನ್ನು ಬಾಹ್ಯಾಕಾಶದಲ್ಲಿ ವಾಸಮಾಡಬಹುದೇ ಮತ್ತು ಸುದೀರ್ಘವಾದ ಮಾನವಸಹಿತ ಆಕಾಶಯಾನವನ್ನು ಕಾರ್ಯಸಾಧ್ಯವೇ ಎಂಬುದನ್ನು ನಿರ್ಧರಿಸಲು ಬಳಸಲಾಗುತ್ತದೆ. ಆಗ 2006 ರ ಹೊತ್ತಿಗೆ ಪಡೆಯಲಾದ ಅಸ್ಥಿರಂಧ್ರತೆ ಮತ್ತು ಸ್ನಾಯು ಕ್ಷೀಣಿಸುವಿಕೆಗಳ ಬಗೆಗಿನ ಮಾಹಿತಿ ದತ್ತಾಂಶವು, ಅಂತರಗ್ರಹದ ಮೇಲೆ ದೀರ್ಘಕಾಲದ ಸುತ್ತಾಟದ ನಂತರ (ಉದಾಹರಣೆಗೆ ಮಂಗಳಕ್ಕೆ ಹೋಗಲು ಆರು ತಿಂಗಳು ಪ್ರಯಾಣ ಮಾಡಬೇಕು) ಗಗನಯಾತ್ರಿಗಳು ಗ್ರಹದ ಮೇಲೆ ಇಳಿದರೆ, ಅವರ ಮೂಳೆ ಮುರಿದು ಹೋಗಬಹುದು ಮತ್ತು ಚಲನಾ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾದ ಸಾಧ್ಯತೆಗಳಿವೆ ಎಂಬುದನ್ನು ಸೂಚಿಸುತ್ತದೆ.[೩೪][೩೫] ISSನಲ್ಲಿ ನ್ಯಾಷನಲ್ ಸ್ಪೇಸ್ ಅಂಡ್ ಬಯೋ ಮೆಡಿಕಲ್ ರಿಸರ್ಚ್ ಇನ್ ಸ್ಟಿಟ್ಯೂಟ್(NSBRI) ಬೃಹತ್ ಮಟ್ಟದ ವೈದ್ಯಕೀಯ ಅಧ್ಯಯನಗಳನ್ನು ನಡೆಸುತ್ತಿದೆ. ಇವುಗಳಲೆಲ್ಲ ಅಡ್ವಾನ್ಸ್ಡ್ ಡಯಗ್ನಾಸ್ಟಿಕ್ ಅಲ್ಟ್ರಾಸೌಂಡ್ ಇನ್ ಮೈಕ್ರೋಗ್ರಾವಿಟಿ ಅಧ್ಯಯನವು ಅತ್ಯಂತ ಪ್ರಮುಖವಾಗಿದೆ. ಈ ಅಧ್ಯಯನದಲ್ಲಿ ಗಗನಯಾತ್ರಿಗಳು (ISS ನ ಹಿಂದಿನ ಕಮಾಂಡರ್ ಗಳಾದ ಲೆರಾಯ್ ಚಿಯೊ ಮತ್ತು ಗೆನ್ಯಾಡಿ ಪ್ಯಡಲ್ಕ)ದೂರದಲ್ಲಿರುವ ತಜ್ಞರ ಮಾರ್ಗದರ್ಶನದಡಿ ಅಲ್ಟ್ರಾಸೌಂಡ್ ಸ್ಕ್ಯಾನ್ (ಶ್ರವಣಾತೀತ ಸ್ಕ್ಯಾನ್)ಅನ್ನು ಮಾಡುತ್ತಾರೆ. ಈ ಅಧ್ಯಯನವು, ಬಾಹ್ಯಾಕಾಶದಲ್ಲಿನ ವೈದ್ಯಕೀಯ ಪರಿಸ್ಥಿತಿಯ ನಿರ್ಣಯ ಮತ್ತು ಚಿಕಿತ್ಸೆಯನ್ನು ಪರಿಗಣಿಸುತ್ತದೆ. ಸಾಮಾನ್ಯವಾಗಿ, ISS ನಲ್ಲಿ ಯಾವ ವೈದ್ಯರೂ ಇರದ ಕಾರಣ, ವೈದ್ಯಕೀಯ ಪರಿಸ್ಥಿತಿಯನ್ನು ನಿರ್ಣಯಿಸುವುದು ಒಂದು ಸವಾಲಾಗಿರುತ್ತದೆ. ತಜ್ಞ ವೈದ್ಯರನ್ನು ತಲುಪಲು ಕಷ್ಟವಾಗಿರುವ ತುರ್ತುಪರಿಸ್ಥಿತಿ ಮತ್ತು ಗ್ರಾಮೀಣ ಕಾಳಜಿಯ ಸಂದರ್ಭದಲ್ಲಿ, ದೂರದಿಂದ ನಿರ್ದೇಶಿತ ಅಲ್ಟ್ರಾಸೌಂಡ್ ಸ್ಕ್ಯಾನ್ ಗಳನ್ನು ಭೂಮಿಯ ಮೇಲೆ ಅಳವಡಿಸಬಹುದಾಗಿದೆ ಎಂದು ಮುಂಗಾಣಲಾಗಿದೆ.[೩೬][೩೭][೩೮] ನಿಲ್ದಾಣದ ಹತ್ತಿರವಿರುವ-ತೂಕರಹಿತ ಪರಿಸರ, ವಿಕಸನ, ಅಭಿವೃದ್ಧಿ, ಪ್ರಗತಿ ಹಾಗು ಸಸ್ಯಗಳ ಮತ್ತು ಪ್ರಾಣಿಗಳ ಆಂತರಿಕ ಕಾರ್ಯವಿಧಾನದಲ್ಲಿ ಉಂಟುಮಾಡುವ ಪರಿಣಾಮವನ್ನು ಸಂಶೋಧಕರು ಪರೀಕ್ಷಿಸುತ್ತಾರೆ. ಈ ಕೆಲವು ದತ್ತಾಂಶಕ್ಕೆ ಪ್ರತಿಕ್ರಿಯೆಯಾಗಿ, NASA ತನ್ನ ಪ್ರಯೋಗಗಳಲ್ಲಿ ತ್ರಿವಿಮೀತಿಯ, ಮಾನವರಂತಹ ಅಂಗಾಂಶ ಮತ್ತು ಬಾಹ್ಯಾಕಾಶದಲ್ಲಿ ರಚನೆಗೊಂಡ ಅಸಾಮಾನ್ಯವಾದ ಪ್ರೋಟೀನ್ ಸ್ಫಟಿಕಗಳ, ಬೆಳವಣಿಗೆಯ ಮೇಲೆ ಸೂಕ್ಷ್ಮ ಗುರುತ್ವದ ಪರಿಣಾಮವನ್ನು ಪರೀಕ್ಷಿಸಲು ಬಯಸುತ್ತದೆ.[೧೧] ಸೂಕ್ಷ್ಮ ಗುರುತ್ವದಲ್ಲಿ ನಡೆಸುವ ಸ್ರವಿಯ ಭೌತಶಾಸ್ತ್ರದ ಪರೀಕ್ಷೆಯು, ಸಂಶೋಧಕರಿಗೆ ದ್ರವಗಳ ಪ್ರವೃತ್ತಿಯ ಮಾದರಿಯನ್ನು ಉತ್ತಮವಾಗಿ ರಚಿಸಲು ಅವಕಾಶ ನೀಡುತ್ತದೆ. ಏಕೆಂದರೆ ಸ್ರಾವಗಳು ಸಂಪೂರ್ಣವಾಗಿ ಸೂಕ್ಷ್ಮಗುರುತ್ವದಲ್ಲಿ ಸೇರಿಕೊಳ್ಳುತ್ತವೆ. ಆದರೆ ಈ ತೆರನಾದ ಪ್ರವೃತ್ತಿಯ ಸ್ರಾವಗಳು ಭೂಮಿಯ ಮೇಲೆ ಚೆನ್ನಾಗಿ ಬೆರೆಯುವುದಿಲ್ಲ ಎಂಬುದನ್ನು ಭೌತವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದರ ಜೊತೆಯಲ್ಲಿ, ಕಡಿಮೆ ಗುರುತ್ವ ಮತ್ತು ತಾಪಮಾನದಿಂದಾಗಿ ನಿಧಾನಗೊಂಡ ಪ್ರತಿಕ್ರಿಯೆಗಳ ಪರೀಕ್ಷೆಗಳು, ವಿಜ್ಞಾನಿಗಳಿಗೆ ಅಧಿವಾಹಕತೆಯ ಬಗ್ಗೆ ಆಳವಾಗಿ ಅರ್ಥಮಾಡಿಕೊಳ್ಳುವಂತೆ ಮಾಡುತ್ತವೆ.[೧೧] ವಸ್ತು ವಿಜ್ಞಾನದ ಅಧ್ಯಯನವು ISS ನ ಅತ್ಯಂತ ಪ್ರಮುಖ ಸಂಶೋಧನಾ ಚಟುವಟಿಕೆಯಾಗಿದೆ. ಇದು ಭೂಮಿಯ ಮೇಲೆ ಬಳಸಲಾಗುವ ವಿಧಾನಗಳನ್ನು ಉತ್ತಮಗೊಳಿಸುವ ಮೂಲಕ ಆರ್ಥಿಕ ಅನುಕೂಲತೆಗಳನ್ನು ಪಡೆಯುವ ಗುರಿ ಹೊಂದಿದೆ.[೩೯] ದಹನಕ್ರಿಯೆಯ ಮೇಲೆ ಕಡಿಮೆ ಗುರುತ್ವ ಪರಿಸರದ ಪರಿಣಾಮವು ಕೂಡ ಮತ್ತೊಂದು ಆಸಕ್ತಿದಾಯಕ ಕ್ಷೇತ್ರವಾಗಿದೆ. ಇದನ್ನು ದಹನದ ದಕ್ಷತೆಯ ಅಧ್ಯಯನದ ಮೂಲಕ ಹಾಗು ಉತ್ಸರ್ಜನಗಳ ಮತ್ತು ಮಲೀನಕಾರಿಗಳ ನಿಯಂತ್ರಣದ ಮೂಲಕ ಮಾಡಲಾಗುತ್ತದೆ. ಈ ಆವಿಷ್ಕಾರಗಳು ಶಕ್ತಿ ಉತ್ಪಾದನೆಯ ಬಗೆಗಿನ ನಮ್ಮ ಜ್ಞಾನವನ್ನು ಬೆಳೆಸುತ್ತವೆ. ಅಲ್ಲದೇ ಆರ್ಥಿಕ ಮತ್ತು ಪರಿಸರದ ಲಾಭವನ್ನು ಪಡೆಯುವಂತೆ ಮಾಡುತ್ತವೆ. ISS ನಲ್ಲಿ ಸಂಶೋಧಕರು ಭವಿಷ್ಯದಲ್ಲಿ ನಡೆಸಬೇಕಾದ ಸಂಶೋಧನೆಯ ಯೋಜನೆಗಳು ಕೆಳಕಂಡಂತಿವೆ: ಏರೊಸಾಲ್ ಗಳು,(ಗಾಳಿಯಲ್ಲಿ ಹರಡಿದ ಮಂಜು) ಓಝೋನ್, ನೀರಿನ ಹಬೆ ಮತ್ತು ಭೂಮಿಯ ವಾತಾವರಣದಲ್ಲಿ ಆಕ್ಸೈಡ್ ಗಳು ಹಾಗು ಕಾಸ್ಮಿಕ್ ಕಿರಣ ಗಳು, ಬ್ರಹ್ಮಾಂಡದ ಧೂಳಿ, ಪ್ರತಿದ್ರವ್ಯ, ಮತ್ತು ವಿಶ್ವದಲ್ಲಿನ ಡಾರ್ಕ್ ಮ್ಯಾಟರ್ (ಅಜ್ಞಾತ ಕಪ್ಪು ದ್ರವ್ಯ) ನ ಶೋಧನೆ.[೧೧]
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಪರಿಕಲ್ಪನೆಯು, ಶೀತಲ ಸಮರದ ಸಂದರ್ಭದಲ್ಲಿ ಹುಟ್ಟಿಕೊಂಡ ಅನೇಕ ರಾಷ್ಟ್ರಗಳ ಬಾಹ್ಯಾಕಾಶ ನಿಲ್ದಾಣ ಯೋಜನೆಯ ಸಹಯೋಗವನ್ನು (ಒಕ್ಕೂಟವನ್ನು) ಪ್ರತಿನಿಧಿಸುತ್ತದೆ. 1980 ರ ಪೂರ್ವಾರ್ಧದಲ್ಲಿ, NASA ಫ್ರೀಡಮ್ ಎಂದು ಕರೆಯಲಾಗುವ, ಮಾಡ್ಯೂಲ್ ಗಳ ಬಾಹ್ಯಾಕಾಶ ನಿಲ್ದಾಣವನ್ನು ಉಡಾವಣೆ ಮಾಡಿ ಸ್ಥಾಯಿಗೊಳಿಸಲು ಆಲೋಚಿಸಿತು. ಸೋವಿಯತ್ ರಷ್ಯನ್ನರು 1990 ರಲ್ಲಿ ಮಿರ್ ನ ಬದಲಿಗೆ ಮಿರ್ -2 ವನ್ನು ನಿರ್ಮಿಸಲು ಯೋಜಿಸುತ್ತಿರುವಾಗ, ಇದನ್ನು ಸೋವಿಯತ್ ರಷ್ಯಾದ ಸಾಲ್ಯುತ್ ಮತ್ತು ಮಿರ್ ಬಾಹ್ಯಾಕಾಶ ನಿಲ್ದಾಣಗಳ ಪ್ರತಿಯಾಗಿ ಉಡಾವಣೆ ಮಾಡಲು ಯೋಜಿಸಲಾಗಿತ್ತು.[೧೬] ಬಜೆಟ್ (ಹಣಕಾಸು)ಮತ್ತು ವಿನ್ಯಾಸ ನಿರ್ಬಂಧಗಳ ಕಾರಣ ಫ್ರೀಡಮ್ ಹಿಂದಿನ ಮಾದರಿಯನ್ನು ಅನುಸರಿಸದಾಯಿತು. ಅಲ್ಲದೇ ಕಿರು ಘಟಕ ಪರೀಕ್ಷೆಗಳನ್ನು ಕೂಡ ನಡೆಸಲಾಗಲಿಲ್ಲ. ಸೋವಿಯತ್ ಒಕ್ಕೂಟದ ವಿಭಜನೆಯಿಂದ ಮತ್ತು ಸ್ಪೇಸ್ ರೇಸ್ ನ ಅಂತ್ಯದಿಂದಾಗಿ, ಫ್ರೀಡಮ್ ಅನ್ನು ಅಮೇರಿಕ ಸಂಯುಕ್ತ ಸಂಸ್ಥಾನದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ರದ್ದುಪಡಿಸಿದರು. ರಷ್ಯಾದಲ್ಲಿನ ಆನಂತರದ ಆರ್ಥಿಕ ಮುಗ್ಗಟ್ಟಿನಿಂದಾಗಿ ಪೊಸ್ಟ್-ಸೋವಿಯತ್ ಎಕನಾಮಿಕ್ ಕೇಆಸ್, ಮಿರ್ -2 ಅನ್ನು ಕೇವಲ ಅದರ ಬೇಸ್ ಬ್ಲಾಕ್ ನಂತರವಷ್ಟೇ ರದ್ದುಪಡಿಸಿತು. ಅಷ್ಟರಲ್ಲಿ DOS-8 ಅನ್ನು ನಿರ್ಮಿಸಲಾಗಿತ್ತು.[೧೬] ಬಾಹ್ಯಾಕಾಶ ನಿಲ್ದಾಣ ಯೋಜನೆಗಳಿಗಾಗಿ ಇದೇ ರೀತಿಯ ಬಜೆಟ್ ಗೆ ಸಂಬಂಧಿಸಿದ ತೊಂದರೆಗಳನ್ನು ಅನೇಕ ರಾಷ್ಟ್ರಗಳು ಕೂಡ ಅನುಭವಿಸಿದವು. ಈ ಪರಿಸ್ಥಿತಿಯು 1990 ರಲ್ಲಿ ಸಹಯೋಗಿ ಯೋಜನೆಯನ್ನು ಪ್ರಾರಂಭಿಸಲು, ಅಮೇರಿಕಾದ ಸರ್ಕಾರವನ್ನು ಯುರೋಪಿನ ರಾಷ್ಟ್ರಗಳು, ರಷ್ಯಾ, ಜಪಾನ್, ಮತ್ತು ಕೆನಡಾದೊಂದಿಗೆ ಸಂಧಾನಮಾಡಿಕೊಳ್ಳುವಂತೆ ಮಾಡಿತು.[೧೬] ನಂತರ 1992 ರ ಜೂನ್ ನಲ್ಲಿ ಅಮೇರಿಕದ ಅಧ್ಯಕ್ಷ ಜಾರ್ಜ್ H. W. ಬುಷ್ ಮತ್ತು ರಷ್ಯಾದ ಅಧ್ಯಕ್ಷ ಬೋರಿಸ್ ಯೆಲ್ಸ್ಟೀನ್ ರವರು ಬಾಹ್ಯಾಕಾಶ ಪರಿಶೋಧನೆಯಯ ಮೇಲೆ ಸಹಕರಿಸಲು ಒಪ್ಪಿದರು. ಶಾಂತಿಯುತ ಉದ್ದೇಶಕ್ಕಾಗಿ ಬಾಹ್ಯಾಕಾಶದ ಪರಿಶೋಧನೆ ಮತ್ತು ಬಳಕೆಗೆ ಸಂಬಂಧಿಸಿದಂತೆ, ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ರಷ್ಯನ್ ಫೆಡರೇಷನ್ ನ ನಡುವೆ ಮಾಡಿಕೊಂಡ ಒಪ್ಪಂದವನ್ನು , ಅಲ್ಪಕಾಲಾವಧಿಯ ಜಂಟಿ ಬಾಹ್ಯಾಕಾಶ ಕಾರ್ಯಯೋಜನೆ ಎಂದು ಕರೆಯಲಾಗುತ್ತದೆ. ಅಲ್ಲದೇ ಇದರ ಜೊತೆಗೆ ರಷ್ಯನ್ ಬಾಹ್ಯಾಕಾಶ ನಿಲ್ದಾಣವಾದ ಮಿರ್ ನಲ್ಲಿ ಅಮೇರಿಕದ ಗಗನಯಾತ್ರಿಯನ್ನು ನಿಯೋಜಿಸಲಾಯಿತು, ಮತ್ತು ರಷ್ಯಾದ ಇಬ್ಬರು ಅಂತರಿಕ್ಷಯಾತ್ರಿ ಗಳನ್ನು ಬಾನಗಾಡಿಗೆ ನಿಯೋಜಿಸಲಾಯಿತು.[೧೬] 1993 ರ ಸೆಪ್ಟೆಂಬರ್ ನಲ್ಲಿ, ಅಮೇರಿಕಾದ ಉಪಾಧ್ಯಕ್ಷ ಅಲ್ ಗೋರ್, Jr. ಮತ್ತು ರಷ್ಯಾದ ಪ್ರಧಾನ ಮಂತ್ರಿಗಳಾದ ಚೆರ್ನೊಮೈರ್ಡಿನ್ ರವರು ಹೊಸ ಬಾಹ್ಯಾಕಾಶ ನಿಲ್ದಾಣಕ್ಕಾಗಿ ಯೋಜನೆಗಳನ್ನು ಪ್ರಕಟಿಸಿದರು. ಇದು ಅಂತಿಮವಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವಾಯಿತು.[೪೦] ಅಮೇರಿಕ ಸಂಯುಕ್ತ ಸಂಸ್ಥಾನವು ಮಿರ್ ಕಾರ್ಯಯೋಜನೆಯಲ್ಲಿ ಹೆಚ್ಚಾಗಿ ತೊಡಗಿತ್ತು. ಅವರು ಈ ಹೊಸ ಯೋಜನೆಯ ತಯಾರಿಗಾಗಿ ಒಪ್ಪಂದದ ಭಾಗವೆಂಬಂತೆ, ಅನಂತರ ಬಾಹ್ಯಾಕಾಶ ಷೆಟಲ್ ಆರ್ಬಿಟಲ್ ಅನ್ನು ಮಿರ್ ನೊಂದಿಗೆ ಸೇರಿಸಲು ಕೂಡ ಒಪ್ಪಿಕೊಂಡರು.[೧೮] ಯೋಜನೆಯ ಪ್ರಕಾರ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕಾರ್ಯಯೋಜನೆಯು, ಎಲ್ಲಾ ಸಹಯೋಗಿ ಪ್ರತಿನಿಧಿಗಳು ಸೂಚಿಸಿರುವ ಬಾಹ್ಯಾಕಾಶ ನಿಲ್ದಾಣಗಳನ್ನು ಒಟ್ಟುಗೂಡಿಸುತ್ತದೆ: NASA ದ ಫ್ರೀಡಮ್ , RSA ಯ ಮಿರ್ -2 ( DOS-8 ನೊಂದಿಗೆ ಅನಂತರ ಜ್ವೆಜ್ದ ), ESA ಯ ಕೊಲಂಬಸ್ , ಮತ್ತು ಜಪಾನೀಯರ ಕಿಬೋ ಪ್ರಯೋಗಾಲಯದೊಂದಿಗೆ ಸಹಭಾಗಿತ್ವ ತೋರುತ್ತದೆ. 1998 ರಲ್ಲಿ ಮೊದಲನೆಯ ಘಟಕವಾದ ಜಾರ್ಯ ವನ್ನು ಉಡಾವಣೆ ಮಾಡಿದಾಗ, ನಿಲ್ದಾಣವು 2003 ರ ಹೊತ್ತಿಗೆ ಪೂರ್ತಿಗೊಳ್ಳಬೇಕೆಂದು ನಿರೀಕ್ಷಿಸಲಾಗಿತ್ತು. ವಿಳಂಬಗಳಿಂದಾಗಿ 2011 ನೇ ವರ್ಷದಲ್ಲಿ ಸಂಪೂರ್ಣಗೊಳ್ಳುವುದೆಂದು ಪುನಃ ಅಂದಾಜುಮಾಡಲಾಯಿತು.[೪೧]
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಜೋಡಣೆಯು, ಬಾಹ್ಯಾಕಾಶ ವಾಸ್ತುಶಿಲ್ಪದಲ್ಲಿ ಮಾಡಿದ ಅತ್ಯಂತ ದೊಡ್ಡ ಸಾಹಸವಾಗಿದ್ದು, ಇದನ್ನು ನವೆಂಬರ್ 1998 ರಲ್ಲಿ ಪ್ರಾರಂಭಿಸಲಾಯಿತು.[೨] ಗಗನಯಾತ್ರಿಗಳು ಆಕಾಶ ನಡಿಗೆಯ ಮೂಲಕ ಪ್ರತಿಯೊಂದು ಭಾಗಗಳನ್ನು ಅಳವಡಿಸುತ್ತಾರೆ. ಆಗ 2009 ರ ನವೆಂಬರ್ 27 ರ ಹೊತ್ತಿಗೆ ಅವರು 136 ಭಾಗಗಳನ್ನು ಜೋಡಿಸಿದ್ದರು, ಒಟ್ಟಾಗಿ 849 ಗಂಟೆಗಳ ಎಕ್ಸ್ಟ್ರಾ-ವೆಹಿಕ್ಯುಲರ್ ಆಕ್ಟಿವಿಟಿ(EVA)ಯನ್ನು ಪೂರ್ಣಗೊಳಿಸಿದ್ದರು. ಅಲ್ಲದೇ ಎಲ್ಲರೂ ನಿಲ್ದಾಣದ ಜೋಡಣೆ ಮತ್ತು ನಿರ್ವಹಣೆಯ ಕಡೆಗೆ ಗಮನ ಹರಿಸಿದ್ದರು. ಈ ಆಕಾಶ ನಡಿಗೆಗಳ ಸಹಾಯದ ಮೂಲಕ ಜೋಡಿಸಲಾದ ಇಪ್ಪತ್ತೆಂಟು ಭಾಗಗಳು, ಪರಸ್ಪರ ಸಂಧಿಸುವ ಬಾಹ್ಯಾಕಾಶ ಬಾನಗಾಡಿಗಳ ವಾಯುಬಂಧಗಳಿಂದ ಬಂದಿವೆ; ಉಳಿದ 108 ಗಳನ್ನು ನಿಲ್ದಾಣದಿಂದ ಉಡಾವಣೆ ಮಾಡಲಾಗಿದೆ.[೧] ISS ನ ಮೊದಲನೆಯ ಭಾಗವಾದ ಜಾರ್ಯ ವನ್ನು 1998 ರ ನವೆಂಬರ್ 20 ರಂದು ರಷ್ಯಾದ ಪ್ರೋಟಾನ್ ರಾಕೆಟ್ ನ ಮೇಲೆ ಉಡಾವಣೆ ಮಾಡಲಾಯಿತು. ಇದಾದ ಎರಡು ವಾರಗಳ ನಂತರ ಯೂನಿಟಿ ಯಿಂದ—ಮೂರು ನೋಡ್(ನಿಸ್ಪಂದ) ಘಟಕಗಳ ಮೊದಲನೆಯ ಘಟಕವನ್ನು, ಬಾನಗಾಡಿ ವಿಮಾನವಾದ STS-88ರ ಮೇಲಿನಿಂದಲೇ ಉಡಾವಣೆ ಮಾಡಲಾಯಿತು. ISS ನಲ್ಲಿ ಅಗ್ರವೆನಿಸಿದ, ಅತ್ಯಂತ ಪ್ರಮುಖವಾದ ಈ ಎರಡು ಮುಕ್ತ ಘಟಕಗಳು, ಮುಂದಿನ ಒಂದೂವರೆ ವರ್ಷಗಳ ವರೆಗೆ ಯಾವುದೇ ಸಿಬ್ಬಂದಿಯಿರದೆ ಹಾಗೇಯೇ ಉಳಿದುಕೊಂಡವು. ಆಗ 2000 ರ ಜುಲೈನಲ್ಲಿ ರಷ್ಯಾದ ಜ್ವೆಜ್ದ ಎಂಬ ಘಟಕದ ಸೇರ್ಪಡೆ ಮೂಲಕ, ಗರಿಷ್ಠ ಮೂವರು ತಂಡದ ಸಿಬ್ಬಂದಿ ನಿರಂತರವಾಗಿ ISS ನಲ್ಲಿ ನೆಲೆಸಲು ಅವಕಾಶ ನೀಡಲಾಯಿತು. ಮೊಟ್ಟ ಮೊದಲನೆಯದಾಗಿ ಅಲ್ಲಿ ನೆಲೆಸಿದ ಗಗನಯಾತ್ರೆ 1 ರ ಸಿಬ್ಬಂದಿ, ಸೊಯುಜ್ TM-31 ರ ಮೇಲೆ 2000ದ ನವೆಂಬರ್ ನಲ್ಲಿ STS-92 ಮತ್ತು STS-97 ವಿಮಾನಗಳ ದಾರಿಯ ಮಧ್ಯಭಾಗದಲ್ಲಿ ಆಗಮಿಸಿದರು. ಈ ಎರಡೂ ಬಾನಗಾಡಿಗಳ ವಿಮಾನಗಳಲ್ಲಿ ಪ್ರತಿಯೊಂದು, ನಿಲ್ದಾಣದ ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ ನ ಭಾಗವನ್ನು ಸೇರಿಸಿವೆ. ಇದು ಸಂಪರ್ಕ, ಮಾರ್ಗದರ್ಶನ, ವಿದ್ಯುತ್ ಗ್ರೌಂಡಿಂಗ್(Z1ನ ಮೇಲಿನ ವಿದ್ಯುತ ಪ್ರಹರಿಸುವ) ಇದರೊಂದಿಗೆ ಮೂಲವ್ಯವಸ್ಥೆಯ ನಿಲ್ದಾಣವನ್ನು ಒದಗಿಸುತ್ತದೆ. ಅಲ್ಲದೇ P6 ಟ್ರಸ್ ನ ಮೇಲಿರುವ ದ್ಯುತಿವಿದ್ಯುಜ್ಜನಕ ಸರಣಿಗಳ ಮೂಲಕ ವಿದ್ಯುತ್ ಶಕ್ತಿಯನ್ನೂ ಕೂಡ ಒದಗಿಸುತ್ತದೆ.[೪೨] ಮುಂದಿನ ಎರಡು ವರ್ಷಗಳವರೆಗೆ ನಿಲ್ದಾಣವನ್ನು ವಿಸ್ತರಿಸಲಾಗುತ್ತದೆ. ಸೊಯುಜ್-U ರಾಕೆಟ್, ಪಿರ್ಸ್ ಎಂಬ ಜೋಡಣಾ ವಿಭಾಗವನ್ನು ತಲುಪಿಸಿತು. ಬಾನಗಾಡಿಗಳಾದ ಡಿಸ್ಕವರಿ ,ಅಟ್ಲಾಂಟಿಸ್ , ಮತ್ತು ಇನ್ ಡೆವರ್ ಗಳು ಡೆಸ್ಟಿನಿ' ಪ್ರಯೋಗಾಲಯವನ್ನು ಮತ್ತು ಕ್ವೆಸ್ಟ್ ವಾಯುಬಂಧವನ್ನು ತಲುಪಿಸಿವೆ. ಅಲ್ಲದೇ ನಿಲ್ದಾಣದ ಪ್ರಧಾನ ರೋಬಾಟ್ ನ ಪ್ರಬಲ ತೋಳಿನ ಜೊತೆಯಲ್ಲಿ ಕೆನಡರಮ್ 2 , ಮತ್ತು ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ ನ ಅನೇಕ ಭಾಗಗಳನ್ನು ನೀಡಿದೆ.[೪೨] ನಿಲ್ದಾಣವನ್ನು ವಿಸ್ತರಿಸುವ ಯೋಜನೆಗೆ 2003 ರಲ್ಲಿ STS-107 ರ ಮೇಲೆ ಉಂಟಾದ Space Shuttle Columbia ರ ವಿನಾಶದಿಂದ ತೊಂದರೆಯಾಯಿತು. ಇದರಿಂದಾಗಿ , ಡಿಸ್ಕವರಿ ಯನ್ನು STS-114 ರ ಮೇಲೆ 2005 ರಲ್ಲಿ ಉಡಾವಣೆ ಮಾಡುವ ವರೆಗೂ, ತಂಗುನಿಲ್ದಾಣದ ಜೋಡಣೆಯ ಬಾನಗಾಡಿ ಕಾರ್ಯಯೋಜನೆಗೆ ತಡೆಯುಂಟಾಯಿತು.[೪೩] ಅಟ್ಲಾಂಟಿಸ್ , STS-115 ರ ಮೇಲೆ ಆಗಮಿಸಿದ ನಂತರ ಜೋಡಣೆಯನ್ನು ಅಧಿಕೃತವಾಗಿ ಪುನಃ ಆರಂಭಿಸಲಾಯಿತು ಎಂದು ಹೇಳಲಾಗಿದೆ. ಇದು ನಿಲ್ದಾಣದ ಎರಡನೆಯ ದ್ಯುತಿವಿದ್ಯುಜ್ಜನಕ ಸೌರ ಸರಣಿಗಳನ್ನು ತಲುಪಿಸಿತು. ಟ್ರಸ್ ನ ಅನೇಕ ಭಾಗಗಳನ್ನು ಮತ್ತು ಸರಣಿಗಳ ಮೂರನೆಯ ಗುಂಪನ್ನು STS-116, STS-117, ಮತ್ತು STS-118 ರ ಮೇಲೆ ತಲುಪಿಸಲಾಯಿತು. ನಿಲ್ದಾಣದ ವಿದ್ಯುತ್ ಉತ್ಪಾದನಾ-ಸಾಮರ್ಥ್ಯಗಳನ್ನು ವಿಸ್ತರಿಸುವುದರ ಫಲಿತಾಂಶವೆಂಬಂತೆ, ಅಧಿಕ ಒತ್ತಡಕ್ಕೆ ಒಳಪಡಿಸಲಾದ ಘಟಕಗಳನ್ನು ಒದಗಿಸಲಾಯಿತು. ಅಲ್ಲದೇ ಹಾರ್ಮನಿ ನೋಡ್(ನಿಸ್ಪಂದ) ಮತ್ತು ಕೊಲಂಬಸ್ ಯುರೋಪಿಯನ್ ಪ್ರಯೋಗಾಲಯವನ್ನೂ ಅದರೊಂದಿಗೆ ಸೇರಿಸಲಾಯಿತು. ಕಿಬೋ ದ ಮೊದಲನೆಯ ಎರಡು ಘಟಕಗಳನ್ನು ಸೇರಿಸಿದ ಸ್ವಲ್ಪ ಸಮಯದ ನಂತರದಲ್ಲೇ ಇವುಗಳನ್ನು ಕೂಡ ಸೇರಿಸಲಾಯಿತು. 2009 ರ ಮಾರ್ಚ್ ನಲ್ಲಿ STS-119, ನಾಲ್ಕನೆಯ ಮತ್ತು ಕೊನೆಯ ದ್ಯುತಿವಿದ್ಯುಜ್ಜನಕ ಸೌರ (ಇಲ್ಲಿ ಸ್ವಯಂ ವಿದ್ಯುತ್ ಉತ್ಪಾದನೆಗೆ ಪ್ರೊತ್ಸಾಹ)ಸರಣಿಗಳ ಗುಂಪನ್ನು ಅಳವಡಿಸುವುದರೊಂದಿಗೆ, ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ ಅನ್ನು ಸಂಪೂರ್ಣಗೊಳಿಸಿತು. ರಷ್ಯಾದ ಪೊಯಿಸ್ಕೊ ಘಟಕದ ನಂತರ ಕಿಬೋ ದ ಅಂತಿಮ ವಿಭಾಗವನ್ನು 2009 ರ ಜುಲೈನಲ್ಲಿ STS-127 ರ ಮೂಲಕ ತಲುಪಿಸಲಾಯಿತು. ಮೂರನೆಯ ನೋಡ್ (ನಿಸ್ಪಂದ)ವಾದ ಶಬ್ದ ಮಾಲಿನ್ಯಮುಕ್ತ ಟ್ರ್ಯಾಂಕ್ವಾಲಿಟಿ ಯನ್ನು STS-130 ರ ಸಂದರ್ಭದಲ್ಲಿ 2010 ರಲ್ಲಿ ತಲುಪಿಸಲಾಯಿತು. ಇದನ್ನು ಕ್ಯುಪೊಲದ (ಇಂಧನ ದಹನ ಕುಲುಮೆ)ಪಕ್ಕದಲ್ಲೇ ಇನ್ ಡೆವರ್ ಎಂಬ ಬಾನಗಾಡಿಯ ಮೂಲಕ ತಲುಪಿಸಲಾಯಿತು. ಅಲ್ಲದೇ ಇದನ್ನು ಅನುಸರಿಸಿ 2010 ರ ಮೇಯಲ್ಲಿ ರಷ್ಯನ್ ಉಪಾಂತ ಘಟಕ ರಾಸವೆಟ್ ಅನ್ನು, ಅಟ್ಲಾಂಟಿಸ್ ಎಂಬ ಬಾನಗಾಡಿಯ ಮೂಲಕ STS-132 ನ ಮೇಲೆ ತಲುಪಿಸಲಾಯಿತು. As of ಮೇ 2010[update], ನಿಲ್ದಾಣವು ಒತ್ತಡಕ್ಕೇರಿಸಲಾದ ಹದಿನಾಲ್ಕು ಘಟಕಗಳನ್ನು ಮತ್ತು ಸಂಪೂರ್ಣ ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ ಅನ್ನು ಒಳಗೊಂಡಿದೆ. ಪರ್ಮನೆಂಟ್ ಮಲ್ಟಿಪರ್ಪಸ್ ಮಾಡ್ಯೂಲ್(ಶಾಶ್ವತ ವಿವಿಧೋದ್ದೇಶ ಮಾದರಿ ಘಟಕ)ವಾಗಿರುವ ಲಿಯೊನಾರ್ಡ್ , ರಷ್ಯಾದ ವಿವಿಧೋದ್ದೇಶ ಪ್ರಯೋಗಾಲಯ ಘಟಕವಾದ ನೌಕೆ , ಯುರೋಪಿಯನ್ ರೊಬಾಟಿಕ್ ಆರ್ಮ್ ಮತ್ತು ಆಲ್ಫ ಮ್ಯಾಗ್ನೆಟಿಕ್ ಸ್ಪೆಕ್ಟ್ರೋಮೀಟರ್ (AMS-02) ಗಳನ್ನು ಒಳಗೊಂಡಂತೆ ಅನೇಕ ಬಾಹ್ಯ ಘಟಕಗಳನ್ನು ಇನ್ನೂ ಉಡಾವಣೆ ಮಾಡಬೇಕಿದೆ. ಜೋಡಣೆಯು 2011 ರ ಹೊತ್ತಿಗೆ ಮುಕ್ತಾಯಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. ನಿಲ್ದಾಣದ ಭಾರ 400 ಮೆಟ್ರಿಕ್ ಟನ್ ಗಳನ್ನು ಮೀರಿಸುತ್ತದೆ. (440 ಶಾರ್ಟ್ ಟನ್ ಗಳು).[೨][೪೧]
ISS ಸಂಪೂರ್ಣಗೊಂಡಾಗ, ಇದು ಒತ್ತಡಕ್ಕೇರಿಸಲಾದ ಹದಿನಾರು ಘಟಕಗಳನ್ನು ಒಳಗೊಂಡಿದ್ದು ಇದರ ಜೊತೆಯಲ್ಲಿ ಸರಿಸುಮಾರು 1,000 cubic metres (35,000 cu ft) ರಷ್ಟು ಸಂಯೋಜನಾ ಮಾನಕ ಪ್ರಮಾಣವನ್ನು ಹೊಂದಿರುತ್ತದೆ. ಈ ಘಟಕಗಳು ಪ್ರಯೋಗಾಲಯಗಳನ್ನು, ಜೋಡಣಾ ವಿಭಾಗಗಳನ್ನು, ವಾಯುಬಂಧಗಳನ್ನು, ಕಕ್ಷೆಗಳ ಜೋಡನಾ ಬಿಂದುಗಳಾದ ನೋಡ್ ಗಳನ್ನು ಮತ್ತು ವಾಸದ ಸ್ಥಾನಗಳನ್ನು(ಕ್ವಾರ್ಟರ್ಸ್) ಒಳಗೊಂಡಿವೆ. ಇವುಗಳಲ್ಲಿ ಹದಿಮೂರು ಘಟಕಗಳು ಆಗಲೇ ಕಕ್ಷೆಯಲ್ಲಿವೆ, ಮತ್ತು ಉಳಿದ ಮೂರು ಘಟಕಗಳು ಉಡಾವಣೆ ಮಾಡುವ ನಿರೀಕ್ಷೆಯಲ್ಲಿವೆ. ಪ್ರತಿ ಘಟಕವನ್ನು ಬಾಹ್ಯಾಕಾಶ ಬಾನಗಾಡಿಯ ಮೂಲಕ ಅಥವಾ ಪ್ರೋಟಾನ್ ರಾಕೆಟ್ ಅಥವಾ ಸೊಯುಜ್ ರಾಕೆಟ್ ನ ಮೂಲಕ ಉಡಾವಣೆ ಮಾಡಲಾಗುತ್ತದೆ.[೪೨]
ಘಟಕ | ಜೋಡಣಾ ಕಾರ್ಯಾಚರಣೆ ಗುರಿ | ಉಡಾವಣಾ ದಿನಾಂಕ | ಉಡಾವಣಾ ವಿಧಾನ,ವ್ಯವಸ್ಥೆ | ರಾಷ್ಟ್ರ | |
---|---|---|---|---|---|
'ಜಾರ್ಯ' (ಲಿಟ್. 'ಡಾನ್') (FGB) |
1A/R | 1998 ರ ನವೆಂಬರ್ 20 | ಪ್ರೋಟಾನ್-K | ರಷ್ಯಾ (ನಿರ್ಮಾಣಗಾರ) USA (ಬಂಡವಾಳಗಾರ) | |
[೪೪] | |||||
ಉಡಾವಣೆ ಮಾಡಲಾದ ISS ನ ಮೊಟ್ಟ ಮೊದಲನೆಯ ಘಟಕವಾಗಿದ್ದು, ಇದರ ಆರಂಭಿಕ ಜೋಡಣೆಯ ಸಂದರ್ಭದಲ್ಲಿ ಜಾರ್ಯ ವಿದ್ಯುತ್ ಶಕ್ತಿ, ಅದರ ಸಂಗ್ರಹಣೆ, ಪ್ರೇರಕಶಕ್ತಿ (ನೋದನ) ಮತ್ತು ಮಾರ್ಗದರ್ಶನ ಇತ್ಯಾದಿಗಳನ್ನು ಒಳಗೊಳಿಸಲಾಗಿದೆ. ಘಟಕವು ಪ್ರಸ್ತುತ ಒತ್ತಡಕ್ಕೇರಿಸಲಾದ ವಿಭಾಗದೊಳಗೆ ಮತ್ತು ಬಾಹ್ಯದಲ್ಲಿ ಸ್ಥಾಪಿತ ಇಂಧನದ ಟ್ಯಾಂಕ್ ಗಳೊಳಗೆ ಸಂಗ್ರಹಣಾ ವಿಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. | |||||
ಯೂನಿಟಿ (ನೋಡ್ 1) |
2A | 1998 ರ ಡಿಸೆಂಬರ್ 4 | ಬಾಹ್ಯಾಕಾಶ ಬಾನಗಾಡಿ Endeavour, STS-88 | USA | |
[೪೫] | |||||
ಇದು ನಿಲ್ದಾಣದ ಅಮೇರಿಕನ್ ವಿಭಾಗವನ್ನು ರಷ್ಯನ್ ವಿಭಾಗದೊಂದಿಗೆ ಸೇರಿಸಿದ ಮೊದಲನೆಯ ಅಡಚಣೆಮುಕ್ತ, ನೋಡ್ (ನಿಸ್ಪಂದ) ಘಟಕವಾಗಿದೆ (PMA-1ರ ಮೂಲಕ). ಅಲ್ಲದೇ Z1 ಟ್ರಸ್ ಗೆ, ಕ್ವೆಸ್ಟ್ ವಾಯುಬಂಧಕ್ಕೆ, ಡೆಸ್ಟಿನಿ ಪ್ರಯೋಗಾಲಯಕ್ಕೆ ಮತ್ತು ಟ್ರ್ಯಾಂಕ್ವಾಲಿಟಿ ನೋಡ್ ಗೆ ಸ್ಥಳಾವಕಾಶ ಒದಗಿಸಿದೆ. | |||||
ಜ್ವೆಜ್ದ (ಲಿಟ್. 'ಸ್ಟಾರ್') (ಸೇವಾ ಘಟಕ) |
1R | 2000 ದ ಜುಲೈ 12 | ಪ್ರೋಟಾನ್-K | ರಷ್ಯಾ | |
[೪೬] | |||||
ಇದು ನಿಲ್ದಾಣದ ಸೇವಾ ಘಟಕವಾಗಿದ್ದು, ಅಲ್ಲಿ ವಾಸಮಾಡುವ ಸಿಬ್ಬಂದಿಗೆ ವಾಸಕ್ಕೆ ಅಗತ್ಯ ಜಾಗ, ಪರಿಸರ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ನೌಕೆ ಮತ್ತು ಕಕ್ಷಾ ನಿಯಂತ್ರಣವನ್ನು ಒದಗಿಸುತ್ತದೆ. ಈ ಘಟಕವು ಸೊಯುಜ್ ಬಾಹ್ಯಾಕಾಶನೌಕೆಗೆ, ಪ್ರೋಗ್ರೆಸ್ ಬಾಹ್ಯಾಕಾಶನೌಕೆಗೆ ಮತ್ತು ಆಟೊಮೇಟೆಡ್ ಟ್ರಾನ್ಸ್ಫರ್ ವೆಹಿಕಲ್ ಗೆ ಪರಸ್ಪರ ಸಂಧಿಸುವ ಸ್ಥಳಾವಕಾಶವನ್ನು ಒದಗಿಸುತ್ತದೆ. ಅಲ್ಲದೇ ಇದನ್ನು ಸೇರಿಸಿದ್ದರಿಂದ ISS ಮೊದಲನೆಯ ಬಾರಿಗೆ ಶಾಶ್ವತವಾಗಿ ಆಗಿ ವಾಸಯೋಗ್ಯವಾಯಿತು. | |||||
ಡೆಸ್ಟಿನಿ (US ಪ್ರಯೋಗಾಲಯ) |
5A | 2001 ರ ಫೆಬ್ರವರಿ 7 | ಬಾಹ್ಯಾಕಾಶ ಬಾನಗಾಡಿAtlantis, STS-98 | USA | |
[೪೭] | |||||
US ಉಪಕರಣಗಳಿಗಾಗಿ ISS ನಲ್ಲಿ ಪ್ರಾಥಮಿಕ ಸಂಶೋಧನಾ ಸೌಲಭ್ಯವಾದ ಡೆಸ್ಟಿನಿ ಯನ್ನು ಸಾರ್ವತ್ರಿಕ ಪ್ರಯೋಗಗಳಿಗೆ ಬಳಸಲಾಗಿದೆ. ಈ ಘಟಕವು 24 ಇಂಟರ್ ನ್ಯಾಷನಲ್ ಸ್ಟ್ಯಾಂಡರ್ಡ್ ಪ್ಲೇಲೋಡ್ ರಾಕ್(ಅಂತರರಾಷ್ಟ್ರೀಯವಾಗಿ ಪ್ರಮಾಣೀಕರಿಸಿದ ಉಪಕರಣಗಳ ಸಂಗ್ರಹಣ) ಗಳಿಗೆ ಎಡೆಮಾಡಿಕೊಟ್ಟಿದೆ. ಇವುಗಳಲ್ಲಿ ಕೆಲವುಗಳನ್ನು ಪರಿಸರೀಯ ವ್ಯವಸ್ಥೆಗಾಗಿ ಬಳಸಲಾಗುತ್ತದೆ, ಅಲ್ಲದೇ ಸಿಬ್ಬಂದಿಯ ದಿನನಿತ್ಯದ ಬಳಕೆಯ ಉಪಕರಣವಾಗಿ ಬಳಸಲಾಗುತ್ತದೆ. ಅಲ್ಲದೇ ಇದು 51-centimetre (20 in) ದೃಗ್ವೈಜ್ಞಾನಿಕವಾಗಿ ಪರಿಪೂರ್ಣ ಗವಾಕ್ಷಿಯನ್ನು ಒಳಗೊಂಡಿದೆ. ಇದು ಬಾಹ್ಯಾಕಾಶದಲ್ಲಿ ಬಳಸಲು ಹಿಂದೆಂದೂ ನಿರ್ಮಿಸದ ಅತ್ಯಂತ ವಿಶಾಲ ಕಿಟಕಿಯಾಗಿದೆ. ಡೆಸ್ಟಿನಿ , ನಿಲ್ದಾಣದ ಬಹುಪಾಲು ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ ಅನ್ನು ಜೋಡಿಸುವ ಸಮಗ್ರತೆಯ ಸ್ಥಳವಾಗಿಯೂ ಕೂಡ ಸೇವೆಸಲ್ಲಿಸುತ್ತದೆ. | |||||
ಕ್ವೆಸ್ಟ್ (ಜಂಟಿ ವಾಯುಬಂಧ) |
7A | 2001 ರ ಜುಲೈ 12. | ಬಾಹ್ಯಾಕಾಶ ಬಾನಗಾಡಿ ಅಟ್ಲಾಂಟಿಸ್ , STS-104 | USA | |
[೪೮] | |||||
ಕ್ವೆಸ್ಟ್ ISS ನ ಪ್ರಧಾನ ವಾಯುಬಂಧವಾಗಿದ್ದು, US EMU ಮತ್ತು ರಷ್ಯನ್ ಒರ್ಲ್ಯಾನ್ ಆಕಾಶ ಪೋಷಾಕುಗಳೊಂದಿಗೆ ಆಕಾಶ ನಡಿಗೆಯನ್ನು ನಿರೂಪಿಸುತ್ತದೆ. ಕ್ವೆಸ್ಟ್ ಎರಡು ಭಾಗಗಳನ್ನು ಒಳಗೊಂಡಿದೆ; ಸಲಕರಣೆಗಳ ಲಾಕ್, ಇದು ಗಗನ ಯಾತ್ರೆಯಲ್ಲಿ ಉಪಯೋಗಿಸುವ ಉಡುಪು ಮತ್ತು ಸಲಕರಣೆಯನ್ನು ಸಂಗ್ರಹಿಸಿಡುತ್ತದೆ. ಎರಡನೆಯದು ಕ್ರೂ ಲಾಕ್(ಸಿಬ್ಬಂದಿ ಲಾಕ್) ಆಗಿದ್ದು, ಇದರ ಮೂಲಕವೇ ಗಗನಯಾತ್ರಿಗಳು ಬಾಹ್ಯಾಕಾಶದಿಂದ ನಿರ್ಗಮಿಸುತ್ತಾರೆ. | |||||
ಪರ್ಸ್ (ಲಿಟ್. 'ಪೀರ್') (ಜೋಡಣಾ ವಿಭಾಗ) |
4R | 2001 ರ ಸೆಪ್ಟೆಂಬರ್ 14 | ಸೊಯುಜ್-U, ಪ್ರೋಗ್ರೆಸ್ M-SO1 | ರಷ್ಯಾ | |
" | [೪೯] | ||||
ಪರ್ಸ್ ,ಸೊಯುಜ್ ಮತ್ತು ಪ್ರೋಗ್ರೆಸ್ ಬಾಹ್ಯಾಕಾಶನೌಕೆಗಳಿಗೆ ISS ನೊಂದಿಗೆ ಜೋಡಣಾ ಸ್ಥಳವನ್ನು ಒದಗಿಸುತ್ತದೆ. ಅಲ್ಲದೇ ಆಕಾಶ ನಡಿಗೆಗಾಗಿ ರಷ್ಯಾದ ಒರ್ಲ್ಯಾನ್ ಆಕಾಶ ಪೋಷಾಕನ್ನು ಧರಿಸಿ ಬರುವ ಗಗನಯಾತ್ರಿಗಳಿಗೆ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶ ನೀಡುತ್ತದೆ. ಅಷ್ಟೇ ಅಲ್ಲದೇ ಇದರ ಜೊತೆಯಲ್ಲಿ ಈ ಆಕಾಶ ಪೋಷಾಕುಗಳನ್ನು ಇಡಲು ಸೂಕ್ತ ಸ್ಥಳವನ್ನು ಕೂಡ ಕಲ್ಪಿಸಿಕೊಡುತ್ತದೆ. | |||||
ಹಾರ್ಮನಿ (ನೋಡ್ 2) |
10A | 2007 ರ ಅಕ್ಟೋಬರ್ 23 | ಬಾಹ್ಯಾಕಾಶ ಬಾನಗಾಡಿ Discovery, STS-120 | ಯುರೋಪ್ (ನಿರ್ಮಾಣಗಾರ) USA (ಚಾಲಕ) | |
[೫೦] | |||||
ನಿಲ್ದಾಣದ ನೋಡ್ ಘಟಕಗಳಲ್ಲಿ ಎರಡನೆಯದಾಗಿದ್ದು, ಹಾರ್ಮನಿ ಯು ISS ನ ಹಲವು ಸೌಲಭ್ಯಗಳ ಉಪಯೋಗದ ಕೇಂದ್ರವಾಗಿದೆ. ಘಟಕವು ನಾಲ್ಕು ರಾಕ್ (ಕಪಾಟು) ಗಳನ್ನು ಹೊಂದಿದೆ. ಇವು ವಿದ್ಯುತ್ ಶಕ್ತಿಯನ್ನು, ಬಸ್ ಎಲೆಕ್ಟ್ರಾನಿಕ್ (ವಾಹಕ ಅಂಶಗಳ)ದತ್ತಾಂಶವನ್ನು ಒದಗಿಸುತ್ತವೆ. ಅಲ್ಲದೇ ಇಲ್ಲಿ ಆರು ಕಾಮನ್ ಬರ್ತಿಂಗ್ ಮೆಕ್ಯಾನಿಸಮ್ ನ(CBMs) ಮೂಲಕ ಸಂಪರ್ಕ ಕಲ್ಪಿಸುವ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಯುರೋಪಿಯನ್ ಕೊಲಂಬಸ್ ಮತ್ತು ಜಪಾನೀಯರ ಕಿಬೋ ಪ್ರಯೋಗಾಲಯಗಳು ಘಟಕಕ್ಕೆ ಕಾಯಂ ಆಗಿ ಸ್ಥಳಾವಕಾಶ ನೀಡಿವೆ. ಅಲ್ಲದೇ ಅಮೇರಿಕದ ಬಾಹ್ಯಾಕಾಶ ಬಾನಗಾಡಿ ಕಕ್ಷೆಗಾಮಿಗಳು PMA-2 ನ ಮೂಲಕ ISS ಅನ್ನು ಸಂಧಿಸುತ್ತವೆ. ಇದು ಹಾರ್ಮನಿ ಯ ಮುಂದಿನ ಭಾಗ ಕ್ಕೆ ಹೊಂದಿಕೊಂಡಿದೆ.ಇದರ ಜೊತೆಯಲ್ಲಿ ಘಟಕವು, ಬಾನಗಾಡಿ ವ್ಯವಸ್ಥಾಪನ ವಿಮಾನಗಳ ಸಂದರ್ಭದಲ್ಲಿ ಇಟಲಿಯನ್ ಮಲ್ಟಿ-ಪರ್ಪಸ್ ಲಾಜಿಸ್ಟಿಕ್ ಮಾಡ್ಯೂಲ್ ಗಳಿಗೆ (ಬಹು- ಉದ್ದೇಶ ವ್ಯವಸ್ಥಾಪನ ಸಾಗಣೆ ಘಟಕಗಳು) ಸ್ಥಳಾವಕಾಶವನ್ನು ಕಲ್ಪಿಸಿಕೊಡುತ್ತದೆ. | |||||
ಕೊಲಂಬಸ್ (ಯುರೋಪಿಯನ್ ಪ್ರಯೋಗಾಲಯ) |
1E | 2008 ರ ಫೆಬ್ರವರಿ 7 | ಬಾಹ್ಯಾಕಾಶ ಬಾನಗಾಡಿ ಅಟ್ಲಾಂಟಿಸ್ , STS-122 | ಯುರೋಪ್ | |
[೫೧][೫೨] | |||||
ಇದು ಯುರೋಪಿಯನ್ ಪೇಲೋಡ್ (ಗಗನನೌಕೆ ಹೊತ್ತೊಯ್ಯುವ ಉಪಕರಣಗಳು)ಗಳಿಗಾಗಿ ISS ನಲ್ಲಿ ಇರುವ ಪ್ರಾಥಮಿಕ ಸಂಶೋಧನಾ ಸೌಲಭ್ಯವಾಗಿದೆ. ಕೊಲಂಬಸ್ ಯುರೋಪಿಯನ್ ಡ್ರಾವರ್ ರಾಕ್(ಜೀವಿಯ ತಳಿಯನ್ನು ಕಂಡುಹಿಡಿಯುವ ಪ್ರಯೋಗಾಲಯ) ಅನ್ನು ಒದಗಿಸುತ್ತದೆ. ಅಲ್ಲದೇ ಜೀವವಿಜ್ಞಾನ, ಜೀವ ವೈದ್ಯಕೀಯ ಸಂಶೋಧನೆ ಮತ್ತು ಸ್ರವ ವಿಜ್ಞಾನ ವಿಷಯಗಳಿಗೆಂದೇ ನಿರ್ದಿಷ್ಟವಾಗಿ ನಿರ್ಮಿಸಲಾದ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಘಟಕದ ಹೊರಾಂಗಣದಲ್ಲಿ ಅನೇಕ ಜೋಡಣಾ ಸ್ಥಳಗಳನ್ನು ಹೊಂದಿಸಲಾಗಿದೆ. ಇದು ಯುರೋಪಿಯನ್ ಟೆಕ್ನಾಲಜಿ ಎಕ್ಸಪೋಷರ್ ಫೆಸಿಲಿಟಿ (EuTEF), ಸೋಲಾರ್ ಮಾನಿಟರಿಂಗ್ ಅಬ್ಸರ್ವೇಟರಿ, ಮೆಟೀರಿಯಲ್ಸ್ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ ಎಕ್ಸ್ಪೆರಿಮೆಂಟ್ ಮತ್ತು ಆಟೊಮಿಕ್ ಕ್ಲಾಕ್ ಎನ್ಸೆಂಬಲ್ ಇನ್ ಸ್ಪೇಸ್ ನಂತಹ ಬಾಹ್ಯ ಪ್ರಯೋಗಗಳಿಗೆ ಅಗತ್ಯ ಶಕ್ತಿ ಮತ್ತು ದತ್ತಾಂಶವನ್ನು ಒದಗಿಸುತ್ತದೆ. ಕ್ವಾಂಟಮ್ ಭೌತಶಾಸ್ತ್ರ ಮತ್ತು ಬ್ರಹ್ಮಾಂಡದ ವಿಶ್ವವಿಜ್ಞಾನಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಘಟಕದಲ್ಲಿ ಅನೇಕ ಅಳತೆ ಮಾನಕ ವಿಸ್ತರಣೆಗಳನ್ನು ತರಲು ಯೋಜಿಸಲಾಗಿದೆ. | |||||
ಕಿಬೋ ಪ್ರಯೋಗ ವ್ಯವಸ್ಥಾಪನ ಘಟಕ (lit. 'ಹೋಪ್'ಮತ್ತು 'ವಿಷ್' JEM–ELM) |
1J/A | 2008 ರ ಮಾರ್ಚ್ 11 | ಬಾಹ್ಯಾಕಾಶ ಬಾನಗಾಡಿ ಇನ್ ಡೆವರ್ , STS-123 | ಜಪಾನ್ | |
[೫೩] | |||||
ಇದು ಜಪಾನೀಯರ ಪರೀಕ್ಷಾ ಘಟಕದ ಪ್ರಯೋಗಾಲಯವಾದ ಕಿಬೋ ದ ಭಾಗವಾಗಿದೆ. ELM, ಒತ್ತಡಕ್ಕೇರಿಸಲಾದ ವಿಭಾಗಗಳೊಂದಿಗೆ ಆಂತರಿಕ ಸಾಗಾಟದ ಉಪಕರಣಗಳನ್ನು ಒದಗಿಸುತ್ತದೆ.ಅಲ್ಲದೇ ಇದರ ಜೊತೆಯಲ್ಲಿ ಪ್ರಯೋಗಾಲಯಕ್ಕೆ ಸಂಗ್ರಹಣೆ ಮತ್ತು ಸಾಗಣೆ ವ್ಯವಸ್ಥೆಯ ಸೌಲಭ್ಯಗಳನ್ನು ಕೂಡ ಒದಗಿಸುತ್ತದೆ. | |||||
ಕಿಬೋ ಒತ್ತಡಕ್ಕೇರಿಸಲಾದ ಘಟಕ (JEM–PM) |
1J | 2008 ರ ಮೇ 31 | ಬಾಹ್ಯಾಕಾಶ ಬಾನಗಾಡಿ ಡಿಸ್ಕವರಿ , STS-124 | ಜಪಾನ್ | |
[೫೩][೫೪] | |||||
ಇದು ಜಪಾನೀಯರ ಕಿಬೋ ಎಂಬ ಪರೀಕ್ಷಾ ಘಟಕದ ಪ್ರಯೋಗಾಲಯದ ಭಾಗವಾಗಿದೆ. PM ಕಿಬೋ ನ ಅತ್ಯಂತ ಮುಖ್ಯ ಘಟಕವಾಗಿದ್ದು, ಇದರಲ್ಲಿ ELM ಮತ್ತು (ಬಾಹ್ಯ ಸಂಪರ್ಕದ ಸೌಲಭ್ಯ)ಎಕ್ಸ್ ಪೋಸ್ಡ್ ಫೆಸಿಲಿಟಿಗಳಿಗೆ ಸ್ಥಳವಾಕಾಶವಿದೆ. ಪ್ರಯೋಗಾಲಯವು ISS ನ ಅತ್ಯಂತ ದೊಡ್ಡ ಏಕೈಕ ಘಟಕವಾಗಿದೆ. ಅಲ್ಲದೇ ಪ್ರಯೋಗದ 10 ರಾಕ್(ಕಪಾಟು) ಗಳನ್ನು ಒಳಗೊಂಡಂತೆ ಒಟ್ಟು 23 ರಾಕ್(ಕಪಾಟು) ಗಳನ್ನು ಒಳಗೊಂಡಿದೆ. ಈ ಘಟಕವನ್ನು ಬಾಹ್ಯಾಕಾಶ ಔಷಧಿ, ಜೀವವಿಜ್ಞಾನ, ಪೃಥ್ವಿ ವೀಕ್ಷಣೆಗಳು, ವಸ್ತುಗಳ ಉತ್ಪಾದನೆ, ಜೈವಿಕ ತಂತ್ರಜ್ಞಾನ ಸಂಪರ್ಕ-ಸಂವಹನಗಳ ವಿಷಯಗಳಲ್ಲಿ ಸಂಶೋಧನೆ ಮಾಡಲು ಬಳಸಲಾಗುತ್ತದೆ. PM, ಬಾಹ್ಯ ವೇದಿಕೆಗಳಿಗೆ ಮತ್ತು ಎಕ್ಸ್ಪೋಸ್ಡ್ ಫೆಸಿಲಿಟಿ (EF) (ಬಾಹ್ಯ ಸೌಲಭ್ಯ)ಗೆ ಜೋಡಣಾ ಸ್ಥಳವಾಗಿಯೂ ಕೂಡ ಸೇವೆ ಸಲ್ಲಿಸುತ್ತದೆ. ಇದು ಉಪಕರಣಗಳನ್ನು ನೇರವಾಗಿ ಬಾಹ್ಯಾಕಾಶದ ಅಹಿತಕರ ವಾತಾವರಣಕ್ಕೆ ಒಡ್ಡಲು ಅವಕಾಶ ನೀಡುತ್ತದೆ. EF ಗೆ JEM–RMS ಘಟಕದ ರೋಬಾಟ್ ನ ಪ್ರಬಲವಾದ ತೋಳು ಶಕ್ತಿಯೂ ಸೇವೆಸಲ್ಲಿಸುತ್ತದೆ. ಇದನ್ನು PM ನ ಮೇಲ್ಭಾಗದಲ್ಲಿ ಜೋಡಣೆ ಮೂಲಕ ವ್ಯವಸ್ಥೆ ಮಾಡಲಾಗಿದೆ. | |||||
ಪಾಯ್ಸ್ಕ್ (ಲಿಟ್. 'ಸರ್ಚ್') (ಕಿರು-ಸಂಶೋಧನಾ ಘಟಕ 2) |
5R | 2009 ರ ನವೆಂಬರ್ 10 | ಸೊಯುಜ್-U, ಪ್ರೋಗ್ರೆಸ್ M-MIM2 | ರಷ್ಯಾ | |
[೫೫][೫೬] | |||||
ರಷ್ಯನ್ ISS ಘಟಕಗಳಲ್ಲಿ ಇದು ಕೂಡ ಒಂದಾಗಿದೆ. ಸೊಯುಜ್ ಮತ್ತು ಪ್ರೋಗ್ರೆಸ್ ಆಕಾಶನೌಕೆಗಳನ್ನು ಪರಸ್ಪರ ಸಂಧಿಸುವಂತೆ ಮಾಡಲು MRM2 ಅನ್ನು ಆಕಾಶ ನಡಿಗೆಯ ವಾಯುಬಂಧದ ರೂಪದಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದನ್ನು ವೈಜ್ಞಾನಿಕ ಪ್ರಯೋಗಗಳಿಗೆ ಅಂತರಕ್ರಿಯೆಯಾಗಿಯೂ ಕೂಡ ಬಳಸಲಾಗುತ್ತದೆ. | |||||
ಟ್ರ್ಯಾಂಕ್ವಾಲಿಟಿ (ನೋಡ್ 3) |
20A | 2010 ರ ಫೆಬ್ರವರಿ 8 | ಬಾಹ್ಯಾಕಾಶ ಬಾನಗಾಡಿ ಇನ್ ಡೆವರ್ , STS-130 | ಯುರೋಪ್ (ನಿರ್ಮಾಣಗಾರ) USA (ಚಾಲಕ) | |
[೫೭][೫೮] | |||||
ಇದು ನಿಲ್ದಾಣದ US ನೋಡ್ ಗಳಲ್ಲಿ ಮೂರನೆಯ ಮತ್ತು ಕೊನೆಯ ನೋಡ್ ಆಗಿದೆ. ಟ್ರ್ಯಾಂಕ್ವಾಲಿಟಿ , ಸಿಬ್ಬಂದಿಯ ಬಳಕೆಗಾಗಿ ತ್ಯಾಜ್ಯ ಜಲವನ್ನು ಮರುಬಳಸುವಂತೆ ಮಾಡುವ ಹಾಗು ಸಿಬ್ಬಂದಿ ಉಸಿರಾಡಲು ಅಗತ್ಯ ಆಮ್ಲಜನಕ ಉತ್ಪಾದಿಸುವ ನಿರಂತರ ಜೀವ ರಕ್ಷಕ ವ್ಯವಸ್ಥೆಯನ್ನು ಒಳಗೊಂಡಿದೆ. ನೋಡ್ ಅಧಿಕವಾಗಿ ಜೋಡಣೆಯಾಗಿರುವ ಒತ್ತಡಕ್ಕೇರಿಸಲಾದ ಘಟಕಗಳಿಗೆ ಅಥವಾ ಸಿಬ್ಬಂದಿ ಸಾಗಣೆ ವಾಹನಗಳಿಗೆ ನಾಲ್ಕು ತಂಗುದಾಣಗಳನ್ನು ಕೂಡ ಒದಗಿಸುತ್ತದೆ. ಈ ಸೌಲಭ್ಯವನ್ನು ನಿಲ್ದಾಣದ(ಇಂಧನ ದಹಿಸುವ ಕುಲುಮೆ ವ್ಯವಸ್ಥೆಗಾಗಿರುವ ಸ್ಥಳ) ಕ್ಯುಪೊಲಕ್ಕಾಗಿ ಇರುವ ಕಾಯಂ ತಂಗುದಾಣಗಳಿಗೆ ಹೆಚ್ಚುವರಿ ಸೇವೆಯಾಗಿ ಒದಗಿಸುತ್ತದೆ. | |||||
ಕ್ಯುಪೊಲ | 20A | 2010 ರ ಫೆಬ್ರವರಿ 8 | ಬಾಹ್ಯಾಕಾಶ ಬಾನಗಾಡಿ ಇನ್ ಡೆವರ್ , STS-130 | ಯುರೋಪ್ (ನಿರ್ಮಾಣಗಾರ) USA (ಚಾಲಕ) | |
[೫೯] | |||||
ಕ್ಯುಪೊಲ ಎಂಬುದು ಒಂದು ವೀಕ್ಷಣಾ ಘಟಕವಾಗಿದ್ದು, ಇದು ISS ನ ಸಿಬ್ಬಂದಿ ಸದಸ್ಯರಿಗೆ ರೋಬಾಟ್ ನ ಕಾರ್ಯಾಚರಣೆಯನ್ನು ಮತ್ತು ಪರಸ್ಪರ ಸಂಧಿಸಿದ ಬಾಹ್ಯಾಕಾಶನೌಕೆಯನ್ನು ನೋಡಲು ಅವಕಾಶ ನೀಡುತ್ತದೆ. ಅಲ್ಲದೇ ಪೃಥ್ವಿಯನ್ನು ನೋಡಲು ವೀಕ್ಷಣಾ ಸ್ಥಳವನ್ನು ಕೂಡ ಕಲ್ಪಿಸಿಕೊಡುತ್ತದೆ. ಈ ಘಟಕವು, SSRMS ಎಂಬ ರೋಬಾಟ್ ವ್ಯವಸ್ಥೆಯ ಕಾರ್ಯಾಚರಣೆಗೆ ಮತ್ತು ಸೂಕ್ಷ್ಮ ಉಲ್ಕಾಶಿಲೆಗಳು ಉಂಟುಮಾಡುವ ನಷ್ಟದಿಂದ ಕಿಟಕಿಯನ್ನು ಅದರ ಕದಗಳು ರಕ್ಷಿಸುವಂತೆ ಮಾಡಲು ರೋಬಾಟ್ ನ ಕಾರ್ಯಕೇಂದ್ರದೊಂದಿಗೆ ಸಜ್ಜಾಗಿ ಬರುತ್ತದೆ. | |||||
ರಾಸ್ವೆಟ್ (ಲಿಟ್. 'ಡಾನ್') (ಕಿರು-ಸಂಶೋಧನಾ ಘಟಕ 1) |
ULF4 | 2010 ರ ಮೇ 14 | ಬಾಹ್ಯಾಕಾಶ ಬಾನಗಾಡಿ ಅಟ್ಲಾಂಟಿಸ್ , STS-132 | ರಷ್ಯಾ | |
[೪೧] | |||||
MRM1 ಅನ್ನು ನಿಲ್ದಾಣದಲ್ಲಿ ಸರಕನ್ನು ಸಂಗ್ರಹಿಸಲು ಮತ್ತು ಮಿತಿಗೊಳಿಸಲು ಬಳಸಲಾಗುತ್ತದೆ. |
ಘಟಕ | ಜೋಡಣಾ ಉದ್ದೇಶದ ಕಾರ್ಯಾಚರಣೆ | ಉಡಾವಣಾ ದಿನಾಂಕ | ಉಡಾವಣಾ ವಿಧಾನ,ವ್ಯವಸ್ಥೆ | ರಾಷ್ಟ್ರ | ಪ್ರತ್ಯೇಕ ಅವಲೋಕನ |
---|---|---|---|---|---|
ಲಿಯೊನಾರ್ಡೊ (ಕಾಯಂ ವಿವಿಧೋದ್ದೇಶ ಘಟಕ) |
ULF5 | 2011 ರ ಫೆಬ್ರವರಿ 3 | ಬಾಹ್ಯಾಕಾಶ ಬಾನಗಾಡಿ ಡಿಸ್ಕವರಿ , STS-133 | ಇಟಲಿ(ನಿರ್ಮಾಣಗಾರ) USA (ಚಾಲಕ) | |
[೬೦][೬೧][೬೨] | |||||
ಲಿಯೊನಾರ್ಡೊ PMM ಬಿಡಿ ಭಾಗಗಳ ಶೇಖರಣೆ ಮತ್ತು ಸರಬರಾಜಿಗೆ ಸ್ಥಳಾವಕಾಶ ಮಾಡಿಕೊಟ್ಟಿದೆ. ಅಲ್ಲದೇ ಇತರ ಘಟಕಗಳಲ್ಲಿ ವಿಶೇಷವಾಗಿ ಕೊಲಂಬಸ್ ನಲ್ಲಿ ಸ್ಥಳದ ತೆರವಿಗೆ ಮತ್ತು ಮರುಪೂರೈಕೆ ಉದ್ದೇಶಕ್ಕಾಗಿ ಗಗನ ಯಾತ್ರೆಗಳಿಗೆ ದೀರ್ಘಕಾಲಾವಕಾಶ ನೀಡುತ್ತದೆ. ಇಟಲಿಯ ಲಿಯೊನಾರ್ಡೊ ಎಂಬ ವಿವಿಧೋದ್ದೇಶ ವ್ಯವಸ್ಥಾಪನ ಘಟಕ ವನ್ನು ಶಾಶ್ವತವಾಗಿ ನಿಲ್ದಾಣಕ್ಕೆ ಹೊಂದಿಕೊಂಡಿರುವ ಘಟಕವಾಗಿ ಬದಲಾಯಿಸುವ ಮೂಲಕ PMM ಅನ್ನು ಸೃಷ್ಟಿಸಲಾಯಿತು. ಘಟಕದ ಈ ಆಗಮನವು US ನ ಕಕ್ಷಾ ವಿಭಾಗವು(US ಆರ್ಬಿಟಲ್ ಸೆಗ್ಮೆಂಟ್) ಸಂಪೂರ್ಣವಾಗಿದೆ ಎಂಬುದನ್ನು ತೋರಿಸುತ್ತದೆ. | |||||
ನೌಕ (ಲಿಟ್. 'ವಿಜ್ಞಾನ') (ವಿವಿಧೋದ್ದೇಶ ಪ್ರಯೋಗಾಲಯ ಘಟಕ) |
3R c. | 2011 ರ ಡಿಸೆಂಬರ್ | ಪ್ರೋಟಾನ್-M | ರಷ್ಯಾ | |
[೪೧][೬೩] | |||||
MLM ಎಂಬುದು ISS ನ ಭಾಗವೆಂಬಂತೆ ರಷ್ಯಾದ ಪ್ರಾಥಮಿಕ ಸಂಶೋಧನಾ ಘಟಕವಾಗಿದೆ. ಅಲ್ಲದೇ ಇದನ್ನು ಸಾಮಾನ್ಯವಾದ ಸೂಕ್ಷ್ಮ ಗುರುತ್ವ ಪ್ರಯೋಗಗಳಿಗೆ, ಜೋಡಣೆಗೆ ಮತ್ತು ಸರಕುಗಳನ್ನು ಸರಬರಾಜು ಮಾಡಲು ಬಳಸಲಾಗುತ್ತದೆ. ಘಟಕವು ಸಿಬ್ಬಂದಿ ಕಾರ್ಯ ಮತ್ತು ಇನ್ನುಳಿದ ಖಾಲಿ ಪ್ರದೇಶವನ್ನು ಒದಗಿಸುತ್ತದೆ. ಅಲ್ಲದೇ ಇದು ಬ್ಯಾಕ್ ಅಪ್(ನೆರವಿನ) ನಂತಹ ನಿಯಂತ್ರಣಾ ವ್ಯವಸ್ಥೆ ಹೊಂದಿದ್ದು, ಇದನ್ನು ನಿಲ್ದಾಣದ ಸ್ಥಾನಾಂತರ ನಿಯಂತ್ರಿಸಲು ಬಳಸಲಾಗುತ್ತದೆ. ನೌಕೆ ಯ ಆಗಮನವು, ಪ್ರಸ್ತುತದ ಜೋಡಣಾ ಯೋಜನೆಯ ಆಧಾರದ ಮೇಲೆ ರಷ್ಯದ ಕಕ್ಷಾ ಭಾಗವನ್ನು ಸಂಪೂರ್ಣಗೊಳಿಸುತ್ತದೆ. ಅಲ್ಲದೇ ಬಹುಶಃ ಇದು ನಿಲ್ದಾಣಕ್ಕೆ ಜೋಡಿಸುವ ಕೊನೆಯ ಪ್ರಮುಖ ಘಟಕವಾಗಿದೆ. |
ISS ನ ಕಾರ್ಯಯೋಜನೆಯ ಸಂದರ್ಭದಲ್ಲಿ ನಿಲ್ದಾಣಕ್ಕಾಗಿ ಯೋಜಿಸಲಾಗಿದ್ದ ಅನೇಕ ಘಟಕಗಳನ್ನು ಬಜೆಟ್ ನ ಅನುದಾನದ ಕೊರತೆಯ ಕಾರಣದಿಂದಾಗಿ ಅಥವಾ, ಘಟಕಗಳು ಅನಾವಶ್ಯಕವಾದವು ಎಂಬ ಕಾರಣಕ್ಕಾಗಿ ಅಥವಾ, 2003 ರ ಕೊಲಂಬಿಯಾ ವಿನಾಶದ ನಂತರ ನಿಲ್ದಾಣದ ಪುನರ್ವಿನ್ಯಾಸವನ್ನು ಅನುಸರಿಸಿ ರದ್ದುಪಡಿಸಲಾಯಿತು. ರದ್ದುಪಡಿಸಲಾದ ಘಟಕಗಳು ಕೆಳಕಂಡಂತಿವೆ:
ಒತ್ತಡಕ್ಕೇರಿಸಲಾದ ಘಟಕಗಳ ಜೊತೆಯಲ್ಲಿ ISS ಅಧಿಕ ಸಂಖ್ಯೆಯ ಬಾಹ್ಯ ಘಟಕಗಳನ್ನು ಕೂಡ ಒಳಗೊಂಡಿದೆ. ಇಂಟಿಗ್ರೇಟೆಡ್ ಟ್ರಸ್ ಸ್ಟ್ರಕ್ಚರ್ (ITS) ಸಮಗ್ರ ಆಸರೆ ಕಟ್ಟಿನ ರಚನೆ ಅತ್ಯಂತ ದೊಡ್ಡ ಘಟಕವಾಗಿದ್ದು, ಇಲ್ಲಿಯೇ ನಿಲ್ದಾಣದ ದ್ಯುತಿವಿದ್ಯುಜ್ಜನಕ ಸೌರ ಸರಣಿಗಳನ್ನು ಮತ್ತು ಶಾಖಪ್ರಸಾರಕಗಳನ್ನು ಜೋಡಿಸಲಾಗಿದೆ.[೧೯] ಇದು ITS 108.5 ಮೀ (356 ft) ಉದ್ದದ ವಿನ್ಯಾಸವನ್ನು ರಚಿಸಿರುವ ಹತ್ತು ಪ್ರತ್ಯೇಕ ವಿಭಾಗಗಳನ್ನು ಒಳಗೊಂಡಿದೆ.[೨] ಆಲ್ಫ ಮ್ಯಾಗ್ನೆಟಿಕ್ ಸ್ಪೆಕ್ಟ್ರೋಮೀಟರ್ (AMS), ಎಂಬುದು ಅತ್ಯಂತ ಸೂಕ್ಷ್ಮ ಕಣಗಳ ಭೌತಶಾಸ್ತ್ರ ಪ್ರಯೋಗವಾಗಿದ್ದು, ಇದನ್ನು 2011 ರಲ್ಲಿ STS-134 ನ ಮೇಲೆ ಕಳುಹಿಸಲು ಯೋಜಿಸಲಾಗಿದೆ. ಅಲ್ಲದೇ ಇದನ್ನು ITS ನ ಮೇಲೆ ಬಾಹ್ಯವಾಗಿ ಸ್ಥಾಪಿಸಲಾಗುವುದು. AMS ಕಾಸ್ಮಿಕ್ ಕಿರಣಗಳನ್ನು ಅಳೆಯುತ್ತದೆ, ಜೊತೆಗೆ ಡಾರ್ಕ್ ಮ್ಯಾಟರ್(ಅಜ್ಞಾತ ಕಪ್ಪು ದ್ರವ್ಯ) ಮತ್ತು ಪ್ರತಿದ್ರವ್ಯಗಳ ಸಾಕ್ಷ್ಯಕ್ಕಾಗಿ ಹುಡುಕುತ್ತದೆ.[೭೦] ITS ಎಂಬುದು ದೂರ ನಿರ್ವಾಹಕ ವ್ಯವಸ್ಥೆಯ ಮೂಲ ಆಧಾರವಾಗಿದೆ. ಇದನ್ನು ಮೊಬೈಲ್ ಸರ್ವೀಸಿಂಗ್ ಸಿಸ್ಟಮ್ (MSS)(ಮೊಬೈಲ್ ಸೇವಾ ವ್ಯವಸ್ಥೆ) ಎಂದು ಕರೆಯಲಾಗುತ್ತದೆ. ಇದು ಮೊಬೈಲ್ ಬೇಸ್ಡ್ ಸಿಸ್ಟಮ್ (ಮೊಬೈಲ್ ಆಧಾರಿತ ವ್ಯವಸ್ಥೆ)(MBS) ಅನ್ನು, ಕೆನಡಾರ್ಮ್ 2 ಅನ್ನು, ಮತ್ತು ಸ್ಪೇಷಲ್ ಪರ್ಪಸ್ ಡೆಕ್ಸ್ ಟ್ರಸ್ ಮ್ಯಾನಿಪ್ಯುಲೇಟರ್ ಗಳನ್ನು ಒಳಗೊಂಡಿರುತ್ತದೆ. ರೋಬಾಟ್ ನ ತೋಳು ಭಾಗವು ನಿಲ್ದಾಣದಲ್ಲಿನ US ವಿಭಾಗದ ಎಲ್ಲಾ ಭಾಗಗಳನ್ನು ತಲುಪಲು ಅವಕಾಶ ನೀಡುವುದಕ್ಕಾಗಿ ಕೆಲವೊಂದು ITS ನ ವಿಭಾಗಗಳಲ್ಲಿ ನಿರ್ಮಿಸಿದ ಕಂಬಿಗಳ ಮೇಲೆ MBS ಉರುಳುತ್ತದೆ.[೭೧] MSS, ಆರ್ಬಿಟರ್ ಬೂಮ್ ಸೆನ್ಸಾರ್ ಸಿಸ್ಟಮ್ ನಿಂದ ಹೆಚ್ಚಾದ ವ್ಯಾಪ್ತಿಯನ್ನು ಹೊಂದಿರುವ ಕಾರಣ, ಅದನ್ನು STS-133 ಯಾತ್ರೆಯ ಸಂದರ್ಭದಲ್ಲಿ ಅಳವಡಿಸಲು ಯೋಜಿಸಲಾಗಿದೆ.[೭೨] ಇತರ ಎರಡು ದೂರ ನಿರ್ವಾಹಕ ವ್ಯವಸ್ಥೆಗಳು ನಿಲ್ದಾಣದ ಅಂತಿಮ ವಿನ್ಯಾಸದಲ್ಲಿ ಉಪಸ್ಥಿತವಾಗಿವೆ. ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ ಗೆ ಸೇವೆಸಲ್ಲಿಸುವ ಯುರೋಪಿಯನ್ ರೋಬಾಟಿಕ್ ಆರ್ಮ್ (ಯುರೋಪಿನ ರೋಬಾಟ್ ತೋಳು) ಅನ್ನು ವಿವಿಧೋದ್ದೇಶ ಪ್ರಯೋಗಾಲಯ ಘಟಕದ ಜೊತೆಯಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿದೆ.[೭೩] JEM ಎಕ್ಸ್ ಪೋಸ್ಡ್ ಫೆಸಿಲಿಟಿಗೆ[೭೪] ಸೇವೆಸಲ್ಲಿಸುವ JEM RMS ಅನ್ನು STS-124ರ ಮೇಲೆ ಉಡಾವಣೆ ಮಾಡಲಾಯಿತು. ಅಲ್ಲದೇ ಇದು JEM ನ ಒತ್ತಡಕ್ಕೇರಿಸಲಾದ ಘಟಕದೊಂದಿಗೆ ಅಂಟಿಕೊಂಡಿರುತ್ತದೆ. ಈ ರೋಬಾಟ್ ಸಹಾಯದ ಜೊತೆಯಲ್ಲಿ ರಷ್ಯಾದ ಎರಡು ಸ್ಟ್ರೆಲಾ ಕಾರ್ಗೊ ಕ್ರೇನ್ ಗಳನ್ನು, ಆಕಾಶ ನಡಿಗೆಯಲ್ಲಿರುವ ಗಗನಯಾತ್ರಿಗಳನ್ನು ಮತ್ತು ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ ನ ಒಳಗಿರುವ ಭಾಗಗಳನ್ನು, ಚಲಿಸುವಂತೆ ಮಾಡಲು ಬಳಸಲಾಗುತ್ತದೆ.[೭೫] ನಿಲ್ದಾಣವು ಅದರ ಸಂಪೂರ್ಣ ರೂಪದಲ್ಲಿ ಅನೇಕ ಬಾಹ್ಯ ಕಿರು ಘಟಕಗಳನ್ನು ಒಳಗೊಳ್ಳಬಹುದು.ಉದಾಹರಣೆಗೆ ಮೂರು ಎಕ್ಸ್ ಟ್ರನಲ್ ಸ್ಟೋವೇಜ್ ಫ್ಲಾಟ್ ಫಾರ್ಮ್ಸ್ (ESPs)(ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೂರು ಘಟಕಗಳಾಗಿವೆ), ಇದನ್ನು STS-102, STS-114 ಮತ್ತು STS-118 ನ ಮೇಲೆ ಉಡಾವಣೆ ಮಾಡಲಾಗುವುದು ಹಾಗು ಬಿಡಿ ಭಾಗಗಳನ್ನು ಸಂಗ್ರಹಿಸಲು ಇವುಗಳನ್ನು ಬಳಸಲಾಗುವುದು. ನಾಲ್ಕು ExPRESS(ಎಕ್ಸ್ ಪ್ರೆಸ್) ಲಾಜಿಸ್ಟಿಕ್ ಕ್ಯಾರಿಯರ್ (ELCs) ಗಳು, ಬಾಹ್ಯಾಕಾಶದ ನಿರ್ವಾತ ಪ್ರದೇಶದಲ್ಲಿ ಪ್ರಯೋಗಗಳನ್ನು ನಡೆಸಲು ಅವಕಾಶ ನೀಡುತ್ತವೆ. ಅಲ್ಲದೇ ಅಗತ್ಯವಿರುವ ವಿದ್ಯುತ್ ಅನ್ನು ಒದಗಿಸುತ್ತವೆ ಹಾಗು ಸಾಗುತ್ತಿರುವ ಪ್ರಯೋಗದ ದತ್ತಾಂಶವನ್ನು ಸ್ಥಳೀಯವಾಗಿ ಗಣನೆ ಮಾಡುತ್ತದೆ. ELCs 1 ಮತ್ತು 2 ಅನ್ನು STS-129 ರ ಮೇಲೆ 2009 ರ ನವೆಂಬರ್ ನಲ್ಲಿ ತಲುಪಿಸಲಾಗುತ್ತದೆ, ಹಾಗು ELCs 3 ಅನ್ನು ಮತ್ತು 4 ಅನ್ನು STS-134 ರ ಮೇಲೆ 2010 ರ ನವೆಂಬರ್ ನಲ್ಲಿ ಮತ್ತು STS-133 ರ ಮೇಲೆ 2010 ರ ಸೆಪ್ಟೆಂಬರ್ ನಲ್ಲಿ ತಲುಪಿಸಲು ನಿರ್ಧರಿಸಲಾಗಿದೆ.[೪೧][೭೬] ಪ್ರಯೋಗಾಲಯದ ಘಟಕಗಳಿಗೆ ನೇರವಾಗಿ ಜೋಡಿಸಲಾದ ಎರಡು ಹೊರಚಾಚಬಲ್ಲ, ಒಡ್ಡಣೆ ಸೌಲಭ್ಯಗಳಿವೆ(ಎಕ್ಸ್ಪೋಷರ್ ಫೆಸಿಲಿಟಿ): JEM ಒಡ್ಡಣೆ ಸೌಲಭ್ಯ ವು (ಎಕ್ಸ್ ಪೋಸ್ಡ್ ಫೆಸಿಲಿಟಿ) ಜಪಾನೀಯರ ಪ್ರಯೋಗ ಘಟಕದ ಸಂಕೀರ್ಣಕ್ಕೆ ಬಾಹ್ಯ 'ಮುಖಮಂಟಪ' ವಾಗಿ ಸೇವೆಸಲ್ಲಿಸುತ್ತದೆ,[೭೭] ಅಲ್ಲದೇ ಯುರೋಪಿಯನ್ ಕೊಲಂಬಸ್ ಪ್ರಯೋಗಾಲಯದಲ್ಲಿರುವ ಸೌಲಭ್ಯವು ವಿದ್ಯುತ್ ಅನ್ನು ಒದಗಿಸುತ್ತದೆ, ಜೊತೆಗೆ ಯುರೋಪಿಯನ್ ಟೆಕ್ನಾಲಜಿ ಎಕ್ಸ್ ಪೋಷರ್ ಫೆಸಿಲಿಟಿ[೭೮][೭೯] ಮತ್ತು ಆಟೋಮಿಕ್ ಕ್ಲಾಕ್ ಎನ್ ಸೆಂಬಲ್ ಇನ್ ಸ್ಪೇಸ್ ನಂತಹ ಪ್ರಯೋಗಗಳಿಗೆ ದತ್ತಾಂಶ ಸಂಯೋಜನೆಯನ್ನು ಒದಗಿಸುತ್ತದೆ.[೮೦]
ದ್ಯುತಿವಿದ್ಯುಜ್ಜನಕ(PV) ಸರಣಿಗಳು ISS ಗೆ ವಿದ್ಯುತ್ ಅನ್ನು ಒದಗಿಸುತ್ತವೆ. ಬಾನಗಾಡಿ ಮತ್ತು ಬಹುಪಾಲು ವಿಮಾನ ಮಾದರಿ ನಿಲ್ದಾಣದಲ್ಲಿರುವ ರಷ್ಯಾದ ಭಾಗವು 28 ವೋಲ್ಟ್(ವಿದ್ಯುಚ್ಚಾಲಕ ಬಲದ ಮಾನ) DC(ನಿರಂತರ ವಿದ್ಯುತ್ ಹರಿವು) ಯನ್ನು ಬಳಸುತ್ತದೆ. ಇದನ್ನು ಭಾಗಶಃ ಜಾರ್ಯ ಮತ್ತು ಜ್ವೆಜ್ದ ಘಟಕಗಳಿಗೆ ನೇರವಾಗಿ ಜೋಡಿಸಲಾದ ನಾಲ್ಕು ದ್ಯುತಿವಿದ್ಯುಜ್ಜನಕ ಸರಣಿಗಳು ಒದಗಿಸುತ್ತವೆ. ನಿಲ್ದಾಣದ ಉಳಿದ ಭಾಗವು US PV ಸರಣಿಗಳ ಮೂಲಕ 130–180 V DC ಯನ್ನು ಬಳಸುತ್ತವೆ. ಇವುಗಳನ್ನು ನಾಲ್ಕು ರೆಕ್ಕೆಗಳ ಜೋಡಿಗಳಂತೆ ಜೋಡಿಸಲಾಗಿರುತ್ತದೆ. ಪ್ರತಿ ರೆಕ್ಕೆಯು ಹೆಚ್ಚು ಕಡಿಮೆ 32.8 kW ಅನ್ನು ಉತ್ಪಾದಿಸುತ್ತದೆ.[೧೯] ವಿದ್ಯುತ್ ಅನ್ನು ಸ್ಥಿರಗೊಳಿಸಲಾಗಿರುತ್ತದೆ ಮತ್ತು 160 V DC ಯಲ್ಲಿ ವಿತರಣೆ ಮಾಡಲಾಗುತ್ತದೆ. ಅಲ್ಲದೇ ಅದನ್ನು ಬಳಕೆದಾರನಿಗೆ ಅಗತ್ಯವಿರುವ 124 V DC ಗೆ ಬದಲಾಯಿಸಲಾಗುತ್ತದೆ. ಅಷ್ಟೇ ಅಲ್ಲದೇ ಅಧಿಕ ವೋಲ್ಟೇಜ್ ಕಿರಿದಾದ ಮತ್ತು ಹಗುರವಾದ ವಾಹಕಕ್ಕೆ ಅವಕಾಶ ನೀಡುತ್ತದೆ. ನಿಲ್ದಾಣದ ಎರಡು ಭಾಗಗಳು ವಿದ್ಯುತ್ ಅನ್ನು ಪರಿವರ್ತಕಗಳೊಂದಿಗೆ ಹಂಚಿಕೊಳ್ಳುತ್ತವೆ. ರಷ್ಯಾದ ಸೈನ್ಸ್ ಪವರ್ ಪ್ಲ್ಯಾಟ್ ಫಾರ್ಮ್ ಅನ್ನು ರದ್ದುಪಡಿಸಿದ ಕಾರಣ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್, US ನ ಸರಣಿಗಳ ಮೇಲೆ ಅವಲಂಬಿತವಾಗಬೇಕಾಯಿತು. ಅಂದಿನಿಂದ ಇದು ಅತ್ಯಗತ್ಯವಾಗಿದೆ.[೮೧] ಪೃಥ್ವಿಯಿಂದ ದೂರವಾದ ಪ್ರತಿ 90 ನಿಮಿಷ ಸುತ್ತಿನ 35 ನಿಮಿಷಗಳ ಸಂದರ್ಭದಲ್ಲಿ, ನಿರಂತರವಾದ ವಿದ್ಯುತ್ ಪೂರೈಕೆಗಾಗಿ ನಿಲ್ದಾಣವು, ಮತ್ತೆ ವಿದ್ಯುಚ್ಛಕ್ತಿಯನ್ನು ನವೀಕರಿಸಿ ಪುನಃತುಂಬಬಹುದಾದ ನಿಕಲ್-ಹೈಡ್ರೊಜನ್ ಬ್ಯಾಟರಿಗಳನ್ನು ಬಳಸುತ್ತದೆ. ಹಗಲಿನ ವೇಳೆಯಲ್ಲಿನ ಭೂಮಿಯ ಮೇಲೆ ಬೆಳಕಿರುವ ಭಾಗದಲ್ಲಿ ಬ್ಯಾಟರಿಗಳನ್ನು ಪುನರಾವೇಶಿಸಲಾಗುತ್ತದೆ. ಅವು 6.5 ವರ್ಷಗಳ ಜೀವಾವಧಿಯನ್ನು ಹೊಂದಿರುತ್ತವೆ.(ಸುಮಾರು 37,000 ದಷ್ಟು ಆವೇಶ/ನಿರಾವೇಶ ಚಕ್ರಗಳು) ಅಲ್ಲದೇ ಅವುಗಳು ನಿಲ್ದಾಣದ ಮೇಲೆ 20 ವರ್ಷಗಳ ಕಾಲ ಸಕ್ರಿಯವಾಗಿರಬಲ್ಲವು ಎಂದು ನಿರೀಕ್ಷಿಸಿದ್ದು, ಅದು ಮುಗಿದ ನಂತರ ನಿಯತವಾಗಿ ಬದಲಾಯಿಸಲ್ಪಡುತ್ತವೆ.[೮೨] US ದ್ಯುತಿವಿದ್ಯುಜ್ಜನಕ ಸರಣಿಗಳು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಸಾಮಾನ್ಯವಾಗಿ ಸೂರ್ಯನನ್ನು ಅವಲಂಬಿಸುತ್ತವೆ. ಪ್ರತಿ ಸರಣಿಯು ವ್ಯಾಪ್ತಿಯಲ್ಲಿ ಸರಿಸುಮಾರು 375 ಮೀ2 (450 yd2)ನಷ್ಟಿರುತ್ತದೆ ಮತ್ತು ಉದ್ದದಲ್ಲಿ 58 metres (63 yd) ನಷ್ಟಿರುತ್ತದೆ. ಸಂಪೂರ್ಣ ವಿನ್ಯಾಸದಲ್ಲಿ ದ್ಯುತಿವಿದ್ಯುಜ್ಜನಕ ಸರಣಿಗಳು ಪ್ರತಿ ಸುತ್ತಿಗೆ ಲಂಬವಾಗಿದ್ದರೂ ಅನುಕೂಲಕ್ಕೆ ತಕ್ಕಂತೆ ಬಳಸುವ ಆಲ್ಫ ಗಿಂಬಲ್ ಅನ್ನು ಒಮ್ಮೆ ಚಕ್ರಾಕಾರದಲ್ಲಿ ಸುತ್ತಿಸುವ ಮೂಲಕ ಸೂರ್ಯನನ್ನು ಪತ್ತೆಹಚ್ಚುತ್ತವೆ. ಈ ಸರಣಿಗಳು ಕಕ್ಷೆಯ ಸಮತಲದೆಡೆಗೆ ಸೂರ್ಯನ ದಿಕ್ಕಿನಲ್ಲಿ (ಕೋನ), ಉಂಟಾಗುವ ನಿಧಾನವಾದ ಬದಲಾವಣೆಗಳನ್ನು ಬೀಟಾ ಗಿಂಬಲ್ ಅನುಸರಿಸಿದಾಗ, ಆಲ್ಫ ಗಿಂಬಲ್ ಅನ್ನು ಸುತ್ತಿಸುತ್ತವೆ. ನೈಟ್ ಗ್ಲೈಡರ್ ಮೋಡ್ ರಾತ್ರಿಯ ಹೊತ್ತಿನಲ್ಲಿ ದ್ಯುತಿವಿದ್ಯುಜ್ಜನಕ ಸರಣಿಗಳನ್ನು ವೇಗ ಸದಿಶಕ್ಕೆ (ವೆಲಾಸಿಟಿ ವೆಕ್ಟರ್) ಸಮಾಂತರವಾಗಿ ಜೋಡಿಸುತ್ತದೆ. ಇದು ನಿಲ್ದಾಣದಲ್ಲಿ ತುಲನಾತ್ಮಕವಾಗಿ ಕಡಿಮೆ ಎತ್ತರವಿರುವ ಕಕ್ಷೆಯಲ್ಲಿ ವಾಯುಬಲ ಎಳೆತವನ್ನು ತಕ್ಕ ಮಟ್ಟಿಗೆ ಕಡಿಮೆ ಮಾಡಲು ಈ ಪ್ರಕಾರ ಜೋಡಿಸುತ್ತದೆ.[೮೩]
ISS ಅನ್ನು ವೃತ್ತಾಕಾರದ ಕಕ್ಷೆಯಲ್ಲಿ ನೋಡಿಕೊಳ್ಳಲಾಗುತ್ತಿದ್ದು, ಕನಿಷ್ಠ 278 ಕಿಲೋಮೀಟರ್ (173 mi) ನಷ್ಟು ಮತ್ತು ಗರಿಷ್ಠ 460 ಕಿಲೋಮೀಟರ್ (286 mi) ನಷ್ಟುಉದ್ದೇಶಿತ ಎತ್ತರವನ್ನು ಹೊಂದಿದೆ. ಇದು ಪ್ರತಿ ಗಂಟೆಗೆ 27,724 ಕಿಲೋಮೀಟರ್ (17,227 mi) ವೇಗದಲ್ಲಿ ಸಂಚರಿಸುತ್ತದೆ. ಅಲ್ಲದೇ ಪ್ರತಿ ದಿನಕ್ಕೆ 15.7 ಕಕ್ಷೆಯನ್ನು ಕ್ರಮಿಸುತ್ತದೆ.[೮೪] ಸೊಯುಜ್ ಅನ್ನು ಸಂಧಿಸುವ ಗಗನಯಾತ್ರೆಗೆ ಅವಕಾಶ ನೀಡಲು ಗರಿಷ್ಠ 425 ಕಿಲೋಮೀಟರ್ (264 mi) ನಷ್ಟು ಸಹಜವಾದ ಎತ್ತರವಿರಬೇಕು. ವಾಯುಮಂಡಲದ ಸ್ವಲ್ಪ ಎಳೆತದಿಂದಾಗಿ ISS ನಿರಂತರವಾಗಿ ಎತ್ತರವನ್ನು ಕಳೆದುಕೊಳ್ಳುತ್ತಿರುತ್ತದೆ. ಆದ್ದರಿಂದ ಪ್ರತಿವರ್ಷವು ಅನೇಕ ಬಾರಿ ಇದರ ಎತ್ತರವನ್ನು ಏರಿಸಲಾಗುತ್ತದೆ.[೨೯][೮೫] ಈ ಕಾರ್ಯವನ್ನು ಜ್ವೆಜ್ದ ಸೇವಾ ಘಟಕದ ಮೇಲಿರುವ ನಿಲ್ದಾಣದ ಎರಡು ಪ್ರಮುಖ ಎಂಜಿನ್ ಗಳು, ಪರಸ್ಪರ ಸಂಧಿಸುವ ಬಾಹ್ಯಾಕಾಶ ಬಾನಗಾಡಿ, ಪ್ರೋಗ್ರೆಸ್ ಮರುಪೂರೈಕೆ ಮಾಡಿದ ನೌಕೆ ಅಥವಾ ESA ನ ATV ನಿರ್ವಹಿಸುತ್ತವೆ. ಅಧಿಕ ಎತ್ತರವನ್ನು ಸಂಪೂರ್ಣಗೊಳಿಸಲು ಅದನು ಏರಿಸಬೇಕಾಗುತ್ತದೆ. ಇದಕ್ಕಾಗಿ ಸರಿಸುಮಾರು ಎರಡು ಸುತ್ತು (ಮೂರುಗಂಟೆಗಳು)ಗಳನ್ನು ಇದು ತೆಗೆದುಕೊಳ್ಳುತ್ತದೆ.[೮೫] 2008 ರ ಡಿಸೆಂಬರ್ ನಲ್ಲಿ NASA Ad ಅಸ್ಟ್ರ ರಾಕೆಟ್ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಇದರ ಫಲಿತಾಂಶವಾಗಿ ISS ನ ಮೇಲೆ VASIMR ಪ್ಲ್ಯಾಸ್ಮ ನೋದನ ಎಂಜಿನ್ ಅನ್ನು ಪರೀಕ್ಷಿಸಲಾಯಿತು.[೮೬] ಈ ತಂತ್ರಜ್ಞಾನವು ಸ್ಟೇಷನ್ -ಕೀಪಿಂಗ್(ನಿಲ್ದಾಣದ ನಿರ್ವಹಣೆ) ಅನ್ನು ಪ್ರಸ್ತುತಕ್ಕಿಂತ ಹೆಚ್ಚು ಕಡಿಮೆವೆಚ್ಚದಲ್ಲಿ ನೋಡಿಕೊಳ್ಳಲು ಅವಕಾಶ ನೀಡುತ್ತದೆ.[೮೭][೮೮] ನಿಲ್ದಾಣದ ಸಂಚರಿಸುವ ವಲಯದ ಸ್ಥಾನ ಮತ್ತು ವೇಗ ಅಥವಾ ಸ್ಟೇಟ್ ವೆಕ್ಟರ್ ಅನ್ನು, US ನ ಗ್ಲೋಬಲ್ ಪೋಸಿಷನಿಂಗ್ ಸಿಸ್ಟಮ್ (GPS) ಅನ್ನು ಬಳಸಿಕೊಂಡು ಸ್ವತಂತ್ರವಾಗಿ ಸ್ಥಾಪಿಸಲಾಗಿದೆ. ಅಲ್ಲದೇ ಸ್ಟೇಟ್ ವೆಕ್ಟರ್ ನ ಜೊತೆಗಳನ್ನು ಭೂಮಿಯ ಮೇಲಿನ ರಷ್ಯನ್ ಪ್ರದೇಶಗಳಿಂದ ಮತ್ತು ರಷ್ಯನ್ GLONASS ವ್ಯವಸ್ಥೆಯ ಮೂಲಕ ಪರಿಷ್ಕರಿಸಲಾಗುತ್ತದೆ. ನಿಲ್ದಾಣದ ಮೂಲ ನೆಲೆ(ಸ್ಥಾನ)ಯನ್ನು, ಜ್ವೆಜ್ದ ಘಟಕ ಮತ್ತು US ನ GPS ಮೇಲಿರುವ ಸೂರ್ಯ, ನಕ್ಷತ್ರ ಮತ್ತು ಕ್ಷಿತಿಜದ ಸಂವೇದಕಗಳ ಗುಂಪು ಸ್ವತಂತ್ರವಾಗಿ ನಿರ್ಧರಿಸಬಲ್ಲವು. ಈ ಸಂವೇದಕಗಳು S0 ಟ್ರಸ್ ನ ಮೇಲೆ ಆಂಟೆನಗಳನ್ನು ಮತ್ತು US ಪ್ರಯೋಗಾಲಯದಲ್ಲಿ ರೀಸಿವರ್ ಪ್ರೋಸೆಸರ್(ಪರಿಷ್ಕಾರಕ)ಗಳನ್ನು ಹೊಂದಿವೆ. ದರ ಪ್ರಮಾಣಕ ಸಂವೇದಕಗಳ ಮೂಲಕ ಸ್ಥಾನಕ್ಕೆ(ನೆಲೆಗೆ) ಸಂಬಂಧಿಸಿದ ಮಾಹಿತಿಯನ್ನು ಪರಿಷ್ಕರಣಗಳ ನಡುವೆ ಪ್ರಸಾರಮಾಡಲಾಗುತ್ತದೆ.[೨೨] ನೆಲೆ(ಸ್ಥಾನ) ನಿಯಂತ್ರಕವನ್ನು ಎರಡು ಕಾರ್ಯರೀತಿಗಳ ಮೂಲಕ ನೋಡಿಕೊಳ್ಳಲಾಗುತ್ತದೆ; ಸಾಮಾನ್ಯವಾಗಿ ನಾಲ್ಕು ಕಂಟ್ರೋಲ್ ಮುಮೆಂಟ್ ಜೈರೋಸ್ಕೋಪ್(ಭ್ರಮಣ ದರ್ಶಕ)(CMGs) ಗಳ ವ್ಯವಸ್ಥೆಯು, ಯೂನಿಟಿ ಯನ್ನು ಡೆಸ್ಟಿನಿ ಯ ಮುಂಭಾಗದಲ್ಲಿ, P ಟ್ರಸ್ ಅನ್ನು ತಂಗುವ ಸ್ಥಳದಲ್ಲಿ ಮತ್ತು ರಾಸ್ವೆಟ್ ಅನ್ನು ಭೂಮಿಗೆ ಅಭಿಮುಖವಾಗಿರುವ ಭಾಗದಲ್ಲಿ (ಅಧೋಬಿಂದು) ಇರಿಸುವ ಮೂಲಕ ನಿಲ್ದಾಣವನ್ನು ಸರಿಯಾದ ಸ್ಥಾನದಲ್ಲಿರಿಸುತ್ತದೆ. CMG ವ್ಯವಸ್ಥೆಯು ಸಂಪೂರ್ಣವಾಗಿ 'ತುಂಬಲ್ಪಟ್ಟಾಗ'— CMG ಗಳ ಗುಂಪು ಅದರ ಕಾರ್ಯಕಾರಿ ಸಾಮರ್ಥ್ಯವನ್ನು ಮೀರಿದಾಗ ಅಥವಾ ತೀವ್ರಗತಿಯ ಚಲನೆಯನ್ನು ಪತ್ತೆಹಚ್ಚಲು ಅವುಗಳಿಗೆ ಸಾಧ್ಯವಾಗದೇ ಹೋದಾಗ—ಅವು ನಿಲ್ದಾಣದ ನೆಲೆಯನ್ನು(ಸ್ಥಾನವನ್ನು) ನಿಯಂತ್ರಿಸುವಲ್ಲಿನ ಅವುಗಳ ಸಾಮರ್ಥ್ಯ ಕಳೆದುಕೊಳ್ಳಬಲ್ಲವು.[೮೯] ಇಂತಹ ಸಂದರ್ಭದಲ್ಲಿ, CMG ವ್ಯವಸ್ಥೆಯು ಪುನಃ ಜೋಡಿಸಲ್ಪಡುತ್ತಿರುವಾಗ, ಭಾರವನ್ನು ತಗ್ಗಿಸುವ ನೂಕುಕಾರಿ(ವ್ಯೋಮನೌಕೆಯೊಂದಕ್ಕೆ ಹೆಚ್ಚಿನ ದೋಷಪರಿಹಾರಕ ನೂಕು ಬಲವನ್ನು ನೀಡಬಲ್ಲ ರಾಕೆಟ್ ಎಂಜಿನ್)ಇಂಧನ ಒದಗಿಸಲು, ರಷ್ಯಾದ ನೆಲೆ ನಿಯಂತ್ರಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಸ್ವಯಂಚಾಲಿತ ಸ್ಥಾನ ನಿಯಂತ್ರಣವು ಗಗನ ಯಾತ್ರೆ 10 ರ ಸಂದರ್ಭದಲ್ಲಿ ಕೇವಲ ಒಮ್ಮೆ ಸಂಭವಿಸಿತ್ತು.[೯೦] ಬಾನಗಾಡಿಯು ನಿಲ್ದಾಣಕ್ಕೆ ಬಂದಾಗ ಇದನ್ನು ನಿಲ್ದಾಣದ ಸ್ಥಾನ,ಅದರ ಕಾರ್ಯ ವಿಧಾನ ನೋಡಿಕೊಳ್ಳಲು ಕೂಡ ಬಳಸಬಹುದಾಗಿದೆ. ಇದು ISS ಗಗನಯಾತ್ರೆಯ ಸಂದರ್ಭದಲ್ಲಿ ಸೇರಿಕೊಂಡ ಪ್ರತಿ ಬಾನಗಾಡಿಯ ಭಾಗದಲ್ಲಿ ನಡೆಯುತ್ತದೆ. ಬಾನಗಾಡಿಯ ನಿಯಂತ್ರಣವನ್ನು ,STS-117 ರ ಸಂದರ್ಭದಲ್ಲಿ S3/S4 ಟ್ರಸ್ ಅನ್ನು ಅಳವಡಿಸುವ ಮೂಲಕ ಪ್ರತ್ಯೇಕವಾಗಿ ಬಳಸಲಾಯಿತು.[೯೧]
ರೇಡಿಯೊ ಸಂವಹನವು, ನಿಲ್ದಾಣ ಮತ್ತು ಗಗನಯಾತ್ರೆ ನಿಯಂತ್ರಣ ಕೇಂದ್ರದ ನಡುವೆ ಟೆಲಿಮಿಟ್ರಿ(ದೂರದ ಒಂದು ಭೌತಿಕ ಘಟನೆಯನ್ನು ತಿಳಿಯುವ ವ್ಯವಸ್ಥೆ) ಮತ್ತು ವೈಜ್ಞಾನಿಕ ದತ್ತಾಂಶದ ಕೊಂಡಿಗಳನ್ನು ಒದಗಿಸುತ್ತದೆ. ರೇಡಿಯೋ ಕೊಂಡಿಗಳನ್ನು ಪರಸ್ಪರ ಸಂಧಿಸುವ ಮತ್ತು ಜೋಡಿಸುವ ಕಾರ್ಯವಿಧಾನದ ಸಂದರ್ಭದಲ್ಲಿ ಬಳಸಲಾಗುತ್ತದೆ. ಅಲ್ಲದೇ ಇದನ್ನು ಸಿಬ್ಬಂದಿ ಸದಸ್ಯರುಗಳ, ಹಾರಾಟ ನಿಯಂತ್ರಕರು ಮತ್ತು ಕುಟುಂಬದ ಸದಸ್ಯರ ನಡುವೆ ನಡೆಯುವ ಆಡಿಯೋ ವೀಡಿಯೋ(ಶ್ರವಣದೃಶ್ಯ)ಸಂಪರ್ಕಕ್ಕಾಗಿಯು ಕೂಡ ಬಳಸಲಾಗುತ್ತದೆ. ಇದರ ಫಲಿತಾಂಶವೆಂಬಂತೆ ISS ಅನ್ನು, ವಿಭಿನ್ನ ಉದ್ದೇಶಗಳಿಗೆ ಬಳಸಲಾಗುವ ಆಂತರಿಕ ಮತ್ತು ಬಾಹ್ಯ ಸಂವಹನ ವ್ಯವಸ್ಥೆಗಳೊಂದಿಗೆ ಸಜ್ಜುಗೊಳಿಸಲಾಗಿದೆ.[೯೨] ರಷ್ಯಾದ ಆರ್ಬಿಟಲ್ ಸೆಗ್ಮೆಂಟ್, ಜ್ವೆಜ್ದ ದ ಮೇಲೆ ಸ್ಥಾಪಿಸಲಾಗಿರುವ ಲೈರ ಆಂಟೆನ ಗಳ ಮೂಲಕ ಭೂಮಿಯೊಂದಿಗೆ ನೇರವಾಗಿ ಸಂಪರ್ಕಿಸುತ್ತದೆ.[೨೨][೯೩] ಲೈರ ಆಂಟೆನವು, ಲಚ್ ದತ್ತಾಂಶ ಮರುಪ್ರಸಾರ ಉಪಗ್ರಹ ವ್ಯವಸ್ಥೆಯನ್ನು ಕೂಡ ಬಳಸುವ ಸಾಮರ್ಥ್ಯ ಹೊಂದಿದೆ.[೨೨] ಮಿರ್ ನೊಂದಿಗೆ ಸಂವಹನಕ್ಕಾಗಿ ಬಳಸಲಾಗುತ್ತಿದ್ದ ಈ ವ್ಯವಸ್ಥೆ 1990 ರ ಸುಮಾರಿನಲ್ಲಿ ರಿಪೇರಿ ಮಾಡಲಾಗದ ದುಸ್ಥಿತಿ ತಲುಪಿತು. ಇದರ ಫಲಿತಾಂಶವಾಗಿ ಹೆಚ್ಚುಕಾಲದ ವರೆಗೆ ಇದು ಬಳಕೆಯಲ್ಲಿ ಉಳಿಯಲಿಲ್ಲ,[೧೬][೨೨][೯೪] ಆದರೂ ಕೂಡ ವ್ಯವಸ್ಥೆಯ ಕಾರ್ಯಕಾರಿ ಸಾಮರ್ಥ್ಯವನ್ನು ಪುನರ್ಸ್ಥಾಪಿಸಲು ಎರಡು ಹೊಸ ಲಚ್ ಉಪಗ್ರಹಗಳನ್ನು—ಲಚ್ -5A ಮತ್ತು ಲಚ್ -5Bಯನ್ನು 2011 ರಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿದೆ.[೯೫] ವಾಸ್ಕೊಡ್-M ಎಂಬುದು ರಷ್ಯಾದ ಮತ್ತೊಂದು ಸಂವಹನ ವ್ಯವಸ್ಥೆಯಾಗಿದ್ದು, ಜ್ವೆಜ್ದ , ಜಾರ್ಯ , ಪರ್ಸ್ , ಪಾಯ್ಸಕ್ ಮತ್ತು USOS ಗಳ ನಡುವೆ ಒಳಗಿನ ದೂರವಾಣಿ ಸಂಪರ್ಕವನ್ನು ಒದಗಿಸುತ್ತದೆ. ಅಲ್ಲದೇ ಜ್ವೆಜ್ದ ಹೊರಾಂಗಣದ ಮೇಲಿರುವ ಆಂಟೆನಗಳ ಮೂಲಕ ಭೂ ನಿಯಂತ್ರಣಾ ಕಕ್ಷಾ ಸಂಪರ್ಕ ಕೇಂದ್ರಗಳಿಗೆ, VHF ರೇಡಿಯೋ ಕೊಂಡಿಗಳನ್ನು ಕೂಡ ಒದಗಿಸುತ್ತದೆ.[೯೬] US ಆರ್ಬಿಟಲ್ ಸೆಗ್ಮೆಂಟ್ (USOS) , Z1 ಟ್ರಸ್ ಸ್ಟ್ರಕ್ಚರ್ನಲ್ಲಿ ಜೋಡಿಸಲಾಗಿರುವ ಎರಡು ಪ್ರತ್ಯೇಕ ರೇಡಿಯೋ ಕೊಂಡಿಗಳನ್ನು ಬಳಸುತ್ತದೆ: S ಬ್ಯಾಂಡ್ ಅನ್ನು (ಶ್ರವಣಕ್ಕಾಗಿ ಬಳಸಲಾಗುತ್ತದೆ.) ಮತ್ತು Ku ಬ್ಯಾಂಡ್ (ಶ್ರವಣ, ದರ್ಶನ ಮತ್ತು ದತ್ತಾಂಶಗಳಿಗಾಗಿ ಬಳಸಲಾಗುತ್ತದೆ) ವ್ಯವಸ್ಥೆಗಳು ಇದರಲ್ಲಿ ಅಡಕವಾಗಿವೆ. ಈ ಸಂವಹನಗಳು(ಟ್ರಾನ್ಸ್ ಮಿಷನ್ಸ್) ಭೂಸ್ಥಾಯೀ ಕಕ್ಷೆಯಲ್ಲಿ US ನ ಟ್ರ್ಯಾಕಿಂಗ್ ಅಂಡ್ ಡೇಟಾ ರಿಲೇ ಸ್ಯಾಟಲೈಟ್ (TDRSS) ವ್ಯವಸ್ಥೆಯ ಮೂಲಕ ಕಳುಹಿಸಲ್ಪಡುತ್ತವೆ. ಇದು ಹಾಸ್ಟನ್ ನಲ್ಲಿರುವ NASAದ ಗಗನಯಾತ್ರೆ ನಿಯಂತ್ರಣ ಕೇಂದ್ರ (MCC-H) ದೊಂದಿಗೆ ಬಹುಪಾಲು ಸತತವಾಗಿ ನಿಜಾವಧಿ ಸಂವಹನಕ್ಕೆ ಅವಕಾಶ ನೀಡುತ್ತದೆ.[೧೭][೨೨][೯೨] ಕ್ಯನಡಾರ್ಮ್2, ಯುರೋಪಿನ ಕೊಲಂಬಸ್ ಪ್ರಯೋಗಾಲಯ ಮತ್ತು ಜಪಾನೀಯರ ಕಿಬೋ ಘಟಕಗಳಿಗಾಗಿ ದತ್ತಾಂಶ ನಾಲೆಗಳನ್ನು S ಬ್ಯಾಂಡ್ ಮತ್ತು Ku ಬ್ಯಾಂಡ್ ವ್ಯವಸ್ಥೆಗಳ ಮೂಲಕ ಕಳುಹಿಸಲಾಗುತ್ತದೆ. ಆದರೂ ಯುರೋಪಿಯನ್ ಡೇಟಾ ರಿಲೇ ಸ್ಯಾಟಲೈಟ್ ವ್ಯವಸ್ಥೆ ಮತ್ತು ಇಂತಹದ್ದೇ ಜಪಾನೀಯರ ವ್ಯವಸ್ಥೆ ಈ ಪಾತ್ರದಲ್ಲಿ ಅಂತಿಮವಾಗಿ TDRSS ಗೆ ಪೂರಕವಾಗಿವೆ.[೧೭][೯೭] ಘಟಕಗಳ ನಡುವಿನ ಸಂವಹನವನ್ನು ಆಂತರಿಕ ಡಿಜಿಟಲ್ ನಿಸ್ತಂತು ವ್ಯವಸ್ಥೆಯ ಮೂಲಕ ನಡೆಸಲಾಗುತ್ತದೆ.[೯೮] UHF ರೇಡಿಯೋವನ್ನು ಗಗನಯಾತ್ರಿಗಳು ಮತ್ತು ಅಂತರಿಕ್ಷಯಾತ್ರಿಗಳು EVAs ಅನ್ನು ನಡೆಸುವಾಗ ಬಳಸುತ್ತಾರೆ. ಗಗನಯಾತ್ರೆ ನಿಯಂತ್ರಣ ಕೇಂದ್ರ ಮತ್ತು ISS ಸಿಬ್ಬಂದಿ ಸದಸ್ಯರಿಂದ ಆದೇಶಗಳನ್ನು ಪಡೆದುಕೊಳ್ಳಲು, ನಿಲ್ದಾಣಕ್ಕೆ ಜೋಡಣೆಯಾಗಿರುವ ಅಥವಾ ಆಗದಿರುವ ಬಾಹ್ಯಾಕಾಶನೌಕೆಗಳು UHF ಅನ್ನು ಬಳಸುತ್ತವೆ. ಉದಾಹರಣೆಗೆ ಸೊಯುಜ್, ಪ್ರೋಗ್ರೆಸ್, HTV-II, ATV ಮತ್ತು ಬಾನಗಾಡಿ (ಬಾನಗಾಡಿಯನ್ನು ಹೊರತು ಪಡಿಸಿ TDRSS ನ ಮೂಲಕ S ಬ್ಯಾಂಡ್ ಮತ್ತು Ku ಬ್ಯಾಂಡ್ ವ್ಯವಸ್ಥೆಗಳ ಪ್ರಯೋಜನವನ್ನು ಕೂಡ ಪಡೆದುಕೊಳ್ಳಬಹುದಾಗಿದೆ).[೨೨] ಸ್ವಯಂಚಾಲಿತ ಬಾಹ್ಯಾಕಾಶನೌಕೆಗಳನ್ನು ಅವುಗಳ ಒಂದು ಸಂವಹನಾ ಸಾಧನದೊಂದಿಗೆ ಸಿದ್ಧಪಡಿಸಲಾಗಿರುತ್ತದೆ; ATV, ಬಾಹ್ಯಾಕಾಶನೌಕೆಗೆ ಜೋಡಣೆಯಾಗಿರುವ ಲೇಸರ್ ಅನ್ನು ಮತ್ತು ಜ್ವೆಜ್ದ ಕ್ಕೆ ಜೋಡಣೆಯಾಗಿರುವ ಸಾಧನವನ್ನು ಬಳಸುತ್ತದೆ. ಇದು ನಿಖರವಾಗಿ ನಿಲ್ದಾಣಕ್ಕೆ ಸೇರುವುದರಿಂದ ಇದನ್ನು ಸಾಮೀಪ್ಯ ಸಂವಹನಾ ಸಾಧನವೆಂದು ಕರೆಯಲಾಗುತ್ತದೆ.[೯೯][೧೦೦]
ನಿಲ್ದಾಣದ ಕಕ್ಷಾ ಎತ್ತರದಲ್ಲಿ ಭೂಮಿಯಿಂದ ಗುರುತ್ವವು 88 ಪ್ರತಿಶತದಷ್ಟಿರುತ್ತದೆ. ಇದು ಸಮುದ್ರಮಟ್ಟದ ಗುರುತ್ವಕ್ಕೆ ಸಮನಾಗಿದೆ. ISSನ ನಿರಂತರ ಸ್ವತಂತ್ರ ಪತನವು ಹಗುರವಾಗಿರುವಿಕೆಯ ಸಂವೇದನೆಗೆ ಅವಕಾಶ ನೀಡುತ್ತದೆ. ನಿಲ್ದಾಣದಲ್ಲಿರುವ ಪರಿಸರವು ಹಗುರವಾಗಿರುವಿಕೆಯೂ ಆಗಿರುವುದಿಲ್ಲ, ಅಲ್ಲದೇ ಶೂನ್ಯ- ಗುರುತ್ವವೂ ಆಗಿರುವುದಿಲ್ಲ. ಇದನ್ನು ಸೂಕ್ಷ್ಮ ಗುರುತ್ವವೆಂದು ಹೆಚ್ಚಾಗಿ ವಿವರಿಸಲಾಗುತ್ತದೆ. ಸಂವೇದಿಸಲಾದ ಹಗುರವಾಗಿರುವಿಕೆಯ ಈ ಸ್ಥಿತಿಯು ಪರಿಪೂರ್ಣವಲ್ಲ. ಆದರೂ ಇದು ನಾಲ್ಕು ಪ್ರತ್ಯೇಕ ಪರಿಣಾಮಗಳಿಂದ ಅಡಚಣೆಗೆ ಒಳಗಾಗುತ್ತದೆ:[೧೦೧]
ISS ನ ಎನ್ ವಿರಾನ್ಮೆಂಟಲ್ ಕಂಟ್ರೋಲ್ ಅಂಡ್ ಲೈಫ್ ಸಪೋರ್ಟ್ ಸಿಸ್ಟಮ್ (ECLSS)(ಜೀವ ರಕ್ಷಕ ಆಧಾರ ಪರಿಸರೀಯ ನಿಯಂತ್ರಕ ವ್ಯವಸ್ಥೆ), ವಾಯುಮಂಡಲದ ಒತ್ತಡವನ್ನು, ಬೆಂಕಿಯ ಅಪಾಯವನ್ನು ಪತ್ತೆಹಚ್ಚುವುದು ಮತ್ತು ಶಮನಗೊಳಿಸುವುದು, ಆಮ್ಲಜನಕದ ಮಟ್ಟಗಳು, ತ್ಯಾಜ್ಯ ನಿರ್ವಹಣೆ ಮತ್ತು ಜಲಪೂರೈಕೆಯನ್ನು ನಿಯಂತ್ರಿಸುತ್ತದೆ ಅಥವಾ ಒದಗಿಸುತ್ತದೆ. ECLSS , ISS ನ ಅನಿಲ ಮಂಡಲಕ್ಕೆ ಹೆಚ್ಚಿನ ಮಹತ್ವ ನೀಡಿದರೂ ಕೂಡ, ಈ ವ್ಯವಸ್ಥೆ ತ್ಯಾಜ್ಯ ಮತ್ತು ಸಿಬ್ಬಂದಿ ವರ್ಗದಿಂದ ಬಳಸಲ್ಪಟ್ಟ ನೀರನ್ನು ಶೇಖರಿಸಲ್ಪಟ್ಟು, ಸಂಗ್ರಹಿಸುತ್ತದೆ, ಮತ್ತು ಸಂಸ್ಕರಿಸುತ್ತದೆ. ಈ ಕಾರ್ಯವಿಧಾನ ಸಿಂಕ್(ಬಚ್ಚಲಗುಂಡಿ) ಮತ್ತು, ಶೌಚಾಲಯದಿಂದ ನೀರನ್ನು ಮರುಬಳಸುವಂತೆ ಮಾಡುತ್ತದೆ, ಮತ್ತು ಗಾಳಿಯಿಂದ ಹನೀಭವನವಾಗುವಂತೆ ಮಾಡುತ್ತದೆ. ಜ್ವೆಜ್ದ ನಲ್ಲಿರುವ ಎಲೆಕ್ಟ್ರಾನ್ ವ್ಯವಸ್ಥೆ ಮತ್ತು ಡೆಸ್ಟಿನಿ ಯಲ್ಲಿರುವ ಇಂತಹದ್ದೇ ವ್ಯವಸ್ಥೆ ನಿಲ್ದಾಣದೊಳಗೆ ಆಮ್ಲಜನಕವನ್ನು ಉತ್ಪಾದಿಸುತ್ತವೆ.[೧೦೨] ಸಿಬ್ಬಂದಿಗೆ ಆಪತ್ತಿನ ಸಮಯದಲ್ಲಿ ಬಳಕೆಗೆ ಬರಲೆಂದು ಆಮ್ಲಜನಕವನ್ನು ಸೀಸೆಯಲ್ಲಿ ಮತ್ತು ಸಾಲಿಡ್ ಫ್ಯೂಯೆಲ್ ಆಕ್ಸಿಜನ್ ಜನರೇಷನ್ (SFOG) ನಂತಹ ಸಣ್ಣ ಡಬ್ಬಿಗಳ ರೂಪದಲ್ಲಿ ಮೀಸಲಿಟ್ಟಿರಲಾಗುತ್ತದೆ.[೧೦೩] ಜ್ವೆಜ್ದ ದಲ್ಲಿರುವ ವೊಜ್ದುಕ್ ವ್ಯವಸ್ಥೆ ಗಾಳಿಯಿಂದ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುತ್ತದೆ. ಮಾನವನ ಚಯಾಪಚಯ ಕ್ರಿಯೆಯ ಉಪೋತ್ಪನ್ನಗಳು- ಉದಾಹರಣೆಗೆ ಕರುಳಿನಿಂದ ಹೊರಬರುವ ಮೀಥೇನ್ ಮತ್ತು ಬೆವರಿನಿಂದ ಹೊರಬರುವ ಅಮೋನಿಯ ಆಮ್ಲಗಳನ್ನು ಸಕ್ರಿಯ ಇಂಗಾಲದ ಶೋಧಕಗಳ ಮೂಲಕ ತೆಗೆದುಹಾಕಲಾಗುತ್ತದೆ.[೧೦೩] ISS ನಲ್ಲಿರುವ ವಾಯುಮಂಡಲವು ಭೂಮಿಯ ವಾಯುಮಂಡಲಕ್ಕೆ ಸದೃಶವಾಗಿರುತ್ತದೆ.[೧೦೪] ಆಗ ISS ನ ಮೇಲೆ 101.3 kPa(ಪ್ಯಾಸ್ಕಲ್) (14.7 psi) ರಷ್ಟು ಸಹಜ ವಾಯುವಿನ ಒತ್ತಡವಿರುತ್ತದೆ;[೧೦೫] ಭೂಮಿಯ ಸಮುದ್ರ ಮಟ್ಟದಷ್ಟಕ್ಕೇ ಇದು ಸಮನಾಗಿದೆ. ಭೂಮಿಯ ವಾಯುಮಂಡಲವು ಸಿಬ್ಬಂದಿಗೆ ಅನೇಕ ಅನುಕೂಲತೆಗಳನ್ನು ನೀಡುತ್ತದೆ. ಅಲ್ಲದೇ ಇದು ಪರ್ಯಾಯವಾಗಿರುವ ಪರಿಶುದ್ಧ ಆಮ್ಲಜನಕ ಹೊಂದಿರುವ ವಾಯುಮಂಡಲಕ್ಕಿಂತ ಅತ್ಯಂತ ಸುರಕ್ಷಿತವಾಗಿದೆ. ಏಕೆಂದರೆ ಇಲ್ಲಿ ಬೆಂಕಿ ಹತ್ತಿಕೊಳ್ಳಬಹುದಾದ ಅಪಾಯ ಹೆಚ್ಚಿರುತ್ತದೆ. ಉದಾಹರಣೆಗೆ ಅಪೋಲೋ 1ರಲ್ಲಿನ ಸಿಬ್ಬಂದಿಯ ಸಾವುಗಳಿಗೆ ಕಾರಣವಾದ ಅಪಾಯಕಾರಿ ಬೆಂಕಿ.[೧೦೬]
ಅದಲ್ಲದೇ ISS ನ (ಸುಮಾರು ಅಮೇರಿಕದ ಫುಟ್ ಬಾಲ್ ಮೈದಾನದಷ್ಟಿದೆ.)ಗಾತ್ರದಿಂದಾಗಿ ಮತ್ತು ಇದರ ಸೌರ ಫಲಕಗಳು ನೀಡುವ ಅತ್ಯಂತ ದೊಡ್ಡ ಪ್ರತಿಫಲಿತ ಪ್ರದೇಶದಿಂದಾಗಿ, ಒಂದು ವೇಳೆ ವೀಕ್ಷಕನು ಸೂಕ್ತ ಸಮಯದಲ್ಲಿ, ಸೂಕ್ತ ಸ್ಥಳದಲ್ಲಿದ್ದರೆ, ನಿಲ್ದಾಣ ವನ್ನು ಭೂಮಿಯಿಂದ ಬರಿಕಣ್ಣಿನಲ್ಲಿ ವೀಕ್ಷಿಸಬಹುದಾಗಿದೆ. ಅನೇಕ ಸಂದರ್ಭಗಳಲ್ಲಿ, ನಿಲ್ದಾಣವು ಬರಿಕಣ್ಣಿನಿಂದ ನೋಡಬಹುದಾದ ಆಕಾಶದಲ್ಲಿರುವ ವಸ್ತುವಾಗಿದೆ. ಆದರೂ ಇದನ್ನು ಕೇವಲ ಎರಡರಿಂದ ಐದುನಿಮಿಷಗಳ ಕಾಲಾವಧಿಯವರೆಗೆ ಮಾತ್ರ ನೋಡಬಹುದಾಗಿದೆ.[೮] ಕೆಳಕಂಡ ಸ್ಥಿತಿಯಲ್ಲಿದ್ದಾಗ (ಆಕಾಶವು ತಿಳಿಯಾಗಿದ್ದಾಗ), ನಿಲ್ದಾಣವು ಆಕಾಶದಲ್ಲಿ ಅತ್ಯಂತ ಪ್ರಕಾಶಮಾನವಾದ ವಸ್ತುವಾಗಿ ಕಂಡುಬರುತ್ತದೆ: ನಿಲ್ದಾಣವು ವೀಕ್ಷಕನ ಕ್ಷಿತಿಜದ ಮೇಲಿರಬೇಕು. ಅಲ್ಲದೇ ಇದು ವೀಕ್ಷಣಾ ಸ್ಥಳದ ಸುಮಾರು 2,000 kilometres (1,200 mi) ರಷ್ಟರೊಳಗೆ ಇರಬೇಕು(ಹತ್ತಿರದಿಂದ ಗೋಚರತೆ ಉತ್ತಮವಾಗಿರುತ್ತದೆ). ನಕ್ಷತ್ರಗಳು ಕಾಣಿಸಲು ವೀಕ್ಷಕನ ಸ್ಥಳದಲ್ಲಿ ಸಾಕಷ್ಟು ಕತ್ತಲಿರಬೇಕು. ಅಲ್ಲದೇ ನಿಲ್ದಾಣವು ಭೂಮಿಯ ನೆರಳಿಗಿಂತ ಸೂರ್ಯನ ಬೆಳಕಿನಲ್ಲಿರಬೇಕು. ಅತ್ಯುತ್ತಮ ವೀಕ್ಷಣಾ ಅವಕಾಶದ ಸಂದರ್ಭದಲ್ಲಿ ಮೂರನೆಯ ಸ್ಥಿತಿ ಪ್ರಾರಂಭವಾಗಲು ಅಥವಾ ಮುಗಿಯಲು ಇದು ಸಹಜವಾಗಿದೆ. ಸಂಜೆಯ ಹೊತ್ತಿನಲ್ಲಿ ನಿಲ್ದಾಣವು ಪಶ್ಚಿಮದಿಂದ ಪೂರ್ವಕ್ಕೆ ಹೋಗುವಾಗ ಮುಸುಕಿನಿಂದ ಮುಂದೆ ಸರಿದಂತೆ, ಇದು ಇದ್ದಕಿದ್ದಂತೆ ಮಬ್ಬಾಗುತ್ತದೆ ಮತ್ತು ಅದೃಶ್ಯವಾಗುತ್ತದೆ. ವ್ಯತಿರಿಕ್ತ ಪರಿಸ್ಥಿತಿಯ ಸಂದರ್ಭದಲ್ಲಿ ಇದು ಬೆಳಕಿನ ಕಡೆ ಸರಿದಂತೆಲ್ಲ ಇದ್ದಕ್ಕಿದ್ದಂತೆ ಆಕಾಶದಲ್ಲಿ ಕಾಣಿಸಿಕೊಳ್ಳುತ್ತದೆ.[೮][೧೦೭] ಸರಿಸುಮಾರು 5.9 ಪರಿಮಾಣದಲ್ಲಿ ನಿಲ್ದಾಣದ ಗರಿಷ್ಠ ಪ್ರತಿಫಲಿತ ಪ್ರಕಾಶಮಾನತೆಯೊಂದಿಗೆ(ಗರಿಷ್ಠ 3.8 ರೊಂದಿಗೆ), ಹಗಲ ಬೆಳಕಿನಲ್ಲಿ ಯಾವುದೇ ಕಣ್ಣಿನ ಸಾಧನವನ್ನು ಬಳಸದೇ ಇದನ್ನು ಬರಿಗಣ್ಣಿನಿಂದ ನೋಡುವಷ್ಟು ಪ್ರಕಾಶಮಾನವಾಗಿರುತ್ತದೆ.[೧೦೮][೧೦೯][೧೧೦]
ಇಲ್ಲಿ ISS ಎಂಬುದು ಅನೇಕ ಬಾಹ್ಯಾಕಾಶ ಪ್ರತಿನಿಧಿಗಳ ಜಂಟಿ ಯೋಜನೆಯಾಗಿದೆ: US ನ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA), ರಷ್ಯನ್ ಫೆಡರಲ್ ಸ್ಪೇಸ್ ಏಜೆನ್ಸಿ (RKA), ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿ (JAXA), ಕೆನಡಿಯನ್ ಸ್ಪೇಸ್ ಏಜೆನ್ಸಿ (CSA) ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA).[೨೧] ಇದು ವಿವಿಧೋದ್ದೇಶ ಯೋಜನೆಯಾಗಿರುವುದರಿಂದ ಕಾನೂನಿನ ಮತ್ತು ಹಣಕಾಸಿನ ಅಂಶಗಳು ಸಂಕೀರ್ಣವಾಗಿವೆ. ಇದಕ್ಕೆ ಸಂಬಂಧಪಟ್ಟ ವಿಷಯಗಳು ಕೆಳಕಂಡಂತಿವೆ: ಘಟಕಗಳ ಮಾಲೀಕತ್ವ, ಸಹಯೋಗಿ ರಾಷ್ಟ್ರಗಳಿಂದ ನಿಲ್ದಾಣದ ಬಳಕೆ ಹಾಗು ನಿಲ್ದಾಣದ ಮರು ಪೂರೈಕೆಗಾಗಿರುವ ಹೊಣೆಗಾರಿಕೆಗಳು. ನಿಯಮ-ನಿರ್ಬಂಧ ಮತ್ತು ಹಕ್ಕುಗಳನ್ನು ಸ್ಪೇಸ್ ಸ್ಟೇಷನ್ ಇಂಟರ್ ಗವರ್ನಮೆಂಟಲ್ ಅಗ್ರಿಮೆಂಟ್ (IGA)(ಬಾಹ್ಯಾಕಾಶ ನಿಲ್ದಾಣದ ಅಂತರಸರ್ಕಾರ ಒಪ್ಪಂದ) ದೃಢಪಡಿಸುತ್ತದೆ. 1998 ರ ಜನವರಿ 28 ರಂದು ಬಾಹ್ಯಾಕಾಶ ನಿಲ್ದಾಣ ಯೋಜನೆಯಲ್ಲಿ ಪಾಲ್ಗೊಂಡಿರುವ ಪ್ರಮುಖ ರಾಷ್ಟ್ರಗಳು ಈ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿಹಾಕಿದವು; ಅಮೇರಿಕ ಸಂಯುಕ್ತ ಸಂಸ್ಥಾನ, ರಷ್ಯನ್ ಒಕ್ಕೂಟ, ಜಪಾನ್, ಕೆನಡಾ ಮತ್ತು ಯುರೋಪಿನ ಸ್ಪೇಸ್ ಏಜೆನ್ಸಿಯ(ಬಾಹ್ಯಾಕಾಶ ಪ್ರತಿನಿಧಿ)ಯ ಹನ್ನೊಂದು ಸದಸ್ಯ ರಾಷ್ಟ್ರಗಳು (ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ಜರ್ಮನಿ, ಇಟಲಿ, ನೆದರಲ್ಯಾಂಡ್ , ನಾರ್ವೆ, ಸ್ಪ್ಯೇನ್, ಸ್ವಿಡನ್, ಸ್ವಿಜರ್ಲೆಂಡ್, ಮತ್ತು ಇಂಗ್ಲೆಂಡ್).[೨೩] ಅನಂತರ NASA (ನಾಸಾ) ಮತ್ತು ESA, CSA, RKA ಮತ್ತು JAXA ಗಳ ನಡುವೆ ಮೆಮೊರಂಡ್ ಆಫ್ ಅಂಡರ್ ಸ್ಟ್ಯಾಂಡಿಂಗ್ (MOU)(ಪರಸ್ಪರ ತಿಳಿವಳಿಕೆಯಿಂದ ಸಹಕಾರ ಒಪ್ಪಿಗೆ) ಎಂಬ ಎರಡನೆಯ ಒಪ್ಪಂದವಾಯಿತು. ಮುಂದೆ ಈ ಒಪ್ಪಂದಗಳನ್ನು ಕೆಳಕಂಡಂತೆ ವಿಭಾಗಿಸಲಾಯಿತು:ರಾಷ್ಟ್ರಗಳ ನಡುವಿನ ಒಪ್ಪಂದದ ಹೊಣೆಗಾರಿಕೆ ಮತ್ತು ವ್ಯಾಪಾರದಲ್ಲಿ ತೊಡಗಿರುವ ಪಾಲುದಾರನ ಹಕ್ಕು ಮತ್ತು ಹೊಣೆಗಾರಿಕೆ.[೨೩] ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ ನ ಬಳಕೆಯನ್ನು ಕೂಡ ಈ ಮಟ್ಟದಲ್ಲೇ ತೀರ್ಮಾನಿಸಲಾಯಿತು.[೨೪] ಪ್ರಮುಖವಾದ ಈ ಅಂತರಸರ್ಕಾರಗಳ ಪರಸ್ಪರ ತಿಳಿವಳಿಕೆ ಒಪ್ಪಂದಗಳ ಜೊತೆಯಲ್ಲಿ ಬ್ರೆಜಿಲ್, ಹಾರ್ಡ್ ವೇರ್ ಅನ್ನು ಸರಬರಾಜು ಮಾಡಲು, NASA ದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಅಮೇರಿಕ ಸಂಯುಕ್ತ ಸಂಸ್ಥಾನದ ದ್ವಿಪಕ್ಷೀಯ ಪಾಲುದಾರನಾಗಿ ಸೇರಿಕೊಂಡಿತು.[೧೧೧] ಇದಕ್ಕೆ ಪ್ರತಿಯಾಗಿ NASA ಬ್ರೆಜಿಲ್ ಗೆ ಕಕ್ಷೆಯ ಮೇಲಿರುವ ಅದರ ISS ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿತು. ಅಲ್ಲದೇ ISS ಕಾರ್ಯಯೋಜನೆಯ ಸಂದರ್ಭದಲ್ಲಿ ಬ್ರೆಜಿಲ್ ನ ಒಬ್ಬ ಗಗನಯಾತ್ರಿಗೆ ವಿಮಾನ ಪ್ರಯಾಣಮಾಡಲು ಅವಕಾಶ ನೀಡಿತು. ತುಲನಾತ್ಮಕ ಸೇವೆಯನ್ನು ಒದಗಿಸುವಲ್ಲಿ ಇಟಲಿ ಕೂಡ NASA ದೊಂದಿಗೆ ಇಂತಹದ್ದೇ ಒಪ್ಪಂದವನ್ನು ಹೊಂದಿದೆ. ಆದರೂ ಇಟಲಿ ESAಯಲ್ಲಿರುವ ಅದರ ಸದಸ್ಯತ್ವದ ಮೂಲಕ ಕಾರ್ಯಯೋಜನೆಯಲ್ಲಿ ಪಾಲ್ಗೊಳ್ಳುತ್ತದೆ.[೧೧೨] ವರದಿಯ ಪ್ರಕಾರ ಚೀನಾ ಕೂಡ ಈ ಯೋಜನೆಯಲ್ಲಿ ತನ್ನ ಆಸಕ್ತಿ ತೋರಿಸಿದೆ. ಅದರಲ್ಲೂ ವಿಶೇಷವಾಗಿ ಅದು RKA ನೊಂದಿಗೆ ಕಾರ್ಯನಿರ್ವಹಿಸುವೆಡೆಗೆ ಹೆಚ್ಚಿನ ಆಸಕ್ತಿ ತೋರಿಸಿದೆ. ಅದೇನೇ ಆದರೂ, as of 2009[update] US ನ ಆಕ್ಷೇಪಣೆಗಳಿಂದಾಗಿ ಚೀನಾ ಇದರಿಂದ ಹೊರಗುಳಿದಿದೆ.[೧೧೩][೧೧೪] ದಕ್ಷಿಣ ಕೊರಿಯಾ ಮತ್ತು ಭಾರತೀಯ ಬಾಹ್ಯಾಕಾಶ ಪ್ರತಿನಿಧಿಗಳ ಮುಖ್ಯಸ್ಥರು ,2009 ರ ಇಂಟರ್ನ್ಯಾಷನಲ್ ಆಸ್ಟ್ರೋನಾಟಿಕಲ್ ಕಾಂಗ್ರೆಸ್ ಎಂಬ ಮೊದಲನೆಯ ಸರ್ವಸದಸ್ಯರ ಅಧಿವೇಶನದಲ್ಲಿ ಅವುಗಳ ರಾಷ್ಟ್ರಗಳು, 2010 ರಲ್ಲಿ ಪ್ರಾರಂಭವಾಗುವ ಮಾತುಕತೆಯೊಂದಿಗೆ , ISS ಕಾರ್ಯಯೋಜನೆಯನ್ನು ಸೇರಲು ಬಯಸುತ್ತವೆ ಎಂಬುದನ್ನು ಪ್ರಕಟಿಸಿದರು. ನಿಯೋಗದ ಮುಖ್ಯಸ್ಥರು ISS ನ ಕಾಲಾವಧಿಯನ್ನು ಇನ್ನಷ್ಟೂ ವಿಸ್ತರಿಸುವುದರ ಬಗ್ಗೆ ತಮ್ಮ ಬೆಂಬಲವನ್ನು ಕೂಡ ಸೂಚಿಸಿದರು.[೧೧೫] ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಕಾರ್ಯಯೋಜನೆಯ ಭಾಗವಾಗಿರದ ಯುರೋಪಿನ ರಾಷ್ಟ್ರಗಳಿಗೆ ಮೂರುವರ್ಷಗಳ ಪರೀಕ್ಷಾ ಕಾಲಾವಧಿಯಲ್ಲಿ ನಿಲ್ದಾಣ ಪ್ರವೇಶಿಸಲು ಅವಕಾಶ ನೀಡಲಾಗಿದೆ ಎಂದು ESA ಯ ಅಧಿಕಾರಿಗಳು ತಿಳಿಸಿದ್ದಾರೆ.[೧೧೬]
ನಿಲ್ದಾಣದ ರಷ್ಯನ್ ಭಾಗವನ್ನು ರಷ್ಯನ್ ಒಕ್ಕೂಟದ ಬಾಹ್ಯಾಕಾಶ ನಿಯೋಗವು ನೋಡಿಕೊಳ್ಳುತ್ತದೆ, ಜೊತೆಗೆ ನಿಯಂತ್ರಿಸುತ್ತದೆ. ಅಲ್ಲದೇ ಇದು ರಷ್ಯಕ್ಕೆ ISS ನ ಒಂದೂವರೆ ಪ್ರಮಾಣದಷ್ಟು ಸಿಬ್ಬಂದಿ ಪಡೆವ ಕಾಲಾವಧಿಯ ಹಕ್ಕನ್ನು ಒದಗಿಸಿದೆ. ಉಳಿದ ಸಿಬ್ಬಂದಿ ಕಾಲಾವಧಿಯ ನಿಗದಿಯನ್ನು(ಆರು ಜನ ಶಾಶ್ವತ ಸಿಬ್ಬಂದಿಗಳಲ್ಲಿ ಮೂರರಿಂದ ನಾಲ್ಕು ಜನ ಸಿಬ್ಬಂದಿ ಸದಸ್ಯರು) ಮತ್ತು ನಿಲ್ದಾಣದ ಇತರ ವಿಭಾಗಗಳೊಳಗಿರುವ ಹಾರ್ಡ್ ವೇರ್ (ಎಲೆಕ್ಟ್ರಾನಿಕ್ ಭಾಗ)ಅನ್ನು ಕೆಳಕಂಡಂತೆ ಹಂಚಲಾಗಿದೆ:
ಇಲ್ಲಿ ISS ನ ನಿರ್ಮಾಣಕ್ಕೆ 35 ಬಿಲಿಯನ್ ನಿಂದ 160 ಬಿಲಿಯನ್ ಡಾಲರ್ ಗಳಷ್ಟು ವೆಚ್ಚವಾಗುತ್ತದೆ ಎಂದು ಅಂದಾಜುಮಾಡಲಾಗಿದೆ.[೨೬] ESA ಎಂಬುದು, ಸುಮಾರು 30 ವರ್ಷಗಳೊಳಗೆ ನಿಲ್ದಾಣವನ್ನು ಸಂಪೂರ್ಣವಾಗಿ ನಿರ್ಮಿಸಲು €100 ಮಿಲಿಯನ್ ಗಳು ವೆಚ್ಚವಾಗುತ್ತದೆ ಎಂದು ನಿಖರವಾಗಿ ಅಂದಾಜು ಮಾಡಿದ ಒಂದು ನಿಯೋಗವಾಗಿದೆ.[೨೫] ಅದೇನೇ ಆದರೂ ISS ನ ನಿರ್ಮಾಣಕ್ಕೆ ಅಂದಾಜುಮಾಡಲಾದ ನಿಖರ ವೆಚ್ಚವು ಅಸ್ಪಷ್ಟವಾಗಿದೆ. ಅಲ್ಲದೇ ಯಾವ ಬೆಲೆಯನ್ನು ISS ಕಾರ್ಯಯೋಜನೆಗೆ ಅಳವಡಿಸಲಾಗಿದೆ ಎಂಬುದನ್ನು ನಿರ್ಧರಿಸುವುದು ಕೂಡ ಕಷ್ಟವಾಗಿದೆ ಅಥವಾ ರಷ್ಯಾದ ಕೊಡುಗೆಯನ್ನು ಹೇಗೆ ಅಳೆಯುವುದು ಎಂಬುದೂ ಕೂಡ ಕಷ್ಟವಾಗಿದೆ.[೨೬]
ಹೀಗೆ ISS ನ ಮೇಲೆ ಖರ್ಚು ಮಾಡಿರುವ ಹಣ ಮತ್ತು ಸಮಯವನ್ನು ಇತರ ಯೋಜನೆಯ ಮೇಲೆ ಖರ್ಚು ಮಾಡಿದ್ದರೆ ಪ್ರಯೋಜನವಾಗಿರುತ್ತಿತ್ತು ಎಂದು ISS ನ ಟೀಕಾಕಾರರು ವಾದಿಸಿದ್ದಾರೆ— ಈ ಹಣವನ್ನು ರೋಬಾಟ್ ಬಾಹ್ಯಾಕಾಶನೌಕೆಯ ಯಾತ್ರೆ, ಬಾಹ್ಯಾಕಾಶ ಪರಿಶೋಧನೆ, ಭೂಮಿಯ ಮೇಲಿರುವ ಸಮಸ್ಯೆಗಳ ಪರೀಕ್ಷೆ , ಮಂಗಳದಲ್ಲಿ ವಸಾಹತುಗಾರಿಕೆ , ಅಥವಾ ಕೇವಲ ಕಂದಾಯ ಉಳಿಸುವ ಯೋಜನೆಗಳ ಮೇಲೆ ಉಪಯೋಗಿಸಬಹುದಾಗಿತ್ತು.[೨೭][೨೮] ರಾಬರ್ಟ್ L. ಪಾರ್ಕ್ ರಂತಹ ಕೆಲವು ವಿಮರ್ಶಕರು, ISSಗಾಗಿ ಸಣ್ಣ ವೈಜ್ಞಾನಿಕ ಸಂಶೋಧನೆಯನ್ನು ಕೂಡ ಮನಗಾಣಿಸುವಂತೆ ಯೋಜಿಸಬೇಕಾಗಿರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅಲ್ಲದೇ ಸೂಕ್ಷ್ಮ ಗುರುತ್ವ ವಾತಾವರಣವು ಬಾಹ್ಯಾಕಾಶ ಪ್ರಯೋಗಾಲಯದ ಪ್ರಮುಖ ಗುಣಲಕ್ಷಣವಾಗಿದೆ . ಇದನ್ನು "ವಾಮಿಟ್ ಕಾಮೆಟ್" ನೊಂದಿಗೆ ಕಡಿಮೆ ವೆಚ್ಚದಲ್ಲಿ ಅಧ್ಯಯನ ಮಾಡಬಹುದಾಗಿದೆ ಎಂದು ವಾದಿಸಿದ್ದಾರೆ.[೨೭][೧೧೮][೧೧೯] ಈ ತೆರನಾಗಿ ISS ನ ಸಂಶೋಧನಾ ಸಾಮರ್ಥ್ಯಗಳನ್ನು ಟೀಕಿಸಲಾಗಿದೆ. ವಿಶೇಷವಾಗಿ ಮಹತ್ವಕಾಂಕ್ಷೆಯ ಸೆಂಟ್ರಿಫ್ಯೂಜ್ ಅಕಾಮಡೇಷನ್ ಮಾಡ್ಯೂಲ್ ಅನ್ನು ಮತ್ತು ಇದರ ಜೊತೆಯಲ್ಲಿ ಇತರ ಸಲಕರಣೆಗಳನ್ನು ರದ್ದುಪಡಿಸಿರುವುದಕ್ಕೆ ಸಂಬಂಧಿಸಿರುವಂತೆ, ನಿಲ್ದಾಣದ ಮೇಲೆ ಕೈಗೊಳ್ಳುವ ವೈಜ್ಞಾನಿಕ ಸಂಶೋಧನೆಗಳು ಸಾಮಾನ್ಯವಾಗಿ ವಿಶೇಷವಾದ ಸಲಕರಣೆಗಳ ಅಗತ್ಯವಿಲ್ಲದ ಪ್ರಯೋಗಗಳಿಗೆ ಮಾತ್ರ ಸೀಮಿತವಾಗಿವೆ ಎಂದೂ ಟೀಕಿಸಲಾಗಿದೆ. ಉದಾಹರಣೆಗೆ, 2007ರ ಮೊದಲಾರ್ಧದಲ್ಲಿ, ISS ನ ಸಂಶೋಧನೆಯು ಪ್ರಮುಖವಾಗಿ ಈ ಕೆಳಕಂಡ ವಿಷಯಗಳಿಗೆ ಸಂಬಂಧಿಸಿದೆ: ಬಾಹ್ಯಾಕಾಶದಲ್ಲಿ ಬದುಕುವುದು ಮತ್ತು ಕಾರ್ಯನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ಮಾನವನ ಜೀವವಿಜ್ಞಾನ ಪ್ರತಿಕ್ರಿಯೆ, ಮೂತ್ರಪಿಂಡದ ಕಲ್ಲುಗಳು, ಸರ್ಕೇಡಿಯನ್ ರಿದಮ್(ದಿನಕ್ಕೊಮ್ಮೆಯಾದರೂ ಮರುಕಳಿಸುವ ನಿಯಾತವರ್ತನ), ಮತ್ತು ನರಮಂಡಲದ ಮೇಲೆ ಕಾಸ್ಮಿಕ್ ಕಿರಣಗಳು ಬೀರುವ ಪರಿಣಾಮದ ವಿಷಯಗಳ ಮೇಲೆ ಸಂಶೋಧನೆ ನಡೆಸಲು ಯೋಜಿಸಲಾಗಿತ್ತು.[೧೨೦][೧೨೧][೧೨೨] ISS ನ ತಾಂತ್ರಿಕ ರಚನೆಗೆ ಸಂಬಂಧಿಸಿದಂತೆ ಇತರ ಟೀಕೆಗಳನ್ನೂ ಮಾಡಲಾಗಿದೆ. ಅಲ್ಲದೇ ನಿಲ್ದಾಣದ ಕಕ್ಷೆಯು ಬಾಗುವುದರಿಂದಾಗಿ ನಿಲ್ದಾಣಕ್ಕೆ US ಆಧಾರಿತ ಉಡಾವಣೆಗೆ ಹೆಚ್ಚು ಹಣ ವೆಚ್ಚವಾಗುತ್ತದೆ ಎಂದೂ ಟೀಕಿಸಲಾಗಿದೆ.[೧೨೩] ಈ ಕೆಲವೊಂದು ಟೀಕೆಗಳಿಗೆ ಪ್ರತಿಕ್ರಿಯಿಸುವಂತೆ, ಸಿಬ್ಬಂದಿ ಆಧಾರಿತ ಬಾಹ್ಯಾಕಾಶ ಪರಿಶೋಧನೆಯ ಸಮರ್ಥಕರು, ISS ನ ಯೋಜನೆಯ ಮೇಲೆ ಮಾಡಲಾಗಿರುವ ಟೀಕೆಗಳು ತಾತ್ಕಾಲಿಕವಾಗಿವೆ. ಅಲ್ಲದೇ ಸಿಬ್ಬಂದಿ ಆಧಾರಿತ ಬಾಹ್ಯಾಕಾಶ ಸಂಶೋಧನೆ ಮತ್ತು ಪರಿಶೋಧನೆಗಳು ಬಿಲಿಯನ್ ಗಟ್ಟಲೆ ಡಾಲರ್ ನಷ್ಟು ಬೆಲೆಬಾಳುವ ಪ್ರಯೋಜನಗಳನ್ನು ನೀಡುತ್ತವೆ, ಎಂದು ತಿಳಿಸಿದ್ದಾರೆ. ಸಿಬ್ಬಂದಿ ಆಧಾರಿತ ಬಾಹ್ಯಾಕಾಶ ಪರಿಶೋಧನೆಯ ಉಪಫಲಗಳಿಂದ ಪಡೆಯುವ ಪರೋಕ್ಷ ಆರ್ಥಿಕ ಆದಾಯವು, ಸಾರ್ವಜನಿಕರು ಹೂಡಿದ ಪ್ರಾಥಮಿಕ ಬಂಡವಾಳಕ್ಕಿಂತ ಅನೇಕ ಪಟ್ಟು ಹೆಚ್ಚಿರುತ್ತದೆಂದು NASA ಅಂದಾಜುಮಾಡಿದೆ. ಆದರೂ ಕೂಡ ಈ ಅಂದಾಜನ್ನು ಅಪೋಲೋ ಪ್ರೋಗ್ರಾಂ ನ ಆಧಾರದ ಮೇಲೆ ಮಾಡಲಾಗಿದ್ದು, ಇದನ್ನು 1970ರ ಹೊತ್ತಿನಲ್ಲಿ ಅಂದಾಜುಮಾಡಲಾಗಿದೆ.[೧೨೪] ಸಾಧನೆಗಳ ಬಗ್ಗೆ ಅಮೇರಿಕದ ವಿಜ್ಞಾನಿಗಳ ಒಕ್ಕೂಟ ಮಾಡಿರುವ ವಿಮರ್ಶೆಯು, NASA ಅಂದಾಜು ಮಾಡಿರುವಂತೆ ಉಪಫಲಗಳಿಂದ ಪಡೆಯುವ ಆರ್ಥಿಕ ಆದಾಯವು ಅತ್ಯಂತ ಕಡಿಮೆಯಿರುತ್ತದೆ, ಅಲ್ಲದೇ ವಾಯುನೌಕೆಯನ್ನು ಮಾರಾಟವಾಗುವಂತೆ ಮಾಡುವ ವಾಯುಯಾನ ವಿಜ್ಞಾನದ ಕಾರ್ಯವನ್ನು ಹೊರತುಪಡಿಸಿ ಉಳಿದೆಲ್ಲಾ ಕಾರ್ಯಗಳಿಂದ ಬರುವ ಆದಾಯವು ತೀರ ಕಡಿಮೆ ಇರುತ್ತದೆ ಎಂದು ವಾದಿಸಿದೆ.[೧೨೫]
ಇದರಂತೆ NASA ವು 2016 ರ ಮೊದಲಾರ್ಧದಲ್ಲಿ ISS ಅನ್ನು ಡೀ ಆರ್ಬಿಟ್ ಮಾಡಲು ಯೋಜಿಸಿದೆ.[೧೨೬] 2015 ರಲ್ಲಿ ISS ನ ಕಾರ್ಯಯೋಜನೆಯನ್ನು ಮುಕ್ತಾಯಗೊಳಿಸಬೇಕೆಂದು ಜಾರ್ಜ್ W. ಬುಷ್ ರವರು 2004 ರಲ್ಲಿಯೇ ನಿರ್ಧರಿಸಿದ್ದರು. ಆದರೆ ಇದನ್ನು ಪ್ರಸ್ತುತದ ಒಬಾಮ ಆಡಳಿತವು ನಿರಾಕರಿಸಿದೆ. 2010ರ ಫೆಬ್ರವರಿ 1 ರಂದು ಪ್ರಕಟಿಸಲಾದ ಹೊಸ ಬಜೆಟ್ ನೊಂದಿಗೆ ಆಡಳಿತವು, ನಿಲ್ದಾಣದ (ಬಾಳಿಕೆ)ಜೀವನಾವಧಿಯನ್ನು 2020 ರ ವರೆಗೆ ವಿಸ್ತರಿಸಿತು.[೭] ಸಾಕಷ್ಟು ಸಿಬ್ಬಂದಿ ಹೊಂದಿರುವ NASAದ ಬಾಹ್ಯಾಕಾಶ ನೌಕೆಯ ಕಾರ್ಯಯೋಜನೆಯನ್ನು ಪರಿಶೀಲಿಸಿದ ಅಗಸ್ಟೀನ್ ಕಮಿಷನ್, 2009 ರ ಅಕ್ಟೋಬರ್ 23 ರಂದು ನೀಡಿದ ಅಂತಿಮ ವರದಿಯಲ್ಲಿ, ISS ನ ಕಾರ್ಯಯೋಜನೆಯನ್ನು ಕೊನೆಯ ಪಕ್ಷ 2020ರವರೆಗಾದರೂ ವಿಸ್ತರಿಸಲು ಶಿಫಾರಸ್ಸು ಮಾಡಿತು.[೧೨೭] ಬಾಹ್ಯಾಕಾಶ ನಿಲ್ದಾಣದ ಮಾಜಿ ಕಮಾಂಡರ್ ಆಗಿದ್ದ ಮತ್ತು ಬಾಹ್ಯಾಕಾಶ ಬಾನಗಾಡಿ ಗಗನಯಾತ್ರಿಯಾದ ಮತ್ತು ಸಲಹಾ ಸಮಿತಿಯಲ್ಲಿದ್ದ ಲೆರಾಯ್ ಚಿಯೊ ರವರು CNN ಸಂದರ್ಶನದಲ್ಲಿ ಕೆಳಕಂಡಂತೆ ತಿಳಿಸಿದ್ದಾರೆ:“ ಈ ಎಲ್ಲಾ ವಿಭಿನ್ನ ರಾಷ್ಟ್ರಗಳು ಬಾಹ್ಯಾಕಾಶದಲ್ಲಿ ಒಂದೇ ಯೋಜನೆಯ ಮೇಲೆ ಸದ್ಯ ಒಟ್ಟಿಗೇ ಕಾರ್ಯನಿರ್ವಹಿಸುತ್ತಿರುವುದನ್ನು ನೀವು ನೋಡುತ್ತಿದ್ದೀರ. ಈಗ ನಾವು ಮುಂದೆ ಹೋಗಿ ಅದನ್ನು ನಿಲ್ಲಿಸಿದಲ್ಲಿ [...] ಇದರಿಂದ ಒಟ್ಟಿಗೆ ಸೇರಿ ಮಾಡುತ್ತಿರುವ ಕಾರ್ಯವನ್ನು ನಿಲ್ಲಿಸಿದಂತಾಗುತ್ತದೆ. ಇದರಿಂದಾಗಿ US ಅನ್ನು ಬಾಹ್ಯಾಕಾಶ ಪರಿಶೋಧನೆಯ ನಾಯಕನೆಂದು ಪರಿಗಣಿಸುತ್ತಿದ್ದ ಪ್ರಪಂಚದಲ್ಲಿರುವ ವಿಭಿನ್ನ ರಾಷ್ಟ್ರಗಳು ಅದರ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತವೆ." ನಂತರ NASA ಅಧಿಕಾರಿಗಳು ISS ನ ಮುಂದಿನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮತ್ತು ಸಿಬ್ಬಂದಿ ಹೊಂದಿರುವ ಬಾಹ್ಯಾಕಾಶನೌಕೆಯ ಕಾರ್ಯಯೋಜನೆಗೆ ಸಂಬಂಧಿಸಿದಂತೆ 2010 ರ ಫೆಬ್ರವರಿ 1 ರಂದು ಒಬಮಾ ಆಡಳಿತದಿಂದ ದೃಢೀಕರಣ ಪಡೆದುಕೊಂಡರು,[೭][೧೨೮] ಇದರ ಜೊತೆಯಲ್ಲಿ ISS ನ ಪಾಲುದಾರರೊಂದಿಗೆ ಮಾತುಕತೆ ನಡೆಸಿ ನಿಲ್ದಾಣವು 2025 ಅಥವಾ 2028 ರ ವರೆಗೆ ಕಾರ್ಯಾಚರಣೆಯಲ್ಲಿ ಉಳಿಯಬೇಕೆಂಬುದನ್ನು ಸೂಚಿಸಿದರು.[೧೨೯][೧೩೦] ಈ ISS ನ ಅಂತರರಾಷ್ಟ್ರೀಯ ಪಾಲುದಾರರ ಮಲ್ಟಿಲ್ಯಾಟರಲ್ ಕೋಆರ್ಡಿನೇಷನ್ ಬೋರ್ಡ್ (MCB), 2010 ರ ಸೆಪ್ಟೆಂಬರ್ 21 ರಂದು ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ , ಜಪಾನಿಯರ ಮತ್ತು ರಷ್ಯಾದ ಸರ್ಕಾರಗಳು 2020ರ ವರೆಗೆ ಕಾರ್ಯಾಚರಣೆಯನ್ನು ಮುಂದುವರೆಸಲು ಅಂಗೀಕರಿಸಿವೆ ಎಂಬುದನ್ನು ತಿಳಿದುಕೊಂಡಿತು. ಕೆನಡಿಯನ್ ಸ್ಪೇಸ್ ಏಜೆನ್ಸಿ (CSA) ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ (ESA) ಗಳು 2016 ರ ಆಚೆಗೆ ಕಾರ್ಯಾಚರಣೆಯನ್ನು ಮುಂದುವರೆಸುವುದರ ಬಗ್ಗೆ ಬಹುಮತ ಸಾಧಿಸಲು ಅವುಗಳ ಸರ್ಕಾರಗಳೊಂದಿಗೆ ಕಾರ್ಯನಿರ್ವಹಿಸುತ್ತಿವೆ. ಇದೇ ಸಮಯದಲ್ಲಿ NASA ವಿಸ್ತರಿಸಲಾದ ಯೋಜನೆಗಳ ಮೇಲೆ US ಕಾಂಗ್ರೆಸ್ ನೊಂದಿಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ.[೧೩೧] ಹೀಗಾಗಿ NASA ISS ಅನ್ನು ಡಿಆರ್ಬಿಟ್ ಮಾಡುವ ಹೊಣೆಗಾರಿಕೆ ಹೊಂದಿದೆ. ಜ್ವೆಜ್ದ ಸ್ಟೇಷನ್ ಕೀಪಿಂಗ್ ಗಾಗಿ(ನಿಲ್ದಾಣ ನಿರ್ವಹಣೆ) ಬಳಸುವ ನೋದನ ವ್ಯವಸ್ಥೆಯನ್ನು ಹೊಂದಿದ್ದರೂ ಕೂಡ ಡಿಆರ್ಬಿಟ್ ಅನ್ನು ನಿಯಂತ್ರಿಸಲು ಸಾಕಾಗುವಷ್ಟು ಪ್ರಬಲವಾಗಿಲ್ಲ. ISS ನ ಡಿಆರ್ಬಿಟ್ ಅನ್ನು ನಿಯಂತ್ರಿಸುವ ಆಯ್ಕೆಗಳು, ಮಾರ್ಪಡಿಸಲಾದ ಯುರೋಪಿಯನ್ ATV ಯ ಬಳಕೆಯನ್ನು, ಅಥವಾ ವಿಶೇಷವಾಗಿ ನಿರ್ಮಿಸಲಾದ ಡಿಆರ್ಬಿಟ್ ವಾಹನವನ್ನು ಒಳಗೊಂಡಿವೆ.[೧೩೨][೧೩೩] 2009 ರ ವರದಿಯ ಪ್ರಕಾರ, RKK ಎನರ್ಜಿಯ, ನಿಲ್ದಾಣದ ಕಾರ್ಯಾಚರಣೆಯು ಮುಗಿಯಲು ಬಂದಾಗ ನಿಲ್ದಾಣದ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ ನ ಕೆಲವು ಘಟಕಗಳನ್ನು ತೆಗೆದುಹಾಕುವ ವಿಧಾನಗಳನ್ನು ಪರಿಗಣಿಸುತ್ತದೆ. ಅಲ್ಲದೇ ಈ ಘಟಕಗಳನ್ನು ಆರ್ಬಿಟಲ್ ಪೈಲಾಟೆಡ್ ಅಸೆಂಬ್ಲಿ ಅಂಡ್ ಎಕ್ಸ್ ಪಿರಿಮೆಂಟ್ ಕಾಂಮ್ಲೆಕ್ಸ್ ಎಂದು ಕರೆಯಲಾಗುವ ಹೊಸ ನಿಲ್ದಾಣದ ಆಧಾರವಾಗಿ ಬಳಸಬಹುದಾಗಿದೆ. ಪ್ರಸ್ತುತದಲ್ಲಿ ISS ನಿಂದ ತೆಗೆದುಹಾಕಬೇಕೆಂದಿರುವ ಘಟಕಗಳು ಕೆಳಕಂಡಂತಿವೆ: ವಿವಿಧೋದ್ದೇಶ ಪ್ರಯೋಗಾಲಯ ಘಟಕ(ಮಲ್ಟಿ ಪರ್ಪಸ್ ಲ್ಯಾಬೋರೇಟರಿ ಮಾಡ್ಯೂಲ್) (MLM), ಇದನ್ನು 2011 ರ ಕೊನೆಯಲ್ಲಿ ಇತರ ರಷ್ಯನ್ ಘಟಕಗಳೊಂದಿಗೆ ಉಡಾವಣೆಗೆ ನಿರ್ಧರಿಸಲಾಗಿದೆ. ಪ್ರಸ್ತುತದಲ್ಲಿ ಈ ಘಟಕಗಳನ್ನು 2015 ರ ವರೆಗೆ MLM ನೊಂದಿಗೆ ಸೇರಿಸಲು ಯೋಜನೆ ಮಾಡಲಾಗುತ್ತಿದ್ದರೂ ಕೂಡ ಇನ್ನೂ ಬಂಡವಾಳ ಒದಗಿಲ್ಲ. ನಿಲ್ದಾಣಕ್ಕೆ ಜೋಡಿಸಲಾಗಿರುವ MLM ಅಥವಾ ಯಾವುದೇ ಇತರ ಅಧಿಕ ಘಟಕಗಳು 2016 ಅಥವಾ 2020ರಲ್ಲಿ ಅವುಗಳ ಜೀವಿತಾವಧಿಯ ಕೊನೆಯನ್ನು ಮುಟ್ಟುತ್ತವೆ. ಈ ವರದಿಯು ರಷ್ಯಾದ ಅನಾಮಿಕ ಎಂಜಿನಿಯರ್ ಒಬ್ಬರ ಹೇಳಿಕೆಯನ್ನು ಒಳಗೊಂಡಿದೆ. ಇವರು ಮಿರ್ ನ ಅನುಭವದ ಆಧಾರದ ಮೇಲೆ ಸೂಕ್ಷ್ಮ ಉಲ್ಕಾಶಿಲೆಗಳ ನಷ್ಟವನ್ನು ಹೊರತುಪಡಿಸಿ ಇದು ಮೂವತ್ತು ವರ್ಷಗಳ ಕಾಲ ಜೀವಿಸಬಲ್ಲದು ಎಂದು ನಂಬುತ್ತಾರೆ. ಏಕೆಂದರೆ ರಷ್ಯನ್ ಘಟಕಗಳನ್ನು ಕಕ್ಷೆಯ ಮೇಲೆ ನವೀಕರಿಸಲು ಸಾಧ್ಯವಾಗುವಂತೆಯೇ ನಿರ್ಮಿಸಲಾಗಿದೆ.[೧೩೪]
ಇಲ್ಲಿ ISSನೊಳಗೆ ಕೋಆರ್ಡಿನೇಟೆಡ್ ಯುನಿವರ್ಸಲ್ ಟೈಮ್ (UTC) ಕಾಲಾಮಾನ ವಲಯವನ್ನು ಬಳಸಲಾಗುತ್ತದೆ. ಕತ್ತಲೆಯಂತಹ ಅನುಭವವನ್ನು ನೀಡುವುದಕ್ಕಾಗಿ ರಾತ್ರಿಯ ಈ ನಿಲ್ದಾಣವು ದಿನಕ್ಕೆ 16 ಸೂರ್ಯೋದಯ ಮತ್ತು ಸೂರ್ಯಾಸ್ತಮವನ್ನು ನೋಡುತ್ತದೆ. ಬಾನಗಾಡಿಯ ನಿಯೋಗವನ್ನು ಭೇಟಿಮಾಡುವ ಸಂದರ್ಭದಲ್ಲಿ ISS ಸಿಬ್ಬಂದಿ ಬಹುಶಃ ಬಾನಗಾಡಿಯ ಮಿಶನ್ ಎಲ್ಯಾಪ್ಸಡ್ ಟೈಮ್ (MET) ಅನ್ನು ಅನುಸರಿಸಬಹುದು. ಇದು ಹೊಂದಿಕೊಳ್ಳುವ ಕಾಲಮಾನ ವಲಯವಾಗಿದ್ದು, ಬಾನಗಾಡಿ ನಿಯೋಗದ ಉಡಾವಣೆಯ ಸಮಯವನ್ನು ಆಧರಿಸಿದೆ.[೧೩೫][೧೩೬] UTC ಮತ್ತು METಯ ನಡುವಿನ ಕಾಲಮಾನವು ಸಾಮಾನ್ಯವಾಗಿ ಭಿನ್ನವಾಗಿರುವುದರಿಂದ ISS ನ ಸಿಬ್ಬಂದಿ ನಿದ್ರಿಸುವ ವಿಧಾನದ ಕ್ರಮವನ್ನು ಸಾಮಾನ್ಯವಾಗಿ ಹೊಂದಿಸಿಕೊಳ್ಳಬೇಕಾಗುತ್ತದೆ. ಅವರು ಸ್ಲೀಪ್ ಶಿಫ್ಟಿಂಗ್ ಎಂದು ಕರೆಯಲಾಗುವ ಅಭ್ಯಾಸದಲ್ಲಿ ಬಾನಗಾಡಿಯು ಬರುವ ಮೊದಲು ಮತ್ತು ಹೋದನಂತರ ಒಂದು ಕಾಲಮಾನದಿಂದ ಮತ್ತೊಂದು ಕಾಲಮಾನಕ್ಕೆ ಬದಲಾಯಿಸಿಕೊಳ್ಳಬೇಕು.[೧೩೭] ಸಾಮಾನ್ಯವಾಗಿ 06:00 ಗಂಟೆಗೆ ಎಚ್ಚರವಾಗುವುದರೊಂದಿಗೆ ಸಿಬ್ಬಂದಿಯ ದಿನ ಪ್ರಾರಂಭವಾಗುತ್ತದೆ. ಅನಂತರ ವಿಶ್ರಾಂತಿ-ನಿದ್ರೆಯ ನಂತರದ ಕಾರ್ಯಗಳನ್ನು ಮುಗಿಸಲಾಗುತ್ತದೆ, ಹಾಗು ನಿಲ್ದಾಣದ ಮುಂಜಾವಿನ ಪರಿವೀಕ್ಷಣೆ ಮಾಡಲಾಗುತ್ತದೆ. ಅನಂತರ ಸಿಬ್ಬಂದಿ ತಮ್ಮ ಬೆಳಗಿನ ಉಪಹಾರ ಮುಗಿಸಿ, ಸುಮಾರು 08:10ರಿಂದ ಅವರ ಕೆಲಸವನ್ನು ಪ್ರಾರಂಭಿಸುವ ಮೊದಲು, ಗಗನಯಾತ್ರೆ ಉದ್ದೇಶದ ನಿಯಂತ್ರಣದೊಂದಿಗೆ ನಡೆಸುವ ದಿನನಿತ್ಯದ ಯೋಜನೆ-ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸಮಾಲೋಚನೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಿಬ್ಬಂದಿ 13:05 ರ ವರೆಗೆ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ ನಂತರ ನಿಗದಿಪಡಿಸಲಾದ ದಿನದ ಮೊದಲನೆಯ ವ್ಯಾಯಾಮ-ಅಭ್ಯಾಸ ಮಾಡುತ್ತಾರೆ. ಒಂದು ಘಂಟೆಯ ಊಟದ ವಿರಾಮದ ನಂತರ ಮಧ್ಯಾಹ್ನ ಇನ್ನೂ ಅಧಿಕ ಕೆಲಸಗಳನ್ನು ಮತ್ತು ವ್ಯಾಯಾಮಗಳನ್ನು ಮಾಡಲಾಗುತ್ತದೆ. ಈ ಕೆಲಸಗಳನ್ನು ರಾತ್ರಿಯ ಊಟ ಮತ್ತು ಸಿಬ್ಬಂದಿಯ ಸಮಾಲೋಚನೆಯನ್ನು ಒಳಗೊಂಡಂತೆ, 19:30 ರಿಂದ ಪ್ರಾರಂಭವಾಗುವ ಸಿಬ್ಬಂದಿಯ ನಿದ್ರಾಪೂರ್ವ ಚಟುವಟಿಕೆಗಳನ್ನು ಆರಂಭಿಸುವ ಮೊದಲು ಮಾಡಲಾಗುತ್ತದೆ. ನಿಗದಿತ ನಿದ್ರಾಸಮಯವು 21:30 ರಿಂದ ಪ್ರಾರಂಭವಾಗುತ್ತದೆ. ಸಾಧಾರಣವಾಗಿ ಸಿಬ್ಬಂದಿ ವಾರದ ದಿನದಲ್ಲಿ ದಿನಕ್ಕೆ 10 ಘಂಟೆಗಳ ಕಾಲ ಮತ್ತು ಶನಿವಾರದ ದಿನಗಳಂದು 5 ಘಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದರೊಂದಿಗೆ ಉಳಿದ ಸಮಯದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ, ಆಟವಾಡುತ್ತಾರೆ ಮತ್ತು ಕೆಲಸದಲ್ಲಿ ಭಾಗಿಯಾಗುತ್ತಾರೆ.[೧೩೮]
ಗಗನಯಾತ್ರೆಯ ಕಾಯಂ ಸಿಬ್ಬಂದಿ ಸದಸ್ಯರಿಗೆ ನಿಲ್ದಾಣವು ಸಿಬ್ಬಂದಿ ಕ್ವಾಟರ್ಸ್(ನಿವಾಸ) ಗಳನ್ನು ಒದಗಿಸುತ್ತದೆ. ಇದರೊಂದಿಗೆ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ ನಲ್ಲಿ ಎರಡು 'ನಿದ್ರಾ ನಿಲ್ದಾಣಗಳನ್ನು' ಮತ್ತು ಟ್ರ್ಯಾಂಕ್ವಾಲಿಟಿ ಯನ್ನು ಅಳವಡಿಸುವ ಮೂಲಕ ಇನ್ನೂ ಅಧಿಕ ನಾಲ್ಕು ನಿಲ್ದಾಣಗಳನ್ನು ಒದಗಿಸುತ್ತದೆ. ಇದು ಪ್ರಸ್ತುತದಲ್ಲಿ USOS ನ ಸುತ್ತಮುತ್ತಲೂ ವ್ಯಾಪಿಸಿದೆ. ಅಮೇರಿಕದ ಕ್ವಾಟರ್ಸ್ ಗಳು(ವಿವಾಸಗಳು) ಖಾಸಗೀಯಾಗಿದ್ದು, ಸರಿಸುಮಾರು ವ್ಯಕ್ತಿಯ ಗಾತ್ರದಷ್ಟಿರುವ ಶಬ್ದರೋಧಕ ಬೂತ್ (ಪ್ರತ್ಯೇಕ ಜಾಗ)ಗಳಂತಿರುತ್ತವೆ. ಸಿಬ್ಬಂದಿ ಸದಸ್ಯ ಅವುಗಳೊಳಗಿರುವ ಹಗ್ಗದಂತಹ ನಿದ್ರಾ ಬ್ಯಾಗ್ (ಚೀಲ) ನಲ್ಲಿ ಮಲಗಬಹುದು. ಜೊತೆಯಲ್ಲಿ ಸಂಗೀತವನ್ನೂ ಆಲಿಸಬಹುದು, ಲ್ಯಾಪ್ ಟಾಪ್ ಅನ್ನು ಬಳಸಬಹುದು. ಅಲ್ಲದೇ ದೊಡ್ಡದಾದ ಡ್ರಾಯರ್ ಅಥವಾ ಘಟಕದ ಗೋಡೆಗಳಿಗೆ ಕಟ್ಟಲಾಗಿರುವ ಬಲೆಗಳಲ್ಲಿ ವೈಯಕ್ತಿಕವಾಗಿ ತಮಗೆ ಅಗತ್ಯವಿರುವ ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳಬಹುದು. ಈ ಘಟಕವು ಓದುವ ದೀಪ, ಷೆಲ್ಫ್ ಮತ್ತು ಡೆಸ್ಕ್ ಟಾಪ್ ಅನ್ನು ಕೂಡ ಒದಗಿಸುತ್ತದೆ.[೧೩೯][೧೪೦][೧೪೧] ಭೇಟಿನೀಡುವ ಸಿಬ್ಬಂದಿಗೆ ನಿದ್ರಿಸುವ ಘಟಕಗಳನ್ನು ನೀಡಲಾಗುವುದಿಲ್ಲ. ಆದರೆ ಗೋಡೆಯ ಮೇಲೆ ಜಾಗವಿರುವಷ್ಟು ಸ್ಥಳದಲ್ಲಿಯೇ ನಿದ್ರಿಸುವ ಚೀಲವನ್ನು ಕಟ್ಟಲಾಗಿರುತ್ತದೆ. ನಿಲ್ದಾಣದ ಮೂಲಕ ಮುಕ್ತವಾಗಿ ತೇಲಾಡುತ್ತ ಮಲಗಬಹುದು. ಆದರೆ ಯಾವುದಾದರೂ ಸೂಕ್ಷ್ಮ ಸಲಕರಣೆಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇರುವುದರಿಂದ, ಸಾಮಾನ್ಯವಾಗಿ ಹೀಗೆ ಮಲಗಲು ಅವಕಾಶ ನೀಡುವುದಿಲ್ಲ.[೧೪೨] ಸಿಬ್ಬಂದಿ ಸದಸ್ಯರು ಇರುವ ಸ್ಥಳದಲ್ಲಿ ಗಾಳಿ ಬೆಳಕು ಚೆನ್ನಾಗಿ ಬರುವಂತಿರಬೇಕು; ಇಲ್ಲವಾದಲ್ಲಿ ಗಗನಯಾತ್ರಿಗಳು ಆಮ್ಲಜನಕದ ಕೊರತೆಯನ್ನು ಅನುಭವಿಸಬೇಕಾಗುತ್ತದೆ ಜೊತೆಗೆ ಉಸಿರಾಟದ ಹವೆಗಾಗಿ ಕಷ್ಟಪಡಬೇಕಾಗುತ್ತದೆ. ಏಕೆಂದರೆ ಅವರು ಉಸಿರಿನ ಮೂಲಕ ಹೊರಹಾಕಿದ ಇಂಗಾಲದ ಡೈ ಆಕ್ಸೈಡ್ ನ ಗುಳ್ಳೆಗಳು ಅವರ ತಲೆಯ ಸುತ್ತಲೇ ಉಳಿದುಕೊಳ್ಳುತ್ತವೆ.[೧೪೧]
ಆದರೆ ISS ಸ್ನಾನದ ವ್ಯವಸ್ಥೆಯನ್ನು ಒಳಗೊಂಡಿಲ್ಲ. ಆದರೂ ಈ ವ್ಯವಸ್ಥೆಯನ್ನು ಹ್ಯಬಿಟೇಷನ್ ಘಟಕ ದ(ನಿವಾಸ)ಸ್ಥಳವನ್ನೇ ಬಳಸಲು ಯೋಜಿಸಲಾಗಿತ್ತು. ಆದರೆ ಈ ಘಟಕವನ್ನು ಸದ್ಯ ರದ್ದುಪಡಿಸಲಾಗಿದೆ. ಇದರ ಬದಲಿಗೆ, ಸಿಬ್ಬಂದಿ ಸದಸ್ಯರುಗಳು ವಾಟರ್ ಜೆಟ್, ವೆಟ್ ಪೈಪ್ ಗಳನ್ನು ಮತ್ತು ಟೂತ್ ಪೇಸ್ಟ್ ಟ್ಯೂಬ್ ನಂತಹ ಧಾರಕದಿಂದ ಹೊರಬರುವ ಸೋಪ್ ಅನ್ನು ಬಳಸುತ್ತಾರೆ. ನೀರನ್ನು ಉಳಿಸಲು ಸಿಬ್ಬಂದಿಗಳಿಗೆ ರಿನ್ಸ್ ಲೆಸ್ (ನೀರನ್ನು ಬಳಸದೆ ಇರುವ) ಶ್ಯಾಂಪುವನ್ನು ಮತ್ತು ಖಾದ್ಯ ಮೂಲದ ಟೂತ್ ಪೇಸ್ಟ್ ಅನ್ನು ಕೂಡ ಒದಗಿಸಲಾಗುತ್ತದೆ.[೧೪೨] ಆದರೂ ISS ನಲ್ಲಿ ಎರಡು ಸ್ಪೇಸ್ ಟಾಯ್ಲೆಟ್(ಬಾಹ್ಯಾಕಾಶ ಶೌಚಾಲಯ)ಗಳಿವೆ. ಈ ಎರಡು ಶೌಚಾಲಯಗಳು ರಷ್ಯನ್ ವಿನ್ಯಾಸದಲ್ಲಿದ್ದು, ಜ್ವೆಜ್ದ ಮತ್ತು ಟ್ರ್ಯಾಂಕ್ವಾಲಿಟಿ ಯಲ್ಲಿವೆ.[೧೩೯] ಈ ತ್ಯಾಜ್ಯ ಮತ್ತು ನೈರ್ಮಲ್ಯ ವಿಭಾಗಗಳು ಗಾಳಿಯನ್ನು ಹೀರಿಕೊಳ್ಳುವ ವ್ಯವಸ್ಥೆಯನ್ನು ಬಳಸುತ್ತವೆ. ಈ ವ್ಯವಸ್ಥೆಯು ಬಾಹ್ಯಾಕಾಶ ಬಾನಗಾಡಿ ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಗೆ ಪೂರಕ ಸದೃಶವಾಗಿದೆ. ಗಗನಯಾತ್ರಿಗಳು, ಸರಿಯಾಗಿ ಮುಚ್ಚುವುದಕ್ಕಾಗಿ ಸ್ಪ್ರಿಂಗ್ ಅನ್ನು ಹಾಕಿ ತಡೆ ಸರಳುಗಳಿಂದ ಸಿದ್ಧಪಡಿಸಲಾದ, ಶೌಚಾಯಲದ ಆಸನವನ್ನು ಭದ್ರವಾಗಿ ಹಿಡಿದುಕೊಂಡು ಕುಳಿತುಕೊಳ್ಳಬೇಕು.[೧೪೧] ಈ ಮೀಟುಗೋಲು, ಫ್ಯಾನ್ ಅನ್ನು ಜೋರಾಗಿ ತಿರುಗುವಂತೆ ಮಾಡುತ್ತದೆ. ಇದರಿಂದಾಗಿ ತ್ಯಾಜ್ಯವನ್ನು ಸರಾಗವಾಗಿ ಜಾರಿಸುವ ಚೂಷಣ(ಹೀರಿಕೊಳ್ಳುವ) ಕುಳಿಯು ತೆರೆದುಕೊಳ್ಳುತ್ತದೆ: ವಾಯು ತೊರೆಯು ತ್ಯಾಜ್ಯವನ್ನು ದೂರಕೊಂಡೊಯ್ಯುತ್ತದೆ. ಘನಸ್ಥಿತಿಯಲ್ಲಿರುವ ತ್ಯಾಜ್ಯವನ್ನು ವೈಯಕ್ತಿಕ ಚೀಲದಲ್ಲಿ ಸಂಗ್ರಹಿಸಿಡಲಾಗುತ್ತದೆ. ಇವುಗಳನ್ನು ಅಲ್ಯೂಮಿನಿಯಂ ಧಾರಕದಲ್ಲಿ ಶೇಖರಿಸಿಡಲಾಗುತ್ತದೆ. ತ್ಯಾಜ್ಯವನ್ನು ಹೊರಹಾಕಲು ಇಡೀ ಧಾರಕಗಳನ್ನು ಪ್ರೋಗ್ರೆಸ್ ಬಾಹ್ಯಾಕಾಶನೌಕೆಗೆ ವರ್ಗಾಯಿಸಲಾಗುತ್ತದೆ.[೧೩೯][೧೪೩] ದ್ರವರೂಪದಲ್ಲಿರುವ ತ್ಯಾಜ್ಯಗಳನ್ನು ಶೌಚಾಲಯದ ಮುಂದಿನ ಭಾಗಕ್ಕೆ ಜೋಡಿಸಲಾಗಿರುವ ಮೆತು ನೀರ್ಕೊಳವಿಯು (ಹೋಸ್), ಟೂಬ್ ಗೆ ಜೋಡಿಸಲಾದ “ಮೂತ್ರ ಲಾಳಿಕೆ ಸಂಯೋಜಕ” ದೊಂದಿಗೆ ವಿಸರ್ಜಿಸುತ್ತದೆ. ಇದು ಅಂಗರಚನೆಗೆ ತಕ್ಕಂತೆ ಮಾರ್ಪಾಡಾಗುವುದರಿಂದ ಒಂದೇ ಶೌಚಾಲಯವನ್ನು ಮಹಿಳೆ ಮತ್ತು ಪುರುಷ ಇಬ್ಬರೂ ಬಳಸಬಹುದು. ಸಂಗ್ರಹಿಸಿದ ತ್ಯಾಜ್ಯ ಮತ್ತು ನೀರನ್ನು ಪುನಃ ಪಡೆಯುವ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ. ಇಲ್ಲಿ ಇದು ಕುಡಿಯುವ ನೀರಾಗಿ ಪುನಃ ಪರಿವರ್ತಿಸಲ್ಪಡುತ್ತದೆ.[೧೪೦]
ನಿಲ್ದಾಣದ ಸಿಬ್ಬಂದಿ ಸೇವಿಸುವ ಬಹುಪಾಲು ಆಹಾರವನ್ನು ಶೀತ ವಾತಾವರಣದಲ್ಲಿ, ಶೀತಕದಲ್ಲಿ ಅಥವಾ ಡಬ್ಬದಲ್ಲಿ ಹಾಕಿಟ್ಟು ಸಂರಕ್ಷಿಸಲಾಗುತ್ತದೆ. ಗಗನಯಾತ್ರಿಗಳ ವಿಮಾನವು ನಿಲ್ದಾಣಕ್ಕೆ ಹೋಗುವ ಮೊದಲು ಆಹಾರ ಶಾಸ್ತ್ರಜ್ಞರ ಸಹಾಯದೊಂದಿಗೆ ಗಗನಯಾತ್ರಿಗಳು ಆಹಾರಸೂಚಿಯನ್ನು ತಯಾರಿಸುತ್ತಾರೆ.[೧೪೦] ದ್ರವ ಪದಾರ್ಥವು ತಲೆಗೆ ಇಳಿಯಬಹುದಾದ್ದರಿಂದ ಕಕ್ಷೆಯಲ್ಲಿ ಆಹಾರದ ರುಚಿಯನ್ನು ಸ್ವಲ್ಪ ತಗ್ಗಿಸಲಾಗಿರುತ್ತದೆ. ಮಸಾಲೆ ಹಾಕಿದಂತಹ ಆಹಾರವು ಅನೇಕ ಸಿಬ್ಬಂದಿಗಳ ಅಚ್ಚುಮೆಚ್ಚಿನ ಆಹಾರವಾಗಿರುತ್ತದೆ.[೧೪೧] ಪ್ರತಿ ಸಿಬ್ಬಂದಿ ಸದಸ್ಯರು ಅವರದೇ ಆದ ವೈಯಕ್ತಿಕ ಆಹಾರ ಪೊಟ್ಟಣ ಹೊಂದಿರುತ್ತಾರೆ. ಅಲ್ಲದೇ ಅವುಗಳನ್ನು ಅಲ್ಲಿನ ಅಡುಗೆ ಮನೆಯಲ್ಲಿ ಬೇಯಿಸುತ್ತಾರೆ. ಈ ಅಡುಗೆಮನೆಯು ಆಹಾರಕ್ಕೆ ಶಾಖ ಒದಗಿಸುವ ಎರಡು ಸಾಧನಗಳನ್ನು, ರೆಫ್ರಿಜಿರೇಟರ್(ಶೀತಕ), ಬಿಸಿನೀರು ಮತ್ತು ತಣ್ಣೀರು ಎರಡನ್ನು ಒದಗಿಸುವ, ಜಲವಿತರಕ ಸಾಧನವನ್ನು ಒಳಗೊಂಡಿದೆ.[೧೩೯] ಪಾನೀಯಗಳನ್ನು ನಿರ್ಜಲೀಕರಿಸಲಾದ ಪುಡಿಯ ರೂಪದಲ್ಲಿ ಒದಗಿಸಲಾಗುತ್ತದೆ. ಅಲ್ಲದೇ ಬಳಸುವ ಮೊದಲು ಇವುಗಳನ್ನು ನೀರಿನೊಂದಿಗೆ ಬೆರೆಸಿ ಉಪಯೋಗಿಸಲಾಗುತ್ತದೆ.[೧೩೯][೧೪೦] ಪಾನೀಯಗಳನ್ನು ಮತ್ತು ಸೂಪ್ ಗಳನ್ನು ಸ್ಟ್ರಾಗಳ ಬಳಸಿ ಪ್ಲ್ಯಾಸ್ಟಿಕ್ ಚೀಲದಿಂದ ಸೇವಿಸಲಾಗುತ್ತದೆ (ಹೀರಿಕೊಳ್ಳಲಾಗುತ್ತದೆ). ಅಲ್ಲದೇ ಘನರೂಪದಲ್ಲಿರುವ ಆಹಾರವನ್ನು ಚಾಕುವಿನಿಂದ ಮತ್ತು ಫೋರ್ಕ್(ಮುಳ್ಳುಚಮಚ) ನಿಂದ ತಿನ್ನಲಾಗುತ್ತದೆ. ಇವುಗಳನ್ನು ತೇಲಿಹೋಗದಂತೆ ಅಯಸ್ಕಾಂತಗಳೊಂದಿಗೆ ತಟ್ಟೆಯಲ್ಲಿ ಜೋಡಿಸಲಾಗಿರುತ್ತದೆ. ಆಹಾರದ ಸಣ್ಣ ಚೂರುಗಳನ್ನು ಒಳಗೊಂಡಂತೆ ತೇಲಿಹೋಗುವ ಯಾವುದೇ ಆಹಾರವನ್ನಾದರೂ ಸಂಗ್ರಹಿಸಲೇಬೇಕು. ಏಕೆಂದರೆ ನಿಲ್ದಾಣದ ವಾಯು ಶೋಧಕಕ್ಕೆ ಮತ್ತು ಇತರ ಸಲಕರಣೆಗಳಿಗೆ ಇವು ತಡೆಯುಂಟು ಮಾಡಬಹುದು. ಆದ್ದರಿಂದ ಇದನ್ನು ತಡೆಗಟ್ಟಲು ಇವುಗಳನ್ನು ಸಂಗ್ರಹಿಸಬೇಕಾಗುತ್ತದೆ.[೧೪೦]
ದೀರ್ಘಕಾಲದ ವರೆಗೆ ಹಗುರವಾಗಿರುವಿಕೆಯ ಅತ್ಯಂತ ಪ್ರಮುಖ ಪ್ರತಿಕೂಲ ಪರಿಣಾಮಗಳೆಂದರೆ: ಸ್ನಾಯು ಕ್ಷೀಣತೆ ಮತ್ತು ಅಸ್ಥಿಪಂಜರ ಕ್ಷೀಣತೆ ಅಥವಾ ಸ್ಪೇಸ್ ಫ್ಲೈಟ್ ಆಸ್ಟಿಯೊಪೇನಿಯ (ಬಾಹ್ಯಾಕಾಶ ವಿಮಾನದಲ್ಲಿರುವ ಸಂದರ್ಭದಲ್ಲಿ ಮೂಳೆಗಳು ಕ್ಷೀಣಿಸುವುದು). ಇತರ ಪರಿಣಾಮಗಳೆಂದರೆ: ಸ್ರವದ ಪುನರ್ವಿತರಣೆ, ರಕ್ತಪರಿಚಲನಾ ವ್ಯವಸ್ಥೆ ನಿಧಾನವಾಗುವುದು, ಕೆಂಪು ರಕ್ತ ಕಣಗಳ ಸಂಖ್ಯೆ ಕಡಿಮೆಯಾಗುವುದು, ಅಸ್ವಸ್ಥಗೊಳ್ಳುವುದು, ಮತ್ತು ರೋಗ ಪ್ರತಿರಕ್ಷಿತ ವ್ಯವಸ್ಥೆ ದುರ್ಬಲಗೊಳ್ಳುವುದು. ಸಣ್ಣ ಪುಟ್ಟ ರೋಗಲಕ್ಷಣಗಳು ಕೆಳಕಂಡಂತಿವೆ: ದೇಹದ ತೂಕ ಕಡಿಮೆಯಾಗುವುದು, ಮೂಗಿನಲ್ಲಿ ರಕ್ತಸಂಚಯವಾಗುವುದು, ಮಲಗುವ ತೊಂದರೆಗಳು, ಕರಳು ಅಥವಾ ಜಠರದಲ್ಲಿ ಮಿತಿಮೀರಿ ವಾಯು ತುಂಬಿಕೊಳ್ಳುವುದು ಮತ್ತು ಮುಖದಲ್ಲಿ ಬೊಜ್ಜು ಕಾಣಿಸಿಕೊಳ್ಳುವುದು. ಈ ಪರಿಣಾಮಗಳು ಭೂಮಿಗೆ ಹಿಂದಿರುಗಿದ ಕೂಡಲೇ ವ್ಯತಿರಿಕ್ತವಾಗುತ್ತವೆ.[೩೪]
ಈ ಕೆಲವು ಶಾರೀರಿಕ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟಲು, ನಿಲ್ದಾಣವನ್ನು ಎರಡು ಟ್ರೆಡ್ ಮಿಲ್(ತುಳಿತದ ಯಂತ್ರ) ಗಳಿಂದ (COLBERT ಅನ್ನು ಒಳಗೊಂಡಂತೆ) ಸಿದ್ಧಪಡಿಸಲಾಗಿದೆ. aRED ( ಅಡ್ವಾನ್ಸ್ಡ್ ರೆಸಿಸ್ಟೀವ್ ಎಕ್ಸಸೈಸ್ ಡಿವೈಸ್) ಇದು ತೂಕ ಎತ್ತುವ ವಿವಿಧ ವ್ಯಾಯಾಮಗಳನ್ನು ಮಾಡಲು ಬೇಕಾದ ಅನುಕೂಲತೆಗಳನ್ನು ಮತ್ತು ಸ್ಟೇಷನರಿ ಬೈಸಿಕಲ್ (ಸ್ಥಿರ ಸೈಕಲ್ಲು) ಅನ್ನು ಒದಗಿಸುತ್ತದೆ; ಪ್ರತಿಯೊಬ್ಬ ಗಗನಯಾತ್ರಿ ದಿನಕ್ಕೆ ಎರಡು ಘಂಟೆಗಳ ಕಾಲ ಈ ಸಾಧನಗಳ ಮೇಲೆ ವ್ಯಾಯಾಮ ಮಾಡುತ್ತಾರೆ.[೧೩೯][೧೪೧] ಗಗನಯಾತ್ರಿಗಳು ತಮ್ಮನ್ನು ಟ್ರೆಡ್ ಮಿಲ್(ತುಳಿತದ ಯಂತ್ರ) ಗೆ ಬಿಗಿದುಕೊಳ್ಳಲು ಬುಂಗೀ ಕಾರ್ಡ್ (ಹುರಿಗೊಳಿಸಿದ ಹಗ್ಗ)ಗಳನ್ನು ಬಳಸುತ್ತಾರೆ.[೧೪೪] ಗುರುತ್ವವಿಲ್ಲದೆ ದೀರ್ಘಕಾಲದ ವರೆಗೆ ಇರುವವರಲ್ಲಿ ಉಂಟಾಗುವ ಮೂಳೆ ಮತ್ತು ಸ್ನಾಯು ಕ್ಷೀಣತೆಗೆ ಹಾಗು ತೊಂದರೆಗಳಿಗೆ ವ್ಯಾಯಾಮವು ಉತ್ತಮ ಪ್ರತಿಕ್ರಮವಾಗಿದೆ ಎಂದು ಸಂಶೋಧಕರು ನಂಬಿದ್ದಾರೆ .[೧೪೫]
ನಿಲ್ದಾಣದ ಪ್ರತಿಯೊಬ್ಬ ಕಾಯಂ ಸದಸ್ಯ ಸಿಬ್ಬಂದಿಗೆ ಗಗನಯಾತ್ರೆಯ ಅನುಕ್ರಮ ಸಂಖ್ಯೆಯನ್ನು ನೀಡಲಾಗಿರುತ್ತದೆ. ಗಗನಯಾತ್ರೆಗಳನ್ನು ಸಾಮಾನ್ಯವಾಗಿ ಆರುತಿಂಗಳ ಕಾಲಾವಧಿಯವರೆಗೆ ಕೈಗೊಳ್ಳಲಾಗುತ್ತದೆ. ಅಲ್ಲದೇ ಒಂದು ಗಗನಯಾತ್ರೆಯ ಕಮಾಂಡರ್ ಮತ್ತೊಂದು ಗಗನಯಾತ್ರೆಯ ಕಮಾಂಡರ್ ಗೆ ನಿಲ್ದಾಣವನ್ನು ಅಧಿಕೃತವಾಗಿ ಒಪ್ಪಿಸಿದ ನಂತರ ಗಗನಯಾತ್ರೆಯನ್ನು ಪ್ರಾರಂಭಿಸಲಾಗುತ್ತದೆ. ಗಗನಯಾತ್ರೆ 1 ರಿಂದ 6 ರ ವರೆಗೆ ಕೈಗೊಳ್ಳಲಾದ ಗಗನಯಾತ್ರೆಗಳಲ್ಲಿ ಮೂರು ಜನರುಳ್ಳ ಸಿಬ್ಬಂದಿ ತಂಡವನ್ನು ನೇಮಿಸಲಾಗಿತ್ತು. ಆದರೆ ಕೊಲಂಬಿಯ ಅಪಘಾತದಿಂದಾಗಿ, ಗಗನಯಾತ್ರೆ 7 ರಿಂದ 12 ವರೆಗೆ ಸಿಬ್ಬಂದಿ ಸದಸ್ಯರ ಸಂಖ್ಯೆಯನ್ನು ಎರಡಕ್ಕಿಳಿಸಲಾಯಿತು. ಗಗನಯಾತ್ರೆ 13 ರಲ್ಲಿ ಮತ್ತೆ ಮೂರು ಜನ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಅಲ್ಲಿಂದ ನಿಲ್ದಾಣವು ಕಾಯಂ ಆಗಿ ಮೂರು ಜನ ಸಿಬ್ಬಂದಿಯನ್ನು ಹೊಂದುವಂತಾಯಿತು. ಕೇವಲ ಮೂರು ಜನ ಸಿಬ್ಬಂದಿ ಸದಸ್ಯರು ನಿಲ್ದಾಣದಲ್ಲಿ ಕಾಯಂ ಆಗಿ ಇರುವಾಗ, ಗಗನಯಾತ್ರೆ 16 ರಂತಹ ಅನೇಕ ಗಗನಯಾತ್ರೆಗಳು, ಆರು ಜನರ ವರೆಗೆ ಗಗನಯಾತ್ರಿಗಳನ್ನು ಅಥವಾ ಅಂತರಿಕ್ಷಯಾತ್ರಿಗಳನ್ನು ಒಳಗೊಂಡಿರುತ್ತವೆ. ಇವರು ನಿಲ್ದಾಣದಿಂದ ನಿಲ್ದಾಣಕ್ಕೆ ಪ್ರತ್ಯೇಕ ವಿಮಾನಗಳ ಮೂಲಕ ಹೋಗುತ್ತಾರೆ.[೧೪೬][೧೪೭] ಆಗ 2009 ರ ಮೇ 27 ರಂದು ಗಗನಯಾತ್ರೆ 20 ಅನ್ನು ಆರಂಭಿಸಲಾಯಿತು. ಗಗನಯಾತ್ರೆ 20, ಆರು ಜನ ಸಿಬ್ಬಂದಿಯನ್ನು ಒಳಗೊಂಡ ISS ನ ಮೊದಲ ಗಗನಯಾತ್ರೆಯಾಗಿದೆ. ವಾಸಸ್ಥಳವನ್ನು ಮತ್ತು ಸಾಮರ್ಥ್ಯವನ್ನು STS-115 ರ ಮೂಲಕ ಇನ್ನಷ್ಟು ವಿಸ್ತರಿಸುವ ಮೊದಲು, ನಿಲ್ದಾಣವು ಕೇವಲ ಮೂರು ಜನರ ಸಿಬ್ಬಂದಿ ವರ್ಗಕ್ಕೆ ಮಾತ್ರ ಆಶ್ರಯ ನೀಡಬಹುದಾಗಿತ್ತು. ಗಗನಯಾತ್ರೆ 20 ರ ಸಿಬ್ಬಂದಿಯನ್ನು ಎರಡು ಪ್ರತ್ಯೇಕ ಸೊಯುಜ್-TMA ವಿಮಾನಗಳ ಮೂಲಕ ನಿಲ್ದಾಣಕ್ಕೆ ಕಳುಹಿಸಲಾಯಿತು. ಇವುಗಳನ್ನು ಎರಡು ಬೇರೆ ಬೇರೆ ಸಮಯಗಳಲ್ಲಿ ಉಡಾವಣೆ ಮಾಡಲಾಯಿತು.(ಪ್ರತಿ ಸೊಯುಜ್-TMA ಕೇವಲ ಮೂರು ಜನರನ್ನು ಮಾತ್ರ ಇಟ್ಟುಕೊಳ್ಳಬಹುದಾಗಿತ್ತು): ಸೊಯುಜ್ TMA-14 ಅನ್ನು 2009 ರ ಮಾರ್ಚ್ 26 ರಂದು ಮತ್ತು ಸೊಯುಜ್ TMA-15 ಅನ್ನು 2009 ರ ಮೇ 27 ರಂದು ಉಡಾವಣೆ ಮಾಡಲಾಯಿತು. ಅದೇನೇ ಆದರೂ, ಆರು ಜನರ ಸಿಬ್ಬಂದಿ ವರ್ಗ ನಿಲ್ದಾಣದಲ್ಲಿ ಕಾಯಂ ಆಗಿ ಇಡೀ ವರ್ಷ ವಾಸವಿರಲಿಲ್ಲ. ಉದಾಹರಣೆಗೆ, ಗಗನಯಾತ್ರೆ 20 ರ ಸಿಬ್ಬಂದಿ (ರೋಮನ್ ರೋಮ್ಯಾನೆನ್ಕೊ, ಫ್ರ್ಯಾಂಕ್ ದೆ ವೈನ್ ಮತ್ತು ಬಾಬ್ ಥ್ರಿಸ್ಕ್) ಸುಮಾರು ಎರಡು ವಾರಗಳಿಗೆ 2009 ರ ನವೆಂಬರ್ ನಲ್ಲಿ ಭೂಮಿಗೆ ಮರಳಿದರು. ಈ ಸಂದರ್ಭದಲ್ಲಿ ಕೇವಲ ಇಬ್ಬರು ಸಿಬ್ಬಂದಿ ತಂಡದ ಸದಸ್ಯರು ಮಾತ್ರ (ಜೆಫ್ ವಿಲಿಯಮ್ಸ್ ಮತ್ತು ಮ್ಯಾಕ್ಸ್ ಸುರ್ಯೆವ್) ನಿಲ್ದಾಣದಲ್ಲಿದ್ದರು. ಡಿಸೆಂಬರ್ ನ ಪೂರ್ವಾರ್ಧದಲ್ಲಿ ಒಲೆಗ್ ಕೊಟೊವ್, ಟೈಮೊತಿ ಕ್ರೀಮರ್ ಮತ್ತು ಸೊಯಿಚಿ ನೊಗುಚಿ, ಸೊಯುಜ್ TMA-17 ರ ಮೇಲೆ ಆಗಮಿಸಿದಾಗ ಸಿಬ್ಬಂದಿ ಸಂಖ್ಯೆ ಐದಕ್ಕೇರಿತು. 2010ರ ಮಾರ್ಚ್ ನಲ್ಲಿ ವಿಲಿಯಮ್ಸ್ ಮತ್ತು ಸುರ್ಯೆವ್ ಅಲ್ಲಿಂದ ಮರಳಿದಾಗ ಸಿಬ್ಬಂದಿಗಳ ಸಂಖ್ಯೆ ಮೂರಕ್ಕಿಳಿಯಿತು. ಅಂತಿಮವಾಗಿ 2010 ರ ಏಪ್ರಿಲ್ ನಲ್ಲಿ ಸೊಯುಜ್ TMA-18 ರೊಂದಿಗೆ ಅಲೆಕ್ಸಾಂಡರ್ ಸ್ಕ್ವೋರ್ಟ್ಸೋವ್, ಮೈಕೆಲ್ ಕಾರ್ನಿಯೆನ್ಕೊ ಮತ್ತು ಟ್ರ್ಯಾಸಿ ಕ್ಯಾಲ್ಡ್ ವೆಲ್ ಡೈಸನ್ ರವರು ಆಗಮಿಸುವ ಮೂಲಕ ಆರು ಜನ ಸಿಬ್ಬಂದಿ ತಂಡ ಮರಳಿದಂತಾಯಿತು.[೧೪೬][೧೪೭] ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಬಾಹ್ಯಾಕಾಶ ವಿಮಾನಗಳ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಬಾರಿ ಬಾಹ್ಯಾಕಾಶ ನೌಕೆಗಳು ಸಂದರ್ಶಿಸಿದ ನಿಲ್ದಾಣವಾಗಿದೆ. As of 24 ನವೆಂಬರ್ 2009[update], ಅದುವರೆಗೆ 266 ಜನರು ಇಲ್ಲಿಗೆ ಭೇಟಿನೀಡಿದ್ದಾರೆ(ಬೇರೆ ಬೇರೆ 185 ಜನರು).[೯] ಮಿರ್ 137 ಸಂದರ್ಶಕರರನ್ನು ಹೊಂದಿದೆ (104 ವಿಭಿನ್ನ ಜನರು).[೧೬]
ನಾಲ್ಕು ವಿಭಿನ್ನ ಬಾಹ್ಯಾಕಾಶ ನಿಯೋಗಗಳ ಬಾಹ್ಯಾಕಾಶನೌಕೆಗಳು ISS ಗೆ ಭೇಟಿನೀಡುವ ಮೂಲಕ ಅನೇಕ ಉದ್ದೇಶಗಳನ್ನು ನೆರವೇರಿಸಿವೆ. ಯುರೋಪಿಯನ್ ಸ್ಪೇಸ್ ಏಜೆನ್ಸಿಯಿಂದ ಆಟೋಮೇಟೆಡ್ ಟ್ರಾನ್ಸ್ ಫರ್ ವೆಹಿಕಲ್ , ರಷ್ಯನ್ ರಾಸ್ಕಾಸ್ಮೊಸ್ ಪ್ರೋಗ್ರೆಸ್ ಬಾಹ್ಯಾಕಾಶನೌಕೆ ಮತ್ತು, ಜಪಾನ್ ಏರೋಸ್ಪೇಸ್ ಎಕ್ಸ್ ಪ್ಲೋರೇಷನ್ ಏಜೆನ್ಸಿಯಿಂದ HTV-II ನಿಲ್ದಾಣಕ್ಕೆ ಮರುಪೂರೈಕೆ ಸೇವೆಯನ್ನು ಸಲ್ಲಿಸಿವೆ. ಇದರ ಜೊತೆಯಲ್ಲಿ ರಷ್ಯಾ, ಸೊಯುಜ್ ಬಾಹ್ಯಾಕಾಶನೌಕೆಯನ್ನು ಸರಬರಾಜು ಮಾಡುತ್ತವೆ. ಇದನ್ನು ಸಿಬ್ಬಂದಿಯ ಪರಿಭ್ರಮಣಕ್ಕಾಗಿ ಮತ್ತು ಆರು ತಿಂಗಳಿಗೊಮ್ಮೆ ಬದಲಾಯಿಸುವ ತುರ್ತು ವಿಸರ್ಜನೆಗಾಗಿ ಬಳಸಲಾಗುತ್ತದೆ. ಅಂತಿಮವಾಗಿ, US ಅದರ ಬಾನಗಾಡಿ ಕಾರ್ಯಯೋಜನೆಯ ಮೂಲಕ ISS ಗೆ ಸೇವೆ ಸಲ್ಲಿಸುತ್ತಿದೆ. ಇದು ಮರುಪೂರೈಕೆ ಯಾತ್ರೆಗಳು, ಜೋಡಣೆಗಳು, ವ್ಯವಸ್ಥಾಪನ ವಿಮಾನಗಳು ಮತ್ತು ಸಿಬ್ಬಂದಿ ಪರಿಕ್ರಮಣಾ ಸೇವೆಯನ್ನು ಒದಗಿಸುತ್ತದೆ.As of 27 ನವೆಂಬರ್ 2009[update], ಈ ಕಾರ್ಯಯೋಜನೆಯು 20 ಸೊಯುಜ್, 35 ಪ್ರೋಗ್ರೆಸ್, 1 ATV, 1 HTV ಮತ್ತು 31 ಬಾನಗಾಡಿ ವಿಮಾನಗಳನ್ನು ನಿಲ್ದಾಣದ ಸೇವೆಗೆ ಬಳಸುತ್ತಿದೆ.[೧] ಗಗನಯಾತ್ರೆಗಳಿಗೆ ಸರಿಸುಮಾರು ಸರಾಸರಿ 2,722 kg(ಕೆ.ಜಿ) ಯ ಸರಬರಾಜಿನ ಅಗತ್ಯವಿರುತ್ತದೆ. ಅಲ್ಲದೇ as of 27 ನವೆಂಬರ್ 2009[update],ಸಿಬ್ಬಂದಿ ಸುಮಾರು ಒಟ್ಟು 19,000 ಬಾರಿ ಭೋಜನ ಸೇವಿಸಿದ್ದಾರೆ.[೧] ಸಿಬ್ಬಂದಿ ಪರಿಕ್ರಮಣ ಸೊಯುಜ್ ವಿಮಾನಗಳು ಮತ್ತು ಮರುಪೂರೈಕೆಯ ಪ್ರೋಗ್ರೆಸ್ ವಿಮಾನಗಳು, ಅನುಕ್ರಮವಾಗಿ ಪ್ರತಿವರ್ಷ ಎರಡು ಅಥವಾ ಮೂರು ಬಾರಿ ನಿಲ್ದಾಣಕ್ಕೆ ಭೇಟಿನೀಡುತ್ತವೆ.[೧೪೮] ಇದರೊಂದಿಗೆ ATV ಮತ್ತು HTV 2010 ವರ್ಷಕ್ಕೆ ಒಮ್ಮೆ ನಿಲ್ದಾಣವನ್ನು ಭೇಟಿಮಾಡಲು ಯೋಜಿಸಿವೆ. ಬಾನಗಾಡಿಯ ನಿವೃತ್ತಿಯ ನಂತರ ಅನೇಕ ಸಂಖ್ಯೆಯ ಇತರ ಬಾಹ್ಯಾಕಾಶನೌಕೆಗಳನ್ನು ನಿಲ್ದಾಣಕ್ಕೆ ಕಳುಹಿಸಲಾಗುತ್ತದೆ. ಎರಡು,ಆರ್ಬಿಟಲ್ ಸೈನ್ಸಸ್ ನ ಸೈಗನ್ಸ್ ಮತ್ತು ಸ್ಪೇಸ್ ಎಕ್ಸ್ ನ ಡ್ರ್ಯಾಗನ್ ಗಳನ್ನು, NASA ದ ಕಮರ್ಷಿಯಲ್ ಆರ್ಬಿಟಲ್ ಟ್ರಾನ್ಸ್ ಪೋರ್ಟೇಷನ್ ಸರ್ವೀಸ್ ಮತ್ತು ವಾಣಿಜ್ಯ ಮರುಪೂರೈಕೆ ಸೇವೆಯ ಒಪ್ಪಂದಗಳಡಿ ಕಳುಹಿಸಲಾಗುವುದು. ಇವು 2015 ರ ವರೆಗೆ ನಿಲ್ದಾಣಕ್ಕೆ ಕಾರ್ಗೊವನ್ನು(ಸರಕು) ಸರಬರಾಜು ಮಾಡುತ್ತವೆ.[೧೪೯][೧೫೦] ಇದರ ಜೊತೆಯಲ್ಲಿ ಬಾನಗಾಡಿಯ ಬದಲಿಗೆ ಒರಿಯನ್ ಬಾಹ್ಯಾಕಾಶನೌಕೆಯನ್ನು NASAದ ಕಾನ್ಸ್ಟಲೇಷನ್ ಪ್ರೋಗ್ರಾಂ ನ ಭಾಗವೆಂಬಂತೆ ಕಳುಹಿಸಲಾಯಿತು. ಇದನ್ನು ಅಧ್ಯಕ್ಷರಾದ ಬರಾಕ್ ಒಬಾಮ ರವರು 2010 ರ ಏಪ್ರಿಲ್ 15 ರಂದು ಪುನರ್ ಆರಂಭಿಸಿದರು. ಇದು ನಿಲ್ದಾಣಕ್ಕೆ ರಕ್ಷಾನೌಕೆಯ ಸೇವೆಯನ್ನು ಒದಗಿಸುತ್ತದೆ.[೧೫೧] US ನ 2011 ರ ಹಣಕಾಸು ವರ್ಷದ ಬಜೆಟ್ ನಲ್ಲಿ ಅನುದಾನ ರದ್ದು ಪಡಿಸುವವರೆಗೂ ಈ ಬಾಹ್ಯಾಕಾಶನೌಕೆಯನ್ನು ಹೊಂದಲಾಗುತ್ತದೆ.[೧೫೨] As of 17 ಡಿಸೆಂಬರ್ 2010[update], ಸದ್ಯ ಮೂರು ಬಾಹ್ಯಾಕಾಶನೌಕೆಗಳನ್ನು ISS ನೊಂದಿಗೆ ಸೇರಿಸಲಾಗಿದೆ:
ಬಾಹ್ಯಾಕಾಶನೌಕೆ | ಯಾತ್ರೆ(ಮಿಶನ್) | ಜೋಡಣಾ ಸ್ಥಳ | ಜೋಡಣೆ ದಿನಾಂಕ (UTC) | ಟಿಪ್ಪಣಿಗಳು |
---|---|---|---|---|
ಸೊಯುಜ್ TMA-01M | ಗಗನಯಾತ್ರೆ 25/ಗಗನಯಾತ್ರೆ 26 | ಪಾಯ್ಸಕ್ | 2010 ರ ಅಕ್ಟೋಬರ್ 10 00:01 | [೧೫೩] |
ಸೊಯುಜ್ TMA-20 | ಗಗನಯಾತ್ರೆ 26/ಗಗನಯಾತ್ರೆ 27 | ರಾಸ್ವೆಟ್ | 2010 ರ ಡಿಸೆಂಬರ್ 17 20:12 | [೧೫೪] |
ಪ್ರೋಗ್ರೆಸ್ M-07M | ISS ಪ್ರೋಗ್ರೆಸ್ 39 | ಜ್ವೆಜ್ದ | 2010 ರ ಸೆಪ್ಟೆಂಬರ್ 12 11:58 | [೧೫೫] |
ಪ್ರೋಗ್ರೆಸ್ M-08M | ISS ಪ್ರೋಗ್ರೆಸ್ 40 | ಪರ್ಸ್ | 2010 ರ ಅಕ್ಟೋಬರ್ 30 16:36 | [೧೫೬] |
ಪ್ರಪಂಚದಾದ್ಯಂತ ಇರುವ ISS ನ ಬಾಹ್ಯಾಕಾಶ ನಿಯೋಗಗಳು ನಿಯಂತ್ರಣಾ ಕೇಂದ್ರಗಳ ಮೂಲಕ, ಅದರ ಘಟಕಗಳನ್ನು ನೋಡಿಕೊಳ್ಳುತ್ತವೆ, ಮತ್ತು ನಿಯಂತ್ರಿಸುತ್ತವೆ. ಈ ಬಾಹ್ಯಾಕಾಶ ನಿಯೋಗಗಳು ಕೆಳಕಂಡಂತಿವೆ:
ನಿಲ್ದಾಣದ ನಿರ್ಮಾಣವನ್ನು ಪ್ರಾರಂಭಿಸಿದಾಗಿನಿಂದಲೂ ISS ಕಾರ್ಯಯೋಜನೆಯು, ಅನೇಕ ಪ್ರಮುಖ ಘಟನೆ, ಅನಿರೀಕ್ಷಿತ ಸಮಸ್ಯೆ ಮತ್ತು ವಿಫಲತೆಗಳನ್ನು ಎದುರಿಸಿದೆ. ಕೆಲಕಾಲದ ವರೆಗೆ ನಿಲ್ದಾಣದ ಸಾಮರ್ಥ್ಯ ಕುಗ್ಗಿತಲ್ಲದೇ, ಕೆಲವು ಸಂದರ್ಭದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಿಲ್ದಾಣವನ್ನು ಬಿಟ್ಟುಬಿಡಬೇಕಾಯಿತು. ಈ ಸಮಸ್ಯೆಗಳನ್ನು ಪರಿಹರಿಸದಿದ್ದಲ್ಲಿ ಈ ಘಟನೆಗಳು ನಿಲ್ದಾಣದ ಜೋಡಣಾ ಕಾಲಗಣನೆಯ ಮೇಲೆ ತಮ್ಮ ಪ್ರಭಾವ ಬೀರುತ್ತವೆ. 2003 ರ ಫೆಬ್ರವರಿ 1 ರಂದು(STS-107 ನ ಸಂದರ್ಭದಲ್ಲಿ) ಸಂಭವಿಸಿದ Space Shuttle Columbia ರ ದುರ್ಘಟನೆಯು ನಿಲ್ದಾಣದ ಕಾರ್ಯಾಚರಣೆಯ ಮೇಲೆ ಉಂಟಾದ ಮೊದಲ ತೊಡಕಾಗಿದೆ. ಇದರಿಂದಾಗಿ US ಬಾಹ್ಯಾಕಾಶ ಬಾನಗಾಡಿ ಕಾರ್ಯಯೋಜನೆಯನ್ನು ಎರಡುವರೆ ವರ್ಷಗಳ ಕಾಲ ರದ್ದುಮಾಡಲಾಯಿತು. ಇದರ ನಂತರ STS-114 ಅನ್ನು ಒಂದು ವರ್ಷಗಳ ಕಾಲ ರದ್ದುಪಡಿಸಲಾಯಿತು(ಏಕೆಂದರೆ ಇದು ಬಾನಗಾಡಿಯ ಬಾಹ್ಯ ಟ್ಯಾಂಕ್ ನ ಮೇಲೆ ನಿರಂತರವಾಗಿ ನೊರೆಯನ್ನು ಬೀಳಿಸುತ್ತಿತ್ತು). ಇದು ನಿಲ್ದಾಣದ ಜೋಡಣಾ ಯೋಜನೆಗಳಿಗೆ ತಾತ್ಕಾಲಿಕ ತಡೆಯೊಡ್ಡಿತು. ಅಲ್ಲದೇ ನಿಲ್ದಾಣದ ಕಾರ್ಯಾಚರಣೆಯ ಸಾಮರ್ಥ್ಯವನ್ನು ಕುಗ್ಗಿಸಿತು. ಇದಕ್ಕೆ ಕಾರಣ ವ್ಯವಸ್ಥಾಪನ ತಂತ್ರದ(ನೌಕಾಪಡೆಗೆ ಸರಬರಾಜು ಒದಗಿಸುವ ತಂತ್ರ) ಕೊರತೆ ಹಾಗು ಗಗನಯಾತ್ರೆ 7ರಿಂದ ಗಗನಯಾತ್ರೆ 12 ವರೆಗೆ ಕೇವಲ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಲಾಗಿತ್ತು.[೧೫೭] ಕೊಲಂಬಿಯ ದುರ್ಘಟನೆಯಿಂದಾಗಿ ನಿಲ್ದಾಣವು ಅನೇಕ ಕಿರು ತೊಂದರೆಗಳನ್ನು ಎದುರಿಸಬೇಕಾಯಿತು. 2004 ರಲ್ಲಿ USOS ನಿಂದ ವಾಯು ಸೊರುವಿಕೆ ಉಂಟಾಯಿತು,[೧೫೮] 2006 ರಲ್ಲಿ ಎಲೆಕ್ಟ್ರಾನ್ ಆಮ್ಲಜನಕ ಉತ್ಪಾದಕ ದಿಂದ ಹೊಗೆ ಹೊರಬರಲು ಶುರುವಾಯಿತು,[೧೫೯] ಅಲ್ಲದೇ STS-117 ಸಂದರ್ಭದಲ್ಲಿ 2007 ರಲ್ಲಿ ROS ನಲ್ಲಿದ್ದ ಕಂಪ್ಯೂಟರ್ ಗಳು ವಿಫಲವಾದವು. ಇದರಿಂದಾಗಿ ನಿಲ್ದಾಣಕ್ಕೆ ನೂಕುಕಾರಿ(ತ್ರಸ್ಟರ್), ಎಲೆಕ್ಟ್ರಾನ್ , ವಾಜ್ದುಕ್ ಮತ್ತು ಇತರ ಪರಿಸರ ನಿಯಂತ್ರಣ ವ್ಯವಸ್ಥೆಗಳ ಕಾರ್ಯಾಚರಣೆಗಳು ಇಲ್ಲದಂತಾದವು. ವಿದ್ಯುತ್ ಸಂಯೋಜಕಗಳೊಳಗಿನ ಸಂಗ್ರಹಣವು ಶಾರ್ಟ್ ಸರ್ಕಿಟ್ ಅನ್ನು ಉಂಟುಮಾಡುವ ಮೂಲಕ ಈ ದುರ್ಘಟನೆಗೆ ಕಾರಣವಾಗಿದೆ.[೧೬೦] ಈ ದುರ್ಘಟನೆಯಿಂದಾಗಿ ನಿಲ್ದಾಣದ ಒಳಗಿನ ಸಾಧನಗಳಲ್ಲಿ ಮಾತ್ರ ತೊಂದರೆಯುಂಟಾಗದೆ ನಿಲ್ದಾಣದ ಬಾಹ್ಯ ಘಟಕಗಳಲ್ಲಿಯೂ ಅನೇಕ ತೊಂದರೆಗಳು ಕಾಣಿಸಿಕೊಂಡವು;2007 ರ STS-120 ರ ಸಂದರ್ಭದಲ್ಲಿ, P6 ಟ್ರಸ್ ನ ಮತ್ತು ದ್ಯುತಿವಿದ್ಯುಜ್ಜನಕ ಸರಣಿಗಳನ್ನು ಅನುಸರಿಸಿದಂತೆ, ಸರಣಿಗಳ ಪುನರ್ನಿಯೋಜನೆಯ ಸಂದರ್ಭದಲ್ಲಿ ಅದು ಒಡೆದು ಹೋಯಿತು. ಆಗ ಅದನ್ನು ಸರಿಯಾಗಿ ಜೋಡಿಸಲಾಗಲಿಲ್ಲ.[೧೬೧] ಸರಣಿಗಳನ್ನು ಸರಿಮಾಡಲು ಸ್ಕಾಟ್ ಪ್ಯಾರಜಿನ್ಸ್ಕಿಯವರು ತುರ್ತುಪರಿಸ್ಥಿತಿಯ EVA ಯನ್ನು ಕಾರ್ಯರೂಪಕ್ಕೆ ತಂದರು. ಅಲ್ಲದೇ ಡೌಗ್ಲಾಸ್ ವೀಲಾಕ್ ರವರು ಈ ಕಾರ್ಯಕ್ಕೆ ನೆರವಾದರು. ಇದು ಅಲ್ಪಕಾಲಾವಧಿಯ ಯೋಜನಾ ಸಮಯದಿಂದಾಗಿ ಮತ್ತು ಸರಣಿಗಳಿಂದಲೇ ವಿದ್ಯುದಾಘಾತವಾಗುವ ಅಪಾಯದಿಂದಾಗಿ, ಬಹುಪಾಲು EVAs ಗಳಿಗಿಂತ ಅತ್ಯಂತ ಅಪಾಯಕಾರಿಯಾದ ಕೆಲಸವಾಗಿದೆ.[೧೬೨] ಸ್ಟಾರ್ ಬೋರ್ಡ್ ಸೋಲಾರ್ ಆಲ್ಫ ರೋಟರಿ ಜಾಯಿಂಟ್ (SARJ) ನಲ್ಲಿ ಉಂಟಾದ ಸಮಸ್ಯೆಗಳಿಂದ ಸರಣಿಗಳಿಗೆ ಸಂಬಂಧಿಸಿದ ತೊಂದರೆಗಳು ಆ ವರ್ಷವು ಮುಂದುವರೆದವು. ಇದು (SARJ) ನಿಲ್ದಾಣದ ಸ್ಟಾರ್ ಬೋರ್ಡ್ ನ ಬದಿಯಲ್ಲಿ ಸರಣಿಗಳನ್ನು ಸುತ್ತಿಸುತ್ತದೆ. ಸರಣಿಯನ್ನು ಸಾಗಿಸುವ ಮೋಟಾರ್ ನಲ್ಲಿ ವಿಪರೀತ ಕಂಪನ ಮತ್ತು ಹೈ ಕರೆಂಟ್ ಸ್ಪೈಕ್ ಗಳು ಕಾಣಿಸಿಕೊಂಡವು. ಇದರಿಂದಾಗಿ, ಈ ಸಮಸ್ಯೆಗಳ ಕಾರಣ ತಿಳಿಯುವ ವರೆಗೆ ಸ್ಟಾರ್ ಬೋರ್ಡ್ SARJ ಯ ಚಲನೆಯನ್ನು ಕಡಿಮೆ ಮಾಡಬೇಕೆಂದು ನಿರ್ಧರಿಸಲಾಯಿತು. STS-120 ಮತ್ತು STS-123 ನ ಮೇಲೆ ಮಾಡಲಾದ EVAs ನ ಪರಿಶೀಲನೆಯ ಸಂದರ್ಭದಲ್ಲಿ, ಕ್ಷೌರ ಮಾಡಿಕೊಳ್ಳಲು ಬಳಸಲಾದ ಲೋಹದ ವಸ್ತುಗಳಿಂದ ಮತ್ತು ಸಾಗಿಸಲಾಗುವ ಅತ್ಯಂತ ದೊಡ್ಡ ಸಲಕರಣೆಗಳಲ್ಲಿ ಇರುವ ಅವಶೇಷಗಳಿಂದ ವಿಪರೀತ ಕಲುಷಿತವಾಗಿರುವುದು ಕಂಡು ಬಂದಿತು. ಇದರಿಂದಾಗಿ ಜಾಯಿಂಟ್ ನ ಮುಖ್ಯಭಾಗದಲ್ಲಿರುವ ಲೋಹದ ರೇಸ್ ರಿಂಗ್ ಗೆ ನಷ್ಟವಾಗುವ ಸಾಧ್ಯತೆಗಳಿದ್ದ ಕಾರಣ ಮುಂದಿನ ಹಾನಿ ತಡೆಯಲು ಜಾಯಿಂಟ್ ಅನ್ನು ಲಾಕ್ ಮಾಡಲಾಯಿತು.[೧೬೩] ಜಾಯಿಂಟ್ ನ ರಿಪೇರಿಯನ್ನು STS-126 ರ ಸಂದರ್ಭದಲ್ಲಿ ಮಾಡಲಾಯಿತು. ಎರಡು ಜಾಯಿಂಟ್ ಗಳಿಗೂ ತೈಲಲೇಪನ ಮಾಡಲಾಯಿತು. ಅಲ್ಲದೇ ಜಾಯಿಂಟ್ ನ ಮೇಲಿರುವ 12 ಗಾಲಿಗಳಲ್ಲಿ 11 ಅನ್ನು ಬದಲಾಯಿಸಲಾಯಿತು.[೧೬೪][೧೬೫] ಇತ್ತೀಚೆಗಷ್ಟೇ ನಿಲ್ದಾಣದ ಎಂಜಿನ್ ಗಳಲ್ಲಿ ಮತ್ತು ಶೀತಕದಲ್ಲಿ ಕೂಡ ಸಮಸ್ಯೆಗಳಿರುವುದು ಕಂಡುಬಂದಿದೆ. 2009 ರಲ್ಲಿ, ಜ್ವೆಜ್ದ ದಲ್ಲಿರುವ ಎಂಜಿನ್ ತಪ್ಪು ಆದೇಶ ನೀಡಿತು. ಇದರಿಂದಾಗಿ ಸುಮಾರು ಎರಡು ನಿಮಿಷಗಳ ಕಾಲ ನಿಲ್ದಾಣದ ವ್ಯವಸ್ಥೆಯುದ್ದಕ್ಕೂ ವಿಪರೀತ ಕಂಪನ ಉಂಟಾಯಿತು.[೧೬೬] ನಿಲ್ದಾಣಕ್ಕೆ ಯಾವುದೇ ನಷ್ಟವಾಗಿಲ್ಲವೆಂದು ತಕ್ಷಣವೇ ವರದಿಮಾಡಲಾಗಿತ್ತು. ಕೆಲವೊಂದು ಘಟಕಗಳು ಅವುಗಳ ಸಾಮರ್ಥ್ಯ ಮೀರಿ ಹೆಚ್ಚು ಒತ್ತಡಕ್ಕೆ ಒಳಪಟ್ಟವು. ಮುಂದಿನ ವಿಶ್ಲೇಷಣೆ ನಿಲ್ದಾಣಕ್ಕೆ ಯಾವುದೇ ರಾಚನಿಕ ನಷ್ಟವಾಗಿಲ್ಲವೆಂಬುದನ್ನು ದೃಢಪಡಿಸಿತು. ಅಲ್ಲದೇ ಇದರ "ರಚನೆಗಳು ಅವುಗಳ ಸಹಜವಾದ ಜೀವಿತಾವಧಿಯ ಸಾಮರ್ಥ್ಯಗಳನ್ನು ಇನ್ನೂ ಮುಟ್ಟಬಲ್ಲಂತೆ" ಕಂಡುಬಂದವು. ಮುಂದಿನ ಮೌಲ್ಯ ಮಾಪನವನ್ನು ಮಾಡಲಾಗುತ್ತಿದೆ.[೧೬೭] 2009 ರಲ್ಲಿ S1 ರೇಡಿಯೇಟರ್ (ಪ್ರಸಾರಕ)ಗೆ ಹಾನಿಯುಂಟಾಯಿತು. ನಿಲ್ದಾಣದ ಶೀತಕ ವ್ಯವಸ್ಥೆಯ ಭಾಗಗಳಲ್ಲಿ ಇದೂ ಕೂಡ ಒಂದಾಗಿದೆ. 2008 ರ ಸೆಪ್ಟೆಂಬರ್ ತಿಂಗಳಿನಲ್ಲಿ ಸೊಯುಜ್ ನ ಚಿತ್ರಣದಲ್ಲಿ ತೊಂದರೆಯನ್ನು ಗುರುತಿಸಲಾಯಿತು. ಆದರೆ ಇದು ಅಂದುಕೊಂಡಷ್ಟು ತೀವ್ರವಾಗಿರಲಿಲ್ಲ.[೧೬೮] ಈ ಚಿತ್ರಣವು, ಆಧಾರವಾಗಿರುವ ಕೇಂದ್ರ ರಚನೆಯಿಂದ ಒಂದು ಉಪ ವಿಭಾಗದ ಮೇಲ್ಮೈ ಕಳಚಿ ಬೀಳುತ್ತಿರುವುದನ್ನು ತೋರಿಸಿತು. ಬಹುಶಃ ಸೂಕ್ಷ್ಮ ಉಲ್ಕಾಭ ಅಥವಾ ಭಗ್ನಾವಶೇಷ ಇದಕ್ಕೆ ಕಾರಣವಿರಬಹುದು. 2008 ರ EVA ಯ ಸಂದರ್ಭದಲ್ಲಿ ಸೇವಾ ಘಟಕದ ನೂಕುಕಾರಿಯನ್ನು ಹೊರಗೆಸೆದು, S1 ರೇಡಿಯೇಟರ್ ಅನ್ನು ಅಪ್ಪಳಿಸಿತು. ಆದರೆ ಇದರಿಂದ ಯಾವುದಕ್ಕೂ ತೊಂದರೆಯುಂಟಾಗಲಿಲ್ಲ. 2009 ರ ಮೇ 15 ರಂದು ಕಂಪ್ಯೂಟರ್ ನಿಯಂತ್ರಿಕ ಕವಾಟವು ಮುಚ್ಚಿಹೋಗಿದ್ದರಿಂದ, ಉಳಿದಿದ್ದ ಶೀತಕ ವ್ಯವಸ್ಥೆಯ ಮೂಲಕ ರೇಡಿಯೇಟರ್ ನ ಹಾನಿಗೊಂಡ ಭಾಗದ ಅಮೋನಿಯ ಕೊಳವೆ ಯಾಂತ್ರಿಕವಾಗಿ ನಿಂತುಹೋಯಿತು. ಅನಂತರ ಹಾನಿಗೊಳಗಾದ ಭಾಗದಿಂದ ಅಮೋನಿಯವನ್ನು ಹೊರತೆಗೆಯಲು ಇದೇ ಕವಾಟವನ್ನು ಬಳಸಲಾಯಿತು. ಹಾನಿಗೊಳಗಾದ ಭಾಗದ ಮೂಲಕ ಶೀತಕ ವ್ಯವಸ್ಥೆಯಿಂದ ಅಮೋನಿಯ ಸೋರಿಕೆಯಾದಂತೆ ತಡೆಯಲು ಹೀಗೆ ಮಾಡಲಾಯಿತು.[೧೬೮]
2010 ರ ಆಗಸ್ಟ್ 1 ರ ಪೂರ್ವಾರ್ಧದಲ್ಲಿ ಕೂಲಿಂಗ್ ಲೂಪ್ A (ಸ್ಟಾರ್ ಬೋರ್ಡ್ ನ ಬದಿಯಿರುವಂತಹ)ವಿಫಲವಾಯಿತು, ಎರಡು ಬಾಹ್ಯ ಕೂಲಿಂಗ್ ಲೂಪ್ ಗಳಲ್ಲಿ ಒಂದು, ಅದರ ಸಹಜವಾದ ಶೀತಕ ಸಾಮರ್ಥ್ಯದಲ್ಲಿ ಕೇಲವ ಅರ್ಧದಷ್ಟನ್ನು ಮಾತ್ರ ನಿಲ್ದಾಣಕ್ಕೆ ಒದಗಿಸಿತು. ಅಲ್ಲದೇ ಕೆಲವು ವ್ಯವಸ್ಥೆಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಶೀತಲವನ್ನುಂಟುಮಾಡಿತು.[೧೬೯][೧೭೦][೧೭೧] ಅಮೋನಿಯ ಶೀತಕ ದ್ರವವನ್ನು ಹರಡುವ, ಅಮೋನಿಯ ಪಂಪ್ ಘಟಕದಲ್ಲಿ ತೊಂದರೆ ಕಂಡುಬಂದಿತು. ನಾಲ್ಕು CMGs ಗಳಲ್ಲಿ ಎರಡನ್ನು ಒಳಗೊಂಡಂತೆ ಅನೇಕ ಉಪ ವ್ಯವಸ್ಥೆಗಳು ನಿಂತುಹೋದವು. ISS ನ ಮೇಲೆ ಮಾಡಬೇಕೆಂದು ಯೋಜಿಸಲಾಗಿದ್ದ ಕಾರ್ಯಾಚರಣೆಗಳಿಗೆ, ಶೀತಕ ವ್ಯವಸ್ಥೆಗೆ ಸಂಬಂಧಿಸಿದಂತೆ EVAs ಯ ತೊಂದರೆಗಳಿಂದಾಗಿ ತಡೆಯುಂಟಾಯಿತು. 2010 ರ ಆಗಷ್ಟ್ 7 ರಂದು ಕಳುಹಿಸಲಾದ ಮೊದಲನೆಯ EVA ಗೆ, ನಾಲ್ಕು ಕ್ವಿಕ್ ಡಿಸ್ ಕನೆಕ್ಟ್ ಗಳಲ್ಲಿ ಒಂದರಲ್ಲಿ ಅಮೋನಿಯ ಸೋರುತ್ತಿದ್ದ ಕಾರಣ, ವಿಫಲವಾದ ಪಂಪ್ ಘಟಕವನ್ನು ಸಂಪೂರ್ಣವಾಗಿ ಬದಲಾಯಿಸಲಾಗಲಿಲ್ಲ. ಆಗಸ್ಟ್ 11 ರಂದು ಕಳುಹಿಸಲಾದ EVA ವಿಫಲವಾದ ಪಂಪ್ ಘಟಕವನ್ನು ಯಶಸ್ವಿಯಾಗಿ ತೆಗೆದುಹಾಕಿತು.[೧೭೨][೧೭೩] ಮೂರನೆಯ EVA, ಸಹಜವಾದ ಕಾರ್ಯಾಚರಣೆಗೆ ಲೂಪ್ A ಯನ್ನು ಪುನರ್ಸ್ಥಾಪಿಸಿತು.[೧೭೪][೧೭೫] ಅಮೇರಿಕಾದ ಬೋಯಿಂಗ್ ಕಂಪನಿಯು ನಿಲ್ದಾಣದ ಶೀತಕ ವ್ಯವಸ್ಥೆಯನ್ನು ನಿರ್ಮಿಸಿದೆ.[೧೭೬] ಇದು ವಿಫಲವಾದ ಪಂಪ್ ಗಳ ತಯಾರಕವಾಗಿದೆ.[೧೭೭]
ಅತ್ಯಂತ ಕಡಿಮೆ ಎತ್ತರದಲ್ಲಿರುವ ISS ನ ಕಕ್ಷೆಯಲ್ಲಿ ವಿಭಿನ್ನ ರೀತಿಯ ಆಂತರಿಕ್ಷ ಭಗ್ನಾವಶೇಷಗಳಿವೆ. ಇವು ಅಲ್ಲಿ ಕಳೆದುಹೋದ ರಾಕೆಟ್ ಮತ್ತು ಗತಿಸಿದ ಉಪಗ್ರಹ ಗಳಿಂದ, ಸ್ಪೋಟಕದ ಚೂರುಗಳು,ಬಣ್ಣದ ಬಿಲ್ಲೆಗಳು, ರಾಕೆಟ್ ಮೋಟಾರ್ ಗಳಿಂದ, ಸಲಕರಣೆ, RORSATನ್ಯೂಕ್ಲಿಯರ್ ಪವರ್ಡ್ ಉಪಗ್ರಹಗಳಿಂದ ಬಿಡುಗಡೆಯಾಗುವ ಎಣ್ಣೆಗಳ ಮಿಶ್ರಣ, ಸಣ್ಣ ಸೂಜಿಗಳು ಮತ್ತು ಇತರ ಅನೇಕ ವಸ್ತುಗಳವರೆಗೆ ಎಲ್ಲವನ್ನು ಒಳಗೊಂಡಿವೆ.[೧೭೮] ಸಹಜವಾದ ಸೂಕ್ಷ್ಮ ಉಲ್ಕಾಭಗಳ ಜೊತೆಯಲ್ಲಿ ಈ ವಸ್ತುಗಳು,[೧೭೯] ನಿಲ್ದಾಣಕ್ಕೆ ಅಪಾಯ ತಂದೊಡ್ಡಬಹುದು. ಏಕೆಂದರೆ ಒತ್ತಡಕ್ಕೇರಿಸಲಾದ ಘಟಕಗಳನ್ನು ಅವು ತೂತು ಮಾಡಬಲ್ಲವು. ಅಲ್ಲದೇ ನಿಲ್ದಾಣದ ಇತರ ಭಾಗಗಳಿಗೆ ಹಾನಿಮಾಡಬಲ್ಲವು.[೧೮೦][೧೮೧] ಸೂಕ್ಷ್ಮ ಉಲ್ಕಾಭಗಳು ಬಾಹ್ಯಾಕಾಶ ನಡಿಗೆಯನ್ನು ಮಾಡುವ ಗಗನಯಾತ್ರಿಗಳಿಗೆ ಕೂಡ ಅಪಾಯವನ್ನುಂಟು ಮಾಡುತ್ತವೆ. ಇಂತಹ ವಸ್ತುಗಳು ಅವರ ಆಕಾಶ ಪೋಷಾಕನ್ನು ತೂತು ಮಾಡುವ ಮೂಲಕ ಒತ್ತಡವನ್ನು ತಗ್ಗಿಸಬಲ್ಲವು.[೧೮೨] ಅಂತರಿಕ್ಷದಲ್ಲಿನ ಭಗ್ನಾವಶೇಷಗಳನ್ನು ಭೂಮಿಯ ಮೇಲಿನಿಂದ ದೂರದಿಂದಲೇ ಕಂಡುಹಿಡಿಯಬಹುದು. ಅಲ್ಲದೇ ಸಿಬ್ಬಂದಿಗೆ ಹಾನಿಯನ್ನು ಉಂಟುಮಾಡುವ ಈ ವಸ್ತುಗಳ ಬಗ್ಗೆ ಮತ್ತು ಅವುಗಳ ಗಾತ್ರದ ಬಗ್ಗೆ ಮೊದಲೇ ಎಚ್ಚರಿಕೆಯನ್ನು ನೀಡಬಹುದಾಗಿದೆ. ಇದು ಡೆಬ್ರೀಸ್ ಅವಾಯ್ಡೆನ್ಸ್ ಮ್ಯಾನೂವರ್ (DAM) ಕಾರ್ಯವಿಧಾನವನ್ನು ನಡೆಸಲು ಅವಕಾಶ ನೀಡುತ್ತದೆ. ಈ ಕಾರ್ಯವಿಧಾನವು ಭಗ್ನಾವಶೇಷಗಳನ್ನು ತಡೆಗಟ್ಟಲೆಂದು, ನಿಲ್ದಾಣದ ಕಕ್ಷಾ ಎತ್ತರವನ್ನು ಬದಲಾಯಿಸುವುದಕ್ಕಾಗಿ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ ನ ಮೇಲೆ ನೂಕುಕಾರಿಗಳನ್ನು ಬಳಸುತ್ತದೆ. ಭಗ್ನಾವಶೇಷ ಇನ್ನೂ ಕೆಲವೇ ಸಮಯದಲ್ಲಿ ಸಮೀಪಿಸುತ್ತದೆ ಎಂಬುದನ್ನು ಗಣನೆಯ ಮಾದರಿಗಳು ತೋರಿಸಿದಾಗ DAMs ಅನ್ನು ಸಂಧಿಸಲಾಗುತ್ತದೆ.[೧೮೦] 2009 ರ ಮಾರ್ಚ್ ನ ಮೊದಲು ಎಂಟನೆಯ DAMs ಅನ್ನು ನಡೆಸಲಾಗಿದೆ,[೧೮೩] ಮೊದಲ ಏಳನ್ನು ಅಕ್ಟೋಬರ್ 1999 ರಿಂದ 2003 ರ ನಡುವೆ ನಡೆಸಲಾಗಿದೆ.[೧೮೪] ಕಕ್ಷೆಯ ವೇಗವನ್ನು 1 m/s ಗತಿಯಲ್ಲಿ ಹೆಚ್ಚಿಸುವ ಮೂಲಕ ಸಾಮಾನ್ಯವಾಗಿ ಕಕ್ಷೆಯನ್ನು ಒಂದು ಅಥವಾ ಎರಡು ಕಿಲೋಮೀಟರ್ ಗಳಿಂದ ಏರಿಸಲಾಗುತ್ತದೆ. 2008 ರ ಆಗಸ್ಟ್ 27 ರಂದು 1.7 ಕಿಲೋಮೀಟರ್ ನಷ್ಟು ಎತ್ತರವನ್ನು 8 ವರ್ಷಗಳ ಕಾಲ ತಗ್ಗಿಸಲಾಯಿತು.[೧೮೪][೧೮೫] 2009 ರಲ್ಲಿ ಮಾರ್ಚ್ 22 ರಂದು ಮತ್ತು ಜುಲೈ 17 ರಂದು ಎರಡು DAMs ಗಳಿದ್ದವು.[೧೮೬] ಕಕ್ಷೆಯಲ್ಲಿರುವ ಭಗ್ನಾವಶೇಷದಿಂದ ಉಂಟಾಗಬಹುದಾದ ಅಪಾಯವನ್ನು ತಡವಾಗಿ ಗುರುತಿಸಿದರೂ ಕೂಡ DAM ಅನ್ನು ಸುರಕ್ಷಿತವಾಗಿ ನಡೆಸಬಹುದಾಗಿದೆ. ನಿಲ್ದಾಣದ ಸಿಬ್ಬಂದಿ ನಿಲ್ದಾಣದ ಎಲ್ಲಾ ಬಾಗಿಲುಗಳನ್ನು ಮುಚ್ಚಿ, ಅವರ ಸೊಯುಜ್ ಬಾಹ್ಯಾಕಾಶನೌಕೆಯೊಳಗೆ ಹೋಗಬೇಕು. ಈ ರೀತಿಯಾಗಿ ಭಗ್ನಾವಶೇಷಗಳಿಂದುಂಟಾದ ಅಪಾಯದ ಪರಿಸ್ಥಿತಿಯಿಂದ ಅವರು ಹೊರಬರಬಲ್ಲರು. ನಿಲ್ದಾಣದಿಂದ ಹೀಗೆ ಹೊರಬರುವ ಘಟನೆಯು 2003 ರ ಏಪ್ರಿಲ್ 6 ರಂದು ಮತ್ತು 2009 ರ ಮಾರ್ಚ್ 13 ರಂದು ಎರಡು ಬಾರಿ ನಡೆದಿದೆ.[೧೮೦]
ಭೂಮಿಯ ವಾಯುಮಂಡಲದ ರಕ್ಷಣೆಯಿಲ್ಲದೆಯೇ ಗಗನಯಾತ್ರಿಗಳನ್ನು ಕಾಸ್ಮಿಕ್ ಕಿರಣಗಳ ಏಕಪ್ರಕಾರದ ಪ್ರಸರಣದಿಂದ ಹೊರಬರುವ ಅಧಿಕ ಮಟ್ಟದ ವಿಕಿರಣಕ್ಕೆ ಒಡ್ಡಲಾಗುತ್ತದೆ. ನಿಲ್ದಾಣದ ಸಿಬ್ಬಂದಿಯನ್ನು ಪ್ರತಿದಿನಕ್ಕೆ ಸುಮಾರು 1 ಮಿಲಿಸಿವರ್ಟ್ ವಿಕಿರಣಕ್ಕೆ ಒಡ್ಡಲಾಗುತ್ತದೆ. ಇದು ನೈಸರ್ಗಿಕ ಮೂಲಗಳಿಂದ ಭೂಮಿಯಲ್ಲಿರುವ ಒಬ್ಬ ವ್ಯಕ್ತಿ ಒಂದು ವರ್ಷಕ್ಕೆ ಪಡೆವಷ್ಟು ವಿಕಿರಣಕ್ಕೆ ಸಮನಾಗಿದೆ.[೧೮೭] ಇದರಿಂದಾಗಿ ಗಗನಯಾತ್ರಿಗಳಿಗೆ ಕ್ಯಾನ್ಸರ್ ಬರಬಹುದಾದ ಸಾಧ್ಯತೆಗಳಿವೆ. ಅಧಿಕ ಮಟ್ಟದ ವಿಕಿರಣ ದುಗ್ಧಕೋಶದಲ್ಲಿನ(ಲಿಂಫಸೈಟ್) ವರ್ಣತಂತುಗಳಿಗೆ (ಕ್ರೋಮೋಸೋಮ್) ಹಾನಿಯುಂಟುಮಾಡಬಲ್ಲದು. ಈ ಕೋಶಗಳು ಪ್ರತಿರಕ್ಷಿತ ವ್ಯವಸ್ಥೆಯಕೇಂದ್ರವಾಗಿದ್ದು, ಇವುಗಳಿಗೆ ಯಾವುದೇ ಹಾನಿಯುಂಟಾದಲ್ಲಿ ಗಗನಯಾತ್ರಿಗಳ ರೋಗದ ಪ್ರತಿರಕ್ಷೆವ್ಯವಸ್ಥೆಯು ದುರ್ಬಲವಾಗಬಲ್ಲದು. ಅಧಿಕ ಕಾಲದ ವರೆಗೆ ಪ್ರತಿರಕ್ಷ ವ್ಯವಸ್ಥೆ ದುರ್ಬಲವಾಗಿದ್ದಲ್ಲಿ, ಸಿಬ್ಬಂದಿಗಳ ನಡುವೆ ಸೋಂಕು ಹರಡಬಹುದು. ಅದರಲ್ಲೂ ವಿಶೇಷವಾಗಿ ಅವರಿರುವ ಸ್ಥಳದಲ್ಲಿ ಸೋಂಕು ಹರಡಬಹುದು. ವಿಕಿರಣವು ಗಗನಯಾತ್ರಿಗಳಲ್ಲಿ ಹೆಚ್ಚಾಗಿ ಕಂಡು ಬಂದಿರುವ ಕಣ್ಣಿನ ಪೊರೆ ಸಮಸ್ಯೆಗೂ ಕಾರಣವಾಗಿದೆ ಎಂದು ಹೇಳಲಾಗುತ್ತದೆ. ಸುರಕ್ಷಿತ ರಕ್ಷಾಕವಚ ಮತ್ತು ಸುರಕ್ಷಿತ ಜೌಷಧಿಗಳ ಮೂಲಕ ಇದರ ಅಪಾಯದ ಮಟ್ಟವನ್ನು ತಗ್ಗಿಸಬಹುದಾಗಿದೆ. ಆದರೆ ಇದಕ್ಕೆ ಉದಾಹರಣೆಗಳು ವಿರಳವಾಗಿವೆ. ಅಲ್ಲದೇ ದೀರ್ಘಕಾಲದ ವರೆಗೆ ಒಡ್ಡುವುದರಿಂದ ಅಪಾಯದ ಸಾಧ್ಯತೆಗಳು ಹೆಚ್ಚುತ್ತವೆ.[೩೪] ಮಿರ್ ನಂತಹ ಹಿಂದಿನ ನಿಲ್ದಾಣಗಳಿಗೆ ಹೋಲಿಸಿದರೆ, ISS ನ ಮೇಲೆ ವಿಕಿರಣ ರಕ್ಷೆಯನ್ನು ಹೆಚ್ಚಿಸಲು ಮಾಡಿರುವ ಪ್ರಯತ್ನಗಳ ಹೊರತಾಗಿ, ನಿಲ್ದಾಣದೊಳಗೆ ವಿಕಿರಣದ ಮಟ್ಟವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಅಲ್ಲದೇ ಮಂದೆ ದೀರ್ಘಕಾಲದ ಮಾನವಸಹಿತ ಬಾಹ್ಯಾಕಾಶ ವಿಮಾನವನ್ನು ನಿರ್ಮಿಸಲು ತಾಂತ್ರಿಕ ಪ್ರಗತಿಯ ಅಗತ್ಯವಿರುತ್ತದೆ ಎಂದು ಆಲೋಚಿಸಲಾಗಿದೆ.[೧೮೭] ISS ನ ಮೇಲೆ ಅನುಭವಿಸಲಾದ ವಿಕಿರಣದ ಮಟ್ಟವು ವಿಮಾನದ ಪ್ರಯಾಣಿಕರು ಅನುಭವಿಸಿದಷ್ಟಿಲ್ಲ ಎಂಬುದನ್ನು ಪರಿಗಣಿಸಬೇಕಿದೆ. ಭೂಮಿಯ ವಿದ್ಯುತ್ಕಾಂತೀಯ ಕ್ಷೇತ್ರವು ಪೃಥ್ವಿಯ ನಿಕಟವರ್ತಿ ಕಕ್ಷೆಯಲ್ಲಿನ ಸೂರ್ಯನ ಮತ್ತು ಇತರ ವಿಕಿರಣಗಳಿಂದ ಬಹುಪಾಲು ವಾಯುಮಂಡಲದಷ್ಟೇ ಸುರಕ್ಷತೆಯನ್ನು ಒದಗಿಸುತ್ತದೆ. ಅದೇನೇ ಆದರೂ, ವಿಮಾನ ಪ್ರಯಾಣಿಕರು 15 ಗಂಟೆಗಳಿಗಿಂತ ಕಡಿಮೆ ಪ್ರಯಾಣವಿರದ ಖಂಡಾಂತರ ವಿಮಾನಗಳಲ್ಲಿ(ಲಂಡನ್-ಸಿಡ್ನಿ ಅಥವಾ ಚಿಕಾಗೋ-ದೆಹಲಿ) ಇದೇ ಮಟ್ಟದ ವಿಕಿರಣವನ್ನು ಅನುಭವಿಸಿದ್ದಾರೆ. ಉದಾಹರಣೆಗೆ, ಬಾಸ್ಟನ್ ನಿಂದ ಬೀಜಿಂಗ್ ಗೆ ಹೋಗುವ 12 ಗಂಟೆಗಳ ವಿಮಾನದಲ್ಲಿ, ಪ್ರಯಾಣಿಕನು 0.1 ಮಿಲಿಸಿವರ್ಟ್ ನಷ್ಟು ವಿಕಿರಣವನ್ನು ಅಥವಾ ಒಂದು ದಿನಕ್ಕೆ 0.2 ಮಿಲಿಸಿವರ್ಟ್ಸ್ ನಷ್ಟು ವಿಕಿರಣವನ್ನು ಅನುಭವಿಸುತ್ತಾನೆ. ಗಗನಯಾತ್ರಿಯು LEO ಕೇವಲ 1/5ನೇ ಭಾಗದಷ್ಟು ವಿಕಿರಣವನ್ನು ಅನುಭವಿಸಿದ್ದಾನೆ.[೧೮೮]
PTI,London|Sep 25, 2016
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.