![cover image](https://wikiwandv2-19431.kxcdn.com/_next/image?url=https://upload.wikimedia.org/wikipedia/commons/thumb/7/7b/KNM-ER_1470_%2526_1813.png/640px-KNM-ER_1470_%2526_1813.png&w=640&q=50)
ಹೋಮೋ ಹೆಬಿಲಿಸ್
From Wikipedia, the free encyclopedia
ಹೋಮೋ ಹೆಬಿಲಿಸ್ ಹೋಮಿನಿನಿ ಬುಡಕಟ್ಟಿನ ದ್ವಿಪಾದಿಗಳಲ್ಲೊಂದು ಮತ್ತು ಸುಮಾರು ೨.೮ ರಿಂದ ೧.೫ ದಶಲಕ್ಷ ವರುಷಗಳ ಹಿಂದೆ ಇದು ಬದುಕಿತ್ತು. ಇದನ್ನು ಮೊದಲು ಲೂಯೀಸ್ ಮತ್ತು ಮೇರಿ ಲೀಕಿ ವಿಜ್ಞಾನಿ ದಂಪತಿಗಳು ತಂಜಾನಿಯದ ಓಲ್ಡುವೈ ಗಾರ್ಗ್ನಲ್ಲಿ ೧೯೬೦-೧೯೬೩ರ ನಡುವೆ ಸಾವಿರಾರು ಕಲ್ಲಿನ ಪರಿಕರಗಳೊಂದಿಗೆ (ಟೂಲ್) ಪತ್ತೆ ಮಾಡಿದರು. ಇದಕ್ಕೆ ಹೋಮೋ ಹೆಬಿಲಿಸ್ ಎಂದು ಹೊಸ ಪ್ರಭೇದದ ಹೆಸರು ಕೊಡಲಾಯಿತು. ಈ ಹೆಸರನ್ನು ರೈಮಂಡ್ ಡಾರ್ಟ್ ಸೂಚಿಸಿದರು.[1]
![]() | |
ವೈಜ್ಞಾನಿಕ ವರ್ಗೀಕರಣ | |
ಸಾಮ್ರಾಜ್ಯ: | ಪ್ರಾಣಿ |
ವಂಶ: | ಕಾರ್ಡೇಟ |
ಕ್ಲಾಡ್: | ಸಿನಾಪ್ಸಿಡ |
ವರ್ಗ: | ಸಸ್ತನಿ |
ಗಣ: | ಪ್ರೈಮೇಟ್ |
ಉಪಗಣ: | ಹ್ಯಾಪ್ಲೋರ್ಹಿನಿ |
ಕುಟುಂಬ: | ಹೋಮಿನಿಡೇ |
ಬುಡಕಟ್ಟು | ಹೋಮಿನಿನಿ |
ಕುಲ: | ಹೋಮೋ |
ಪ್ರಭೇದ: | ಹೆಬಿಲಿಸ್ |
ದ್ವಿಪದ ಹೆಸರು | |
ಹೋಮೋ ಹೆಬಿಲಿಸ್ ಲೀಕಿ ಮತ್ತು ಇತರರು, ೧೯೬೪ |
ಆರಂಭದಲ್ಲೇ ಹಲವು ವಿವಾದಗಳಿಗೆ ಕಾರಣವಾದ ಇದನ್ನು ತಜ್ಞರು ಹಲ್ಲುಗಳು, ಸಾಕ್ಷೇಪಿಕವಾಗಿ ದೊಡ್ಡ ಮೆದುಳಿನ ಗಾತ್ರದ ಕಾರಣಕ್ಕೆ ಹೋಮೋ ಪ್ರಭೇದದಲ್ಲಿ ಸೇರಿಸಿದರು. ಆದರೆ ಅದೇ ಪ್ರದೇಶದಲ್ಲಿ ಆ, ಬೋಯಿಸೇಯಿ (ಪರಾಂತ್ರೋಪಸ್ ಬೋಯಿಸೇಯಿ) ದೊರೆತ ಕಾರಣಕ್ಕೆ ಬಹಳಷ್ಟು ಕಾಲ ವಿದ್ವಾಂಸರು ಇದನ್ನು ಒಪ್ಪಿಕೊಳ್ಳಲಿಲ್ಲ.