ಹೆರುವಣಿಕೆ
From Wikipedia, the free encyclopedia
ಟಿ.ಎಫ್.ಆರ್(TFR) ಇಲ್ಲವೇ ಟೋಟಲ್ ಫರ್ಟಿಲಿಟಿ ರೇಟ್ (ಕನ್ನಡದಲ್ಲಿ ಹೆರುವೆಣಿಕೆ) ಅಂದರೆ ಒಂದು ಕುಟುಂಬದಲ್ಲಿ ಹೆಣ್ಣಿಗೆ ಅವಳ ಜೀವಿತಾವಧಿಯಲ್ಲಿ ಸರಾಸರಿ ಎಷ್ಟು ಮಕ್ಕಳಾಗುತ್ತವೆ ಅನ್ನುವುದರ ಅಳತೆ [1]. ಯಾವುದೇ ಜನಾಂಗದ ಜನಸಂಖ್ಯೆ ಏರದೇ ಇಳಿಯದೇ ಸಮತೋಲನ ಸಾಧಿಸಲು ಆ ಜನಾಂಗದ ಹೆರುವೆಣಿಕೆ ಮಟ್ಟ 2.1ರಷ್ಟಿರಬೇಕು ಅನ್ನುವುದನ್ನು ಪ್ರಪಂಚದ ಎಲ್ಲ ನಾಡುಗಳು ಒಪ್ಪಿ ಅದಕ್ಕೆ ತಕ್ಕಂತೆ ತಮ್ಮ ಜನಸಂಖ್ಯಾ ನೀತಿ ರೂಪಿಸಿಕೊಳ್ಳುತ್ತವೆ. ಸದ್ಯಕ್ಕೆ 2.4 ಹೆರುವೆಣಿಕೆ ಇರುವ ಭಾರತವೂ 2.1ರ ಸಮತೋಲನದ ಗುರಿ ತಲುಪುವ ಪ್ರಯತ್ನ ಮಾಡುತ್ತಿದೆ.
More information ಇಸವಿ, ಹೆರುವಣಿಕೆ ...
ಇಸವಿ | ಹೆರುವಣಿಕೆ |
---|---|
1950–1955 | 4.95 |
1955–1960 | 4.89 |
1960–1965 | 4.91 |
1965–1970 | 4.85 |
1970–1975 | 4.45 |
1975–1980 | 3.84 |
1980–1985 | 3.59 |
1985–1990 | 3.39 |
1990–1995 | 3.04 |
1995–2000 | 2.79 |
2000–2005 | 2.62 |
2005–2010 | 2.52 |
2010–2015 | 2.36 |
Close