ಹೆಬ್ರಿ
ಕರ್ನಾಟಕದ ಒಂದು ಗ್ರಾಮ / From Wikipedia, the free encyclopedia
ಹೆಬ್ರಿ ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ತಾಲೂಕು... ಉಡುಪಿಯಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ಹೆಬ್ರಿ ಪಟ್ಟಣ ಸಿಗುತ್ತದೆ . ಆಕರ್ಷಕ ಆಗುಂಬೆ ಘಾಟ್ ನ ಕೆಳ ಭಾಗದಲ್ಲಿರುವ ಈ ಪಟ್ಟಣ ಗೋಡಂಬಿ ಸಂಸ್ಕರಣೆ, ಅಕ್ಕಿ ಗಿರಣಿಗಳು, ತೈಲ ಗಿರಣಿಗಳು ಪಶು ಆಹಾರ ತಯಾರಿ ಮುಂತಾದ ಕೃಷಿಯಾಧಾರಿತ ಕೈಗಾರಿಕೆಗಳಿಂದ ಪ್ರಸಿದ್ಧಿ.[1] ಸೀತಾ ನದಿ ಇಲ್ಲಿ ಹರಿಯುತ್ತದೆ . ಉತ್ತಮ ಮಳೆಯಾಗುವುದರಿಂದ ಇಲ್ಲಿನ ಪರಿಸರ ಹಸಿರು ಭತ್ತದ ಗದ್ದೆಗಳು, ಅಡಿಕೆ, ತೆಂಗು ಮತ್ತು ಗೋಡಂಬಿ ತೋಟ ಮತ್ತು ಹಸಿರು ಕಾಡುಗಳಿಂದ ಆವ್ರತಗೊಂಡು ಶಾಂತ ವಾತಾವರಣವನ್ನು ಹೊಂದಿದೆ . ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಗೆ ಬರುವ ಸೋಮೇಶ್ವರ ವನ್ಯಜೀವಿಧಾಮ ಹೆಬ್ರಿಗೆ ತಾಗಿಕೊಂಡಿದೆ . ಅಳಿವಿನಂಚಿನಲ್ಲಿರುವ ಸಾಕಷ್ಟು ಜೀವ ಪ್ರಭೇದಗಳಿಗೆ ಇದು ಆಶ್ರಯ ತಾಣ . ಕಾಳಿಂಗ ಸರ್ಪ ಇವುಗಳಲ್ಲೊಂದು .
ಹೆಬ್ರಿ
ಹೆಬ್ಬೇರಿ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಭಾಷೆಗಳು | |
• ಅಧಿಕೃತ | ಕನ್ನಡ, ತುಳು |
Time zone | UTC+5:30 (IST) |
ಪಿನ್ ಕೋಡ್ | 576112 |
Vehicle registration | KA-20 |
ಹತ್ತಿರದ ನಗರ | ಉಡುಪಿ , ಕಾರ್ಕಳ |
ಲೋಕಸಭಾ ಕ್ಷೇತ್ರ | ಉಡುಪಿ-ಚಿಕ್ಕಮಗಳೂರು |
ಹೆಬ್ಬೇರಿ ಎಂಬ ಹೆಸರು ಕಾಲಕ್ರಮೇಣ ಹೆಬ್ರಿ ಎಂದು ಬದಲಾಯಿತೆಂದು ನಂಬಲಾಗಿದೆ . ವಿಕೋಪಗಳ ಸಮಯದಲ್ಲಿ ಜನರನ್ನು ಎಚ್ಚರಿಸಲು ಒಂದು ದೊಡ್ಡ "ಭೇರಿ"ಯನ್ನು ಈ ಗ್ರಾಮ ಹೊಂದಿತ್ತು. ಇದೇ ಭೇರಿ (ಹಿರಿದು ಭೇರಿ - ಹೆಬ್ಬೇರಿ) ಈ ಪಟ್ಟಣಕ್ಕೆ ಒಂದು ಸುಂದರ ಹೆಸರು ತಂದಿತು.[2]