ಸ್ಯಾಲಿ ಕ್ರಿಸ್ಟಿನ್ ರೈಡ್
From Wikipedia, the free encyclopedia
ಸ್ಯಾಲಿ ಕ್ರಿಸ್ಟಿನ್ ರೈಡ್ ಅವರು ಅಮೇರಿಕಾದ ಭೌತಶಾಸ್ತ್ರಜ್ಞ ಮತ್ತು ಗಗನಯಾತ್ರಿ.ಇವರು ೨೬ ಮೇ ೧೯೫೧ರಲ್ಲಿ ಏಂಜಲೀಸ್ ನಲ್ಲಿ ಜನಿಸಿದರು.ಇವರು ೧೯೭೮ರಲ್ಲಿ 'ನಾಸಾ'ಕ್ಕೆ ಸೇರಿಕೊಂಡರು ಮತ್ತು ೧೯೮೩ರಲ್ಲಿ ಅಂತರಿಕ್ಷಕ್ಕೆ ಹೋದ ಮೊದಲ ಸ್ತ್ರೀ ಎಂದು ಪ್ರಸ್ಸಿದ್ದರು. ಕಾಸ್ಮೋನಾಟ್ಸ್ ವ್ಯಾಲಂಟಿನ ಟ್ರೆಶ್ಕೋವ ಮತ್ತು ಸ್ವೆಟ್ಲಿನ ಸವಿಟ್ಸ್ಕಾಯ ಇವರಿಬ್ಬರ ನಂತರ ಸ್ಯಾಲಿ ರೈಡ್ ರವರು ಮೂರನೆ ಮಹಿಳೆಯಾಗಿದ್ದಾರೆ ಅಂತರಿಕ್ಷಕ್ಕೆ ಹೋಗಲು. ಅವರು ಚಿಕ್ಕ ವಯಸ್ಸಿನಲ್ಲಿ ಗಗನಯಾತ್ರೆ ಮಾಡಿದ ಪ್ರಸಿದ್ದಿ ಹೊಂದಿದ್ದಾರೆ ಈ ಸಾಹಸ ಮಾಡಿದ ಅಮೇರಿಕಾದ ಮೊದಲ ಮಹಿಳೆ ಹಾಗೂ ಅತ್ಯಂತ ಕಿರಿಯ ಬಾಹ್ಯಾಕಾಶಯಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.ಅವರು ೩೨ ವರ್ಷದವರಾಗಿದ್ದಾಗ ಎರಡು ಬಾರಿ ಗಗನಕ್ಕೆ ಹಾರಿದ ನಂತರ ನಾಸಾವನ್ನು ೧೯೮೭ರಲ್ಲಿ ಬಿಟ್ಟರು. ಅವರು ೩ ವರ್ಷಗಳ ಕಾಲ ಸ್ಟಾನ್ ಫೋರ್ಡ ವಿಶ್ವವಿದ್ಯಾಲಯದಲ್ಲಿ ಮತ್ತು ಕ್ಯಾಲಿಫೋನಿಯಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರೋಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.೧೯೮೭ರಲ್ಲಿ 'ಚಾಲೆಂಜರ್ ನೌಕೆಯಲ್ಲಿ ಬಾಹ್ಯಾಕಾಶ ಯಾತ್ರೆ ಕೈಗೊಂಡರು. ತದನಂತರ ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲೂ ಪ್ರಯಾಣಿಸಿದ್ದರು.ನಾಸಾ ತೊರೆದ ನಂತರ ಸ್ಟಾನ್ ಫೋರ್ಡ್ ವಿವಿ ಹಾಗೂ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.ಅಮೇರಿಕಾದ ಹಲವಾರು ಪ್ರತಿಫ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದ ಸ್ಯಾಲಿ. ಅವರು ೨೩ ಜುಲೈ ೨೦೧೨ ರಲ್ಲಿ ಕ್ಯಾನ್ಸರ್ ನಿಂದ ನಿಧನ ಹೊಂದಿದ್ದರು.[1]