ರಿಯಲ್ ಎಸ್ಟೇಟ್ ಒಂದುಕಾನೂನು ಪದ( ಯುಎಸ್ ಎ ,ಯುನೈಟೆಡ್ ಕಿಂಗಡಮ್, ಕೆನಡಾ,ಆಸ್ಟ್ರೇಲಿಯಾ ಮತ್ತು ಬಹಮಾಸ್ ಗಳಲ್ಲಿದ್ದಂತೆ ಕೆಲವು ಕಾರ್ಯವ್ಯಾಪ್ತಿ ಹೂಂದಿದೆ ) ಪರಿಮಿತ ವ್ಯಾಪ್ತಿಯಲ್ಲಿ ಭೂಮಿಯ ಅಭಿವೃದ್ದಿಯೂ ಸೇರಿರುತ್ತದೆ. ಭೂಮಿಗೆ
ಹೊಂದಿಕೂಂಡಂತಿರುವ ಅಭಿವೃದ್ದಿ ಅಂದರೆ ಕಟ್ಟಡಗಳು, ಬೇಲಿಗಳು, ಬಾವಿಗಳು ಇತ್ಯಾದಿ—immovable.[1]ರಿಯಲ್ ಎಸ್ಟೇಟ್ ಕಾನೂನು ನಿರ್ದಿಪ್ಷ್ಟ ಕಾರ್ಯವ್ಯಾಪ್ತಿಯಲ್ಲಿ ಬರುವ ವ್ಯವಹಾರಗಳನ್ನು ಕಾನೂನು ಬದ್ಧ ಹಾಗೂ ಕ್ರಮಬದ್ಧಗೂಳಿಸುತ್ತದೆ.ಹಾಗೂ ಇದು ವಾಣಿಜ್ಯ ಮತ್ತು ವಾಣಿಜ್ಯೇತರ ಆಸ್ತಿ ವ್ಯವಹಾರಗಳನ್ನು ಕಾನೂನುವ್ಯಾಪ್ತಿಯಲ್ಲಿ ನಿರ್ವಹಿಸುತ್ತದೆ.
ರಿಯಲ್ ಎಸ್ಟೇಟ್ ವ್ಯವಹಾರವು ಆಗಾಗ್ಗೆ ಪರಿಗಣಿತವಾದಂತೆ ನಿಜವಾದ ಆಸ್ತಿ ಯ ವ್ಯವಹಾರವಾಗಿರುತ್ತದೆ. (ಕೆಲವೂಮ್ಮೆ ಅದನ್ನುರಿಯಾಲ್ಟಿ ಎಂದು ಕರೆಯುತ್ತೇವೆ) ವ್ಯತಿರಿಕ್ತವಾಗಿ ವ್ಯಕ್ತಿಗತ ಆಸ್ತಿ(ಕೆಲವೂಮ್ಮೆ ಚಾಟೆಲ್ ಅಧವಾ ಚಾಟೆಲ್ ಲಾ ಅನ್ವಯ ಅಧವಾ ವೈಯಕ್ತಿಕ ಆಸ್ತಿ ಕಾನೂನು ಅನ್ವಯ
ಇನ್ನು ಕೆಲವು ಸಂದರ್ಭಗಳಲ್ಲಿ "ರಿಯಲ್ ಎಸ್ಟೇಟ್" ಪದವು ಭೂಮಿ ಮತ್ತು ಅದಕ್ಕೆ ಹೂಂದಿಕೂಂಡ ಕಟ್ಟಡಗಳನ್ನು ಒಟ್ಟಾಗಿ ಉಲ್ಲೇಖಿಸಿದ್ದಾಗಿರುತ್ತದೆ."ರಿಯಲ್ ಪ್ರಾರ್ಪಟಿ"ಪದವು ವಿಶ್ಲೇಪ್ಷಿಸುವಂತೆ ಭೂಮಿಯ ಒಡೆತನ ಮತ್ತು ನಂತರದ ಭಾಧ್ಯತೆಗಳಿಗೆ ಸಂಬಂದಿಸಿರುತ್ತದೆ.ಹಾಗೂ ಆಸ್ತಿಗೆ ಹೂಂದಿಕೂಂಡಿರುವ ಕಟ್ಟಡಗಳು, ಮರಗಳು, ಖನಿಜೋತ್ಪನ್ನಗಳು, ಅಲ್ಲದೆ ಹಿತಾಸಕ್ತಿ,
ಲಾಭ,ಮತ್ತು ಹಕ್ಕುಭಾಧ್ಯತೆಗಳೂ ಸೇರಿರುತ್ತವೆ. ರಿಯಲ್ ಪ್ರಾಪರ್ಟಿ ಪದವು ಸಾಮಾನ್ಯವಾಗಿ ಸ್ಧಿರಾಸ್ತಿ ಎಂದೇ ಪರಿಗಣಿಸಲ್ಪಡುತ್ತದೆ.[2]
ರಿಯಲ್ ಎಸ್ಟೇಟ್ ಮತ್ತು ರಿಯಲ್ ಪ್ರಾಪರ್ಟಿ ಪದಗಳು ಸಾಮಾನ್ಯವಾಗಿ ಕಾಮನ್ ಲಾ ಅನ್ವಯ ಬಳಸಲ್ಪಡುತ್ತವೆ.ಆದರೆ ಸಿವಿಲ್ ಲಾ ಮತ್ತುಕಾನೂನಿನ ಅಧಿಕಾರ ವಿಷಯಗಳನ್ನು ಸ್ಢಿರಾಸ್ತಿಗೆ ಸಂಬಂದಿಸಿದಂತೆ ಉಲ್ಲೇಖಿಸಲಾಗುತ್ತದೆ.
ಕಾನೂನಿನಲ್ಲಿ , ರಿಯಲ್ ಶಬ್ಧದ ಅರ್ಥವು ( ರೆಸ್/ರೇ ,ಥಿಂಗ್, o.Fr.ಮೂಲ .L.L ರಿಲೈಸ್ "ವಾಸ್ತವ" ಪದವು ಲ್ಯಾಟಿನ್ ಮೂಲದ್ದಾಗಿದೆ. ರೆಸ್ , "ವಸ್ತು, ವಿಷಯ"[3]), ಹೀಗೆ ವ್ಯಕ್ತಿಗಳಿಂದ ವಿಶ್ಲೇಸಿಸಲ್ಪಟ್ಟಿದೆ.
ಆದರೆ ಕಾನೂನಿನಲ್ಲಿ "ರಿಯಲ್" ಪ್ರಾಪರ್ಟಿ (ಭೂಮಿ ಮತ್ತು ಅದಕ್ಕೆ ಹೊಂದಿಕೂಂಡವುಗಳು) ಮತ್ತು "ವ್ಯಕ್ತಿಗತ" ಪ್ರಾಪರ್ಟಿ(ಬಟ್ಟೆ, ಪೀರೋಪಕರಣ,ಹಣ ಎಲ್ಲವೂ ಸೇರಿದಂತೆ)ನಡುವಿನ ಅರ್ಥವನ್ನು ವಿಸ್ತಾರವಾಗಿ ವಿಶ್ಲೇಷಿಸಲಾಗಿದೆ.
ಇವುಗಳ ನಡುವಿನ ಭಾವನಾತ್ಮಕ ವ್ಯತ್ಯಾಸ ಎಂದರೆ ಸ್ಥಿರಾಸ್ತಿಯನ್ನು ಭೂಮಿ ಸಮೇತವಾಗಿ ಹಕ್ಕನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಬಹುದು, ಮತ್ತು ಚಲಿಸಬಹುದಾದಂತಹ ಆಸ್ತಿಯಲ್ಲಿ ವ್ಯಕ್ತಿಯು ಅದರ ಹೆಸರನ್ನು ಉಳಿಸಿಕೊಳ್ಳಬಹುದಾಗಿದೆ. "ರಿಯಲ್ ಎಸ್ಟೇಟ್" ಪದವು ಪೂರ್ವ ಕಾಲದಿಂದ ಬಳಕೆಯಲ್ಲಿದ್ದು, 1666ರಿಂದ ಐತಿಹಾಸಿಕ ದಾಖಲೆ ಹೂಂದಿದೆ.[3]
"real" ಪದದ ಬಳಕೆಯು ಪುರಾತನ ಮತ್ತು ಮಧ್ಯಯುಗದ ಪ್ರತಿಫಲವಾಗಿದ್ದು ಮತ್ತು ಭೂಮಿಯನ್ನು ಉಳುವವನಹಕ್ಕು ಮತ್ತು ಮಾಲೀಕತ್ವದ (ಮತ್ತು ಮಾಲೀಕರು) ಸಂಬಂದ ಬಳಕೆಯಲ್ಲಿತ್ತು.
"real ಪದವು ತಕ್ಕಮಟ್ಟಿಗೆ ಲ್ಯಾಟಿನ್ ಪದ 'king'ನಿಂದ ಬಂದುದಾಗಿದೆ (ಫ್ರೆಂಚ್ ನಲ್ಲಿ royal ಮತ್ತು ಸ್ಪಾನಿಷ್ ನಲ್ಲಿ real
ಇದ್ದಂತೆ)
ಮಧ್ಯಯುಗದ ಕಾಲದಲ್ಲಿ ಸಂಪೂರ್ಣ ಭೂಮಿಯ ಒಡೆಯ ರಾಜನಾಗಿರುತ್ತಿದ್ದನು, ಭೂಮಿಯ ಸ್ವಾಧೀನ ಹೊಂದಿದವರು ಪ್ರತ್ಯಕ್ಷವಾಗಿ ಅಧವಾ ಪರೋಕ್ಷವಾಗಿ ಬಾಡಿಗೆಯನ್ನು ರಾಜನಿಗೆ ಕೊಡುತ್ತಿದ್ದರು.(ಜಮೀನ್ದಾರರ ಮೂಲಕ ರಾಜನಿಗೆ ಬಾಡಿಗೆ ನೀಡುವುದು ಸಾಮಾನ್ಯ ಕಾನೂನಾಗಿತ್ತು),ಅದು ಹಣ, ವಸ್ತು ಅಧವಾ ಸೇವೆಗಳ ರೂಪದಲ್ಲಿರುತ್ತಿತ್ತು.(ಸೈನಿಕ ಸೇವೆಯೂ ಸೇರಿದಂತೆ) ಪೂರ್ವದಲ್ಲಿದ್ದ ಸರಳ ಶುಲ್ಕ ಪದ್ಧತಿಯನ್ನು ಗಮನಿಸಬಹುದು. ಅದರಂತೆ ಆಸ್ತಿ ತೆರಿಗೆಯನ್ನು ರಾಜ್ಯಕ್ಕೆ ನೀಡಲಾಗುತ್ತಿತ್ತು. ಆದಾಗ್ಯೂ, real ಪದದ ಗ್ರಹಿಕೆಯು ವಾಸ್ತವದಲ್ಲಿ ತಪ್ಪುಗ್ರಹಿಕೆಯದ್ದಾಗಿದೆ..[4]
=
U.K. ಯಲ್ಲಿ ರಿಯಲ್ ಎಸ್ಟೇಟ್ ಎಂದರೆ "real property" ===
ಬ್ರಿಟಿಷರ ಬಳಕೆಯಲ್ಲಿ “ರಿಯಲ್ ಪ್ರಾಪರ್ಟಿ” ಪದವನ್ನು ಆಗಾಗ ಸರಳೀಕರಿಸಿ“ ಪ್ರಾಪರ್ಟಿ” ಎಂದಷ್ಟೇ ಹೇಳಲಾಗುತ್ತದೆ.
ಸಾಮಾನ್ಯವಾಗಿ ಭೂಮಿ ಮತ್ತು ಅದಕ್ಕೆ ಹೂಂದಿಕೂಂಡವುಗಳಿಗೆ "ರಿಯಲ್ ಎಸ್ಟೇಟ್" ಪದವು ಪ್ರೂಬೇಟ್ ಲಾ ಅನ್ವಯ ಬಳಸಲಾಗುತ್ತದೆ, ಮತ್ತು ಭೂಮಿಯ ಎಲ್ಲ ಹಿತಾಸಕ್ತಿಯು ಮೃತ ವ್ಯಕ್ತಿಯ ಮರಣದ ನಂತರದ ಆಸಕ್ತಿ ಕುರಿತಾಗಿದೆ.ಇಲ್ಲಿ ಹಣದ ಆಸಕ್ತಿಯ ಹೂರತಾಗಿ ಮಾರಾಟ ಮಾಡುವ ಅಧವ ಭೂ ಅಧಿಕಾರ ವರ್ಗಾವಣೆ ಸಂಬಂಧ ಕುರಿತಾಗಿದೆ.[5]
UKಯಲ್ಲಿ ಬಳಕೆಯಲ್ಲಿರುವ ಎಸ್ಟೇಟ್ ಏಜೆಂಟ್ನ ವ್ಯಾಖ್ಯಾನಕ್ಕಾಗಿ ರಿಯಲ್ ಪ್ರಾಪರ್ಟಿಯನ್ನು ನೋಡಿ
ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದ ರಿಯಲ್ ಎಸ್ಟೇಟ್.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ.(September 2009)
ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದ ರಿಯಲ್ ಎಸ್ಟೇಟ್ ವ್ಯವಹಾರವು ಯುನೈಟೆಡ್ ಸ್ಟೇಟ್ಸ್ನ ವ್ಯವಹಾರಕ್ಕಿಂತ ಭಿನ್ನವಾಗಿದೆ.
ಆದರೆ ವಿವಿಧ ಕಾನೂನುಗಳ ಪಾಲನೆ, ತೆರಿಗೆ ನೀಡುವ ಜರೂರತ್ತುಗಳೂ ಸೇರಿದಂತೆ ಕೆಲವು ಸಾಮ್ಯತೆಗಳಿವೆ.(ರಿಯಲ್ ಎಸ್ಟೇಟ್ ಏಜೆಂಟ್ರು, ವೃತ್ತಿಪರರು ಸಾಮಾನ್ಯ ಉದ್ಯೋಗಿಗಳಾಗಿ ಕೊಳ್ಳುವವರಿಗೆ ಸಹಾಯ ಮಾಡಲು ಇರುವುದು)ದಾಖಲೆ ಪತ್ರಗಳು ಕಾನೂನುಬದ್ಧ ಹಕ್ಕು ಸೂಚಿಸುತ್ತವೆ.ಅದಕ್ಕಾಗಿಯೇ ಪಕ್ಷಗಾರರ ಬದಲಾಗಿ ಪಕ್ಷಗಾರರ ನಡುವಿನ ವ್ಯವಹಾರವು ಸಲೀಸಾಗಿರುವಂತೆ ನೋಡಿಕೊಳ್ಳಲು ದಾಖಲೆ ಪತ್ರಗಳ ರಚನೆಯನ್ನು ಮತ್ತು ಹಣದ ಬದಲಾವಣೆಯನ್ನು ಪ್ರಮುಖ ಕಂಪೆನಿಗಳು ನಿರ್ವಹಿಸುತ್ತವೆ. ಮೆಕ್ಸಿಕೋ ಮತ್ತು ಮಧ್ಯ ಅಮೇರಿಕಾದಲ್ಲಿ ಕೊಳ್ಳುವ US ಜನರಿಗಾಗಿ ಯು.ಎಸ್.ನ ಪ್ರಮುಖ ಕಂಪೆನಿಗಳು ದೊಡ್ಡ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತವೆ.
ಮೆಕ್ಸಿಕೋ ನಗರದ ಒಂದು ಉದಾಹರಣೆಯನ್ನು ಇಲ್ಲಿ ಗಮನಿಸಬಹುದು.ಯು.ಎಸ್.ಕೆಲವು ಪ್ರದೇಶಗಳಿಗಿಂತ ಕಡಿಮೆ ಬೆಲೆಗಳು ಆಗಾಗ ಇಲ್ಲಿ ಲಭ್ಯ,ಆದರೆ ಹಲವಾರು ಪ್ರದೇಶಗಳಲ್ಲ್ಲಿ ಯು.ಎಸ್.ನಲ್ಲಿದ್ದಂತೆ ಮನೆಗಳು ಮತ್ತು ಲಾಟ್ಗಳ ಬೆಲೆಗಳು ದುಬಾರಿ. ಯು.ಎಸ್.ನ ಬ್ಯಾಂಕುಗಳು ಮೆಕ್ಸಿಕೋದಲ್ಲಿನ ಸ್ವತ್ತುಗಳಿಗಾಗಿ ಗೃಹ ಸಾಲಗಳನ್ನು ಕೊಡಲು ಪ್ರಾರಂಭಿಸಿದ್ದವು.ಆದರೆ ಇತರೆ ಲ್ಯಾಟಿನ್ ಆಮೇರಿಕನ್ ದೇಶಗಳಿಗೆ ಅದು ಲಭ್ಯವಿರಲಿಲ್ಲ.
ಒಂದು ಪ್ರಮುಖ ವ್ಯತ್ಯಾಸ ಎಂದರೆ ಯುನೈಟಡ್ ಸ್ಟೇಟ್ಸ್ನ ಪ್ರತಿ ದೇಶವೂ ವಿದೇಶಿಯರು ಕೊಳ್ಳಬಹುದಾದ ಸ್ವತ್ತಿನ ಬಗ್ಗೆ ನಿಯಮಗಳನ್ನು ಹೂಂದಿದೆ. ಉದಾಹರಣೆಗೆ, ಮೆಕ್ಸಿಕೋದಲ್ಲಿ, ವಿದೇಶಿಯರು ಮೆಕ್ಸಿಕನ್ ಕಾರ್ಪೂರೇಷನ್ ಅಥವ ಮೆಕ್ಸಿಕನ್ ಟ್ರಸ್ಟ್ನ ಅಧಿಕೃತ ದಾಖಲೆ ಹೊಂದಿಲ್ಲದ ಹೊರತು, ಸಮುದ್ರ ದಂಡೆಯ 50km ಅಥವಾ ಗಡಿಪ್ರದೇಶದ 100km ವ್ಯಾಪ್ತಿಯೂಳಗೆಯಾವುದೇ ಭೂಮಿ ಅಥವಾ ಮನೆಗಳನ್ನು ಕೊಳ್ಳುವಂತಿಲ್ಲ. ಸೆಂಟ್ರಲ್ ಅಮೇರಿಕಾದ ಗಣರಾಜ್ಯ ಹುಂಡುರಾಸ್ದಲ್ಲಿ,ವಿದೇಶಿಯರು ತಮ್ಮ ಹೆಸರಿನಲ್ಲಿ ನೇರವಾಗಿ ಸಮುದ್ರ ದಂಡೆಯ ಎದುರಿನ ಸ್ವತ್ತನ್ನು ಕೂಳ್ಳಬಹುದಾಗಿದೆ.
ನಿರ್ದಿಷ್ಟ ರೀತಿಯ ಸ್ವತ್ತಿಗಾಗಿ ಕೆಲವು ವಿಭಿನ್ನ ನಿಯಮಗಳಿವೆ: ಎಜಿಡಲ್ ಲ್ಯಾಂಡ್ – ನಿರ್ದಿಷ್ಟ ಪಂಗಡದವರು ಹೂಂದಿದ ಭೂಮಿಯನ್ನು ಸ್ವತ್ತು – ಅಧಿಕಾರದ ಅನೇಕ ಪ್ರಕ್ರಿಯೆಗಳು ಮುಗಿದ ನಂತರ ಮಾತ್ರ ಮಾರಾಟ ಮಾಡಬಹುದಾಗಿದೆ.ಆದರೆ ಈ ನಿಯಮಗಳು ಅವರು ಸ್ವತ್ತು ಮಾರಲು ಅಹ್ವಾನ ನೀಡದಂತೆ ಪ್ರತಿಬಂಧಿಸುವಂತಿಲ್ಲ.
ಕೋಸ್ಟ ರಿಕಾ ದಲ್ಲಿ, ರಿಯಲ್ ಎಸ್ಟೇಟ್ ಎಜೆಂಟ್ಗಳು ಕಾರ್ಯ ನಿರ್ವಹಿಸಲು ಪರವಾನಿಗೆ ಅಗತ್ಯವಿರುವುದಿಲ್ಲ. ಆದರೆ ಸ್ವತ್ತು ವರ್ಗಾವಣೆ ಮಾಡಲು ಲಾಯರ್ ಅವಶ್ಯವಾಗಿರುತ್ತಾರೆ.
ವ್ಯವಹಾರಿಕ ಕ್ಷೇತ್ರ
ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2009)
ಖಾಸಗಿ ಆಸ್ತಿ ಅಭಿವೃದ್ಧಿ,ಮಾಲಿಕತ್ವ ಸೇರಿದ ರಿಯಲ್ ಎಸ್ಟೇಟ್ ವ್ಯವಹಾರಿಕವಾಗಿ ಬಹು ಮುಖ್ಯ ಕ್ಷೇತ್ರ ಎಂದೇ ಉಲ್ಲೇಖಗೊಂಡಿದೆ.
ರಿಯಲ್ ಎಸ್ಟೇಟ್ ಒಂದು ಮಹತ್ವವಾದ ಹೂಡಿಕೆ. ಪ್ರತಿಯೊಂದು ಭೂಮಿಯೂ ತನ್ನದೇ ಆದ ವಿಶೇಷ ಗುಣಗಳನ್ನು ಹೊಂದಿದೆ. ಈ ಹಿನ್ನಲೆಯಲ್ಲೆ ರಿಯಲ್ ಎಸ್ಟೇಟ್ ಉದ್ಯಮ ಹಲವು ಭಿನ್ನವಾದ ಕ್ಷೇತ್ರಗಳಲ್ಲಿ ತೊಡಗಿದೆ. ರಿಯಲ್ ಎಸ್ಟೇಟ್ ಹಾಗು ಇದಕ್ಕೆ ಸಂಬಂಧಿಸಿದ ವ್ಯವಹಾರಗಳ ಮೌಲ್ಯಮಾಪನಕ್ಕೆ ಪರಿಣಿತರು ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ರಿಯಲ್ ಎಸ್ಟೇಟ್ ವ್ಯವಹಾರ ಒಳಗೊಂಡಿರುವ ಅಂಶಗಳು.
ಮೌಲ್ಯಮಾಪನ: ವೃತ್ತಿಪರ ಮೌಲ್ಯಮಾಪನ ಸೇವೆಗಳು
ದಲ್ಲಾಳಿಗಳು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎರಡೂ ಪಕ್ಷದವರಿಂದ ಮಧ್ಯವರ್ತಿಯಾದವನು ಶುಲ್ಕ ಪಡೆಯುತ್ತಾನೆ.
ಅಭಿವೃದ್ಧಿ: ಕಟ್ಟಡಗಳ ವಿಸ್ತರಣೆಗೆ, ನಿರ್ಮಾಣಕ್ಕೆ ಭೂಮಿ ಅಭಿವೃದ್ಧಿ
ಸ್ವತ್ತು ನಿರ್ವಹಣೆ: ಸ್ವತ್ತಿನ ಮಾಲಿಕರ ಪರವಾಗಿ ಅದರ ನಿರ್ವಹಣೆ ಮಾಡುವುದು
ರಿಯಲ್ ಎಸ್ಟೇಟ್ ಮಾರುಕಟ್ಟೆ: ಉದ್ಯಮದಲ್ಲಿ ಸ್ವತ್ತು ಮಾರಾಟ ವಿಭಾಗದ ನಿರ್ವಹಣೆ
ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ: ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ನಿರ್ವಹಣೆ
ಸೇವೆಗಳ ಸ್ಧಳಾಂತರ: ಬೇರೆ ಬೇರೆ ದೇಶಗಳಿಗೆ ವ್ಯವಹಾರ ಅಥವಾ ಜನರನ್ನು ಸ್ಡಳಾಂತರಿಸಲಾಗುವುದು.
ಕಾರ್ಪೊರೇಟ್ ರಿಯಲ್ ಎಸ್ಟೇಟ್: ಸಂಸ್ಧೆಗಳ ಒಟ್ಟು ವ್ಯವಹಾರಕ್ಕೆ ಪೂರಕವಾಗಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಸಾಂಸ್ಥಿಕವಾಗಿ ನಿರ್ವಹಿಸುವುದು,ಅದರಂತೆ ಆದಾಯವನ್ನು ಒಗ್ಗೂಡಿಸಲು ಹೂಡಿಕೆದಾರರಿಂದಲೂ ರಿಯಲ್ ಎಸ್ಟೇಟ್ ವ್ಯವಹಾರವನ್ನು ನಿರ್ವಹಿಸುವುದಾಗಿದೆ.
ಯಾವುದೇ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದು ವ್ಯವಹಾರವು ವಿಶೇಷವಾಗಿ ನಿರ್ದಿಷ್ಟ ರೀತಿಯ ರಿಯಲ್ ಎಸ್ಟೇಟ್ ವ್ಯವಹಾರವಾಗಿದ್ದು, ಅದು ವಾಸಯೂಗ್ಯ, ವಾಣಿಜ್ಯ, ಅಥವಾ ಕೈಗಾರಿಕಾ ಸ್ವತ್ತಿಗೆ ಸಂಬಂದಿಸಿರುತ್ತದೆ.
ಇದಕ್ಕೆ ಸೇರಿದಂತೆ , ಎಲ್ಲಾ ನಿರ್ಮಾಣ ವ್ಯವಹಾರಗಳೂ ಪರಿಣಾಮಕಾರಿಯಾಗಿ ರಿಯಲ್ ಎಸ್ಟೇಟ್ಗೆ ಸಂಬಂದಿಸಿವೆ.
ರಿಯಲ್ ಎಸ್ಟೇಟ್ ಶಿಕ್ಷಣವು ಔದ್ಯೋಗಿಕವಾಗಿ ವಿಶ್ವವಿದ್ಯಾನಿಲಯ ಮಟ್ಟದಾದರೂ ಅದು ಪದವಿ ಮಟ್ಟವನ್ನು ಕೇಂದ್ರಿಕರಿಸಿದೆ. ರಿಯಲ್ ಎಸ್ಟೇಟ್ ವಿಭಾಗವು ವಾಣಿಜ್ಯ ವಿಷಯದತ್ತ ಕೇಂದ್ರಿಕೃತಗೂಂಡಿದೆ. ಪ್ರಾಥಮಿಕವಾಗಿ ರಿಯಲ್ ಎಸ್ಟೇಟ್ ಅಭಿವೃದ್ದಿ ಅಥವಾ ಹೂಡಿಕೆಯು
ವಾಸಯೋಗ್ಯ ಸ್ವತ್ತು ಮಾರಾಟದ ರಿಯಲ್ ಎಸ್ಟೇಟ್ ಮಧ್ಯವರ್ತಿಯಿಂದ ನಿರ್ವಹಿಸಲ್ಪಡುತ್ತದೆ.
ರಿಯಲ್ ಎಸ್ಟೇಟ್ ಪದವಿ ಶಿಕ್ಷಣವು ಚರ್ಚೆಗಾಗಿ ಮತ್ತು ವಿಶ್ವವಿದ್ಯಾನಿಲಯ ಮಟ್ಟದ ಪಟ್ಟಿಯ ಕಾರ್ಯಕ್ರಮಗಳು - ಇದನ್ನು ನೋಡಿ
"ಅಂತರಜಾಲ ರಿಯಲ್ ಎಸ್ಟೇಟ್" ಪದವು ಅಂತರಜಾಲ ಹೂಡಿಕೆ ಸಮುದಾಯದಿಂದ ಚಲಾವಣೆಯಲ್ಲಿದ್ದು, ವೆಬ್ಸೈಟ್ ಹೆಸರು ಒಡೆತನಕ್ಕೆ ಮತ್ತು ಉನ್ನತ ಗುಣಮಟ್ಟದ ಅಂತರಜಾಲ ಸೇವೆಗೆ ಸಂಬಂಧಿಸಿದೆ ಹಾಗೂ ವಾಸ್ತವ ಜಗತ್ತಿನಲ್ಲಿ ನೆಡೆಯುವ ರಿಯಲ್ ಎಸ್ಟೇಟ್ ಉದ್ಯಮದ ಸಾಮ್ಯತೆಗಳನ್ನು ಒಳಗೊಂಡಿದೆ.
ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್
ವಾಸವಿರುವ ಸಲುವಾಗಿ ಕಾನೂನು ಪ್ರಕಾರ ಮನೆಯನ್ನು ಬಾಡಿಗೆಗೆ ಪಡೆದು ವಾಸವಿರುವುದು.
ಮಾಲಿಕನ ಸ್ವಾಧೀನದಲ್ಲೇ ಇರುವುದು, ಬಾಡಿಗೆ ನೀಡುವುದು,ಸಹಕಾರಿ ಯೋಜನೆಯಡಿ ಮನೆ,ಸಂಯುಕ್ತ ವಾಸಯೋಗ್ಯ ಕಟ್ಟಡ (ಬೇರೆ ಬೇರೆ ಒಡೆತನವುಳ್ಳ ಅನೇಕ ಮನೆಗಳನ್ನೊಳಗೊಂಡ ದೊಡ್ಡ ಕಟ್ಟಡ) ಸಾರ್ವಜನಿಕ ಮನೆಗಳು, ಸಹಕಾರಿ ತತ್ವದಲಿ ಮನೆಗಳು ಇವೆಲ್ಲವುಗಳು ವಾಸಕ್ಕೆ ಯೋಗ್ಯವಿರುವ ಮನೆಗಳ ವಿಧಗಳು.
ಒಬ್ಬರಿಗಿಂತ ಹೆಚ್ಚು ಮಂದಿ ಬಾಡಿಗೆದಾರರು ಜೊತೆಯಲ್ಲಿ ಇರುವಾಗ, ನಿವ್ವಳ ಗುತ್ತಿಗೆಯನ್ನು ಪರಸ್ಪರ ಹಂಚಿಕೊಂಡು ಒಟ್ಟಿಗೆ ವಾಸ ಮಾಡಬಹುದು.
ವಾಸ ಯೋಗ್ಯ ಮನೆಯನ್ನು ತೆಗೆದುಕೊಳ್ಳುವುದಕ್ಕಾಗಿ ಹಣ ಉಳಿತಾಯದ ಉದ್ದೇಶದಿಂದ ಬಾಡಿಗೆದಾರರು ನಿವ್ವಳ ಗುತ್ತಿಗೆ ನೀಡುವ ಆಯ್ಕೆಯನ್ನು ಮಾಡಬಹುದು ತಾವು ಭೋಗ್ಯಕ್ಕೆ ತೆಗೆದುಕೊಂಡ ಮನೆಯನ್ನು ಇತರೆ ಬಾಡಿಗೆದಾರರೊಂದಿಗೆ ಹಂಚಿಕೊಂಡು ಜೊತೆಯಲ್ಲಿ ವಾಸಿಸುವುದು.
ಸಿಂಗಲ್, ಡಬಲ್ ಮತ್ತು ಟ್ರಿಪಲ್ ಮಾದರಿಯ ಕಟ್ಟಡಗಳು ಭೋಗ್ಯಕ್ಕೆ ದೊರೆಯುತ್ತವೆ ಎಷ್ಟು ಮಂದಿ ಬಾಡಿಗೆದಾರರು ಇರುತ್ತಾರೆ ಎಂಬ ಆಧಾರದ ಮೇಲೆ ಇದು ನಿರ್ಧರಿತವಾಗುತ್ತದೆ.[6]
ಅಕ್ಕಪಕ್ಕದ ಮನೆ ಅಥವಾ ಭೂಮಿ ಆಧಾರದ ಮೇಲೆ ವಾಸಯೋಗ್ಯ ಕಟ್ಟಡಗಳನ್ನು ವರ್ಗೀಕರಿಸಲಾಗಿದೆ.
ಒಂದೇ ವಾಸಯೋಗ್ಯ ಕಟ್ಟಡಕ್ಕೆ ವಿವಿಧ ಬಗೆಯ ಅನುಭೋಗದ ಅವಧಿ ಬಳಕೆ ಆಗುತ್ತದೆ.
ಉದಾಹರಣೆಗೆ,ಹೊಂದಿಕೆ ಆಗುವ ವಾಸಸ್ಥಳವನ್ನು ಒಬ್ಬರೆ ಭೋಗ್ಯಕ್ಕೆ ಪಡೆಯಬಹುದು. ಅಥವಾ ಕರಾರು ಮಾಡಿಕೊಂಡು ಕಟ್ಟಡದ ಒಂದು ಭಾಗ ಮತ್ತು ಸಾಮಾನ್ಯ ಬಳಕೆ ಜಾಗವನ್ನು ಪ್ರತ್ಯೇಕವಾಗಿ ಪಡೆಯಬಹುದು.
ಉತ್ತರ ಅಮೇರಿಕಾ ಮತ್ತು ಯೂರೋಪ್ನಲ್ಲಿರುವ ಪ್ರಮುಖ ವರ್ಗಗಳು:
ಹೊಂದಿಕೊಂಡಂತೆ/ಬಹು-ಮನೆಗಳಿರುವ ಕಟ್ಟಡಗಳು
ಅಪಾರ್ಟ್ಮೆಂಟ್ - ಬಹು-ಮನೆಗಳಿರುವ ಕಟ್ಟಡದಲ್ಲಿರುವ ಒಂದು ಮನೆ. ಒಂದು ಅಪಾರ್ಟ್ಮೆಂಟ್ನ ಗಡಿರೇಖೆಯು ಸಾಮಾನ್ಯವಾಗಿ ಬೀಗ ಹಾಕಬಹುದಾದಂತಹ ಬಾಗಿಲುಗಳಿಂದ ಸುತ್ತುವರೆದಿರುತ್ತದೆ. ಇಲ್ಲಿ ಬಹು-ಮಹಡಿ ಅಪಾರ್ಟ್ಮೆಂಟ್ ಕಟ್ಟಡಗಳು ಸರ್ವೇಸಾಮಾನ್ಯ.
ಬಹು-ಸಂಸಾರಗಳ ಮನೆ - ಬಹು-ಮಹಡಿ ಬಿಡಿಯಾದ ಕಟ್ಟಡಗಳಲ್ಲಿ, ಒಂದೊಂದು ಮಹಡಿಯಲ್ಲೂ ಬೇರೆ ಬೇರೆಯಾದ ಅಪಾರ್ಟ್ಮೆಂಟ್ಗಳು ಅಥವಾ ಮನೆಗಳು ಕಾಣುತ್ತವೆ.
ತಾರಸಿ ಮನೆಗಳು (a.k.a. ಟೌನ್ ಹೌಸ್ ಅಥವಾ ರೋಹೌಸ್ ) - ಬಹು-ಮನೆಗಳ ಕಟ್ಟಡಗಳು ಒಂದೇ ಸಾಲಿನಲ್ಲಿದ್ದು ಹಂಚಿಕೊಂಡ ಗೋಡೆಗಳಿದ್ದು ನಡುವೆ ಜಾಗವಿರುವುದಿಲ್ಲ.
ಕಂಡೋಮಿನಿಯಂ - ಅಪಾರ್ಟ್ಮೆಂಟ್ ತರಹವೇ ವೈಯಕ್ತಿಕ ಮಾಲಿಕತ್ವ ಹೊಂದಿರುವ ಕಟ್ಟಡಗಳು ಅಥವಾ ಕಾಂಪ್ಲೆಕ್ಸ್ಗಳು
ಮೈದಾನಗಳ ಸಾಮಾನ್ಯ ಮಾಲೀಕತ್ವ ಮತ್ತು ಜೊತೆಯಾಗಿ ಹಂಚಿಕೊಂಡು ಬಳಸುವಿಕೆ ಟೌನ್ಹೌಸ್ ಅಥವಾ ರೋಹೌಸ್ ಶೈಲಿಯ ಕಂಡೊಮಿನಿಯಮ್ಗಳೂ ಇವೆ.
ಅರ್ಧ -ಬೇರ್ಪಡಿಸಿದ ಮನೆಗಳು
ಡ್ಯೂಪ್ಲೆಕ್ಸ್ - ಒಂದು ಹಂಚಿಕೊಂಡ ಗೋಡೆಯೊಂದಿಗಿನ ಎರಡು ಮನೆಗಳು
ಒಂದು-ಸಂಸಾರಕ್ಕಾಗಿ ಬೇರ್ಪಟ್ಟ ಮನೆ
ಸಾಗಿಸಬಹುದಾದಂತಹ ಮನೆಗಳು
ಮೊಬೈಲ್ ಮನೆಗಳು -ಗಾಲಿಗಳನ್ನು ಹೊಂದಿರುವ ಚಲಿಸಬಹುದಾದಂತಹ ಪೂರ್ಣ-ಪ್ರಮಾಣದ ಮನೆ
ದೋಣಿಮನೆಗಳು - ಒಂದು ತೇಲುವ ಮನೆ
ಟೆಂಟ್ಗಳು - ಬಟ್ಟೆಯ ತರಹದ ಮೇಲ್ಛಾವಣಿಗಳನ್ನು ಹೊಂದಿರುವಂತಹ ತಾತ್ಕಾಲಿಕ ಮನೆಗಳು
ಅಪಾರ್ಟ್ಮೆಂಟ್ನ ಅಳತೆಯನ್ನು ಚದರ ಅಡಿಗಳಲ್ಲಿ ಅಥವಾ ಮೀಟರ್ಗಳಲ್ಲಿ ಹೇಳಲಾಗುತ್ತದೆ
ಯುನೈಟೆಡ್ ಸ್ಟೇಟ್ಸ್ನಲ್ಲಿ, ಈ ಅಳತೆಯು ಗ್ಯಾರೇಜ್ ಮತ್ತು ಇತರೆ ಹೊರಭಾಗದ ಜಾಗಗಳನ್ನು ಹೊರತು ಪಡಿಸಿ ಬರೀ ವಾಸವಿರುವ ಜಾಗದ ಅಳತೆಯಾಗಿರುತ್ತದೆ.
ಯೂರೋಪ್ನಲ್ಲಿ "ಚದರ ಮೀಟರ್ಗಳ" ಸಂಖ್ಯೆಯು ವಾಸವಿರುವ ಮತ್ತು ಗ್ಯಾರೆಜ್ ಹಾಗೂ ಇತರೆ ಹೊರಭಾಗದ ಎಲ್ಲ ಸ್ಠಳಗಳನ್ನು ಸೇರಿಸಿ ಹೇಳುವ ಅಳತೆಯಾಗಿರುತ್ತದೆ.
ಕೋಣೆಗಳ ಸಂಖ್ಯೆಯನ್ನು ಹೇಳುವುದರಿಂದ ಅಂದಾಜಾಗಿ ಇದನ್ನು ವಿವರಿಸಬಹುದು. ಸ್ಟೂಡಿಯೋ ಅಪಾರ್ಟ್ಮೆಂಟ್ ಒಂದೇ ಮಲಗುವ ಕೋಣೆಯನ್ನು ಹೊಂದಿದ್ದು ಬೇರೆ ಯಾವ ಕೋಣೆಯನ್ನು ಹೊಂದಿರುವುದಿಲ್ಲ (ಅಡುಗೆ ಮನೆ ಇದ್ದರೂ ಇರಬಹುದು). ಒಂದು-ಮಲಗುವ ಕೋಣೆ ಅಪಾರ್ಟ್ಮೆಂಟ್, ಮಲಗುವ ಕೋಣೆಯ ಜೊತೆಗೆ ವಾಸದ ಕೋಣೆ ಮತ್ತು ಊಟದ ಕೋಣೆಯನ್ನು ಹೊಂದಿರುತ್ತದೆ ಎರಡು-ಮಲಗುವ ಕೋಣೆ, ಮೂರು-ಮಲಗುವ ಕೋಣೆ ಇರುವ ಮನೆಗಳು ಸಾಮಾನ್ಯವಾಗಿ ದೊಡ್ಡದಾಗಿರುತ್ತವೆ. (ಬಟ್ಟೆಗಳನ್ನು ಇಡುವ ಸ್ಥಳಕ್ಕೆ ಹತ್ತಿರವಿರುವ ಕೋಣೆಯು ಮಲಗುವ ಕೋಣೆಯಾಗಿರುತ್ತದೆ)
ವಿವಿಧ ರೀತಿಯ ಮನೆಗಳು ಮತ್ತು ಲೇಔಟ್ಗಳು, ರಿಯಲ್ ಎಸ್ಟೇಟ್ ಟ್ರೆಂಡ್ಗಳು ಮಾರುಕಟ್ಟೆಯ ಏರಿಳಿತಗಳ ಹಾಗೂ ಹೌಸ್ ಅಥವಾ ಹೋಮ್ಗಳ ಬಗ್ಗೆ ಸಾಮಾನ್ಯ ಮಾಹಿತಿಗಾಗಿ ವಿಧ ವಿಧ ಮನೆಗಳ ಪಟ್ಟಿಯನ್ನು ನೋಡಿ.
Market sector value
ಈ ವಿಭಾಗದಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (September 2009)
ದಿ ಎಕಾನಾಮಿಸ್ಟ್ ಪ್ರಕಾರ, 2002ರ ಕೊನೆಯಲ್ಲಿ "ಆರ್ಥಿಕ ಅಭಿವೃದ್ಧಿ ಹೊಂದಿದ" ಆಸ್ತಿಗಳು ಈ ಕೆಳಕಂಡಂತಿವೆ.
ರಿಯಲ್ ಎಸ್ಟೇಟ್ ಸ್ವತ್ತುಗಳು 54% ಮತ್ತು ಒಟ್ಟು ಸ್ಟಾಕ್ಗಳು ಬಾಂಡ್ಗಳು ಮತ್ತು ರಿಯಲ್ ಎಸ್ಟೇಟ್ ಸ್ವತ್ತು ಸೇರಿ ಆರ್ಥಿಕ ಸ್ವತ್ತುಗಳು 46%. ಬ್ಯಾಂಕುಗಳಲ್ಲಿರುವ ಠೇವಣಿ ಹಣ, ವಿಮೆ "ರಿಸರ್ವ್" ಸ್ವತ್ತುಗಳು, ನೈಸರ್ಗಿಕ ಸಂಪನ್ಮೂಲಗಳು, ಮಾನವ ಸ್ವತ್ತುಗಳು ಇವುಗಳಲ್ಲಿ ಇಲ್ಲಿ ಗಣನೆಗೆ ತೆಗೆದು ಕೊಂಡಿಲ್ಲ. debt ಮತ್ತು ಈಕ್ವಿಟಿ ಎಲ್ಲವನ್ನೂ ಗಣನೆ ಮಾಡಿರುವುದಾದರೆ ಈ ಹೂಡಿಕೆಗಳು ಈಕ್ವಿಟಿ ಮತ್ತು ಬಾಂಡ್ಗಳ ವರ್ಗದಲ್ಲಿ ಎಣಿಕೆ ಮಾಡಬೇಕಾಗುತ್ತದೆ .
ರಿಯಲ್ ಎಸ್ಟೇಟ್ನಲ್ಲಿ ಅಡಮಾನ
ಇತ್ತೀಚಿನ ದಿನಗಳಲ್ಲಿ ಪರಿಣಾಮಕಾರಿ ರಿಯಲ್ ಎಸ್ಟೇಟ್ ಕಾನೂನುಗಳು ಇಲ್ಲದಿರುವುದು, ಮುಂದುವರಿದ ದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಮಹತ್ವದ ಹೂಡಿಕೆಗೆ ದೊಡ್ಡ ಅಡ್ಡಿ ಆಗುತ್ತಿದೆ ಎಂದು ಇತ್ತೀಚಿನ ವರ್ಷಗಳಲ್ಲಿ ಹಲವು ಆರ್ಥಶಾಸ್ತ್ರಜ್ಞರು ಗುರುತಿಸಿದ್ದಾರೆ.
ಬಹು ಪಾಲು ಸಮಾಜಗಳಲ್ಲಿ ಬಡವ ಹಾಗೂ ಶ್ರೀಮಂತ ಎಂಬ ವ್ಯತ್ಯಾಸ ಅಲ್ಲಿನ ಭೂಮಿ ಹಾಗೂ ಕಟ್ಟಡಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
ಬಹುಪಾಲು ಮುಂದುವರಿದ ಅರ್ಥವ್ಯವಸ್ಥೆಯಲ್ಲಿ, ವೈಯಕ್ತಿಕ ಹಾಗೂ ಸಣ್ಣ ಕಂಪನಿಗಳು ಬಂಡವಾಳದ ಬಹುಭಾಗವನ್ನು ಭೂಮಿ ಹಾಗೂ ಕಟ್ಟಡಗಳನ್ನು ಕೊಳ್ಳಲು ಹಾಗೂ ಅವುಗಳನ್ನು ಅಭಿವೃದ್ಧಿಗೊಳಿಸಲುಅಡಮಾನ ಸಾಲ ಬಳಸುತ್ತಿವೆ. ಇವು ನೈಜ ಆಸ್ತಿಯ ಸಹಕಾರಿಯಾಗಿ ನಿಯೋಜಿಸಿದ ಸಾಲಗಳಾಗಿವೆ.
ಬ್ಯಾಂಕುಗಳು ಅತಿ ಹೆಚ್ಚು ಪ್ರಮಾಣದಲ್ಲಿ ಅಡಮಾನ ಸಾಲ ನೀಡಲು ಯಾವಾಗಲೂ ಮುಂದಿರುತ್ತವೆ. ಏಕೆಂದರೆ, ಸಾಲ ಪಡೆದಾತ ಮರು ಪಾವತಿ ಮಾಡದಿದ್ದಲ್ಲಿ ನ್ಯಾಯಾಲಯದ ಮೂಲಕ ಪ್ರತಿಬಂಧಿಸಿ ಅಡಮಾನವಾಗಿ ಇಟ್ಟುಕೊಂಡಿದ್ದ ಸ್ವತ್ತನ್ನು ಮಾರಾಟ ಮಾಡಿ , ತಮ್ಮ ಹಣವನ್ನು ಮತ್ತೆ ಪಡೆಯಬಹುದಾಗಿರುತ್ತದೆ. [ಸೂಕ್ತ ಉಲ್ಲೇಖನ ಬೇಕು] ಹೂಡಿಕೆದಾರರು, ಆಫ್-ಪ್ಲ್ಯಾನ್ ಬಳಸಿ ಲಾಭಗಳಿಸಬಹುದಾಗಿದೆ ಅಥವಾ ನಿರ್ಮಾಣಕ್ಕಿಂತ ಮೊದಲು ಕಡಿಮೆ ಬೆಲೆಗೆ ಕೊಂಡುಕೊಳ್ಳುವುದು.[ಸೂಕ್ತ ಉಲ್ಲೇಖನ ಬೇಕು]
ಬಹುಪಾಲು ಅಭಿವೃದ್ಧಿಶೀಲ ದೇಶಗಳಲ್ಲಿ ಅಡಮಾನ ಸ್ವತ್ತು ಮಾರಾಟಗಾರ ಪರಿಣಾಮಕಾರಿಯಾಗಿಲ್ಲ. ಆದ್ದರಿಂದಲೇ ಅಡಮಾನ ಸಾಲ ಉದ್ಯಮ ಕೆಲವೆಡೆ ಅಸ್ತಿತ್ವದಲ್ಲೇ ಇಲ್ಲ, ಅಥವಾ ವಿಶೇಷ ಸೌಲಭ್ಯ ಪಡೆದಿರುವ ಸಮಾಜದ ಕೆಲವೇ ವರ್ಗಗಳಲ್ಲಿ ಮಾತ್ರ ಇದೆ.
"ರಿಯಲ್ ಎಸ್ಟೇಟ್" ದಿ ಅಮೆರಿಕನ್ ಹೆರಿಟೇಜ್ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲಾಂಗ್ವೇಜ್, ನಾಲ್ಕನೆಯ ಆವೃತ್ತಿ. Houghton Mifflin Company, 2004. Dictionary.comArchived 2009-02-01 ವೇಬ್ಯಾಕ್ ಮೆಷಿನ್ ನಲ್ಲಿ. Retrieved July 12, 2008
"Real" –The American Heritage Dictionary of the English Language, Fourth Edition. Houghton Mifflin Company, 2004. Dictionary.com Retrieved July 12, 2008