From Wikipedia, the free encyclopedia
ಉಷ್ಣಕಾಲದಲ್ಲಿ ವೈರಸ್ಗಳಿಂದ ಬಾಧಿಸುವ ಸಮಸ್ಯೆ ಸರ್ಪಸುತ್ತು. ದೇಹದ ರೋಗನಿರೋಧಕ ಶಕ್ತಿ ಕಡಿಮೆ ಇರುವಾಗ, ಈ ರೋಗದ ವೈರಾಣು ದೇಹ ಪ್ರವೇಶಿಸಬಹುದು. ಮೊದಲೇ ದೇಹಸ್ಥಿತಿ ರೋಗಾಣುಗಳ ಪ್ರಭಾವಕ್ಕೆ ಒಳಗಾಗಿದ್ದರೂ ಸರ್ಪಸುತ್ತು ಕಂಡು ಬರುತ್ತದೆ.[2]
ತ್ವಚೆ ಮೇಲೆ ಕೆಂಪನೆ ಚಿಕ್ಕಚಿಕ್ಕ ನೀರ್ಗುಳ್ಳೆಗಳು[3][4] ಪಟ್ಟೆಯಾಕಾರದಲ್ಲಿ ದೇಹದ ಒಂದು ಪಾರ್ಶ್ವದಲ್ಲಿ ಕಂಡುಬರುತ್ತವೆ. ಈ ನೀರ್ಗುಳ್ಳೆಗಳು ನರತಂತುಗಳನ್ನು ಬಾಧಿಸುವುದರಿಂದ ಉರಿ, ನವೆ ಉಂಟಾಗುತ್ತವೆ. ನರತಂತುಗಳ ಜಾಲಗಳಲ್ಲಿ ಇವು ಪಸರಿಸುತ್ತವೆ. ಇದನ್ನು ಜನಸಾಮಾನ್ಯರು ಸರ್ಪದ ಚರ್ಮ ಅಥವಾ ಹೆಡೆಯ ರೂಪವನ್ನು ಕಲ್ಪಿಸಿಕೊಂಡು, ಸರ್ಪ ದೋಷದಿಂದ ಬರುವ ಸಮಸ್ಯೆ ಎಂದು ಪರಿಗಣಿಸುತ್ತಾರೆ. ಸರ್ಪದ ಬಗ್ಗೆ ಇರುವ ಸಹಜ ಭಯ ಮತ್ತು ದೇವತಾರೂಪಿ ನಂಬಿಕೆಯಿಂದ ದೇವರು ಮುನಿದ ಎಂಬ ಆತಂಕದ ಛಾಯೆ ಆವರಿಸುವುದೂ ಉಂಟು. ಇದಕ್ಕಾಗಿ ಸರ್ಪದೋಷ ಪರಿಹಾರ ಅಥವಾ ರೋಗ ವಾಸಿ ಮಾಡುವ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಾರೆ. ಇದರಿಂದ ಕಾಯಿಲೆ ವಾಸಿಯಾಗುವುದರ ಬದಲು, ಉಪದ್ರವ ಜಾಸ್ತಿಯಾಗುತ್ತದೆ.[5]
ರೋಗದಲ್ಲಿ ಎರಡು ಬಗೆಗಳಿವೆ: ಎಚ್ಎಸ್ವಿ-1 ಸೋಂಕು, ಎಚ್ಎಸ್ವಿ-2 ಸೋಂಕು.
ಸಾಮಾನ್ಯವಾಗಿ ಪಿತ್ತ ವಿಕೃತಿಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ ಉಂಟಾಗುತ್ತದೆ. ರೋಗ ಬಾಧಿತ ವ್ಯಕ್ತಿಗಳ ನೇರ ಸಂಪರ್ಕದಿಂದ ಬರಬಹುದು. ರೋಗಿಯ ಜೊತೆ ಸಂಪರ್ಕ, ಆತನ ಬಟ್ಟೆಬರೆಯ ಉಪಯೋಗ, ಹುಣ್ಣುಗಳ ಸ್ರಾವದ ಸ್ಪರ್ಶ ಮುಂತಾದವು ರೋಗ ಅಂಟುವ ವಿಧಗಳು. ಹಿಂದೆಂದೋ ಕಾಡಿದ ಕ್ಯಾನ್ಸರ್, ಸಿಡುಬಿನಂಥ ಸಮಸ್ಯೆಗಳು ಪೂರ್ತಿ ಗುಣವಾಗದೇ ಇದ್ದವರಲ್ಲೂ ಸರ್ಪಸುತ್ತು ಬಾಧಿಸುವುದಿದೆ. ಬಾಧಿತ ವ್ಯಕ್ತಿಗಳೊಂದಿಗಿನ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ. ಪ್ರಸವ ಕಾಲದಲ್ಲಿ ತಾಯಿಯು ಜನನಾಂಗದ ಸರ್ಪಸುತ್ತಿನಿಂದ ಬಳಲುತ್ತಿದ್ದರೆ, ನವಜಾತ ಶಿಶು ತೀವ್ರತರದ ಸರ್ಪಸುತ್ತಿನಿಂದ ಬಳಲುತ್ತದೆ. ಈ ಸೋಂಕು ಇರುವವರು ಮಗುವನ್ನು ಮುದ್ದಾಡುವಾಗ ಅಥವಾ ಅದು ಬೆಳೆದಂತೆ ಇತರ ಮಕ್ಕಳೊಡನೆ ಆಡುವಾಗ ಸೋಂಕು ಹರಡುತ್ತದೆ. ಆದರೂ ಸಾಧಾರಣವಾಗಿ ನವಜಾತ ಶಿಶುಗಳಿಗೆ ಈ ರೋಗ ಅಂಟುವ ಸಂಭವ ವಿರಳ - ಸು. 3000-20,000ದಲ್ಲಿ ಕೇವಲ 1. ಸರ್ಪಸುತ್ತು ರೋಗಕ್ಕೆ ಪೂರ್ಣ ಚಿಕಿತ್ಸೆ ಇಲ್ಲ.
ಒಮ್ಮೆಗೆ ಗುಣಮುಖರಾಗಿ ಪುನಃ ಬಾಧಿಸುವುದು, ಅಂಧತ್ವ, ಕಿವುಡು, ಸ್ರಾವಯುಕ್ತ ಹುಣ್ಣು, ಬ್ಯಾಕ್ಟೀರಿಯಾ ಸೋಂಕು, ಮೆದುಳು ಜ್ವರ, ಮುಖಗತ ಪಾರ್ಶ್ವವಾತ, ಆಲ್ಜಿಮಿರ್ಸ್ ಸಮಸ್ಯೆ ಬಾಧಿಸುವ ಸಾಧ್ಯತೆ ಇರುತ್ತದೆ. ಸರ್ಪಸುತ್ತು ಬಾಧಿತ ಮಹಿಳೆಯರಲ್ಲಿ ಅದು ಪೂರ್ತಿ ಗುಣವಾಗದ ಕಾಲದಲ್ಲಿ ಗರ್ಭ ಧರಿಸಿದರೆ ಗರ್ಭಸ್ರಾವ ಉಂಟಾಗುತ್ತದೆ.
ಸರ್ಪಸುತ್ತು ತನ್ನಿಂತಾನೇ ಗುಣಮುಖ ಹೊಂದುವ ಒಂದು ವಿಶಿಷ್ಟ ರೋಗ. ಆದರೆ ಅಪಥ್ಯ ಉಂಟಾದರೆ, ಇತರ ರೋಗಗಳೊಂದಿಗೆ ಸಂಯೋಗ ಹೊಂದಿ, ರೋಗವನ್ನು ಸರಿಯಾಗಿ ನಿರ್ಣಯ ಮಾಡಿಕೊಳ್ಳದೇ ಚಿಕಿತ್ಸಾ ವ್ಯತ್ಯಾಸ ಉಂಟಾದರೆ, ನವಜಾತ ಶಿಶುಗಳಲ್ಲಿ ಹಾಗೂ ವಯೋವೃದ್ಧರಲ್ಲಿ ಮೃತ್ಯುಕಾರಕವೂ ಆಗಬಹುದು.
ಆಯುರ್ವೇದದಲ್ಲಿ ಅತ್ಯುತ್ತಮ ಚಿಕಿತ್ಸೆ ಇದೆ. ಹಳೆ ಅಕ್ಕಿ ಗಂಜಿ, ಬೇಯಿಸಿದ ಹೆಸರು ನೀರು, ಕೊತ್ತಂಬರಿ ಹಿಮ, ಎಳನೀರು ಸೇವಿಸಬೇಕು. ಇದರ ಜತೆಗೆ ಕೆಲವು ಔಷಧೋಪಚಾರ ಕೂಡ ಅಗತ್ಯ.
ಹ್ಯೂಮನ್ ಹರ್ಪಿಸ್ ವೈರಸ್-6 ಎಂಬುದು ಹೊಸತಾಗಿ ಗುರುತಿಸಲಾಗಿರುವ ವೈರಸ್. ಇದು 3-4 ವರ್ಷಗಳೊಳಗಿನ ಮಕ್ಕಳಲ್ಲಿ ರೋಸಿಯೋಲ ಇನ್ಫೇಂಟಮ್ ಅಥವಾ ಎಕ್ಸಾಂಥೀಮ ಸವಿಟಂ ಎಂಬ ರೋಗವನ್ನು ಉಂಟುಮಾಡುತ್ತದೆ. ಮಾರಕವಲ್ಲ. ಯುಕ್ತ ಚಿಕಿತ್ಸೆ ಮತ್ತು ಉಪಚಾರ ನೀಡಿದರೆ 3-5 ದಿವಸಗಳ ಒಳಗೆ ಶಮನವಾಗುತ್ತದೆ.
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.