ಸದಸ್ಯ:Vishwanatha Badikana/ನನ್ನ ಪ್ರಯೋಗಪುಟ 1
From Wikipedia, the free encyclopedia
ಪಾಟಲಿಪುತ್ರ ಮೌರ್ಯ ಸಾಮ್ರಾಜ್ಯ ಮತ್ತು ಗುಪ್ತ ಸಾಮ್ರಾಜ್ಯದ ರಾಜಧಾನಿಯಾಗಿತ್ತು.ಇದು ಈಗಿನ ಪಾಟ್ನಾ ನಗರದ ಬಳಿಯಿದೆ. ಇದನ್ನು ಕ್ರಿ.ಪೂ.೪೯೦ರಲ್ಲಿ ಮಗಧ ದೊರೆ ಅಜಾತಶತ್ರುವು ಗಂಗಾನದಿಯ ಸಮೀಪ ಪಾಟಲಿಗ್ರಾಮ ಎಂಬ ಹೆಸರಿನಲ್ಲಿ ನಿರ್ಮಿಸಿದನು.[1] ಪಾಟ್ನಾದ ಸುತ್ತಮುತ್ತ ವ್ಯಾಪಕವಾಗಿ ಉತ್ಖನನ ನಡೆಸಲಾಗಿದೆ.[2] ಇದರ ಪರಿಣಾಮವಾಗಿ ಈ ಸ್ಥಳಗಳಲ್ಲಿ ದೊಡ್ಡ ಗೋಡೆಗಳ ಕುರುಹುಗಳು, ಮರದ ದೊಡ್ಡ ತೊಲೆಗಳು ಇತ್ಯಾದಿ ದೊರೆಕಿವೆ. ಇದು ಈ ಪ್ರದೇಶದಲ್ಲಿ ಪಾಟಲೀಪುತ್ರ ಪಟ್ಟಣದ ಅಸ್ಥಿತ್ವವನ್ನು ಸಾರುತ್ತವೆ.[3] ಈ ಪಟ್ಟಣವು ಹಲವಾರು ಶತಮಾನಗಳ ಕಾಲ ಹಲವಾರು ರಾಜವಂಶಜರ ರಾಜಧಾನಿಯಾಗಿ ಮೆರೆದಿತ್ತು.
ಪಾಟಲಿಪುತ್ರ | |
---|---|
Ancient city | |
ದೇಶ | ಭಾರತ |
ರಾಜ್ಯ | ಬಿಹಾರ |
ಪ್ರಾಂತ್ಯ | ಮಗಧ |
ವಿಭಾಗ | ಪಾಟ್ನಾ |
ಜಿಲ್ಲೆ | ಪಾಟ್ನಾ |
Government | |
• Body | Patna Municipal Corporation |
Elevation | ೫೩ m (೧೭೪ ft) |
ಪಾಟಲಿಪುತ್ರ ಭಾರತದ ಪ್ರಾಚೀನತಮವೂ ಮುಖ್ಯವೂ ಆದ ನಗರಗಳಲ್ಲಿ ಒಂದು. ಇದು ಮಥುರಾ, ವಾರಣಾಸಿ, ಅಯೋಧ್ಯ, ರಾಜಗೃಹಗಳಿಗಿಂತ ಈಚಿನದೆಂದು ತಿಳಿದುಬಂದಿದೆ. ಆದರೆ ಭಾರತದ ದೊಡ್ಡ ಚಕ್ರಾಧಿಪತ್ಯಗಳ ರಾಜಧಾನಿಯಾಗಿತ್ತೆಂಬ ಗೌರವ ಇದರದು. ಪ್ರಾಚೀನಕಾಲದಲ್ಲಿ ಇದಕ್ಕೆ ಪುಷ್ಪಪುರ ಕುಸುಮಪುರ ಎಂದೂ ಹೆಸರುಗಳಿದ್ದುವು. ಈಗ ಈ ಸ್ಥಳದಲ್ಲಿರುವ ನಗರದ ಹೆಸರು ಪಟ್ನಾ.