ಸದಸ್ಯ:Chaithra464/ನನ್ನ ಪ್ರಯೋಗಪುಟ 1
From Wikipedia, the free encyclopedia
ಬಿಗ್ ಫೋರ್ ಅಕೌಂಟಿಂಗ್ ಫರ್ಮ್ಸ್
ಬಿಗ್ ಫೋರ್ ಅರ್ನ್ಸ್ಟ್ & ಯ್ಂಗ್ (EY),ಡೆಲೋಯಿಟ್, (KPMG) ಮತ್ತು ಪ್ರೈಸ್ವಾಟರ್ ಹೌಸ್ ಕೂಪರ್ಸ್ (PwC) ವಿಶ್ವದಲ್ಲೇ ನಾಲ್ಕು ದೊಡ್ಡ ವೃತ್ತಿಪರ ಸೇವಾ ಜಾಲವಾಗಿದ್ದು, ಆಡಿಟ್, ಭರವಸೆ ಸೇವೆಗಳು, ತೆರಿಗೆ, ನಿರ್ವಹಣೆ ಸಲಹಾ, ವಿಚಾರ, ಕಾರ್ಪೊರೇಟ್ ಹಣಕಾಸು ಮತ್ತು ಕಾನೂನು ಸೇವೆಗಳನ್ನು ನೀಡುತ್ತವೆ. ೨೦ನೇ ಶತಮಾನದ ಅಂತ್ಯದವರೆಗೂ, ಎಂಟು ಜಾಲಗಳು ಮಾರುಕಟ್ಟೆಲ್ಲಿ ಪ್ರಾಬಲ್ಯ ಹೊಂದಿದ್ದವು ಆದರೆ ಇದು ಕ್ರಮೇಣ ವಿಲೀನಗಳ ಕಾರಣದಿಂದಾಗಿ ಮತ್ತು ೨೦೦೨ರಲ್ಲಿ ಒಂದು ಸಂಸ್ಥೆಯ ಕುಸಿತದಿಂದಾಗಿ ಆ ಪ್ರಾಬಲ್ಯತೆ ಕಡಿಮೆಯಾಯಿತು. ಈ ಕಾರಣದಿಂದಾಗಿ, ಈ ನಾಲ್ಕು ಜಾಲಗಳು 21 ನೇ ಶತಮಾನದಲ್ಲಿ ಮಾರುಕಟ್ಟೆಯಲ್ಲಿ ಪ್ರಬಲವಾಗುತ್ತವೆ. ಎಫ್ಟಿಎಸ್ಇ 100 ಸೂಚ್ಯಂಕದಲ್ಲಿ ಬಿಗ್ ಫೋರ್ ಕಂಪನಿಯು 99% ರಷ್ಟು ಕಂಪನಿಗಳನ್ನು ಆಡಿಟ್ ಮಾಡಿದೆ ಎಂದು ವರದಿಯಾಗಿದೆ ಮತ್ತು ಎಫ್ಟಿಎಸ್ಇ 250 ಸೂಚ್ಯಂಕದಲ್ಲಿ 96% ನಷ್ಟು ಕಂಪನಿಗಳನ್ನು ಆಡಿಟ್ ಮಾಡಿದೆ, ಇದು ಪ್ರಮುಖ ಮಿಡ್-ಕ್ಯಾಪ್ ಲಿಸ್ಟಿಂಗ್ ಕಂಪನಿಗಳ ಸೂಚ್ಯಂಕವಾಗಿದೆ.