ಸಂಪುಟ
From Wikipedia, the free encyclopedia
ಸಂಪುಟವು ಒಂದು ಭೌತಿಕ ಪುಸ್ತಕ. ಇದನ್ನು ಮುದ್ರಿಸಿರಬಹುದು ಅಥವಾ ಕೈಯಿಂದ ಬರೆದಿರಬಹುದು. ಈ ಪದವನ್ನು ಸಾಮಾನ್ಯವಾಗಿ ದೊಡ್ಡ ಸಂಗ್ರಹದ ಭಾಗವಾದ ಒಂದು ಒಂಟಿ ಪುಸ್ತಕವನ್ನು ಗುರುತಿಸಲು ಬಳಸಲಾಗುತ್ತದೆ. ಸಂಪುಟಗಳನ್ನು ಸಾಮಾನ್ಯವಾಗಿ ಅಂಕೆಗಳಿಂದ ಅನುಕ್ರಮವಾಗಿ ಗುರುತಿಸಲಾಗುತ್ತದೆ, ಉದಾ. "ಸಂಪುಟ ೩", ಸಾಮಾನ್ಯವಾಗಿ "ಸಂ." ಎಂದು ಸಂಕ್ಷೇಪಿಸಲಾಗುತ್ತದೆ.[1]
ಸಂಪುಟಗಳನ್ನು ನೇರವಾಗಿ ಪ್ರಕಟಿಸಬಹುದು, ಅಥವಾ ಅವನ್ನು ರಟ್ಟುಹಾಕಿದ ಪ್ರಕಾಶನಗಳಿಂದ ಸೃಷ್ಟಿಸಬಹುದು. ಉದಾಹರಣೆಗೆ, ಒಂದು ನಿಯತಕಾಲಿಕಕ್ಕೆ ಚಂದಾದಾರವಾಗುವ ಮತ್ತು ಅದನ್ನು ಸಂರಕ್ಷಿಸಿಡಲು ಬಯಸುವ ಒಂದು ಗ್ರಂಥಾಲಯವು ಸಂಚಿಕೆಗಳ ಸಮೂಹವನ್ನು ತೆಗೆದುಕೊಂಡು ಒಂದು ಸಂಪುಟದಲ್ಲಿ ರಟ್ಟುಹಾಕಿ ಇಡುತ್ತದೆ.[2][3] ಪ್ರಕಾಶಕನು ಕೂಡ ಹಿಂದೆ ಪ್ರಕಟಿಸಿದ ಸಂಚಿಕೆಗಳಿಂದ ಪ್ರತ್ಯೇಕವಾಗಿ ಒಂದು ಸಂಪುಟವನ್ನು ಪ್ರಕಟಿಸಬಹುದು; ಇದು ಚಿತ್ರವಿರುವ ಕಾದಂಬರಿಗಳಿಗೆ ಸಾಮಾನ್ಯವಾಗಿದೆ.