ಸಂಖ್ಯಾಭವಿಷ್ಯಶಾಸ್ತ್ರ
From Wikipedia, the free encyclopedia
ಸಂಖ್ಯಾಭವಿಷ್ಯಶಾಸ್ತ್ರ ವು ಸಂಖ್ಯೆಗಳು ಮತ್ತು ಭೌತಿಕ ವಸ್ತುಗಳ ಅಥವಾ ಜೀವಿಗಳ ನಡುವಿನ ಅತೀಂದ್ರಿಯ ಅಥವಾ ಗೂಡಾರ್ಥದ ಸಂಬಂಧವೊಂದರಲ್ಲಿನ ಅನೇಕ ಪದ್ಧತಿಗಳು, ಸಂಪ್ರದಾಯಗಳು ಅಥವಾ ನಂಬಿಕೆಗಳ ಪೈಕಿ ಒಂದಾಗಿದೆ.
ಸಂಖ್ಯಾಭವಿಷ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರೀಯ ಭವಿಷ್ಯಜ್ಞಾನವು ಪೈಥಾಗರಸ್ನಂತಹ ಆರಂಭಿಕ ಗಣಿತಶಾಸ್ತ್ರಜ್ಞರಲ್ಲಿ ಬಹು ಜನಪ್ರಿಯವಾಗಿತ್ತು. ಆದರೆ ಇದನ್ನು ಗಣಿತಶಾಸ್ತ್ರದ ಒಂದು ಭಾಗ ಎಂದು ಪರಿಗಣಿಸಲಿಲ್ಲ ಮತ್ತು ಆಧುನಿಕ ವಿಜ್ಞಾನಿಗಳು ಇದನ್ನು ಹುಸಿ ಗಣಿತಶಾಸ್ತ್ರ ಎಂದು ಕರೆದಿದ್ದಾರೆ.[1][2] ಇದು ಜ್ಯೋತಿಶ್ಯಾಸ್ತ್ರ ಮತ್ತು ಖಗೋಳ ವಿಜ್ಞಾನದ ನಡುವಿನ, ಹಾಗೂ ರಸವಿದ್ಯೆ ಮತ್ತು ರಸಾಯನ ಶಾಸ್ತ್ರದ ನಡುವಿನ ಐತಿಹಾಸಿಕ ಸಂಬಂಧಗಳಂತಿರುತ್ತದೆ.
ಜ್ಯೋತಿಶ್ಯಾಸ್ತ್ರ ಮತ್ತು ಇದೇ ತೆರನಾದ ಭವಿಷ್ಯಜ್ಞಾನದ ಕಲೆಗಳ ಜೊತೆಜೊತೆಗೆ, ಸಂಖ್ಯಾಭವಿಷ್ಯಶಾಸ್ತ್ರವು ಅತೀಂದ್ರಿಯ ವಿದ್ಯೆಯೊಂದಿಗೆ ಇಂದು ಹೆಚ್ಚಿನ ಸಂಬಂಧವನ್ನು ಹೊಂದಿದೆ.[ಸೂಕ್ತ ಉಲ್ಲೇಖನ ಬೇಕು]
ಕೆಲವೊಂದು ವೀಕ್ಷಕರ ಅವಲೋಕನದ ದೃಷ್ಟಿಯಲ್ಲಿ ಹೇಳುವುದಾದರೆ, ಸಾಂಪ್ರದಾಯಿಕ ಸಂಖ್ಯಾಭವಿಷ್ಯಶಾಸ್ತ್ರವನ್ನು ಅಭ್ಯಾಸ ಮಾಡದಿದ್ದರೂ ಸಂಖ್ಯಾತ್ಮಕ ಮಾದರಿಗಳಲ್ಲಿ ಅತೀವ ನಂಬಿಕೆಯನ್ನು ಇರಿಸುವವರಿಗೂ ಸಹ ಈ ಪದವನ್ನು ಬಳಸಬಹುದು. ಉದಾಹರಣೆಗೆ, ಅಂಡರ್ವುಡ್ ಡ್ಯೂಡ್ಲಿ ಎಂಬ ಗಣಿತಜ್ಞ 1997ರಲ್ಲಿ ಬಂದ ನ್ಯೂಮರಾಲಜಿ: ಆರ್ ವಾಟ್ ಪೈಥಾಗರಸ್ ರಾಟ್ ಎಂಬ ತನ್ನ ಪುಸ್ತಕದಲ್ಲಿ ಷೇರು ಮಾರುಕಟ್ಟೆ ವಿಶ್ಲೇಷಣೆಯ ಎಲಿಯಟ್ ತರಂಗ ಸಿದ್ಧಾಂತದ (ಎಲಿಯಟ್ ವೇವ್ ಪ್ರಿನ್ಸಿಪಲ್) ವೃತ್ತಿಗಾರರ ಕುರಿತು ಚರ್ಚಿಸುವಾಗ ಈ ಪದವನ್ನು ಬಳಸುತ್ತಾನೆ.