ಶುಷ್ಕಕೋಶ (ಡ್ರೈಸೆಲ್)
From Wikipedia, the free encyclopedia
ಒಂದು ವಿದ್ಯುತ್ಕಾಂತೀಯ ಬ್ಯಾಟರಿ ಯು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಎಲೆಕ್ಟ್ರೋ ಕೆಮಿಕಲ್ ಸೆಲ್ಗಳಿಂದ ಉಂಟಾಗಿರುತ್ತದೆ. ಅಲ್ಲದೆ ಶೇಖರವಾಗಿರುವ ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುತ್ತದೆ. ಮೊಟ್ಟಮೊದಲ ವೊಲ್ಟಾಯಿಕ್ ಪೈಲ್ ಸುಮಾರು 1800ರಲ್ಲಿ ಅಲೆಸ್ಯಾಂಡ್ರೋ ವೊಲ್ಟಾ ಕಂಡುಹಿಡಿದರು. ಈ ಬ್ಯಾಟರಿಯು ಎಲ್ಲ ಮನೆಬಳಕೆಯ ಹಾಗೂ ಕೈಗಾರಿಕೆಗಳ ಬಳಕೆಗೆ ಸಾಮಾನ್ಯವಾದ ಶಕ್ತಿ ಸಾಧನವಾಗಿ ಬಳಕೆಯಾಯಿತು. 2005ರ ಅಂದಾಜಿನ ಪ್ರಕಾರ, ಪ್ರಪಂಚಾದಾದ್ಯಂತ ಇರುವ ಬ್ಯಾಟರಿ ಕೈಗಾರಿಕೆಯು ಸುಮಾರು 48 ಬಿಲಿಯನ್ ಯು ಎಸ್ ಡಾಲರ್ ವಹಿವಾಟನ್ನು ಪ್ರತಿವರ್ಷ ನಡೆಸುತ್ತದೆ. ಅಲ್ಲದೆ ಪ್ರತಿವರ್ಷ[1] ಸುಮಾರು 6% ಬೆಳವಣಿಗೆಯನ್ನು ಕಾಣುತ್ತದೆ.[2] ಬ್ಯಾಟರಿಗಳಲ್ಲಿ ಎರಡು ಪ್ರಕಾರಗಳಿವೆ : ಪ್ರಾಥಮಿಕ ಬ್ಯಾಟರಿಗಳು (ಬಳಸಿ ಎಸೆಯಬಹುದಾದ ಬ್ಯಾಟರಿಗಳು), ಇವುಗಳನ್ನು ಒಮ್ಮೆ ಮಾತ್ರ ಬಳಸಲಾಗುವಂತೆ ನಿರ್ಮಿಸಲಾಗಿರುತ್ತದೆ ಅಲ್ಲದೆ ಶಕ್ತಿ ಕುಂದಿದಾಗ ಅವುಗಳನ್ನು ಎಸೆಯಲಾಗುತ್ತದೆ. ಬ್ಯಾಟರಿಗಳಲ್ಲಿ ಎರಡನೆ ಪ್ರಕಾರದ ಬ್ಯಾಟರಿಗಳಾಗಿ ದ್ವಿತೀಯ ರೀತಿಯ ಬ್ಯಾಟರಿಗಳು ಎಂದು ಕರೆಯಲಾಗುತ್ತದೆ. ಇವುಗಳು ಚಾರ್ಜ್ ಮಾಡಬಹುದಾದ ಬ್ಯಾಟರಿಗಳಾಗಿದ್ದು ಇವುಗಳನ್ನು ಪುನ: ಪುನ: ಬಳಸಬಹುದಾಗಿದೆ. ಸಣ್ಣ ಸೆಲ್ಗಳನ್ನು ಶಕ್ತಿವರ್ಧಕಗಳಾಗಿ ಕಿವಿಕೇಳದವರು ಬಳಸುವ ಸಾಧನದಲ್ಲಿ, ಕೈಗಡಿಯಾರದಲ್ಲಿ ಬಳಸಬಹುದಾಗಿದೆ; ದೊಡ್ಡ ಬ್ಯಾಟರಿಗಳು ಕೂಡಿಟ್ಟ ಶಕ್ತಿಯನ್ನು ಟೆಲೆಫೋನ್ ಎಕ್ಸ್ಚೆಂಜ್ ಅಥವಾ ಕಂಪ್ಯೂಟರ್ ಡಾಟಾ ಸೆಂಟರ್ಗಳಲ್ಲಿ ಬಳಸಬಹುದಾಗಿದೆ.