Remove ads
From Wikipedia, the free encyclopedia
ಆಲೂಗಡ್ಡೆಯು ಸೊಲ್ಯಾನೇಸೀ ಕುಟುಂಬದ ಬಹುವಾರ್ಷಿಕ ಸಲೇನಮ್ ಟ್ಯೂಬರೋಸಮ್ನ ಒಂದು ಪಿಷ್ಟವುಳ್ಳ, ಗೆಡ್ಡೆ ಬೆಳೆ. ಆಲೂಗಡ್ಡೆ ಶಬ್ದ ಆ ಸಸ್ಯವನ್ನೂ ನಿರ್ದೇಶಿಸಬಹುದು. ಆಂಡೀಸ್ನ ಪ್ರದೇಶದಲ್ಲಿ, ಕೆಲವು ಇತರ ನಿಕಟವಾಗಿ ಸಂಬಂಧಿತ ಸಾಗುವಳಿ ಮಾಡಲಾದ ಆಲೂಗಡ್ಡೆ ಜಾತಿಗಳಿವೆ. ಆಲೂಗಡ್ಡೆಗಳು, ಅಕ್ಕಿ, ಗೋಧಿ, ಮತ್ತು ಮೆಕ್ಕೆ ಜೋಳದ ನಂತರ, ವಿಶ್ವದ ನಾಲ್ಕನೇ ಅತಿ ದೊಡ್ಡ ಆಹಾರ ಬೆಳೆಯಾಗಿವೆ.
ಆಲೂಗಡ್ಡೆ | |
---|---|
ಆಲೂಗಡ್ಡೆ | |
Scientific classification | |
ಸಾಮ್ರಾಜ್ಯ: | plantae |
(ಶ್ರೇಣಿಯಿಲ್ಲದ್ದು): | Asterids |
ಗಣ: | ಸೋಲನೇಲ್ಸ್ |
ಕುಟುಂಬ: | ಸೊಲನೆಸಿಯೆ |
ಕುಲ: | ಸೋಲನಮ್ |
ಪ್ರಜಾತಿ: | S. tuberosum |
Binomial name | |
ಸೊಲನಮ್ ಟುಬೆರೋಸಮ್ L. | |
ಬಡವರಿಗೂ, ಬಳಲ್ಲಿದರಿಗೂ ಆಲೂಗಡ್ಡೆ ರುಚಿ ಅಂಟಿಕೊಂಡಿದೆ.ಆದ್ದರಿಂದ ಬಿ.ಜಿ.ಎಲ್.ಸ್ವಾಮಿಯವರು ಇದಕ್ಕೆ 'ಕಲ್ಪಕಂದ' ಎಂದು ಹೆಸರಿಸಿದ್ದಾರೆ. ಈ ಕಲ್ಪಕಂದವು ವಿದೇಶೀಯರ ದೈನಂದಿನ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕರ್ನಾಟಕದ ಹಲವು ಪ್ರದೇಶಗಲ್ಲಿ ಬಟಾಟೆ ಎಂದು ಕರೆಯಲ್ಪಡುವ ಈ ಹೆಸರು ಮೂಲದ ಪೊಟಾಟೋದಿಂದಲೇ ಬಂದದ್ದು. ನಾವು ಅಕ್ಕಿಯನ್ನೂ, ಉತ್ತರ ಭಾರತೀಯರು ಗೋಧಿಯನ್ನು ಬಳಸುವಂತೆ, ಬೇಯಿಸಿದ, ಬಾಡಿಸಿದ, ಹುರಿದ ಆಲೂ ಪಾಶ್ಚಾತ್ಯರಿಗೆ ಅನ್ನದಂತೆ.
ನಾವು ಸಾಮಾನ್ಯವಾಗಿ ಆಲೂಗಡ್ಡೆಯನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸುವುದಿಲ್ಲ, ಆದರೆ ಫೈಬರ್, ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಸೇರಿದಂತೆ ಹಣ್ಣುಗಳು ಮತ್ತು ತರಕಾರಿಗಳಿಂದ ನೀವು ಪಡೆಯುವ ಅದೇ ಪೋಷಕಾಂಶಗಳಲ್ಲಿ ಆಲೂಗಡ್ಡೆ ನಿಜವಾಗಿಯೂ ಸಮೃದ್ಧವಾಗಿವೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಕ್ಯಾನ್ಸರ್-ಉಂಟುಮಾಡುವ ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.[೧]
ಇದು ಬಹುಬೇಗ ೯೦ ದಿನಗಳಲ್ಲಿ ಇಳುವರಿಗೆ ಬರುವ ಮತ್ತು ವಿವಿಧ ಹವಾಗುಣಗಳಿಗೆ ಹೊಂದಿಕೊಂಡು ಬೇಳೆಯುವ ಭಾರತದ ಉತ್ತಮ ತಳಿ.ಚಪ್ಪಟೆಯದ ಗೆಡ್ಡೆಗಳು ವಿಶಾಲವಾದ, ನಯವಾದ ಮೇಲ್ಮೈ ಹೊಂದಿರುತ್ತವೆ.
ಈ ಬೆಳೆಯನ್ನು ಗೆಡ್ಡೆಗಳ ಮುಖಾಂತರ ಸಸ್ಯಾಭಿವ್ರದ್ಧಿ ಮಾಡಲಾಗುವುದು. ಈ ಉದೇಶಕ್ಕೆ ಇಡೀ ಗೆಡ್ಡೆ ಅಥವಾ ಗೆಡ್ಡೆಯ ಚೂರುಗಳನ್ನು ಬೀಜವಾಗಿ ಬಳಸುತ್ತಾರೆ. ಆಲೂಗಡ್ಡೆಗೆ ಮಾರಕವಾದ ರೋಗಗಳು ಗೆಡ್ಡೆಗಳ ಮುಖಾಂತರ ಹರಡುವುದರಿಂದ ರೋಗರಹಿತ ಗೆಡ್ಡೆಗಳನ್ನು ಮಾತ್ರ ಬಳಸಬೇಕು.
ನಾಟಿಮಾಡಿದ ಕೂಡಲೆ ತೆಳು ನೀರಾವರಿ ಒದಗಿಸಬೇಕು.ನಂತರದ ನೀರಾವರಿಗಳನ್ನು ಮಣ್ಣು ಮತ್ತು ಹವಾಗುಣಗಳಿಗನುಗುಣವಾಗಿ ೫-೭ ದಿನಗಳ ಅಂತರದಲ್ಲಿ ಕೊಡಬೇಕು ಮತ್ತು ಕಳೆ ಬರದಂತೆ ಎಚ್ಚರ ವಹಿಸಬೇಕು.[೨]
ಅಧ್ಯಯನದ ಪ್ರಕಾರ, ಆಲೂಗಡ್ಡೆ ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಮಸ್ಯೆಯಿಂದ ದೂರವಿರಲು ಸಹಾಯ ಆಗುತ್ತದೆ. ಏಕೆಂದರೆ ಆಲೂಗಡ್ಡೆಯಲ್ಲಿ ಅದ್ಭುತವಾದ ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಸಿಗುತ್ತದೆ ಮತ್ತು ಇದು ನಿಮ್ಮ ಹೊಟ್ಟೆಯ ಕ್ಯಾನ್ಸರ್ ಸಮಸ್ಯೆಯನ್ನು ದೂರಮಾಡುತ್ತದೆ. ಆದ್ದರಿಂದ, ನೀವು ಆಲೂಗಡ್ಡೆಯನ್ನು ಬೇಯಿಸಿದ, ಹಿಸುಕಿದ ರೂಪದಲ್ಲಿ ಸೇವನೆ ಮಾಡಬಹುದು. ಆದರೆ ಇದನ್ನು ಎಣ್ಣೆಯಲ್ಲಿ ಕರಿದು ತಿನ್ನುವುದನ್ನು ತಪ್ಪಿಸಿ.
ಆಲೂಗಡ್ಡೆ ತನ್ನಲ್ಲಿ ಆಲ್ಫಾ ಲಿಪೊಯಿಕ್ ಆಸಿಡ್ ಪ್ರಮಾಣದಿಂದ ತುಂಬಿರುತ್ತವೆ. ಇದು ನಿಮ್ಮ ಮೆದುಳಿನ ಕಾರ್ಯ ನಿರ್ವಹಣೆಯನ್ನು ಸುಧಾರಿಸಲು ಮತ್ತು ನಿಮ್ಮ ನೆನಪಿನ ಶಕ್ತಿಯ ಕುಸಿತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ನಿಮ್ಮನ್ನು ಮಾನಸಿಕ ಖಿನ್ನತೆಯ ಸಮಸ್ಯೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹೌದು. ಆಲೂಗಡ್ಡೆಗಳು ನಿಮ್ಮ ಮನಸ್ಥಿತಿಯ ಮಟ್ಟವನ್ನು ನಿರ್ವಹಿಸುವ ಜವಾಬ್ದಾರಿಯುತ ಮೆದುಳಿನ ನರಪ್ರೇಕ್ಷಕಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮೆದುಳಿಗೆ ನೈಸರ್ಗಿಕ ರೂಪದಲ್ಲಿರುವ ಮಾನಸಿಕ ಔಷಧಿಯಾಗಿ ಕೆಲಸ ಮಾಡುತ್ತವೆ. ಆಲೂಗಡ್ಡೆಗಳಲ್ಲಿ ವಿಟಮಿನ್ ಸಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಮತ್ತು ಇದರಿಂದ ನಿಮ್ಮ ಜೀವಕೋಶದ ಹಾನಿಯನ್ನು ತಡೆಯಲು ಸಹಾಯವಾಗುತ್ತದೆ.[೩]
Seamless Wikipedia browsing. On steroids.
Every time you click a link to Wikipedia, Wiktionary or Wikiquote in your browser's search results, it will show the modern Wikiwand interface.
Wikiwand extension is a five stars, simple, with minimum permission required to keep your browsing private, safe and transparent.