ವಿಕಿಮೇನಿಯಾ
From Wikipedia, the free encyclopedia
ವಿಕಿಮೇನಿಯಾ(ವಿಕಿಮಾನಿಯಾ ಎಂದೂ ಕರೆಯುತ್ತಾರೆ.) ವಿಕಿಮೀಡಿಯಾ ಚಳುವಳಿಯ ವಾರ್ಷಿಕ ಸಮ್ಮೇಳನವಾಗಿದ್ದು, ಸ್ವಯಂಸೇವಕ ಸಮುದಾಯಗಳು ಮತ್ತು ಮತ್ತು ವಿಕಿಮೀಡಿಯಾ ಫೌಂಡೇಶನ್- ಇವೆರಡೂ ಸೇರಿ ಆಯೋಜಿಸುವ ಒಂದು ಬೃಹತ್ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ವಿಶ್ವದ ನಾನಾ ಭಾಗಗಳಲ್ಲಿ ನಡೆಯುವ ಈ ಸಮ್ಮೇಳನದಲ್ಲಿ, ವಿಕಿಪೀಡಿಯ ಅಲ್ಲದೆ ವಿಕಿಮೀಡಿಯಾ ಪ್ರತಿಷ್ಠಾನವು ನಿರ್ವಹಿಸುವ ಇತರೆ ಯೋಜನೆಗಳು (ವಿಕಿಕೋಟ್ಸ್, ವಿಕಿವಾಯೇಜ್, ವಿಕಿಸೋರ್ಸ್, ವಿಕಿನ್ಯೂಸ್, ವಿಕಿಬುಕ್ಸ್ ಇತ್ಯಾದಿ), ಮುಕ್ತ ತಂತ್ರಾಂಶಗಳು, ಮುಕ್ತ ಜ್ಞಾನ ಮತ್ತು ಮತ್ತು ಇವುಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಪರಸ್ಪರ ಚರ್ಚಿಸಲಾಗುತ್ತದೆ.
ಈ ಲೇಖನ ಅಥವಾ ವಿಭಾಗ ವಿಸ್ತರಣೆಯ ಅಥವಾ ಮಹತ್ವದ ಬದಲಾವಣೆಗಳ ಮಧ್ಯಂತರದಲ್ಲಿದೆ. ನೀವೂ ಲೇಖನದ ಅಭಿವೃದ್ಧಿಯಲ್ಲಿ ಸಂಪಾದನೆಗೆ ತೊಡಗಲು ಇಚ್ಛಿಸಿದಲ್ಲಿ, ಸ್ವಾಗತ. ಈ ಲೇಖನ ಅಥವಾ ವಿಭಾಗವನ್ನು ಬಹಳ ದಿನಗಳವರೆಗೆ ಸಂಪಾದಿಸದಿದ್ದಲ್ಲಿ, ದಯವಿಟ್ಟು ಈ ಟೆಂಪ್ಲೇಟನ್ನು ಅಳಿಸಿಹಾಕಿ. ಈ article ಕಡೆಯ ಬಾರಿ ಸಂಪಾದಿಸಿದ್ದು ಇವರು Nadzik (ಚರ್ಚೆ | ಕೊಡುಗೆಗಳು) 12968258 ಸೆಕೆಂಡು ಗಳ ಹಿಂದೆ. (ಅಪ್ಡೇಟ್) |
೨೦೨೧ನೇ ಇಸವಿಯ ವಿಕಿಮೇನಿಯಾವನ್ನು ೨೦೨೧ರ ಅಗಸ್ಟ್ ೧೩ ರಿಂದ ೧೭ವರೆಗೆ ಆನ್ಲೈನ್ ವೇದಿಕೆಯ ಮೂಲಕ ನಡೆಸಲಾಗುತ್ತದೆ[1]. ಮೂಲತಃ ಅಗಸ್ಟ್ ೨೦೨೦ರಂದು, ಥೈಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು ಮತ್ತು ಕೊನೆಗೆ ಈ ಸಮ್ಮೇಳನವನ್ನು ರದ್ದುಗೊಳಿಸಲಾಯಿತು.