ಮುಕ್ತ ತಂತ್ರಾಂಶ
From Wikipedia, the free encyclopedia
ಮುಕ್ತ ತಂತ್ರಾಂಶ ಅಥವಾ ಮುಕ್ತ ಆಕರ ತಂತ್ರಾಂಶ ಎಂಬುದು ಕಂಪ್ಯೂಟರ್ ತಂತ್ರಾಂಶಗಳು ಲಭ್ಯವಾಗಬಹುದಾದ ಒಂದು ರೀತಿಯ ಪರವಾನಗಿ. ಈ ರೀತಿಯ ಪರವಾನಿಗೆಯ ಅಡಿ ಲಭ್ಯವಾಗಿರುವ ತಂತ್ರಾಂಶಗಳಲ್ಲಿನ ಸಾಮಾನ್ಯ ಗುಣಗಳೆಂದರೆ
- ತಂತ್ರಾಂಶದ ಮೂಲ ಆಕರವನ್ನು ತಂತ್ರಾಂಶದೊಂದಿಗೆ ಲಭ್ಯಗೊಳಿಸಲಾಗುವುದು
- ಗ್ರಾಹಕರು ಈ ಮೂಲ ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಪಡೆದಿರುತ್ತಾರೆ (ಕೆಲವೊಮ್ಮೆ ಸಣ್ಣ ನಿರ್ಬಂಧನೆಗಳು ಇರಬಹುದು)
ಯಾವುದೇ ಮುಕ್ತ ತಂತ್ರಾಂಶ ಉಚಿತವಾಗಿ ಲಭ್ಯವಾಗಬೇಕೆಂಬ ನಿಯಮವೇನಿಲ್ಲ; ಆದರೂ ಬಹುಪಾಲು ಮುಕ್ತ ತಂತ್ರಾಂಶಗಳು ಉಚಿತವಾಗಿ ಲಭ್ಯವಾಗಿವೆ.
ಅನೇಕ ಬಾರಿ ಆಕರ ಲಭ್ಯವಾಗಿರುವ ತಂತ್ರಾಂಶಗಳೆಲ್ಲಕ್ಕೂ ಮುಕ್ತ ತಂತ್ರಾಂಶ ಎಂದು ಕರೆಯಲಾಗುತ್ತದೆ - ನಿಜವಾಗಿ ಈ ತಂತ್ರಾಂಶಗಳು "ಪ್ರಕಟಿತ ಆಕರ ತಂತ್ರಾಂಶಗಳು" (disclosed source software). ಆಕರವನ್ನು ಮುಕ್ತವಾಗಿ ಬದಲಾಯಿಸುವ ಹಕ್ಕನ್ನು ಗ್ರಾಹಕರಿಗೆ ನೀಡಿದಲ್ಲಿ ಮಾತ್ರ ಅದು ಮುಕ್ತ ತಂತ್ರಾಂಶವಾಗುತ್ತದೆ.
ಮುಕ್ತ ತಂತ್ರಾಂಶ ಪರವಾನಗಿಗಳಲ್ಲಿ ಅತ್ಯಂತ ಜನಪ್ರಿಯ ಪರವಾನಗಿಗಳಲ್ಲಿ ಒಂದು ಜಿಎನ್ಯು ಸಾಮಾನ್ಯ ಸಾರ್ವಜನಿಕ ಪರವಾನಗಿ (GNU General Public License).